ಕಡಬ: ರಾಮಕುಂಜದ ಖಾಸಗಿ ಕಾಲೇಜಿನ ಉಪನ್ಯಾಸಕನೋರ್ವ ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗ ಥಳಿಸಿದ್ದು ಓರ್ವ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾದ ಘಟನೆ ನ.20 ರಂದು ನಡೆದಿದೆ. ವಿದ್ಯಾರ್ಥಿಗಳಿಬ್ಬರು ಕಾಲೇಜಿಗೆ ಬೈಕ್ ತಂದ ವಿಚಾರದಲ್ಲಿ ಉಪನ್ಯಾಸಕನೊಬ್ಬ ಪ್ರಶ್ನಿಸಿ ಬುಧವಾರ ದಿನ ಮುಂಜಾನೆ ವೇಳೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. ರಾಮಕುಂಜದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕವನ್ ಎಂಬವರು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ. ವಿದ್ಯಾರ್ಥಿಯ ಹೇಳಿಕೆ ಪ್ರಕಾರ ಎಂಟು ವಿದ್ಯಾರ್ಥಿಗಳಿಗೆ ಹೊಡೆದಿರುವುದಾಗಿ ಆರೋಪ ವ್ಯಕ್ತಪಡಿಸಿದ್ದಾರೆ. ತಡ ರಾತ್ರಿ ಕಡಬ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವ ಸಂದರ್ಭದಲ್ಲಿ ಉಪನ್ಯಾಸಕನೂ ಆಗಮಿಸಿದ್ದು , ಸ್ಥಳದಲ್ಲಿದ್ದ ಯುವಕರ ಗುಂಫು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯೊಳಗೆ ಕೆಲ ಹೊತ್ತು ಭಾರಿ ಮಾತಿನ ಚಕಮಕಿ ನಡೆದಿತ್ತು.ಬಳಿಕ ಆಸ್ಪತ್ರೆ ಸಿಬ್ಬಂದಿಗಳು ಯುವಕರಿಗೆ ಆಸ್ಪತ್ರೆಯಿಂದ ಹೊರ ಹೋಗುವಂತೆ ಸೂಚಿಸಿದ್ದರು.
Author: main-admin
ಉಡುಪಿ: ಕೇವಲ ಒಂದೂವರೆ ತಿಂಗಳ ಹಿಂದೆಯಷ್ಟೆ ವಿವಾಹ ನಿಶ್ಚಿತಾರ್ಥ ಆಗಿದ್ದ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಸಂಭವಿಸಿದೆ. ಉಡುಪಿ ತಾಲೂಕಿನ ದೆಂದೂರುಕಟ್ಟೆಯ ಇಂದ್ರಾಳಿ ನಿವಾಸಿ ಕೀರ್ತನಾ ಶೆಟ್ಟಿ (26) ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರು ಮನೆಯ ರೂಮ್‌ನಲ್ಲಿ ಕುತ್ತಿಗೆಗೆ ಶಾಲು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಬಳಿಕ ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ನವೆಂಬರ್ 17ರಂದು ಕೊನೆಯುಸಿರೆಳೆದಿದ್ದಾರೆ. ಕೀರ್ತನಾ ಅವರು ಮಣಿಪುರದ ಬೆಳ್ಳೆ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಮಂಗಳೂರು: ಅಪ್ರಾಪ್ತೆಯ ಗರ್ಭಪಾತ ಮಾಡಿರುವ ಆರೋಪ ಎದುರಿಸುತ್ತಿದ್ದ ಚಿಕ್ಕಮಗಳೂರಿನ ವೈದ್ಯ ಡಾ. ಚಂದ್ರಶೇಖರ್ ಅವರನ್ನು ಖುಲಾಸೆಗೊಳಿಸಿ ಮಂಗಳೂರಿನ ಎರಡನೇ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ 12ವರ್ಷ ವಯಸ್ಸಿನ ಬಾಲಕಿಯನ್ನು ಆರೋಪಿತ ಸುಧೀರ್ ಹಾಗೂ ಆತನ ಮನೆಯವರು ಗರ್ಭಪಾತ ಮಾಡಿಸಲು ಚಿಕ್ಕಮಗಳೂರಿನ ಡಾ| ಚಂದ್ರಶೇಖರ್ ಅವರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ವೈದ್ಯಾಧಿಕಾರಿಗಳು ಬಾಲಕಿಯನ್ನು ವಿಚಾರಿಸಿದಾಗ ಆಕೆಯ ಪ್ರಾಯ 18 ವರ್ಷ 3 ತಿಂಗಳೆಂದು ತಿಳಿಸಿದ್ದರು. ಈ ವೇಳೆ ಅಪ್ರಾಪ್ತೆಯು ಆರೋಪಿ ಸುಧೀರ್ ತನ್ನ ಪತಿ ಎಂದು ತಿಳಿಸಿದ್ದಳು. ಆಸ್ಪತ್ರೆಗೆ ಬರುವ ಮೊದಲು ಆಕೆಗೆ ಗರ್ಭಪಾತದ ಮಾತ್ರೆಗಳನ್ನು ನೀಡಿದ್ದ ಕಾರಣ ತೀವ್ರ ರಕ್ತಸ್ರಾವ ಆಗಿತ್ತು. ಆದ್ದರಿಂದ ವೈದ್ಯರು ಸಂತ್ರಸ್ತೆಯ ಪ್ರಾಣ ಉಳಿಸುವ ಉದ್ದೇಶದಿಂದ ಸಂತ್ರಸ್ತೆಯ ಪತಿಯೆಂದು ತಿಳಿಸಿದ್ದ ಆರೋಪಿ ಸುಧೀರ್‌ನಿಂದ ಕಾನೂನು ಪ್ರಕಾರ ಒಪ್ಪಿಗೆ ಪತ್ರ ಪಡೆದುಕೊಂಡು ತಕ್ಷಣ ಚಿಕಿತ್ಸೆ ನೀಡಿ ಗರ್ಭದಲ್ಲಿ ಉಳಿದಿದ್ದ ರಕ್ತ ಮಿಶ್ರಿತ ಕಣಗಳನ್ನು ತೆಗೆದಿದ್ದರು. ಬಳಿಕ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ವೈದ್ಯರು…
ಮಂಗಳೂರು: ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡು ವಿಚಾರಣೆಗೆ ಹಾಜರಾಗದೆ ಸುಮಾರು 17 ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿಯನ್ನು ಪಾಂಡೆಶ್ವರ ಪೋಲಿಸರು ಕಾರ್ಯಚರಣೆ ಮೂಲಕ ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಡುಪಿ ಮಲ್ಪೆ ಕಿದಿಯೂರು ನಿವಾಸಿ ವಿಜಯ್ ಕುಮಾರ್ ಪ್ರಾಯ 40 ವರ್ಷ. ಈತನ ಮೇಲೆ ದಕ್ಷಿಣ ಪೊಲೀಸ್ ಠಾಣಾ ಆ ಕ್ರ ನಂ 92/2007 ಕಲಂ 381 IPC ರಂತೆ ಪ್ರಕರಣ ದಾಖಲಾಗಿ ಆರೋಪಿಯು ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡು ವಿಚಾರಣೆಗೆ ಹಾಜರಾಗದೆ ಸುಮಾರು 17 ವರ್ಷ ತಲೆಮರಿಸಿಕೊಂಡಿದ್ದ ಕಾರಣ ಸದರಿ ಪ್ರಕರಣವನ್ನು ಮಾನ್ಯ ನ್ಯಾಯಾಲಯವು LPC ಪ್ರಕರಣವಾಗಿ ಪರಿಗಣಿಸಿ ನ್ಯಾಯಾಲಯವು ಆರೋಪಿಯ ಮೇಲೆ LPC ವಾರೆಂಟ್ ಹೊರಡಿಸಿತ್ತು.ಸದರಿ ಆರೋಪಿಯನ್ನು ಪತ್ತೆಮಾಡಿ ಇಂದು ದಿನಾಂಕ 20/11/2024 ರಂದು ಕುಂದಾಪುರ HC ಪುಟ್ಟರಾಮ PC ಅಂಜನಯ್ಯ PC ಮಲ್ಲಿಕ್ ಜಾನ್ ರವರು ಆರೋಪಿಯನ್ನ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ದಿನಾಂಕ 03/12/2024 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ಸಾರಾಂಶದಿನಾಂಕ…
ಉಡುಪಿ : ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಪೀಠ ಬಯಲುವಿನಲ್ಲಿ ಸೋಮವಾರ ರಾತ್ರಿ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಕೂಡ ಬಲಿಯಾಗಿದ್ದ ಇದೀಗ ನಕ್ಸಲ್ ವಿಕ್ರಂಗೌಡನ ಶವ ಸಾಗಿಸುತ್ತಿದ್ದ ಅಂಬುಲೆನ್ಸ್ ಪಲ್ಟಿಯಾಗಿದೆ. ಹೌದು ಮರಣೋತ್ತರ ಪರೀಕ್ಷೆ ಬಳಿಕ ವಿಕ್ರಂ ಗೌಡನ ಶಬವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಗ್ರಾಮಕ್ಕೆ ವಿಕ್ರಂ ಗೌಡನ ಶವ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 169 A ನಲ್ಲಿ ಶವ ಸಾಗಣೆ ವೇಳೆ ಆಂಬುಲೆನ್ಸ್ ಪಲ್ಟಿಯಾಗಿದೆ. ವೇಗವಾಗಿ ಹೋಗುತ್ತಿದ್ದ ಆಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಗೆ ಹೋಗಿದೆ. ರಸ್ತೆ ಬದಿಯಲ್ಲಿದ್ದ ಗುಡಿಯೊಳೊಗೆ ವಾಲಿಕೊಂಡು ನಿಂತಿದೆ. ಕೂಡಲೆ ಸ್ಥಳದಲ್ಲಿದ್ದ ಜನರು ಧಾವಿಸಿ, ಆಯಂಬುಲೆನ್ಸ್ ಅನ್ನು ಮೇಲಕ್ಕೆ ಎತ್ತಿದ್ದಾರೆ. ಬಳಿಕ, ಆಯಂಬುಲೆನ್ಸ್ ವಿಕ್ರಂಗೌಡ ಮೃತದೇಹ ಹೊತ್ತು ಸಾಗಿದೆ. ಮೋಸ್ಟ ವಾಂಟೆಡ್ ವಿಕ್ರಂ ಗೌಡ ಅಂಡ್ ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕುಟುಂಬಸ್ಥರಿಗೆ ವಿಕ್ರಂ ಗೌಡನ ಮೃತ ದೇಹವನ್ನು ತೆಗೆದುಕೊಂಡು ಹೆಬ್ರಿಕೋಡ್ಲು ಗ್ರಾಮಕ್ಕೆ ಕುಟುಂಬಸ್ಥರು ತೆರಳಿದ್ದಾರೆ.…
ಉಡುಪಿ: ಉಡುಪಿ ಗುಂಡಿಬೈಲಿನ ಫ್ಲ್ಯಾಟ್ ಒಂದರಲ್ಲಿ ವಾಸವಿದ್ದ ಮೋನಿಕಾ ಬಿ.ಎಸ್ (24) ಎಂಬ ಯುವತಿಯು ನವೆಂಬರ್ 14 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬಂಟ್ವಾಳ: ಮನೆಯ ಹಿಂಬದಿ ಬಾಗಿಲು ಮುರಿದು ಕಳ್ಳರು ಮನೆಯ ಕಪಾಟಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನ ದೋಚಿದ ಘಟನೆ ವಿಟ್ಲದ ಮಂಕುಡೆ ಎಂಬಲ್ಲಿ ಮಂಗಳವಾರ ಹಗಲು ಹೊತ್ತಿನಲ್ಲಿ ನಡೆದಿದೆ. ವಿಟ್ಲದ ಮಂಕುಡೆ ಕಲ್ಕಾಜೆ ನಿವಾಸಿ ಗಣೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಗಣೇಶ್ ಶೆಟ್ಟಿಯವರ ಪತ್ನಿ ಪೇಟೆಗೆ ಹೋಗಿದ್ದ ಸಂದರ್ಭ ಕಳ್ಳರು ಹಿಂಬದಿ ಬಾಗಿಲನ್ನು ಮುರಿದು ಮನೆಯ ಒಳಗೆ ನುಗ್ಗಿದ್ದಾರೆ. ಮನೆಯೊಳಗೆ ನುಗ್ಗಿದ ಕಳ್ಳರು ಕೋಣೆಯೊಳಗಿದ್ದ ಕಪಾಟಿನಲ್ಲಿರಿಸಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದರು.
ಮಲ್ಪೆ: ಬಂದರಿನ ಮೀನುಗಾರಿಕಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಚೂರಿ ಇರಿದು ಹಲ್ಲೆ ಮಾಡಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಮಂಜುನಾಥ್ ಎಂಬುವವರು ಸುಮಾರು 4 ವರ್ಷದಿಂದ ಮಲ್ಪೆ ಬಂದರಿನಲ್ಲಿ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿರುತ್ತಾರೆ. ಪ್ರತಿದಿನ ಊಟ ಮುಗಿದ ಬಳಿಕ ಬಾಪುತೋಟ ದಕ್ಕೆಯಲ್ಲಿ ನಿಂತಿರುವ ಸನ್ಮಾನ್ ಬೋಟಿನಲ್ಲಿ ಮಲಗಲು ಹೋಗುತ್ತಿದ್ದು ಅದರಂತೆ ನಿನ್ನೆ ರಾತ್ರಿ ಊಟ ಮಾಡುವ ತಯಾರಿಯಲ್ಲಿರುವಾಗ ಸನ್ಮಾನ್ ಬೋಟಿನ ಕೆಲಸಗಾರ ಅನಿಲ್ ಎಂಬುವನು ಮಂಜುನಾಥ್ ಎಂಬುವವರಿಗೆ ಮದ್ಯ ಸೇವನೆ ಮಾಡಲು ಬರುವಂತೆ ತಿಳಿಸಿದ್ದು ಅದರಂತೆ ಮಂಜುನಾಥ್ ಸನ್ಮಾನ್ ಬೋಟಿಗೆ ಹೋಗಿದ್ದು, ಬೋಟಿನಲ್ಲಿ ಕೀರ್ತಿ, ಅನಿಲ್ ಮತ್ತು ಮಂಜುನಾಥ್ ಸೇರಿ ಮದ್ಯ ಸೇವನೆ ಮಾಡುತ್ತಿರುವಾಗ ರಾತ್ರಿ ಸಮಯ 10:30 ಗಂಟೆಗೆ ಅನಿಲ್ ಮತ್ತು ಕೀರ್ತಿ ರವರಿಗೆ ಬೋಟಿನಲ್ಲಿ ಕೆಲಸ ಮಾಡುವ ವಿಚಾರಕ್ಕೆ ಜಗಳ ಆಗಿರುತ್ತದೆ . ಆ ಸಮಯ ಕೀರ್ತಿ ಎಂಬಾತನು ಬಿಯರ್ ಬಾಟಲಿಯಿಂದ ಅನಿಲ್ ಎಂಬುವನ ತಲೆ ಹೊಡೆದಿರುತ್ತಾನೆ ನಂತರ ಅನಿಲ್ ಬೋಟಿನ ಸ್ಟೇರಿಂಗ್ ಬಳಿಗೆ ಓಡಿ ಹೋಗಿ…
ನವದೆಹಲಿ: 100 ಕೋಟಿ ಮೊತ್ತದ ಬೃಹತ್ ಸೈಬರ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಚೀನಾ ಪ್ರಜೆಯೊಬ್ಬನನ್ನು ದೆಹಲಿಯಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ ಫಾಂಗ್ ಚೆಂಜಿನ್ ವಾಟ್ಸಾಪ್ ಗುಂಪುಗಳ ಮೂಲಕ ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಹಗರಣಗಳಲ್ಲಿ ಭಾಗಿಯಾಗಿದ್ದನು. ಸಂತ್ರಸ್ತರಲ್ಲಿ ಒಬ್ಬರಾದ ಸುರೇಶ್ ಕೋಳಿಚಿಯಿಲ್ ಅಚ್ಯುತನ್ ಅವರು ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ₹ 43.5 ಲಕ್ಷ ವಂಚಿಸಿದ್ದಾನೆ ಎಂದು ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ದೂರಿನ ಪ್ರಕಾರ, ವ್ಯಕ್ತಿಯೋರ್ವರನ್ನು ಮೋಸದ ಸ್ಟಾಕ್ ಮಾರುಕಟ್ಟೆಯ ತರಬೇತಿ ಅವಧಿಗಳಿಗೆ ಆಮಿಷವೊಡ್ಡಲಾಯಿತು ಮತ್ತು ನಂತರ ಹಣವನ್ನು ಹಲವಾರು ವಹಿವಾಟುಗಳಲ್ಲಿ ಹೂಡಿಕೆ ಮಾಡಲು ಮೋಸಗೊಳಿಸಲಾಯಿತು. ನಂತರ ಹಣವನ್ನು ಆರೋಪಿಗಳಿಂದ ನಿಯಂತ್ರಿಸಲ್ಪಡುವ ಬಹು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಯಿತು ಎಂದು ಹೇಳಲಾಗಿದೆ. ಏಪ್ರಿಲ್‌ನಲ್ಲಿ ₹ 1.25 ಲಕ್ಷದ ಒಂದು ವರ್ಗಾವಣೆಯೊಂದಿಗೆ ವಂಚನೆಯ ವಹಿವಾಟಿಗೆ ಲಿಂಕ್ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯ ಮುಂಡ್ಕಾದಲ್ಲಿರುವ ಮಹಾಲಕ್ಷ್ಮಿ ಟ್ರೇಡರ್ಸ್ ಹೆಸರಿನಲ್ಲಿ ಬ್ಯಾಂಕ್ ಖಾತೆ ಇತ್ತು ಎಂದು ಪೊಲೀಸರು ತನಿಖೆ ನಂತರ…
ಉಡುಪಿ : ಸಿ,ಎಸ್,ಟಿ ಮಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ (ರೈಲು ನಂ. 12133, ಕೋಚ್ ನಂ. ಎಸ್ 3) ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ಮುಂಬೈನ ಅವಿನಾಶ್ ಎಂಬ ಪ್ರಯಾಣಿಕರೋರ್ವರ ಸೂಟ್‌ಕೇಸ್‌ನಿಂದ ಚಿನ್ನಭರಣ ಕಳ್ಳತನ ಮಾಡಿರುವ ಪ್ರಕರಣ ನವೆಂಬರ್ 15 ರಂದು ವರದಿಯಾಗಿದೆ. ದೂರಿನ ಪ್ರಕಾರ, ಅವಿನಾಶ್ ಅವರು ತಮ್ಮ ಸೀಟಿನ ಕೆಳಗೆ ಸುಮಾರು 63 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ ಮತ್ತು ಚಿನ್ನಾಭರಣಗಳನ್ನು ಒಳಗೊಂಡ ನಾಲ್ಕು ಸೂಟ್‌ಕೇಸ್‌ಗಳನ್ನು ಝಿಪ್ಪರ್ ಲಾಕ್‌ಗಳಿಂದ ಭದ್ರಪಡಿಸಿದ್ದರು. ನವೆಂಬರ್ 16 ರಂದು ಇಂದ್ರಾಳಿ ರೈಲು ನಿಲ್ದಾಣದಲ್ಲಿ ಕುಟುಂಬ ಸಮೇತರಾಗಿನ ಇಳಿದಿದ್ದು, ಸಂಜೆ ಮನೆಯಲ್ಲಿ ಬ್ಯಾಗ್‌ಗಳನ್ನು ತೆರೆದಾಗ ಎರಡು ಬ್ಯಾಗ್‌ಗಳಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿದೆ. ಪನ್ವೇಲ್ ಮತ್ತು ಕಂಕಾವಲಿ ರೈಲು ನಿಲ್ದಾಣಗಳ ನಡುವೆ ಎಲ್ಲೋ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ. ದೂರಿನ ಆಧಾರದ ಮೇಲೆ ಮಣಿಪಾಲ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.