Author: main-admin

ಮಂಗಳೂರು : ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸೋದರ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎ ಒನ್ ಆರೋಪಿ ಆಗಿರುವ ರೆಹಮದ್ ಅಲಿಯಾಸ್ ಆಯೇಷಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು: ಮಾಜಿ ಶಾಸಕ ಮೊಯ್ದೀನ್ ಬಾವ ಸೋದರ, ಹೆಸರಾಂತ ಉದ್ಯಮಿ ಮುಮ್ತಾಜ್ ಆಲಿ ನಿಗೂಢ ಸಾವಿಗೆ ಬ್ಲಾಕ್ಮೇಲ್ ಮತ್ತು ಹನಿಟ್ರ್ಯಾಪ್ ಜಾಲವೇ ಕಾರಣ ಎನ್ನಲಾಗುತ್ತಿದೆ. ಆರೋಪಿಗಳ ಪತ್ತೆಗಾಗಿ ಮಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಸೂತ್ರಧಾರೆ ಎನ್ನಲಾದ ಮಹಿಳೆ, ಆಕೆಯ ಪತಿ ಮತ್ತು ಇನ್ನೊಬ್ಬ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಮುಮ್ತಾಜ್ ಸಾವಿಗೆ ಆರು ಮಂದಿಯ ತಂಡ ನಡೆಸಿದ ಬ್ಲಾಕ್ಮೇಲ್ ಕಾರಣ ಎಂದು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಮಂಗಳೂರು ಸಿಸಿಬಿ ಪೊಲೀಸರು ಸೇರಿದಂತೆ ಎರಡು ವಿಶೇಷ ತಂಡ ತನಿಖೆ ಆರಂಭಿಸಿದ್ದಾರೆ. ಪ್ರಕರಣ ಸಂಬಂಧಿಸಿ ಪೊಲೀಸರು ಆಯೆಷಾ…

Read More

ಬ್ರಹ್ಮಾವರ : ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯೋರ್ವರ ಅಂತ್ಯಕ್ರಿಯೆಯನ್ನು ಪೊಲೀಸರಿಗೆ ಮಾಹಿತಿ ನೀಡದೆ ನೆರವೇರಿಸಿದ ಕಾರಣ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುದಿ ಗ್ರಾಮದ ಬಿಯಾಳಿಯ ಸುಬ್ರಾಯ ನಾಯ್ಕ (66) ಸೆ. 27ರಂದು ಸೀತಾ ನದಿ ಸಮೀಪ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಾವು ಅಸ್ವಾಭಾವಿಕ ಆಗಿದ್ದರೂ ಪೊಲೀಸ್‌ ಠಾಣೆ ಅಥವಾ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡದೆ ಹಿರಿಯ ಪುತ್ರ ಸೀತಾರಾಮ ನಾಯ್ಕ ಅಂತ್ಯಕ್ರಿಯೆ ನೆರವೇರಿಸಿದ್ದರು. ಹಿರಿಯ ಪುತ್ರ ಸೀತಾರಾಮ ನಾಯ್ಕ ಯಾರಿಗೂ ಮಾಹಿತಿ ನೀಡದೆ ದಹನ ಕ್ರಿಯೆ ನೆರವೇರಿಸಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಇನ್ನು ಸುಬ್ರಾಯ ನಾಯ್ಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.

Read More

ಬಂಟ್ವಾಳ: ಬಿ.ಸಿ.ರೋಡಿನ ಗಾಣದಪಡ್ಪಿನಲ್ಲಿ ಯುವಕನೋರ್ವ ತಾನು ಕೆಲಸ ಮಾಡುತ್ತಿದ್ದ ಟಯರ್‌ ರಿಸೋಲ್‌ ಅಂಗಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕ ಬಿಹಾರದ ಮೂತಿಹಾರ್‌ ಜಿಲ್ಲೆಯ ಬ್ರಾಮಿಪುರ ನಿವಾಸಿ ಸಂದೀಪ್‌ ಕುಮಾರ್‌ (20) ಎಂದು ತಿಳಿದು ಬಂದಿದೆ. ಅವರು 3 ವರ್ಷಗಳಿಂದ ತನ್ನ ಮಾವ ಕೆಲಸ ಮಾಡುತ್ತಿದ್ದ ಟಯರ್‌ ರಿಸೋಲ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಜೆ ಇದ್ದು, ಮಾವನ ಮನೆಗೆ ಊಟಕ್ಕೆ ಬಾರದೇ ಇರುವುದರಿಂದ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಬಳಿಕ ಅಂಗಡಿಗೆ ಹೋಗಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಹೆಳಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಇಂದು, ವೇಗವಾಗಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಹೃದಯಾಘಾತದಂತಹ ಗಂಭೀರ ಕಾಯಿಲೆಗಳು ಹೆಚ್ಚುತ್ತಿವೆ. ಈ ಹಿಂದೆ, ಹೃದಯಾಘಾತವನ್ನು ವಯಸ್ಸಾದವರಿಗೆ ಮಾತ್ರ ಸಮಸ್ಯೆ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಯುವಕರು ಸಹ ಇದಕ್ಕೆ ಬಲಿಯಾಗುತ್ತಿದ್ದಾರೆ. ತೊಂದರೆಗೊಳಗಾದ ದಿನಚರಿ, ಅನಾರೋಗ್ಯಕರ ಆಹಾರ, ದೈಹಿಕ ಚಟುವಟಿಕೆಯ ಕೊರತೆ ಹೃದಯದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ.ವೈದ್ಯಕೀಯ ತಜ್ಞರ ಪ್ರಕಾರ, ಈ ಕಾರಣದಿಂದಾಗಿ ಹೃದಯಾಘಾತದ ಅಪಾಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಕೆಲವೊಮ್ಮೆ ಬೆನ್ನು ನೋವಿನಂತಹ ದೇಹದ ಇತರ ಭಾಗಗಳಲ್ಲಿನ ನೋವು ಸಹ ಹೃದಯಾಘಾತದ ಸಂಕೇತವಾಗಿರಬಹುದು. ಮತ್ತು ಬೆನ್ನು ನೋವು ಮತ್ತು ಹೃದಯಾಘಾತದ ನಡುವಿನ ಸಂಬಂಧವೇನು ಎಂದು ತಿಳಿದುಕೊಳ್ಳುವುದು ಮುಖ್ಯ. ಹೃದಯಾಘಾತ ಏಕೆ ಸಂಭವಿಸುತ್ತದೆ ಎಂಬುದನ್ನು ಮೊದಲು ಕಂಡುಹಿಡಿಯೋಣ. ಹೃದಯದ ಸ್ನಾಯುವು ಸಾಕಷ್ಟು ರಕ್ತವನ್ನು ಸ್ವೀಕರಿಸದಿದ್ದಾಗ ಮತ್ತು ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಹೃದಯಾಘಾತ ಸಂಭವಿಸುತ್ತದೆ. ಸಾಕಷ್ಟು ರಕ್ತ ಸಿಗದಿರಲು ಮುಖ್ಯ ಕಾರಣವೆಂದರೆ ರಕ್ತನಾಳಗಳಲ್ಲಿ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಸಂಗ್ರಹವಾಗುವುದು. ವಯಸ್ಸು, ಧೂಮಪಾನ, ಮದ್ಯಪಾನ, ಮಧುಮೇಹ, ಬೊಜ್ಜು, ಒತ್ತಡ, ಆನುವಂಶಿಕ…

Read More

ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ (ITBP) ಕಾನ್ಸ್‌ಟೇಬಲ್ (ಚಾಲಕ) ಹುದ್ದೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 8 ರ ಇಂದಿನಿಂದ recruitment.itbpolice.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು:ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 08.10.2024ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 06.11.2024 ಮಾಸಿಕ ಸಂಬಳ:ಕಾನ್ಸ್ಟೇಬಲ್ (ಚಾಲಕ) ಹುದ್ದೆಗೆ ಕೇಂದ್ರ ಸರ್ಕಾರದ ವೇತನ ಮಾನದಂಡದ ಪ್ರಕಾರ, ಪೇ ಮ್ಯಾಟ್ರಿಕ್ಸ್ ಲೆವೆಲ್ 3 ಪಾವತಿಸಬೇಕಾಗುತ್ತದೆ. 21,700 – 69,100 / – ಪಾವತಿಸಲಾಗುವುದು. ಇದಲ್ಲದೆ.. ಕೇಂದ್ರ ಸರ್ಕಾರಿ ನೌಕರರಿಗೆ ಇತರ ಭತ್ಯೆಗಳು ಮತ್ತು ಪ್ರಯೋಜನಗಳು ಸಹ ಲಭ್ಯವಿರುತ್ತವೆ. ಖಾಲಿ ಹುದ್ದೆಗಳು:ಒಟ್ಟು 545 ಹುದ್ದೆಗಳು ಖಾಲಿ ಇವೆ.ಯೂನಿವರ್ಸಲ್ (UR): 209ಎಸ್ಸಿ (ಎಸ್ಸಿ): 77ಎಸ್ಟಿ: 40ಒಬಿಸಿ: 164ಇಡಬ್ಲ್ಯೂಎಸ್ : 55 ವಯಸ್ಸಿನ ಮಿತಿ:ಕನಿಷ್ಠ 21 ವರ್ಷಗಳುಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಗರಿಷ್ಠ 27 ವರ್ಷ ವಯಸ್ಸಿನ ಮಿತಿಯನ್ನು ಸಡಿಲಿಸಬಹುದು. ಹುದ್ದೆಗಳ ವಿವರ ಮತ್ತು ಅರ್ಹತೆ:ಹುದ್ದೆ…

Read More

ಮೂಲ್ಕಿ:  ತಾಯಿ-ಮಕ್ಕಳ ರಕ್ಷಣೆ ಕಾರಿನಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡು ಉರಿದ ಘಟನೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಪೇಟೆಯಲ್ಲಿ ಸಂಭವಿಸಿದೆ. ಕಾರೊಂದಕ್ಕೆ ಆಕಸ್ಮತ್ ಬೆಂಕಿ ತಗುಲಿಗಿದ ಘಟನೆ ಕಿನ್ನಿಗೋಳಿ ಮುಖ್ಯ ರಸ್ತೆಯ ಮಾರುಕಟ್ಟೆ‌ಮುಂಭಾಗ ನಡೆದಿದೆ. ಮಕ್ಕಳು ಹಾಗೂ ತಾಯಿಯನ್ನು ಕಾರಿನಲ್ಲಿ ಕೂರಿಸಿ AC ಹಾಕಿ ಬೇಕರಿಗೆ ಹೋದ ಸಂಧರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ನಿವಾಸಿ ಜಾಸ್ಮಿನ್ ಅವರು ಮತ್ತೊರ್ವ ಮಹಿಳೆ‌ ಮತ್ತು ಎರಡು‌ ಮಕ್ಕಳೊಂದಿಗೆ ಕಿನ್ನಿಗೋಳಿ‌ ಮಾರುಕಟ್ಟೆ ಮುಂಭಾಗ ಕಾರು ನಿಲ್ಲಿಸಿ ಹೋದ ಸಂದರ್ಭ ಕಾರಿನಲ್ಲಿ ಹೊಗೆ ಬರಲಾರಂಭಿಸಿದೆ. ಕಾರಿನಲ್ಲಿದ್ದ ಮಹಿಳೆ ಮತ್ತು ಎರಡು ಮಕ್ಕಳು ಬೊಬ್ಬೆ ಹಾಕಿದ್ದು ಕೂಡಲೇ ಸ್ಥಳೀಯರು ಸೇರಿ ಕಾರಿನಲ್ಲಿದ್ದವರನ್ನು ಅಪಾಯದಿಂದ ಪಾರು‌ಮಾಡಿದ್ದಾರೆ. ಸ್ಥಳಿಯ ಅಂಗಡಿ‌ಮಾಲಿಯ ರಾಘವೇಂದ್ರ ಪ್ರಭು ಸ್ಥಳೀಯ ಪ್ರೆಟ್ರೋಲ್ ಪಂಪ್ ನಿಂದ ಅಗ್ನಿ ಶಮನದ ಸಾಧನದ ಮೂಲಕ, ಸ್ಥಳಿಯರೊಂದಿಗೆ ಸೇರಿ ಬೆಂಕಿ ನಂದಿಸಿದ್ದಾರೆ. ಕಾರು ಸಂಪೂರ್ಣ ಸುಟ್ಟು ಹೋಗಿದ್ದರಿಂದ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.

Read More

ಮಂಗಳೂರು: ಮಂಗಳೂರು ನಗರ ಸೇರಿದಂತೆ ಇತರ ರಾಜ್ಯಗಳಿಗೆ ಎಂಡಿಎಂಎ ಮಾದಕದ್ರವ್ಯ ಪೂರೈಕೆ ಮಾಡುತ್ತಿದ್ದ ನೈಜಿರಿಯಾ ಪ್ರಜೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ 6 ಕೋಟಿ ಮೌಲ್ಯದ 6.300 ಕೆಜಿ ಎಂಡಿಎಂಎಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಬೆಂಗಳೂರಿನ ದೊಮ್ಮಸಂದ್ರದ ವಿವೇಕಾನಂದ ನಗರದಲ್ಲಿ ವಾಸವಿರುವ ಪೀಟರ್ ಇಕೆಡಿ ಬೆಲೊನ್ವು(38) ಎಂಬ ನೈಜೀರಿಯಾ ಪ್ರಜೆ ಬಂಧಿತ ಆರೋಪಿ ಸೆಪ್ಟೆಂಬರ್ 29ರಂದು ನಗರದ ಪಂಪ್‌ವೆಲ್ ಬಳಿ ಎಂಡಿಎಂಎ ಮಾದಕದ್ರವ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ತೊಕ್ಕೊಟ್ಟು, ಪರ್ಮನ್ಬೂರು ನಿವಾಸಿ ಹೈದರ್ ಅಲಿ(51) ಎಂಬಾತನನ್ನು ಬಂಧಿಸಿ 75,000ರೂ. ಮೌಲ್ಯದ 15ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದರು. ಪ್ರಕರಣದ ತನಿಖೆಯನ್ನು ಮಂಗಳೂರು ಸಿಸಿಬಿ ಘಟಕಕ್ಕೆ ಹಸ್ತಾಂತರಿಸಲಾಗಿತ್ತು. ಸಿಸಿಬಿ ಪೊಲೀಸರು ಮಾದಕದ್ರವ್ಯ ಪೂರೈಕೆ ಮಾಡುವ ಡ್ರಗ್ಸ್ ಪೆಡ್ಲರ್‌ಗಳ ಹಿಂದೆ ಬಿದ್ದು ತನಿಖೆ ಕೈಗೊಂಡಿದ್ದರು. ಆಗ ಮಾದಕದ್ರವ್ಯ ಪೂರೈಕೆ ಮಾಡುವ ವ್ಯಕ್ತಿ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ನೈಜೀರಿಯಾ ದೇಶದ ಪ್ರಜೆ ಎಂದು ತಿಳಿದುಬಂದಿದೆ. ಅದರಂತೆ ಸಿಸಿಬಿ ಪೊಲೀಸರು ಬೆಂಗಳೂರು ನಗರದ…

Read More

ಮಂಗಳೂರು: ಬಡಗ ಎಡಪದವು ಚಟ್ಟೆಪಾದೆಯ ದಡ್ಡಿ ರೋಡ್‌ನ ನಿವಾಸಿ ರಮೇಶ್ ಕುಲಾಲ್ ಗುರುಪುರ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿದ್ದು ಇಂದು ಮೃತದೇಹ ಪತ್ತೆಯಾಗಿದೆ. ಬಡಗ ಎಡಪದವು ಚಟ್ಟೆಪಾದೆಯ ದಡ್ಡಿ ರೋಡ್‌ನ ರಮೇಶ್ ಕುಲಾಲ್ (48) ಶನಿವಾರ ರಾತ್ರಿ 8ಕ್ಕೆ ಬಸ್ಸಿನಲ್ಲಿ ಗುರುಪುರ ಸೇತುವೆ ಬಳಿ ಆಗಮಿಸಿ ಸೇತುವೆ ಮೇಲೆ ಮೊಬೈಲ್ ಮತ್ತು ಚಪ್ಪಲಿಯನ್ನಿಟ್ಟು ನದಿಗೆ ಹಾರಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ನಾಪತ್ತೆಯಾದ ವ್ಯಕ್ತಿಗಾಗಿ ಹುಡುಕಾಟ ನಡೆಸಿದರು. ರಮೇಶ್ ಶನಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಮೇಶ್ ಮಂಗಳೂರಿನ ಇನ್‌ಲ್ಯಾಂಡ್ ಕಂಪೆನಿಯಲ್ಲಿ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ರಮೇಶ್‌ಗಾಗಿ ಫಲ್ಗುಣಿ ನದಿಯಲ್ಲಿ ಕಾರ್ಯಾಚರಣೆ ನಡೆಸಿ ಎರಡು ದಿನಗಳ ಬಳಿಕ ಇಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಮೃತದೇಹವನ್ನು ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ಪತ್ತೆಹಚ್ಚಿದರು.

Read More

ಮಂಗಳೂರು : ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸಹೋದರ ಮುಮ್ತಾಜ್ ಅಲಿ ಮೃತದೇಹ ಪತ್ತೆಯಾಗಿದೆ. ನಿನ್ನೆ ಮುಂಜಾನೆ 3 ಗಂಟೆ ಸುಮಾರಿಗೆ ಮನೆಯಿಂದ ಹೋಗಿರುವ ಮುಮ್ತಾಜ್ ಅವರ ಕಾರು ಕುಳೂರಿನ ಸೇತುವೆ ಮೇಲೆ ಪತ್ತೆಯಾಗಿತ್ತು. ಕಾರು ಡ್ಯಾಮೇಜ್ ಆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅಗರ್ವಾಲ್ ಭೇಟಿ ನೀಡಿದ್ದಾರೆ. ನದಿಯಲ್ಲಿ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ತಂಡಗಳಿಂದ ನಿನ್ನೆಯಿಂದ ತಪಾಸಣೆ ನಡೆಸಲಾಗಿತ್ತು. ಆದರೆ ಇಂದು ನದಿಯಲ್ಲಿ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ

Read More

ಉಡುಪಿ : ಹೆಬ್ರಿಯಲ್ಲಿ ಭಾನುವಾರ ಮೇಘಸ್ಫೋಟ ಸಂಭವಿಸಿದ್ದು, ಧಾರಾಕಾರ ಮಳೆ ಸುರಿದು ಹಠಾತ್ ಜಲ ಪ್ರವಾಹ ಉಂಟಾಗಿದೆ. ಈ ಪ್ರವಾಹದಲ್ಲಿ ಹಲವು ವಾಹನಗಳು, ಜಾನುವಾರು ಮತ್ತು ವೃದ್ಧೆಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಮಧ್ಯಾಹ್ನ ಒಂದೇ ಸಮನೆ ಸುರಿದ ಮಳೆಗೆ ಗುಮ್ಮ ಗುಂಡಿ ನದಿ ನೀರು ಉಕ್ಕಿ ಹರಿದಿದ್ದು, ಬಲ್ಲಾಡಿ, ಕಂತಾರ್‌ಬೈಲು ಗ್ರಾಮದ ಜನರು ತತ್ತರಿಸಿ ಹೋಗಿದ್ದಾಾರೆ. ಧಿಡೀರ್ ಸುರಿದ ಮಳೆಗೆ ಗ್ರಾಮದ ಕೆಲವು ಮನೆಗಳು ಜಲಾವೃತಗೊಂಡಿದ್ದು, ಒಂದು ಕಾರು, 15ಕ್ಕೂ ಹೆಚ್ಚು ದನಕರುಗಳು, ಅಡಿಕೆ ಮರಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅಪಾರ ನಷ್ಟ ಉಂಟಾಗಿದೆ. ಧಿಡೀರ್ ಸುರಿದ ಧಾರಾಕಾರ ಮಳೆಯಿಂದ ತತ್ತರಿಸಿ ಹೋದ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಸ್ಥಳೀಯರು, ಅಧಿಕಾರಿಗಳು ಆಗಮಿಸಿದ್ದರು. ಇನ್ನು ಈ ದಿಢೀರ್ ಮೇಘಸ್ಫೋಟದಿಂದ ಪ್ರವಾಹ ಉಂಟಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

Read More