Author: main-admin

ಬೆಂಗಳೂರು: ದೇವನಹಳ್ಳಿ ಬಳಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ರೇವ್​ ಪಾರ್ಟಿ ನಡೀತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿದ್ದು, 30ಕ್ಕೂ ಹೆಚ್ಚು ಯುವಕ-ಯುವತಿಯರನ್ನು ವಶಕ್ಕೆ ಪಡೆಯಲಾಗಿದೆ. ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಮದ ಬಳಿ ಪಾರ್ಮ್ ಹೌಸ್​ನಲ್ಲಿ ರೇವ್ ಪಾರ್ಟಿ ನಡೀತಿತ್ತು. ರಾತ್ರಿಯಿಂದ ಬೆಳಗಿನ ಜಾವದ ತನಕ ರೇವ್ ಪಾರ್ಟಿ ನಡೆದಿದೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ರೇವ್ ಪಾರ್ಟಿಯಲ್ಲಿ 30ಕ್ಕೂ ಹೆಚ್ಚು ಯುವಕ ಯುವತಿಯರು ಮೈ ಮರೆತಿದ್ದುದು ಕಂಡುಬಂದಿದೆ. ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಯುವಕ-ಯುವತಿಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯುವಕ ಯುವತಿಯರ ವಿಚಾರಣೆ ಅಂತ್ಯದ ಬಳಿಕ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದವರನ್ನು ಪೊಲೀಸ್ ವ್ಯಾನ್‌ನಲ್ಲಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಮೆಡಿಕಲ್ ಚೆಕ್​ ಅಪ್ ಕೂಡ ಮಾಡಿಸಿದ್ದಾರೆ. ಮೆಡಿಕಲ್ ಟೆಸ್ಟ್ ಬಳಿಕ ಎಲ್ಲರನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಬಳಿ ಮುಂಜಾನೆವರೆಗೂ ರೇವ್ ಪಾರ್ಟಿ…

Read More

ಮಂಗಳೂರು: ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಂಕನಾಡಿಯಲ್ಲಿರುವ ಮಾಲ್ ವೊಂದರ ಪಾರ್ಕಿಂಗ್ ನಲ್ಲಿರುವ ಕೊಠಡಿಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿತ್ತೆನ್ನಲಾದ ಹುಕ್ಕಾ ಬಾರ್ ಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಕಂಕನಾಡಿಯ ಮ್ಯಾಕ್ ಮಾಲ್ ನ ಪಾರ್ಕಿಂಗ್ ನಲ್ಲಿರುವ BLACK MOON RESTO CAFÉ ಎಂಬ ಹೆಸರಿನಲ್ಲಿ ಕಾನೂನುಬಾಹಿರವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್ ಗೆ ದಾಳಿ ನಡೆಸಲಾಗಿದೆ. 2023-24ರಲ್ಲಿ ಕೆಫೆಟೇರಿಯಾ ನಡೆಸಲು ಮಂಗಳೂರು ಮಹಾನಗರ ಪಾಲಿಕೆಯಿಂದ ಉದ್ದಿಮೆ ಪರವಾನಿಗೆ ಪಡೆದಿದ್ದ ಆರೋಪಿಗಳು ಕೆಫೆಟೇರಿಯಾ ನೆಪದಲ್ಲಿ ಅಕ್ರಮ ಹುಕ್ಕಾ ಬಾರ್ ನಡೆಸುತ್ತಿದ್ದರು. ಇವರು ನಿಯಮಗಳನ್ನು ಉಲ್ಲಂಘಿಸಿ ಯುವಕರನ್ನು ಮಾದಕ ಭ್ರಮಾ ಲೋಕದಲ್ಲಿ ತೇಲಿಸಿ ಹೆಚ್ಚಿನ ಹಣ ಸಂಪಾದಿಸಿ ಅಪರಾಧವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹುಕ್ಕಾ ಬಾರ್ ನಿಂದ ಹುಕ್ಕಾ ಸೇದುವ ಉಪಕರಣಗಳು, ತಂಬಾಕು ಉತ್ಪನ್ನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ. ನೇತೃತ್ವದಲ್ಲಿ ಪಿಎಸ್ಸೈ ಸುದೀಪ್ ಎಂ.ವಿ.,…

Read More

ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ಕರ್ನಾಟಕದ ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೊಲೆ ಪ್ರಕರಣದ ತನಿಖೆ ಬಹುತೇಕ ಕೊನೆಯ ಹಂತ ತಲುಪಿದ್ದು, ತನಿಖೆಯ ವೇಳೆ ಕೆಲವು ಸ್ಪೋಟಕವಾದ ವಿಚಾರಗಳು ಬಯಲಾಗಿದೆ. ಕೊಲೆಯಾದ ಓಂ ಪ್ರಕಾಶ್ ಅವರ ಪ್ರಕರಣವನ್ನು ರಾಜ್ಯ ಸರ್ಕಾರ ಸಿಸಿಬಿಗೆ ವಹಿಸಿತ್ತು. ಕೊಲೆಗೆ ಪ್ರಮುಖ ಕಾರಣಗಳನ್ನು ಇದೀಗ ಸಿಸಿಬಿ ಪತ್ತೆ ಹಚ್ಚಿದೆ. ಕುಟುಂಬದ ಬಗ್ಗೆ ತೋರಿದ ನಿರ್ಲಕ್ಷವೇ ಓಂಪ್ರಕಾಶ್ ಅವರ ಕೊಲೆಗೆ ಕಾರಣವಾಗಿದೆ. ಆಸ್ತಿಯ ವಿಚಾರದಲ್ಲಿ ಕುಟುಂಬದಲ್ಲಿ ಭೋಗಿಲೆದ್ದಿದ್ದ ಮನಸ್ಥಾಪದಿಂದ ಓಂ ಪ್ರಕಾಶ್ ಅತ್ತೆಯಾಗಿದೆ. ಕೌಟುಂಬಿಕ ಕಾರಣಗಳಿಂದ ಪತಿಯನ್ನು ಕ್ರೂರವಾಗಿ ಪತ್ನಿ ಪಲ್ಲವಿ ಅತ್ತೆಗೈದಿದ್ದರೂ ಓಂ ಪ್ರಕಾಶ್ ಕೊಲೆಗೆ ಸಿಸಿಬಿ ತನಿಖೆಯ ವೇಳೆ ಕೆಲವು ಕಾರಣಗಳನ್ನು ಪತ್ತೆ ಹಚ್ಚಿದೆ. ತನ್ನ ಬಗ್ಗೆ ವೈಯಕ್ತಿಕವಾಗಿ ಗಮನಹರಿಸಿಲ್ಲ ಎಂದು ಪತ್ನಿ ಪಲ್ಲವಿ ಆರೋಪಿಸಿದ್ದಾರೆ ಮಗಳಿಗೆ ಮದುವೆ ಮಾಡಿಲ್ಲ ಎಂದು ಪತಿಯ ಮೇಲೆ ಕೋಪಗೊಂಡಿದ್ದರು. ತನ್ನ ಭಾಗದ ಕುಟುಂಬದ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದ…

Read More

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿಯಾಗಿ ಪೋಸ್ಟ್ ಮಾಡುತ್ತಿದ್ದ ನಾಲ್ಕು ಇನ್ ಸ್ಟಾ ಗ್ರಾಂ ಪೇಜ್ ಗಳು ಹಾಗೂ ಒಂದು ಫೇಸ್‌ಬುಕ್‌ ಪೇಜ್ ನ್ನು ರದ್ದುಪಡಿಸಿ ಪ್ರಕರಣ ದಾಖಲಿಸಲಾಗಿದೆ.ಇದುವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಕಾರಿ ಮತ್ತು ಪ್ರಚೋದನ ಕಾರಿಯಾಗಿ ಪೋಸ್ಸ್ ಮಾಡುತ್ತಿದ್ದಒಟ್ಟು 6 ಇನ್ ಸ್ಟಾ ಗ್ರಾಂ ಪೇಜ್ ಗಳು ಹಾಗೂ 1 ಪೇಸ್ ಬುಕ್ ಪೇಜ್ ನ್ನು ರದ್ದುಗೊಳಿಸಲಾಗಿದೆ.ವಿಎಚ್‌ಪಿ, ಬಜರಂಗದಳ, ಅಶೋಕ್‌ನಗರ ಮತ್ತು ಸ್ಕಂದ ನಾಡ ಎಂಬ ಎರಡು ಇನ್ ಸ್ಟಾ ಗ್ರಾಂ ಪೇಜ್‌ಗಳ ವಿರುದ್ದ ಉರ್ವಾ ಪೊಲೀಸ್ ಠಾಣೆಯಲ್ಲಿ, ಡಿಜೆ ಭರತ್‌೨೦೦೮ ಎಂಬ ಇನ್ ಸ್ಟಾ ಗ್ರಾಂ ಪೇಜ್ ವಿರುದ್ದ ಕಾವೂರು ಪೊಲೀಸ್ ಠಾಣೆಯಲ್ಲಿ, ಕರವಾಳಿ ಆಫೀಸಿಯಲ್‌ ಎಂಬ ಇನ್ ಸ್ಟಾ ಗ್ರಾಂ ಪೇಜ್ ವಿರುದ್ದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ, “ಆಶಿಕ್ ಮೈಕಾಲ” ಎಂಬ ಪೇಸ್ ಬುಕ್ ಪೇಜ್ ವಿರುದ್ದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೇಜ್ ಗಳ ಮಾಹಿತಿ ಹಾಗೂ ರದ್ದು ಮಾಡುವ ಬಗ್ಗೆ ಸಂಬಂಧಪಟ್ಟ ಕಾನೂನು ಜಾರಿ…

Read More

ಮಂಗಳೂರು : ಭಾರತದ ಪ್ರಮುಖ ಐಷಾರಾಮಿ ಪೀಠೋಪಕರಣಗಳು ಮತ್ತು ಗೃಹಾಲಂಕಾರ ಬ್ರಾಂಡ್ ಆದ ಸ್ಟಾನ್ಲಿ ಲೈಫ್‌ಸ್ಟೈಲ್ಸ್, ಮಂಗಳೂರಿನಲ್ಲಿ ತನ್ನ ಮೊದಲ ಅಂಗಡಿಯನ್ನು VK ಗ್ರೂಪ್ ಜೊತೆಗೆ ಪಾಲುದಾರಿಕೆಯಲ್ಲಿ ತೆರೆಯುವುದಾಗಿ ಘೋಷಿಸಲು ಉತ್ಸುಕವಾಗಿದೆ. ಈ ಹೈಬ್ರಿಡ್ ಅಂಗಡಿಯು ಡಿ.ನಂ. 3-9-51, ಶರ್ಬತ್‌ಕಟ್ಟೆ, ಯೆಯ್ಯಾಡಿ, ವಿಮಾನ ನಿಲ್ದಾಣ ರಸ್ತೆ, ಮಂಗಳೂರು ನಲ್ಲಿರುವ ಸ್ಟಾನ್ಲಿ ಬೂಟೀಕ್ ಮತ್ತು ಸೋಫಾಗಳು & ಇನ್ನಷ್ಟುಗಳ ಸಂಸ್ಕರಿಸಿದ ಸೊಬಗನ್ನು ಸಂಯೋಜಿಸುತ್ತದೆ. ಹೊಸ ಅಂಗಡಿಯು ಮಂಗಳೂರಿನ ವಿವೇಚನಾಶೀಲ ಮನೆಮಾಲೀಕರಿಗೆ ವಿಶಿಷ್ಟವಾದ, ಎಲ್ಲವನ್ನೂ ಒಳಗೊಳ್ಳುವ ಪೀಠೋಪಕರಣಗಳ ಶಾಪಿಂಗ್ ಅನುಭವವನ್ನು ನೀಡುತ್ತದೆ. ಹೈಬ್ರಿಡ್ ಅಂಗಡಿ ಪರಿಕಲ್ಪನೆಯು ಸ್ಟಾನ್ಲಿ ಬೂಟೀಕ್ ಮತ್ತು ಸೋಫಾಗಳು & ಇನ್ನಷ್ಟುಗಳನ್ನು ಒಂದೇ ಸೂರಿನಡಿ ಒಂದುಗೂಡಿಸುತ್ತದೆ, ಮೌಲ್ಯ-ಪ್ರೀಮಿಯಂ ಮತ್ತು ಸೂಪರ್-ಪ್ರೀಮಿಯಂ ವಿಭಾಗಗಳಿಗೆ ಸೂಕ್ತವಾದ ಅನುಭವವನ್ನು ನೀಡುತ್ತದೆ. ಅಸಾಧಾರಣ ಶಾಪಿಂಗ್ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾದ ಈ ಅಂಗಡಿಯು ಮಂಗಳೂರಿನ ಮಹತ್ವಾಕಾಂಕ್ಷೆಯ ಮನೆಮಾಲೀಕರ ವಿಕಸಿಸುತ್ತಿರುವ ಆದ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಸೋಫಾಗಳು, ರೆಕ್ಲೈನರ್‌ಗಳು, ಹಾಸಿಗೆಗಳು, ಹಾಸಿಗೆಗಳು, ಊಟದ ಟೇಬಲ್‌ಗಳು, ಆರ್ಮ್‌ಚೇರ್‌ಗಳು ಮತ್ತು ಪರಿಕರಗಳ ಸಂಗ್ರಹಿಸಲಾದ ಸಂಗ್ರಹವನ್ನು…

Read More

ಮಂಗಳೂರು: ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ ನಾಡು,ಹೊರನಾಡು ಮತ್ತು ವಿದೇಶಗಳಲ್ಲಿರುವ ವಿವಿಧ ಕ್ಷೇತ್ರಗಳ 74 ಮಂದಿ ಸಾಧಕರನ್ನು ಗುರುತಿಸಿ ಈ ಬಾರಿಯ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನೀಡಿದೆ. ಮೇ 22ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಖ್ಯಾತ ಉದ್ಯಮಿ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದ ಸಾಧಕ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು 2025 ಸಾಲಿನ ಆರ್ಯಭಟ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.ಬೊಂಡಾಲ ಸರಕಾರಿ ಶಾಲೆಯನ್ನು ದತ್ತು ಪಡೆದು ‘ದಿ.ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲೆ’ ಎಂಬ ಹೆಸರಿನಲ್ಲಿ ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದಲ್ಲದೆ ತಮ್ಮ ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಡಿರುವ ಸಮಾಜ ಸೇವೆ ಮತ್ತು ಯಕ್ಷಗಾನ ಸೇವೆಗಾಗಿ ಸಚ್ಚಿದಾನಂದ ಶೆಟ್ಟರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ.ಅಶೋಕ್ ಬಿ. ಹಿಂಚಿಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾಕ್ಟರ್ ಎಚ್.ಎಲ್.ಎನ್.ರಾವ್…

Read More

ಮಂಗಳೂರು: ಬೇಕರಿ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಟೆಂಪೋ ರಿಕ್ಷಾವನ್ನು ಬದಿಗೆ ಸರಿಸಲು ಹೇಳಿದ್ದಕ್ಕೆ ಸಿಟ್ಟಾದ ಆಟೋ ಚಾಲಕ ತನ್ನ ಸಹಚರ ರಿಕ್ಷಾ ಚಾಲಕನೊಂದಿಗೆ ಬೇಕರಿಗೆ ನುಗ್ಗಿ ಮಾಲಕ ಮತ್ತು ಅವರ ತಾಯಿಗೆ ಹಲ್ಲೆಗೆ ಯತ್ನಿಸಿದ್ದು, ರಿಕ್ಷಾ ಚಾಲಕರ ಪುಂಡಾಟಿಕೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಗುರುವಾರ ಮಧ್ಯಾಹ್ನ ಘಟನೆ ನಡೆದಿದೆ. ಮಾರುತಿ ಸ್ವೀಟ್ಸ್ ಮಾಲಕ ಅಶ್ವಿನ್ ಕುಮಾರ್ ಅವರು ತಮ್ಮ ಬೇಕರಿ ಮುಂದುಗಡೆಯೇ ಅಡ್ಡಲಾಗಿ ನಿಲ್ಲಿಸಿದ್ದ ಟೆಂಪೋ ರಿಕ್ಷಾವನ್ನು ಸ್ವಲ್ಪ ಬದಿಗೆ ಸರಿಸುವಂತೆ ಚಾಲಕ ಬಶೀರ್ ನಲ್ಲಿ ಹೇಳಿದ್ದಾರೆ. ಇಷ್ಟಕ್ಕೇ ಕುಪಿತಗೊಂಡ ಚಾಲಕ ಬಶೀರ್ ತನ್ನ ಸಹಚರ ರಿಕ್ಷಾ ಚಾಲಕರೊಂದಿಗೆ ಬೇಕರಿಗೆ ನುಗ್ಗಿ ಮಾಲಕ ಅಶ್ವಿನ್ ಅವರಿಗೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಬೇಕರಿಯೊಳಗಿದ್ದ ಅಶ್ವಿನ್ ಅವರ ತಾಯಿ ಮತ್ತು ಸಿಬ್ಬಂದಿ ಯುವತಿ ರಿಕ್ಷಾ ಚಾಲಕರನ್ನು ತಡೆದಿದ್ದು ಅವರನ್ನೂ ತಳ್ಳಿ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪಕ್ಕದ ಶಿವಸಾಗರ್ ಹೊಟೇಲಿನ ಮಾಲಕ ಅವರು ಮಧ್ಯ ಪ್ರವೇಶಿಸಿ ಬೇಕರಿ ಮಾಲೀಕನಿಗೆ ಹಲ್ಲೆಗೆ ಮುಂದಾಗಿದ್ದ ರಿಕ್ಷಾ…

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 7 ಗ್ರಾ.ಪಂ.ಗಳ 7 ಕ್ಷೇತ್ರಗಳಲ್ಲಿ ಮೇ 25 ರಂದು ನಡೆಯುವ ಉಪ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ 23ರ ಸಂಜೆ 5 ಗಂಟೆಯಿಂದ ಮೇ 25 ರ ಸಂಜೆ 5 ಗಂಟೆಯವರೆಗೆ ಉಳ್ಳಾಲ ತಾಲೂಕಿನ ಕಿನ್ಯಾ ಮುನ್ನೂರು, ಬಂಟ್ವಾಳ ತಾಲೂಕಿನ ವಿಟ್ಲ ಮುಡೂರು, ಬಾಳ್ತಿಲ, ಬೆಳ್ತಂಗಡಿ ತಾಲೂಕಿನ ಹೊಸಂಗಡಿ, ಪುದುವೆಟ್ಟು, ಸುಳ್ಯ ತಾಲೂಕಿನ ಕನಕಮಜಲು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದಂಗಡಿಗಳನ್ನು, ಮದ್ಯ ತಯಾರಿಕಾ ಘಟಕಗಳನ್ನು, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಆನಂದ್‌ ಕೆ ಆದೇಶಿಸಿದ್ದಾರೆ.

Read More

ಮಂಗಳೂರು: ಖಾಸಗಿ ಸಂಘ, ಸಂಸ್ಥೆಗಳು ಆಯೋಜಿಸುವ ತುಳು ಭಾಷೆ, ಸಾಹಿತ್ಯ , ಸಂಸ್ಕ್ರತಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಮಂಗಳೂರಿನ ತುಳು ಭವನದಲ್ಲಿ ವಿಶೇಷವಾಗಿ ಶೇಕಡಾ ಐವತ್ತರಷ್ಟು ರಿಯಾಯಿತಿಯಲ್ಲಿ ಸಭಾಂಗಣವನ್ನು ನೀಡಲಾಗುತ್ತಿದೆ. ಇದೇ ವೇಳೆ ಯಕ್ಷಗಾನ , ನಾಟಕ ಆಯೋಜಿಸುವವರಿಗೆ ಇನ್ನೂ ಹೆಚ್ಚಿನ ರಿಯಾಯಿತಿಯಲ್ಲಿ ಸಭಾಂಗಣವನ್ನು ಒದಗಿಸಲಾಗುತ್ತದೆ, ಯಾವುದೇ ರಿಯಾಯಿತಿಯನ್ನು ರದ್ದುಪಡಿಸಲಾಗಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಘ ಸಂಸ್ಥೆಗಳು ಅಕಾಡೆಮಿಯೊಂದಿಗೆ ಸಹಭಾಗಿತ್ವದಲ್ಲಿ ನಡೆಸುವ ಕಾರ್ಯಕ್ರಮಗಳಿಗೆ ಉಚಿತವಾಗಿ ಸಭಾಂಗಣ ಒದಗಿಸಲಾಗುತ್ತದೆ. ಸಾಹಿತ್ಯ , ಸಾಂಸ್ಕ್ರತಿಕ ಹೊರತುಪಡಿಸಿದ ಖಾಸಗಿ ಕಾರ್ಯಕ್ರಮಗಳಿಗೆ ಮಾತ್ರ ಪೂರ್ತಿ ಬಾಡಿಗೆ ಪಡೆಯಲಾಗುತ್ತಿದೆ.ಯಾವುದೇ ಸಂಘ , ಸಂಸ್ಥೆಗಳು ನಡೆಸುವ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸರ್ಟಿಫಿಕೇಟ್ ನೀಡುವುದು ಅಕಾಡೆಮಿ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ವಿಚಾರವಾಗಿರುವುದಿಲ್ಲ ಅಥವಾ ಅಕಾಡೆಮಿಯು ಪರೀಕ್ಷೆ ಪ್ರಾಧಿಕಾರವಾಗಿರುವುದಿಲ್ಲ. ಅಕಾಡೆಮಿಯ ವತಿಯಿಂದ ನೇರವಾಗಿ ಅಥವಾ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸುವ ತರಬೇತಿ ಶಿಬಿರ , ಕಮ್ಮಟ, ಸೆಮಿನಾರ್ ಗಳಲ್ಲಿ ಭಾಗವಹಿಸುವವರಿಗೆ ಸರ್ಟಿಫೀಕೇಟ್ ಆಯಾ ಸಂದರ್ಭದಲ್ಲಿ…

Read More

ವಿಟ್ಲ: ಪತ್ನಿಯ ಸೀಮಂತದ ದಿನವೇ ಕುಸಿದು ಬಿದ್ದು ಪತಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕನ್ಯಾನದಲ್ಲಿ ನಡೆದಿದೆ. ಕನ್ಯಾನ ಮಿತ್ತನಡ್ಕ ನಿವಾಸಿ ಪಿಕಪ್ ಚಾಲಕ ಸತೀಶ್ (33) ಮೃತ ವ್ಯಕ್ತಿ. ಪತ್ನಿಯ ಸೀಮಂತದ ದಿನ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತಂದೆ, ತಾಯಿ, ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸೀಮಂತದ ಸಂಭ್ರದಲ್ಲಿ ಕುಟುಂಬದಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ.

Read More