Author: main-admin

ಮಣಿಪಾಲ: ವೇಶ್ಯಾವಾಟಿಕೆ ದಂಧೆ ನಡೆಸುತಿದ್ದ ಅಪಾರ್ಟ್‌ಮೆಂಟ್‌ಗೆ ದಾಳಿ ನಡೆಸಿದ ಮಣಿಪಾಲ ಠಾಣೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ. ಶಿವಳ್ಳಿ ಗ್ರಾಮದ ಪೆರಂಪಳ್ಳಿಯಲ್ಲಿರುವ ವಸತಿ ಸಮುಚ್ಚಯದ ಎರಡನೇ ಮಹಡಿಯಲ್ಲಿ ಮಹಿಳೆಯರನ್ನು ಬಲವಂತವಾಗಿ ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು. ಕೃತ್ಯದ ರೂವಾರಿಗಳಾದ ರವೀಶ, ರಘುನಂದನ ಎಂ.ಡಿ., ಅಮೀನಾ ಬೇಗಂ, ಡಯನಾ ಲೂವಿಸ ಅವರನ್ನು ವಶಕ್ಕೆ ಪಡೆದಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕಾಸರಗೋಡು: ಕೇಂದ್ರ-ರಾಜ್ಯ ಸರಕಾರಗಳ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸುವುದಾಗಿ ನಂಬಿಸಿ ಹಲವರಿಂದ ಲಕ್ಷಾಂತರ ರೂ. ವಂಚಿಸಿದ ಪ್ರಕರಣದ ಆರೋಪಿ ಮಾಜಿ ಡಿವೈಎಫ್‌ಐ ಮುಖಂಡೆ, ಅಧ್ಯಾಪಕಿಯಾಗಿರುವ ಪುತ್ತಿಗೆ ಬಾಡೂರಿನ ಸಚಿತಾ ರೈ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು, ಈ ಮೂಲಕ ಸಚಿತಾ ರೈ ವಿರುದ್ಧ ದಾಖಲಾದ ಕೇಸುಗಳ ಸಂಖ್ಯೆ 20 ಕ್ಕೇರಿದೆ. ಬಾಯಾರು ಧರ್ಮತ್ತಡ್ಕ ಕರುವಾಜೆಯ ಮರಿಯಮ್ಮತ್ ಸಪೂರ ನೀಡಿದ ದೂರಿನಂತೆ ಸಚಿತಾ ರೈ ವಿರುದ್ದ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾಸರಗೋಡು ಕೇಂದ್ರೀಯ ವಿದ್ಯಾಲಯದಲ್ಲಿ ಸೀನಿಯರ್ ಕ್ಲಾರ್ಕ್ ಉದ್ಯೋಗ ಭರವಸೆ ನೀಡಿ 13,80,000 ರೂ. ವಂಚಿಸಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿದೆ. 2023 ಡಿ.13 ರಿಂದ 2024 ಎಪ್ರಿಲ್ 30 ರ ವರೆಗಿನ ಕಾಲಾವಧಿಯಲ್ಲಿ ಹಣ ನೀಡಿರುವುದಾಗಿ ದೂರದಾರರು ದೂರಿನಲ್ಲಿ ತಿಳಿಸಿದ್ದಾರೆ.

Read More

ಮೂಡುಬಿದಿರೆ: ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಪಡೆದ ಹಿಂದೂ ಸಂಘಟನಾ ಕಾರ್ಯಕರ್ತರು ಕಾರ್ಯಚರಣಿ ನಡೆಸಿ ವಾಹನ ಸಹಿತ ಗೋಸಾಗಾಟಗಾರರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶನಿವಾರ ರಾತ್ರಿ ಮೂಡುಬಿದಿರೆಯಲ್ಲಿ ನಡೆದಿದೆ. ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ನಿವಾಸಿಗಳಾದ ಪ್ರವೀಣ್ ಡಿಸೋಜ ಹಾಗೂ ಭಾಸ್ಕರ್ ಶೆಟ್ಟಿ ಗೋಸಾಗಾಟಗಾರರು. ಇವರಿಬ್ಬರು ಮೂಡುಬಿದಿರೆ ತಾಲೂಕಿನ ತೋಡಾರು ಶಾಂತಿಗಿರಿಯಲ್ಲಿ ಅಕ್ರಮವಾಗಿ ಪಿಕಪ್‌ನಲ್ಲಿ ಎರಡು ಗೋವುಗಳನ್ನು ತೋಡಾರಿನ ಅದ್ದು ಎಂಬವರ ಕಸಾಯಿಖಾನೆಗೆ ಸಾಗಿಸುತ್ತಿದ್ದರು. ಈ ವೇಳೆ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ವಾಹನಗಳನ್ನು ತಡೆದು ನಿಲ್ಲಿಸಿ, ಎರಡು ಗೋವುಗಳೊಂದಿಗೆ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದರು. ಅಕ್ರಮ ಗೋ ಸಾಗಾಟ ವಿಚಾರದಲ್ಲಿ ಶನಿವಾರ ರಾತ್ರಿ ಕೇಸು ದಾಖಲಾಗಿದ್ದರೂ ರವಿವಾರ ಬೆಳಗ್ಗೆ 7.20ರ ಸುಮಾರಿಗೆ ಇಬ್ಬರೂ ಆರೋಪಿಗಳು ಅಶ್ವತ್ಥಪುರದಲ್ಲಿರುವ ಹಾಲಿನ ಡೈರಿಗೆ ಹಾಲು ಹಾಕಿ ಬಂದಿದ್ದಾರೆನ್ನಲಾಗಿದೆ. ಭಾಸ್ಕರ ಶೆಟ್ಟಿ ಅವರು ತೆಂಕಮಿಜಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ.

Read More

ಮಂಗಳೂರು: ಗದ್ದೆಗೆ ಕ್ರಿಮಿನಾಶಕ ಸಿಂಪಡಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪದ ಏಳಿಂಜೆ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಪಟ್ಟೆ ಮಾಗಂದಡಿ ನಿವಾಸಿ ಅಶೋಕ್ ಶೆಟ್ಟಿ(60) ಎಂದು ಗುರುತಿಸಲಾಗಿದೆ. ಕುಸಿದು ಬಿದ್ದ ಅಶೋಕ್ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Read More

ಮಂಗಳೂರು: ರಸ್ತೆಬದಿ ನಿಲ್ಲಿಸಿದ್ದ ಟೂರಿಸ್ಟ್ ಕಾರೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿ ಹೊತ್ತಿ ಉರಿದ ಘಟನೆ ನಗರದ ಲೇಡಿಹಿಲ್‌ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ನಡೆದಿದೆ. ಶನಿವಾರ ರಾತ್ರಿ ಟೂರಿಸ್ಟ್ ಕಾರನ್ನು ರಸ್ತೆಬದಿ ನಿಲ್ಲಿಸಿ ಚಾಲಕ ಅಂಗಡಿಗೆ ತೆರಳಿದ್ದರು. ಈ ವೇಳೆ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣದಲ್ಲಿ ಬೆಂಕಿ ಇಡೀ ಕಾರನ್ನು ವ್ಯಾಪಿಸಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಅಷ್ಟರಲ್ಲಾಗಲೇ ಕಾರು ಭಾಗಶಃ ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಕಾರಿಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ.

Read More

ಸುಳ್ಯ: ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ದೇವರ ಕೊಲ್ಲಿಯಲ್ಲಿಯ 10ನೇ ಮೈಲಿನಲ್ಲಿ ಜ.4 ರಂದು ನಡೆದಿದೆ. ದೇವರಕೊಲ್ಲಿಯ ಸ್ಥಳೀಯ ನಿವಾಸಿ ಮುತ್ತು ಕಾಡಾನೆ ದಾಳಿಗೊಳಗಾದ ವ್ಯಕ್ತಿ.ಮುತ್ತು ಅವರು ಎಸ್ಟೇಟ್ ನಲ್ಲಿ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಸ್ಕೂಟಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಕಾಡಾನೆಯೊಂದು ದಿಡೀರ್ ದಾಳಿ ಮಾಡಿದೆ.ಈ ಸಂದರ್ಭ ಮುತ್ತು ಓಡಿ ತಪ್ಪಿಸಿಕೊಂಡಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆಯು ಸ್ಕೂಟಿಯನ್ನು ಜಖಂಗೊಳಿಸಿದ್ದು, ಗಾಯಳುವನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Read More

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನ್ನಾರು ಸೇತುವೆಯ ಕೆಳಭಾಗದಲ್ಲಿ ಮೃತ್ಯುಂಜಯ ನದಿ ಕಿನಾರೆಯಲ್ಲಿ ಡಿ.17 ರಂದು ಯಾರೋ ಕಿಡಿಗೇಡಿಗಳು ಹತ್ಯೆಗೈಯಲ್ಪಟ್ಟ ಜಾನುವಾರುಗಳ ತಲೆ ಹಾಗೂ ಇತರೇ ತ್ಯಾಜ್ಯಗಳನ್ನು ಸುಮಾರು 11 ಸಣ್ಣ ಸಣ್ಣ ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ತುಂಬಿಸಿ‌ ಎಸೆದು ಹೋಗಿರುವ ಘಟನೆ ಇತ್ತೀಚೆಗೆ ನಡೆದಿದೆ. ಈ ಘಟನೆಗೆ ಸಂಬಂಧಿಸಿ ಧರ್ಮಸ್ಥಳ ಪೊಲೀಸರು ಈ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳ್ತಂಗಡಿಯ ಆದಂ ಅವರ ಮಗ ಮಹಮ್ಮದ್ ಇರ್ಷಾದ್ (28 ವರ್ಷ), ರವೂಫ್‌ ಅವರ ಮಗ ಮಹಮ್ಮದ್ ಅಜ್ಮಲ್ (30 ವರ್ಷ) ಆರೋಪಿಗಳನ್ನು ಬಂಧನ ಮಾಡಲಾಗಿದೆ. ಇವರ ಮೇಲೆ ಪೊಲೀಸರು ಠಾಣಾ ಅಕ್ರ 79/2024 ಕಲಂ 4, 12 ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ 2020 ರಂತೆ ಪ್ರಕರಣ ದಾಖಲು ಮಾಡಲಾಗಿದೆ.

Read More

ಸಿಗರೇಟು ಪ್ಯಾಕೆಟ್‌’ಗಳಲ್ಲಿ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಬರೆಯುವುದನ್ನ ನಾವು ನೋಡುತ್ತೇವೆ ಅಥವಾ ಯಾವುದೇ ಸಿನಿಮಾ ಶುರುವಾಗುವ ಮುನ್ನವೇ ಅದರ ಬಗ್ಗೆ ಘೋಷಣೆ ಕೇಳಿರುತ್ತೇವೆ. ಸಿಗರೇಟ್ ನಿಮ್ಮ ಜೀವನದ ಕ್ಷಣಗಳನ್ನ ಹೇಗೆ ಹಾಳುಮಾಡುತ್ತದೆ ಎಂಬುದನ್ನು ಹೊಸ ಅಧ್ಯಯನ ವರದಿ ಮಾಡಿದೆ. ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್‌’ನ ಸಂಶೋಧಕರು ಧೂಮಪಾನವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಬಹಿರಂಗಪಡಿಸಿದ್ದಾರೆ. ಧೂಮಪಾನವನ್ನ ತ್ಯಜಿಸಲು ಹೊಸ ವರ್ಷದ ಸಂಕಲ್ಪ ಮಾಡಿ. ಯಾಕಂದ್ರೆ, ಸಿಗರೇಟ್ ನಿಧಾನವಾಗಿ ಜೀವನವನ್ನ ನಾಶಪಡಿಸುತ್ತದೆ. ಸರಾಸರಿ ಒಂದು ಸಿಗರೇಟ್ ವ್ಯಕ್ತಿಯ ಜೀವನವನ್ನ 20 ನಿಮಿಷಗಳಷ್ಟು ಕಡಿಮೆ ಮಾಡುತ್ತದೆ. ಒಬ್ಬ ವ್ಯಕ್ತಿಯು ದಿನಕ್ಕೆ 20 ಸಿಗರೇಟ್ ಸೇದಿದರೆ, ನಿಮ್ಮ ಜೀವನದಿಂದ 7 ಗಂಟೆಗಳು ಕಡಿಮೆಯಾಗುತ್ತವೆ. ಜರ್ನಲ್ ಆಫ್ ಅಡಿಕ್ಷನ್‌’ನಲ್ಲಿ ಪ್ರಕಟವಾದ ವಿಶ್ಲೇಷಣೆಯ ಪ್ರಕಾರ, ಒಂದು ಸಿಗರೇಟ್ ಪುರುಷನ ಜೀವನವನ್ನ 17 ನಿಮಿಷಗಳು ಮತ್ತು ಮಹಿಳೆಯ ಜೀವನವನ್ನು 22 ನಿಮಿಷಗಳಷ್ಟು ಕಡಿಮೆ ಮಾಡುತ್ತದೆ. ಸಿಗರೇಟ್ ಸೇದುವುದರಿಂದ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. ಅಲ್ಲದೆ ಟಿಬಿಯಂತಹ ಅಪಾಯಕಾರಿ ರೋಗಗಳೂ ಇವೆ. ಅನೇಕ ಬಾರಿ…

Read More

ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಕ್ರಮ ಪ್ರವೇಶ, ಸೊತ್ತು ನಾಶ ಮತ್ತು ಜೀವ ಬೆದರಿಕೆ ಪ್ರಕರಣವೊಂದರಲ್ಲಿ ಭಾಗಿಯಾಗಿ 24 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುವ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ಮುಲ್ಕಿ ಸಮೀಪದ ಕಿಲ್ಪಾಡಿ ನಿವಾಸಿ ಕಿಶೋರ್ ಕುಮಾರ್ (34) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಲ್ಪಾಡಿ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿನ ನಿವಾಸಿ ಸುಧಾಕರ ಭಂಡಾರಿ ಎಂಬವರು ತನ್ನ ಜಾಗದ ಮರಗಳನ್ನು ಕಿಲ್ಪಾಡಿ ಗ್ರಾಮದ ನಿವಾಸಿಗಳಾದ ಆಶೋಕ ಮತ್ತು ಕಿಶೋರ್ ಕುಮಾರ್ ರವರು ಅಕ್ರಮ ಪ್ರವೇಶ ಮಾಡಿ ಕಡಿದು ನಾಶ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಮುಲ್ಕಿ ಠಾಣೆಯಲ್ಲಿ ನೀಡಿದ ದೂರಿನಂತೆ ಅ.ಕ್ರ:33/2000 ಕಲಂ:447, 427, 379, 506 ಜೊತೆಗೆ 34 ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿ ಪ್ರಕರಣವು ಮೂಡಬಿದ್ರೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಪ್ರಕರಣದ ಆರೋಪಿಯಾದ ಕಿಶೋರ್ ಕುಮಾರ್ ಎಂಬಾತನು 24 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದು ಈ ಬಗ್ಗೆ ನ್ಯಾಯಾಲಯವು ಆರೋಪಿಯ ವಿರುದ್ದ…

Read More

ಉಡುಪಿಯಲ್ಲಿ 33 ವರ್ಷದ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೃತರನ್ನು ಪ್ರಮೀಳಾ ಸ್ವೈನ್ (33) ಎಂದು ಗುರುತಿಸಲಾಗಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಮೀಳಾ ಅವರು ಡಿಸೆಂಬರ್ 3 ರಂದು ಮುಂಜಾನೆ 5.30 ಕ್ಕೆ ಬಾಡಿಗೆ ಕೊಠಡಿಯ ಸಮೀಪ ಶೌಚಾಲಯದ ಬಳಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಉಡುಪಿಯ ಟಿ ಎಂ ಎ ಪೈ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿ, ಪ್ರಮೀಳಾ ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More