Author: main-admin

ಕೋಸ್ಟಲ್ ವುಡ್ ನಲ್ಲಿ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ 90 ಎಮ್ ಎಲ್ ಸಿನಿಮಾದ ಚಿತ್ರೀಕರಣದ ಕೆಲಸವು ಭರದಿಂದ ಸಾಗುತ್ತಿದೆ. ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಿಸಲಾಗುತ್ತಿರುವ ಈ ಸಿನಿಮಾದ ಒಟ್ಟು ಕಥಾಹಂದರವು ಉತ್ತಮ ಸಂದೇಶ, ಕೌಟುಂಬಿಕ ಮನೋರಂಜನೆ, ಪ್ರೀತಿ ಪ್ರೇಮ, ಸುಂದರ ಹಾಡುಗಳು, ಹಾಸ್ಯದೊಂದಿಗೆ ಸಾಕಷ್ಟು ಅಚ್ಚರಿಗಳನ್ನು ಕೂಡಾ ಒಳಗೊಂಡಿದೆ. ಡೋಲ್ಪಿ ಡಿ ಸೋಜ ನಿರ್ಮಾಪಕರಾಗಿರುವ, ರಂಜಿತ್ ಸಿ ಬಜಾಲ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ವಿನೀತ್ ಕುಮಾರ್ ನಾಯಕ ನಟನಾಗಿ ನಟಿಸುತ್ತಿದ್ದು, ನಾಯಕಿಯಾಗಿ ರುಹಾನಿ ಶೆಟ್ಟಿ ನಟಿಸುತ್ತಿದ್ದಾರೆ. 90 ಎಮ್ ಎಲ್ ಸಿನಿಮಾದಲ್ಲಿ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಉಮೇಶ್ ಮಿಜಾರ್, ಪುಷ್ಪರಾಜ್ ಬೊಳ್ಳೂರು, ಶೈಲಶ್ರೀ, ನಮಿತಾ ಸೇರಿದಂತೆ ಹಲವಾರು ಪ್ರಭುದ್ಧ ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ನವೆಂಬರ್ 1 ರಂದು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಈ ತುಳು ಚಲನಚಿತ್ರದ ಮುಹೂರ್ತ ಸಮಾರಂಭವು ನಡೆಯಿತು. ಒಟ್ಟು 20 ರಿಂದ 25 ದಿನಗಳ…

Read More

ಕುಂಬಳೆ: ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಕಾಸರಗೋಡಿನಿಂದ ಆಲುವಾ ನ್ಯಾಯಾಲಯಕ್ಕೆ ಸಾಗಿಸುತ್ತಿದ್ದಾಗ ಆರೋಪಿ ದಾರಿ ಮಧ್ಯೆ ರೈಲಿನಿಂದ ಹೊಳೆಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ, ಈ ವೇಳೆ ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೊಳೆಗೆ ಹಾರಿ ಆತನನ್ನು ಬಂಧಿಸಿದ ಘಟನೆ ನಡೆದಿದೆ. ಇಡುಕ್ಕಿ ನಿವಾಸಿ ಸನೀಶ್‌ (40) ಹೊಳೆಗೆ ಹಾರಿದ ಆರೋಪಿ. ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಈತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದರು. ಈತನನ್ನು ಇಬ್ಬರು ಪೊಲೀಸರ ಭದ್ರತೆಯೊಂದಿಗೆ ಮಂಗಳೂರು-ತಿರುವನಂತಪುರ ಏರನಾಡು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆಲುವಾಕ್ಕೆ ಸಾಗಿಸಲಾಗುತ್ತಿತ್ತು. ರೈಲು ಶೋರ್ನೂರು ಭಾರತಪುಳದ ಸೇತುವೆ ಬಳಿ ತಲುಪಿದಾಗ ಆರೋಪಿ ತನಗೆ ಶೌಚಾಲಯಕ್ಕೆ ಹೋಗಬೇಕೆಂದು ಪೊಲೀಸರಲ್ಲಿ ತಿಳಿಸಿದ್ದಾನೆ. ಆಗ ಪೊಲೀಸರು ಆತನ ಕೈಕೋಳ ಕಳಚಿ ಶೌಚಾಲಯ ಬಳಿ ಸಾಗಿಸಲೆತ್ನಿಸಿದಾಗ ಪೊಲೀಸರ ಕೈಯಿಂದ ತಪ್ಪಿಸಿ ಸೇತುವೆಯಿಂದ ನದಿಗೆ ಹಾರಿದ್ದ. ಕೂಡಲೇ ಪೊಲೀಸರೂ ಹೊಳೆಗೆ ಹಾರಿ ಆತನನ್ನು ಬಂಧಿಸಿದರು. ರೈಲು ಸೇತುವೆಯಲ್ಲಿ ಸಾಗುವಾಗ ವೇಗವನ್ನು ಕಡಿಮೆಗೊಳಿಸಲಾಗಿತ್ತು. ಹೊಳೆಗೆ ಹಾರಿದ ಸನೀಶ್‌ ಪ್ರಜ್ಞೆ ತಪ್ಪಿದ್ದು, ತೃಶ್ಶೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169ರ ಮಿಜಾರು ತೋಡಾರಿನಲ್ಲಿರುವ ಇಂಜಿನಿಯರಿಂಗ್ ಕಾಲೇಜೊಂದರ ಸಮೀಪ ನ.11ರ ಬೆಳಗ್ಗೆ ಖಾಸಗಿ ಬಸ್ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸವಾರೆ, ಸಹಸವಾರೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು, ವಿದ್ಯಾರ್ಥಿಗಳ ಸಹಿತ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಸ್ಕೂಟರ್ ಸವಾರೆ ಸುಮಿತ್ರಾ ಹಾಗೂ ಸಹಸವಾರೆ ಅವರ ಸಂಬಂಧಿ ಸಾನ್ವಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಸುಮಾರು 3 ಗಂಟೆಗಳ ಕಾಲ ಪ್ರತಿಭಟನೆ ನಡೆದಿದ್ದಾರೆ. ಹೀಗೆ ನಿರ್ಲಕ್ಷ್ಯದಿಂದ ಬಸ್ ಚಲಾಯಿಸುವ ಚಾಲಕರು ಮತ್ತು ಬೇಜವಾಬ್ದಾರಿಯಿಂದ ವರ್ತಿಸುವ ಮಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಘಟನೆ ನಡೆದ ತತ್‌ಕ್ಷಣ ರಿಕ್ಷಾವೊಂದು ಅಲ್ಲಿಗೆ ಬಂದ ಕಾರಣ ಬಸ್ಸಿನ ಚಾಲನೆಗೆ ತಡೆಯೊಡ್ಡಿದಂತಾಗಿ ಹತ್ತಿರವೇ ಇದ್ದ ವಿದ್ಯಾರ್ಥಿಗಳು ಜೀವಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಇನ್ನು ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸನ್ನು ಚಾಲಕ ಅತಿ ವೇಗದಿಂದ ಚಲಾಯಿಸಿಕೊಂಡು ಬಂದಿದ್ದಾನೆ. ಮೈಟ್ ಕಾಲೇಜಿನ ತಿರುವು ಬಳಿಯಲ್ಲಿ ಬಸ್ ನಿಯಂತ್ರಣ ಕಳೆದುಕೊಂಡಿದ್ದು, ಮೊದಲು ಕಾಲೇಜು…

Read More

ಉಳ್ಳಾಲ: ಜೈಲಿನಿಂದ ಬಿಡುಗಡೆ ಹೊಂದಿರುವ ವ್ಯಕ್ತಿಯ ಕೊಲೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್, ಇಡ್ಯ, ಈಶ್ವರ ನಗರ ನಿವಾಸಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು(24), ತಲಪಾಡಿ, ನಾರ್ಲ ಪಡೀಲ್ ನಿವಾಸಿ ಸಚಿನ್(24), ಬಂಟ್ವಾಳ ತಾಲೂಕಿನ, ಪಜೀರ್ ಪೋಸ್ಟ್, ಕಂಬ್ಲಪದವು, ಪಾದಲ್ ಕೋಡಿ ನಿವಾಸಿ ಖುಷಿತ್(18) ಬಂಧಿತ ಆರೋಪಿಗಳು. ನವಂಬರ್ 8ರಂದು ಸಂಜೆ 6.40ರ ಸುಮಾರಿಗೆ ತಲಪಾಡಿ ಗ್ರಾಮದ ಕೆ.ಸಿ.ರೋಡ್-ಉಚ್ಚಿಲ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಳೆಯ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆ ಹೊಂದಿದ್ದ ಮೊಹಮದ್ ಆಸೀಫ್ ಎಂಬಾತ ತನ್ನ ಮನೆಯವರೊಂದಿಗೆ ವಾಹನದಲ್ಲಿ ಮಂಗಳೂರಿನಿಂದ ಕೇರಳ ಕಡೆಗೆ ಹೋಗುತ್ತಿದ್ದ. ಈ ಆರೋಪಿಗಳು ಮೊಹಮ್ಮದ್ ಆಸೀಫ್‌ರವರನ್ನು ಮಾರಕಾಯುಧಗಳಿಂದ ದಾಳಿ ಮಾಡಿ ಕೊಲೆ ಮಾಡಲು ಯತ್ನಿಸಿದ್ದರು. ಈ ಬಗ್ಗೆ ಮೊಹಮದ್ ಆಸೀಫ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿ ನವೆಂಬರ್ 11ರಂದು ರಾತ್ರಿ 8ಗಂಟೆಗೆ ಬಂಧಿಸಿದ್ದಾರೆ.

Read More

ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಬ್ರಹ್ಮಾವರ ಠಾಣೆ ಎಸ್ಸೈ ಸೇರಿದಂತೆ ಇಬ್ಬರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಅಮಾನತುಗೊಳಿಸಿ ಆದೇಶ ನೀಡಿದ್ದಾರೆ. ಕೇರಳದ ಕೊಲ್ಲಂ ಮೂಲದ ಆರೋಪಿ ಬಿಜು ಮೋನು(45)ನನ್ನು ಪೊಲೀಸರು ಬ್ರಹ್ಮಾವರ ಠಾಣೆಗೆ ಕರೆದುಕೊಂಡು ಬಂದು, ಆತನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಚೇರ್ಕಾಡಿ ಗ್ರಾಮದ ಮಹಿಳೆಗೆ ಕಿರುಕುಳ ನೀಡಿದ ಆರೋಪ ಬಿಜು ಮೋನು ಮೇಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸುವಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪೂರ್ಣವಾಗಿ ಪಾಲಿಸದ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಧು ಬಿ.ಇ. ಮತ್ತು ಪ್ರಭಾರ ಠಾಣಾಧಿಕಾರಿಯಾಗಿರುವ ಹೆಡ್‌ಕಾನ್ಸ್ಟೇಬಲ್ ಸುಜಾತ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ. ಲಾಕಪ್‌ಡೆತ್ ಪ್ರಕರಣದ ತನಿಖೆಗಾಗಿ ಬೆಂಗಳೂರಿನ ಸಿಐಡಿ ಪೊಲೀಸರ ತಂಡ ನಿನ್ನೆಯೇ ಬ್ರಹ್ಮಾವರಕ್ಕೆ ಆಗಮಿಸಿದ್ದು ತನಿಖೆ ಚುರುಕುಗೊಳಿಸಿದೆ.

Read More

ಮಂಗಳೂರು : ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ(ADGP) ಕೆ.ಎಸ್.ಸುರೇಶ್ ಬಾಬು ನಿಧನರಾಗಿದ್ದಾರೆ. ಅವರು 1974 ರಿಂದ 2006 ರವರೆಗೆ ಭಾರತೀಯ ಪೊಲೀಸ್ ಸೇವೆಯ (IPS) ಕರ್ನಾಟಕ ಕೇಡರ್‌ನಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ವಿಶಿಷ್ಟ ವೃತ್ತಿಜೀವನದಲ್ಲಿ ಐಜಿಪಿ (ದಕ್ಷಿಣ ವಲಯ, ಮೈಸೂರು), ಐಜಿಪಿ (ಪಶ್ಚಿಮ ವಲಯ ಮಂಗಳೂರು) ಐಜಿಪಿ (ಗುಪ್ತಚರ), ಬೆಂಗಳೂರು ನಗರದಲ್ಲಿ ಜಂಟಿ ಪೊಲೀಸ್ ಕಮಿಷನರ್ (ಅಪರಾಧ) ಮತ್ತು ಮೈಸೂರಿನಲ್ಲಿರುವ ಪೊಲೀಸ್ ಅಕಾಡೆಮಿಯ ನಿರ್ದೇಶಕ ಸ್ಥಾನ ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳನ್ನು ಸುರೇಶ್ ಬಾಬು ಅಲಂಕರಿಸಿದ್ದರು. 1999 ರಲ್ಲಿ ಗೌರವಾನ್ವಿತ ಸೇವೆಗಾಗಿ ಪೊಲೀಸ್ ಪದಕ ಮತ್ತು 2005 ರಲ್ಲಿ ವಿಶೇಷ ಸೇವೆಗಳಿಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಪಡೆದಿದ್ದರು. ನಿವೃತ್ತಿಯ ನಂತರ, ಕನ್ನಡ ದಿನಪತ್ರಿಕೆಯೊಂದರಲ್ಲಿ ಪೋಲೀಸ್‌ನ ವಿವಿಧ ಅಂಶಗಳ ಕುರಿತು ಜನಪ್ರಿಯ ಸಾಪ್ತಾಹಿಕ ಅಂಕಣವನ್ನು ಬರೆಯುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವುದನ್ನು ಮುಂದುವರೆಸಿದ್ದರು. ಬೆಂಗಳೂರಿನ NSLUSI, ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ, ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜು ಮತ್ತು…

Read More

ಮಂಗಳೂರು : ಬಾಣಂತಿಯೊಬ್ಬಳು ಮಂಗಳೂರು ನಗರದ ಲೇಡಿಗೋಷನ್ ಆಸ್ಪತ್ರೆಯ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಗೊಂಡಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳದ ರಂಜಿತಾ ಆಚಾರ್ಯ (28) ಮೃತ ಮಹಿಳೆಯಾಗಿದ್ದಾಳೆ. ರಂಜಿತಾ ಅವರಿಗೆ ಅವಧಿ ಪೂರ್ವ ಪ್ರಸವವಾಗಿತ್ತು. ಅ.30ರಂದು ಸಿಸೇರಿಯನ್ ಮೂಲಕ ಹೆರಿಗೆ ನಡೆದಿತ್ತು. ಎನ್ ಐಸಿಯುವಿನಲ್ಲಿ ಅರೈಕೆಯಲ್ಲಿದ್ದ ಶಿಶು ನ.3ರಂದು ಮೃತಪಟ್ಟಿತ್ತು. ರಂಜಿತಾ ಅವರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಬೇಕಿತ್ತು. ಅಷ್ಟರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ರಂಜಿತಾ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯಲು ಮನೆಯವರು ಕೂಡ ಲೇಡಿಗೋಷನ್‌ ಆಸ್ಪತ್ರೆಗೆ ಬಂದಿದ್ದರು. ಆದರೆ ರಂಜಿತಾ ಏಕಾಏಕಿ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ರಂಜಿತಾ ಅವರನ್ನು ಹೆರಿಗೆಗಾಗಿ ಮೊದಲು ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೆಲವು ಗಂಭೀರ ಆರೋಗ್ಯ ಸಮಸ್ಯೆ ಇದ್ದುದರಿಂದ ಇಲ್ಲಿನ ಲೇಡಿಗೋಷನ್ ಆಸ್ಪತ್ರೆಗೆ ಅ.28ರಂದು ದಾಖಲು ಮಾಡಲಾಗಿತ್ತು.

Read More

ನವದೆಹಲಿ :ಸುಪ್ರೀಂಕೋರ್ಟ್’ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ಅವರು ಪ್ರಮಾಣವಚನದ ಸ್ವೀಕರಿಸಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದ್ದಾರೆ. ಭಾನುವಾರ ನಿವೃತ್ತರಾದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಬದಲಿಗೆ ಅವರು ನೇಮಕಗೊಂಡಿದ್ದಾರೆ. ನ್ಯಾಯಮೂರ್ತಿ ಖನ್ನಾ ಅವರ ಅಧಿಕಾರಾವಧಿಯು ಮೇ 13, 2025 ರವರೆಗೆ ಇರುತ್ತದೆ. ನ್ಯಾಯಮೂರ್ತಿ ಚಂದ್ರಚೂಡ್ ಅವರು ನ್ಯಾಯಮೂರ್ತಿ ಖನ್ನಾ ಅವರ ಹೆಸರನ್ನು ಶಿಫಾರಸು ಮಾಡಿದ್ದರು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ನ್ಯಾಯಮೂರ್ತಿ ಖನ್ನಾ ಅವರ ಹೆಸರನ್ನು ಅಕ್ಟೋಬರ್ 16 ರಂದು ಶಿಫಾರಸು ಮಾಡಿದ್ದರು ಮತ್ತು ಕೇಂದ್ರ ಸರ್ಕಾರ ಅಕ್ಟೋಬರ್ 24 ರಂದು ಅವರ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿತ್ತು. ಶುಕ್ರವಾರ ನ್ಯಾಯಮೂರ್ತಿ ಚಂದ್ರಚೂಡ್ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಕೊನೆಯ ಕೆಲಸದ ದಿನವಾಗಿದ್ದು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿ ಅವರಿಗೆ ಭಾವನಾತ್ಮಕ ಬೀಳ್ಕೊಟ್ಟರು. ನ್ಯಾಯಮೂರ್ತಿ ಖನ್ನಾ ಅವರು ಅನೇಕ ಐತಿಹಾಸಿಕ ನಿರ್ಧಾರಗಳ ಭಾಗವಾಗಿದ್ದರು…

Read More

ಮಂಗಳೂರು: ತನ್ನ ಪುಟ್ಟ ಮಗುವನ್ನೆತ್ತಿಕೊಂಡು ತಂದೆಯೋರ್ವರು ಗುರುಪುರ ನದಿಯ ಸೇತುವೆಯ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾದ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ. ಕೈಕಂಬದ ನಿವಾಸಿ ಸಂದೀಪ್ ಎಂಬವರು ತಮ್ಮ 2 ವರ್ಷದ ಮಗುವನ್ನೆತ್ತಿಕೊಂಡು ಗುರುಪುರ ಸೇತುವೆಯ ಮೇಲೇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಅವರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆಂದು ತಿಳಿದು ಉಪಾಯದಿಂದ ಮನವೊಲಿಸಿ ಮಗು ಸಹಿತ ಅವರನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಸಂದೀಪ್ ಬಳಿ ವಿಚಾರಿಸಿದಾಗ ತಾನು ಮಗುವಿಗೆ ಹೊಳೆ ತೋರಿಸುವ ಉದ್ದೇಶದಿಂದ ಸೇತುವೆಯ ಮೇಲೇರಿರುವುದಾಗಿ ತಿಳಿಸಿದ್ದಾರೆ. ಬಳಿಕ ಪೊಲೀಸರು ಅವರಿಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.

Read More

ಬಂಟ್ವಾಳ: ರಾತ್ರಿ ವೇಳೆ ಪ್ರೇಯಸಿಯ ಮನೆಗೆ ಬಂದ ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳದ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ನಡೆದಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡ ಮಹಮ್ಮದ್ ಮುಸ್ತಾಪ(21)ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಸ್ತಾಪನ ಸಂಬಂಧಿ ಹುಡುಗಿಯೊಬ್ಬಳು ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ಮನೆಗೆ ಬರಲು ಹೇಳಿದಂತೆ ಸಜೀಪನಡು ಕಂಚಿನಡ್ಕಪದವು ಎಂಬಲ್ಲಿಗೆ ಬಂದಾಗ ಆರೋಪಿಗಳು ಮಹಮ್ಮದ್ ಮುಸ್ತಾಫನ ಬಗ್ಗೆ ಸಂಶಯಗೊಂಡವರು ಗುಂಪು ಸೇರಿಕೊಂಡು ಕಂಬಕ್ಕೆ ಹಗ್ಗದಿಂದ ಕಟ್ಟಿಹಾಕಿ ಹಲ್ಲೆ ನಡೆಸಿದ್ದು, ಘಟನೆ ಸಂಬಂಧ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಂಬಕ್ಕೆ ಕಟ್ಟಿ ಹಾಕಿ ರಕ್ತ ಚಿಮ್ಮುವಂತೆ ಯುವಕರ ತಂಡವು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.ಈ ಘಟನೆ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಮಹಮ್ಮದ್ ಸಪ್ಪಾನ್ ,ಮಹಮ್ಮದ್ ರಿಜ್ವಾನ್, ಇರ್ಪಾನ್, ಅನೀಸ್ ಅಹಮ್ಮದ್, ನಾಸೀರ್‌ ,ಶಾಕೀರ್‌ ಬಂಧಿಸಲಾಗಿದ್ದು. ಕೊಲೆಯತ್ನ ಪ್ರಕರಣ ದಾಖಲಾಗಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Read More