ಬಂಟ್ವಾಳ: ಮನೆಯ ಹಿಂಬದಿ ಬಾಗಿಲು ಮುರಿದು ಕಳ್ಳರು ಮನೆಯ ಕಪಾಟಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನ ದೋಚಿದ ಘಟನೆ ವಿಟ್ಲದ ಮಂಕುಡೆ ಎಂಬಲ್ಲಿ ಮಂಗಳವಾರ ಹಗಲು ಹೊತ್ತಿನಲ್ಲಿ ನಡೆದಿದೆ. ವಿಟ್ಲದ ಮಂಕುಡೆ ಕಲ್ಕಾಜೆ ನಿವಾಸಿ ಗಣೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಗಣೇಶ್ ಶೆಟ್ಟಿಯವರ ಪತ್ನಿ ಪೇಟೆಗೆ ಹೋಗಿದ್ದ ಸಂದರ್ಭ ಕಳ್ಳರು ಹಿಂಬದಿ ಬಾಗಿಲನ್ನು ಮುರಿದು ಮನೆಯ ಒಳಗೆ ನುಗ್ಗಿದ್ದಾರೆ. ಮನೆಯೊಳಗೆ ನುಗ್ಗಿದ ಕಳ್ಳರು ಕೋಣೆಯೊಳಗಿದ್ದ ಕಪಾಟಿನಲ್ಲಿರಿಸಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದರು.
Author: main-admin
ಮಲ್ಪೆ: ಬಂದರಿನ ಮೀನುಗಾರಿಕಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಚೂರಿ ಇರಿದು ಹಲ್ಲೆ ಮಾಡಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಮಂಜುನಾಥ್ ಎಂಬುವವರು ಸುಮಾರು 4 ವರ್ಷದಿಂದ ಮಲ್ಪೆ ಬಂದರಿನಲ್ಲಿ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿರುತ್ತಾರೆ. ಪ್ರತಿದಿನ ಊಟ ಮುಗಿದ ಬಳಿಕ ಬಾಪುತೋಟ ದಕ್ಕೆಯಲ್ಲಿ ನಿಂತಿರುವ ಸನ್ಮಾನ್ ಬೋಟಿನಲ್ಲಿ ಮಲಗಲು ಹೋಗುತ್ತಿದ್ದು ಅದರಂತೆ ನಿನ್ನೆ ರಾತ್ರಿ ಊಟ ಮಾಡುವ ತಯಾರಿಯಲ್ಲಿರುವಾಗ ಸನ್ಮಾನ್ ಬೋಟಿನ ಕೆಲಸಗಾರ ಅನಿಲ್ ಎಂಬುವನು ಮಂಜುನಾಥ್ ಎಂಬುವವರಿಗೆ ಮದ್ಯ ಸೇವನೆ ಮಾಡಲು ಬರುವಂತೆ ತಿಳಿಸಿದ್ದು ಅದರಂತೆ ಮಂಜುನಾಥ್ ಸನ್ಮಾನ್ ಬೋಟಿಗೆ ಹೋಗಿದ್ದು, ಬೋಟಿನಲ್ಲಿ ಕೀರ್ತಿ, ಅನಿಲ್ ಮತ್ತು ಮಂಜುನಾಥ್ ಸೇರಿ ಮದ್ಯ ಸೇವನೆ ಮಾಡುತ್ತಿರುವಾಗ ರಾತ್ರಿ ಸಮಯ 10:30 ಗಂಟೆಗೆ ಅನಿಲ್ ಮತ್ತು ಕೀರ್ತಿ ರವರಿಗೆ ಬೋಟಿನಲ್ಲಿ ಕೆಲಸ ಮಾಡುವ ವಿಚಾರಕ್ಕೆ ಜಗಳ ಆಗಿರುತ್ತದೆ . ಆ ಸಮಯ ಕೀರ್ತಿ ಎಂಬಾತನು ಬಿಯರ್ ಬಾಟಲಿಯಿಂದ ಅನಿಲ್ ಎಂಬುವನ ತಲೆ ಹೊಡೆದಿರುತ್ತಾನೆ ನಂತರ ಅನಿಲ್ ಬೋಟಿನ ಸ್ಟೇರಿಂಗ್ ಬಳಿಗೆ ಓಡಿ ಹೋಗಿ…
ನವದೆಹಲಿ: 100 ಕೋಟಿ ಮೊತ್ತದ ಬೃಹತ್ ಸೈಬರ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಚೀನಾ ಪ್ರಜೆಯೊಬ್ಬನನ್ನು ದೆಹಲಿಯಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ ಫಾಂಗ್ ಚೆಂಜಿನ್ ವಾಟ್ಸಾಪ್ ಗುಂಪುಗಳ ಮೂಲಕ ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಹಗರಣಗಳಲ್ಲಿ ಭಾಗಿಯಾಗಿದ್ದನು. ಸಂತ್ರಸ್ತರಲ್ಲಿ ಒಬ್ಬರಾದ ಸುರೇಶ್ ಕೋಳಿಚಿಯಿಲ್ ಅಚ್ಯುತನ್ ಅವರು ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ₹ 43.5 ಲಕ್ಷ ವಂಚಿಸಿದ್ದಾನೆ ಎಂದು ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ದೂರಿನ ಪ್ರಕಾರ, ವ್ಯಕ್ತಿಯೋರ್ವರನ್ನು ಮೋಸದ ಸ್ಟಾಕ್ ಮಾರುಕಟ್ಟೆಯ ತರಬೇತಿ ಅವಧಿಗಳಿಗೆ ಆಮಿಷವೊಡ್ಡಲಾಯಿತು ಮತ್ತು ನಂತರ ಹಣವನ್ನು ಹಲವಾರು ವಹಿವಾಟುಗಳಲ್ಲಿ ಹೂಡಿಕೆ ಮಾಡಲು ಮೋಸಗೊಳಿಸಲಾಯಿತು. ನಂತರ ಹಣವನ್ನು ಆರೋಪಿಗಳಿಂದ ನಿಯಂತ್ರಿಸಲ್ಪಡುವ ಬಹು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಯಿತು ಎಂದು ಹೇಳಲಾಗಿದೆ. ಏಪ್ರಿಲ್‌ನಲ್ಲಿ ₹ 1.25 ಲಕ್ಷದ ಒಂದು ವರ್ಗಾವಣೆಯೊಂದಿಗೆ ವಂಚನೆಯ ವಹಿವಾಟಿಗೆ ಲಿಂಕ್ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯ ಮುಂಡ್ಕಾದಲ್ಲಿರುವ ಮಹಾಲಕ್ಷ್ಮಿ ಟ್ರೇಡರ್ಸ್ ಹೆಸರಿನಲ್ಲಿ ಬ್ಯಾಂಕ್ ಖಾತೆ ಇತ್ತು ಎಂದು ಪೊಲೀಸರು ತನಿಖೆ ನಂತರ…
ಉಡುಪಿ : ಸಿ,ಎಸ್,ಟಿ ಮಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ (ರೈಲು ನಂ. 12133, ಕೋಚ್ ನಂ. ಎಸ್ 3) ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ಮುಂಬೈನ ಅವಿನಾಶ್ ಎಂಬ ಪ್ರಯಾಣಿಕರೋರ್ವರ ಸೂಟ್‌ಕೇಸ್‌ನಿಂದ ಚಿನ್ನಭರಣ ಕಳ್ಳತನ ಮಾಡಿರುವ ಪ್ರಕರಣ ನವೆಂಬರ್ 15 ರಂದು ವರದಿಯಾಗಿದೆ. ದೂರಿನ ಪ್ರಕಾರ, ಅವಿನಾಶ್ ಅವರು ತಮ್ಮ ಸೀಟಿನ ಕೆಳಗೆ ಸುಮಾರು 63 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ ಮತ್ತು ಚಿನ್ನಾಭರಣಗಳನ್ನು ಒಳಗೊಂಡ ನಾಲ್ಕು ಸೂಟ್‌ಕೇಸ್‌ಗಳನ್ನು ಝಿಪ್ಪರ್ ಲಾಕ್‌ಗಳಿಂದ ಭದ್ರಪಡಿಸಿದ್ದರು. ನವೆಂಬರ್ 16 ರಂದು ಇಂದ್ರಾಳಿ ರೈಲು ನಿಲ್ದಾಣದಲ್ಲಿ ಕುಟುಂಬ ಸಮೇತರಾಗಿನ ಇಳಿದಿದ್ದು, ಸಂಜೆ ಮನೆಯಲ್ಲಿ ಬ್ಯಾಗ್‌ಗಳನ್ನು ತೆರೆದಾಗ ಎರಡು ಬ್ಯಾಗ್‌ಗಳಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿದೆ. ಪನ್ವೇಲ್ ಮತ್ತು ಕಂಕಾವಲಿ ರೈಲು ನಿಲ್ದಾಣಗಳ ನಡುವೆ ಎಲ್ಲೋ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ. ದೂರಿನ ಆಧಾರದ ಮೇಲೆ ಮಣಿಪಾಲ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತಿರುವನಂತಪುರಂ: ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಮಾಲಿವುಡ್ ಹಿರಿಯ ನಟ ಸಿದ್ದಿಕ್ ಅವರಿಗೆ ಮಂಗಳವಾರ (ನ.19ರಂದು) ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ನ್ಯಾ. ಬೇಲಾ ಎಂ.ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ದ್ವಿಸದಸ್ಯ ಪೀಠ, ವಿಚಾರಣೆಗೆ ಸಹಕರಿಸುವಂತೆ ಮತ್ತು ಬಂಧನದಿಂದ ರಕ್ಷಣೆ ನೀಡಿ ಸೆ.30ರಂದು ಮಧ್ಯಂತರ ಆದೇಶ ನೀಡಿತ್ತು. ಇತ್ತೀಚೆಗೆ ನಟನ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ಕೇಳಿದ್ದರು. ಈ ಕಾರಣದಿಂದ ಮಧ್ಯಂತರ ಆದೇಶವನ್ನು ಸುಪ್ರೀಂಕೋರ್ಟ್ ಮತ್ತಷ್ಟು ವಿಸ್ತರಿಸಿತ್ತು. ಮಂಗಳವಾರ ಸುಪ್ರೀಂ ಕೋರ್ಟ್ ನಟ ಸಿದ್ದಿಕ್ ಅವರಿಗೆ ಕೆಲ ಷರತ್ತುಗಳೊಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಹಿರಿಯ ನಟ ತನ್ನ ಪಾಸ್‌ಪೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು. ತನಿಖಾಧಿಕಾರಿಗೆ ತನಿಖೆಗೆ ಸಹಕರಿಸಬೇಕೆಂದು ಸೂಚನೆ ನೀಡಿದೆ. ದೂರುದಾರೆ 13 ಜನರ ವಿರುದ್ಧ ಕಿರುಕುಳ ಆರೋಪವನ್ನು 2018ರಲ್ಲಿ…
ಮಂಗಳೂರು: ಅಧಿಕ ಲಾಭಾಂಶದ ಆಸೆಯೊಡ್ಡಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸಿ ಅಪರಿಚಿತರು ತನಗೆ 21 ಲಕ್ಷ ರೂ.ಗೂ ಅಧಿಕ ಹಣ ವಂಚನೆ ಮಾಡಿರುವ ಬಗ್ಗೆ ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತರು ತನ್ನನ್ನು ವಾಟ್ಸ್ಆ್ಯಪ್ ಗ್ರೂಪ್‌ಗೆ ಸೇರ್ಪಡೆಗೊಳಿಸಿ ಹೆಚ್ಚಿನ ಲಾಭ ಬರುವ ಹೂಡಿಕೆಯ ಬಗ್ಗೆ ಮಾಹಿತಿ ನೀಡಿದ್ದರು. ಅದನ್ನು ನಂಬಿದ ತಾನು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದೆ. ತನಗೆ ಕಳುಹಿಸಲಾಗಿದ್ದ ಆ್ಯಪ್‌ನಲ್ಲಿ ಹೂಡಿಕೆಯ ವ್ಯವಹಾರ, ಲಾಭಾಂಶದ ವಿವರಗಳು ಗೋಚರಿಸುತ್ತಿತ್ತು. ಅದನ್ನು ನಂಬಿದ ತಾನು ಹಂತ ಹಂತವಾಗಿ ತನ್ನ ಮತ್ತು ಮಗಳ ಹಾಗೂ ಅಳಿಯನ ಖಾತೆಯಿಂದ 21 ಲ.ರೂ.ಗಳಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದೆ. ನ.7ರಂದು ಹೂಡಿಕೆ ಮಾಡಿದ ಮೊತ್ತ ಹಾಗೂ ಲಾಭಾಂಶವನ್ನು ನಗದೀಕರಿಸಲು ಯತ್ನಿಸಿದಾಗ ಇನ್ನಷ್ಟು ಹೂಡಿಕೆ ಮಾಡಿದರೆ ಮಾತ್ರ ಹಣ ಪಡೆಯಲು ಸಾಧ್ಯವಿದೆ ಎಂದು ಸೂಚಿಸಿದರು. ಆವಾಗ ತನಗೆ ಇದೊಂದು ವಂಚನೆಯ ಜಾಲವೆಂಬುದು ಗೊತ್ತಾಯಿತು ಎಂದು ವಂಚನೆಗೊಳಗಾದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
ಉಡುಪಿ : 13 ವರ್ಷಗಳ ಬಳಿಕ ಕರಾವಳಿಯಲ್ಲಿ ಗುಂಡಿನ ಮೊರೆತ ಕೇಳಿಬಂದಿದ್ದು ನಕ್ಸಲ್ ಎನ್ಕೌಂಟರ್ ನಡೆದಿದ್ದು ಉಡುಪಿಯ ಹೆಬ್ರಿಯಲ್ಲಿ ANF ಗೆ ನಕ್ಸಲ್ ನಾಯಕ ವಿಕ್ರಂ ಗೌಡ ಬಲಿಯಾಗಿದ್ದಾನೆ. ಕರ್ನಾಟಕದ ಪಶ್ಚಿಮ ಘಟ್ಟ ತಪ್ಪಲಿನ ಅರಣ್ಯದಂಚಿನ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರಗೊಂಡಿದ್ದು, ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆಯಲ್ಲಿ ಎನ್ಕೌಂಟರ್ ನಡೆದಿದೆ.ಕಬ್ಬಿನಾಲೆ ಅರಣ್ಯದಲ್ಲಿ ನಡೆದ ಎನ್ಕೌಂಟರ್ನೊಂದಿಗೆ ಉಡುಪಿ ಭಾಗದಲ್ಲಿ 13 ವರ್ಷಗಳ ನಂತರ ಗುಂಡಿನ ಮೊರತೆ ಕೇಳಿದಂತಾಗಿದೆ. ಸೋಮವಾರ ರಾತ್ರಿ ಐದು ಮಂದಿ ಇದ್ದ ನಕ್ಸಲರ ತಂಡ ಗ್ರಾಮಕ್ಕೆ ದಿನಸಿ ಸಾಮಗ್ರಿ ಖರೀದಿಗೆಂದು ಬಂದಿದ್ದಾಗ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದೆ. ಅಷ್ಟರಲ್ಲಿ ನಕ್ಸಲರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ವಿಕ್ರಂ ಗೌಡ ಹತನಾದರೆ, ಉಳಿದ ನಕ್ಸಲರು ಪರಾರಿಯಾಗಿದ್ದಾರೆ. ನಕ್ಸಲ್ ನಾಯಕ ವಿಕ್ರಂ ಗೌಡ ಎಂಬಾತನನ್ನು ನಕ್ಸಲ್ ನಿಗ್ರಹ ಪಡೆ ಹತ್ಯೆ ಮಾಡಿದೆ. ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ದಟ್ಟಾರಣ್ಯದಲ್ಲಿ, ಅರಣ್ಯದಂಚಿನ…
ಪುತ್ತೂರು : ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿ ಕುಸಿದು ಬಿದ್ದು ಮೃತಪಟ್ಟ ಕಾರ್ಮಿಕನ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು, ಆತನ ಮನೆಯ ಹತ್ತಿರದ ರಸ್ತೆಯ ಬದಿಯಲ್ಲಿ ಇಟ್ಟುಹೋದ ಅಮಾನುಷ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯು ಸಾಲ್ಮರ ತಾರಿಗುಡ್ಡೆಯ ನಿವಾಸಿಯಾದ ಶಿವಪ್ಪ (69) ಎಂದು ತಿಳಿದುಬಂದಿದೆ, ಇವರು ಸಾಲ್ಮರ ಕೆರೆಮೂಲೆಯ ನಿವಾಸಿಯಾದ ವುಡ್ ಸಂಸ್ಥೆಯೊಂದರ ಮಾಲೀಕನಾದ ಹೆನ್ರಿ ತಾವ್ರೋ ಎಂಬುವರ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಶಿವಪ್ಪರನ್ನು ಶನಿವಾರ ಬೆಳಗ್ಗೆ ಸ್ಟಾನಿ ಎಂಬುವವರು ಕರೆದುಕೊಂಡು ಹೋಗಿದ್ದರು. ಆದರೆ ಸಂಜೆಯ ವೇಳೆ ಶಿವಪ್ಪ ಅವರ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು ಮನೆ ಮುಂಭಾಗದ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆಂದು ಮನೆ ಮಂದಿ ಮತ್ತು ಸ್ಥಳೀಯರು ಆರೋಪಿಸಿದ್ದಾರೆ.
ಮಂಗಳೂರು : ಅಕ್ರಮವಾಗಿ, ಅಬಕಾರಿ ಕಾಯ್ದೆಯ ವಿರುದ್ಧ ವಿವಿಧ ಬ್ರಾಂಡಿನ 11.50 ಲೀ. ಡಿಫೆನ್ಸ್ ಲಿಕ್ಕರ್ ಅನ್ನು ಮಾರಾಟ ಮಾಡಲು ದಾಸ್ತಾನು ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಶ್ಯಾಮ್ ಸುಂದರ್ ಬಿನ್ ಬಿ ವಿ ಕೃಷ್ಣನ್ ನಂಬಿಯಾರ್ ಎಂಬವನನ್ನು ಬಂಧಿಸಲಾಗಿದೆ.ನ. 17 ರಂದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವೆಲೆನ್ಸಿಯದಲ್ಲಿರುವ ರೋಶನಿ ನಿಲಯ ಪ್ರದೇಶದ ಅಪಾರ್ಟೆಂಟ್ ವೊಂದರ ಮುಂಭಾಗದ ರಸ್ತೆಯಲ್ಲಿ ಯಾವುದೇ ದಾಖಲಾತಿಗಳಿಲ್ಲದೆ ಮಾರಾಟ ಮಾಡುವ ಉದ್ದೇಶದಿಂದ 11.50 ಲೀ. ಮದ್ಯದ ಬಾಟೆಲ್ ನ್ನು ಆರೋಪಿ ಸಂಗ್ರಹಿಸಿದ್ದ. ಮಾಹಿತಿ ಪಡೆದ ಅಧಿಕಾರಿಗಳು ಕರ್ನಾಟಕ ಅಬಕಾರಿ ಕಾಯ್ದೆ 1965 ರ ನಿಯಮ 11, 14, 15 ರಂತೆ ಅಪರಾಧವಾದ ಕಲಂ 32(1) ಮತ್ತು 38(ಎ) ರಂತೆ ಆರೋಪಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿ ಅಂಗಡಿಯೊಂದಕ್ಕೆ ಬಂದಿದ್ದ ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನಿಸಿದ್ದ ಪ್ರಕರಣದ ಆರೋಪ ಸಾಬೀತಾಗಿದ್ದು, ಆರೋಪಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಪುತ್ತೂರು ಹೆಚ್ಚುವರಿ ಹಿರಿಯ ಪ್ರಧಾನ ವ್ಯವಹಾರಿಕ ನ್ಯಾಯಾಧೀಶ ದೇವರಾಜ್ ಅರಸ್ ವೈ.ಎಚ್. ಅವರ ಪೀಠ ತೀರ್ಪು ಪ್ರಕಟಿಸಿದೆ. ಬದ್ರುದ್ದೀನ್ ಯಾನೆ ಬದ್ರು ಶಿಕ್ಷೆಗೆ ಒಳಗಾದ ಅಪರಾಧಿ.2022ರ ಸೆ. 14ರಂದು ತಿಂಗಳಾಡಿಯ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರ್ ಸ್ವೀಟ್ ಸ್ಟಾಲ್ ಎಂಬ ಅಂಗಡಿಗೆ ತನ್ನ 7 ವರ್ಷದ ಮಗನೊಂದಿಗೆ ಬಂದಿದ್ದ ಮಹಿಳೆ ತಿಂಡಿ ಖರೀದಿಸಿ ಅಂಗಡಿಯವರಿಗೆ ಹಣವನ್ನು ನೀಡುತ್ತಿದ್ದ ವೇಳೆ ಆರೋಪಿ ಬದ್ರು ಅಂಗಡಿಯೊಳಗೆ ಬಂದು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದ. ಈ ಕುರಿತು ಮಹಿಳೆ ನೀಡಿದ್ದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿ ಬದ್ರು ವಿರುದ್ಧ ಕಲಂ 354 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.ಸಂಪ್ಯ ಪೊಲೀಸ್ ಠಾಣೆಯ ಆಗಿನ ಎಸ್.ಐ. ರಾಮಕೃಷ್ಣ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ಕೋರ್ಟ್ ಗೆ…







