ಕಾಸರಗೋಡು: ವಾಹನ ತಪಾಸಣೆ ಸಂದರ್ಭದಲ್ಲಿ ನಿಲ್ಲಿಸದೆ ಪರಾರಿಯಾಗಿದ್ದ ಕಾರನ್ನು ಬೆನ್ನಟ್ಟಿ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಭಾರೀ ಪ್ರಮಾಣದ ಚಿನ್ನಾಭರಣ , ಬೆಳ್ಳಿ ಹಾಗೂ ಇನ್ನಿತರ ವಸ್ತುಗಳು ಪತ್ತೆಯಾದ ಘಟನೆ ಕಾಸರಗೋಡಿನ ಆದೂರು ಚೆಕ್ ಪೋಸ್ಟ್ ಬಳಿ ನಡೆದಿದೆ. ಕಾರನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ. ಅಬಕಾರಿ ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಸುಳ್ಯ ಕಡೆಯಿಂದ ಬಂದ ಬಿಳಿ ಸ್ವಿಫ್ಟ್ ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ ಪರಾರಿಯಾಗಿದ್ದು, ಎಂಟು ಕಿ.ಮೀ ತನಕ ಅಬಕಾರಿ ಅಧಿಕಾರಿಗಳು ಕಾರನ್ನು ಬೆನ್ನಟ್ಟಿದರು. ಮುಳ್ಳೇರಿಯ- ಬದಿಯಡ್ಕ ರಸ್ತೆಯ ಬೆಳ್ಳಿಗೆ ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು , ಕಾರಿನಲ್ಲಿದ್ದ ಇಬ್ಬರು ಪರಾರಿಯಾದರು. ಕಾರನ್ನು ತಪಾಸಣೆ ನಡೆಸಿದಾಗ 140 ಗ್ರಾಂ ಚಿನ್ನಾಭರಣ , 339. 2 ಗ್ರಾಂ ಬೆಳ್ಳಿ ಆಭರಣ , 1.17 ಲಕ್ಷ ರೂ .ನಗದು, ತುಂಡರಿಸಿದ ಬೀಗ, ಗ್ಯಾಸ್ ಕಟ್ಟರ್, ನಾಲ್ಕು ಮೊಬೈಲ್ ಮೊದಲಾದವು ಪತ್ತೆಯಾಗಿದೆ. ಕಾರಿನ ನಂಬರ್…
Author: main-admin
ಉಡುಪಿ: ಜಾತಿ ನಿಂದನೆ ಮಾಡಿದ ಪ್ರಕರಣದ ಆರೋಪಿಯನ್ನು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ತಪ್ಪಿತಸ್ಥ ಎಂದು ತೀರ್ಮಾನಿಸಿ 1 ವರ್ಷ ಜೈಲು ಶಿಕ್ಷೆ ಹಾಗು 19,500 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಮಂಜುನಾಥ ಮಡಿವಾಳ ಶಿಕ್ಷೆಗೆ ಗುರಿಯಾದ ಆರೋಪಿ. 2019ರ ಮೇ 6ರಂದು ಸಂಜೆ 4 ಗಂಟೆಗೆ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಮುದ್ದೂರು ನಿವಾಸಿ ವಿಟಲ ಪರವ ಅವರು ಮುದ್ದೂರು ಎನ್ನುವಲ್ಲಿರುವ ಸತ್ಯೇಶ ಉಡುಪ ಅವರ ಅಂಗಡಿ ಕಟ್ಟಡದ ಬಳಿ ಹೋದಾಗ ನಾಲ್ಕೂರು ಗ್ರಾಮದ ನಿವಾಸಿಯಾದ ಆರೋಪಿ ಮಂಜುನಾಥ ಮಡಿವಾಳ ತನ್ನ ಆಟೋ ರಿಕ್ಷಾದಲ್ಲಿ ಅಲ್ಲಿಗೆ ಬಂದು ವಿಟಲ ಪರವ ಅವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದರು. ಅನಂತರ ವಿಟಲ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದಿನ ಹೆಬ್ರಿ ಠಾಣೆಯ ಪಿಎಸ್‌ಐ ಸತೀಶ್ ಸಿ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು…
ಯಾದಗಿರಿ: ಸೈದಾಪುರ ಪೊಲೀಸ್ ಠಾಣೆಯಲ್ಲಿ ಸೇವೆ ನಿರ್ವಹಿಸುತ್ತಿದ್ದ ಪೇದೆ ಬಲರಾಮ ಚಂದ್ರನಾಯಕ್ ವಿರುದ್ಧ ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಮಹಿಳೆಯೊಂದರೊಂದಿಗೆ ದೈಹಿಕ ಸಂಬಂಧ ಬೆಳೆಸಿ ನಂತರ ಮೋಸ ಮಾಡಿದ ಆರೋಪ ಎದುರಿಸುತ್ತಿರುವ ಆರೋಪಿಯನ್ನು ಪೊಲೀಸರು ತನಿಖೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಗುರುಮಠಕಲ್ ತಾಲೂಕಿನ ಬದ್ದೇಪಲ್ಲಿ ತಾಂಡಾದ ನಿವಾಸಿಯಾಗಿರುವ ಮಹಿಳೆ, ಬಲರಾಮ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ನಂಟು ಬೆಳೆಸಿದ್ದಾನೆ ಎಂದು ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮಹಿಳೆಯ ದೂರಿನ ಆಧಾರದಲ್ಲಿ ಮಂಗಳವಾರ ರಾತ್ರಿ ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಯಾದಗಿರಿ ಜಿಲ್ಲೆ ಎಸ್‌ಪಿ ಪ್ರಥ್ವಿಕ್ ಶಂಕರ್ ಮಾಹಿತಿ ನೀಡಿದ್ದಾರೆ. ಘಟನೆಯ ಗಂಭೀರತೆಯನ್ನು ಮನಗಂಡ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಆರಂಭಿಸಿದ್ದಾರೆ. ಪೇದೆ ಬಲರಾಮನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆಯ ಭಾಗವಾಗಿ ಸಾಕ್ಷ್ಯ ಸಂಗ್ರಹ ಕಾರ್ಯವೂ ಪ್ರಗತಿಯಲ್ಲಿ ಇದೆ. ಜಿಲ್ಲಾ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನ್ಯಾಯ ಮೀಸಲಿರಿಸಲು…
ಮಂಗಳೂರು: ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡಿದ ಚಿನ್ನದ ಗಟ್ಟಿ ಮಾರಾಟದಲ್ಲಿ ತಕರಾರು ನಡೆದು ಇಬ್ಬರನ್ನು ಉಪಾಯದಿಂದ ಕರೆಸಿ ಮಲಗಿದಲ್ಲಿಗೆ ಚೂರಿಯಿಂದ ಇರಿದು ಕೊಲೆಗೈದ ಪ್ರಕರಣದಲ್ಲಿ ಮೂವರ ವಿರುದ್ಧದ ಆರೋಪ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಕಾಸರಗೋಡು ತಾಲೂಕು ಚೆರ್ಕಳ ಮುಹಮ್ಮದ್ ಮುಹಜೀರ್ ಸನಾಫ್ (34), ಕಾಸರಗೋಡು ಆಣಂಗೂರು ಟಿ.ವಿ.ಸ್ಟೇಷನ್ ರಸ್ತೆ ನಿವಾಸಿ ಎ.ಮುಹಮ್ಮದ್ ಇರ್ಷಾದ್ (35), ಎ.ಮುಹಮ್ಮದ್ ಸಫ್ವಾನ್ (35) ಶಿಕ್ಷೆಗೊಳಗಾದ ಅಪರಾಧಿಗಳು. ನಾಫೀರ್ ಹಾಗೂ ಪಹೀಮ್ ಕೊಲೆಯಾದವರು ಎಂದು ಗುರುತಿಸಲಾಗಿದೆ. ಪ್ರಕರಣದ ವಿವರ: ಮೃತ ನಾಫೀರ್ ವಿದೇಶದಿಂದ ಚಿನ್ನದ ಗಟ್ಟಿಗಳನ್ನು ತಂದಿದ್ದು, ಫಹೀಮ್ ಆತನ ಸ್ನೇಹಿತನಾಗಿದ್ದ. ಅಪರಾಧಿಗಳು ಮೃತ ನಾಫೀರ್ ನಲ್ಲಿದ್ದ ಚಿನ್ನವನ್ನು ಮಾರಾಟ ಮಾಡಿ ಬಂದ ಹಣದಲ್ಲಿ ನಾಫೀರ್ ಮತ್ತು ಪಹೀಮ್ ತಕರಾರು ಮಾಡಿದರೆಂಬ ದ್ವೇಷದಿಂದ ಕೊಲೆ ಮಾಡುವ ಸಂಚು ರೂಪಿಸಿ ದ್ದರು. 2014 ಮೇ 15ರಂದು ಕಾಸರಗೋಡು ಬೇಡಡ್ಕ ಗ್ರಾಮದಲ್ಲಿ 10 ಸೆಂಟ್ಸ್ ಜಾಗವನ್ನು ಚಿನ್ನ ಮಾರಾಟ…
ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅಭಿನಂದಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದ ಕೆನರಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ದೀಪಶ್ರೀ ಹಾಗೂ ವಿಜ್ಞಾನ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದ ಎಕ್ಸ್‌ಪರ್ಟ್ ಕಾಲೇಜಿನ ಅಮೂಲ್ಯ ಕಾಮತ್ ಅವರನ್ನು ಮಂಗಳವಾರ ಮಧ್ಯಾಹ್ನ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಕರೆಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಶಾಲು ಹೊದಿಸಿ, ಹಾರ ಫಲಪುಷ್ಪ ನೀಡಿ ಅಭಿಂದಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಅವರು ಸಮಾಲೋಚನೆ ನಡೆಸಿ, ಕಲಿಕಾ ವಿಧಾನ, ಅಧ್ಯಯನ, ಶ್ರದ್ಧೆ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಸಾಧನೆಗೆ ಬೆನ್ನೆಲುಬಾಗಿ ನಿಂತ ಪಾಲಕರು, ಶಿಕ್ಷಕರನ್ನು ಜಿಲ್ಲಾಧಿಕಾರಿಗಳು ಅಭಿನಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಆನಂದ್ , ಅಮೂಲ್ಯ ಕಾಮತ್ ಹೆತ್ತವರಾದ ಡಾ. ದಿನೇಶ್ ಕಾಮತ್ ಮತ್ತು ಡಾ. ಅನುರಾಧ ಕಾಮತ್, ದೀಪಶ್ರೀ ಹೆತ್ತವರಾದ…
ಮಂಗಳೂರು: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಎಸ್ ಕೆ ಎಸ್ ಜಂಕ್ಷನ್ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಮೃತರನ್ನು ಕೇರಳ ಮೂಲದ ಸಂಕೀರ್ತ್ (ಚಾಲಕ) ಹಾಗೂ ಧನುರ್ವೇದ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸಿಬಿ ಸ್ಯಾಮ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಪ್ರಕಾರ, ಇಂದು ಬೆಳಗಿನ ಜಾವ ಸಂಕೀರ್ತ್ ಅವರು ಮೋಟಾರ್ ಸೈಕಲ್‌ನಲ್ಲಿ ಧನುರ್ವೇದ್ ಮತ್ತು ಸಿಬಿ ಸ್ಯಾಮ್ ಅವರೊಂದಿಗೆ ಪಂಪ್ವೆಲ್ ಕಡೆಗೆ ತೆರಳುತ್ತಿದ್ದರು. ಈ ವೇಳೆ ಎಸ್ ಕೆ ಎಸ್ ಜಂಕ್ಷನ್‌ನ ತೆರೆದ ಡಿವೈಡರ್‌ಗೆ ಮೋಟಾರ್ ಸೈಕಲ್ ಡಿಕ್ಕಿ ಹೊಡೆದಿದೆ.ಅಪಘಾತದ ತೀವ್ರತೆಗೆ ಮೋಟಾರ್ ಸೈಕಲ್‌ನಿಂದ ಮೂವರು ರಸ್ತೆಗೆ ಬಿದ್ದಿದ್ದು, ಸಂಕೀರ್ತ್ ಮತ್ತು ಧನುರ್ವೇದ್ ಅವರ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಬಿ ಸ್ಯಾಮ್ ಅವರಿಗೆ ಸಣ್ಣ ಗಾಯಗಳಾಗಿವೆ.ಈ…
ಮೈಸೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಜ್ಯದ ನಾನಾ ಕಡೆಗಳಲ್ಲಿ ನಡೆದಿದೆ. ದಾವಣಗೆರೆ ಖಾಸಗಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೃಪಾ(18), ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ತಾಂಡಾದ ಕಾವ್ಯ ಬಸಪ್ಪ ಲಮಾಣಿ , ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಅಗಸನೂರು ಗ್ರಾಮದ ಮಲ್ಲಯ್ಯ- ನಾಗರತ್ನ ದಂಪತಿಯ ಪುತ್ರಿ ವಿಜಯಲಕ್ಷ್ಮಿ ಮೈಸೂರಿನ ಒಂಟಿಕೊಪ್ಪಲಿನ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯಾ(17) ಕಲಾಮಂದಿರ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ದಕ್ಷಿಣಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಇಂದು ಸಂಜೆ ವೇಳೆ ಮಳೆ ಸುರಿದಿದೆ. ಗುಡುಗು ಸಿಡಿಲು ಸಹಿತ ಭಾರೀ ಗಾಳಿ ಮಳೆಯಾಗಿದೆ. ಗಾಳಿಗೆ ತೆಂಗಿನ ಮರವೊಂದು ರಸ್ತೆಗೆ ಬಿದ್ದು ಸ್ಕೂಟರ್ ಸವಾರ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾನೆ. ಮಾಣಿ- ಪುತ್ತೂರು ರಸ್ತೆಯ ನೇರಳಕಟ್ಟೆಯಲ್ಲಿ ತೆಂಗಿನಮರವೊಂದು ರಸ್ತೆಗೆ ಬಿದ್ದು ಸ್ಕೂಟರ್ ಸವಾರನೋರ್ವ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ನಡೆದಿದೆ. ಘಟನೆಯಿಂದ ಹಲವು ವಿದ್ಯುತ್ ಕಂಬಗಳು ದರೆಗುರುಳಿವೆ.
ಕಟೀಲು: ತಂತ್ರಜ್ಞಾನ ಶೀಘ್ರಗತಿಯಲ್ಲಿ ಪ್ರಗತಿಯಾಗುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ ನೋಡಿ. ಇನ್ಮುಂದೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದೇವಿಯ ಪ್ರಸಾದವೂ ಕೂಡಾ ಆನ್ಲೈನ್ ಮೂಲಕ ಮನೆ ಬಾಗಿಲಿಗೇ ಬಂದು ತಲುಪಲಿದೆ. ಈಗಾಗಲೇ ರಾಜ್ಯದ ಅನೇಕ ಪ್ರಸಿದ್ಧ ದೇವಾಲಯಗಳಲ್ಲಿ ಈ ಆನ್ಲೈನ್ ಸೇವೆಗಳು ಆರಂಭವಾಗಿದೆ. ಮುಜರಾಯಿ ಇಲಾಖೆಯ ಇ- ಪ್ರಸಾದ ಯೋಜನೆಗೆ ಡಿಮ್ಯಾಂಡ್ ಕೂಡಾ ಹೆಚ್ಚಾಗಿದೆ. ಆದ್ದರಿಂದ ಇನ್ನಷ್ಟು ದೇವಾಲಯಗಳ ಪ್ರಸಾದವನ್ನು ಆನ್ಲೈನ್ ಮೂಲಕವೇ ಮನೆ ಮನೆಗೆ ತಲುಪಿಸಲು ಇಲಾಖೆ ಮುಂದಾಗಿದ್ದು ಬೇರೆ ಭಾಗದ ಜನರಿಗೂ ಈ ಸೇವೆಯಿಂದ ಇನ್ನಷ್ಟು ಅನುಕೂಲವಾಗಲಿದೆ.
ಮಂಗಳೂರು: ನಗರದಲ್ಲಿ ನೀಟ್ ಕೋಚಿಂಗ್ ಪಡೆಯುತ್ತಿದ್ದ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿರುವ ಬಗ್ಗೆ ಕಾವೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ವಿದ್ಯಾರ್ಥಿಯನ್ನು ಸಂಜಯ್ ಬೇರಾ (21) ಎಂದು ಗುರುತಿಸಲಾಗಿದೆ. ಮಾರ್ಚ್ 21 ರಂದು ತಂದೆ ತಾಯಿಯಲ್ಲಿ ಓದಲು ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಕಾಣೆಯಾಗಿದ್ದಾರೆ. ಕಾಣೆಯಾದವರ ಚಹರೆ : ಎತ್ತರ 5.8 ಅಡಿ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿರುತ್ತಾರೆ. ಕಾಣೆಯಾದ ದಿನ ಕಪ್ಪು ಜೀನ್ಸ್ ಪ್ಯಾಂಟ್, ಟೀ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಬ್ಯಾಗ್ ಧರಿಸಿದ್ದರು. ಹಿಂದಿ, ಬಂಗಾಳಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಕಾವೂರು ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










