Author: main-admin

ಬಂಟ್ವಾಳ: ಡಿ. 29ರಂದು ಎರಡು ತಂಡಗಳು ಹೊಡೆದಾಡಿದ ಘಟನೆ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲಿನಲ್ಲಿ ನಡೆದಿದೆ. ಒಂದು ತಂಡದಿಂದ ತೇಜಾಕ್ಷ ಎಂಬವರು ದೂರು ನೀಡಿದರೇ. ಇನ್ನೊಂದು ತಂಡದಿಂದ ಸುಲೈಮಾನ್ ಎಂಬವರು ದೂರು ನೀಡಿದ್ದಾರೆ. ಘಟನೆಯ ಹಿನ್ನಲೆ ಎರಡೂ ಕಡೆಯಿಂದ ದೂರು ಹಾಗೂ ಪ್ರತಿದೂರು ದಾಖಲಾಗಿದೆ. ಘಟನೆಯ ಕುರಿತು ಜಿಲ್ಲಾ ಎಸ್‌ಪಿ ಯತೀಶ್‌ ಅವರು ಗ್ರಾಮಾಂತರ ಠಾಣೆಗೆ ಭೇಟಿ ನೀಡಿ ತನಿಖೆಯ ಕುರಿತು ಸಲಹೆ ನೀಡಿದ್ದಾರೆ. ಡಿ. 29ರಂದು ಮಧ್ಯಾಹ್ನ ತಾರಿಪಡ್ಡು ನಿವಾಸಿ ತೇಜಾಕ್ಷ ಅವರು ಮನೆಗೆ ಹೋಗುತ್ತಿದ್ದ ವೇಳೆ ಪರಿಚಯದ ಉಮೇಶ ಎಂಬವನಿಗೆ ತಂಡವೊಂದು ಹೊಡೆಯುತ್ತಿದ್ದು, ಈ ವೇಳೆ ತೇಜಾಕ್ಷ ಅಲ್ಲಿಗೆ ಹೋಗಿ ಉಮೇಶನಿಗೆ ಯಾಕೆ ಹೊಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದು, ಪರಿಚಯದ ಆರೋಪಿಗಳಾದ ಮುಸ್ತಾ, ನವಾಜ್, ರಜಿಂ ಮತ್ತು ಇತರರು ಸೇರಿ ನೀನು ಯಾರು ನಮ್ಮನ್ನು ಕೇಳಲು ಎಂದು ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು, ಆ ಸಮಯ…

Read More

ಮಂಗಳೂರು: ಮನೆಮಂದಿ ಮನೆಗೆ ಬೀಗ ಹಾಕದೆ ತೋಟಕ್ಕೆ ಹೋಗಿದ್ದಾಗ ಮನೆಗೆ ನುಗ್ಗಿದ ಕಳ್ಳನೋರ್ವ ಕೋಣೆಯ ಶೆಲ್ಫ್ ನಲ್ಲಿಟ್ಟಿದ್ದ 50 ಸಾವಿರ ರೂ.ಗಳ ನೋಟಿನ ಕಟ್ಟನ್ನು ಕಳವು ಮಾಡಿದ ಘಟನೆ ಡಿ. 28ರಂದು ಸಂಜೆ 5.30ರ ಸುಮಾರಿಗೆ ಬಂಟ್ವಾಳದ ಅಂತರ ಮಣಿಗುತ್ತಿನಲ್ಲಿ ನಡೆದಿದೆ. ಅಂತರ ಮಣಿಗುತ್ತು ನಿವಾಸಿ ಪೂರ್ಣಿಮಾ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಸಂಜೆ 5.45ರ ಸುಮಾರಿಗೆ ಮನೆಯ ಬಳಿ ನಾಯಿಗಳು ಬೊಗಳುವ ಶಬ್ದ ಕೇಳಿದ್ದು, ಆಗ ಅವರ ಜತೆಯಲ್ಲಿದ್ದ ಧನುಷ್ ಮನೆಗೆ ಬಂದಾಗ ಅಪರಿಚಿತ ವ್ಯಕ್ತಿ ಮನೆಯ ಒಳಗಿನಿಂದ ಪ್ಲಾಸ್ಟಿಕ್ ಬಾಕ್ಸ್‌ ಹಿಡಿದುಕೊಂಡು ಓಡುತ್ತಿದ್ದಾಗ ಬಾಕ್ಸ್‌ನಲ್ಲಿದ್ದ 500 ರೂ.ಗಳ 4 ಕಟ್ಟುಗಳು ನೆಲಕ್ಕೆ ಬಿದ್ದಿದೆ. ಅದರಲ್ಲಿ 1 ಕಟ್ಟನ್ನು ಆತ ಹೆಕ್ಕಿ ಪರಾರಿಯಾಗಿದ್ದಾನೆ. ಈ ವೇಳೆ ಧನುಷ್ ಬೊಬ್ಬೆ ಹಾಕಿದ್ದು, ತೋಟದಲ್ಲಿದ್ದ ಪೂರ್ಣಿಮಾ ಕೂಡ ಓಡಿ ಬಂದಿದ್ದಾರೆ. ಪೂರ್ಣಿಮಾ ಅವರ ಪತಿ ಸಿಲ್ವೆಸ್ಟರ್ ಡಿ’ಸೋಜಾ ಅವರು ಅಪಘಾತದಲ್ಲಿ ಮೃತಪಟ್ಟಿದ್ದು, ಅದರ ವಿಮೆ ಹಣ ಹಾಗೂ ಅಡಿಕೆ ಮಾರಾಟ ಮಾಡಿದ ಸಿಕ್ಕಿದ…

Read More

ಉಡುಪಿ: ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂ ಡಿ ಎಂ ಎ ಪೌಡರ್ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ರೈಲ್ವೇ ಬ್ರಿಡ್ಜ್‌ ಬಳಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಟಪಾಡಿ ಕೋಟೆ ಗ್ರಾಮದ ಅಕ್ಬರ್ (32), ಹಾಗೂ ಉಚ್ಚಿಲದ ಮುಕ್ದುಮ್ ಅಲಿ(28)‌ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಎಂಡಿಎಂಎ 69.127 ಗ್ರಾಂ , 6 ಮೊಬೈಲ್ ಪೋನ್, 1100ರೂ. ನಗದು, ಕಾರು, ಲ್ಯಾಪ್‌ಟಾಪ್ ಮತ್ತು ಇತರ ಸೊತ್ತು ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ 20,11,900ರೂ. ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಉಡುಪಿ ಡಿವೈಎಸ್ಪಿ ಪ್ರಭು ಡಿ ಟಿ , ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ (ಪ್ರಭಾರ) ರಾಮಚಂದ್ರ ನಾಯಕ್, ಉಡುಪಿ ನಗರ ಪೊಲೀಸ್‌ ಠಾಣಾ ಉಪನಿರೀಕ್ಷಕರಾದ ಪುನೀತ್‌ ಕುಮಾರ್‌ ಬಿ, ಸುರೇಶ್.ಕೆ, ಅಬ್ದುಲ್ ಬಶೀರ್, ಹೇಮಂತ, ಆನಂದ, ಶಿವಕುಮಾರ್, ಸೆನ್ ಅಪರಾಧ ಠಾಣಾ ಸಿಬ್ಬಂದಿ ಪ್ರವೀಣ್ ಕುಮಾರ್, ಪ್ರವೀಣ್, ರಾಘವೇಂದ್ರ, ಮಾಯಪ್ಪ, ಪ್ರಶಾಂತ್ ಅವರನ್ನೊಳಗೊಂಡ ತಂಡ…

Read More

ಮಂಗಳೂರು: ಹೊಸವರ್ಷದ ಪ್ರಯುಕ್ತ ಸಾರ್ವಜನಿಕರ, ಪಾದಚಾರಿಗಳ ಮತ್ತು ವಾಹನ ಸವಾರ/ಚಾಲಕರ ಸುರಕ್ಷತೆ, ಹಿತದೃಷ್ಟಿಯಿಂದ ಮಂಗಳೂರು ನಗರ ಪೊಲೀಸ್ ಕಮಿಷನರ್ ಕೆಲವೊಂದು ಮಾರ್ಗಸೂಚಿಗಳನ್ನು ಪಾಲಿಸಲು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಹೊಸವರ್ಷದ ಆಚರಣೆಯ ನೆಪದಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ವೀಲಿಂಗ್/ಡ್ರಾಗ್ ರೇಸ್‌ಗಳಲ್ಲಿ ಭಾಗಿಯಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಮಾರ್ಗಸೂಚಿಗಳು ಈ ರೀತಿಯಿದೆ * ಅಮಲು ಪದಾರ್ಥವನ್ನು ಸೇವಿಸಿ ವಾಹನ ಚಾಲನೆ ಮಾಡಬಾರದು. * ದ್ವಿಚಕ್ರ ವಾಹನಗಳಲ್ಲಿ ಎರಡಕ್ಕಿಂತ ಹೆಚ್ಚು ಮಂದಿ ಸವಾರಿ ಮಾಡಬಾರದು. * ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವವವರು ಕಡ್ಡಾಯವಾಗಿ ಹೆಲೈಟ್ ಧರಿಸಬೇಕು. * ಕಾರು ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು. * ಸಾರ್ವಜನಿಕರು ತಮ್ಮ ವಾಹನಗಳನ್ನು ಪಾರ್ಕಿಂಗ್ ಸ್ಥಳಗಳಲ್ಲಿ/ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಪಾರ್ಕ್ ಮಾಡುವುದು. * ಮಂಗಳೂರು ನಗರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ರಸ್ತೆಗಳಲ್ಲಿ/ವೃತ್ತಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಿ ತಪಾಸಣೆ ನಡೆಸಲಾಗುವುದು. ಸಂಚಾರ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತಕ್ರಮ…

Read More

ಮಂಗಳೂರು : ನಕಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಮಹಿಳೆಯೊಬ್ಬರು 8.75 ಲಕ್ಷ ರೂ‌. ಹಣ ಕಳಕೊಂಡಿರುವ ಘಟನೆ ಮಂಗಳೂರಿನ ಕದ್ರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಷೇರ್‌‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದೆಂದು ಯೂಟ್ಯೂಬ್‌ನಲ್ಲಿ ಬಂದ ಮಾಹಿತಿಯನ್ನು ಆಧರಿಸಿ ಮೊಬೈಲ್ ಪ್ಲೇ ಸ್ಟೋರ್‌ನಲ್ಲಿ SMCTK App ಅನ್ನು ಇನ್‌ಸ್ಟಾಲ್ ಮಾಡಿದ್ದರು. ಬಳಿಕ ತನ್ನ ಮೊಬೈಲ್ ವಿವರ ಮತ್ತು ಬ್ಯಾಂಕ್ ಖಾತೆ ನಮೂದಿಸಿದ್ದರು. ಬಳಿಕ ಮಹಿಳೆಯ ಮೊಬೈಲ್ ನಂಬರನ್ನು ಎಸ್ಎಂಸಿ ಗ್ಲೋಬಲ್ ಸೆಕ್ಯುರಿಟೀಸ್, ಎಸ್ಎಂಸಿ ಮಾರ್ಕೆಟ್ ವಾಚ್ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಲಾಗಿತ್ತು. ಅದರಲ್ಲಿ ಗ್ರೂಪ್ ಅಡ್ಮಿನ್ ಆಗಿರುವ ಅಜಯ್ ಗಾರ್ಗ್ ಎಂಬಾತ ತನ್ನನ್ನು ಕಂಪನಿ ಸಿಇಒ ಎಂದು ಪರಿಚಯಿಸಿ ವಾಟ್ಸ್‌ಆ್ಯಪ್ ಕರೆ ಮಾಡಿದ್ದ. ಅಲ್ಲದೆ, ತಮ್ಮ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಸಿಗುವುದಾಗಿ ನಂಬಿಸಿದ್ದಾನೆ. ಬಳಿಕ ಖಾಸಗಿಯಾಗಿ ಚಾಟಿಂಗ್ ಮಾಡುತ್ತಾ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದ. ಇದರಂತೆ, ಗೂಗಲ್ ಪ್ಲೇ ಸ್ಟೋರಿನಿಂದ ಡೌನ್ಲೋಡ್ ಮಾಡಿದ್ದ ಎಸ್‌ಎಂಸಿಟಿಕೆ ಆ್ಯಪ್ ನಲ್ಲಿ…

Read More

ಮಂಗಳೂರು: ನಗರ ಪೊಲೀಸ್‌ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ 2024ರಲ್ಲಿ ಒಟ್ಟು 134 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 40,46,75,693 ರೂಪಾಯಿ ವಂಚನೆ ನಡೆದಿದೆ. ಈ ಪ್ರಕರಣಗಳಲ್ಲಿ ಒಟ್ಟು 42 ಆರೋಪಿಗಳನ್ನು ಬಂಧಿಸಲಾಗಿದೆ. ಸೈಬರ್ ವಂಚನೆಯಲ್ಲಿ ಸೆನ್ ಠಾಣೆಯಲ್ಲಿ 62 ಹಾಗೂ ಇತರ ಪೊಲೀಸ್‌ ಠಾಣೆಗಳಲ್ಲಿ 72 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 9.83 ಕೋಟಿ ರೂ. ವಂಚನೆ ನಡೆದಿದ್ದು ಅದರಲ್ಲಿ 1.17 ಕೋ.ರೂ.ಗಳನ್ನು ದೂರುದಾರರಿಗೆ ಹಿಂದಿರುಗಿಸಲಾಗಿತ್ತು. 2024ರಲ್ಲಿ ಹೂಡಿಕೆ ಮಾಡುವ ಬಗ್ಗೆ ವಂಚನೆಗೈದಿರುವ 67 ಪ್ರಕರಣಗಳಲ್ಲಿ 30,36,61,299 ರೂ., ಫೆಡೆಕ್ಸ್‌, ಡಿಜಿಟಲ್‌ ಅರೆಸ್ಟ್‌, ಕೊರಿಯರ್‌ ಮತ್ತು ಕಸ್ಟಮ್ಸ್‌ ಹೆಸರಿನ 25 ಪ್ರಕರಣಗಳಲ್ಲಿ 7,07,99,645 ರೂ. ಹಣ ವಂಚಿಸಲಾಗಿದೆ. ಉದ್ಯೋಗದ ಆಮಿಷವೊಡ್ಡಿರುವ 8 ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ 1,21,64,788 ರೂ. ವಂಚಿಸಲಾಗಿದೆ. ವಿವಾಹ ಸಂಬಂಧಿ 4 ವಂಚನೆ ಪ್ರಕರಣಗಳಲ್ಲಿ 60,46,708 ರೂ. ವಂಚನೆ ನಡೆದಿದೆ. ಒಎಲ್‌ಎಕ್ಸ್‌/ ಆನ್‌ಲೈನ್‌ ಶಾಪಿಂಗ್‌ಗೆ ಸಂಬಂಧಿಸಿದ 3 ಪ್ರಕರಣಗಳಲ್ಲಿ 5,93,626 ರೂ. ವಂಚಿಸಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ…

Read More

ಮಕರ ಜ್ಯೋತಿ ಯಾತ್ರೆಗಾಗಿ ಡಿಸೆಂಬರ್ 30ರಂದು ಸಂಜೆ 5 ಗಂಟೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಲಾಗುವುದು. ತಂತ್ರಿ ಕಂಠರಾರ್ ರಾಜೀವರ್ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಎಸ್. ಅರುಣ್ ಕುಮಾರ್ ನಂಬೂದಿರಿ ದೇವಾಲಯದ ಬಾಗಿಲು ತೆರೆದು ದೀಪ ಬೆಳಗಲಿದ್ದಾರೆ. ಮಾಳಿಗಪ್ಪುರಂ ದೇವಾಲಯ ತೆರೆಯಲು ಪ್ರಧಾನ ಅರ್ಚಕ ವಾಸುದೇವನ್ ನಂಬೂದಿರಿ ಅವರಿಗೆ ಕೀಲಿ ಹಸ್ತಾಂತರ ಮಾಡಲಾಗುವುದು. 18 ಮೆಟ್ಟಿಲ ಬಳಿಯ ಕುಂಡಕ್ಕೆ ಅಗ್ನಿಸ್ಪರ್ಶ ಮಾಡಿದ ನಂತರ ಭಕ್ತರಿಗೆ 18 ಮೆಟ್ಟಿಲು ಏರಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅನುಮತಿ ನೀಡಲಾಗುವುದು.ಡಿಸೆಂಬರ್ 30ರಂದು ಯಾವುದೇ ವಿಶೇಷ ಪೂಜೆ ಇರುವುದಿಲ್ಲ. ಡಿಸೆಂಬರ್ 31ರಂದು ಮುಂಜಾನೆ 3ಗಂಟೆಯಿಂದ ಮಕರ ಜ್ಯೋತಿ ಪೂಜೆ ಆರಂಭವಾಗುತ್ತದೆ. 2025ರ ಜನವರಿ 12ರಂದು ಪಂದಳ ಅರಮನೆಯಿಂದ ತಿರುವಾಭರಣ ಘೋಷಯಾತ್ರೆ ಹೊರಡಲಿದೆ. ಡಿಸೆಂಬರ್ ಜ.13ರಂದು ಪಂಪಾದಲ್ಲಿ ದೀಪೋತ್ಸವ, ಜನವರಿ 14ರಂದು ಸಂಜೆ 5ಗಂಟೆಗೆ ತಿರುವಾಭರಣ ಘೋಷ ಯಾತ್ರೆ,ಶರಂಗುತ್ತಿಗೆ ಆಗಮನ, ಮಕರ ಸಂಕ್ರಮಣ ಪೂಜೆ, ಸಂಜೆ 6.30ಕ್ಕೆ, ಅಯ್ಯಪ್ಪಸ್ವಾಮಿಗೆ ತಿರುವಾಭರಣ ತೊಡಿಸಿ ದೀಪಾರಾಧನೆ, ಮಕರ ನಕ್ಷತ್ರ…

Read More

ಮಂಗಳೂರು: ಎರಡು ದಿನಗಳು ಕಳೆದ್ರೆ ನಾವು 2025ನೇ ಹೊಸ ವರ್ಷವನ್ನು ಸ್ವಾಗತಿಸಲಿದ್ದೇವೆ. ಈ ಸಂದರ್ಭವನ್ನು ಬಳಸಿ ಸೈಬರ್ ಖದೀಮರು ಹಾನಿಕಾರಕ ಲಿಂಕ್ ಹಾಗೂ ಎಪಿಕೆ ಫೈಲ್‌ಗಳನ್ನು ಕಳುಹಿಸಿ ಮೊಬೈಲ್‌ ಹ್ಯಾಕ್ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಹೊಸವರ್ಷದ ಶುಭಾಶಯ ಕೋರುವ ಎಪಿಕೆ ಫೈಲ್, ಲಿಂಕ್‌ಗಳನ್ನು ತೆರೆಯದಿರಿ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಸಾರ್ವಜನಿಕರಿಗೆ ಎಚ್ಚರಿಕೆ ಸೂಚಿಸಿದ್ದಾರೆ. 2025ನೇ ಹೊಸವರ್ಷದ ಸಂದರ್ಭವನ್ನು ಬಳಸಿಕೊಂಡು ಸೈಬರ್ ಕ್ರಿಮಿನಲ್‌ಗಳು ಸಾರ್ವಜನಿಕರ ಮೊಬೈಲ್‌ಗಳಿಗೆ ಹಾನಿಕಾರಕ ಲಿಂಕ್ ಮತು APK ಫೈಲ್‌ಗಳನ್ನು ಕಳುಹಿಸಿ ಸಾರ್ವಜನಿಕರ ಮೊಬೈಲ್‌ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ. ಬಳಿಕ ಹ್ಯಾಕ್ ಮಾಡಿದ ಮೊಬೈಲಿನಿಂದ ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್ ಮತ್ತು APK ಫೈಲ್‌ಗಳನ್ನು ದೊಡ್ಡಮಟ್ಟದಲ್ಲಿ ಶೇರ್ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಮೊಬೈಲ್‌ಗಳಿಗೆ ಹೊಸವರ್ಷದ ಶುಭಾಶಯ ಕೋರಿ ಬರುವ ಯಾವುದೇ ಹಾನಿಕಾರಕ ಲಿಂಕ್‌ಗಳು ಮತ್ತು APK ಫೈಲ್‌ಗಳನ್ನು ತಕ್ಷಣ ಡಿಲೀಟ್ ಮಾಡಬೇಕು. ಯಾವುದೇ ಕಾರಣಕ್ಕೂ ಈ…

Read More

ಉಳ್ಳಾಲ: ಸಹೋದರನ ಪುತ್ರಿಯನ್ನು ಸಮುದ್ರದ ನೀರಿನಿಂದ ರಕ್ಷಿಸಲು ತೆರಳಿದ ಬೆಂಗಳೂರು ನಿವಾಸಿ ಸಮುದ್ರದ ಅಲೆಗಳ ನಡುವೆ ಸಿಲುಕಿ ಸಾವನ್ನಪ್ಪಿದ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಆದಿತ್ಯವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಬೆಂಗಳೂರಿನ ಶಿವಾಜಿನಗರದ ಹೆಚ್.ಪಿ.ಕೆ ರೋಡ್ ನಿವಾಸಿ ಕೆ.ಎಮ್. ಸಜ್ಜದ್ ಆಲಿ (45) ಮೃತರು. ಹಿರಿಯ ಸಹೋದರನ ಪುತ್ರಿ ಸಮುದ್ರದಲ್ಲಿ ಆಟವಾಡುತ್ತಿದ್ದ ಸಂದರ್ಭ ಅಲೆಗಳ ನಡುವೆ ಸಿಲುಕಿದ್ದನ್ನು ಸಾಜಿದ್ ಆಲಿ ರಕ್ಷಿಸಿ, ತಾವೇ ಖುದ್ದು ಅಲೆಗಳ ನಡುವೆ ಸಿಲುಕಿದ್ದರು. ನೀರಿನಲ್ಲಿ ಮುಳುಗಿ ವಾಪಸ್ಸು ದಡಕ್ಕೆ ಬಂದವರನ್ನು ತಕ್ಷಣ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಅವರು ಪಡೀಲ್ ನಲ್ಲಿ ನಡೆದಿದ್ದ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿ 11 ಮಂದಿ ಕುಟುಂಬಿಕರು ಸೋಮೇಶ್ವರ ಸಮುದ್ರ ತೀರದಲ್ಲಿ ವಿಹಾರಕ್ಕೆಂದು ಆಗಮಿಸಿದ್ದರು. 2015 ರಲ್ಲಿ ಪುತ್ತೂರು ನಿವಾಸಿ ಆಲಿಮಾ ರಶೀದಾ ಎಂಬವರನ್ನು ವಿವಾಹವಾಗಿದ್ದರು. ಬೆಂಗಳೂರಿನಲ್ಲೇ ನೆಲೆಸಿದ್ದ ಕುಟುಂಬ ಕಳೆದ ನಾಲ್ಕು ವರ್ಷಗಳಿಂದ ಪುತ್ತೂರಿನ ಬನ್ನೂರು ಬಾಡಿಗೆ…

Read More

ರಾಜ್ಯದ ಆರು ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಕುರಿತಂತೆ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಕೆ. ಎಸ್. ಭರತ್ ಕುಮಾರ್ ಅಧಿಸೂಚನೆ ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯ ಮಂಡಳಿಯ ಮುಖ್ಯಸ್ಥರಾಗಿದ್ದ ನ್ಯಾಯಮೂರ್ತಿ ಎಸ್ ಮಹಾಲಕ್ಷ್ಮಿ ನೇರಳೆ ಅವರನ್ನು ರಾಜ್ಯ ಸರ್ಕಾರದ ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ ಸದಸ್ಯರಾಗಿದ್ದ ನ್ಯಾಯಮೂರ್ತಿ ನಂದಕುಮಾರ್ ಬಿ. ಅವರನ್ನು ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಮಂಡಳಿ ಮುಖ್ಯಸ್ಥರನ್ನಾಗಿ ವರ್ಗಾಯಿಸಲಾಗಿದೆ. ಹಾಸನ ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಉಷಾ ರಾಣಿ ಅವರನ್ನು ಮೈಸೂರಿನ ಜಿಲ್ಲಾ ಪ್ರಧಾನ ನ್ಯಾಯಾಧೀಶರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕರಾಗಿದ್ದ ನ್ಯಾಯಮೂರ್ತಿ ಎಚ್ ಆರ್ ರಾಧಾ ಅವರನ್ನು ಕರ್ನಾಟಕ ನ್ಯಾಯಾಂಗ ಅಕಾಡೆಮಿ ನಿರ್ದೇಶಕರ ಹುದ್ದೆಗೆ ವರ್ಗಾಯಿಸಲಾಗಿದೆ. ಬೆಂಗಳೂರಿನ 53ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾಗಿದ್ದ…

Read More