ಬಂಟ್ವಾಳ: ತಾಲೂಕಿನ ಸಜೀಪಮುನ್ನೂರಿನ ಗಾಂಧಿನಗರ ಕ್ರಾಸ್ ನಲ್ಲಿ ನಡೆದ ಸ್ಕೂಟರ್ ಅಪಘಾತದ ಸಂದರ್ಭದಲ್ಲಿ ಒಂದು ಸ್ಕೂಟರಿನಲ್ಲಿ ಅಕ್ರಮ ಗೋಮಾಂಸ ಸಾಗಾಟ ಪತ್ತೆಯಾಗಿದ್ದು, ಸವಾರನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಜೀಪಮುನ್ನೂರು ದಾಸರಗುಡ್ಡೆ ನಿವಾಸಿ ಸ್ಕೂಟರ್ ಸವಾರೆ ಅನುರಾಧ ಕೆ. ಅವರು ಡಿ.24ರ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಗಾಂಧಿನಗರ ಕ್ರಾಸ್ ಬಳಿ ಸಜೀಪ ಕಡೆಯಿಂದ ಸವಾರ ಸ್ಕೂಟರನ್ನು ಅತಿ ವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅನುರಾಧ ಅವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಎರಡೂ ಸ್ಕೂಟರಿನ ಸವಾರರು ಕೂಡ ರಸ್ತೆಗೆ ಬಿದ್ದು ಗಾಯವಾಗಿದ್ದು, ಆರೋಪಿಯ ಸ್ಕೂಟರಿನಿಂದ ಪ್ಲಾಸ್ಟಿಕ್ ನಲ್ಲಿ ಕಟ್ಟಿದ ಮಾಂಸದ ಕಟ್ಟುಗಳು ಕೂಡ ರಸ್ತೆಗೆ ಬಿದ್ದಿದೆ. ಈಗ ಎಲ್ಲಿಯೋ ದನವನ್ನು ಹತ್ಯೆ ಮಾಡಿ ಮಾಂಸವನ್ನು ಮಾರಾಟ ಮಾಡುವುದಕ್ಕಾಗಿ ಸಜೀಪ ಕಡೆಯಿಂದ ಮೆಲ್ಕಾರ್ ಕಡೆಗೆ ಹೋಗುತ್ತಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: main-admin
ಮಂಗಳೂರು: ಟ್ಯಾಂಕರ್ ವ್ಯವಹಾರಕ್ಕೆ ಸಂಬಂಧಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಡ್ಯಾರಿನ ಅಶೋಕ್ ಎ. ವಂಚಿಸಿರುವ ಬಗ್ಗೆ ಪ್ರವೀಣ್ ಕುತ್ತಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರವೀಣ್ ಅವರು ಅಶೋಕ್ ಜೊತೆ ಟ್ಯಾಂಕರ್ ವ್ಯವಹಾರ ಮಾಡುತ್ತಿದ್ದು, ಅವರ ಹೆಸರಿನಲ್ಲಿ 9 ಟ್ಯಾಂಕರ್‌ಗಳಿವೆ. ಅವರು ಕುತ್ತಾರಿನಲ್ಲಿ ಹೊಟೇಲ್ ನಡೆಸುತ್ತಿದ್ದುದರಿಂದ ಅವರ ಬ್ಯಾಂಕ್ ವ್ಯವಹಾರ, ಹೊಸ ಟ್ಯಾಂಕರ್ ಖರೀದಿ, ಹಳೇ ಟ್ಯಾಂಕರ್ ಮಾರಾಟ ಇತ್ಯಾದಿ ವ್ಯವಹಾರಗಳನ್ನು ಅಶೋಕ್ ನೋಡಿಕೊಳ್ಳುತ್ತಿದ್ದರು. ತಣ್ಣೀರುಬಾವಿಯಲ್ಲಿರುವ ನಯಾರಾ ತೈಲ ಕಂಪೆನಿಯಲ್ಲಿರುವ ಪ್ರವೀಣ್ ಟ್ರಾನ್ಸ್‌ಪೋರ್ಟ್ ಕಂಪೆನಿಯ ಮೂಲಕ ಪ್ರವೀಣ್ ವ್ಯವಹಾರ ಮಾಡುತ್ತಿದ್ದು, ಇತ್ತೀಚೆಗೆ ಸುಮಾರು 2 ತಿಂಗಳ ಹಿಂದೆ ಅವರು 9 ಟ್ಯಾಂಕರ್‌ಗಳ ದಾಖಲೆಗಳನ್ನು ಪರಿಶೀಲಿಸಿದಾಗ ಆರೋಪಿ ಅಶೋಕ್ ಎ. 9 ಟ್ಯಾಂಕರ್‌ಗಳ ಎಲ್ಲ ದಾಖಲೆ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ನಕಲಿ ಸಹಿ ಹಾಕಿಸಿಕೊಂಡು ನೈಜ ದಾಖಲೆಗಳೆಂದು ಆರ್‌ಟಿಒ ಕಚೇರಿಗೆ ಹಾಜರುಪಡಿಸಿ ಅವರ ಪತ್ನಿ, ಮಕ್ಕಳು ಮತ್ತು ಸಂಬಂಧಿಕರ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ನಯಾರಾ ತೈಲ ಕಂಪೆನಿಯಲ್ಲಿ ಪ್ರವೀಣ್ ಹೆಸರಿನಲ್ಲಿದ್ದ ಟ್ರಾನ್ಸ್‌ಪೋರ್ಟ್ ವ್ಯವಹಾರವನ್ನು ನಕಲಿ ಸಹಿ…
ಬಂಟ್ವಾಳ : ಬಿ.ಸಿ.ರೋಡಿನ ಕೈಕಂಬ ಪರ್ಲಿಯಾದಲ್ಲಿ ಬಾಡಿಗೆ ಕೊಡುವ ವಿಚಾರದಲ್ಲಿ ಎರಡು ತಂಡಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಗಲಾಟೆಗೆ ಸಂಬಂಧಿಸಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳನ್ನು ಪರ್ಲಿಯಾ ಮದ್ದ ಮನೆ ನಿವಾಸಿ ಶಾಹುಲ್ ಹಮೀದ್ ಹಾಗೂ ತಾರಿಪಡ್ಪು ನಿವಾಸಿ ಹಸೈನಾರ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮನೆಯ ಅಂಗಳದಲ್ಲಿ ಎರಡು ತಂಡಗಳ ನಡುವೆ ಗಲಾಟೆಯ ವಿಡಿಯೋ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈಯಕ್ತಿಕ ವಿಚಾರದಲ್ಲಿ ಆರಂಭವಾದ ಗಲಾಟೆ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಎಸ್.ಡಿ.ಪಿ.ಐ.ಮತ್ತು ಕಾಂಗ್ರೆಸ್ ಪಕ್ಷದ ಅಂಗಳದಲ್ಲಿ ಮಾತಿನ ಫೈರಿಂಗ್ ಆರಂಭವಾಗಿತ್ತು. ಪ್ರಕರಣದ ಕುರಿತಂತೆ ಎಸ್.ಡಿ.ಪಿ.ರಾಜ್ಯಾಧ್ಯಕ್ಷ ಮಂಗಳೂರಿಗೆ ಆಗಮಿಸಿದ್ದು ಘಟನೆಯಲ್ಲಿ ಗಾಯವಾಗಿರುವ ಆರೋಪಿಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಲ್ಲದೆ, ಕಾಂಗ್ರೆಸ್ ವಿರುಧ್ದ ಮತ್ತು ಗಾಂಜಾ ಕುರಿತಾಗಿ ಹೇಳಿಕೆಯನ್ನು ನೀಡಿದ್ದರು.…
ಕೈಕಂಬ: ದನಗಳನ್ನು ಕಳವು ಮಾಡಿ ಕಡಿದು ಮಾಂಸ ಮಾಡಿ ಮಾರಾಟ ಮಾಡಿರುವ ಇಬ್ಬರು ಆರೋಪಿಗಳಾದ ಮೂಡುಬಿದಿರೆ ತಾಲೂಕಿನ ಕರಿಂಜೆ ಗ್ರಾಮದ ಸುವರ್ಣ ನಗರದ ಮೊಹಮ್ಮದ್ ರಫೀಕ್ ಯಾನೆ ರಫೀಕ್ (31) ,ಕಲ್ಲಬೆಟ್ಟು ಗ್ರಾಮದ ನೀರಳಿಕೆ ಹೌಸ್‌ನ ಶೌಕತ್ ಅಲಿ ಯಾನೆ ಶೌಕತ್ (34)ನನ್ನು ಮತ್ತು ದನ ಕಳವು ಮಾಡಲು ಬಳಸಿರುವ ಸುಮಾರು 3 ಲಕ್ಷ ರೂ. ಮೌಲ್ಯದ ಬಿಳಿ ಬಣ್ಣದ ರಿಡ್ಜ್ ಕಾರನ್ನು ಹಾಗೂ ಇತರೆ ಸೊತ್ತುಗಳನ್ನು ಬಜಪೆ ಪೊಲೀಸರು ಡಿ. 22ರಂದು ವಶಪಡಿಸಿಕೊಂಡಿದ್ದಾರೆ. ಅ.19ರಂದು ತೆಂಕ ಎಡಪದವು ಗ್ರಾಮ, ಪಂಚಾಯತ್ ಕಚೇರಿಯ ಬಳಿ ಮೇಯಲು ಬಿಟ್ಟುಗಳನ್ನು ಮತ್ತು ಅ.21ರಂದು ತೆಂಕ ಎಡಪದವು ಗ್ರಾಮದ ಪದರಂಗಿ ಕೊಡೇìಲ್ ಎನ್ನುವಲ್ಲಿ ಮೇಯಲು ಬಿಟ್ಟ ದನಗಳನ್ನು ಯಾರೋ ಕಳ್ಳರು ಕಾರಿನಲ್ಲಿ ತುಂಬಿಸಿ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಆರೋಪಿತರ ವಿರುದ್ಧ ಮೂಡುಬಿದಿರೆ, ಉಡುಪಿಯ ಅಜೆಕಾರು ಮತ್ತು ಕಾರ್ಕಳ ಗ್ರಾಮಾಂತರ ಮತ್ತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್…
ಮಂಗಳೂರು: ಪ್ರತೀ ವರ್ಷ ಆಯೋಜಿಸಿಕೊಂಡು ಬಂದಿರುವ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ “ನೆರವು” ಸಹಾಯಹಸ್ತ ಪ್ರದಾನ ಕಾರ್ಯಕ್ರಮ ಡಿ. 25ರಂದು ಮಧ್ಯಾಹ್ನ ಗಂಟೆ 3.30ಕ್ಕೆ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ನಿನ ಅಧ್ಯಕ್ಷರು ಹಾಗು ಸಹ- ಸಂಸ್ಥಾಪಕರೂ ಆಗಿರುವ ಡಾ. ತೇಜಸ್ವಿನಿ ಅನಂತಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ. ಮೋಹನ ಆಳ್ವ, ಕಾಪು ವಿಧನಾಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ.ಗ್ರೂಪ್ ನ ಆಡಳಿತ ನಿರ್ದೇಶಕರಾದ ಗೌರವ್ ಪಿ. ಶೆಟ್ಟಿ ಮತ್ತು ಉಪಸ್ಥಿತರಿರಲಿದ್ದಾರೆ“ ಎಂದು ಎಂ.ಆರ್.ಜಿ.ಗ್ರೂಪ್ ಚೇರ್ಮನ್ ಡಾ. ಕೆ.ಪ್ರಕಾಶ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. “ಈ ವರ್ಷ ಒಟ್ಟು 3,000 ಕುಟುಂಬಗಳಿಗೆ 6 ಕೋಟಿ ರೂಪಾಯಿಗೂ ಮಿಕ್ಕಿ ನೆರವನ್ನು ವಿತರಿಸಲಾಗುತ್ತಿದೆ. ಇದರಿಂದ ಸುಮಾರು ಹದಿನೈದು ಸಾವಿರ ಮಂದಿಗೆ ಪ್ರಯೋಜನವಾಗಲಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಒಂದು ನಿಗದಿತ ಮಾನದಂಡವನ್ನು ಅನುಸರಿಸಲಾಗಿದೆ. ಅರ್ಜಿಗಳನ್ನು ಪರಿಶೀಲಿಸಿ,…
ಮಂಗಳೂರು: ನಂದಿನಿ ನದಿಯ ದಂಡೆಯ ಮೇಲಿರುವ ಪ್ರೀಮಿಯಂ ವಸತಿ ಬಡಾವಣೆಯಾಗಿರುವ ರೋಹನ್ ಎಸ್ಟೇಟ್ ಮುಕ್ಕಾ ಲೇಔಟ್‌ನ ಗ್ರ್ಯಾಂಡ್ ಲಾಂಚ್ ಮಂಗಳೂರಿನಲ್ಲಿ ನಡೆಯಿತು. ರೆಸಾರ್ಟ್ ಶೈಲಿಯ ವಸತಿ ಅಭಿವೃದ್ಧಿರೆಸಾರ್ಟ್ ತರಹದ ವಾತಾವರಣದೊಂದಿಗೆ ವಿನ್ಯಾಸಗೊಳಿಸಲಾದ ವಸತಿ ವಿನ್ಯಾಸವಾಗಿದೆ. ಇದು ರೆಸಾರ್ಟ್ ಅಲ್ಲದಿದ್ದರೂ, ಲೇಔಟ್‌ನ ಉನ್ನತ-ಮಟ್ಟದ ಸೌಲಭ್ಯಗಳು ಮತ್ತು ಪ್ರಶಾಂತವಾದ ಸುತ್ತಮುತ್ತಲಿನ ಪ್ರದೇಶಗಳು ವಿಶಿಷ್ಟವಾದ ಹಿಮ್ಮೆಟ್ಟುವಿಕೆಗೆ ಹೋಲುವ ಜೀವನಶೈಲಿಯನ್ನು ಸೃಷ್ಟಿಸುತ್ತವೆ.ನದಿ, ಸಮುದ್ರ ಮತ್ತು ರಾಷ್ಟ್ರೀಯ ಹೆದ್ದಾರಿಯ ನಡುವೆ ಕಾರ್ಯತಂತ್ರವಾಗಿ ನೆಲೆಗೊಂಡಿರುವ ಎಸ್ಟೇಟ್ ಗಣ್ಯ ವಸತಿ ಸಮುದಾಯವನ್ನು ನೀಡಲು ತನ್ನ ನೈಸರ್ಗಿಕ ಪರಿಸರವನ್ನು ಬಳಸಿಕೊಳ್ಳುತ್ತದೆ. ನದಿಯ ಮುಂಭಾಗವನ್ನು ವಿಶಿಷ್ಟವಾದ ಗಡಿ ಗೋಡೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಐಷಾರಾಮಿ ವಿನ್ಯಾಸವು ಕರಾವಳಿ ಪ್ರದೇಶದಲ್ಲಿ ಒಂದು ವಿಶೇಷ ಸ್ಥಾನವನ್ನು ಹೊಂದಿದೆ. ಅದರ ಪ್ರಮುಖ ಸ್ಥಳ, ವಿಶಿಷ್ಟ ವೈಶಿಷ್ಟ್ಯಗಳು ಮತ್ತು ಉನ್ನತ ವಿನ್ಯಾಸದಿಂದ ಭಿನ್ನವಾಗಿದೆ. ಇದು ಉನ್ನತ ಜೀವನ ಅನುಭವವನ್ನು ಬಯಸುವವರಿಗೆ ಹೆಚ್ಚು ಬೇಡಿಕೆಯಿರುವ ಅವಕಾಶವನ್ನು ಪ್ರತಿನಿಧಿಸುತ್ತದೆ.ಕ್ರಿಸ್ಮಸ್ ಕೊಡುಗೆ ಮತ್ತು ಭವಿಷ್ಯದ ದೃಷ್ಟಿ ರೋಹನ್ ಕಾರ್ಪೊರೇಷನ್ ವಿಶೇಷ ಕ್ರಿಸ್ಮಸ್ ಕೊಡುಗೆಯಾಗಿ ಮುಂದಿನ 15…
ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನಡುಗಲ್ಲು ಸಮೀಪ ನಡೆದಿದೆ. ಸುಳ್ಯ ಕಡೆಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಪಾವಂಜೆಯ ರವಿಪ್ರಸಾದ್ ಮತ್ತು ಅವರ ಮನೆಯವರಿದ್ದ ಕಾರು ಸುಬ್ರಹ್ಮಣ್ಯ-ಜಾಲ್ಸೂರು ರಸ್ತೆಯ ನಡುಗಲ್ಲು ಬಳಿ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ಮಣ್ಣಿನ ಬರೆಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರು ಕಾರಿನಲ್ಲಿದ್ದ ರವಿಪ್ರಸಾದ್, ಅವರ ಪತ್ನಿ ಮತ್ತು ಮಗುವನ್ನು ರಕ್ಷಿಸಿದ್ದಾರೆ. ರವಿಪ್ರಸಾದ್ ಅವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿ: ಗಾಳಿ ತುಂಬುವಾಗ ಟೈರ್ ಸ್ಫೋಟಗೊಂಡು ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಸಂಭವಿಸಿದೆ. ಕೆಪಿಎಸ್ ಪಿಯು ಕಾಲೇಜ್ ಹಿಂಭಾಗದಲ್ಲಿನ ಟೈರ್ ಪಂಚರ್ ಶಾಪ್‌ನಲ್ಲಿ ಬಸ್ಸಿನ ಟೈರ್‌ಗೆ ಗಾಳಿ ತುಂಬುವ ಸಂದರ್ಭ ಟೈರ್ ಸಿಡಿದಿದೆ. ಈ ವೇಳೆ ಗಾಳಿ ಹಾಕುತ್ತಿದ್ದ ಯುವಕ ಅಬ್ದುಲ್ ರಜೀದ್ (19) ಗಾಯಗೊಂಡಿದ್ದಾರೆ. ಖಾಸಗಿ ಶಾಲೆ ಬಸ್ಸೊಂದರ ಚಾಲಕ ಟೈರ್ ಪ್ಯಾಚ್ ಗೆಂದು ಇಲ್ಲಿಗೆ ಬಂದಿದ್ದ. ಈ ವೇಳೆ ಗಾಳಿ ತುಂಬಿದ ಕೆಲವೇ ನಿಮಿಷಗಳಲ್ಲಿ ಟೈರ್ ಸಿಡಿದು ಸ್ಫೋಟಗೊಂಡಿದೆ. ಗಾಳಿ ತುಂಬಿಸುತ್ತಿದ್ದ ಯುವಕ ಎದ್ದು ನಿಲ್ಲುವಷ್ಟರಲ್ಲಿ ಸ್ಫೋಟವಾಗಿದ್ದು, ಟೈರ್‌ನ ಸಿಡಿತಕ್ಕೆ ಕೆಲವು ಅಡಿ ಎತ್ತರಕ್ಕೆ ಯುವಕ ಎಸೆಯಲ್ಪಟ್ಟಿದ್ದಾನೆ. ಅಪಘಾತದ ಹೊಡೆತಕ್ಕೆ ಯುವಕನ ಕೈ ಮುರಿತಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಭಯಾನಕವಾಗಿದೆ.
ಬೆಳಗಾವಿ : ಬೆಳಗಾವಿಯ ಸುವರ್ಣಸೌಧದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಸೇರಿ 10 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಿ.ಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿಬಂದ ಬಳಿಕ ಸುವರ್ಣಸೌಧದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಸೌಧದೊಳಕ್ಕೆ ನುಗ್ಗಿ ಸಿ.ಟಿ ರವಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಅಲ್ಲದೇ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಖಾನಾಪುರ ಪೊಲೀಸ್ ಠಾಣೆಗೆ ಸಿ.ಟಿ ರವಿ ಲಿಖಿತ ದೂರು ಸಲ್ಲಿಸಿದ್ದರು. ಈ ಪ್ರಕರಣವನ್ನು ಹಿರೇಬಾಗೇವಾಡಿ ಠಾಣೆಗೆ ವರ್ಗಾವನೆ ಮಾಡಲಾಗಿತ್ತು. ಭಾನುವಾರ ಸಿ.ಟಿ ರವಿ ಅವರು ನೀಡಿದ್ದ ಲಿಖಿತ ದೂರಿನ ಪ್ರತಿಯು ಪೋಸ್ಟ್ ಮೂಲಕ ಪೊಲೀಸರಿಗೆ ಬಂದು ತಲುಪಿದ ಬೆನ್ನಲ್ಲೇ ಬೆಳಗಾವಿ ಹಿರೇಬಾಗೇವಾಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ
ಉಡುಪಿ: ವ್ಯಕ್ತಿಯೋರ್ವರು ಸೊಸೈಟಿಯಲ್ಲಿ ಪಡೆದ ಸಾಲ ಮರುಪಾವತಿಸದೆ, ಸಾಲ ಸಂದಾಯದ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜ್ಜರಕಾಡು ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ರಿಯಾನತ್ ಬಾನು, ಮೊಹಮ್ಮದ್ ಹನೀಫ್, ನುಮಾನ್ ಅಜ್ಜರಕಾಡು ಶಾಖೆಯಲ್ಲಿ ಹ್ಯುಂಡೈ ವೆನ್ಯೂ ಕಾರನ್ನು ಅಡಮಾನವಿರಿಸಿ, ರಿಯಾನತ್ ಬಾನು ಹೆಸರಿನಲ್ಲಿ 8 ಲಕ್ಷ ರೂ. ಸಾಲ ಪಡೆದಿದ್ದರು. ಜಾಮೀನುದಾರಾಗಿ ಮೊಹಮ್ಮದ್ ಹನೀಫ್, ನುಮಾನ್ ಸಹಿ ಮಾಡಿದ್ದರು. ಸಾಲದ ಅರ್ಜಿ, ಪ್ರಾಮಿಸರಿ ನೋಟ್ ಹಾಗೂ ಒಪ್ಪಿಗೆ ಪತ್ರ ಮತ್ತು ಇತರ ದಾಖಲಾತಿಗಳನ್ನು ಸೊಸೈಟಿಗೆ ಬರೆದುಕೊಟ್ಟು ಸಾಲ ಮರು ಪಾವತಿಸುವುದಾಗಿ ನಂಬಿಸಿ, ವಾಹನ ಸಾಲ ಪಡೆದು ಅನಂತರ ಸೊಸೈಟಿಗೆ ಸಾಲ ಮರುಪಾವತಿಸದೆ ಸೊಸೈಟಿಯವರು ಸಾಲ ಸಂದಾಯವಾಗಿರುವುದಾಗಿ ಪತ್ರ ನೀಡಿರುವಂತೆ ಮತ್ತು ನಮೂನೆ 35ಕ್ಕೆ ಸಹಿ ಹಾಕಿರುವಂತೆ ನಕಲಿ ಸಹಿ ಮತ್ತು ಸೀಲು ಹಾಕಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆ ನಕಲಿ ದಾಖಲೆಗಳು ನೈಜ್ಯವೆಂದು ನಂಬಿಸಿ ಆರ್‌ಟಿಒ ಕಚೇರಿಗೆ ಸಲ್ಲಿಸಿದ್ದರು. ಈ ನಕಲಿ ದಾಖಲೆಗಳ…










