Author: main-admin

ಮಂಗಳೂರು: ಯೂರೋಪ್‌ನ ಜಾರ್ಜಿಯಾ ದೇಶದ ಪ್ರವಾಸ ಪ್ಯಾಕೇಜ್ ಕುರಿತ ಮಾಹಿತಿಯನ್ನು ನಂಬಿ 1.51 ಲಕ್ಷ ರೂ. ಕಳೆದುಕೊಂಡಿರುವ ಕುರಿತಂತೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರೆ ಜೆಸಿಂತಾಡಿ’ಸೋಜಾ ಅವರಿಗೆ ಕಳೆದ ಡಿಸೆಂಬರ್‌ನಲ್ಲಿ ಫೋನ್ ಕರೆಯೊಂದು ಬಂದಿದ್ದು, ಅದರಲ್ಲಿ ನಿಮಗೆ ಗಿಫ್ಟ್ ವೋಚರ್ ಬಂದಿದ್ದು, ಮಂಗಳೂರಿನ ಹಂಪನಕಟ್ಟೆಯ ಹೊಟೇಲ್ ಒಂದರಿಂದ ಕಲೆಕ್ಟ್ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ದೂರುದಾರೆ ಮತ್ತು ಅವರ ಗಂಡ ಡಿ. 14ರಂದು ಸಂಜೆ 5 ಗಂಟೆಗೆ ಹೊಟೇಲ್‌ಗೆ ಹೋಗಿದ್ದು, ಅಲ್ಲಿ ಹರ್ಬಾನ್ ಮತ್ತು ಪ್ರಿಯಾಂಕಾ ಎನ್ನುವ ಹೆಸರಿನ ಇಬ್ಬರು ‘ಡ್ರಿಮಿ ಹೆವೆನ್ಸ್ ಕ್ಲಬ್ ಪೈ.ಲಿ. ಸಿಬಂದಿ’ ಎಂದು ಪರಿಚಯಿಸಿಕೊಂಡಿದ್ದಾರೆ. ರಜಾ ಸಮಯದಲ್ಲಿ ದೇಶ-ವಿದೇಶದಲ್ಲಿ ಪ್ರವಾಸ ಪ್ಯಾಕೇಜ್ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದ್ದರು. ಈ ವೇಳೆ ಜೆಸಿಂತಾ ಅವರು ಜಾರ್ಜಿಯಾ ಪ್ರವಾಸ ಪ್ಯಾಕೇಜ್ ಇದೆಯೇ ಎಂದು ಕೇಳಿದಾಗ ಅದಕ್ಕೂ ವ್ಯವಸ್ಥೆ ಇದೆ ಎಂದು ನಂಬಿಸಿದ್ದಾರೆ. ಅವರ ಮಾತನ್ನು ನಂಬಿದ ದಂಪತಿ ಅವರು ನೀಡಿದ ಸಂಸ್ಥೆಯ ಬ್ಯಾಂಕ್ ಖಾತೆಯ ಸ್ಕಾ ನರ್‌ಗೆ ಒಟ್ಟು 1,51,800…

Read More

ಮಂಗಳೂರು: ರೋಹನ್ ಕಾರ್ಪೋರೇಷನ್ ಅರ್ಪಿಸುವ ವೈಭವ್ ಫ್ಲಿಕ್ಸ್, ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್, ಎಚ್.ಪಿ.ಆರ್ ಫಿಲ್ಮ್ಸ್ ಹರಿಪ್ರಸಾದ್ ರೈ ಸಹಯೋಗದಲ್ಲಿ ಆನಂದ್ ಎನ್ ಕುಂಪಲ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದ “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ತುಳು ಸಿನಿಮಾ ಜನವರಿ 31 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರ ನಿರ್ದೇಶಕ ರಾಹುಲ್ ಅಮೀನ್ ತಿಳಿಸಿದರು. ಮಂಗಳೂರಿನಲ್ಲಿ ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ಜನವರಿ ೩೧ ರಂದು ಕರಾವಳಿಯ ಚಿತ್ರ ಮಂದಿರಗಳಲ್ಲಿ ತೆರೆಕಾಣಲಿದ್ದು, ಚಿತ್ರ ಈಗಾಗಲೇ ಯುಎಇ ಯಲ್ಲಿ ದಾಖಲೆಯ 16 ಯಶಸ್ವಿ ಪ್ರೀಮಿಯರ್ ಶೋ ಕಂಡಿದೆ. ಈಗಾಗಲೇ ರೋಹನ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ ನೇತೃತ್ವದಲ್ಲಿ 3 ಪ್ರೀಮಿಯರ್ ಶೋ ಮಂಗಳೂರಿನಲ್ಲಿ ನಡೆದಿದೆ, ಫೆ. 02 ರಂದು ಯುಎಇಯಲ್ಲಿ, ಫೆ. 2 ರಂದು ಕೆನಡಾದಲ್ಲೂ ತೆರೆಕಾಣಲಿದೆ ಎಂದವರು ಹೇಳಿದರು. ಬಳಿಕ ರೋಹನ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ ಮಾತನಾಡಿ ತುಳು ಚಿತ್ರಗಳನ್ನು ಯಾವತ್ತು‌…

Read More

ಜೈಪುರ: 2,000 ಕೋಟಿ ರೂ.ಗೂ ಹೆಚ್ಚು ಸೈಬ‌ರ್ ವಂಚನೆ ನಡೆಸಿದ ತಂಡವೊಂದರ ಕಿಂಗ್‌ಪಿನ್‌ನನ್ನು ಶ್ರೀಗಂಗಾನಗರದಲ್ಲಿ ಬಂಧಿಸುವ ಮೂಲಕ ಭಾರಿ ವಂಚನೆ ಭೇದಿಸಲಾಗಿದೆ ಎಂದು ರಾಜಸ್ಥಾನ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಆರೋಪಿಗಳ ವಿರುದ್ಧ ದೇಶಾದ್ಯಂತ ಸೈಬ‌ರ್ ವಂಚನೆಯ ದೂರುಗಳಿವೆ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗಂಗಾನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಯಾದವ್ ಮಾತನಾಡಿ, ಬಂಧಿತ ಅಜಯ್ ಆರ್ಯ ಮತ್ತು ಆತನ ಸಹಚರರು ಸಾವಿರಾರು ಜನರಿಗೆ ಸುಮಾರು 2,000 ಕೋಟಿ ರೂಪಾಯಿಗಳ ಸೈಬರ್ ವಂಚನೆ ಮಾಡಿದ್ದಾರೆ ಎಂದು ಕರ್ನಾಟಕದ ನಿವಾಸಿ ಕಾಂತಪ್ಪ ಬಾಬು ಚವ್ಹಾಣ್‌ ಅವರು ಮಂಗಳವಾರ ಪುರಾಣಿ ಅಬಾದಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕರ್ನಾಟಕದ ಕ್ಯಾಪ್ರೋರ್ಎಫ್‌ಎಕ್ಸ್ ಕಂಪನಿಯಲ್ಲಿ ಲಕ್ಷಗಟ್ಟಲೆ ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, ವಂಬ ಶ್ರೀಗಂಗಾನಗರಕ್ಕೆ ಪಲಾಯನಗೈದಿದ್ದರು ಎಂದು ತಿಳಿಸಿದ್ದಾರೆ. ಪೊಲೀಸರು ಆರ್ಯ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಶೋಧದ ವೇಳೆ 10 ಲಕ್ಷ ರೂಪಾಯಿ ನಗದು, ಮೂರು ಸಿಪಿಯುಗಳು, ಆರು…

Read More

ಮಂಗಳೂರು: ನಗರದ ಸೋಮಯಾಜಿ ಬಿಲ್ಡಿಂಗ್‌ನ ಪಾರ್ಕಿಂಗ್‌ನಲ್ಲಿದ್ದ ಪಾರ್ಕ್ ಮಾಡಿದ್ದ ಕೆಟಿಎಂ ( ಕೆಎ 02 ಎಚ್ ಎಕ್ಸ್ 6473) ಬೈಕ್‌ ನಾಪತ್ತೆಯಾಗಿತ್ತು. ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ದೂರು ನೀಡಿದ್ದು, ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೂರ್ವ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ ಕಳವು ಮಾಡಿದ 1,20,000/- ಬೆಲೆ ಬಾಳುವ ಕೆಟಿಎಂ ಡ್ಯೂಕ್ ಬೈಕ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿಯನ್ನು ಉಪ್ಪಿನಂಗಡಿಯ ಕೆರೆ ಮೂಲೆ ನಿವಾಸಿ ಶಫೀಕ್ ನಿಯಾಜ್ (18 ) ಎಂದು ಗುರುತಿಸಲಾಗಿದೆ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Read More

ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ. ಕೇಶವ ಶಿಕ್ಷೆಗೊಳಗಾದ ಆರೋಪಿ. ಧರ್ಮಸ್ಥಳ ಠಾಣಾ ಅ.ಕ್ರ 106/2023 ಕಲಂ: 376(2)(ಎನ್ ),376(3) 506 ಐಪಿಸಿ & ಕಲಂ: 6 ಪೋಕ್ಸೋ ಕಾಯ್ದೆ 2012 ಪ್ರಕರಣದಲ್ಲಿ, ಮಂಗಳೂರಿನ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯ ,ಎಫ್ ಟಿ ಎಸ್ ಸಿ -2 (ಪೋಕ್ಸೋ)ರಲ್ಲಿ ವಿಚಾರಣೆ ನಡೆದು ಜ.28 ರಂದು ಕೇಶವ ಎಂಬಾತನಿಗೆ ಕಲಂ: 6 ಪೋಕ್ಸೋ ಕಾಯ್ದೆ & ಕಲಂ: 376(2)(ಎನ್), 376(3) ನಲ್ಲಿ 20 ವರ್ಷ ಅವಧಿ ಕಠಿಣ ಕಾರಾಗೃಹ ವಾಸ ಮತ್ತು 50000/- ದಂಡ ತಪ್ಪಿದಲ್ಲಿ 4 ತಿಂಗಳ ಸಾದಾ ಕಾರಾಗೃಹವಾಸ ಹಾಗೂ 506 ಐಪಿಸಿ ಅಡಿಯಲ್ಲಿ 3 ತಿಂಗಳ ಅವಧಿ ಸಾದ ಕಾರಾಗೃಹವಾಸ , 5000/- ದಂಡ ತಪ್ಪಿದಲ್ಲಿ 15 ದಿನ ಕಾರಾಗೃಹ ವಾಸ ವಿಧಿಸಿರುತ್ತದೆ.

Read More

ಮಂಗಳೂರು : ಪರೀಕ್ಷಾ ತರಬೇತಿ ಸೇವೆಗಳಲ್ಲಿ ರಾಷ್ಟ್ರದ ಮುಂಚೂಣಿಯ ವಿದ್ಯಾಸಂಸ್ಥೆಯಾದ ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್ (AESL) ಕರ್ನಾಟಕದ XI & XII ತರಗತಿಯ ವಿದ್ಯಾರ್ಥಿಗಳಿಗೆ KCET (Karnataka Common Entrance Test) ಕೋರ್ಸುಗಳನ್ನು ಪ್ರಾರಂಭಿಸಿದೆ. ಈ ಕೋರ್ಸುಗಳು ಇಂಜಿನಿಯರಿಂಗ್ ಕಾಲೇಜುಗಳು ನಡೆಸುವ ಪ್ರಾದೇಶಿಕ ಪ್ರವೇಶ ಪರೀಕ್ಷೆಗಳು ಮತ್ತು ಜೆಇಇ (ಮೇನ್) ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸುವಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವನ್ನು ಒದಗಿಸುವ ಉದ್ದೇಶವನ್ನು ಹೊಂದಿವೆ. ಇಂಗ್ಲಿಷ್‌ನಲ್ಲಿ ನಡೆಯುವ ಈ ಕೋರ್ಸ್ ಪದವಿಪೂರ್ವ ಬೋರ್ಡ್ ಪರೀಕ್ಷೆಗಳು ಮುಗಿದ ನಂತರ ಪ್ರಾರಂಭವಾಗುತ್ತವೆ. ಈ KCET ಕೋರ್ಸುಗಳು ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ತನ್ನ ನೆಲೆಗಳನ್ನು ವಿಸ್ತರಿಸುವ ಮತ್ತು ರಾಜ್ಯಗಳ ಪದವಿಪೂರ್ವ ಮಂಡಳಿಗಳ ವಿದ್ಯಾರ್ಥಿಗಳೊಂದಿಗೆ ಸಿಬಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಗುಣಮಟ್ಟದ ತರಬೇತಿಯನ್ನು ಒದಗಿಸುವ ಆಕಾಶ್ ಅವರ ಕಾರ್ಯತಂತ್ರದ ಭಾಗವಾಗಿದೆ. ಸತತವಾಗಿ ಮೂರು ವರ್ಷಗಳ ಕಾಲ KCETನಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ರಾಜ್ಯದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಹೆಗ್ಗಳಿಕೆ ಆಕಾಶ್ ಹೊಂದಿದೆ, 2021ರಲ್ಲಿ ಮೇಘನ್ ಎಚ್.ಕೆ., 2022ರಲ್ಲಿ ಅಪೂರ್ವ್ ಟಂಡನ್ ಮತ್ತು…

Read More

ಪುತ್ತೂರು: ಬಾವಿಗೆ ಬಿದ್ದು ಮೇಲೆ ಬರಲಾಗದೇ ಒದ್ದಾಡುತ್ತಿದ್ದ ಬೆಕ್ಕನ್ನು ರಕ್ಷಣೆ ಮಾಡಲು ತೆರಳಿದ ಅಗ್ನಿಶಾಮಕದಳದ ಸಿಬ್ಬಂದಿ ಮೇಲೆ ಬೆಕ್ಕು ಮಾರಣಾಂತಿಕವಾಗಿ ದಾಳಿ ಮಾಡಿದ ಘಟನೆ ಪುತ್ತೂರಿನ ತೆಂಕಿಲ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸಿದ್ದರೂಢ ಮತ್ತು ಮೌನೇಶ್ ಅವರಿಗೆ ಗಾಯಗಳಾಗಿದೆ. ನಿನ್ನೆ ತೆಂಕಿಲ ಬಳಿಯ ಲಕ್ಷ್ಮೀ ಎಂಬವರ ಮನೆಯ ಬಾವಿಗೆ ಬಿದ್ದಿದ್ದ ಬೆಕ್ಕೊಂದು ಬಿದ್ದಿತ್ತು, ಬೆಕ್ಕು ಮೇಲೆ ಬರಲಾರದೆ ಬಾವಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಹಿನ್ನಲೆ ಮನೆಯವರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು, ಇಂದು ಬೆಕ್ಕಿನ ರಕ್ಷಣೆಗೆ ಧಾವಿಸಿ ಬಂದಿದ್ದ ಅಗ್ನಿಶಾಮಕ ದಳ ತಂಡ ಆಗಮಿಸಿತ್ತು, ಬಾವಿಯೊಳಗಿನ ಒಂದು ಬಿಲದೊಳಗೆ ಬೆಕ್ಕು ಅವಿತುಗೊಂಡಿದ್ದು, ಬೆಕ್ಕಿನ ರಕ್ಷಣೆಗೆ ಇಳಿದಿದ್ದ ಅಗ್ನಿಶಾಮಕ ದಳದ ತಂಡದವರು ಬಾವಿಯೊಳಗೆ ಇಳಿದಿದ್ದಾರೆ. ಈ ವೇಳೆ ಬೆಕ್ಕನ್ನ ಹಿಡಿಯಲು ಹೋದ ಅಗ್ನಿಶಾಮಕ ದಳ ತಂಡದ ಇಬ್ಬರ ಬೆಕ್ಕು ಆಟ್ಯಾಕ್ ಮಾಡಿದೆ. ಸರಿ ಸುಮಾರು ಏಳು ನಿಮಿಷಗಳ ಕಾಲ ಸಿಬ್ಬಂದಿಯ ಕೈಯನ್ನ ಕಚ್ಚಿ ಹಿಡಿದಿದ್ದ ಬೆಕ್ಕು, ಬೆಕ್ಕು ಕಚ್ಚಿದ ರೋಷಕ್ಕೆ…

Read More

ಕಾರ್ಕಳ: ಸಾಣೂರು ಪುಲ್ಕೇರಿ ಬೈಪಾಸ್ ಎಂಬಲ್ಲಿ ಕಾರೊಂದು ಹೊತ್ತಿ ಉರಿದ ಘಟನೆ ಸೋಮವಾರ ಸಂಭವಿಸಿದೆ. ಶೇಖರ್ ಹೆಗ್ಡೆ ಎಂಬವರು ಕಾರನ್ನು ಸ್ಟಾರ್ಟ ಮಾಡಲು ಮುಂದಾದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಜ್ವಾಲೆ ಇಡೀ ಕಾರನ್ನು ಅವರಿಸಿತು.ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಅಗಮಿಸಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದರು.

Read More

ವಯನಾಡ್: ವಯನಾಡಿನಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರನ್ನು ಕೊಂದಿದ್ದ ನರಭಕ್ಷಕ ಹುಲಿ ಸೋಮವಾರ ಶವವಾಗಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಹುಲಿಯ ಹೊಟ್ಟೆಯಲ್ಲಿ ಮಹಿಳೆಯ ಕೂದಲು, ಬಟ್ಟೆ ಹಾಗೂ ಕಿವಿ ಓಲೆ ಪತ್ತೆಯಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯದಂಚಿನಲ್ಲಿನ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಇತ್ತೀಚೆಗೆ ಹುಲಿ ದಾಳಿ ನಡೆಸಿತ್ತು. ಹುಲಿಯ ಮೃತದೇಹ ಪಿಲಕಾವುವಿನ ಮನೆಯೊಂದರ ಹಿಂಭಾಗದಲ್ಲಿ ಪತ್ತೆಯಾಗಿದೆ. ಮೃತಪಟ್ಟ ಹುಲಿಗೆ 4-5 ವರ್ಷ ವಯಸ್ಸು ಇರಬಹುದೆಂದು ಅಂದಾಜಿಸಲಾಗಿದೆ.

Read More

ಮಂಗಳೂರು: ಸ್ಕೂಟರ್ ಅನ್ನು ಬಿಡುಗಡೆ ಮಾಡಲು 3ಸಾವಿರ ರೂ. ಸ್ವೀಕರಿಸುತ್ತಿದ್ದಾಗಲೇ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹಾಗೂ ಸಿಬ್ಬಂದಿ ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಠಾಣೆಯ ಇನ್‌ಸ್ಪೆಕ್ಟರ್ ಮಹಮ್ಮದ್ ಶರೀಫ್ ಮತ್ತು ಪೊಲೀಸ್ ಸಿಬ್ಬಂದಿ ಪ್ರವೀಣ್ ಲೋಕಾಯುಕ್ತ ಬಲೆಗೆ ಬಿದ್ದವರು. ವ್ಯಕ್ತಿಯೊಬ್ಬರು ಸ್ಕೂಟರ್ ಅನ್ನು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಿಂದ ಬಿಡುಗಡೆಗೊಳಿಸಲು ನ್ಯಾಯಾಲಯದಿಂದ ಆದೇಶವಾಗಿತ್ತು. ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹಮ್ಮದ್ ಶರೀಫ್‌ರನ್ನು ಭೇಟಿ ಮಾಡಿದಾಗ 5000ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ, ಕಡಿಮೆ ಮಾಡಿ ಎಂದಾಗ ಪೊಲೀಸ್ ನಿರೀಕ್ಷಕ ಮಹಮ್ಮದ್ ಶರೀಫ್, ಠಾಣಾ ಬರಹಗಾರರಾದ ನಾಗರತ್ನರನ್ನು ಭೇಟಿ ಮಾಡಲು ತಿಳಿಸಿದ್ದಾರೆ. ಆದರೆ ನಾಗರತ್ನ ಅವಾಚ್ಯ ಶಬ್ದಗಳಿಂದ ಬೈದು 3000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ವ್ಯಕ್ತಿಗೆ ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ…

Read More