Author: main-admin

ಬೆಂಗಳೂರು : ರಾಜ್ಯದ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೈಬರ್ ಅಪರಾಧಗಳ ಕುರಿತು ಹೆಚ್ಚಿನ ಅರಿವು ಮತ್ತು ತರಬೇತಿ ನೀಡಲಾಗುವುದು ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್‌ ಅವರು ತಿಳಿಸಿದ್ದಾರೆ. ಸಿಐಡಿ ಹಾಗೂ ಸೈಬರ್ ಕ್ರೈಂ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ CIDECODE, ‘ ಅಪರಾಧ ಶೃಂಗಸಭೆ-2025’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಜಗತ್ತಿನಲ್ಲಿ ನಡೆಯುತ್ತಿರುವ ಸೈಬರ್ ಅಪರಾಧಗಳ ಕುರಿತು ಪೊಲೀಸರಿಗೂ ಅರಿವು ಇರಬೇಕು ಹಾಗೂ ಪ್ರಕರಣಗಳ ಪರಿ ಣಾಮಕಾರಿ ತನಿಖೆಗೆ ಸಜ್ಜುಗೊಳಿಸಬೇಕೆಂಬ ಉದ್ದೇಶದಿಂದ ಸಿಸಿಐಟಿಆರ್ ಸ್ಥಾಪಿಸಲಾಗಿದೆ. ಇದುವರೆಗೂ 46 ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು. ಒಟಿಪಿ ಪಡೆದು ಬ್ಯಾಂಕ್ ಖಾತೆಗಳಿಂದ ಹಣ ದೋಚುವುದು, ಡೇಟಾ ಹ್ಯಾಕ್, ಸರಕಾರದ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡುವುದು ಸೇರಿದಂತೆ ನಾನಾ ಬಗೆಯ ಸೈಬರ್ ಅಪರಾಧಗಳು ನಡೆಯು ತ್ತಿವೆ. ಬೆಂಗಳೂರು…

Read More

ನ.28 ರಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಉಪ್ಪಿನಂಗಡಿ ಪೋಲಿಸ್ ಸಿಬ್ಬಂದಿಗಳು ತಪಾಸಣೆಗೆ ನಡೆಸಲಾದ ಕಾರ್ ನಲ್ಲಿ ನಿಷೇಧಿತ ಮಾದಕ ದ್ರವ್ಯವಾದ MDMA ಯನ್ನು ಜಪ್ತಿ ಮಾಡಿರುತ್ತಾರೆ.ಅಲ್ಲದೇ ಸುಮಾರ 22.5 ಗ್ರಾಂ ನಷ್ಟು ಮಾದಕ ದ್ರವ್ಯವಾದ MDMA ಯನ್ನು ಜಪ್ತಿ ಮಾಡಿರುತ್ತಾರೆ. MDMA ಡ್ರಗ್ಸ್ ನ್ನು ಪೂರೈಕೆ ಮಾಡಿದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗೆ ಮಾನ್ಯ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ನ್ಯಾಯಾಧೀಶರು ಆರೋಪಿಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿರುತ್ತಾರೆ.ಸದರಿ ಆರೋಪಿ ಪರವಾಗಿ ವಿಟ್ಲ ಪ್ರಮಾ ಆಸೋಸಿಯೇಟ್ ನ ವಕೀಲರಾದ ಮನೋಜ್ ಕುಮಾರ್ ಯು ಮತ್ತು ವಿಮಲೇಶ್ ಕೆ ಎಸ್ ವಾದಿಸಿದ್ದರು

Read More

ಮಂಗಳೂರು: ದ.ಕ ಜಿಲ್ಲೆಯಲ್ಲಿ ಅಕ್ರಮ ಇತ್ತೀಚೆಗೆ ನಿರಂತರವಾಗಿ ಅಕ್ರಮ ಗೋಸಾಗಾಟ ನಡೆಯುತ್ತಲೇ ಇದೆ. ಇದೀಗ ಮತ್ತೊಂದು ಪ್ರಕರಣ ಬಯಲಾಗಿದೆ. ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಘಟನೆ ಇಂದು ಮುಂಜಾನೆ ಮಂಗಳೂರಿನ ಕುಲಶೇಖರ ಕೈಕಂಬ ಬಳಿ ನಡೆದಿದೆ. ಭಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಸ್ಕೂಟರ್ ನಲ್ಲಿದ್ದ ನೂರು ಕೆಜಿಗೂ ಅಧಿಕ ಗೋಮಾಂಸ ಸಾಗಾಟ ಮಾಡುತ್ತಿದ್ದಾಗ ಪತ್ತೆ ಹಚ್ಚಿದ್ದಾರೆ. ಹಿಂದೂ ಕಾರ್ಯಕರ್ತರು ಈ ಅಕ್ರಮವನ್ನು ಪತ್ತೆ ಹಚ್ಚಿದಾಗ ಸ್ಕೂಟರ್ ಸವಾರ ಗಾಡಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Read More

ಮಂಗಳೂರು: ಚಿಕ್ಕಮಗಳೂರಿನ ತೇಗೂರು ಗ್ರಾಮದ ಡಾ. ಅಬ್ದುಲ್​ ಕಲಾಂ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ವಸತಿ ಶಾಲೆಯ 9ನೇ ತರಗತಿಯ ಬಾಳೆಹೊನ್ನೂರು ಮೂಲದ ಯಶ್ವಿತ್ ಸಾಲಿಯಾನ್​​​ ಮತ್ತು ಬೆಂಗಳೂರು ಮೂಲದ ತರುಣ್‌ ಮಾರ್ಚ್​ 3ರಂದು ನಾಪತ್ತೆಯಾಗಿದ್ದರು. ಮಂಗಳೂರಿನ ಹೋಟೆಲ್​ವೊಂದರಲ್ಲಿ ಕೆಲಸಕ್ಕೆ ಸೇರಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.ಯಶ್ವಿತ್ ಮತ್ತು ತರುಣ್ ಉತ್ತಮ ಸ್ನೇಹಿತರಾಗಿದ್ದು, ಓದಿನಲ್ಲಿ ಆಸಕ್ತಿ ಇಲ್ಲದಿದ್ದರೂ ವಸತಿ ಶಾಲೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದರು.‌ 9ನೇ ತರಗತಿ ಪರೀಕ್ಷೆ ಮುಗಿಸಿದ ಬಳಿಕ 10ನೇ ತರಗತಿಯ ಸಿದ್ದತೆಗಾಗಿ ವಿಶೇಷ ತರಗತಿಗಳು ನಡೆಯುತ್ತಿದ್ದು, ಇದರಿಂದ ಪರೀಕ್ಷೆ ಮುಗಿದರೂ ರಜೆ ಸಿಕ್ಕಿರಲಿಲ್ಲ. ವಿಶೇಷ ತರಗತಿ ಮುಗಿಸಿ ರೂಮ್ ಸೇರಿದ ಇಬ್ಬರು ಮೊದಲೇ ಮಾಡಿದ ಪ್ಲಾನ್​ನಂತೆ ವಸತಿ ಶಾಲೆಯ ಕಾಂಪೌಂಡ್ ಹಾರಿ 5 ಕಿಮೀ ನಡೆದು ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಸ್​ ಹತ್ತಿ ಮಂಗಳೂರಿಗೆ ಬಂದಿದ್ದರು. ಮಕ್ಕಳು ನಾಪತ್ತೆಯಾಗುತ್ತಿದ್ದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು, ವಿದ್ಯಾರ್ಥಿಗಳ…

Read More

ಮಂಗಳೂರು: ನಗರದ ಸಮೀಪ ಹಳೆಯ ದ್ವೇಷಕ್ಕೆ ಸಂಬಂಧಿಸಿ ಬಿಜೈ ಕಾಪಿಕಾಡ್ 6ನೇ ಕ್ರಾಸ್‌ನಲ್ಲಿ ಬೈಕಿಗೆ ಕಾರು ಢಿಕ್ಕಿ ಹೊಡೆಸಿ ಬೈಕ್ ಸವಾರನನ್ನು ಕೊಲೆ ಮಾಡಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿ ಸತೀಶ್ ಕುಮಾರ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಪಾದಚಾರಿ ಮಹಿಳೆ ಯಲ್ಲವ್ವ ಉಪ್ನಾಳ ಮತ್ತು ಬೈಕ್ ಸವಾರ ಮುರಳಿ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯು ಗುರುವಾರ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು ಎಂದು ತಿಳಿದು ಬಂದಿದೆ. ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸಿದ್ದಾರೆ.

Read More

ಮಂಗಳೂರು: ಪಣಂಬೂರು ಕೋಸ್ಟ್ ಗಾರ್ಡ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜೀವನ್ ಕುಮಾರ್ ಎಂಬವರ ಪುತ್ರ ಹಿತೇನ್ ಬದ್ರ (17) ಎಂಬವರು ಮಾ. 12ರಂದು ಕುಂಜತ್ತಬೈಲಿನಲ್ಲಿರುವ ಮನೆಯಿಂದ ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಬೆಳಗ್ಗೆ 10ಕ್ಕೆ ಮನೆಯಿಂದ ಹೋಗಿದ್ದು, ತನ್ನ ಮೊಬೈಲ್ ಫೋನ್ ಮತ್ತು ಪರ್ಸ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ಆತನನ್ನು ಯಾರಾದರೂ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುವ ಸಾಧ್ಯತೆಯಿದೆ ಎಂದು ತಂದೆ ಕಾವೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೂಲತಃ ಪಶ್ಚಿಮ ಬಂಗಾಲ ಜಿಲ್ಲೆಯ ಜಡಾಗ್ರಾಮ್ ಜಿಲ್ಲೆಯ ಗೋಪಿಬಲ್ಲವ್ ಪುರ ನಿವಾಸಿಗಳಾಗಿದ್ದು, ಪ್ರಸ್ತುತ ಚಹರೆ: 172 ಸೆಂ.ಮೀ. ಎತ್ತರ, ಕಾಣೆಯಾದ ದಿನ ಬಿಳಿ ಬಣ್ಣದ ಚಪ್ಪಲಿ, ತಿಳಿ ಹಸುರು ಬಣ್ಣದ ರೌಂಡ್ ಟಿ ಶರ್ಟ್, ನೀಲಿಬಣ್ಣದ ಟ್ರ್ಯಾಕ್ ಸೂಟ್ ಧರಿಸಿದ್ದರು. ಬಿಳಿ ಬಣ್ಣದ ಕನ್ನಡಕ ಧರಿಸಿರುತ್ತಾರೆ. ಇಂಗ್ಲಿಷ್, ಹಿಂದಿ, ಓಡಿಯಾ ಭಾಷೆ ಮಾತನಾಡುತ್ತಾರೆ. ಹಣೆಯ ಮೇಲೆ ಮಧ್ಯದಲ್ಲಿ ಕಪ್ಪು ಮಚ್ಚೆ ಇದೆ. ಕುಂಜತ್ತಬೈಲಿನ ಕೋಸ್ಟ್ ಗಾರ್ಡ್ ವಸತಿಗೃಹದಲ್ಲಿ ವಾಸವಾಗಿದ್ದಾರೆ. ಈ ಚಹರೆಯ ಯುವಕನ…

Read More

ದಾವಣಗೆರೆ : ಕೊಂಡಜ್ಜಿಯಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಗೆ ನುರಿತ ಸ್ನಾತಕೋತ್ತರ ಹಾಗೂ ಸ್ನಾತಕ ಶಿಕ್ಷಕರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತಿಳಿಸಿದ್ದಾರೆ. ಈ ಶಾಲೆಯನ್ನು ಕರ್ನಾಟಕ ರಾಜ್ಯ ಪೊಲೀಸ್ ಕಲ್ಯಾಣ, ಶಿಕ್ಷಣ ಟ್ರಸ್ಟ್, ಪೂರ್ವ ವಲಯ ದಾವಣಗೆರೆ ಇವರಿಂದ ಪೊಲೀಸ್ ಪಬ್ಲಿಕ್ ಸ್ಕೂಲ್ ಸಿಬಿಎಸ್‍ಇ ಪಠ್ಯಕ್ರಮದ ಶಾಲೆ ನಡೆಸಲಾಗುತ್ತಿದೆ. ಇಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಮಕ್ಕಳು ಹಾಗೂ ಇತರೆ ಸಾರ್ವಜನಿಕ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಈ ಶಾಲೆಗೆ ಅಗತ್ಯವಿರುವ ಪಿಜಿಟಿ ಇಂಗ್ಲೀಷ್ ಶಿಕ್ಷಕರ 1 ಹುದ್ದೆಗೆ ಎಂಎ.ಬಿ.ಇಡಿ, ಪಿಜಿಟಿ ಗಣಿತ ಶಿಕ್ಷಕರ 1 ಹುದ್ದೆಗೆ ಎಂ.ಎಸ್ಸಿ, ಬಿ.ಇಡಿ, ಪಿಜಿಟಿ ವಿಜ್ಞಾನ ಶಿಕ್ಷಕರ 2 ಹುದ್ದೆಗಳಿಗೆ ಎಂಎಸ್ಸಿ, ಬಿಇಡಿ ಸಿಬಿಝಡ್, ಟಿಜಿಟಿ ಸಮಾಜ ವಿಜ್ಞಾನ 1 ಹುದ್ದೆಗೆ ಎಂ.ಎ. ಬಿ.ಇಡಿ, ಕನ್ನಡ ಪಿಜಿಟಿ 1 ಹುದ್ದೆಗೆ ಎಂಎ, ಬಿ.ಇಡಿ, ಹಿಂದಿ 2 ಹುದ್ದೆ ಬಿ.ಎ, ಎಂ.ಎ ಬಿ.ಇಡಿ, ದೈಹಿಕ ಶಿಕ್ಷಕ…

Read More

 ಬಂಟ್ವಾಳ: ಕಾರೊಂದು ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಆಟೋ ಚಾಲಕ ಗಂಭೀರ ಗಾಯಗೊಂಡ ಘಟನೆ ಸೂರಿಕುಮೇರು ಜಂಕ್ಷನ್‍ ಬಳಿ ನಡೆದಿದೆ. ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದು ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಪರಿಣಾಮ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ.

Read More

ಪುತ್ತೂರು: ಬೈಕ್ ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಸಂಟ್ಯಾರ್ ನಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನಗಳು ನುಜ್ಜು ಗುಜ್ಜಾಗಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Read More

ಮಂಗಳೂರು: ಮ್ಯಾನೇಜರ್‌ ತಾನು ಕಾರ್ಯನಿರ್ವಹಿಸುತ್ತಿದ್ದ ಬ್ಯಾಂಕ್‌ಗೆ ವಂಚಿಸಿದ ಬಗ್ಗೆ ಸೆನ್‌ ಠಾಣೆಯಲ್ಲಿ ನಿನ್ನೆ ಪ್ರಕರಣ ದಾಖಲಾಗಿದೆ. ಬ್ಯಾಂಕ್‌ ಆಫ್‌ ಬರೋಡಾದ ಕೊಣಾಜೆ ಬ್ರಾಂಚ್‌ನಲ್ಲಿ ಆರೋಪಿ ಡೆರಿಕ್‌ ಅಜಿತ್‌ ಡಿಸೋಜ ಎಂಬಾತ 2022ರ ಸೆಪ್ಟಂಬರ್‌ 22ರಿಂದ 2024ರ ಫೆಬ್ರವರಿ 7ರವರೆಗೆ ಮ್ಯಾನೇಜರ್‌ ಆಗಿದ್ದು, ಈ ಸಂದರ್ಭ ಬ್ಯಾಂಕಿನ ಹಿರಿಯ ನಾಗರಿಕರು ಠೇವಣಿಯಲ್ಲಿರಿಸಿದ್ದ ಹಣವನ್ನು ಖಾತೆದಾರರಿಗೆ ತಿಳಿಯದಂತೆ 1, 44, 71, 000 ರೂ. ವನ್ನು ಸಾಲ ರೂಪದಲ್ಲಿ ಇತರ ಆರೋಪಿತರ ಖಾತೆಗೆ ವರ್ಗಾಯಿಸಿದ್ದಾನೆ ಎನ್ನಲಾಗಿದೆ.

Read More