Author: main-admin

ಮೂಲ್ಕಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಎಲ್‌ಎಸ್‌ಡಿ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತರಿಂದ ಕಾರು ಹಾಗೂ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಹಳೆಯಂಗಡಿ ಬಳಿಯ ಕೊಪ್ಪಳ ಸಮೀಪದಲ್ಲಿ ವಾಸ್ತವ್ಯವಿದ್ದ ಅದಿಲ್‌ ಮತ್ತು ಮಹಮ್ಮದ್‌ ನಿಹಾಲ್‌ ಬಂಧಿತರು. ಖಚಿತ ಮಾಹಿತಿ ಆಧಾರದಲ್ಲಿ ಮೂಲ್ಕಿ ಪಿಎಸ್‌ಐ ಅನಿತಾ ಎಚ್‌.ಬಿ. ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ಮಂಗಳೂರು ಹೊರವಲಯದ ಕಾಲೇಜೊಂದರ ವಿದ್ಯಾರ್ಥಿಗಳಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ

Read More

ಮಂಗಳೂರು : ಖಾಸಗಿ ಕಾರ್ಯಕ್ರಮವೊಂದರಲ್ಲಿ ತಮ್ಮ ಅನಿಸಿಕೆ ಹೇಳಿದ್ದಕ್ಕೆ ಇದೀಗ ಉಪನ್ಯಾಸಕ ಅರುಣ್ ಉಳ್ಳಾಲ್ ಮೇಲೆ ಎಫ್ಐಆರ್ ದಾಖಲಾಗಿದೆ. ಧರ್ಮಗಳ ನಡುವೆ ದ್ವೇಷ ಹಬ್ಬಿಸುವ ಮಾತುಗಳನ್ನು ಆಡಿದ ಆರೋಪದ ಮೇಲೆ ತೊಕ್ಕೊಟ್ಟು ಭಟ್ನಗರದ ನಿವಾಸಿಯಾಗಿರುವ ಖಾಸಗಿ ಕಾಲೇಜಿನ ಉಪನ್ಯಾಸಕ ಅರುಣ್‌ ಉಳ್ಳಾಲ್‌ ಎಂಬುವರ ವಿರುದ್ಧ ಇಲ್ಲಿನ ಸೆನ್‌ ಅಪರಾಧ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಅರುಣ್ ಉಳ್ಳಾಲ್ ಅವರ ಮೇಲೆ ಎಫ್ಐಆರ್ ದಾಖಲಾಗಿರುವುದಕ್ಕೆ ವಿಶ್ವ ಹಿಂದೂ ಪರಿಷತ್ ಖಂಡನೆ ವ್ಯಕ್ತಪಡಿಸಿದ್ದು, ಅರುಣ್ ಉಳ್ಳಾಲ್ ಅವರ ಜೊತೆಗೆ ನಾವೀದ್ದೇವೆ ಎಂದಿದೆ. ಈ ಕುರಿತಂತೆ ಪೋಸ್ಟ್ ಮಾಡಿರುವ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಡಾ ಅರುಣ್ ಉಳ್ಳಾಲ ಅವರೇ ನಿಮ್ಮ ಜೊತೆ ನಾವು ಇದ್ದವೆ. ನೂರಾರು ಧರ್ಮ ಶಿಕ್ಷಣ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ ಜಾಗೃತಿಮೂಡಿಸಿ ಹಿಂದೂ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ನಿಮ್ಮ ಕಾರ್ಯವನ್ನು ಮುಂದುವರಿಸಿ. ಹಿಂದುಗಳನ್ನು ಗುರಿಯಾಗಿಸಿಕೊಂಡು ನಿರಂತರ ಕೇಸು ದಾಖಲಿಸುತ್ತಿರುವ ಹಿಂದೂ ವಿರೋಧಿ ರಾಜ್ಯ ಸರ್ಕಾರಕ್ಕೆ ದಿಕ್ಕಾರ ಡಾ…

Read More

ಸುಳ್ಯ: ಪ್ರಕರಣವೊಂದರ ವಾರಂಟ್ ಆರೋಪಿಯೋರ್ವ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಆಸ್ಪತ್ರೆಯಿಂದಲೇ ಪರಾರಿಯಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯದ ಕಲ್ಲುಗುಂಡಿ ಎಂಬಲ್ಲಿ ಕೆಲ ವರ್ಷಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯಾದ ತಮಿಳುನಾಡು ಮೂಲದ ಕಾರ್ತಿಕ್ ಪರಾರಿಯಾಗಿರುವ ಆರೋಪಿ ಎಂದು ತಿಳಿದು ಬಂದಿದೆ. ಆರೋಪಿಯನ್ನು ಸುಳ್ಯದ ಇಬ್ಬರು ಪೊಲೀಸ್ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಸುಳ್ಯದ ಸರಕಾರಿ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಕರೆದೊಯ್ದಿದ್ದು, ಈ ವೇಳೆ ಒರ್ವ ಸಿಬ್ಬಂದಿ ಚೀಟಿ ಮಾಡಿಸಲು ತೆರಳಿದ್ದ ಸಂದರ್ಭದಲ್ಲಿ ಇನ್ನೋರ್ವ ಸಿಬ್ಬಂದಿಯೊಂದಿಗಿದ್ದ ಆರೋಪಿ ಸಮಯ ಸಾಧಿಸಿ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆಸ್ಪತ್ರೆಯಿಂದ ಹೊರಬಂದ ಆರೋಪಿ ಹತ್ತಿರದ ತೋಟಕ್ಕೆ ಜಿಗಿದು ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಕೂಡಲೇ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದು, ತಡರಾತ್ರಿ ವರೆಗೂ ಹುಡುಕಾಟ ಮುಂದುವರಿಸಿದ್ದರು.

Read More

ಮಂಗಳೂರು: ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಸಹೋದರ ಮಮ್ತಾಜ್ ಅಲಿ ಅವರ ಕಾರು ಅಪಘಾತಗೊಂಡ ಸ್ಥಿತಿಯಲ್ಲಿ ಇಂದು ಕೂಳೂರು ಸೇತುವೆ ಮೇಲೆ ಪತ್ತೆಯಾಗಿದೆ.ಆದರೆ ಅವರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ರವಿವಾರ ಮುಂಜಾನೆ ಈ ಘಟನೆ ನಡೆದಿದೆ ಎನ್ನಲಾಗಿದೆ ‌ ಅಗ್ನಿಶಾಮಕ ಹಾಗೂ ಈಜು ತಜ್ಞರು ನದಿಯಲ್ಲಿ ಹುಡುಕಾಟ ಆರಂಭಿಸಿದ್ದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಚುರುಕಿನ ತನಿಖೆ ಕೈಗೊಂಡಿದ್ದಾರೆ. ಮಮ್ತಾಜ್ ಅಲಿ ಅವರು ತನ್ನ ಮಗಳಿಗೆ ವಾಟ್ಸಪ್ ಮೂಲಕ ಇನ್ನು ನಾನು ಹಿಂತಿರುಗಿ ಬರುವುದಿಲ್ಲ ಎಂಬ ಸಂದೇಶ ಕೂಡ ರವಾನಿಸಿದ್ದಾರೆ ಎಂದು ತಿಳಿಯಲಾಗಿದೆ. ಈ ವಿಷಯ ಆತಂಕಕ್ಕೆ ಕಾರಣವಾಗಿದೆ.ಇವರು ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಯ ಚೇರ್ಮನ್ ಆಗಿದ್ದು, ಸ್ಥಳೀಯ ಜಮಾತ್ ನ ಪ್ರಮುಖರಾಗಿದ್ದಾರೆ. ಮಾಜಿ ಶಾಸಕ ಮೊಯಿದೀನ್ ಬಾವಾ ಹಾಗೂ ಕುಟುಂಬಸ್ಥರು ಸ್ಥಳದಲ್ಲಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Read More

ಸೌರ ಚಂಡಮಾರುತದ ಬಗ್ಗೆ ವಿಜ್ಞಾನಿಗಳು ಇತ್ತೀಚೆಗೆ ಎಚ್ಚರಿಕೆ ನೀಡಿದ್ದಾರೆ. ದೊಡ್ಡ ಸೌರ ಚಂಡಮಾರುತವು ಭೂಮಿಗೆ ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ಈ ಕಾರಣದಿಂದಾಗಿ, ಭೂಮಿಯ ಮೇಲೆ ದೊಡ್ಡ ಪ್ರಭಾವವನ್ನು ಕಾಣಬಹುದು. ಮೊಬೈಲ್‌ಗಳು, ಕಂಪ್ಯೂಟರ್‌ಗಳು ಮತ್ತು ಸಂವಹನ ವ್ಯವಸ್ಥೆಗಳಂತಹ ಎಲೆಕ್ಟ್ರಾನಿಕ್ ಸಾಧನಗಳು ಚಂಡಮಾರುತದಿಂದ ಹೆಚ್ಚು ಪರಿಣಾಮ ಬೀರಬಹುದು. ಭಾರತವು ಸೂರ್ಯನನ್ನು ನಕ್ಷೆ ಮಾಡುತ್ತದೆ ಮತ್ತು ಲಡಾಖ್‌ನಿಂದ ಭಾರತದ ಮೇಲೆ ಸೌರ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ. ಇದು ಭಾರತದ ಮೇಲೂ ಪರಿಣಾಮ ಬೀರಲಿದೆಯೇ? ತಿಳಿಯುವುದು ಮುಖ್ಯ. ಸೂರ್ಯನ ಮೇಲ್ಮೈಯಿಂದ ಎರಡು ದೊಡ್ಡ ಸೌರ ಜ್ವಾಲೆಗಳು ಹೊರಹೊಮ್ಮುತ್ತವೆ. ಇವುಗಳನ್ನು ಕರೋನಲ್ ಮಾಸ್ ಎಜೆಕ್ಷನ್‌ಗಳು (CME) ಎಂದು ಕರೆಯಲಾಗುತ್ತದೆ, ಇವುಗಳು ನೇರವಾಗಿ ಭೂಮಿಯ ಕಡೆಗೆ ಹೋಗುತ್ತವೆ. ವಿಜ್ಞಾನಿಗಳು ಅವುಗಳನ್ನು X7 ಮತ್ತು X9 ಎಂದು ಹೆಸರಿಸಿದ್ದಾರೆ. ಈ ಸೌರ ಜ್ವಾಲೆಗಳು ಬಹಳ ಮುಖ್ಯ. X9 ಜ್ವಾಲೆಯು ಕಳೆದ ಏಳು ವರ್ಷಗಳಲ್ಲಿ ಸೂರ್ಯನಿಂದ ಹೊರಹೊಮ್ಮುವ ಅತ್ಯಂತ ಶಕ್ತಿಶಾಲಿ ಜ್ವಾಲೆಯಾಗಿದೆ. ಇದು ದಕ್ಷಿಣ ಅಟ್ಲಾಂಟಿಕ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ…

Read More

ಉಡುಪಿ: ಅಕ್ರಮ ಮರಳುಗಾರಿಕೆ- ಟಿಪ್ಪರ್ ಸಹಿತ ಇಬ್ಬರು ಆರೋಪಿಗಳು ವಶಕ್ಕೆ: ಪೆರ್ಡೂರು ಮಡಿಸಾಲ್ ಹೊಳೆಯಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ಹಿರಿಯಡ್ಕ ಪೊಲೀಸರು ದಾಳಿ ನಡೆಸಿ ಮರಳು ಸಾಗಾಟಕ್ಕೆ ಬಳಸಿದ್ದ ಟಿಪ್ಪ‌ರ್ ಸಹಿತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಹಿರಿಯಡ್ಕ ಠಾಣೆ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಮರಬದ, ಉಡುಪಿ ತಾಲೂಕು ಪೆರ್ಡೂರು ಗ್ರಾಮದ ಕುತ್ತುರಬೈಲು ಮಠದಮಕ್ಕಿ ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋದಾಗ ಇಬ್ಬರು ಹೊಳೆಯ ದಡದ ಬಳಿಯಲ್ಲಿದ್ದ ಮರಳನ್ನು ಕಳ್ಳತನ ಮಾಡುವ ಉದ್ದೇಶದಿಂದ ಟಿಪ್ಪರ್‌ಗೆ ಲೋಡ್ ಮಾಡುತ್ತಿರುವುದು ಕಂಡು ಬಂದಿತ್ತು. ಆರೋಪಿಗಳಾದ ದಿಲೀಪ್ ಹಾಗೂ ಸಚಿನ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಸರಕಾರಿ ಜಾಗದಿಂದ ಲಾಭ ಗಳಿಸುವ ಉದ್ದೇಶಗೋಸ್ಕರ ಅಕ್ರಮವಾಗಿ ಮರಳನ್ನು ಕಳವು ಮಾಡಿ ಸ್ವಂತ ಲಾಭಕ್ಕಾಗಿ ಬೇರೆಯವರಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಆರೋಪಿತರು ಕೃತ್ಯಕ್ಕೆ ಬಳಸಿದ್ದ ಟೆಂಪೋ, 1.5 ಯುನಿಟ್‌ನಷ್ಟು ಮರಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ…

Read More

ಉಳ್ಳಾಲ: ನಾಪತ್ತೆಯಾಗಿದ್ದ ಅವಿವಾಹಿತ ವ್ಯಕ್ತಿಯ ಮೃತದೇಹ ಪಕ್ಕದ ಪಾಳು ಬಿದ್ದ ಬಾವಿಯಲ್ಲಿ ಇಂದು ಪತ್ತೆಯಾದ ಘಟನೆ ಕೊಲ್ಯ ,ಕುಜುಮಗದ್ದೆಯಲ್ಲಿ ನಡೆದಿದೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೊಲ್ಯ,ಕುಜುಮಗದ್ದೆ ನಿವಾಸಿ ಪ್ರಸಾದ್ (44) ಮೃತ ದುರ್ದೈವಿ. ಮೂಲತ: ಜಪ್ಪು,ಗೋರ್ದಂಡು ನಿವಾಸಿಯಾದ ಪ್ರಸಾದ್ ಕಳೆದ ಕೆಲ ವರುಷಗಳಿಂದ ಕುಟುಂಬ ಸಮೇತ ಕುಜುಮಗದ್ದೆಯಲ್ಲಿ ನೆಲೆಸಿದ್ದರು.ಪೈಂಟರ್ ವೃತ್ತಿ ನಡೆಸುತ್ತಿದ್ದ ಪ್ರಸಾದ್ ಅವರು ಅವಿವಾಹಿತರಾಗಿದ್ದು ಕೆಲ ದಿನಗಳಿಂದ ಖಿನ್ನತೆಗೊಳಗಾಗಿದ್ದರೆಂದು ಹೇಳಲಾಗಿದೆ ಮನೆಯಲ್ಲಿ ಮೊಬೈಲ್ ಫೋನ್ ಬಿಟ್ಟು ಹೋದ ಪ್ರಸಾದ್ ಅವರು ಮತ್ತೆ ಸಂಪರ್ಕಕ್ಕೆ ಸಿಗದೆ ನಿನ್ನೆ ಮಧ್ಯಾಹ್ನ ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ. ಈ ವೇಳೆ ಮನೆ ಮಂದಿ ನೆರೆಹೊರೆಯವರು ಹುಡುಕಾಡಿದಾಗ ಇಂದು ಬೆಳಿಗ್ಗೆ ಮನೆ ಹತ್ತಿರದ ಪಾಳು ಬಿದ್ದ ಬಾವಿಯ ಬಳಿ ಪ್ರಸಾದ್ ಅವರ ಪಾದರಕ್ಷೆ ದೊರೆತಿದ್ದು ಈ ಹಿನ್ನೆಲೆಯಲ್ಲಿ ಪಾಳು ಬಾವಿಯನ್ನು ಇಣುಕಿ ನೋಡಿ ದಾಗ ಪ್ರಸಾದ್ ಬಾವಿಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ.ಪ್ರಸಾದ್ ಆತ್ಮಹತ್ಯೆ…

Read More

ರಾಜ್ಯಾದ್ಯಂತ ಪರೀಕ್ಷಿಸಿದ 235 ಮಾದರಿಗಳ ಪೈಕಿ 12ರಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಎಚ್ಚರಿಕೆ ನೀಡಿದೆ. ಪರೀಕ್ಷಿಸಿದ ಕೆಲವು ಕೇಕ್ ಮಾದರಿಗಳಲ್ಲಿ ಹಾನಿಕಾರಕ, ಕ್ಯಾನ್ಸರ್ ಉಂಟುಮಾಡುವ ವಸ್ತುಗಳನ್ನು ನಾವು ಪತ್ತೆ ಹಚ್ಚಿದ್ದೇವೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಈ ಸೇರ್ಪಡೆಗಳನ್ನು 2006 ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಮತ್ತು 2011 ರಿಂದ ಸಂಬಂಧಿತ ಆಹಾರ ಸುರಕ್ಷತಾ ನಿಯಮಗಳ ಅಡಿಯಲ್ಲಿ ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಬೇಕರಿಗಳು ತಕ್ಷಣ ಸುರಕ್ಷತಾ ಮಾನದಂಡಗಳನ್ನು ಅನುಸರಿಸಬೇಕು ಅಥವಾ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿ ಎಚ್ಚರಿಸಿದ್ದಾರೆ.ವರದಿಗಳ ಪ್ರಕಾರ, ಬೆಂಗಳೂರು ಬೇಕರಿಗಳಿಂದ ಸಂಗ್ರಹಿಸಿದ ಕೇಕ್ಗಳನ್ನು ಪರೀಕ್ಷಿಸಲಾಯಿತು. ಈ ಪರೀಕ್ಷೆಗಳು ಸಂಭಾವ್ಯ ಅಪಾಯಕಾರಿ ವಸ್ತುಗಳ ಉಪಸ್ಥಿತಿಯನ್ನು ದೃಢಪಡಿಸಿದವು. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಕೆ ಅವರು ರಾಜ್ಯದಾದ್ಯಂತ ಬೇಕರಿಗಳಿಗೆ ತಮ್ಮ ಉತ್ಪನ್ನಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಮತ್ತು ಸೇರ್ಪಡೆಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ್ದಾರೆ. ಕೇಕ್…

Read More

ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನಲ್ಲಿ ಹಲವು ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು ಗ್ರೂಪ್ ಸಿ ನಾನ್ ಗೆಜೆಟೆಡ್ ಹುದ್ದೆಗಳಾಗಿವೆ. ಸದ್ಯಕ್ಕೆ ತಾತ್ಕಾಲಿಕ ಅವಧಿಗಾಗಿ ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಸಂಪೂರ್ಣ ಅಧಿಕೃತ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು, ಅರ್ಜಿ ಸಲ್ಲಿಸುವವರು ಸಂಪೂರ್ಣ ಮಾಹಿತಿ ತಿಳಿದು ನಂತರ ಅರ್ಜಿ ಸಲ್ಲಿಸಿರಿ. ಅರ್ಹತೆಗಳು : ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವರು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಪಾಸ್ ಆಗಿರಬೇಕು ಹಾಗೂ ಕನಿಷ್ಠ ವಯೋಮಿತಿಯು 21 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ನೋಡುವುದಾದರೆ ಅಭ್ಯರ್ಥಿಗಳು 27 ವರ್ಷದ ಒಳಗಿರಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ವೇತನ ಶ್ರೇಣಿ : ಕೇಂದ್ರ ಸರ್ಕಾರಿ ವೇತನ…

Read More

ಮಂಗಳೂರು: ನಗರದ ಹೊರವಲಯದ ನೇತ್ರಾವತಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಬಂಟ್ವಾಳ ಕಂದಾಯ ಇಲಾಖೆ ಹಾಗೂ ಗಣಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಶುಕ್ರವಾರ ದಾಳಿ ನಡೆಸಿ 3 ಬೋಟುಗಳನ್ನು ವಶಪಡಿಸಿಕೊಂಡಿದ್ದಾರೆ‌. ಕಂದಾಯ, ಗಣಿ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನೇತ್ರಾವತಿ ನದಿ ತೀರದ ವಳಚ್ಚಿಲ್, ಮಾರಿಪಳ್ಳ, ಪುದು ಮತ್ತಿತರ ಕಡೆ ಬೃಹತ್ ಕಾರ್ಯಾಚರಣೆ ನಡೆಸಿ, ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ 23 ಬೋಟುಗಳನ್ನು ವಶಪಡಿಸಿದೆ. ಬೋಟುಗಳ ಒಟ್ಟು ಅಂದಾಜು ಮೌಲ್ಯ 46 ಲಕ್ಷ ರೂ‌. ಎಂದು ಅಂದಾಜಿಸಲಾಗಿದೆ. ಈ ಬೋಟುಗಳನ್ನು ಸದ್ಯ ಅಡ್ಯಾರ್ ಕಟ್ಟೆ ಸಮೀಪ ತಂದಿಡಲಾಗಿದೆ. ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿ ಕಾರ್ಯಾಚರಣೆಯಲ್ಲಿ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಾದ ಗಿರೀಶ್ ಮೋಹನ್, ಕೃಷ್ಣವೇಣಿ, ಮಹದೇಶ್ವರ್, ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

Read More