Author: main-admin

ಮಂಗಳೂರು: ಬಿಜೈನ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಮೂಲತಃ ಕೋಲಾರ ಜಿಲ್ಲೆ ಕೆಜಿಎಫ್‌ ಬಂಗಾರ ಪೇಟೆ ಕೆಎಸ್‌ಆರ್‌ಟಿಸಿ ಡಿಪೋ ಹತ್ತಿರದ ನಿವಾಸಿ ಹರ್ಷಿತ್‌ (26) ಎಂದು ಗುರುತಿಸಲಾಗಿದೆ. ಬರ್ಕೆ ಠಾಣೆಯ ಪೊಲೀಸರು ಎ. 3ರಂದು ರೌಂಡ್ಸ್‌ನಲ್ಲಿದ್ದಾಗ ಬೆಳಗ್ಗೆ 4.30ರ ವೇಳೆಗೆ ಬಿಜೈನ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ಕತ್ತಲೆಯಲ್ಲಿ ನಿಂತಿದ್ದ ಯುವಕನೊಬ್ಬ ಓಡಿ ಹೋಗಲು ಯತ್ನಿಸಿದ್ದ. ಪೊಲೀಸ್‌ ವಾಹನದಲ್ಲಿದ್ದ ಸಿಬಂದಿ ಆತನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಉತ್ತರ ಹೇಳಲು ತಡವರಿಸಿದ್ದಾನೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹೆಸರನ್ನಷ್ಟೇ ಹೇಳಿದ್ದಾನೆ. ಆತ ಯಾವುದೋ ಕುಕೃತ್ಯ ನಡೆಸುವ ಉದ್ದೇಶದಿಂದ ನಿಂತುಕೊಂಡಿದ್ದ ಎಂದು ಪೊಲೀಸರು ಅನುಮಾನಿಸಿದ್ದು, ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು: ಮಂಗಳೂರಿನ ಜೈಲಿನಲ್ಲಿ ಮೊಬೈಲ್ ಜಾಮರ್ ಆಳವಡಿಸಿದ ಕಾರಣ ಸುತ್ತಮುತ್ತಲಿನ ಪರಿಸರದಲ್ಲಿ ಉಂಟಾಗಿರುವ ಸಮಸ್ಯೆ ವಿರೋಧಿಸಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಜೈಲಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಜೈಲಿನಲ್ಲಿ ಮೊಬೈಲ್ ಜಾಮರ್ ಹಾಕಿದ ಪರಿಣಾಮ ಪರಿಸರದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಉಂಟಾಗಿದೆ. ಈ ಹಿನ್ನಲೆ ಬಿಜೆಪಿ ಇಂದು ಜೈಲಿನ ಎದುರು ಪ್ರತಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಜೈಲಿನಲ್ಲಿ ಏಕಾಏಕಿ 5ಜಿ ಜಾಮರ್ ಅಳವಡಿಸಿದ್ದರಿಂದ ಸುತ್ತಮುತ್ತಲಿನ ಕಚೇರಿ, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಜೈಲು ವಿಭಾಗದ ಡಿಜಿ, ಗೃಹ ಸಚಿವರು, ಪೊಲೀಸ್ ಕಮಿಷನರ್ ಗೆ ದೂರಿತ್ತರೂ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರು ತೊಂದರೆ ಎದುರಿಸಿದರೂ ಕಾಂಗ್ರೆಸ್ ಸರ್ಕಾರ ಮೌನ ವಹಿಸಿದೆ. ನಮ್ಮ ಸರ್ಕಾರ ಇರುತ್ತಿದ್ದರೆ ಜೈಲಿಗೆ ನುಗ್ಗಿ ಜಾಮರ್ ಕಿತ್ತು ಬಿಸಾಕುತ್ತಿದ್ದೆ ಎಂದು ಹೇಳಿದರು. ಈಗಲೂ ನಾವು ಜೈಲಿಗೆ ಹೋಗಲು ಸಿದ್ಧ, ಜೈಲಿನಲ್ಲಿ ಹೇಗೂ ಮೊಬೈಲ್ ಸಿಗುತ್ತದೆ,…

Read More

ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಏ.೬ರಂದು ಧರ್ಮಸ್ಥಳದಲ್ಲಿ ನಡೆಸಲು ನಿರ್ಧರಿಸಲಾಗಿದ್ದ ಬೃಹತ್ ಹಕ್ಕೊತ್ತಾಯ ಸಭೆ, ಪ್ರತಿಭಟನೆಗೆ ಕರ್ನಾಟಕ ಹೈಕೋರ್ಟ್ ಆರಂಭದಲ್ಲಿ ಅನುಮತಿ ನೀಡಿದ್ದರೂ, ಈ ಸಂಬಂಧ ವಾಟ್ಸಪ್ ಮೂಲಕ ರವಾನೆಯಾಗುತ್ತಿದ್ದ ಸಂದೇಶಗಳ ಗಂಭೀರತೆಯರಿತ ನ್ಯಾಯಪೀಠ ಪ್ರತಿಭಟನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಉದ್ದೇಶಿತ ಪ್ರತಿಭಟನೆಗೆ ಅವಕಾಶ ನೀಡದಂತೆ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದ ನ್ಯಾಯಪೀಠ ಆರಂಭದಲ್ಲಿ ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡಿತ್ತು.ಆದರೆ ಉದ್ದೇಶಿತ ಪ್ರತಿಭಟನೆಗೆ ಸಂಬಂಧಿಸಿ ವಾಟ್ಸಾಪ್ ಮೂಲಕ ರವಾನೆಯಾಗುತ್ತಿದ್ದ ಕೆಲವು ಸಂದೇಶಗಳು, ಬಹುಸಂಖ್ಯೆಯಲ್ಲಿ ಜನರನ್ನು ಕರೆಸಿಕೊಂಡು ದೇವಸ್ಥಾನ ಪ್ರವೇಶಿಸುವ ಯತ್ನಗಳ ಬಗ್ಗೆ ಸೂಚನೆ ನೀಡಿರುವುದರಿಂದ,ಈ ಘಟನೆಗಳ ಮೂಲಕ ನ್ಯಾಯಾಲಯದ ಹಿಂದಿನ ಆದೇಶ ಉಲ್ಲಂಘನೆ ಆಗಬಹುದು ಮತ್ತು ಸಾರ್ವಜನಿಕ ಶಾಂತಿಗೆ ತೊಂದರೆ ಉಂಟುಮಾಡಬಹುದು ಎಂದು ಧರ್ಮಸ್ಥಳದ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.ಪರಿಸ್ಥಿತಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ, ಏ.6ರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಆದೇಶ ನೀಡಿದೆ.

Read More

ಉಳ್ಳಾಲ : ಮಂಗಳೂರು ನಗರದ ಉಳ್ಳಾಲ ಪೊಲೀಸ್ ಇನ್ಸ್‌ಪೆಕ್ಟರ್ ಎಚ್‌ಎನ್ ಬಾಲಕೃಷ್ಣ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರು ಸಹಾಯಕ ಪೊಲೀಸ್ ಆಯುಕ್ತ ಧನ್ಯಾ ನಾಯಕ್ ಅವರಿಗೆ ವಿಚಾರದ ಹೊಣೆ ವಹಿಸಲಾಗಿದೆ. ಜೂನ್ 2024 ರಲ್ಲಿ ಉಳ್ಳಾಲದಲ್ಲಿ ವೃದ್ಧ ಮಹಿಳೆಯೊಬ್ಬರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಬಂಧಿಸಿದ ಯುವಕನ ತಾಯಿ ಶ್ರೀ ಅಗರವಾಲ್ ಅವರಿಗೆ ಸಲ್ಲಿಸಿದ ಅರ್ಜಿಯಲ್ಲಿ, ಇನ್ಸ್‌ಪೆಕ್ಟರ್ ತಮ್ಮ ಮಗನಿಂದ 50 ಗ್ರಾಂ ಚಿನ್ನದ ಆಭರಣಗಳನ್ನು ಕಳ್ಳತನಕ್ಕೆ ಸಂಬಂಧಿಸಿದೆ ಎಂದು ಹೇಳುವ ಮೂಲಕ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆಭರಣಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗುವುದು ಮತ್ತು ಕುಟುಂಬ ಸದಸ್ಯರು ನ್ಯಾಯಾಲಯದಿಂದ ಬಿಡುಗಡೆ ಮಾಡಬಹುದು ಎಂದು ಅಧಿಕಾರಿ ಹೇಳಿದ್ದರು ಎಂದು ತಾಯಿ ಆರೋಪಿಸಿದ್ದಾರೆ.

Read More

ಕಾಸರಗೋಡು: ಬೈಕ್‌ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಕಾಸರಗೋಡಿನ ಚೆಮ್ನಾಡ್ ನಲ್ಲಿ ನಡೆದಿದೆ.ಮೇಲ್ಪರಂಬ ಒರವಂಗರದ ಮುಹಮ್ಮದ್ ಹನೀಫ್ (26) ಮೃತಪಟ್ಟವರು.ರಸ್ತೆಯ ಹೊಂಡಕ್ಕೆ ಬಿದ್ದ ಬೈಕ್ ಮೇಲೆ ಹಿಂದಿನಿಂದ ಬಂದ ಲಾರಿ ಹೋಗಿದ್ದು, ಗಂಭೀರ ಗಾಯಗೊಂಡ ಹನೀಫ್ ರನ್ನು ಆಸ್ಪತ್ರೆಗೆ ತಲುಪಿಸಿದರೂ ಅದಾಗಲೇ ಮೃತಪಟ್ಟಿದ್ದರು.ಗಲ್ಫ್ ಉದ್ಯೋಗಿಯಾಗಿದ್ದ ಹನೀಫ್ ರಂಝಾನ್ ಹಬ್ಬದ ಹಿನ್ನಲೆ ಊರಿಗೆ ಬಂದಿದ್ದರು. ಮುಂದಿನ ವಾರ ಅವರು ಮತ್ತೆ ಗಲ್ಫ್ ಗೆ ತೆರಳಬೇಕಿತ್ತು. ಈ ಬಗ್ಗೆ ಮೇಲ್ಪರಂಬ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Read More

ಚಂಡೀಗಢ : 2 ಕೋಟಿ ಮೌಲ್ಯದ ಹೆರಾಯಿನ್‌ ಜೊತೆ ಪಂಜಾಬ್‌ನ ಮಹಿಳಾ ಕಾನ್‌ಸ್ಟೇಬಲ್‌ ನ್ನು ಬಂಧಿಸಲಾಗಿದೆ. ಆಕೆಯನ್ನು ಜಿಲ್ಲಾ ನ್ಯಾಯಾಲಯವು ಒಂದು ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ. 17.71 ಮಿ.ಗ್ರಾಂ ಹೆರಾಯಿನ್ ಜೊತೆ ಮಹಿಳಾ ಕಾನ್‌ಸ್ಟೇಬಲ್ ಅಮನ್‌ದೀಪ್ ಕೌರ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣ ಬೆನ್ನಲ್ಲೇ ಆಕೆಯನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಆಕೆಯ ಚರ ಮತ್ತು ಸ್ಥಿರ ಆಸ್ತಿಗಳ ತನಿಖೆ ನಡೆಯುತ್ತಿದೆ. ಆರೋಪಿಯು ಆದಾಯದ ಮೂಲಕ್ಕಿಂತ ಹೆಚ್ಚಿನ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಆಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಐಜಿ ಪ್ರಧಾನ ಕಚೇರಿಯ ಸುಖ್‌ಚೈನ್ ಸಿಂಗ್ ಗಿಲ್ ತಿಳಿಸಿದ್ದಾರೆ ಈ ಹಿಂದೆ ಪೊಲೀಸರು ಕಾನ್‌ಸ್ಟೇಬಲ್ ಮೇಲೆ ಡೋಪ್ ಪರೀಕ್ಷೆ ನಡೆಸಿದ್ದರು. ಆದರೆ ಅದು ನೆಗೆಟಿವ್ ಬಂದಿತ್ತು. ನಗರ ಡಿಎಸ್‌ಪಿ ಹರ್ಬನ್ಸ್ ಸಿಂಗ್ ಧಲಿವಾಲ್, ಗೌಪ್ಯ ಮಾಹಿತಿಯ ಆಧಾರದ ಮೇಲೆ, ಪೊಲೀಸ್ ತಂಡವು ಲಾಡ್ಲಿ ಧಿ ಚೌಕ್ ಬಳಿಯ ಮೇಲ್ಸೇತುವೆಯ ಕೆಳಗೆ ಚೆಕ್‌ಪಾಯಿಂಟ್ ಅನ್ನು ಸ್ಥಾಪಿಸಿತು. ಈ ವೇಳೆ, ಅಮನ್‌ದೀಪ್ ಕಾರನ್ನು…

Read More

ಮಂಗಳೂರು : ಆನ್ ಲೈನ್ ನಲ್ಲಿ ಅದರಲ್ಲೂ ಟಿಲಿಗ್ರಾಂ ಮೂಲಕ ಬಂದಿರುವ  ಸಂದೇಶ ನಂಬಿ ಹಣ ಹೂಡಿಕೆ ಮಾಡಿ  ಹಲವು ಜನರು ಮೋಸ ಹೋಗುತ್ತಿದ್ದಾರೆ. ಇಂಥಹದೇ ವಂಚನೆಗೆ ಸುಳ್ಯದ ಯುವಕ ಸಿಲುಕಿದ್ದು ಪ್ರಕರಣ ದಾಖಲಾಗಿದೆ. ಸುಳ್ಯದ ಹಳೆಗೇಟು ನಿವಾಸಿ   ಮುಹಮ್ಮದ್ ಕೈಫ್ ಎಮ್.ಎಸ್  (23 ವರ್ಷ) ಅವರ   ಮೊಬೈಲ್ ನಂಬ್ರ  ಗೆ ಕರೆ ಮಾಡಿ  Devnet Private Company  ಯಲ್ಲಿ Part time Job  work from home ನೀಡುವುದಾಗಿ ಹೇಳಿದ್ದರು.ಬಳಿಕ  Task Complete ಮಾಡಲು  ಎಂದು ತಿಳಿಸಿ ಒಂದು  brand name  ಕಳುಹಿಸಿದ್ದು, ಸದ್ರಿ brand  ನ್ನು Google  ನಲ್ಲಿ Search  ಮಾಡಿ Screenshot ತೆಗೆದು ಕಳುಹಿಸಲು ತಿಳಿಸಿದ್ದು, ಅದರಂತೆ ಕಳುಹಿಸಿರುತ್ತಾರೆ. ನಂತರ  Telegram ಖಾತೆಯಲ್ಲಿ   Task Complete  ಮಾಡುವ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ  Task Complete ಮಾಡಿದ್ದಕ್ಕೆ  ರೂ. 150/- ಬ್ಯಾಂಕ್  ಖಾತೆಗೆ ಹಾಕಿದ್ದರು.   ನಂತರ   Part Time Job  ಬಗ್ಗೆ  ಮಾಹಿತಿ ನೀಡಿ  Website  Link (ಪ್ರಸ್ತುತ…

Read More

ಉಡುಪಿ: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅಮಾಯಕರು ಮೋಸದ ಬಲೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಉಡುಪಿಯಲ್ಲಿ ಕೂಡಾ ಅದೇ ರೀತಿಯ ಘಟನೆ ನಡೆದಿದ್ದು ವ್ಯಕ್ತಿಯೊಬ್ಬ ಲಕ್ಷಾಂತರ ರೂ‌. ಹಣ ಕಳೆದುಕೊಂಡಿದ್ದಾನೆ. ಮೂಲತಃ ಉಡುಪಿಯ ದಿಲೀಪ್ ಎಂಬವರು ಹಣ ಕಳೆದುಕೊಂಡವರಾಗಿದ್ದಾರೆ. ಇವರಿಗೆ ನೆಟ್ಫ್ಲಿಕ್ಸ್ ನ ಚಂದಾ ಮುಗಿದು ಹೋಗಿದ್ದ ಕಾರಣ ಇಮೇಲ್ ಗೆ ಒಂದು ಮೆಸೇಜ್ ಬಂದಿತ್ತು. ನಂತರ ಲಿಂಕ್ ಕ್ಲಿಕ್ ಮಾಡಿದಾಗ ಚಂದಾ ಪಡೆಯಲು ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆಯಲು ಇನ್ನೊಂದು ಟ್ಯಾಬ್ ಓಪನ್ ಆಗಿದೆ. ಅವರು ಕ್ರೆಡಿಟ್ ಕಾರ್ಡ್ ಸಂಖ್ಯೆ ನಮೂದಿಸಿದಾಗ ಮೊಬೈಲ್ ಗೆ ಒಟಿಪಿ ಬಂದಿದೆ. ಅದನ್ನು ಎಂಟರ್ ಮಾಡಿದ್ದಾರೆ. ಆದರೆ ಸಮ್ಥಿಂಗ್ ವೆಂಟ್ ರಾಂಗ್ ಎಂಬ ಮೆಸೇಜ್ ಬಂದಿದ್ದು ಆಗ ದಿಲೀಪ್ ಗೆ ಅನುಮಾನ ಬಂದಿದೆ. ಆಗ ಅವರು ಬ್ಯಾಂಕ್ ನ ಹೆಲ್ಪ್ಪೈನ್ ಗೆ ಕಾಲ್ ಮಾಡಿದಾಗ ಅವರ ಖಾತೆಯಿಂದ ಲಕ್ಷಕ್ಕೂ ಅಧಿಕ ಹಣ ಮಂಗಮಾಯವಾಗಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ…

Read More

ಬೆಳ್ತಂಗಡಿ: ವಧಿಸುವ ಸಲುವಾಗಿ ಮಂಗಳೂರಿಗೆ ಸಾಗಿಸುತ್ತಿದ್ದ ಸುಮಾರು 15 ಗೋವುಗಳನ್ನು ಇಂದು ನಸುಕಿನ ಹೊತ್ತು ಬೆಳ್ತಂಗಡಿ ಸಮೀಪ ರಕ್ಷಿಸಲಾಗಿದೆ. ತರಕಾರಿ ವಾಹನದಲ್ಲಿ ಗೋವು ಸಾಗಾಟ ಮಾಡುತ್ತಿರುವ ಮಾಹಿತಿ ಸಿಕ್ಕಿ ಹಿಂದು ಸಂಘಟನೆಗಳು ವಾಹನವನ್ನು ಹಿಂಬಾಲಿಸಿ ಕಳಿಯ ನಾಯತರ್ಪು ಸಮೀಪದ ಜಾರಿಗೆಬೈಲಿನಲ್ಲಿ ಅಡ್ಡಗಟ್ಟಿದ್ದಾರೆ. ಆಗ ವಾಹನದಲ್ಲಿ ಸುಮಾರು 15 ಗೋವುಗಳನ್ನು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿರುವುದು ಪತ್ತೆಯಾಗಿದೆ.ಮಹೇಶ್‌ ಶೆಟ್ಟಿ ತಿಮರೋಡಿ ನೇತೃತ್ವದ ರಾಷ್ಟ್ರೀಯ ಹಿಂದೂ ಜಾರಣ ವೇದಿಕೆಯ ಕಾರ್ಯಕರ್ತರು ಈ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ವಾಹನವನ್ನು ಅಡ್ಡಗಟ್ಟುತ್ತಿದ್ದಂತೆ ಚಾಲಕ ಇಳಿದು ಓಡಿಹೋಗಿದ್ದಾನೆ. ಹಿಂದು ಕಾರ್ಯಕರ್ತರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಅವರು ಬಂದು ಗೋವುಗಳು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಏಸ್‌ ಟೆಂಪೊದಲ್ಲಿ 15ರಷ್ಟು ಗೋವುಗಳನ್ನು ತರಕಾರಿಗಳ ಜೊತೆಗೆ ಅತ್ಯಂತ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಹೋಗಲಾಗುತ್ತಿತ್ತು. ಬೆಳ್ತಂಗಡಿ ಸುತ್ತಮುತ್ತಲಿಂದಲೇ ಈ ಗೋವುಗಳನ್ನು ತಂದಿದ್ದರು ಎನ್ನಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Read More

ಪುತ್ತೂರು: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಉಪ್ಪಿನಂಗಡಿ ಸಮೀಪ, ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿ, ಓರ್ವ ಪ್ರಯಾಣಿಕ ಮೃತಪಟ್ಟು 12 ಮಂದಿ ಗಾಯಗೊಂಡಿರುವ ಘಟನೆ ಏಪ್ರಿಲ್ 4 ರಂದು ಬೆಳಿಗ್ಗೆ 5 ಗಂಟೆಗೆ ನಡೆದಿದೆ. ಮೃತಪಟ್ಟವರನ್ನು ಬೆಂಗಳೂರು ಗ್ರಾಮಾಂತರದ ಯಡಿಯೂರು ನಿವಾಸಿ ಹರ್ಷ (24) ಎಂದು ಗುರುತಿಸಲಾಗಿದೆ. ಅವರು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಮಂಗಳೂರು ಹೊರವಲಯದ ಮುಲ್ಕಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಗೊಂಡ 12 ಮಂದಿಯಲ್ಲಿ 11 ಜನರು ಉಪ್ಪಿನಂಗಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More