ಮಂಗಳೂರು : ಪಡೀಲ್‌ನಲ್ಲಿರುವ ಅರಣ್ಯ ಇಲಾಖೆಯ ವಸತಿಗೃಹದ ಬಳಿ ನಿಲ್ಲಿಸಲಾಗಿದ್ದ ಆರಣ್ಯ ಇಲಾಖೆಯ ಅಧಿಕೃತ ವಾಹನವನ್ನೇ ಕದ್ದು ಪರಾರಿಯಾಗಿದ್ದ ಕೇರಳ ಮೂಲದ ಖದೀಮನನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕೇವಲ ಕೆಲವೇ ಗಂಟೆಗಳಲ್ಲಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಕೇರಳದ ಕೋಯಿಕ್ಕೋಡ್ ನಿವಾಸಿ ನದೀಮ್ (23) ಬಂಧಿತ ಆರೋಪಿಯಾಗಿದ್ದಾನೆ.ಮಂಗಳೂರು ಪಡೀಲ್‌ನ ಅರಣ್ಯ ಇಲಾಖೆಯ ವಸತಿ ಗೃಹದ ಆವರಣದಲ್ಲಿ ಸಂಚಾರಿ ದಳದ ಆರ್‌ಎಫ್‌ಒ (RFO) ಸಂತೋಷ್ ರೈ ಅವರಿಗೆ ಸೇರಿದ ವಾಹನವನ್ನು ಚಾಲಕ ಸೋಮವಾರ ರಾತ್ರಿ ಎಂದಿನಂತೆ ನಿಲ್ಲಿಸಿದ್ದರು. ಮುಂಜಾನೆ ಕೇರಳದಿಂದ ಮಂಗಳೂರಿಗೆ ಬಂದಿದ್ದ ಆರೋಪಿ ನದೀಮ್, ವಸತಿಗೃಹದ ಆವರಣಕ್ಕೆ ನುಗ್ಗಿ ಜೀಪಿನ ಗಾಜು ಒಡೆದಿದ್ದಾನೆ. ಬಳಿಕ ಜೀಪಿನ ಡ್ರಾಯರ್‌ನಲ್ಲಿದ್ದ ಮತ್ತೊಂದು ಕೀಯನ್ನು ಪತ್ತೆಹಚ್ಚಿ, ವಾಹನದ ಸೈರನ್ ವೈರ್ ಅನ್ನು ತುಂಡು ಮಾಡಿ ಜೀಪಿನೊಂದಿಗೆ ಪರಾರಿಯಾಗಿದ್ದನು.ಜೀಪ್ ಎಗರಿಸಿಕೊಂಡು ಹೆದ್ದಾರಿಯಲ್ಲಿ ಸಾಗುತ್ತಿದ್ದ ಆರೋಪಿ ನದೀಮ್, ಕೂಳೂರಿನ ಪೆಟ್ರೋಲ್ ಬಂಕ್ ಒಂದರಲ್ಲಿ ಡೀಸೆಲ್ ಹಾಕಿಸಿಕೊಂಡಿದ್ದಾನೆ. ಆದರೆ ಹಣ ನೀಡದೆ ವಾಹನವನ್ನು ವೇಗವಾಗಿ…
Author: main-admin
ಬೆಳ್ತಂಗಡಿ: ಗುರುವಾಯನಕೆರೆಯ ಅಲಾದಿ ಕೊಟ್ಟಿಗೆಯಲ್ಲಿ ಸೋಮವಾರ ನಡೆದಿದ್ದ ಯತೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಆರೋಪಿಗಳಾದ ಬೆಳ್ತಂಗಡಿಯ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬದ ಚಾರ್ವಾಕ ನಿವಾಸಿ ಮೋಹನ್ (30) ಮತ್ತು ಬೆಳ್ತಂಗಡಿಯ ಪಡಂಗಡಿ ನಿವಾಸಿ ಇಬ್ರಾಹಿಂ (54) ಎಂಬುವವರನ್ನು ಮಂಗಳವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.ಆರೋಪಿಗಳು ಯತೀಶ್ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಯತೀಶ್ ಗೌಡ ಅವರ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಕಡಬ:ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿ, ಗಲಾಟೆ ಎಬ್ಬಿಸಿದ್ದ ಮೂವರು ವ್ಯಕ್ತಿಗಳನ್ನು ಬಂಟ್ವಾಳ ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಸಂಚರಿಸುವ ರೈಲು ಸಂಖ್ಯೆ 56626ರ ಕೊನೆಯ ಬೋಗಿಯಲ್ಲಿ ಈ ಘಟನೆ ನಡೆದಿದೆ. ಕೋಡಿಂಬಾಳ ರೈಲು ನಿಲ್ದಾಣದಲ್ಲಿ ರೈಲು ಹತ್ತಿದ್ದ ಮೂವರು ವ್ಯಕ್ತಿಗಳು, ಚಲಿಸುವ ರೈಲಿನಲ್ಲಿ ಸಹ ಪ್ರಯಾಣಿಕರೊಬ್ಬರ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬೋಗಿಯಲ್ಲಿದ್ದ ಇತರ ಪ್ರಯಾಣಿಕರು ತಕ್ಷಣವೇ ಈ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆ ಅಲರ್ಟ್ ಆದ ಆರ್‌ಪಿಎಫ್ (RPF) ಸಿಬ್ಬಂದಿ, ರೈಲು ಬಂಟ್ವಾಳ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ರೈಲನ್ನು ಕೆಲ ನಿಮಿಷಗಳ ಕಾಲ ಬಂಟ್ವಾಳ ನಿಲ್ದಾಣದಲ್ಲೇ ನಿಲ್ಲಿಸಲಾಗಿತ್ತು. ಬಳಿಕ ಬೋಗಿಗೆ ತೆರಳಿದ ಭದ್ರತಾ ಸಿಬ್ಬಂದಿ, ಗಲಾಟೆ ಮಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆದು ಕೆಳಕ್ಕಿಳಿಸಿದ್ದಾರೆ.ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕ ರೈಲು ಎಂದಿನಂತೆ ಮಂಗಳೂರಿನತ್ತ…
ಸುಳ್ಯ: ಮೊಬೈಲ್ ಬಳಸದಂತೆ ತಾಯಿ ಬೈದು ಬುದ್ಧಿಮಾತು ಹೇಳಿದ್ದಕ್ಕೆ ಬೇಸತ್ತು 16 ವರ್ಷದ ಅಪ್ರಾಪ್ತ ಬಾಲಕನೊಬ್ಬ ಮನೆಯಿಂದ ಹೊರಹೋಗಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆ ಎಂಬಲ್ಲಿ ನಡೆದಿದೆನಾಪತ್ತೆಯಾದ ಬಾಲಕನನ್ನು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿಯಾಗಿದ್ದು, ಪ್ರಸ್ತುತ ಸುಳ್ಯದ ಬೋರುಗುಡ್ಡೆಯಲ್ಲಿ ಪೋಷಕರೊಂದಿಗೆ ವಾಸವಿದ್ದ ಸೈಯದ್ ಆಲಿ ಸೈಯದ್ ಗೌಸ (16) ಎಂದು ಗುರುತಿಸಲಾಗಿದೆ. ಈ ಸಂಬಂಧ ಬಾಲಕನ ತಾಯಿ ಸಲ್ಮಾ ಅವರು ಸುಳ್ಯ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಸಲ್ಮಾ ಅವರು ತಮ್ಮ ಪತಿ ಹಾಗೂ ಮಗ ಸೈಯದ್ ಆಲಿ ಸೈಯದ್ ಗೌಸನೊಂದಿಗೆ ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆಯಲ್ಲಿ ವಾಸವಾಗಿದ್ದಾರೆ. ಮೇ 30, 2026 ರಂದು ಬೆಳಿಗ್ಗೆ ಬಾಲಕ ಸೈಯದ್ ಆಲಿ ಸತತವಾಗಿ ಮೊಬೈಲ್ ನೋಡುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ತಾಯಿ ಸಲ್ಮಾ ಮಗನಿಗೆ ಬೈದು, ಮೊಬೈಲ್ ಹವ್ಯಾಸ ಬಿಡುವಂತೆ ಬುದ್ಧಿಮಾತು ಹೇಳಿದ್ದರು. ಇದರಿಂದ ಮನಸ್ತಾಪ ಮಾಡಿಕೊಂಡ ಬಾಲಕ, ಸ್ವಲ್ಪ ಸಮಯದ ಬಳಿಕ ಯಾರಿಗೂ…
ಮಂಗಳೂರು: ನಗರದ ಪೊಲೀಸ್ ಕಮಿಷನರೆಟ್‌ನ ನಾನಾ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆಗೈದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಯೆಯ್ಯಾಡಿ ಕ್ರಾಸ್ ಬಳಿಯಿಂದ ನಿನಾದ್ ಕೋಟ್ಯಾನ್ ಎಂಬಾತನನ್ನು ಕದ್ರಿ ಪೊಲೀಸರು, ನಗರದ ಅಂಬೇಡ್ಕರ್ ವೃತ್ತದ ಬಳಿ ಕುಲಶೇಖರದ ಪ್ರತೀಕ್ ಯಾನೆ ಪ್ರತೀಕ್ ಕೊಟ್ಟಾರಿ ಎಂಬಾತನನ್ನು ಬಂದರು ಪೊಲೀಸರು, ಸೋಮೇಶ್ವರ ಗ್ರಾಮದ ಪಿಲಾರ್ ಗ್ರೌಂಡ್ ಬಳಿ ಕಲಂದರ್ ಶಾಫಿ ಎಂಬಾತನನ್ನು ಉಳ್ಳಾಲ ಪೊಲೀಸರು, ಶಿವ ನಗರದ ಮುಳಿಹಿತ್ಲು ಬಳಿ ಪವನ್ ಜೆರಾಲ್ಡ್ ಎಂಬಾತನನ್ನು ಪಾಂಡೇಶ್ವರ ಠಾಣೆ ಪೊಲೀಸರು ಬಂಧಿಸಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಭೋಪಾಲ್: ನಟಿ ತ್ವಿಶಾ ಶರ್ಮಾ ಪ್ರಕರಣದ ಪ್ರಮುಖ ಸಾಕ್ಷಿಯ ಮೇಲೆ ಭೋಪಾಲ್‌ನಲ್ಲಿ ಆರೋಪಿ ಪತಿ ಸಮರ್ಥ್ ಸಿಂಗ್‌ನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.ಸಮರ್ಥ್ ಸಿಂಗ್ ಮನೆ ಬಳಿ ಸಲೂನ್ ನಡೆಸುತ್ತಿರುವ ನೀರಜ್ ದುಬೆ ಅವರ ಮೇಲೆ ಮೇ 30 ರಂದು ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ದುಷ್ಕರ್ಮಿಗಳು ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಇನ್ನು ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ನೀರಜ್ ದುಬೆ ಅವರ ಸುತ್ತ ನಾಲ್ಕೈದು ಜನ ಸುತ್ತುವರಿದು ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿರುವುದು ಕಂಡುಬಂದಿದೆ.ಘಟನೆ ನಡೆದ ಬೆನ್ನಲ್ಲೇ, ದುಬೆ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ. ನನಗೆ ಜೀವ ಭಯವಿದೆ. ರಕ್ಷಣೆ ನೀಡಬೇಕು ಎಂದು ಪೊಲೀಸರರಲ್ಲಿ ಕೇಳಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಉಪ್ಪಿನಂಗಡಿ: ಕಾರೊಂದಕ್ಕೆ ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ ಕೂಟೇಲು ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.ಕಾರ್ಕಳದ ನಕ್ರೆ ಗ್ರಾಮದ ಕುಟುಂಬವೊಂದು ಸುಬ್ರಹ್ಮಣ್ಯಕ್ಕೆ ವ್ಯಾಗನರ್ ಕಾರಿನಲ್ಲಿ ತೆರಳುತ್ತಿತ್ತು. ಉಪ್ಪಿನಂಗಡಿಯ ಕೂಟೇಲು ಸಮೀಪ ಕಾರು ಸಂಚರಿಸುತ್ತಿದ್ದ ವೇಳೆ ಅಡುಗೆ ಅನಿಲದ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆಯಿತು.ಪರಿಣಾಮ ಕಾರಿನಲ್ಲಿದ್ದ ಚಾಲಕ ದೀಪಕ್ (45), ಯಾತ್ರಾರ್ಥಿಗಳಾಗಿದ್ದ ಗುರುರಾಜ್ (46), ಧನುಷ್ (15), ಭಾರತಿ (48), ಗೀತಾ (55) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕ ದಾಮೋದರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.ಘಟನೆ ಸಂಭವಿಸಿದಾಗ ಗಾಯಾಳುಗಳನ್ನು ನಜ್ಜುಗುಜ್ಜಾದ ಕಾರಿನಿಂದ ಹೊರಗೆಳೆಯಲಾಗಿದೆ. ಇನ್ನು ಈ ಬಗ್ಗೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಳ್ತಂಗಡಿ: ಗುರುವಾಯನಕೆರೆ ಸಮೀಪ ಅಸಹಜ ಸ್ಥಿತಿಯಲ್ಲಿ ಬಂಟ್ವಾಳ ತಾಲೂಕಿನ ಪೆರ್ನ ನಿವಾಸಿ ಯತೀಶ್ ಗೌಡ (32) ಎಂಬವರ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.ಕೊಲೆ ಪ್ರಕರಣದ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬ ಚಾರ್ವಾಕ ನಿವಾಸಿ ಮೋಹನ್ (30) ಹಾಗೂ ಪಡಂಗಡಿ ನಿವಾಸಿ ಇಬ್ರಾಹಿಂ (54) ಎಂದು ಗುರುತಿಸಲಾಗಿದೆ.ಇಂದು ಬೆಳಿಗ್ಗೆ ಪೆರ್ನೆ ನಿವಾಸಿ ಯತೀಶ್ ಎಂಬವರ ಮೃತದೇಹ ಗುರುವಾಯನಕೆರೆ ಸಮೀಪದ ಅಲಾದಿಕೊಟ್ಟಿಗೆ ಬಳಿ ಇರುವ ಶ್ರೀದೇವಿ ಕಾಂಪ್ಲೆಕ್ಸ್ ಆವರಣದಲ್ಲಿ ಪತ್ತೆಯಾಗಿತ್ತು.ಈ ಬಗ್ಗೆ ಮೃತರ ಸಹೋದರ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಬೆಳ್ತಂಗಡಿ ಪೊಲೀಸರು ಸ್ಥಳದಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.ಆರೋಪಿಗಳ ಹಲ್ಲೆಯಿಂದಾಗಿ ಯತೀಶ್ ಮೃತಪಟ್ಟಿರುವುದಾಗಿ ಅವರ ಸಹೋದರ ಅನುಮಾನ ವ್ಯಕ್ತಪಡಿಸಿ ಈ ಬಗ್ಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ, ಕಾರ್ಯ ಪ್ರವೃತ್ತರಾದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಕರಣದ ಬಗ್ಗೆ ಮಾಹಿತಿ…
ಉಡುಪಿ: ಉಡುಪಿ ಜಿಲ್ಲೆಯ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಟ್ಟು ಗ್ರಾಮದ ನದಿಯ ದಡದಲ್ಲಿ ಹಸುವಿನ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯ ಬಲಪಂಥೀಯ ಕಾರ್ಯಕರ್ತರಲ್ಲಿ ಆಕ್ರೋಶ ವ್ಯಕ್ತವಾಗಿದೆ.ಭಕ್ತರು ಪವಿತ್ರವೆಂದು ಪರಿಗಣಿಸುವ ಮತ್ತು ಪಾಪನಾಶಿನಿ ನದಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ನದಿ ದಂಡೆಯ ಪ್ರದೇಶದಲ್ಲಿ ಈ ಅವಶೇಷಗಳು ಪತ್ತೆಯಾಗಿವೆ. ಶಿರ್ವ ವಿಷ್ಣುಮೂರ್ತಿ ದೇವಸ್ಥಾನ ಸೇರಿದಂತೆ ಈ ಪ್ರದೇಶದ ಹಲವಾರು ದೇವಾಲಯಗಳಿಗೆ ಸಂಬಂಧಿಸಿದ ಪವಿತ್ರ ಸ್ನಾನದ ಆಚರಣೆಗಳಿಗೆ ಈ ನದಿಯನ್ನು ಬಳಸಲಾಗುತ್ತದೆ.ಅಪರಿಚಿತ ದುಷ್ಕರ್ಮಿಗಳು ಈ ಪ್ರದೇಶದ ಪ್ರತ್ಯೇಕತೆಯ ಲಾಭ ಪಡೆದು ಮೃತದೇಹವನ್ನು ಎಸೆಯುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಮತ್ತು ಹಿಂದೂ ಕಾರ್ಯಕರ್ತರು, ಆರೋಪಿಸಿದ್ದಾರೆ.ಶಿರ್ವ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಮಹಜರ್ (ಸ್ಥಳ ಪರಿಶೀಲನೆ) ನಡೆಸಿದರು.ಹಿಂದೂ ಜಾಗರಣ ವೇದಿಕೆ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ, ಅಧಿಕಾರಿಗಳನ್ನು ಸಮಗ್ರ ತನಿಖೆ ನಡೆಸಿ ಕೃತ್ಯಕ್ಕೆ ಕಾರಣರಾದವರನ್ನು ಗುರುತಿಸುವಂತೆ…
ತಿರುವನಂತಪುರಂ/ನೆಡುಮಂಗಾಡ್ : ಕೇರಳದಲ್ಲಿ ಮಾನವೀಯತೆಯೇ ತಲೆತಗ್ಗಿಸುವಂತಹ ಅತ್ಯಂತ ಭೀಕರ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೇವಲ ಒಂದೂವರೆ ವರ್ಷದ ಅರ್ಷಿದ್ ಎಂಬ ಪುಟ್ಟ ಮಗುವಿನ ದುರಂತ ಸಾವು, ದೀರ್ಘಕಾಲದ ಚಿತ್ರಹಿಂಸೆ ಹಾಗೂ ತಪ್ಪಿದ ಕೌಟುಂಬಿಕ ಎಚ್ಚರಿಕೆಗಳ ಕರಾಳ ಕಥೆಯನ್ನು ಬಿಚ್ಚಿಟ್ಟಿದೆ. ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ ತಾಯಿ ಅಖಿಲಾ (24 ವರ್ಷ) ಮತ್ತು ಆಕೆಯ ಲಿವ್-ಇನ್ ಸಂಗಾತಿ ಅಶ್ಕರ್ (31 ವರ್ಷ) ಎಂಬುವವರನ್ನು ನೆಡುಮಂಗಾಡ್ ಪೊಲೀಸರು ಬಂಧಿಸಿದ್ದಾರೆ.ಈ ಘಟನೆಯು ಮೇ 29ರ ಶುಕ್ರವಾರದಂದು ಮೊದಲು ಬೆಳಕಿಗೆ ಬಂದಿತು. ಮಗು ಪ್ರಜ್ಞಾಹೀನ ಸ್ಥಿತಿಗೆ ತಲುಪಿದಾಗ ಆಂಬ್ಯುಲೆನ್ಸ್ ಮೂಲಕ ಪಣವೂರಿನ ಖಾಸಗಿ ಆಸ್ಪತ್ರೆಗೆ ಮತ್ತು ನಂತರ ಎಸ್‌ಎಟಿ (SAT) ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ಘೋಷಿಸಿದರು. ಈ ವೇಳೆ ಆರೋಪಿ ಅಶ್ಕರ್, “ಮಗು ಹಾಲು, ನೀರು ಕುಡಿದು ಮಲಗಿದ ನಂತರ ಇದ್ದಕ್ಕಿದ್ದಂತೆ ಕೆಮ್ಮಲು ಮತ್ತು ವಾಂತಿ ಮಾಡಲು ಆರಂಭಿಸಿ ಉಸಿರುಗಟ್ಟಿದಂತಾಗಿ ಪ್ರಜ್ಞೆ ಕಳೆದುಕೊಂಡಿತು” ಎಂದು ಪೊಲೀಸರಿಗೆ ಸುಳ್ಳು…










