ಅಮರಾವತಿ: ತಿರುಮಲ ಶ್ರೀವರಿ ಲಡ್ಡುವಿನಲ್ಲಿ ಬಳಸುವ ತುಪ್ಪದ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ನಾಲ್ವರು ವ್ಯಕ್ತಿಗಳನ್ನು ಬಂಧಿಸಿದೆ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಮೂಲಗಳು ತಿಳಿಸಿವೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಸಿಬಿಐ, ಈ ವಿಷಯದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಬಂಧಿತ ವ್ಯಕ್ತಿಗಳು ತಿರುಮಲ ತಿರುಪತಿ ದೇವಸ್ಥಾನಗಳಿಗೆ (ಟಿಟಿಡಿ) ತುಪ್ಪ ಪೂರೈಸುವ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ, ಇದರಲ್ಲಿ ತಮಿಳುನಾಡಿನ ಎಆರ್ ಡೈರಿ, ಉತ್ತರ ಪ್ರದೇಶದ ಪರಾಗ್ ಡೈರಿ, ಪ್ರೀಮಿಯರ್ ಅಗ್ರಿ ಫುಡ್ಸ್ ಮತ್ತು ಆಲ್ಫಾ ಮಿಲ್ಕ್ ಫುಡ್ಸ್ ಸೇರಿವೆ ಎಂದು ಟಿಡಿಪಿ ತಿಳಿಸಿದೆ. ಬಂಧಿತರನ್ನು ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು ಪೋಮಿಲ್ ಜೈನ್, ವೈಷ್ಣವಿ ಡೈರಿಯ ಅಪೂರ್ವ ಚಾವ್ಡಾ ಮತ್ತು ಎಆರ್ ಡೈರಿಯ ರಾಜು ರಾಜಶೇಖರನ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಧಿತರಲ್ಲಿ ಭೋಲೆ ಬಾಬಾ ಡೈರಿಯ (ರೂರ್ಕಿ, ಉತ್ತರಾಖಂಡ) ಮಾಜಿ…
Author: main-admin
ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡ ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಹನ್ನೆರಡರ ಹರೆಯದ ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನಗರಿಯನ್ನು ಹೊರತೆಗೆದು ಬಾಲಕನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ಸಾಂ ಮೂಲದ ಬಾಲಕ ಕಮಲ್ ಹಸನ್ (12 ವ) ಚಿಕಿತ್ಸೆಯಿಂದಾಗಿ ಪ್ರಾಣಾಪಾಯದಿಂದ ಪಾರಾದ ಬಾಲಕ. ಕೊಡಗು ಜಿಲ್ಲೆಯ ಮಡಿಕೇರಿಯ ಕಾಫಿ ಎಸ್ಟೇಟ್ ಒಂದರಲ್ಲಿ ಬಾಲಕ ಕಮಲ್ ಹಸನ್ ಹೆತ್ತವರುಕೂಲಿ ಕೆಲಸ ಮಾಡುತ್ತಿದ್ದರು. ಬಾಲಕ ಮನೆ ಬಳಿ ಶನಿವಾರ ಸಂಜೆ ಆಟವಾಡುತ್ತಿದ್ದಾಗ ಘಟನೆ ನಡೆದಿದೆ. ಈತ ಕತ್ತರಿಸಲ್ಪಟ್ಟ ತೆಂಗಿನ ಗರಿಯ ಮೇಲೆ ಬಿದ್ದ ರಬಸಕ್ಕೆ ತೆಂಗಿನ ಗರಿಯು ಬಾಲಕನ ಕುತ್ತಿಗೆಯಲ್ಲಿ ಹಾಕಿಕೊಂಡಿದ್ದ ಸ್ಪೀಲ್ ಚೈನ್‌ನೊಂದಿಗೆ ಎದೆಯ ಒಳಗಡೆಗೆ ಹೊಕ್ಕಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಬಾಲಕನನ್ನು ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆ ತರಲಾಗಿತ್ತು ಎನ್ನಲಾಗಿದೆ. ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಬಾಲಕ ಕಮಲ್ ಹಸನ್‌ನನ್ನು ಮಧ್ಯರಾತ್ರಿ ಹೊತ್ತಿಗೆ ದಾಖಲಿಸಲಾಗಿತ್ತು. ದೇಹಕ್ಕೆ ತೆಂಗಿನ…
ಮಂಗಳೂರು: ನಗರದ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್‌ಸ್ಟೇಬಲ್ ಹರೀಶ್ ಅವರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬುಧವಾರ ಸುಳ್ಯ ಬಳಿ ರಸ್ತೆ ಅಪಘಾತದಲ್ಲಿ ಹರೀಶ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಜೀವನ್ಮರಣ ಸ್ಥಿತಿಯಲ್ಲಿ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ರವಿವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹರೀಶ್ ಅವರು ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕು ಗಾಯನ ಹಳ್ಳಿ ಗ್ರಾಮದ ನಿವಾಸಿಯಾಗಿದ್ದರು.
ತವರು ಮನೆಗೆ ಹೋಗಿದ್ದಕ್ಕೆ ಸಿಟ್ಟಾದಂತ ಪತಿಯೊಬ್ಬ, ಆಕೆಯ ಊರಿಗೆ ತೆರಳಿ ಚಾಕುವಿನಿಂದ ಹಲ್ಲೆ ಮಾಡಿರುವಂತ ಘಟನೆ ಧಾರವಾಡದ ಗರಗದಲ್ಲಿ ನಡೆದಿದೆ. ಧಾರವಾಡದ ಬನಶ್ರೀ ನಗರದಲ್ಲಿ ರೂಪ ಹಾಗೂ ಬಸವರಾಜ ಅವ್ವಣ್ಣನವರ್ ವಾಸವಿದ್ದರು. ಪತ್ನಿಯ ಬಗ್ಗೆ ಸದಾ ಅನುಮಾನಗೊಳ್ಳುತ್ತಿದ್ದರಿಂದ ಮನೆಯನ್ನು ಬಿಟ್ಟು ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ತವರು ಮನೆಗೆ ಪತ್ನಿ ರೂಪಾ ತೆರಳಿದ್ದರು. ಒಂದು ವಾರದಿಂದ ರೂಪ ತನ್ನ ತವರು ಮನೆಯಲ್ಲೇ ಇದ್ದಿದ್ದರಿಂದ ಸಿಟ್ಟಾದಂತ ಪತಿ ಬಸವರಾಜ ಇಂದು ಅವರ ತವರು ಮನೆಯಾದಂತ ಗರಗಕ್ಕೆ ತೆರಳಿದ್ದಾನೆ. ಪತ್ನಿ ರೂಪಾ ಜೊತೆಗೆ ಜಗಳಕ್ಕೆ ಇಳಿದಂತ ಜಗಳ ತೀವ್ರಗೊಂಡ ವೇಳೆಯಲ್ಲಿ ಪತ್ನಿಗೆ ಜಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇದನ್ನು ಬಿಡಿಸೋದಕ್ಕೆ ಹೋದಂತ ಅತ್ತೆ ಯಲ್ಲವಮ್ಮ ಎಂಬುವರ ಮೇಲೂ ಹಲ್ಲೆ ಮಾಡಿದ್ದಾರೆ. ಬಸವರಾಜ್ ಚಾಕುವಿನಿಂದ ಮಾಡಿದಂತ ಹಲ್ಲೆಯಿಂದ ರೂಪಾ, ಯಲ್ಲವ್ವ ಗಾಯಗೊಂಡಿದ್ದಾರೆ. ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಧಾರವಾಡದ ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಕುವಿನಿಂದ ಹಲ್ಲೆ ಮಾಡಿದಂತ ಬಸವರಾಜನನ್ನು ಬಂಧಿಸಲಾಗಿದೆ.
ಕಾರವಾರ: ಒಂದೂವರೆ ವರ್ಷದ ಹಿಂದೆ ಕಾರವಾರದಲ್ಲಿ ಮೀನುಗಾರರ ಬಲೆಗೆ ಸಿಕ್ಕಿದ್ದ ಬಂಗುಡೆ (ಇಂಡಿಯನ್ ಮಾಕ್ರೆಲ್) ಮೀನು ಅಂತಿತಹದ್ದಲ್ಲ. ದೇಶದಲ್ಲಿಯೇ ಅತಿ ದೊಡ್ಡ ಬಂಗುಡೆ ಮೀನು ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ. ಆ ಮೀನನ್ನು ಕಾರವಾರದಲ್ಲಿ ಸಂರಕ್ಷಿಸಿ ಇಡಲಾಗಿದೆ. ಬೈತಖೋಲದ ಆನಂದ ಹರಿಕಂತ್ರ ಅವರ ಬಲೆಗೆ ಈ ಬಂಗಡೆ ಸಿಕ್ಕಿತ್ತು. ಇಂಗ್ಲಿಷ್‌ನಲ್ಲಿ `ಇಂಡಿಯನ್ ಮಾಕ್ರೆಲ್’ ಎಂದು ಕರೆಯುವ ಬಂಗುಡೆಯು 48 ಸೆಂ.ಮೀ. ಉದ್ದ, 1.230 ಕೆ.ಜಿ. ತೂಕವಿದೆ. ಇದು ಹೆಣ್ಣು ಬಂಗುಡೆ ಎಂದು ಗುರುತಿಸಲಾಗಿದೆ. ಮೀನಿನ ಬಗ್ಗೆ ಕಾರವಾರದ ಸಾಗರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಂಶೋಧನೆ ನಡೆಸಿ, ಇದು ಅತಿ ದೊಡ್ಡ ಬಂಗುಡೆ ಎಂದು ಖಚಿತಪಡಿಸಿದ್ದಾರೆ. ಕೇಂದ್ರ ಸರಕಾರದ ಕಡಲ ಮೀನು ಸಂಶೋಧನಾ ಸಂಸ್ಥೆ (ಸಿಎಂಎಫ್‌ಆರ್‌ಐ) ಕೂಡ ಇದನ್ನು ಪ್ರಕಟಿಸಿದೆ.
ಕಾರ್ಕಳ : ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳ ವಲಯದ ನೂರಾಲ್‌ಬೆಟ್ಟು ಗ್ರಾಮದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಇಬ್ಬರನ್ನು ಕಾರ್ಕಳ ವನ್ಯಜೀವಿ ವಲಯದ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತರಿಂದ 1 ಬಂದೂಕು, 21 ಕಾಡತೂಸು, 1 ಸರ್ಚ್‌ಲೈಟ್ 2 ಮೊಬೈಲ್ ಫೋನ್ , ಆರೋಪಿಗಳು ಬಳಸಿದ್ದ ಕಾರು ಮತ್ತು 1 ಆಟೋರಿಕ್ಷಾ ವಶಕ್ಕೆ ಪಡೆಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಪ್ರಶಾಂತ್ ಪೂಜಾರಿ ಮತ್ತು ಅಶೋಕ್ ಪೂಜಾರಿ ಎಂದು ಗುರುತಿಸಲಾಗಿದೆ. ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳದ ಉಪಅರಣ್ಯ ಸಂರಕ್ಷಣಾಧಿಕಾರಿ ಶಿವರಾಮು ಬಾಬು ಅವರ ನಿರ್ದೇಶನದಂತೆ, ಕುದುರೆಮುಖ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.
ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ ಗೋವನ್ನು ಸಾಗಾಟ ಮಾಡುತ್ತಿದ್ದವರನ್ನು ಬಜರಂಗದಳ ಕಾರ್ಯಕರ್ತರು ತಡೆದು ಗೋವುನ್ನು ರಕ್ಷಿಸಿದ ಘಟನೆ ದಾರಂದಕುಕ್ಕು ಎಂಬಲ್ಲಿ ನಡೆದಿದೆ. ಗೋವನ್ನು ಪಿಕಪ್ ನಲ್ಲಿ ಸಾಗಿಸುತ್ತಿದ್ದನ್ನು ಕಂಡ ಬಜರಂಗದಳ ಕಾರ್ಯಕರ್ತರು ವಾಹನವನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಬಂದ ಪೊಲೀಸರು ಪಿಕಪ್ ವಾಹನ ಮತ್ತು ಓರ್ವನನ್ನು ವಶಕ್ಕೆ ಪಡೆದಿದ್ದು ಗೋವನ್ನು ಸುರಕ್ಷಿತವಾಗಿ ದೇವಳದ ಗೋಶಾಲೆಗೆ ಸ್ಥಳಾಂತರಿಸಲಾಗಿದೆ.
ನವದೆಹಲಿ : ಅನೇಕ ಜನರು ಮನೆಯಲ್ಲಿ ಬಳಸಬಹುದಾದ ಹಿಮಾಲಯನ್ ಉಪ್ಪಿನ ಬಳಕೆಯು ಅವರ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಈ ಸಮಯದಲ್ಲಿ ಯಾರೂ ಅದನ್ನು ಬಳಸಬಾರದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ. ಇದರರ್ಥ ಈ ಉಪ್ಪಿನಲ್ಲಿ ಸಾಕಷ್ಟು ಅಯೋಡಿನ್ ಇಲ್ಲ ಮತ್ತು ಅಯೋಡೈಸ್ಡ್ ಲವಣಗಳ ಬಳಕೆಯು ದೇಹದಲ್ಲಿ ಅಯೋಡಿನ್ ಕೊರತೆಗೆ ಕಾರಣವಾಗಬಹುದು ಎಂದು ತಮಿಳುನಾಡು ಆರೋಗ್ಯ ಇಲಾಖೆ ಒತ್ತಿಹೇಳಿದೆ. ಅಯೋಡಿನ್ ಕೊರತೆ ತಡೆಗಟ್ಟುವಿಕೆಗಾಗಿ ರಾಷ್ಟ್ರೀಯ ಕಾರ್ಯಕ್ರಮದ ಸಮನ್ವಯ ಸಮಿತಿಯ ಇತ್ತೀಚಿನ ಸಭೆಯಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಮತ್ತು ಅಯೋಡಿನ್ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಜಾಹೀರಾತುಗಳು ಹಿಮಾಲಯನ್ ಉಪ್ಪಿನ ಆಹಾರದ ಬಗ್ಗೆ ಸಾಕಷ್ಟು ಮಾತನಾಡುವುದರಿಂದ, ಇದು ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನ ಹೊಂದಿರುತ್ತದೆ ಎಂದು ಜನರು ನಂಬುತ್ತಾರೆ ಮತ್ತು ಆದ್ದರಿಂದ ಇದನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಹಿಮಾಲಯನ್ ಉಪ್ಪಿನಲ್ಲಿ ಸಾಮಾನ್ಯವಾಗಿ ಅಯೋಡಿನ್ ಹೆಚ್ಚಾಗಿರುವುದಿಲ್ಲ ಮತ್ತು ಅದನ್ನು ತಿನ್ನುವುದರಿಂದ ಜನರಿಗೆ ಆರೋಗ್ಯ ಸಮಸ್ಯೆಗಳು…
ಮಂಗಳೂರು : ಮೂರು ಕಳವು ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಲಯಕ್ಕೆ ಹಾಜರಾಗದೆ 12 ತಲೆಮರೆಸಿಕೊಂಡ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕಿನ ಕೋನಾಲು ನಿವಾಸಿ ಅಬ್ದುಲ್ ಹಮೀದ್(50) ಬಂಧಿತ ಆರೋಪಿ. 1999ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಗೂ 2012ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 3 ಕಳವಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಬ್ದುಲ್ ಹಮೀದ್ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ. ಆ ಬಳಿಕ ವಿಚಾರಣೆಗೆ ಹಾಜರಾಗದೇ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಇದೀಗ ಆರೋಪಿಯನ್ನು ಧರ್ಮಸ್ಥಳದ ಬಳಿಯಲ್ಲಿ ವಶಕ್ಕೆ ದಸ್ತಗಿರಿ ಮಾಡುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಆತನನ್ನು ಮುಂದಿನ ಕ್ರಮಕ್ಕಾಗಿ ಸಿಸಿಬಿ ಪೊಲೀಸರು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ.
ಮಂಗಳೂರು: ನಗರದ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯ ರಸ್ತೆಯಲ್ಲಿ ಫೆಬ್ರವರಿ 7 ರಂದು ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಕೆಎ-02ಎಸಿ 5994 ನೊಂದಣೆ ಸಂಖ್ಯೆಯ ವಾಹನದಲ್ಲಿದ್ದ ವಿವಿದ ಜಾತಿಯ 26 ದಿಮ್ಮಿಗಳನ್ನು ಸೇರಿ ಒಟ್ಟು 6 ಲಕ್ಷ ಬೆಲೆಬಾಳುವ ಸೊತ್ತುಗಳನ್ನು ಸರಕಾರದ ಪರ ಅಮಾನತು ಪಡಿಸಿ, ಕುಂದಾಪುರ ತಾಲೂಕಿನ ಮೊಹಮ್ಮದ್ ಸಿರಾಜ್ ಎಂಬವರ ವಿರುದ್ಧ ಮಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಪತ್ತೆಹಚ್ಚಿ ಅರಣ್ಯ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ್, ವಲಯ ಅರಣ್ಯ ಅಧಿಕಾರಿ(ಪ್ರಭಾರ) ಪ್ರಶಾಂತ್, ಉಪ ವಲಯ ಅರಣ್ಯ ಅಧಿಕಾರಿ ಶಿವಾನಂದ ಸದೇಪ ಮಾದರ, ಉಪ ವಲಯ ಅರಣ್ಯ ಅಧಿಕಾರಿ ವಿನಯ ಕುಮಾರ್, ವಾಹನ ಚಾಲಕರು ಜಯಪ್ರಕಾಶ್ ಕೆ, ಮತ್ತು ಜಯಪ್ರಕಾಶ್ ಭಾಗವಹಿಸಿದ್ದರು. ಮಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಕಾಂತ್ ಎಂ.ಖಣದಾಳಿ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಪ್ರಭಾರ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಇವರು ಮುಂದಿನ ತನಿಖೆಯನ್ನು…










