Author: main-admin

ಮಂಗಳೂರು: ವೈಯಕ್ತಿಕ ದ್ವೇಷದಿಂದ ಯುವಕನೋರ್ವರನ್ನು ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಕಠಿಣ ಶಿಕ್ಷೆ ಮತ್ತು 1.50 ಲಕ್ಷ ರೂ. ದಂಡ ವಿಧಿಸಿ ಶನಿವಾರ ತೀರ್ಪು ನೀಡಿದೆ. ತೆಂಕಕಜೆಕಾರು ನಿವಾಸಿ ಸಿದ್ದೀಕ್‌(34) ಶಿಕ್ಷೆಗೊಳಗಾದ ಅಪರಾಧಿ.ಮಹಮ್ಮದ್‌ ರಫೀಕ್‌(20) ಕೊಲೆಯಾದವನು. 2021ರ ಸೆ.12ರಂದು ಸಂಜೆ ರಫೀಕ್‌ನನ್ನು ಸಿಗರೇಟ್‌ ಸೇದುವ ನೆಪದಲ್ಲಿ ಸಿದ್ದೀಕ್ ಬಂಟ್ವಾಳದ ತೆಂಕಕಜೆಕಾರಿನ ಕೆಳಗಿನ ಕಾರ್ಲ ಎಂಬಲ್ಲಿನ ಗುಡ್ಡಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಿದ್ದನು. ತನ್ನ ಮನೆಗೆ ಹೋಗಿ ರಕ್ತಸಿಕ್ತ ಬಟ್ಟೆಯನ್ನು ಬದಲಾಯಿಸಿ, ಬಳಿಕ ಮೃತ ರಫೀಕ್‌ನ ಮನೆಗೆ ತೆರಳಿ ಆತನ ತಾಯಿಯಲ್ಲಿ ಕೇಳಿ ಆರೋಪಿ ಊಟ ಕೂಡ ಮಾಡಿದ್ದನು. ಆಗ ಪುತ್ರನ ಬಗ್ಗೆ ತಾಯಿ ಬಿಫಾತುಮ್ಮ ವಿಚಾರಿಸಿದಾಗ ಗೊತ್ತಿಲ್ಲ ಎಂದಿದ್ದನು. ಬಳಿಕ ಸ್ನೇಹಿತ ಫಯಾಜುದ್ದೀನ್‌ ಎಂಬಾತನಲ್ಲಿ ಸುಳ್ಳು ಹೇಳಿ ಆತನ ಕಾರು ಪಡೆದು ಅದರಲ್ಲಿ ರಫೀಕ್‌ ಮೃತದೇಹವನ್ನು ದೇವಸ್ಯ ಮೂಡೂರಿನ ನೀರೊಲ್ಬೆಯ ಮೋರಿಯ ಕೆಳಗೆ ಬಿಸಾಡಿ…

Read More

ಮಂಗಳೂರು ನಗರದ ಟಿ.ವಿ. ರಮಣ್‌ ಪೈ ಕನ್ವೆನ್ಶನ್‌ ಸೆಂಟರ್‌ ಎದುರಿನ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ವಿದೇಶಿ ಮದ್ಯ ಸಹಿತ ಓರ್ವನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ದಿನಕರ ಪಾಂಡೇಶ್ವರ ಬಂಧಿತ ಆರೋಪಿ. ಯಾವುದೇ ದಾಖಲಾತಿ ಗಳಿಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ತೆರಿಗೆ ಪಾವತಿಸದ 6 ಲೀ. ಮದ್ಯವನ್ನು ಆತನಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 83,140 ರೂ. ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಅವರ ಆದೇಶದಂತೆ ದ.ಕ ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ಮಂಗಳೂರು ಉಪ ವಿಭಾಗ-1 ಅಬಕಾರಿ ಉಪಾಧೀ ಕ್ಷಕರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Read More

ಮಂಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಹೆಸರಿನಲ್ಲಿ ಮಹಿಳೆಗೆ 15.27 ಲಕ್ಷ ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ತನ್ನ ಫೇಸ್‌ಬುಕ್‌ಗೆ ಆನ್‌ಲೈನ್ ಟ್ರೇಡಿಂಗ್‌ನ ಮಾಹಿತಿಯುಳ್ಳ ಮೆಸೇಜ್ ಬಂದಿತ್ತು. ಅದರಲ್ಲಿರುವ ಸಂಖ್ಯೆಗೆ ತಾನು ಸಂಪರ್ಕಿಸಿದಾಗ ವಾಟ್ಸ್ಆ್ಯಪ್‌ಗೆ ಲಿಂಕ್ ಬಂದಿತ್ತು. ಆ ಲಿಂಕ್‌ನ್ನು ತೆರೆದಾಗ ತನಗೆ ಆನ್‌ಲೈನ್ ಟ್ರೇಡಿಂಗ್ ಹಾಗೂ ಲಾಭದ ಆಮಿಷ ನೀಡಲಾಗಿತ್ತು. ಅದನ್ನು ನಂಬಿದ ತಾನು ಹಂತ ಹಂತವಾಗಿ 15,27,535 ರೂ.ಗಳನ್ನು ಹೂಡಿಕೆ ಮಾಡಿದ್ದೆ. ಅದನ್ನು ವಾಪಸ್ ಪಡೆಯಲು ಯತ್ನಿಸಿದಾಗ ಇನ್ನೂ ಹೆಚ್ಚುವರಿಯಾಗಿ 5 ಲಕ್ಷ ರೂ.ವನ್ನು ಹೂಡಿಕೆ ಮಾಡುವಂತೆ ತಿಳಿಸಲಾಯಿತು. ತನ್ನ ಬಳಿ ಅಷ್ಟು ಹಣವಿಲ್ಲದ ಕಾರಣ ತಾನು ಮನೆಯವರಲ್ಲಿ ವಿಷಯ ತಿಳಿಸಿದೆ. ಅದರಂತೆ ಮನೆ ಮಂದಿ ಪರಿಶೀಲನೆ ನಡೆಸಿದಾಗ ತನಗೆ ನಕಲಿ ಟ್ರೇಡಿಂಗ್ ಆ್ಯಪ್ ಮೂಲಕ ಮಾಯಾಂಕ್ ಸಿಂಗ್ ಚಾಂದೇಲ್ ಮತ್ತು ರಜನಿಕಾಂತ್ ಥ್ಯಾಕರ್ ಎಂಬವರು ವಂಚನೆ ಮಾಡಿರುವುದು ತಿಳಿದು ಬಂದಿದೆ. ಬಂದ‌ರ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Read More

ಕಾಸರಗೋಡು: ನಿಶ್ಚಯಗೊಂಡಿದ್ದ ಯುವತಿಗೆ ಬೇರೊಂದು ಯುವಕನನ್ನು ಪ್ರೀತಿಸುತ್ತಿರುವುದು ತಿಳಿದು ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮನೆಯ ಎರಡನೇ ಮಹಡಿಯ ಬೆಡ್‌ರೂಮ್‌ನಲ್ಲಿ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವಲಿಯಪರಂ ಮಾವಿಲಕಡಪ್ಪುರಂನ ಒರಿಯಾರ ಕೆ.ಸಿ.ಹೌಸ್‌ನ ಕೆ.ಸಿ.ಅಬ್ದುಲ್ ಖಾದರ್ ಅವರ ಪುತ್ರ ಪಿ.ಮುಹಮ್ಮದ್ ನವಾಝ್ (27) ಆತ್ಮಹತ್ಯೆಗೆ ಶರಣಾದ ಯುವಕ. ಜ.17ರ ಶುಕ್ರವಾರ ಸಂಜೆ 6:40ರ ಸುಮಾರಿಗೆ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಮನೆಯವರು ನೇಣಿನ ಕುಣಿಕೆಯನ್ನು ಕತ್ತರಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲಾಗಲೇ ಪ್ರಾಣ ಕಳೆದುಕೊಂಡಿದ್ದರು. ವಿದೇಶದಿಂದ ಬಂದ ಯುವಕನಿಗೆ ಹುಡುಗಿಯೊಂದಿಗೆ ಮನೆಯವರು ಮದುವೆ ನಿಶ್ಚಯಿಸಿದ್ದರು. ಇವರಿಬ್ಬರು ಫೋನ್ ನಲ್ಲಿ ಹೆಚ್ಚು ಮಾತನಾಡುತ್ತಿದ್ದರು. ಹೀಗಿರುವಾಗಲೇ ಯುವತಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿರುವುದು ಯುವಕನಿಗೆ ತಿಳಿದು ಯುವಕ ಮಾನಸಿಕವಾಗಿ ನಲುಗಿ ಹೋಗಿದ್ದ ಎನ್ನಲಾಗಿದೆ. ಯುವಕ ತಾನು ಮದುವೆ ನಿಶ್ಚಯಿಸಿಕೊಂಡಿದ್ದ ಯುವತಿಗೆ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗುವುದಾಗಿ ಹೇಳಿಕೊಂಡಿದ್ದಾನೆ ಎಂಬ ಅಂಶವೂ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಇದಾದ ಬಳಿಕ…

Read More

ಸುಳ್ಯ: ಕೆಮ್ರಾಜೆ ಗ್ರಾಮದ ಕೋಡಿಮಜಲು ಮನೆ ನೆಲ್ಲೂರು ಪ್ರಶಾಂತ್ ಎಸ್. ಆರ್ (26), ಸುಳ್ಯ ಎಂಬವರ ದೂರಿನಂತೆ ತಂದೆ ರಾಮಚಂದ್ರ ಗೌಡರವರು ಯಾವಾಗಲು ವಿಪರೀತ ಮದ್ಯಪಾನ ಮಾಡುವ ಚಟವುಳ್ಳವರಾಗಿದ್ದು, ಎಂದಿನಂತೆ ವಿಪರೀತ ಮದ್ಯಪಾನ ಮಾಡಿ ದಿನಾಂಕ 17-01-2025 ರಂದು ರಾತ್ರಿ ಮನೆಗೆ ಬಂದವರು ಪಿರ್ಯಾದಿರವರ ಅಜ್ಜ, ಅಜ್ಜಿ ಮತ್ತು ತಾಯಿಗೆ ಬೈಯುತ್ತಿದ್ದವರು ರಾತ್ರಿ ಸಮಯ ಸುಮಾರು 11-30 ಗಂಟೆಗೆ ನಿರ್ಮಾಣ ಹಂತದಲ್ಲಿರುವ ಮನೆಯ ಅಡುಗೆ ಕೋಣೆಯೊಳಗೆ ಇದ್ದ ಪಿರ್ಯಾದಿದಾರರ ತಾಯಿ ವನೋದ ಕುಮಾರಿ ರವರೊಂದಿಗೆ ಜಗಳ ಮಾಡಿ, ಕೈಯಲ್ಲಿದ್ದ ಕೋವಿಯಿಂದ ತಾಯಿಗೆ ಗುಂಡು ಹಾರಿಸಿ ಕೊಲೆ ಮಾಡಿ ಬಳಿಕ ರಬ್ಬರ್ ಆಸಿಡ್ ಕುಡಿದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪೊಲೀಸ್ ಠಾಣಾ ಅ.ಕ್ರ: 09/2025 ಕಲಂ: 103BNS2023 ಕಲಂ25.27 ಆರ್ಮ್ಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಪೊಲೀಸ್‌ ಮಹಾ ನಿರೀಕ್ಷಕರಾದ ಶ್ರೀ ಅಮಿತ್‌ ಸಿಂಗ್‌ ಐ.ಪಿ.ಎಸ್‌ ರವರು ಹಾಗೂ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀ ಯತೀಶ್‌…

Read More

ಸುಳ್ಯ: ಪತಿಯು ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಭೀಕರ ಘಟನೆ ಸುಳ್ಯ ತಾಲೂಕಿನ ದೊಡ್ಡತೋಟ ಸಮೀಪದ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಜ 17ರ ತಡ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ. ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ರಾಮಚಂದ್ರ ಎಂಬಾತ ಕೊಲೆ ಆರೋಪಿ. ಆತನ ಪತ್ನಿ ವಿನೋದ ಹತ್ಯೆಯಾದವರು. ರಾಮಚಂದ್ರ ಪತ್ನಿಯನ್ನು ಕೋವಿಯಿಂದ ಗುಂಡಿಕ್ಕಿ ಕೊಂದು ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ. ವಿನೋದವರಿಗೆ 43 ವರ್ಷವಾಗಿದ್ದು, ರಾಮಚಂದ್ರಗೆ 54 ವರ್ಷ ವಯಸ್ಸಾಗಿತ್ತು.ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣ ಎಂದು ಶಂಕಿಸಲಾಗಿದೆ ನಿನ್ನೆ ರಾತ್ರಿ ಮದ್ಯ ಸೇವಿಸಿ ಬಂದು 10 ಗಂಟೆಯ ನಂತರ ಪತ್ನಿ ವಿನೋದ ಹಾಗೂ ಪುತ್ರ ಪ್ರಶಾಂತ್‌ರೊಡನೆ ರಾಮಚಂದ್ರ ಗೌಡರು ಜಗಳ ಆರಂಭಿಸಿದ್ದಾರೆ. ಈ ರೀತಿ ಜಗಳವಾಡುವುದನ್ನು ಹಿರಿಮಗ ಪ್ರಶಾಂತ್ ವಿರೋಧಿಸಿದ್ದಾನೆ. ಆಗ ರಾಮಚಂದ್ರ ಗೌಡರು ಮನೆಯಲ್ಲಿದ್ದ ಕೋವಿ ಎತ್ತಿಕೊಂಡು, ಮಗನಿಗೆ ಗುಂಡಿಕ್ಕಲು ಬಂದಿದ್ದಾರೆ. ಇದನ್ನು ಕಂಡ ಪತ್ನಿ ವಿನೋದರವರು ಅಡ್ಡ ಬಂದು ಗಂಡನನ್ನು…

Read More

ಮಂಗಳೂರು: ಅಪ್ರಾಪ್ತೆಯನ್ನು ಅತ್ಯಾಚಾರಗೈದು ವೀಡಿಯೋ ಮಾಡಿ ವೈರಲ್ ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯವು ಅಪರಾಧಿಗೆ 20ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬಲ್ಲಾಡಿ ನಿವಾಸಿ ಅಶ್ವಥ್(22) ಶಿಕ್ಷೆಗೊಳಗಾದ ಅಪರಾಧಿ. ಪ್ರಕರಣದ 17ರ ಅಪ್ರಾಪ್ತೆಯನ್ನು ಆರೋಪಿ ಅಶ್ವತ್ಥ್ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಿಸಿಕೊಂಡು ಸ್ನೇಹ ಬೆಳೆಸಿದ್ದಾನೆ. ಬಳಿಕ ಬಾಲಕಿಯನ್ನು ಭೇಟಿಯಾಗುವ ಎಂದು ಪುಸಲಾಯಿಸಿ 2023ರ ಮಾರ್ಚ್ 15ರಂದು ಬೆಳಗ್ಗೆ 10ಗಂಟೆಗೆ ಮುಲ್ಕಿ ಬಸ್ಸು ನಿಲ್ದಾಣದಿಂದ ಬೈಕ್‌ನಲ್ಲಿ ಒತ್ತಾಯಪೂರ್ವಕವಾಗಿ ಕರೆದೊಯ್ದಿದ್ದಾನೆ. ಅಲ್ಲಿಂದ ಆಕೆಯನ್ನು ಮಣಿಪಾಲದ ಸಾಯಿ ಸಾಗರ್ ಲಾಡ್ಜ್‌‌ಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಆಕೆಯದ್ದೇ ಮೊಬೈಲ್‌ನಲ್ಲಿ ಅತ್ಯಾಚಾರದ ವೀಡಿಯೋ ಮಾಡಿದ್ದಾನೆ. ಬಳಿಕ ವೀಡಿಯೋವನ್ನು ಅಶ್ವತ್ಥ್ ತನ್ನ ಮೊಬೈಲ್‌ಗೆ ಫಾರ್ವರ್ಡ್ ಮಾಡಿದ್ದಾನೆ. ಬಳಿಕ ಅಶ್ವತ್ಥ್ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇತರರಿಗೆ ರವಾನಿಸಿದ್ದಾನೆ. ಈ…

Read More

ಮಂಗಳೂರು : ಕೆಸಿರೋಡ್ ನಲ್ಲಿರುವ ಕೋಟೆಕಾರ್ ಸಹಕಾರಿ ಸಂಘದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪಶ್ಚಿಮ ವಲಯ ಐಜಿ ಅಮಿತ್, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಎಸ್ಪಿ ಯತೀಶ್, ಡಿವೈಎಸ್ಪಿ ಸೇರಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ ಪೊಲೀಸ್ ಅಧಿಕಾರಿಗಳ ಮೇಲೆ ಗರಂ ಆದ ಸಿಎಂ ನೀವೆಲ್ಲಾ ಇದ್ದು ಯಾಕೆ ಹೀಗಾಯ್ತು? ಆರೋಪಿಗಳು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ? ಎಷ್ಟು ಟೋಲ್ ಗೇಟ್ ಗಳನ್ನು ದಾಟಿ ಹೋಗಿದ್ದಾರೆ? ಟೋಲ್ ಗೇಟ್ ಗಳಲ್ಲಿ ಬಿಗಿ ಭದ್ರತೆ ಕೈಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿದರು ಎಂದು ತಿಳಿದು ಬಂದಿದೆ. ಈ ವೇಳೆ ಹಿರಿಯ ಅಧಿಕಾರಿಗಳು ಸಹಕಾರಿ ಬ್ಯಾಂಕ್ ನಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಐದಾರು ಮಂದಿ ಮಾತ್ರ ಬ್ಯಾಂಕ್ ಸಿಬ್ಬಂದಿ ಇದ್ದರು. ಆರೋಪಿಗಳು ಕನ್ನಡ ಮತ್ತು ಹಿಂದಿಯಲ್ಲಿ…

Read More

ಮಂಗಳೂರು: ಉಳ್ಳಾಲ ತಾಲೂಕಿನ ಕೆಸಿ ರೋಡ್​​ನ ಕೋಟೆಕಾರು ಬ್ಯಾಂಕ್​ಗೆ ನುಗ್ಗಿದ ಐವರು ಮುಸುಕುಧಾರಿಗಳು ಬಂದೂಕಿನಿಂದ ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳನ್ನು ಬೆದರಿಸಿ ಚಿನ್ನಾಭರಣ, ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಫಿಯೆಟ್ ಕಾರಿನಲ್ಲಿ ಬಂದ ದರೋಡೆಕೋರರು ಬಂದೂಕು ತೋರಿಸಿ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರನ್ನು ಬೆದರಿಸಿದ್ದಾರೆ. ಬ್ಯಾಂಕಿನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಹಾಡಹಗಲೇ ಬ್ಯಾಂಕ್​ಗೆ ನುಗ್ಗಿದ ಐವರು ದರೋಡೆಕೋರರು ಕೃತ್ಯ ಎಸಗಿದ್ದಾರೆ. ಈ ತಂಡ ಮಂಗಳೂರು ಕಡೆಗೆ ಪರಾರಿಯಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವ ಪ್ರಯತ್ನ ನಡೆಯುತ್ತಿದೆ.

Read More

ಕಾರ್ಕಳ : ಚಾಲಕನ ನಿಯಂತ್ರಣ ತಪ್ಪಿ ಲಕ್ಸುರಿ ಕಾರೊಂದು ಪಲ್ಟಿಯಾದ ಘಟನೆ ಮುಂಡ್ಕೂರು- ಜಾರಿಗೆಕಟ್ಟೆ ಚರ್ಚ್ ಬಳಿ ನಡೆದಿದೆ. ಕಾರು ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾರೆ. ಕಟೀಲು ಪಾದಯಾತ್ರೆ ನಡೆಸುತ್ತಿರುವ ಭಕ್ತರು ಕೂಡಲೇ ಸಮಾಜಸೇವಕ ಕೆದಿಂಜೆ ಸುಪ್ರಿತ್ ಶೆಟ್ಟಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಳುಗಳನ್ನು ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದ್ದಾರೆ.

Read More