Author: main-admin

ಬಂಟ್ವಾಳ : ಬಿ ಸಿ ರೋಡಿನ ಹಳೆ ತಾಲೂಕು ಕಚೇರಿ ಬಳಿ ನಿಲ್ಲಿಸಿದ್ದ ಬೈಕ್ ಕಳವುಗೈದಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ನಿವಾಸಿ ಮೋಹನ್ ಅವರಿಗೆ ಸೇರಿದ ಬೈಕ್ ಕಳವಾಗಿದೆ. ಇವರು ಸೋಮವಾರ (ಆಗಸ್ಟ್ 19) ಸಂಜೆಯ ವೇಳೆ, ಬಂಟ್ವಾಳ ಹಳೆ ತಾಲೂಕು ಕಛೇರಿ ಬಳಿ ತನ್ನ KA19ET7355 ನೋಂದಣಿ ಸಂಖ್ಯೆಯ ಪಲ್ಸರ್ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಹೋಗಿದ್ದರು. ಅದೇ ದಿನ ರಾತ್ರಿ ಸ್ಥಳಕ್ಕೆ ಬಂದು ನೋಡಿದಾಗ ತನ್ನ ದ್ವಿಚಕ್ರ ವಾಹನ ಕಾಣದಿದ್ದು, ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಿದರೂ ಪತ್ತೆಯಾಗಲಿಲ್ಲ. ಕಳವಾದ ದ್ವಿಚಕ್ರ ವಾಹನದ ಮೌಲ್ಯ 40 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 142/2024 ಕಲಂ: 303(2) BNS -2023 ರಂತೆ ಪ್ರಕರಣ ದಾಖಲಾಗಿರುತ್ತದೆ.

Read More

ಕಾಸರಗೋಡು : ಮಹಿಳೆಯೋರ್ವರ ಮೃತದೇಹ ಬಾವಿಯಲ್ಲಿ ಪತ್ತೆಯ ಘಟನೆ ನಗರ ಹೊರವಲಯದ ಬಟ್ಟಂಪಾರೆಯಲ್ಲಿ ನಡೆದಿದೆ. ಬಟ್ಟಂಪಾರೆಯ ಎಸ್ . ಶಿವ ರವರ ಪತ್ನಿ ಶರ್ಮಿಳಾ ( 44) ಮೃತ ಮಹಿಳೆ. ಸೋಮವಾರ ರಾತ್ರಿ ಸುಮಾರು11.30 ಗಂಟೆಯ ಬಳಿಕ ಇವರು ಮನೆಯಿಂದ ನಾಪತ್ತೆಯಾಗಿದ್ದರು. ಇದರಿಂದ ಮನೆಯವರು ಹುಡುಕಾಡಿದಾಗ ತಡರಾತ್ರಿ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಮೃತ ದೇಹವನ್ನು ಮೇಲಕ್ಕೆತ್ತಿದರು . ಶರ್ಮಿಳಾರ ಪತಿ ಶಿವ ಅಮೈ ರಸ್ತೆ ಬಳಿಯ ಅಕೌಂಟೆಂಟ್ ಕಚೇರಿ ನಡೆಸುತ್ತಿದ್ದು ಇದೇ ಕಚೇರಿಯಲ್ಲಿ ಶರ್ಮಿಳಾ ಕೂಡಾ ಅಕೌಂಟೆಂಟ್ ಆಗಿ ದುಡಿಯುತ್ತಿದ್ದರು. ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ಉಡುಪಿ: ಮೊಬೈಲ್ ಕೊಡದಿದ್ದಕ್ಕೆ ಮನೆಬಿಟ್ಟು ಹೋಗಿ, ಬಳಿಕ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಬಾವಿಯೊಂದರಲ್ಲಿ ಪತ್ತೆಯಾದ ಘಟನೆ ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ಹಿಂಬದಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಹಿಡಿಯಡಕ ಅಂಜಾರು ಪೊಲೀಸ್ ಠಾಣೆಯ ಕ್ವಾಟ್ರಸ್ ಬಳಿ ನಿವಾಸಿ ಪ್ರಥಮೇಶ್ (16) ಎಂದು ಗುರುತಿಸಲಾಗಿದೆ. ಈತ ಹಿರಿಯಡಕ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ನಿನ್ನೆ ಮೊಬೈಲ್ ಕೊಡದಿದ್ದಕ್ಕೆ ಆತ ಮನೆಬಿಟ್ಟು ಹೋಗಿದ್ದನು. ಬಳಿಕ ಮನೆಯವರು ಹಾಗೂ ಸ್ನೇಹಿತರು ಎಷ್ಟೇ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಇಂದು ಬೆಳಿಗ್ಗೆ ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ಹಿಂಬದಿಯ ಬಾವಿಯೊಂದರಲ್ಲಿ ಪ್ರಥಮೇಶ್ ಮೃತದೇಹ ಪತ್ತೆಯಾಗಿದೆ. ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಪುತ್ತೂರು: ಮುಸ್ಲಿಂ ಯುವತಿಗೆ ಹಿಂದೂ ಯುವಕ ಚೂರಿ ಇರಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಇಬ್ಬರು ಒಂದೇ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದ್ದು, ಬಾಲಕಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಬಾಲಕ ಹಿಂದೂ ಸಮುದಾಯಕ್ಕೆ ಸೇರಿದವನು ಎಂದು ತಿಳಿದು ಬಂದಿದೆ. ಬಾಲಕಿಗೆ ನಿನ್ನನ್ನು ಲವ್ ಮಾಡುತ್ತೇನೆ ಎಂದು ಹೇಳಿದ್ದಕ್ಕೆ ವಿಧ್ಯಾರ್ಥಿನಿ ಬಾಲಕನಿಗೆ ಬೈದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಬಾಲಕ ಬಾಲಕಿಯ ಕೈಗೆ ಬ್ಲೇಡ್ ನಿಂದ ಇರಿದು ಪರಾರಿಯಾಗಿದ್ದಾನೆ. ಬಾಲಕಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಆಸ್ಪತ್ರೆಯಲ್ಲಿ ಹೆಸರು ಬದಲಾಯಿಸಿ ಹೇಳುವಂತೆ ಶಿಕ್ಷಕಿ ಒತ್ತಡ ಹೇರಿದ್ದಲ್ಲದೆ, ಕೈಗೆ ಗಾಜು ತಾಗಿ ಗಾಯವಾಗಿದೆ ಎಂದು ಹೇಳಲು ಶಿಕ್ಷಕಿ ಒತ್ತಾಯಿಸಿದ್ದಾರೆ ಎಂದು ಸಂತ್ರಸ್ಥೆ ಬಾಲಕಿ ಆರೋಪಿಸಿದ್ದಾಳೆ. ಸದ್ಯ ಆಸ್ಪತ್ರೆಯ ಮುಂದೆ ಜನಸ್ತೋಮ ಸೇರಿದ್ದು, ಸ್ಥಳದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಗಿದೆ. ನೆರೆದಿದ್ದ ಜನರನ್ನು ಪೊಲೀಸರು ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದಾರೆ.

Read More

ಮಂಗಳೂರು: ಕರಾವಳಿಯ ಹೆಸರಾಂತ ಜಾನಪದ ಕ್ರೀಡೆ ಕಂಬಳ ಕಳೆದ ವರ್ಷ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನೆರವೇರಿದ ಬಳಿಕ ಇದೇ ಮೊದಲ ಬಾರಿಗೆ ಮಲೆನಾಡಿಗೂ ವಿಸ್ತರಿಸಲು ಸನ್ನದ್ಧವಾಗಿದ್ದು, ಅದಕ್ಕಾಗಿ ಈಗಲೇ ಪೂರಕ ಸಿದ್ಧತೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ, ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3181 ಮತ್ತು 3182 ಹಾಗೂ ಶಿವಮೊಗ್ಗ ಕಂಬಳ ಸಮಿತಿಯನ್ನು ರಚಿಸಿ ಇದರ ಸಹಯೋಗದೊಂದಿಗೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ 2025ರ ಏಪ್ರಿಲ್ 19 ಮತ್ತು 20ರಂದು ಆಯೋಜಿಸಲಾಗುವುದು ಎಂದು ದ.ಕ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕರಾವಳಿ ಕರ್ನಾಟಕದ ಜಾನಪದ ಕ್ರೀಡೆಯನ್ನು ವಿಶ್ವ ಪಾರಂಪರಿಕ ತಾಣವಾದ ಶಿವಮೊಗ್ಗದಲ್ಲಿ ನಡೆಸಲು ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೇರಿದಂತೆ ಎಲ್ಲರ ಪೂರಕ ನೆರವು ಪಡೆಯಲಾಗುವುದು. ಶಿವಮೊಗ್ಗ, ಹಾಸನ, ಮಡಿಕೇರಿ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬೈಂದೂರು, ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಸಹಭಾಗಿತ್ವದಲ್ಲಿ ಅದ್ಧೂರಿಯಾಗಿ…

Read More

ಪುತ್ತೂರು: ಸ್ಕೂಟರ್ ಸವಾರನೋರ್ವನ ಮೇಲೆ ಕಾಡು ಹಂದಿಯೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಇಂದು ಮಂಗಳವಾರ ಮುಂಜಾನೆ ದಕ್ಷಿಣ ಕನ್ನಡದ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪ ನಡೆದಿದೆ. ಸ್ಥಳೀಯ ನಿವಾಸಿ ಧನುಷ್(30) ಕಾಡು ಹಂದಿ ದಾಳಿಯಿಂದ ಗಾಯಗೊಂಡವರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಕುಂಬ್ರ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ಆಗಿರುವ ಧನುಷ್ ಎಂದಿನಂತೆ ಇಂದು ಬೆಳಗ್ಗೆ ಸ್ಕೂಟರಿನಲ್ಲಿ  ಪೆಟ್ರೋಲ್ ಬಂಕ್ ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕುರುಂಜ ಮಣ್ಣಾಪು ತಲುಪಿದಾಗ ಏಕಾಏಕಿ ಕಾಡು ಹಂದಿಯೊಂದು ಧನುಷ್ ಚಲಾಯಿಸುತ್ತಿದ್ದ ಸ್ಕೂಟರ್ ಮೇಲೆ ಎರಗಿದೆ. ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಧನುಷ್ ಮೇಲೆ ಎರಗಿದ ಕಾಡುಹಂದಿ, ಅವರ ಬಲ ಕೈ ಸೇರಿ  ದೇಹದ ಇತರ ಭಾಗಗಳಿಗೆ ಕಚ್ಚಿ ಗಾಯಗೊಳಿಸಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

ಮಂಗಳೂರು :ಕೇರಳ ರಾಜ್ಯದಿಂದ ಮಂಗಳೂರು ನಗರಕ್ಕೆ ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ತಂಡವೊಂದನ್ನು ವಶಕ್ಕೆ ಪಡೆದುಕೊಂಡು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡು ಅಂತಾರಾಜ್ಯ ಖೋಟಾ ನೋಟು ಚಲಾವಣೆ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ 500 ರೂಪಾಯಿ ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿ ಮಂಗಳೂರು ನಗರದ ಕ್ಲಾಕ್ ಟವರ್ ಪರಿಸರದ ಲಾಡ್ಜ್ ವೊಂದರ ಪರಿಸರದಲ್ಲಿ ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ 500 ರೂಪಾಯಿ ಮುಖಬೆಲೆಯ ಖೋಟಾ ನೋಟು ಚಲಾವಣೆ ಜಾಲದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಾದ ವಿ. ಪ್ರಿಯೇಶ್(38) ಕೇರಳ ರಾಜ್ಯ, ಕಾಸರಗೋಡು ಜಿಲ್ಲೆ, ಕೊಳತ್ತೂರು ಅಂಚೆ,ಕರಿಚೇರಿ ಪೆರ್ಲಂ ವೀಡು, ವಿನೋದ್ ಕುಮಾರ್.ಕೆ(33),ಕೇರಳ ರಾಜ್ಯದ, ಕಾಸರಗೋಡು ಜಿಲ್ಲೆಯ ಮಲ್ಲಂ ಪೋಸ್ಟ್, ಮುಳಿಯಾರು ಗ್ರಾಮದವರು, ಅಬ್ದುಲ್ ಖಾದರ್ ಎಸ್.ಎ(58),ಕೇರಳ ರಾಜ್ಯದ, ಕಾಸರಗೋಡು ಜಿಲ್ಲೆಯ ಶಿಫಾನ ಮಂಜಿಲ್, ವಡಂಕುಂಕರ, ಕುನಿಯಾ, ಪೆರಿಯಾ, ಆಯೂಬ್ ಖಾನ್, ಪ್ರಾಯ(51),ದಕ್ಷಿಣ…

Read More

ಮಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಸೋಮವಾರ (ಆ.19) ಮಂಗಳೂರಿನಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯ ವೇಳೆ ಖಾಸಗಿ ಬಸ್ ಗೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಶಾಹುಲ್ ಹಮೀದ್, ಅನ್ವರ್, ಕಿಶೋರ್ ಶೆಟ್ಟಿ ಬಂಧಿತರು. ಮುಖ್ಯಮಂತ್ರಿಗಳ ವಿರುದ್ಧ ಕರ್ನಾಟಕ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಆ.19 ರಂದು ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿನ ನಗರ ಪಾಲಿಕೆಯ ಮುಂಭಾಗ ಪ್ರತಿಭಟನೆ ಮಾಡುತಿದ್ದ ಸಂದರ್ಭದಲ್ಲಿ ಮಂಗಳೂರು ನಗರ ಪಾಲಿಕೆ ಮುಂಭಾಗದ ಟ್ರಾಫಿಕ್ ಸಿಗ್ನಲ್ ನಲ್ಲಿ ಬಸ್ಸೊಂದು ಸಾರ್ವಜನಿಕರನ್ನು ಕರೆದುಕೊಂಡು ಹೋಗುವಾಗ ಯಾರೋ 10-15 ಜನ ಕಿಡಿಗೇಡಿಗಳು ಬಸ್ಸನ್ನು ತಡೆದು ಕಲ್ಲುಗಳಿಂದ ಬಸ್ಸಿನ ಮುಂಭಾಗದ ಗಾಜನ್ನು ಒಡೆದು ನಷ್ಟ ಉಂಟುಮಾಡಿದ್ದು, ಈ ಘಟನೆಗೆ ಸಂಬಂಧಿಸಿದಂತೆ, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈಗಾಗಲೇ ಶಾಹುಲ್ ಅಮಿದ್, ಅನ್ವರ್ ಮತ್ತು ಕಿಶೋರ್ ಶೆಟ್ಟಿ ಎಂಬ 3…

Read More

ಮಂಗಳೂರು : ಮಂಗಳೂರಿನಲ್ಲಿ ರಾಜ್ಯಪಾಲರ ವಿರುದ್ದ ಜಿಲ್ಲಾ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಕೊಂಚ  ಉದ್ರಿಕ್ತಗೊಂಡು ಬಸ್‌ಗಳಿಗೆ ಕಲ್ಲು ತೂರಾಟ, ಟೈರ್ ಗಳಿಗೆ ಬೆಂಕಿ ಹಚ್ಚಿ್ ಘಟನೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ  ಜಿಲ್ಲಾ ಕೇಂದ್ರ ಮಂಗಳೂರು ಪಾಲಿಕೆ ಎದುರು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು  ಮೆರವಣಿಗೆ ನಡೆಸಿ , ಪಾಲಿಕೆ ಎದುರು ಪ್ರತಿಭಟನೆಯನ್ನು ಆಯೋಜಿಸಿತ್ತು. ಈ ಸಂದರ್ಭ ಪ್ರತಿಭಟನಾಕಾರರು  ರಾಜ್ಯಪಾಲರ ವಿರುದ್ಧ ಘೋಷಣೆಗಳು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭ ಪ್ರತಿಭಟನೆ ಉದ್ವಿಗ್ನಗೊಂಡ ಕಾರ್ಯಕರ್ತರಿಂದ ರಸ್ತೆಯಲ್ಲಿ ಸಾಗುತ್ತಿದ್ದ ಖಾಸಾಗಿ ಸಿಟಿ ಬಸ್‌ ಗೆ ಕಲ್ಲು ತೂರಾಟ ನಡೆಸಲಾಗಿದ್ದು ಇದರಿಂದ ಬಸ್ ನ ಮುಂಭಾಗದ ಗಾಜು  ಹುಡಿಯಾಗಿದೆ. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಪ್ರತಿಭಟನನಾಕರರನ್ನು ಹತೋಟಿಗೆ ತಂದಿದ್ದಾರೆ. ‘ಬಸ್ನಲ್ಲಿ ಹತ್ತು ಮಂದಿ ಪ್ರಯಾಣಿಕರಿದ್ದರು. ಚಾಲಕ ಸೀಟಿನ ಹಿಂದೆ ಕುಳಿತ್ತಿದ್ದ ಮಹಿಳೆಗೆ ಗಾಯವಾಗಿದೆ. ನಾಲ್ವರು ಸೇರಿ ಕಲ್ಲು ತೂರಿದ್ದಾರೆ.…

Read More

ಮೂಡುಬಿದಿರೆ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಸಿದ ಘಟನೆ ಮೂಡುಬಿದಿರೆಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ಭಾನುವಾರ ನಡೆದಿದೆ. ನಿರ್ಮಲಾ ಪಂಡಿತ್ ಅವರು ವಿವೇಕಾನಂದ ನಗರದಲ್ಲಿರುವ ಮಗಳ ಮನೆಯ ತೋಟದಲ್ಲಿದ್ದಾಗ ಮನೆಯ ಗೇಟ್‌ ಮುಂಭಾಗ ಇಬ್ಬರಿದ್ದ ಸ್ಕೂಟರ್ ನಿಂತಿತು. ಈ ಪೈಕಿ ಒಬ್ಬ ಮಹಿಳೆಯ ಬಳಿ ಬಂದು ಆರ್.ಕೆ.ಟ್ರೇಡರ್ಸ್ ಎಲ್ಲಿ ಎಂದು ಕೇಳಿದಾಗ ಮಹಿಳೆ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ನಂತರ ಆ ವ್ಯಕ್ತಿ ವಿಸಿಟಿಂಗ್ ಕಾರ್ಡ್‌ ತೋರಿಸಿ ಈ ವಿಳಾಸ ಎಲ್ಲಿ ಎಂದು ಮರು ಪ್ರಶ್ನಿಸಿದ್ದಾನೆ. ನಿರ್ಮಲಾ ಅವರು ವಿಸಿಟಿಂಗ್ ಕಾರ್ಡ್‌ ನೋಡುತ್ತಿದ್ದಂತೆ ಆ ಆಗಂತುಕ ಅವರ ಚಿನ್ನದ ಸರ ಮತ್ತು ಮಾಂಗಲ್ಯ ಸೂತ್ರವನ್ನು ಎಳೆದಿದ್ದಾನೆ. ಈ ವೇಳೆ ಚಿನ್ನದ ಸರ ಕಳ್ಳನ ಕೈಗೆ ಬಂದರೆ ಮಾಂಗಲ್ಯ ಸೂತ್ರ ಅರ್ಧ ಮಾತ್ರ ಸಿಕ್ಕಿದ್ದು, ಉಳಿದ ಭಾಗ ಕತ್ತಿನಲ್ಲೆ ಉಳಿದಿದೆ. ಈ ವೇಳೆ ನಿರ್ಮಲಾ ಅವರು ಬೊಬ್ಬೆ ಹಾಕಿದಾಗ ಮನೆಯವರು ಹೊರ ಬಂದಿದ್ದು ಸರ ಕಸಿದ ವ್ಯಕ್ತಿ ಸ್ಕೂಟರ್…

Read More