ಬೆಂಗಳೂರು : ರಾಜ್ಯ ಸರ್ಕಾರವು ಯಜಮಾನಿಯರಿಗೆ ಸಿಹಿಸುದ್ದಿ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಎರಡು ತಿಂಗಳ ಹಣ ವರ್ಗಾವಣೆಯಾಗಿದೆ. ಈ ಮೂರು ತಿಂಗಳ ಬಳಿಕ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆ ಸೇರಿದೆ. ಜುಲೈ, ಆಗಸ್ಟ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವು ತಾಂತ್ರಿಕ ಕಾರಣದಿಂದ ಯಜಮಾನಿಯರ ಖಾತೆಗೆ ಜಮಾ ಆಗಿರಲಿಲ್ಲ. ಯಜಮಾನಿಯರಿಗೆ ಇದೀಗ ಎರಡು ಕಂತುಗಳ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಜುಲೈ, ಆಗಸ್ಟ್ ತಿಂಗಳ 2000 ರೂ. ವರ್ಗಾವಣೆ ಆಗಿದ್ದು, ಸದ್ಯ ಬಾಕಿ ಇರುವ ಸೆಪ್ಟೆಂಬರ್ ತಿಂಗಳ ಹಣ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಗೃಹಲಕ್ಷ್ಮಿ ಹಣ ಸ್ಟೇಟಸ್ ತಿಳಿದುಕೊಳ್ಳುವ ವಿಧಾನ ಹೀಗಿದೆ ನೋಡಿ ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಓಪನ್ ಮಾಡಿಕೊಳ್ಳಿಪ್ಲೇ ಸ್ಟೋರ್ ನಲ್ಲಿ DBT Karnataka ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿಡೌನ್ಲೋಡ್ ಮಾಡಿದ ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಿನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ಮೊಬೈಲ್ ನಂಬರ್…
Author: main-admin
ಕಾರ್ಕಳ: ಕಾರ್ಕಳದಲ್ಲಿ ನೆಲೆಸಿದ್ದ ಇನ್ನಿಬ್ಬರು ಅಕ್ರಮ ಬಾಂಗ್ಲಾ ವಲಸೆಗಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರನ್ನು ಕಾರ್ಕಳ ಪೊಲೀಸರು ತೀವ್ರ ವಿಚಾರಣೆ ನಡೆಯುತ್ತಿದ್ದು, ಗುರುವಾರ ಅಧಿಕೃತವಾಗಿ ಬಂಧಿಸುವ ಸಾಧ್ಯತೆ ಇದೆ. ಕಳೆದ ವಾರ ಮಲ್ಪೆ ಸಮೀಪದ ತೋನ್ಸೆ ಗ್ರಾಮದಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಮಂದಿ ಬಾಂಗ್ಲಾ ವಲಸಿಗರನ್ನು ಬಂಧಿಸಲಾಗಿತ್ತು. ಓರ್ವನನ್ನು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಜಿಲ್ಲೆಯಲ್ಲಿ ಇನ್ನೂ ಸಾಕಷ್ಟು ಮಂದಿ ಅಕ್ರಮ ವಲಸೆಗಾರರಿರುವ ಮಾಹಿತಿ ಬಂಧಿತರಿಂದ ಸಿಕ್ಕಿದ್ದು, ಅದರಂತೆ ತೀವ್ರ ವಿಚಾರಣೆ ನಡೆಯುತ್ತಿದೆ. ಕಾರ್ಕಳದಲ್ಲಿ ವಶಕ್ಕೆ ಪಡೆದವರನ್ನು ಗುರುವಾರ ಮಹಜರು ನಡೆಸಿ ಬಂಧಿಸಲಾಗುವುದು ಎಂದು ಎಸ್ಪಿ ಡಾ। ಅರುಣ್ ಕೆ.ತಿಳಿಸಿದ್ದಾರೆ.
ವೀಳ್ಯದೆಲೆಯು ವಿಟಮಿನ್ ಸಿ , ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್, ಕ್ಯಾರೋಟಿನ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದ್ದು, ಭೋಜನದ ಬಳಿಕ ವೀಳ್ಯದೆಲೆ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಅದ್ಭುತ ಪ್ರಯೋಜನಗಳಿವೆ. ಆದರೆ ವೀಳ್ಯದೆಲೆಯನ್ನು ಸಣ್ಣದೊಂದಿಗೆ ತಿನ್ನುವುದಕ್ಕಿಂತ ಲವಂಗದ ಜೊತೆ ಸೇವಿಸಿದರೆ ಎಷ್ಟೊಂದು ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.? ಹೊಟ್ಟೆಯ ಹುಣ್ಣು :ಗ್ಯಾಸ್ಟ್ರಿಕ್ ಲೋಳೆಯ ಉತ್ಪಾದನೆ ಹೆಚ್ಚಾದಾಗ ಹೊಟ್ಟೆಯ ಹುಣ್ಣು ಗುಣವಾಗಲು ಸಹಾಯ ಮಾಡುತ್ತದೆ. ವೀಳ್ಯದೆಲೆ ಮತ್ತು ಲವಂಗವನ್ನು ಸೇವಿಸಿದಾಗ ಗ್ಯಾಸ್ಟಿಕ್ ಲೋಳೆಯ ಪ್ರಮಾಣ ಹೆಚ್ಚಾಗುತ್ತದೆ. ಇದು ಹೊಟ್ಟೆ ಹುಣ್ಣಿನಿಂದ ಉಮಶಮನ ನೀಡಬಹುದು. ತಲೆನೋವಿಗೆ ಮನೆಮದ್ದು :ತಜ್ಞರ ಪ್ರಕಾರ ವೀಳ್ಯದೆಲೆ ತಲೆನೋವಿಗೆ ಮನೆಮದ್ದಾಗಿದೆ. ಇದನ್ನು ಲವಂಗದ ಜೊತೆಗೆ ತಿನ್ನುವುದರಿಂದ ಮೈಗ್ರೇನ್‌ನಿಂದ ಸ್ವಲ್ಪ ಮಟ್ಟಿಗೆ ಉಪಶಮನ ದೊರೆಯಬಹುದು. ಉಸಿರಾಟದ ತೊಂದರೆ :ಲವಂಗ ಮತ್ತು ವೀಳ್ಯದೆಲೆ ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತವೆ. ಇದರ ಆಂಟಿಮೈಕ್ರೋಬಿಯಲ್ ಗುಣಲಕ್ಷಣಗಳು ಕೆಮ್ಮು, ಆಸ್ತಮಾ ಮತ್ತು ಬ್ರಾಂಕೈಟಿಸ್‌ನಂತಹ ಉಸಿರಾಟದ ತೊಂದರೆಗಳಿಂದ ಪರಿಹಾರ ನೀಡಲು ನೆರವಾಗುತ್ತದೆ. ಸಮೃದ್ಧ ಆಂಟಿಆಕ್ಸಿಡೆಂಟ್‌ಗಳು :ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ವೀಳ್ಯದೆಲೆ ಮತ್ತು ಲವಂಗ ಒಟ್ಟಿಗೆ…
ಉಡುಪಿ : ಕಾರ್ಕಳದಲ್ಲಿ ನೆಲೆಸಿದ್ದ ಇನ್ನಿಬ್ಬರು ಅಕ್ರಮ ಬಾಂಗ್ಲಾ ವಲಸೆಗಾರರನ್ನು ಕಾರ್ಕಳ ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಕಳ ಪೊಲೀಸರಿಂದ ಅವರ ವಿಚಾರಣೆ ನಡೆಯುತ್ತಿದ್ದು ಇಂದು ಅವರನ್ನು ಅಧಿಕೃತವಾಗಿ ಬಂಧಿಸುವ ಸಾಧ್ಯತೆ ಇದೆ. ಕಳೆದ ವಾರ ಮಲ್ಪೆ ಸಮೀಪದ ತೊನ್ನೆ ಗ್ರಾಮದಲ್ಲಿ 8 ಮಂದಿ ಬಾಂಗ್ಲಾ ದೇಶದಿಂದ ಅಕ್ರಮವಾಗಿ ಬಂದ 8 ಮಂದಿ ಯುವಕರನ್ನು ಬಂಧಿಸಲಾಗಿತ್ತು, ಇಲ್ಲಿ ಕಟ್ಟಡ ಕಾರ್ಮಿಕ ಸೋಗಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಅವರ ಬಳಿ ನಕಲಿ ಆಧಾರ್ ಕಾರ್ಡ್, ಅದರ ಆಧಾರದಲ್ಲಿ ಖರೀದಿಸಿದ ಮೊಬೈಲ್‌ಗಳು ಪತ್ತೆಯಾಗಿದ್ದವು. ಒಬ್ಬಾತನಿಂದ ನಕಲಿ ಪಾಸ್‌ಪೋರ್ಟ್‌ನ್ನು ಕೂಡ ವಶಪಡಿಸಿಕೊಳ್ಳಲಾಗಿತ್ತು. ಬಂಧಿತರಿಂದ ಜಿಲ್ಲೆಯಲ್ಲಿ ಇನ್ನೂ ಸಾಕಷ್ಟು ಮಂದಿ ಅಕ್ರಮ ವಲಸೆಗಾರರಿರುವುದು ಪತ್ತೆಯಾಗಿದ್ದು ಅದರಂತೆ ಕಾರ್ಕಳದಲ್ಲಿ ನೆಲೆಸಿದ್ದ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಮಹಜರು ನಡೆಸಿ ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಎಸ್ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
ಬೆಂಗಳೂರು: ಪೊಲೀಸ್ ವಶದಲ್ಲಿರುವ ಆರೋಪಿಗಳ ನಿತ್ಯದ ಆಹಾರ ಭತ್ಯೆೆಯನ್ನು 75 ರೂ.ನಿಂದ 150 ರೂ.ಗೆ ಏರಿಕೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಪೊಲೀಸರು ಕಳ್ಳತನ, ಸುಲಿಗೆ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿಸುತ್ತಿದ್ದ ಆರೋಪಿಗಳನ್ನು ಕೋರ್ಟ್ ಅನುಮತಿ ಪಡೆದು ಪೊಲೀಸ್ ಕಸ್ಟಡಿ ಪಡೆಯುತ್ತಾರೆ. ಅಂತಹ ಆರೋಪಿಗಳ ಪ್ರತಿ ನಿತ್ಯದ ಆಹಾರ ಭತ್ಯೆೆಗೆ 75 ರೂ. ಅನ್ನು ಇಲಾಖೆ ನೀಡುತ್ತಿತ್ತು. ಆದರೆ, ಇತ್ತೀಚಿಗೆ ತರಕಾರಿ ಹಾಗೂ ಇತರೆ ಆಹಾರ ಪದಾರ್ಥಗಳ ದರಗಳು ದುಬಾರಿಯಾಗಿರುವ ಹಿನ್ನೆೆಲೆಯಲ್ಲಿ 75 ರೂ. ವೆಚ್ಚದಲ್ಲಿ ಆರೋಪಿಗಳಿಗೆ ಆಹಾರ ಒದಗಿಸುವುದು ಕಷ್ಟಕರವಾಗಿದೆ. ಠಾಣಾಧಿಕಾರಿಗಳೇ ತಮ್ಮ ಸ್ವಂತ ಹಣದಿಂದ ಈ ವೆಚ್ಚವನ್ನು ಭರಿಸುತ್ತಿದ್ದಾರೆ. ಜತೆಗೆ ಪ್ರಕರಣವನ್ನು ಪತ್ತೆೆ ಹಚ್ಚುವ ಕಾರ್ಯದಲ್ಲಿ ತೊಡಕು ಉಂಟಾಗಿರುವುದರಿಂದ ಪೊಲೀಸ್ ವಶದಲ್ಲಿರುವ ಆರೋಪಿಗಳಿಗೆ ಉತ್ತಮ ಆಹಾರವನ್ನು ಒದಗಿಸಬೇಕಾಗಿದೆ. ಹೀಗಾಗಿ 75 ರೂ.ನಿಂದ 300 ರೂ.ಗಳಿಗೆ ಹೆಚ್ಚಿಸಬೇಕೆಂದು ಕಳೆದ ವರ್ಷ ಸರ್ಕಾರಕ್ಕೆೆ ಪೊಲೀಸ್ ಇಲಾಖೆಯಿಂದ ಪತ್ರ ಬರೆಯಲಾಗಿತ್ತು. ಇದೀಗ ಸರ್ಕಾರದ ಸೂಚನೆ ಮೇರೆಗೆ 75 ರೂ.ನಿಂದ 150…
ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ಬಳಿಯ ಸರ್ವಿಸ್ ಬಸ್ ನಿಲ್ದಾಣದಲ್ಲಿ ಕಂಡೆಕ್ಟರ್ ಒಬ್ಬರು ತಲೆಗೆ ಗಂಭೀರವಾಗಿ ಯಾರೋ ಹೊಡೆದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಜ್ಪೆ ನಿವಾಸಿ ರಾಜೇಶ್ (31) ಮೃತಪಟ್ಟವರು. ರಾಜೇಶ್ ಸರ್ವಿಸ್ ಬಸ್ ನಿಲ್ದಾಣದಲ್ಲಿ ಬಸ್ ತೊಳೆಯುವುದು, ಕೆಲವೊಮ್ಮೆ ಕಂಡೆಕ್ಟರ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಬಸ್ ನಿಲ್ದಾಣದಲ್ಲಿಯೇ ಉಳಿದುಕೊಳ್ಳುತ್ತಿದ್ದರು ಎನ್ನಲಾಗಿದೆ. ಸೋಮವಾರ ರಾತ್ರಿ 8.30ರ ಸುಮಾರಿಗೆ ಬಸ್ ನಿಲ್ದಾಣದ ಬಳಿ ರಸ್ತೆ ಬದಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹ ಕಿವಿಯಲ್ಲಿ ರಕ್ತ ಒಸರುತ್ತಿದ್ದು, ತಲೆಯ ಭಾಗಕ್ಕೆ ಹೊಡೆದಿರುವಂತೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ವ್ಯಕ್ತಿಯ ಸಹೋದರಿ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ. ಸಾವಿನ ಬಗ್ಗೆ ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಉಪ್ಪಿನಂಗಡಿ: ಉಪ್ಪಿನಂಗಡಿಯ ಪೆರಿಯಡ್ಕ ಪ್ರದೇಶದಲ್ಲಿ ತಡರಾತ್ರಿ ಯುವಕನೋರ್ವನ ಕುಕೃತ್ಯ ಹೆಚ್ಚುತ್ತಲಿದ್ದು, ಆತನ ಕುಚೇಷ್ಟೆ, ಚಲನವಲನದ ಬಗ್ಗೆ ಸ್ಥಳೀಯ ಸಿಸಿ ಟಿವಿ ಕೆಮರಾದಲ್ಲಿ ದಾಖಲಾಗಿದೆ. ಕೆಲವು ಸಮಯಗಳ ಹಿಂದೆ ಮನೆಗೆ ನುಗ್ಗುವ ವ್ಯಕ್ತಿ ಮಹಿಳೆಯರು ಮಲಗುವ ಕೋಣೆಯನ್ನು ಪ್ರವೇಶಿಸಿರುವುದು, ಎಚ್ಚರಗೊಂಡಾಗ ಓಡಿ ತಪ್ಪಿಸಿಕೊಂಡಿರುವುದು, ಯುವತಿಯೋರ್ವಳು ಸ್ನಾನ ಮಾಡುತ್ತಿದ್ದ ವೇಳೆ ಕಿಟಕಿಯಿಂದ ಇಣುಕಲು ಯತ್ನಿಸಿದ್ದ ವ್ಯಕ್ತಿ, ಅನಂತರ ಆ ವ್ಯಕ್ತಿ ಸ್ಥಳೀಯ ವ್ಯಾಪಾರಿ ಅಬ್ದುಲ್ ರಹಿಮಾನ್ ಪೊಲೀಸರ ವಶವಾಗುತ್ತಾನೆ. ಬಳಿಕ ಇಲ್ಲಿನ ಜನ ನಿಟ್ಟುಸಿರು ಬಿಟ್ಟಿದ್ದರು. ಈ ಮಧ್ಯೆ ಮತ್ತೆ ಇಂತಹದ್ದೇ ಕೃತ್ಯಗಳು ಸಂಭವಿಸಲು ಪ್ರಾರಂಭವಾಗಿದ್ದು, ಯುವಕನೋರ್ವ ನಸುಕಿನ 3.30ರ ಸುಮಾರಿಗೆ ಪೆರಿಯಡ್ಕದ ಜನತಾ ಕಾಲನಿಯ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ ಪ್ರಕರಣದಲ್ಲಿ ಮನೆಯ ಮಂದಿ ಎಚ್ಚರಗೊಂಡಾಗ ಆತ ಬೇಲಿ ಹಾರಿ ಅಡಗಿ ಕುಳಿತುಕೊಳ್ಳುವುದು. ಬೆನ್ನಟ್ಟಿ ಬಂದ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ನಾನಾ ಕಸರತ್ತುಗಳನ್ನು ಮಾಡುತ್ತಿರುವುದು ಸಮೀಪದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಮೌಖೀಕ ದೂರು ಬಂದಿದೆಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಸಬ್ ಇನ್ಸ್‌ಪೆಕ್ಟರ್ ಅವಿನಾಶ್ ಅವರು ಮಾತನಾಡಿ, ಯಾರೂ ಅಧಿಕೃತ…
ಚಿತ್ರದುರ್ಗ: ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಬರ್ಬರವಾಗಿ ಹತ್ಯೆಯಾಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಗೆ ಗಂಡು ಮಗು ಜನನವಾಗಿದೆ. ನಗರದ ಕೀರ್ತಿ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಪತ್ನಿ ಸಹನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದ ಸಂಧರ್ಭದಲ್ಲಿ ಪತ್ನಿ ಸಹನ ಗರ್ಭಿಣಿಯಾಗಿದ್ದರು. ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ಪತ್ನಿಸಹನಾ ಅವರಿಗೆ ಅ. 16 ರಂದು ಬುಧವಾರ ಬೆಳಗಿನ ಜಾವ 5 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ -ಮಗು ಆರೋಗ್ಯವಾಗಿದ್ದಾರೆ ಅಲ್ಲದೆ ಕೀರ್ತಿ ಆಸ್ಪತ್ರೆಯಿಂದ ಡಾ.ಮಲ್ಲಿಕಾರ್ಜುನ್ ಸಂಪೂರ್ಣ ಉಚಿತ ಚಿಕಿತ್ಸೆ ನೀಡಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಆಳದಲ್ಲಿರುವ ಅಡಿಕೆ ತೋಟಕ್ಕೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ಬಿ.ಸಿ.ರೋಡು-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ಗ್ರಾಮದ ಬಾಂಬಿಲ ಬಳಿ ನಡೆದಿದ್ದು ಘಟನೆಯಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿ ಪುಟ್ಟಮಗು ಸಹಿತ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದು, ಮೃತಪಟ್ಟ ಮಹಿಳೆಯನ್ನು ಮಂಗಳೂರು ಕೊಡಿಯಾಲ್ ಬೈಲ್ ನಿವಾಸಿ ಭಾಗೀರಥಿ (58) ಎಂದು ಗುರುತಿಸಲಾಗಿದೆ. ಚಾಲಕ ರೂಪೇಶ್ (39) ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರೂಪೇಶ್ ಅವರ ಪತ್ನಿ ಸುಚಿತ್ರಾ (33) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪುಂಜಾಲಕಟ್ಟೆ ಕಡೆಯಿಂದ ಬರುತ್ತಿದ್ದ ಕಾರು ಮುಂಜಾನೆ ಸುಮಾರು 4.30ರ ಸುಮಾರಿಗೆ ಬಾಂಬಿಲ ಮಸೀದಿ ಮುಂಭಾಗದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಉರುಳಿ ಬಿದ್ದಿದೆ. ಮಂಗಳೂರು ಕೊಡಿಯಾಲ್ ಬೈಲು ನಿವಾಸಿಯಾದ ಭಾಗೀರಥಿ ಅವರ ಪುತ್ರಿ ಸುಚಿತ್ರಾ ಅವರ ಪತಿ ರೂಪೇಶ್ ಅವರು ತುಮಕೂರು ಜಿಲ್ಲೆಯವರಾಗಿದ್ದು, ಭಾಗೀರಥಿ ದಸರಾ ರಜೆಯಲ್ಲಿ…
ವಿದ್ಯಾರ್ಥಿಗಳ ಭವಿಷ್ಯ ರೂಪಿಸಲಿದೆ ಎಐ ಕಾರ್ಡ್ ; ನೋಂದಾಯಿಸಿದ ವಿದ್ಯಾರ್ಥಿಗೆ AI ತರಬೇತಿ, ಸ್ಕಾಲರ್ ಶಿಪ್, AI ಶಿಕ್ಷಕ್ , AI COMPETENCY ಸರ್ಟಿಫಿಕೇಟ್, ನೋಂದಾಯಿಸಲು ಇದೇ ಅ.31 ಕೊನೆ ದಿನ. ತಂತ್ರಜ್ಞಾನ ಜಗತ್ತು ಎಷ್ಟರಮಟ್ಟಿಗೆ ಬದಲಾಗುತ್ತಿದೆ ಎಂದರೆ, ಎಐ ಟೆಕ್ನಾಲಜಿ ತಿಳಿದುಕೊಳ್ಳದಿದ್ದರೆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೊಡ್ಡ ಮಟ್ಟದ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ಎಐ ತಂತ್ರಜ್ಞಾನವನ್ನು ಪ್ರಾಥಮಿಕ, ಹೈಸ್ಕೂಲ್, ಪಿಯು, ಪದವಿ, ಇಂಜಿನಿಯರಿಂಗ್, ಮೆಡಿಕಲ್ ಹೀಗೆ ಎಲ್ಲಾ ಕ್ಷೇತ್ರದ ವಿದ್ಯಾರ್ಥಿಗಳು ತಮ್ಮ ಕಲಿಕಾ ಹಂತದಲ್ಲೇ ಬಳಸಿಕೊಂಡು ನೈಪುಣ್ಯತೆಯನ್ನು ಪಡೆಯುವುದು ಅನಿವಾರ್ಯ ವಾಗಿದೆ. ಏನಿದು AI ಕಾರ್ಡ್?ಈ AI ಕಾರ್ಡ್ ಪ್ರತಿ ವಿದ್ಯಾರ್ಥಿಯ ಕಲಿಕೆಯ ವೇಗ ಮತ್ತು ಶೈಲಿಗೆ ಅನುಗುಣವಾಗಿ ಕಲಿಕೆಗೆ ಹೆಚ್ಚಿನ ಸಮಯವನ್ನು ಮೀಸಲಿಡಲು ಸಹಾಯ ಮಾಡುತ್ತದೆ, ಇದರಿಂದಾಗಿ ಕಲಿಕೆಯನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡುತ್ತದೆ ಜೊತೆಗೆ ಶಿಕ್ಷಣದ ಗುಣಮಟ್ಟ ವನ್ನು ಹೆಚ್ಚಿಸುತ್ತದೆ. ಯಾವುದೇ ವಿಷಯವನ್ನು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ದಿನನಿತ್ಯದ ಬದುಕಿನಲ್ಲಿ ಸೃಜನಶೀಲ ಚಿಂತನೆಗೆ ಈ AI ಕಾರ್ಡ್ ಸಹಾಯಕವಾಗಿದೆ. ಕನ್ನಡ…