ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನಲ್ಲಿ ಹುಲಿ ಉಗುರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಮೈಸೂರಿನ ದೊಡ್ಡ ಹರವೆ ಗ್ರಾಮದ ನವೀನ್ ಕುಮಾರ್, ಹೆಚ್.ಡಿ ಕೋಟೆ ಆಲನಹಳ್ಳಿಯ ಕುಮಾರ ನಾಯಕ್ ಬಂಧಿತ ಆರೋಪಿಗಳು. ಬೈಕ್‌ನಲ್ಲಿ ಹುಲಿ ಉಗುರು ಸಾಗಿಸುತ್ತಿದ್ದ ಆರೋಪಿಗಳು, ಅರಣ್ಯ ಸಂಚಾರ ದಳದ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ ನಾಲ್ಕು ಹುಲಿ ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.ವ್ಯಾಘ್ರ ಉಗುರನ್ನು ಪದಕವನ್ನಾಗಿ ಧರಿಸುವುದರಿಂದ ಹೃದಯಕ್ಕೆ ಹತ್ತಿರವಾಗಿ ಧರಿಸುವುದು ಅದೃಷ್ಟ ಮತ್ತು ರಕ್ಷಣೆಯನ್ನು ತರುತ್ತದೆ. ಹುಲಿ ಉಗುರಿನ ಲಾಕೆಟ್ ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ. ಆದುದರಿಂದ ಹುಲಿ ಉಗುರಿನ ಅಕ್ರಮ ಸಾಗಾಟ ನಡೆಯುತ್ತೆ. ಆದರೆ ಇದು ಕಾನೂನು ಬಾಹಿರ.
Author: main-admin
ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷವೊಡ್ಡಿ ಹೂಡಿಕೆ ಮಾಡಿಸಲು ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಇಬ್ಬರು ಆರೋಪಿಗಳನ್ನು ಮಂಗಳೂರು ಸೆನ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ರಾಜ್ಯದ ಗಂಜಂ ಜಿಲ್ಲೆಯ ನೌಗಾನ ತಾಲೂಕಿನ ರಂಪ ಗ್ರಾಮದ ನಿವಾಸಿ ಕಣಾತಲ ವಾಸುದೇವ ರೆಡ್ಡಿ (25) ಮತ್ತು ಕೇರಳ ರಾಜ್ಯದ ಕೋಝಿಕೋಡ್‌ನ ತಾಮರಚೇರಿ ರಾರೋತ್, ಪರಪ್ಪನ್ ಪೊಯಿಲ್ ನಿವಾಸಿ ಜಯಂತ್ ಪಿ (35) ಬಂಧಿತ ಆರೋಪಿಗಳು. ಕಣಾತಲ ವಾಸುದೇವ ರೆಡ್ಡಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಬರುವ ಆಮಿಷವೊಡ್ಡಿ ‘ಸ್ಟೋಕ್ ಫ್ರಂಟ್ ಲೈನ್’ ಎಂಬ ಲಿಂಕ್ ಕಳುಹಿಸಿ ವ್ಯಕ್ತಿಯೊಬ್ಬರಿಂದ ಹಂತಹಂತವಾಗಿ ಒಟ್ಟು 10,84,017 ರೂಪಾಯಿ ಪಡೆದು ವಂಚನೆ ಮಾಡಿದ್ದ ಎಂದು ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದಸ್ತಗಿರಿಯಾಗಿದ್ದ ನಡವೂಲು ವೀರ ವೆಂಕಟ ಸತ್ಯ ನಾರಾಯಣ ರಾಜು ಎಂಬಾತನ ಹೇಳಿಕೆಯ ಆಧಾರದಲ್ಲಿ ಭಾರತದಿಂದ 500ಕ್ಕೂ ಅಧಿಕ ಕಂಪೆನಿಗಳ ಸಿಮ್‌ಗಳನ್ನು ದುಬೈನಲ್ಲಿ ಸೈಬರ್ ವಂಚಕರಿಗೆ ಮಾರಾಟ ಮಾಡಿದ್ದ, ಕಣಾತಲ…
ಮಂಗಳೂರು: ಡಿಎಲ್ ಇಲ್ಲದೆ ವಾಹನ ಚಲಾಯಿಸಿ ಅಪಘಾತ ನಡೆಸಿದ ತಡಂಬೈಲ್ ವೆಂಕಟ್ರಮಣ ಕಾಲೊನಿ ನಿವಾಸಿ ಮೋಹನ್ ಆಚಾರ್ಯ ಅವರ ಪುತ್ರ ಧನುಷ್ (20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಟಿಐ ವಿದ್ಯಾರ್ಥಿಯಾದ ಆತ ಡಿಸೆಂಬರ್ 11 ರಂದು ದ್ವಿಚಕ್ರ ವಾಹನ ಚಲಾಯಿಸಿ ಅಪ ಘಾತ ನಡೆಸಿದ್ದು ಈತನಲ್ಲಿ ಡಿಎಲ್ ಇರಲಿಲ್ಲ. ಆ್ಯಕ್ಟಿವಾ ಸವಾರನೊಂದಿಗೆ ಮಾತುಕತೆ ನಡೆಸಿದ ಪ್ರಕಾರ ಹಣ ನೀಡಲು ವ್ಯವಸ್ಥೆಯಾಗದ ಕಾರಣ ಹಾಗೂ ಇದರಿಂದ ಕೇಸ್ ಆದರೆ ತೊಂದರೆಯಾಗುತ್ತದೆ ಎಂದು ಹೆದರಿ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುರತ್ಕಲ್ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.
ಮುಲ್ಕಿ : ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡ್ ಗ್ರಾಮದ ವನಭೋಜನ ಬಳಿ ಕಳೆದ 2020 ಜನವರಿ30ರಂದು ನಡೆದ ಶರಣಪ್ಪ (31) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ಬಿಹಾರ ಮೂಲದ ಸನ್ನಿಬಾಬು ಮತ್ತು ಗಲ್ಲುರಾಮ ಅಲಿಯಾಸ್ ಸಚಿನ್ ಎಂಬವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 2020ನೇ ಜನವರಿ 30ರಂದು ರಾತ್ರಿ ಸುಮಾರು 10 ಗಂಟೆಗೆ ಮುಲ್ಕಿ ಸಮೀಪದ ಕಾರ್ನಾಡ್ ವನಭೋಜನ ಬಳಿ ಮೃತ ಶರಣಪ್ಪನು ಆರೋಪಿಗಳಿಗೆ ಹಾಗೂ ಆರೋಪಿಗಳ ತಂದೆ -ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಗಳು ಶರಣಪ್ಪನ ಕುತ್ತಿಗೆಗೆ ಚೂರಿಯಿಂದ ಕೊಲೆಮಾಡಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗಳನ್ನು, ವಿಚಾರಣೆ ನಡೆಸಿದ 6 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್•ವಿ ರವರು ಒಂದು ಮತ್ತು ಎರಡನೇ ಆರೋಪಿಗಳಿಗೆ ಕಲಂ 302 ಐಪಿಸಿ ಗೆ ಜೀವಾವಧಿ ಶಿಕ್ಷೆ ಮತ್ತು ತಲಾ 10000 ದಂಡ, ಹಾಗೂ 341ಐಪಿಸಿ ಗೆ…
ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಮತ್ತೊಬ್ಬ ಆರೋಪಿಯನ್ನುಅರೆಸ್ಟ್ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಡಾಜೆ ನಿವಾಸಿ ಮಹಮ್ಮದ್ ಶರೀಫ್(55) ಬಂಧಿತ ಆರೋಪಿ. ವಿದೇಶದಿಂದ ವಾಪಸ್ ಬರುತ್ತಿದ್ದಾಗ ದೆಹಲಿ ವಿಮಾನದಲ್ಲಿ ಬಂಧಿಸಲಾಗಿದೆ. ಈತನ ಪತ್ತೆಗಾಗಿ ಎನ್ಐಎ ಅಧಿಕಾರಿಗಳು 5 ಲಕ್ಷ ರೂ. ರಿವಾರ್ಡ್ ಘೋಷಿಸಿದ್ದರು. ಈತ ಪ್ರವೀಣ್ ಕೊಲೆಗೆ ಸಂಚು ರೂಪಿಸುತ್ತಿದ್ದ ತಂಡದಲ್ಲಿದ್ದ. ಜೊತೆಗೆ ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡನಾಗಿದ್ದ. ಎರಡು ಬಾರಿ ಎನ್ಐಎ ಅಧಿಕಾರಿಗಳು ಶರೀಫ್ ಮನೆ ಮೇಲೆ ದಾಳಿ ಮಾಡಿದ್ದರು.
ಮಂಗಳೂರು : ಹಣವನ್ನು ಡಬಲ್ ಮಾಡುವುದಾಗಿ ನಂಬಿಸಿ ವಂಚಕನೋರ್ವನು ವ್ಯಕ್ತಿಯೊಬ್ಬರಿಗೆ 3.7 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ.13ರಂದು ಅಪರಿಚಿತನೋರ್ವನು ಸಂತ್ರಸ್ತ ವ್ಯಕ್ತಿಯ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ GLOBAL INVESTMENTನಲ್ಲಿ 5000ರೂ. ಹಣ ಹೂಡಿಕೆ ಮಾಡಿದರೆ 10,000ರೂ. ವಾಪಾಸು ಕೊಡುವುದಾಗಿ ನಂಬಿಸಿದ್ದಾರೆ. ಆರೋಪಿಯ ಮಾತನ್ನು ನಂಬಿದ ವ್ಯಕ್ತಿ UPI ಮೂಲಕ 5,000ರೂ. ವರ್ಗಾವಣೆ ಮಾಡಿದ್ದಾರೆ. ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ ಅದೇ ದಿನ 10,000ರೂ. ವರ್ಗಾವಣೆ ಮಾಡಿರುತ್ತಾರೆ. ಡಿ.14ರಂದು ಅಪರಿಚಿತ ವ್ಯಕ್ತಿ 19,000ರೂ. ಹಣ INVESTMENT ಮಾಡುವಂತೆ ತಿಳಿಸಿದ್ದಾರೆ. ಅದರಂತೆ 19,000ರೂ. ಹಣ ಹೂಡಿಕೆ ಮಾಡಿದ್ದಾರೆ. ಆದರೆ ಅಪರಿಚಿತ ತಾವು ತಪ್ಪಾಗಿ ಹಣ ವರ್ಗಾವಣೆ ಮಾಡಿದ್ದೀರಿ ಎಂದು ಡಿ.13ರಿಂದ ಡಿ.15ರವರೆಗೆ ಒಟ್ಟು 3,70,000ರೂ. ಹಣರ್ಗಾವಣೆ ಮಾಡಿಸಿದ್ದಾನೆ. ಆದರೆ ಆರೋಪಿಯು ಮೊದಲೇ ನಂಬಿಸಿದಂತೆ ಹೂಡಿಕೆ ಮಾಡಿದ ಹಣವನ್ನು ದುಪ್ಪಟ್ಟು ಮಾಡಿಕೊಡದೇ, ಹೂಡಿಕೆ ಮಾಡಿರುವ ಹಣವನ್ನು ವಾಪಾಸು ಕೊಡದೇ ವಂಚನೆ ಮಾಡಿದ್ದಾನೆ ಎಂದು ಪೊಲೀಸ್ ದೂರು…
ಉಡುಪಿ: ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಚಂದ್ರಶೇಖರ(34)ನಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆದೇಶಿಸಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ವರ್ಷದ ಹಿಂದೆ ಪ್ರಕರಣ ದಾಖಲಾಗಿತ್ತು. ಬಾಲಕಿಯನ್ನು ಪರಿಚಯಿಸಿಕೊಂಡ ಆರೋಪಿ ಬಾಲಕಿ ಜತೆ ಮೊಬೈಲ್ ಸಂಪರ್ಕ ಇರಿಸಿಕೊಂಡಿದ್ದ. ಆಕೆಗೆ ಕರೆ ಮಾಡಿ ಜನವಸತಿ ಇಲ್ಲದ ಮನೆಗೆ ಮತ್ತು ಹಾಡಿಗೆ ಬರುವಂತೆ ಬೆದರಿಕೆ ಒಡ್ಡಿ ಕರೆಸಿಕೊಳ್ಳುತಿದ್ದ. ಬಾಲಕಿಯನ್ನು ಕಾಡಿಗೆ ಬರಹೇಳಿದ್ದ ಆತ ಆಕೆಯ ಜತೆ ಒತ್ತಾಯ ಪೂರ್ವಕವಾಗಿ ದೈಹಿಕ ಸಂಬಂಧ ಬೆಳೆಸಿದ್ದ. ತದನಂತರದಲ್ಲಿ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಆಕೆ ಗರ್ಭಿಣಿ ಎಂದು ತಿಳಿಸಿದ್ದರು. ಬಾಲಕಿಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಬಾಲಕಿಯ ತಾಯಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ 4 ಮಂದಿ ವಿರುದ್ಧ ಅಂದು…
ಮಂಗಳೂರು: ಹೊಸ ವರ್ಷದ ಆಚರಣೆಯ ಪ್ರಯುಕ್ತ ಸಾರ್ವಜನಿಕ ಹಿತಾಸಕ್ತಿಗಾಗಿ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಹೊಸ ವರ್ಷಕ್ಕೆ ಮಾರ್ಗಸುಚಿಗಳು ಈ ಕೆಳಗಿನಂತಿವೆ: ಎಲ್ಲಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು, ರೆಸಾರ್ಟ್‌ಗಳು ಮತ್ತು ಇತರ ಸಂಸ್ಥೆಗಳು ಹೊಸ ವರ್ಷದ ಹಬ್ಬಗಳನ್ನು ಆಯೋಜಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಪೂರ್ವ ಅನುಮತಿ ಪಡೆಯಬೇಕು. ಅರ್ಜಿಗಳನ್ನು 23-12-2024 ರಂದು ಸಂಜೆ 5:00 ಗಂಟೆಯ ಒಳಗಾಗಿ ಸಲ್ಲಿಸಬೇಕು.ಹೊಸ ವರ್ಷದ ಕಾರ್ಯಕ್ರಮ ರಾತ್ರಿ 12:00 ಗಂಟೆಯೊಳಗೆ ಪೂರ್ಣಗೊಳ್ಳಬೇಕು. ಈ ಸಮಯದ ಬಳಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ನೀಡಲಾಗುವುದಿಲ್ಲ.ಪೂರ್ವಾನುಮತಿ ಇಲ್ಲದ ಹೊಸ ವರ್ಷದ ಹಬ್ಬಗಳನ್ನು ಆಯೋಜಿಸಲು ಅನುಮತಿ ಇರುವುದಿಲ್ಲ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.ಆಯೋಜಕರು ಲೈಸೆನ್ಸ್ ಮತ್ತು ಅನುಮತಿ ಪ್ರಕಾರ ನಿರ್ಧರಿತ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.COVID-19 ಅಥವಾ ಇತರ ಆರೋಗ್ಯ ಸಂಬಂಧಿ ಸರಕಾರದ ಸೂಚನೆಗಳು ಜಾರಿಯಾದಲ್ಲಿ, ಆಯೋಜಕರು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ಮದ್ಯದ ಮಾರಾಟ ಮತ್ತು ವಿತರಣೆಗೆ ಆಬಕಾರಿ ಇಲಾಖೆಯಿಂದ ಪೂರ್ವ ಲಿಖಿತ…
ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾರಡ್ಕದಲ್ಲಿ ಹೆಜ್ಜೇನು ದಾಳಿ ನಡೆಸಿದ ಇಬ್ಬರು ಗಂಭೀರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಪೊಂಪೈ ಕಾಲೇಜು ವಿದ್ಯಾರ್ಥಿ ರಿಶೋನ್ ಹಾಗೂ ಮೇಸ್ತ್ರಿ ಕೆಲಸದ ಸಹಾಯಕ ಶಂಕರ ಅವರ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಸ್ಥಳೀಯರಾದ ಸತೀಶ್ ಕೂಡಲೇ ಇವರನ್ನು ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಬಂಟ್ವಾಳ : ಅಕ್ರಮವಾಗಿ ಕಳ್ಳ ಬಟ್ಟಿಯನ್ನು ತಯಾರಿಸುತ್ತಿದ್ದ ಮನೆಗೆ ದಾಳಿ ನಡೆಸಿರುವ ಬಂಟ್ವಾಳ ಅಬಕಾರಿ ಪೋಲೀಸರ ತಂಡವು ಆರೋಪಿ ಸಹಿತವಾಗಿ ಕಳ್ಳಬಟ್ಟಿಯನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಬಂಟ್ವಾಳದ ಪಂಜಿಕಲ್ಲು ಎಂಬಲ್ಲಿ ನಡೆದಿದೆ. ಪಂಜಿಕಲ್ಲು ಗ್ರಾಮದ ಕಂಬಲ್ದಡ್ಕ ನಿವಾಸಿಯಾಗಿರುವ ರುಕ್ಮಯ ಪೂಜಾರಿ ಬಂಧನಕ್ಕೆ ಒಳಗಾದ ಆರೋಪಿಯಾಗಿದ್ದಾರೆ. ರುಕ್ಮಯ ಪೂಜಾರಿ ಅವರ ಮನೆಗೆ ದಾಳಿ ನಡೆಸಿರುವ ಅಬಕಾರಿ ಪೋಲೀಸರು 1.5 ಲೀಟರ್ ಸಾರಾಯಿ, 55 ಲೀ.ಬೆಲ್ಲದ ಕೊಳೆ ಮತ್ತು ಕಳ್ಳಬಟ್ಟಿ ತಯಾರಿಸಲು ಬಳಸುತ್ತಿದ್ದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಬಕಾರಿ ಉಪನಿರೀಕ್ಷಕರಾದ ರಾಜನಾಯ್ಕ್ ನೇತ್ರತ್ವದಲ್ಲಿ ಈ ಕಾರ್ಯಚರಣೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.










