ಉಳ್ಳಾಲ : ಮಂಗಳೂರು ನಗರದ ಉಳ್ಳಾಲ ಪೊಲೀಸ್ ಇನ್ಸ್‌ಪೆಕ್ಟರ್ ಎಚ್‌ಎನ್ ಬಾಲಕೃಷ್ಣ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರು ಸಹಾಯಕ ಪೊಲೀಸ್ ಆಯುಕ್ತ ಧನ್ಯಾ ನಾಯಕ್ ಅವರಿಗೆ ವಿಚಾರದ ಹೊಣೆ ವಹಿಸಲಾಗಿದೆ. ಜೂನ್ 2024 ರಲ್ಲಿ ಉಳ್ಳಾಲದಲ್ಲಿ ವೃದ್ಧ ಮಹಿಳೆಯೊಬ್ಬರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಬಂಧಿಸಿದ ಯುವಕನ ತಾಯಿ ಶ್ರೀ ಅಗರವಾಲ್ ಅವರಿಗೆ ಸಲ್ಲಿಸಿದ ಅರ್ಜಿಯಲ್ಲಿ, ಇನ್ಸ್‌ಪೆಕ್ಟರ್ ತಮ್ಮ ಮಗನಿಂದ 50 ಗ್ರಾಂ ಚಿನ್ನದ ಆಭರಣಗಳನ್ನು ಕಳ್ಳತನಕ್ಕೆ ಸಂಬಂಧಿಸಿದೆ ಎಂದು ಹೇಳುವ ಮೂಲಕ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆಭರಣಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗುವುದು ಮತ್ತು ಕುಟುಂಬ ಸದಸ್ಯರು ನ್ಯಾಯಾಲಯದಿಂದ ಬಿಡುಗಡೆ ಮಾಡಬಹುದು ಎಂದು ಅಧಿಕಾರಿ ಹೇಳಿದ್ದರು ಎಂದು ತಾಯಿ ಆರೋಪಿಸಿದ್ದಾರೆ.
Author: main-admin
ಕಾಸರಗೋಡು: ಬೈಕ್‌ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಕಾಸರಗೋಡಿನ ಚೆಮ್ನಾಡ್ ನಲ್ಲಿ ನಡೆದಿದೆ.ಮೇಲ್ಪರಂಬ ಒರವಂಗರದ ಮುಹಮ್ಮದ್ ಹನೀಫ್ (26) ಮೃತಪಟ್ಟವರು.ರಸ್ತೆಯ ಹೊಂಡಕ್ಕೆ ಬಿದ್ದ ಬೈಕ್ ಮೇಲೆ ಹಿಂದಿನಿಂದ ಬಂದ ಲಾರಿ ಹೋಗಿದ್ದು, ಗಂಭೀರ ಗಾಯಗೊಂಡ ಹನೀಫ್ ರನ್ನು ಆಸ್ಪತ್ರೆಗೆ ತಲುಪಿಸಿದರೂ ಅದಾಗಲೇ ಮೃತಪಟ್ಟಿದ್ದರು.ಗಲ್ಫ್ ಉದ್ಯೋಗಿಯಾಗಿದ್ದ ಹನೀಫ್ ರಂಝಾನ್ ಹಬ್ಬದ ಹಿನ್ನಲೆ ಊರಿಗೆ ಬಂದಿದ್ದರು. ಮುಂದಿನ ವಾರ ಅವರು ಮತ್ತೆ ಗಲ್ಫ್ ಗೆ ತೆರಳಬೇಕಿತ್ತು. ಈ ಬಗ್ಗೆ ಮೇಲ್ಪರಂಬ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಚಂಡೀಗಢ : 2 ಕೋಟಿ ಮೌಲ್ಯದ ಹೆರಾಯಿನ್ ಜೊತೆ ಪಂಜಾಬ್‌ನ ಮಹಿಳಾ ಕಾನ್‌ಸ್ಟೇಬಲ್ ನ್ನು ಬಂಧಿಸಲಾಗಿದೆ. ಆಕೆಯನ್ನು ಜಿಲ್ಲಾ ನ್ಯಾಯಾಲಯವು ಒಂದು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. 17.71 ಮಿ.ಗ್ರಾಂ ಹೆರಾಯಿನ್ ಜೊತೆ ಮಹಿಳಾ ಕಾನ್‌ಸ್ಟೇಬಲ್ ಅಮನ್‌ದೀಪ್ ಕೌರ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣ ಬೆನ್ನಲ್ಲೇ ಆಕೆಯನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಆಕೆಯ ಚರ ಮತ್ತು ಸ್ಥಿರ ಆಸ್ತಿಗಳ ತನಿಖೆ ನಡೆಯುತ್ತಿದೆ. ಆರೋಪಿಯು ಆದಾಯದ ಮೂಲಕ್ಕಿಂತ ಹೆಚ್ಚಿನ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಆಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಐಜಿ ಪ್ರಧಾನ ಕಚೇರಿಯ ಸುಖ್‌ಚೈನ್ ಸಿಂಗ್ ಗಿಲ್ ತಿಳಿಸಿದ್ದಾರೆ ಈ ಹಿಂದೆ ಪೊಲೀಸರು ಕಾನ್‌ಸ್ಟೇಬಲ್ ಮೇಲೆ ಡೋಪ್ ಪರೀಕ್ಷೆ ನಡೆಸಿದ್ದರು. ಆದರೆ ಅದು ನೆಗೆಟಿವ್ ಬಂದಿತ್ತು. ನಗರ ಡಿಎಸ್‌ಪಿ ಹರ್ಬನ್ಸ್ ಸಿಂಗ್ ಧಲಿವಾಲ್, ಗೌಪ್ಯ ಮಾಹಿತಿಯ ಆಧಾರದ ಮೇಲೆ, ಪೊಲೀಸ್ ತಂಡವು ಲಾಡ್ಲಿ ಧಿ ಚೌಕ್ ಬಳಿಯ ಮೇಲ್ಸೇತುವೆಯ ಕೆಳಗೆ ಚೆಕ್‌ಪಾಯಿಂಟ್ ಅನ್ನು ಸ್ಥಾಪಿಸಿತು. ಈ ವೇಳೆ, ಅಮನ್‌ದೀಪ್ ಕಾರನ್ನು…
ಮಂಗಳೂರು : ಆನ್ ಲೈನ್ ನಲ್ಲಿ ಅದರಲ್ಲೂ ಟಿಲಿಗ್ರಾಂ ಮೂಲಕ ಬಂದಿರುವ ಸಂದೇಶ ನಂಬಿ ಹಣ ಹೂಡಿಕೆ ಮಾಡಿ ಹಲವು ಜನರು ಮೋಸ ಹೋಗುತ್ತಿದ್ದಾರೆ. ಇಂಥಹದೇ ವಂಚನೆಗೆ ಸುಳ್ಯದ ಯುವಕ ಸಿಲುಕಿದ್ದು ಪ್ರಕರಣ ದಾಖಲಾಗಿದೆ. ಸುಳ್ಯದ ಹಳೆಗೇಟು ನಿವಾಸಿ ಮುಹಮ್ಮದ್ ಕೈಫ್ ಎಮ್.ಎಸ್ (23 ವರ್ಷ) ಅವರ ಮೊಬೈಲ್ ನಂಬ್ರ ಗೆ ಕರೆ ಮಾಡಿ Devnet Private Company ಯಲ್ಲಿ Part time Job work from home ನೀಡುವುದಾಗಿ ಹೇಳಿದ್ದರು.ಬಳಿಕ Task Complete ಮಾಡಲು ಎಂದು ತಿಳಿಸಿ ಒಂದು brand name ಕಳುಹಿಸಿದ್ದು, ಸದ್ರಿ brand ನ್ನು Google ನಲ್ಲಿ Search ಮಾಡಿ Screenshot ತೆಗೆದು ಕಳುಹಿಸಲು ತಿಳಿಸಿದ್ದು, ಅದರಂತೆ ಕಳುಹಿಸಿರುತ್ತಾರೆ. ನಂತರ Telegram ಖಾತೆಯಲ್ಲಿ Task Complete ಮಾಡುವ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ Task Complete ಮಾಡಿದ್ದಕ್ಕೆ ರೂ. 150/- ಬ್ಯಾಂಕ್ ಖಾತೆಗೆ ಹಾಕಿದ್ದರು. ನಂತರ Part Time Job ಬಗ್ಗೆ ಮಾಹಿತಿ ನೀಡಿ Website Link (ಪ್ರಸ್ತುತ…
ಉಡುಪಿ: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅಮಾಯಕರು ಮೋಸದ ಬಲೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಉಡುಪಿಯಲ್ಲಿ ಕೂಡಾ ಅದೇ ರೀತಿಯ ಘಟನೆ ನಡೆದಿದ್ದು ವ್ಯಕ್ತಿಯೊಬ್ಬ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾನೆ. ಮೂಲತಃ ಉಡುಪಿಯ ದಿಲೀಪ್ ಎಂಬವರು ಹಣ ಕಳೆದುಕೊಂಡವರಾಗಿದ್ದಾರೆ. ಇವರಿಗೆ ನೆಟ್ಫ್ಲಿಕ್ಸ್ ನ ಚಂದಾ ಮುಗಿದು ಹೋಗಿದ್ದ ಕಾರಣ ಇಮೇಲ್ ಗೆ ಒಂದು ಮೆಸೇಜ್ ಬಂದಿತ್ತು. ನಂತರ ಲಿಂಕ್ ಕ್ಲಿಕ್ ಮಾಡಿದಾಗ ಚಂದಾ ಪಡೆಯಲು ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆಯಲು ಇನ್ನೊಂದು ಟ್ಯಾಬ್ ಓಪನ್ ಆಗಿದೆ. ಅವರು ಕ್ರೆಡಿಟ್ ಕಾರ್ಡ್ ಸಂಖ್ಯೆ ನಮೂದಿಸಿದಾಗ ಮೊಬೈಲ್ ಗೆ ಒಟಿಪಿ ಬಂದಿದೆ. ಅದನ್ನು ಎಂಟರ್ ಮಾಡಿದ್ದಾರೆ. ಆದರೆ ಸಮ್ಥಿಂಗ್ ವೆಂಟ್ ರಾಂಗ್ ಎಂಬ ಮೆಸೇಜ್ ಬಂದಿದ್ದು ಆಗ ದಿಲೀಪ್ ಗೆ ಅನುಮಾನ ಬಂದಿದೆ. ಆಗ ಅವರು ಬ್ಯಾಂಕ್ ನ ಹೆಲ್ಪ್ಪೈನ್ ಗೆ ಕಾಲ್ ಮಾಡಿದಾಗ ಅವರ ಖಾತೆಯಿಂದ ಲಕ್ಷಕ್ಕೂ ಅಧಿಕ ಹಣ ಮಂಗಮಾಯವಾಗಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ…
ಬೆಳ್ತಂಗಡಿ: ವಧಿಸುವ ಸಲುವಾಗಿ ಮಂಗಳೂರಿಗೆ ಸಾಗಿಸುತ್ತಿದ್ದ ಸುಮಾರು 15 ಗೋವುಗಳನ್ನು ಇಂದು ನಸುಕಿನ ಹೊತ್ತು ಬೆಳ್ತಂಗಡಿ ಸಮೀಪ ರಕ್ಷಿಸಲಾಗಿದೆ. ತರಕಾರಿ ವಾಹನದಲ್ಲಿ ಗೋವು ಸಾಗಾಟ ಮಾಡುತ್ತಿರುವ ಮಾಹಿತಿ ಸಿಕ್ಕಿ ಹಿಂದು ಸಂಘಟನೆಗಳು ವಾಹನವನ್ನು ಹಿಂಬಾಲಿಸಿ ಕಳಿಯ ನಾಯತರ್ಪು ಸಮೀಪದ ಜಾರಿಗೆಬೈಲಿನಲ್ಲಿ ಅಡ್ಡಗಟ್ಟಿದ್ದಾರೆ. ಆಗ ವಾಹನದಲ್ಲಿ ಸುಮಾರು 15 ಗೋವುಗಳನ್ನು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿರುವುದು ಪತ್ತೆಯಾಗಿದೆ.ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ರಾಷ್ಟ್ರೀಯ ಹಿಂದೂ ಜಾರಣ ವೇದಿಕೆಯ ಕಾರ್ಯಕರ್ತರು ಈ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ವಾಹನವನ್ನು ಅಡ್ಡಗಟ್ಟುತ್ತಿದ್ದಂತೆ ಚಾಲಕ ಇಳಿದು ಓಡಿಹೋಗಿದ್ದಾನೆ. ಹಿಂದು ಕಾರ್ಯಕರ್ತರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಅವರು ಬಂದು ಗೋವುಗಳು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಏಸ್ ಟೆಂಪೊದಲ್ಲಿ 15ರಷ್ಟು ಗೋವುಗಳನ್ನು ತರಕಾರಿಗಳ ಜೊತೆಗೆ ಅತ್ಯಂತ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಹೋಗಲಾಗುತ್ತಿತ್ತು. ಬೆಳ್ತಂಗಡಿ ಸುತ್ತಮುತ್ತಲಿಂದಲೇ ಈ ಗೋವುಗಳನ್ನು ತಂದಿದ್ದರು ಎನ್ನಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಪುತ್ತೂರು: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಉಪ್ಪಿನಂಗಡಿ ಸಮೀಪ, ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿ, ಓರ್ವ ಪ್ರಯಾಣಿಕ ಮೃತಪಟ್ಟು 12 ಮಂದಿ ಗಾಯಗೊಂಡಿರುವ ಘಟನೆ ಏಪ್ರಿಲ್ 4 ರಂದು ಬೆಳಿಗ್ಗೆ 5 ಗಂಟೆಗೆ ನಡೆದಿದೆ. ಮೃತಪಟ್ಟವರನ್ನು ಬೆಂಗಳೂರು ಗ್ರಾಮಾಂತರದ ಯಡಿಯೂರು ನಿವಾಸಿ ಹರ್ಷ (24) ಎಂದು ಗುರುತಿಸಲಾಗಿದೆ. ಅವರು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಮಂಗಳೂರು ಹೊರವಲಯದ ಮುಲ್ಕಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಗೊಂಡ 12 ಮಂದಿಯಲ್ಲಿ 11 ಜನರು ಉಪ್ಪಿನಂಗಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಉಪ್ಪಿನಂಗಡಿ : ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೋರ್ವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕೌಕ್ರಾಡಿ ಗ್ರಾಮದ ಆಲಂಪಾಡಿ ನಿವಾಸಿ ಅಶ್ರಫ್(30) ಎಂದು ಗುರುತಿಸಲಾಗಿದೆ. ಅಶ್ರಫ್ ಅಮಲು ಪದಾರ್ಥ ಸೇವನೆ ಮಾಡಿ ಮನೆಯವರೊಂದಿಗೆ ಪದೇ ಪದೇ ಜಗಳ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಶ್ರಫ್‌ನ ಮೊದಲ ಪತ್ನಿ ತವರು ಮನೆಗೆ ಹೋಗಿದ್ದು ಎರಡನೇ ಪತ್ನಿ, ಅಶ್ರಫ್‌ನ ತಂದೆ, ತಾಯಿ, ಹಾಗೂ ಮಕ್ಕಳು ಪ್ರತ್ಯೇಕವಾಗಿ ವಾಸವಾಗಿದ್ದರು. ಅಶ್ರಫ್ ಕಳೆದ ಕೆಲ ಸಮಯಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು. ಇದರಿಂದ ಅವರು ಮಾನಸಿಕ ಖಿನ್ನತೆಗೂ ಒಳಗಾಗಿದ್ದರು ಎಂದು ಹೇಳಲಾಗಿದೆ. ಎ.2ರಂದು ಸಂಜೆ ಮನೆಯ ಸಿಟೌಟ್‌ನಲ್ಲಿದ್ದ ಕಬ್ಬಿಣದ ಪೈಪುಗೆ ಅಂಗಿಯ ಒಂದು ಬದಿಯನ್ನು ಕಟ್ಟಿ ಅದರ ಇನ್ನೊಂದು ಬದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಅಶ್ರಫ್‌ನ ತಂದೆ ಖಾಸೀಂ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಅಶ್ರಫ್ ತಂದೆ, ತಾಯಿ, ಇಬ್ಬರು ಪತ್ನಿಯರು ಹಾಗೂ…
ಮಣಿಪಾಲ: ನಗರದ ಟೈಗರ್ ಸರ್ಕಲ್ ಖಾಸಗಿ ಬಸ್ ನಿಲ್ದಾಣದ ಬಳಿ ಟೈಮಿಂಗ್ ವಿಚಾರಕ್ಕೆ ಗಲಾಟೆ ನಡೆದು ಕಂಡಕ್ಟರ್ ಹಾಗೂ ಡ್ರೈವರ್ ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎ.2ರಂದು ಸಂಜೆ 4:30 ಗಂಟೆ ಸುಮಾರಿಗೆ ಮಣಿಪಾಲದ ಟೈಗರ್ ಸರ್ಕಲ್ ಬಳಿ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುವ ಟೈಮಿಂಗ್ ವಿಚಾರದಲ್ಲಿ ಆನಂದ್ ಬಸ್ ನ ಕಂಡಕ್ಟರ್ ವಿಜಯ ಕುಮಾರ್ ಹಾಗೂ ಮಂಜುನಾಥ ಬಸ್ಸಿನ ಚಾಲಕ ಮೊಹಮ್ಮದ್ ಆಲ್ಪಾಜ್ ನಡುವೆ ಗಲಾಟೆ ನಡೆದಿದೆ.ಈ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಉಚ್ಚಿಲ ಮಂಜುನಾಥ ಬಸ್ಸಿನ ಚಾಲಕ ಮೊಹಮ್ಮದ್ ಆಲ್ಪಾಜ್(25), ಹಾಗೂ ಆನಂದ ಬಸ್ಸಿನ ಕಂಡಕ್ಟರ್ ವಿಜಯಕುಮಾರ್(25), ಚಿತ್ರದುರ್ಗ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ದಸ್ತಗಿರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಸ್‌ಗಳನ್ನು ಅಮಾನತ್ತು ಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು…
ಬಜಪೆ: ಮೂಡಬಿದಿರೆ ಕಡೆಯಿಂದ ಕೈಕಂಬ ಕಡೆಗೆ ಸೂರಲ್ಪಾಡಿ ಮಾರ್ಗವಾಗಿ 19 ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಆಕ್ರಮವಾಗಿ ಸಾಗಾಟ ಮಾಡುತ್ತಿದ್ದ. ವಾಹನವನ್ನು ಮಾರ್ಚ್ 28ರಂದು ಬಜರಂಗದಳ ಕಾರ್ಯಕರ್ತರು ಸೂರಲ್ಪಾಡಿ ಬಳಿ ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದರು. ಘಟನೆಗೆ ಸಂಬಂಧಿಸಿ ಬೆಳ್ತಂಗಡಿ ತಾಲೂಕಿನ ಮಠೋಡಿ ಗ್ರಾಮದ ನಿವಾಸಿ ಮೊಹಮ್ಮದ್ ತೌಸಿಫ್ (26) ನನ್ನು ಪೊಲೀಸರು ಬಂಧಿಸಿ 6 ಲಕ್ಷ ರೂ ಮೌಲ್ಯದ ಹುಂಡೈ ಕಾರನ್ನು ವತಪಡಿಸಿಕೊಂಡಿದ್ದರು. ಘಟನೆಯ ಸಂದರ್ಭ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಪೊಲೀಸರು. ವಿಶೇಷ ತಂಡ ರಚಿಸಿ ತನಿಖೆ ಚುರುಕುಗೊಳಿಸಿ ತಲೆಮರೆಸಿಕೊಂಡಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ತಾಲೂಕಿನ 62ನೇ ತೋಕೂರು. ಗ್ರಾಮದ ನಿವಾಸಿ ಅರಾಫತ್ ಆಲಿ(36), ಮೂಡಬಿದಿರೆ ತಾಲೂಕಿನ ಪ್ರಾಂತ್ಯ ಗ್ರಾಮದ ನಿವಾಸಿ ಅಬ್ದುಲ್ ನಜೀರ್(31), ಬೆಳ್ತಂಗಡಿ ತಾಲೂಕಿನ ಪೆರಂತಡ್ಕ ಕಾಶೀಪಟ್ಟ ನಿವಾಸಿ ಫಾರೀಸ್ NERA, ಮಂಗಳೂರು ತಾಲೂಕಿನ 62 ನೇ ತೋಕೂರು ಗ್ರಾಮದ ನಿವಾಸಿ ಮೊಹಮ್ಮದ್ ಅಪ್ಪಿದ್(27) ಎಂದು. ಗುರುತಿಸಲಾಗಿದೆ. ಪಕ್ತೆಕಾರ್ಯದಲ್ಲಿ ಬಜಪೆ ಪೊಲೀಸ ನಿರೀಕ್ಷಕ ಸಂದೀಪ್…









