Author: main-admin

ಮಂಡ್ಯ : ಗಣೇಶ ವಿಸರ್ಜನೆ ವೇಳೆ ಕೋಮುಗಲಭೆ ಸಂಭವಿಸಿದ ಹಿನ್ನೆಲೆಯಲ್ಲಿ ಶನಿವಾರದವರೆಗೆ ನಾಗಮಂಗಲ ಪಟ್ಟಣದಲ್ಲಿ 144 ಸೆಕ್ಷನ್‌ ಜಾರಿ ಮಾಡಲಾಗಿದೆ. ಬುಧವಾರ ರಾತ್ರಿಯಿಂದಲೇ 144 ಸೆಕ್ಷನ್‌ ಜಾರಿ ಮಾಡಲಾಗಿದ್ದು ಇಂದು ಪಟ್ಟಣ ವ್ಯಾಪ್ತಿಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರಕರಣ ಸಂಬಂಧ ಇಲ್ಲಿಯವರೆಗೆ 46 ಮಂದಿಯನ್ನು ಬಂಧಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ನಾಗಮಂಗಲ ಪಟ್ಟಣದ್ಯಾಂತ ಪೊಲೀಸರ ಸರ್ಪಗಾವಲು ಹಾಕಿದ್ದಾರೆ. ಅನ್ಯಕೋಮಿನ ಯುವಕರ ಕೃತ್ಯ ಖಂಡಿಸಿ ಇಂದು ನಾಗಮಂಗಲ ಬಂದ್‌ಗೆ ವಿಶ್ವಹಿಂದೂ ಪರಿಷತ್, ಭಜರಂಗ ದಳ ಹಾಗೂ ಇತರೇ ಹಿಂದೂಪರ ಸಂಘಟನೆಗಳು ಕರೆ ನೀಡಿವೆ.

Read More

ಕೇರಳ: ಓಣಂ ಹಬ್ಬದ ಹಿನ್ನೆಲೆಯಲ್ಲಿ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯವು ಸೆಪ್ಟೆಂಬರ್ 13ರಂದು ತೆರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲನ್ನು ತೆರೆಯಲಾಗುತ್ತದೆ, ಸೆಪ್ಟೆಂಬರ್ 17 ರಿಂದ ಐದು ದಿನಗಳ ಮಾಸಿಕ ಪೂಜೆ ನಡೆಯಲಿದೆ. ಸೆಪ್ಟೆಂಬರ್ 21 ರಂದು ರಾತ್ರಿ 10 ಗಂಟೆಗೆ ಅಥಾಜ ಪೂಜೆ ಮತ್ತು ಹರಿವರಾಸನದ ನಂತರ ದೇವಾಲಯವನ್ನು ಮುಚ್ಚಲಾಗುತ್ತದೆ. ಉದಯಾಸ್ತಮಾನ ಪೂಜೆ ಮತ್ತು ಅಷ್ಟಾಭಿಷೇಕಗಳು ದೇವಾಲಯದಲ್ಲಿ ನಡೆಯಲಿರುವ ಇತರ ಧಾರ್ಮಿಕ ವಿಧಿಗಳಾಗಿವೆ. ಸಮಾರಂಭದ ನಂತರ ಅನ್ನದಾನ ಸಭಾಂಗಣದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಹಬ್ಬದ ದಿನಗಳಲ್ಲಿ ಕಲಭಾಭಿಷೇಕ, ಪಡಿಪೂಜೆ, ಪುಷ್ಪಾಭಿಷೇಕ ಸೇರಿದಂತೆ ವಿಶೇಷ ಆಚರಣೆಗಳು ನಡೆಯಲಿವೆ. ದೇವರ ಹೆಸರಿನಲ್ಲಿ ದೀಪದ ಮುಂದೆ ಇಟ್ಟಿರುವ ಬಾಳೆ ಎಲೆಯ ಮೇಲೆ ಸಿಹಿತಿಂಡಿಗಳು ಸೇರಿದಂತೆ ಹಬ್ಬದ ಭಕ್ಷ್ಯಗಳನ್ನು ಇಡುತ್ತಾರೆ.

Read More

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಹಿಂದೂ ದೇವತೆಗಳ ಅವಹೇಳನಕಾರಿ, ಅಶ್ಲೀಲ ಫೋಟೋ ಪೋಸ್ಟ್ ಮಾಡಿದ್ದು, ಈ ಬಗ್ಗೆ ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಬರೆದ ಫ್ಯಾಕ್ಟ್ ವಿಡ್ ಫೇಸ್ ಬುಕ್ ಪೇಜ್ ನಲ್ಲಿ ಪ್ರತಿದಿನ ತಂತ್ರಜ್ಞಾನ ಬಳಸಿ ಹಿಂದೂ ದೇವತೆಗಳ ಅವಹೇಳನಕಾರಿ, ಅಶ್ಲೀಲ ಫೋಟೋ ಪೋಸ್ಟ್ ಮಾಡಲಾಗುತ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಫೋಟೋಗಳನ್ನು ಪ್ರತಿದಿನ ಈ ಪೇಜ್ ನಲ್ಲಿ ಪೋಸ್ಟ್ ಮಾಡುತ್ತಿದ್ದು, ಇದು ಹಿಂದೂಗಳನ್ನು ಕೆರಳಿಸುವ ಷಡ್ಯಂತ್ರವಾಗಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಇಂತ ಪೋಟೋ ಪೋಸ್ಟ್ ಮಾಡುವ ಫ್ಯಾಕ್ಟ್ ವಿಡ್ ಫೇಸ್ ಬುಕ್ ಪೇಜ್ ಅಡ್ಮಿನ್, ಕಾಮೆಂಟ್ ಹಾಕುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಕೀಲರ ಒಕ್ಕೂಟ, ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮಂಗಳೂರಿನ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿದೆ.

Read More

ಮಂಗಳೂರು : ‘Fact Vid’ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ ಅನೇಕ ದಿನಗಳಿಂದ AI (Artificial Intelligence) ತಾಂತ್ರಿಕ ಸಹಾಯದಿಂದ ಹಿಂದೂ ದೇವತೆಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೋಗಳನ್ನು ನಿರಂತರವಾಗಿ ಫೇಸ್ಬುಕ್ ಜಾಲತಾಣದ ಮುಖಾಂತರ ಪ್ರಸಾರ ಮಾಡಲಾಗುತ್ತಿದೆ. ಈ Al ಆಧಾರಿತ ಚಿತ್ರಗಳಿಂದ ಕೋಟ್ಯಂತರ ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಸಂಬಂಧಿತ ಸೈಬರ್ ಕ್ರೈಮ್ ವಿಭಾಗವು ಇದರ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ಪೇಜ್ ನ ಅಡ್ಮಿನ್ ಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ಶ್ರೀ. ವಿಜಯ ಕುಮಾರ ಇವರು ಆಗ್ರಹಿಸಿದ್ದಾರೆ. ಈ ಕುರಿತು 10 ಸೆಪ್ಟೆಂಬರ್ 2024 ಮಂಗಳವಾರದಂದು ಮಂಗಳೂರಿನ ಸೈಬರ್ ಕ್ರೈಮ್ ವಿಭಾಗಕ್ಕೆ ಸಮಿತಿಯ ಸಮನ್ವಯಕರು ಮತ್ತು ಧರ್ಮಪ್ರೇಮಿ ನ್ಯಾಯವಾದಿಗಳ ಒಕ್ಕೂಟವು ಸೇರಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ‍್ಯ ಎಂದು ತಮ್ಮ ಬಗ್ಗೆ ಬರೆದುಕೊಂಡ ‘Fact Vid’ ಫೇಸ್ಬುಕ್…

Read More

ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದು, ಐವರು ಕೇಂದ್ರದ ಜಿಎಸ್ಟಿ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನ ಉದ್ಯಮಿಯೊಬ್ಬರ ವಿರುದ್ಧದ ಕೇಸ್ ಮುಚ್ಚಿ ಹಾಕಲು 1.50 ಕೋಟಿ ಹಣವನ್ನು ಪಡೆದಿದ್ದಂತ ಐವರು ಜಿಎಸ್ಟಿ ಅಧಿಕಾರಿಗಳು ನಾಪತ್ತೆಯಾಗಿದ್ದರು. ಈ ಸಂಬಂಧ ಬೈಯಪ್ಪನಹಳ್ಳಿ ಠಾಣೆಯ ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದರು. ಈ ದೂರು ಆಧರಿಸಿ ಕಾರ್ಯಾಚರಣೆಗೆ ಇಳಿದಂತ ಪೊಲೀಸರು ಮಹಿಳಾ ಅಧಿಕಾರಿ ಸೇರಿದಂತೆ ಐವರು ಕೇಂದ್ರದ ಜಿಎಸ್ಟಿ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಬೈಯ್ಯಪ್ಪನಹಳ್ಳಿ ಠಾಣೆಯ ಪೊಲೀಸರು 1.50 ಕೋಟಿ ಹಣ ಪಡೆದು ಪರಾರಿಯಾಗಿದ್ದಂತ ಐವರು ಅಧಿಕಾರಿಗಳನ್ನು ಅರೆಸ್ಟ್ ಮಾಡಿದೆ. ಅಂದಹಾಗೇ ಉದ್ಯಮಿಯ ವಿರುದ್ಧ ಏನಿತ್ತು ಕೇಸ್? ಅವರು ಅಷ್ಟೊಂದು ಹಣ ಕೊಟ್ಟಿದ್ದೇಕೆ? ಸೇರಿದಂತೆ ಇತರೆ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. ಈ ಸಂಬಂಧ ಪೊಲೀಸರಿಂದ ತನಿಖೆ ನಡೆಯುತ್ತಿದ್ದು, ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

Read More

ಮಂಗಳೂರು:ಹತ್ತು ದಿನಗಳ ಹಿಂದೆ ಗಡಿ ಭಾಗದ ಕಾಸರಗೋಡು ಜಿಲ್ಲೆಯ ಕಿಯೂರು ಅಳಿವೆಬಾಗಿಲಿನಲ್ಲಿ ಸಮುದ್ರ ಪಾಲಾಗಿದ್ದ ಚೆಮ್ನಾಡ್ ನಿವಾಸಿಯ ಮೃತದೇಹ ತ್ರಿಶೂರು ಸಮೀಪದ ಅಝಿಕ್ಕೋಡ್ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ. ಚೆಮ್ನಾಡ್ ಕಲ್ಲುವಳಪ್ಪುವಿನ ಮುಹಮ್ಮದ್ ರಿಯಾಝ್(37) ಮೃತಪಟ್ಟವರು. ಆ.31ರಂದು ಮುಂಜಾನೆ 5:30ರ ಸುಮಾರಿಗೆ ಘಟನೆ ನಡೆದಿತ್ತು. ಕಿಯೂರು ಅಳಿವೆಬಾಗಿಲಿನಲ್ಲಿ ಗಾಳ ಹಾಕಿ ಮೀನು ಹಿಡಿಯಲು ತೆರಳಿದ್ದ ರಿಯಾಝ್ ನಾಪತ್ತೆಯಾಗಿದ್ದರು. ಬೆಳಗ್ಗೆ 9 ಗಂಟೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಮೊಬೈಲ್‌ಗೆ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿರಲಿಲ್ಲ. ಈ ಮಧ್ಯೆ ಕಿಯೂರು ಅಳಿವೆಬಾಗಿಲಿನಲ್ಲಿ ರಿಯಾಝ್ ನ ಸ್ಕೂಟರ್ ಹಾಗೂ ಗಾಳ ಹಾಕುವ ವಸ್ತುಗಳನ್ನು ಒಳಗೊಂಡ ಬ್ಯಾಗ್ ಪತ್ತೆಯಾಗಿತ್ತು. ಬಳಿಕ ಕುಟುಂಬಸ್ಥರು ಮೇಲ್ಪರಂಬ ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ಪೊಲೀಸರು, ಅಗ್ನಿ ಪೊಲೀಸ್, ಮೀನುಗಾರಿಕಾ ಇಲಾಖೆ ಹಾಗೂ ಮೀನುಗಾರರರು ರಿಯಾಝ್ ಅವರಿಗಾಗಿ ಶೋಧ ನಡೆಸಿದ್ದರು. ಆದರೆ ಅವರು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುಳುಗುತಜ್ಞ ಈಶ್ವರ್ ಮಲ್ಪೆಯವರನ್ನು ಕರೆಸಿ ಗಂಟೆಗಳ ಕಾಲ ಶೋಧ ನಡೆಸಿದರೂ ಪ್ರಯೋಜವಾಗಲಿಲ್ಲ. ಬಳಿಕ ಎರಡು…

Read More

ಪುತ್ತೂರು : ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗಿನ ಜಾವ ಬೆಂ*ಕಿ ಕಾಣಿಸಿಕೊಂಡಿದ್ದು, ಅ*ಗ್ನಿಶಾಮಕ ದಳದವರು ಬೆಂ*ಕಿ ನಂದಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಬೊಳುವಾರಿನ ಮುಖ್ಯ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ವಿದ್ಯುತ್ ಮೀಟರ್ ಬೋರ್ಡ್‌ನ ಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಜಂಕ್ಷನ್ ಬಾಕ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಆಸ್ಪತ್ರೆಯ ತುಂಬಾ ಹೊಗೆ ತುಂಬಿಕೊಂಡಿದ್ದು, ತಕ್ಷಣ ಆಗ್ನಿಶಾಮಕ ದಳದವರು ಆಗಮಿಸಿ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದ್ದಾರೆ. ರೋಗಿಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಲಾಗಿದೆ.

Read More

ಮಂಗಳೂರು :- ಕಿನ್ನಿಗೋಳಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ತಾಯಿಗೆ ರಿಕ್ಷಾ ಡಿಕ್ಕಿ ಆಗಿ ಅದರಡಿಗೆ ಬಿದ್ದಿದ್ದ ತಾಯಿಯನ್ನು ತಕ್ಷಣವೇ ಧಾವಿಸಿ ಬಂದು ರಕ್ಷಿಸಿದ ಬಾಲಕಿ ವೈಭವಿಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಮಂಗಳವಾರ ತಮ್ಮ ಕಚೇರಿಗೆ ಕರೆಸಿ ಸನ್ಮಾನಿಸಿದರು.7ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ವೈಭವಿ ಅವರಿಗೆ ಜಿಲ್ಲಾಧಿಕಾರಿ ಕಚೇರಿಯ ತಮ್ಮ ಕೊಠಡಿಯಲ್ಲಿ ಪೇಟ, ಹಾರ ತೊಡಿಸಿ ಸನ್ಮಾನಿಸಿದ ಜಿಲ್ಲಾಧಿಕಾರಿಗಳು ಬಾಲಕಿಯ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿದರು. ವೈಭವಿಯ ಈ ಪ್ರಜ್ಞೆ ಎಲ್ಲರಿಗೂ ಮಾದರಿಯಾಗಿದೆ. ಶಾಲಾ ಹಂತದಲ್ಲಿ ಮಕ್ಕಳಿಗೆ ಇಂತಹ ಸಮಯ ಪ್ರಜ್ಞೆ ಮತ್ತು ಧೈರ್ಯ ಮೂಡಿ ಬರಬೇಕಿದೆ ಎಂದು ಅವರು ಹೇಳಿದರುವೈಭವಿಯ ಧೈರ್ಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೂ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘಿಸಿದ್ದರು.

Read More

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಪೊಲೀಸ್ ಕಾನ್ಸ್‌ ಟೇಬಲ್ ಸುನೀಲ್ (50) ಅವರು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕರಿಯಾಗದೇ ನಗರ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಕಾಸರಗೋಡಿನವರಾದ ಸುನೀಲ್ ಅವರು 1996 ರಲ್ಲಿ ಪೊಲೀಸ್ ಸೇವೆಗೆ ಭರ್ತಿಯಾಗಿದ್ದರು ಬಳಿಕ ಉಡುಪಿ ಹಾಗೂ ಮಂಗಳೂರಿನ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಮಂಗಳೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಸುನೀಲ್ ಅವರ ನಿಧನಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.

Read More

ಮಂಗಳೂರು: ಉಳ್ಳಾಲ ಠಾಣಾ ಕಾನ್‌ಸ್ಟೇಬಲ್‌ ಒಬ್ಬರನ್ನು ಕೊಲೆಗೆ ಯತ್ನಿಸಿದ್ದ ಇಬ್ಬರು ಅಪರಾಧಿಗಳಿಗೆ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10ವರ್ಷ ಜೈಲು ಶಿಕ್ಷೆ ಮತ್ತು ತಲಾ 16ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಉಳ್ಳಾಲದ ನಿವಾಸಿಗಳಾದ ಮುಸ್ತಾಕ್ (32) ಮತ್ತು ಜಾಕೀರ್ (36) ಶಿಕ್ಷೆಗೊಳಗಾದ ಅಪರಾಧಿಗಳು. ಪ್ರಕರಣದ 2ನೇ ಆರೋಪಿ ಯಾಸೀನ್ ಮತ್ತು 3ನೇ ಆರೋಪಿ ಅಶ್ರಫ್(50) ತಲೆಮರೆಸಿಕೊಂಡಿದ್ದಾರೆ. 2015ರ ಡಿ.17ರಂದು ರಾತ್ರಿ ನಾಲ್ವರು ಅಪರಾಧಿಗಳು ಉಳ್ಳಾಲದ ಸಾರ್ವಜನಿಕ ಸ್ಥಳದಲ್ಲಿ ಬಾಟಲಿಗಳನ್ನು ಎಸೆದು ಗಲಾಟೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಠಾಣೆಯ ಆಗಿನ ಹೆಡ್‌ಕಾನ್‌ಸ್ಟೇಬಲ್ ಉಮೇಶ್‌ ಮತ್ತು ಕಾನ್‌ಸ್ಟೇಬಲ್ ರವೀಂದ್ರ ಸ್ಥಳಕ್ಕೆ ತೆರಳಿ ಗಲಾಟೆ ಮಾಡುತ್ತಿದ್ದ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ದುಷ್ಕರ್ಮಿಗಳು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂದರ್ಭ ಮೊದಲ ಆರೋಪಿ ಮುಸ್ತಾಕ್ ನಿಮ್ಮಲ್ಲೊಬ್ಬರನ್ನು ಕೊಲೆ ಮಾಡಿದರೆ ಬುದ್ಧಿ ಬರುತ್ತದೆ ಎಂದು ತನ್ನ ಕೈಯಲ್ಲಿದ್ದ ಚಾಕುವಿನಿಂದ ರವೀಂದ್ರರಿಗೆ ಇರಿದು ಕೊಲೆಗೆ ಯತ್ನಿಸಿದ್ದ.…

Read More