ಮಂಗಳೂರು: ಯಾವುದೇ ಹಬ್ಬ ಆಚರಣೆಗೆ ಪೊಲೀಸರು ಎಲ್ಲೂ ತೊಂದರೆ ಕೊಟ್ಟಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಮೈಕ್ ಅಳವಡಿಸುತ್ತಿರುವುದಕ್ಕಷ್ಟೇ ನಮ್ಮ ನಿರ್ಬಂಧ ಇರುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತೆ ಸ್ಪಷ್ಟ ಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೆಹರೂ ಮೈದಾನದಲ್ಲಿ ಗಣೇಶೋತ್ಸವದ ಹಬ್ಬ ಭಾರೀ ಸಂಭ್ರಮದಿಂದ ನಡೆದಿದೆ. ರಾತ್ರಿ 2.30ರವರೆಗೆ ನಡೆದಿದೆ. ಆದರೆ ಪೊಲೀಸರು ಎಲ್ಲೂ ಅಡ್ಡಿ ಪಡಿಸಿಲ್ಲ. ನಾವು ಮಾಡುವ ಸೆಲಬ್ರೇಷನ್‌ನಿಂದ ನಮಗೆ ಸಂಭ್ರಮ ಇರಬೇಕು. ಆದರೆ ಬೇರೆಯವರಿಗೆ ಅದರಿಂದ ತೊಂದರೆ ಆಗಬಾರದು. ಮೈದಾನದಲ್ಲಿ ಕಾರ್ಯಕ್ರಮ ಮಾಡುವಾಗ 50 ಮೀಟರ್ ಇದ್ದರೆ ಶಬ್ದ 50 ಮೀಟರ್‌ಗಷ್ಟೇ ಇರಲಿ. ಶಾಂತಿ ಸಭೆ ಮಾಡಿದ್ದಾಗ ಸ್ಥಳೀಯರೇ ಬಂದು ನಮಗೆ ಮೈಕ್ ಬೇಡ ಎಂದು ಹೇಳಿದ್ದಾರೆ. ಮತ್ತೆ ಈಗ ಪೊಲೀಸರಿಂದ ತೊಂದರೆ ಆಗುತ್ತಿದೆ ಎಂದು ಹೇಳಿದರೆ ಹೇಗೆ..? ಸ್ಥಳೀಯ ಠಾಣಾ ಇನ್‌ಸ್ಪೆಕ್ಟರ್ ಮೈಕಿಗೆ ಅನುಮತಿ ಕೊಡುತ್ತಾರೆ. ಅವರು ಸೂಕ್ತ ಕ್ರಮ ವಹಿಸುತ್ತಾರೆ ಎಂದರು. ಇನ್ನು ಯಕ್ಷಗಾನವೊಂದನ್ನು…
Author: main-admin
ಮಂಗಳೂರು: ಮುಖ್ಯಮಂತ್ರಿಗಳನ್ನು ಗುರಿಯಾಗಿಸಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ ಆರೋಪದ ಮೇಲೆ ಟಿವಿ ವಿಕ್ರಮದ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗ್ಡೆ (45) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹೆಗ್ಡೆ ಅವರು ತಮ್ಮ “ಪೋಸ್ಟ್ ಕಾರ್ಡ್” ಎಂಬ ಫೇಸ್‌ಬುಕ್ ಖಾತೆಯಲ್ಲಿ, “ಮಾನ್ಯ ಮುಖ್ಯಮಂತ್ರಿಗಳೇ, ಗಣೇಶನ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ ಮಸೀದಿಗಳ ಮೇಲೆ ಒಮ್ಮೆ ಬುಲ್ಡೋಜರ್ ಕಳುಹಿಸುವ ಧೈರ್ಯವನ್ನು ನೀವು ಮಾಡಿದರೆ, ಮುಂದಿನ ವರ್ಷ ರಾಜ್ಯದಲ್ಲಿ ಇಂತಹ ಘಟನೆಗಳು ಎಲ್ಲಿಯೂ ಮರುಕಳಿಸುವುದಿಲ್ಲ” ಎಂದು ಹೇಳಿಕೆಯನ್ನು ಪ್ರಕಟಿಸಿದ್ದರು.ಇದಕ್ಕೆ ಸಂಬಂಧಿಸಿದಂತೆ, ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 353(2)ರ ಅಡಿಯಲ್ಲಿ ಪ್ರಕರಣ (ಕ್ರೈಮ್ ನಂ. 143/2025) ದಾಖಲಾಗಿದೆ. ತನಿಖೆ ಕೈಗೊಂಡ ಮೂಡಬಿದರೆ ಪೊಲೀಸರು ಬೆಂಗಳೂರಿನಲ್ಲಿ ಅವರನ್ನು ಬಂಧಿಸಿ, ಸೆಪ್ಟೆಂಬರ್ 12ರಂದು ಮೂಡಬಿದರೆ ಸಿಜೆ ಮತ್ತು ಕೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.ನ್ಯಾಯಾಲಯವು ಅವರನ್ನು ಸೆಪ್ಟೆಂಬರ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮಂಗಳೂರು: ಉಳ್ಳಾಲ ತಾಲೂಕು ಬೆಳ್ಳ ಗ್ರಾಮ ವಾಸಿ ಶ್ರೀಮತಿ ರಹಮತ್ ಎಂಬವರು ತನ್ನ ಮಕ್ಕಳೊಂದಿಗೆ ಜು. 02 ರಂದು ತೊಕ್ಕೊಟ್ಟು ಗ್ರಾಮದಲ್ಲಿರುವ ಸಾಗರ ಕಲೆಕ್ಷನ್ ಅಂಗಡಿಗೆ ತನ್ನ ಮಕ್ಕಳೊಂದಿಗೆ ಬಟ್ಟೆ ಖರೀದಿಸಲು ಹೋಗುತ್ತಿದ್ದಾಗ ಮಳೆ ಬಂದ ಕಾರಣ ಸ್ಟ್ರೀಟ್ ಪ್ಯಾಲೇಸ್ ಬೇಕರಿಯ ಮುಂದೆ ನಿಂತುಕೊಂಡಿದ್ದಾಗ ತನ್ನ ಮಗಳ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಯಾರೋ ಬುರ್ಖಾ ಧರಿಸಿದ್ದ ಹೆಂಗಸು ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣಾ ಮೊ. ನಂ 8/2025 ಕಲಂ: 304(2) ಬಿ ಎನ್ ಎಸ್ 2023 ರಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಬಗ್ಗೆ ಆರೋಪಿ ಹಾಗೂ ಸೊತ್ತು ಪತ್ತೆಯ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಪ್ರಕರಣವನ್ನು ಬೇಧಿಸಿ ಮಾಹಿತಿಯ ಆಧಾರದ ಮೇಲೆ ಆರೋಪಿತೆಯಾದ ಉಳ್ಳಾಲದ ನಿವಾಸಿ ಶ್ರೀಮತಿ ಮಿನ್ನತ್ ಎಂಬಾಕೆಯನ್ನು ದಿನಾಂಕ: 12-09-2025 ರಂದು ವಶಕ್ಕೆ ಪಡೆದು ಸುಲಿಗೆ ಮಾಡಿದ 10ಗ್ರಾಂ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.ಆರೋಪಿತೆಯ ವಿಚಾರಣೆ ಸಮಯದಲ್ಲಿ…
ಬಂಟ್ವಾಳ : ಮಾರ್ಚ್ 29 ರಂದು ಸಂಜೆ ವೇಳೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇಲೆ ಆರೋಪಿಯನ್ನು ಪೊಲೀಸರು ಪೊಸ್ಕೋ ಕೇಸ್ ನಲ್ಲಿ ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಸಂತ್ರಸ್ಥೆ ಬಾಲಕಿಯ ನೆರೆಮನೆವಾಸಿ ಅಬೂಬಕ್ಕರ್ (50) ಎಂದು ಗುರುತಿಸಲಾಗಿದೆ. ಆರೋಪಿ ದಿನಾಂಕ 29.03.2025 ರಂದು ಸಂಜೆ 05.00 ಗಂಟೆ ಸಮಯಕ್ಕೆ ನೊಂದ ಬಾಲಕಿ ಆಟವಾಡುತ್ತಿದ್ದಾಗ ಆಕೆಯನ್ನು ಯಾರು ವಾಸ್ತವ್ಯ ಇರದ ಮನೆಯ ಹಿಂಬಾಗಿಲಿನಲ್ಲಿರುವ ಸಿಟೌಟ್ ಗೆ ಕರೆದುಕೊಂಡು ಹೋಗಿ ಬಲಾತ್ಕಾರವಾಗಿ ಲೈಂಗಿಕಕ್ರಿಯೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನೀಡಿದ ದೂರಿನ ಅನ್ವಯ ಬಂಟ್ವಾಳ ಗ್ರಾಮಾಂತರ ಠಾಣಾ ಅ ಕ್ರ 135/2025 ಕಲಂ: 64 (1), 351(2) BNS ಮತ್ತು 4 (2) PROTECTION OF CHILDREN FROM SEXUAL OFFENCES ACT 2012 ರಂತೆ ಪ್ರಕರಣ ದಾಖಲಾಗಿರುತ್ತದೆ ಆರೊಪಿಯನ್ನು ದಸ್ತಗಿರಿಮಾಡಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಲಯವು ನ್ಯಾಯಾಂಗ ಬಂಧನ ವಿದಿಸಿರುತ್ತದೆ. ಮುಂದುವರಿದು ಈ ವಿಚಾರವಾಗಿ ಆರೋಪಿಗೆ ಜನರು ಹೊಡೆದಿರುತ್ತಾರೆ ಎಂದು…
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ, ಕಳೆದ ಮೂರು ತಿಂಗಳ ಅವಧಿಯಲ್ಲಿ ಠಾಣೆಯ ಅಪರಾಧ ಪ್ರಕರಣಗಳಲ್ಲಿ ಪತ್ತೆ ಕಾರ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಕಾರ್ಯ ದಕ್ಷತೆಯನ್ನು ಮೆರೆದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನಾ ಕಾರ್ಯಕ್ರಮ ಜಿಲ್ಲಾ ಕವಾಯತು ಮೈದಾನದಲ್ಲಿ ಸೆ.12 ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತರು 32 ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ಹಾಗೂ 121 ಸಿಬ್ಬಂದಿಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದರು. ನಗರದ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡಲು ನೆರವಾದ 19 ವಿಶೇಷ ಕಾರ್ಯ ಪಡೆಯ ಸಿಬ್ಬಂದಿಗಳಿಗೆ ಪುರಸ್ಕರಿಸಲಾಯಿತು. (ಒಟ್ಟು 32 ಪೊಲೀಸ್ ಅಧಿಕಾರಿಗಳು ಮತ್ತು 140 ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಲಾಯಿತು). ಕಳೆದ ಮೂರು ತಿಂಗಳ ಅವಧಿಯಲ್ಲಿ ಸಾಕಷ್ಟು ಎಲ್.ಪಿ.ಸಿ ಪ್ರಕರಣಗಳ (Long pending case) ಆರೋಪಿಗಳನ್ನು ಬಂಧಿಸಿದ್ದು, ಇದರಲ್ಲಿ ಮುಲ್ಕಿ ಠಾಣಾ ಸರಹದ್ದಿನಲ್ಲಿ 27 ವರ್ಷದ ಹಿಂದಿನ ಮತೀಯ ಗಲಭೆ ಪ್ರಕರಣದ ತಲೆಮರೆಸಿಕೊಂಡಿದ್ದ ಇಬ್ಬರು…
ಉಡುಪಿ: ಮದುವೆ ನಿರಾಕರಿಸಿ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಆಕ್ರೋಶಗೊಂಡ ಯುವಕ ಯುವತಿಗೆ ಚೂರಿ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಬ್ರಹ್ಮಾವರ ತಾಲೂಕು ಕೊಕ್ಕರ್ಣೆಯಲ್ಲಿ ನಡೆದಿದೆ. ಯುವತಿ ರಕ್ಷಿತಾ ಪೂಜಾರಿ( 24) ಗಂಭೀರ ಗಾಯಗೊಂಡಿದ್ದು, ಮಣಿಪಾಲದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಕಲಾಗಿದೆ. ಚೂರಿ ಇರಿದ ಆರೋಪಿಯನ್ನು ಕಾರ್ತಿಕ್ ಎಂದು ಗುರುತಿಸಲಾಗಿದ್ದು, ಚೂರಿ ಇರಿದು ಇದೀಗ ಪರಾರಿಯಾಗಿದ್ದಾನೆ. ಯುವಕ ಯುವತಿಯನ್ನು ಪ್ರೀತಿಸುತ್ತಿದ್ದು ಮದುವೆ ಆಗಬೇಕು ಎಂದು ಬಹಳ ಸಮಯದಿಂದ ಒತ್ತಾಯಿಸುತ್ತಿದ್ದ. ಆಕೆ ಆಕೆಯ ಮನೆಯವರು ಇದಕ್ಕೆ ಒಪ್ಪದಂತಹ ಹಿನ್ನೆಲೆಯಲ್ಲಿ ಇಬ್ಬರಿಗೆ ಜಗಳ ನಡೆಯುತ್ತಿತ್ತು. ಇಂದು ಗಾಯಾಳು ರಕ್ಷಿತಾ ಹುಟ್ಟಿದ ದಿನವಾಗಿ, ಮನೆಯಲ್ಲಿ ಮದುವೆಗೆ ಆಕ್ಷೇಪ ಬಂದ ಕಾರಣ ನಂಬರ್ ಕಾರ್ತಿಕ್ ನಂಬರ್ ನ್ನು ಬ್ಲಾಕ್ ಮಾಡಿದ್ದ ರಕ್ಷಿತಾ, ಇಂದು ಬೆಳಿಗ್ಗೆ ರಕ್ಷಿತಾ ಮನೆಯಿಂದ ಬಸ್ ನಿಲ್ದಾಣ ಬಳಿ ಹೋಗುವಾಗ ಪಾಗಲ್ ಪ್ರೇಮಿ ಕಾರ್ತಿಕ್ ಚೂರಿ ಇರಿದಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ರಕ್ಷಿತಾಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆ ಹಾಗೂ ಕತ್ತಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು…
ಬೆಂಗಳೂರು : ಸೆಪ್ಟೆಂಬರ್ 22 ರಿಂದ ರಾಜ್ಯ ಸರ್ಕಾರ ಹೊಸ ಜಾತಿ ಗಣತಿ ನಡೆಸುವ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಕಾಂತರಾಜು ವರದಿಯನ್ನು ನಾವು ಒಪ್ಪಿಕೊಂಡಿಲ್ಲ ಎಂದು ಬೆಂಗಳೂರಿನ ಗೃಹಕಚೇರಿ ಕೃಷ್ಣ ದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಕಾಂತರಾಜು ವರದಿಯನ್ನು ನಾವು ಒಪ್ಪಿಕೊಂಡಿಲ್ಲ. ಬಳಿಕ ಜಯಪ್ರಕಾಶ್ ಹೆಗಡೆ ಹಿಂದುಳಿದ ಆಯೋಗದ ಅಧ್ಯಕ್ಷರಾದರು. 2015 ರಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಆಗಿತ್ತು. 10 ವರ್ಷ ಆಗಿದೆ ಅಂತ ಹೊಸ ಸಮೀಕ್ಷೆಗೆ ತೀರ್ಮಾನ ಆಗಿದೆ. ಸಮೀಕ್ಷೆ ಜವಾಬ್ದಾರಿ ಹಿಂದುಳಿದ ಆಯೋಗಕ್ಕೆ ವಹಿಸಿದ್ದೇನೆ. ಜಾತಿ, ಧರ್ಮ ಹಾಗೂ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಗೊತ್ತಾಗಬೇಕು. ಅವರ ಹಿನ್ನೆಲೆ ಗೊತ್ತಾದಾಗ ವಿಶೇಷ ಕಾರ್ಯಕ್ರಮ ರೂಪಿಸಬಹುದು ಹಿಂದೆ ಕಾಂತರಾಜು ಅಧ್ಯಕ್ಷತೆಯಲ್ಲಿ ಸಮೀಕ್ಷೆ ಮಾಡಲು ಸೂಚಿಸಿದ್ದೆ ಆ ವರದಿ ಹಳೆಯದು ಅಂತ ಪರಿಗಣನೆ ಮಾಡಲಿಲ್ಲ. ಈಗ ಹೊಸದಾಗಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಸೂಚಿಸಿದ್ದೇನೆ. 7 ಕೋಟಿ ಜನರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.…
ಕಾಸರಗೋಡು: ಮೊಗ್ರಾಲ್ ಪುತ್ತೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸುತ್ತಿದ್ದಾಗ ಕ್ರೈನ್ ಬಕೆಟ್‌ನಿಂದ ಬಿದ್ದು ಇಬ್ಬರು ಕಾರ್ಮಿಕರು ಸಾ*ವನ್ನಪ್ಪಿರುವ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಮೃ*ತರನ್ನು ಕೋಝಿಕ್ಕೋಡ್ ನಿವಾಸಿ ಅಕ್ಷಯ್ (30) ಮತ್ತು ವಡಗರ ನಿವಾಸಿ ಅಶ್ವಿನ್ (30) ಎಂದು ಗುರುತಿಸಲಾಗಿದೆ. ಅಕ್ಷಯ್ ಕುಂಬಳೆ ಆಸ್ಪತ್ರೆಯಲ್ಲಿ ನಿ*ಧನರಾದರೆ, ಅಶ್ವಿನ್ ಮಂಗಳೂರಿನ ಆಸ್ಪತ್ರೆಯಲ್ಲಿ ನಿ*ಧನರಾದರು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡಿದ್ದು, ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೆದ್ದಾರಿಯಲ್ಲಿ ಕ್ರೇನ್ ಬಳಸಿ ವಿದ್ಯುತ್ ದೀಪಗಳನ್ನು ಅಳವಡಿಸುತ್ತಿದ್ದಾಗ ಈ ಅಪ*ಘಾತ ಸಂಭವಿಸಿದೆ. ಇದನ್ನೂ ಓದಿ: ತೋಟಕ್ಕೆ ಅಡಿಕೆ ಹೆಕ್ಕಲು ಹೋಗಿದ್ದಾಗ ಕೆರೆಗೆ ಬಿದ್ದು ಮಹಿಳೆ ಸಾ*ವು ಇಬ್ಬರೂ ಕ್ರೇನ್ ಬಾಕ್ಸ್ ಒಳಗೆ ಕೆಲಸ ಮಾಡುತ್ತಿದ್ದಾಗ ಅದು ಇದ್ದಕ್ಕಿದ್ದಂತೆ ಬೇರ್ಪಟ್ಟು ಸರ್ವಿಸ್ ರಸ್ತೆಗೆ ಬಿದ್ದಿದೆ. ಈ ಕಾರಣದಿಂದ ಅವರಿಗೆ ಗಂ*ಭೀರ ಗಾ*ಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರನ್ನು ಉಳಿಸಲಾಗಲಿಲ್ಲ.
ಬಂಟ್ವಾಳ: ಅಕ್ರಮವಾಗಿ ನಡೆಯುತ್ತಿದ ಕೋಳಿ ಅಂಕ ಹಾಗೂ ಜೂಜಾಟದ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿದ ಘಟನೆ ಇತ್ತೀಚೆಗೆ ಬಂಟ್ವಾಳ ತಾಲೂಕಿನ ಕೊಡಂಬೆಟ್ಟು ಗ್ರಾಮದ ತಿಮ್ಮೊಟ್ಟು ಎಂಬಲ್ಲಿ ಸಂಭವಿಸಿದ್ದು, ಜೂಜಾಟ ನಿರತರನ್ನು ಹಾಗೂ ಜೂಜಾಟಕ್ಕೆ ಬಳಸಿದ ಕೋಳಿ ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.ಪುಂಜಾಲಕಟ್ಟೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ತಿಮ್ಮೊಟ್ಟು ಎಂಬಲ್ಲಿಯ ಸರಕಾರಿ ಸ್ಥಳಕ್ಕೆ ಹೋದಾಗ ಅಪಾದಿತರಾದ ಜಗದೀಶ್ ಶೆಟ್ಟಿ, ನವೀನ, ಪ್ರದೀಪ್, ಕೇಶವ ತಿಮ್ಮೊಟ್ಟು, ಅಜಿತ್ ಇರ್ವತ್ತೂರು ಮತ್ತು ಇತರರು ಸಂಘಟಿತರಾಗಿ ಸೇರಿಕೊಂಡು ಹಣವಾಗಿ ಪಣವಾಗಿಟ್ಟು ಕೊಂಡು ಅಕ್ರಮವಾಗಿ ಕೋಳಿಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಜೂಜಾಟವಾಡುತ್ತಿದ್ದರು ಎನ್ನಲಾಗಿದೆ.ಈ ವಿಚಾರ ತಿಳಿದು ಪೊಲೀಸರು ದಾಳಿ ನಡೆಸಿ ಅಪಾದಿತರನ್ನು ಮತ್ತು ಅಪಾದಿತರು ಕೋಳಿ ಅಂಕಕ್ಕೆ ಉಪಯೋಗಿಸಿದ ಒಂದು ಹುಂಜ ಕೋಳಿ ಹಾಗೂ ಜೂಜಾಟಕ್ಕೆ ಉಪಯೋಗಿಸಿದ 9430 ರೂ. ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವಿಸುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದಲ್ಲಿ ಯುವಕರಿಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಿದ್ದಾರೆ. ಆರೋಪಿಗಳಾದ ಬಾರ್ಯ ಗ್ರಾಮದ ಸೂರ್ಯ ನಿವಾಸಿ ಮಹಮ್ಮದ್ ಸಿನಾನ್ (25) ಮತ್ತು ಇಳಂತಿಲ ಗ್ರಾಮದ ರಿಫಾಯಿ ನಗರ ಮನೆ ನಿವಾಸಿ ಮಹಮ್ಮದ್ ಜಿಯಾದ್ (23) ಬಂಧಿತರು. ಇವರಿಬ್ಬರು ಉಪ್ಪಿನಂಗಡಿಯ ಹಿರೆಬಂಡಾಡಿ ಕ್ರಾಸ್ ರಸ್ತೆಯ ಬಳಿ ಶಾಲೆಯ ಹತ್ತಿರ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ದೊರೆತ ಮಾಹಿತಿಯಾಧಾರದಲ್ಲಿ ಗಸ್ತು ನಿರತ ಎಸೈ ಅವಿನಾಶ್ ಅವರ ತಂಡವು ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ದೃಢಪಟ್ಟ ಕಾರಣಕ್ಕೆ ಅವರಿಬ್ಬರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.










