ಕಾರ್ಕಳ: ಟೂರಿಸ್ಟ್ (ಟಿಟಿ) ವಾಹನವೊಂದು ಹೊತ್ತಿ ಉರಿದ ಘಟನೆ ಪಶ್ಚಿಮ ಘಟ್ಟದ ಕುದುರೆಮುಖದಲ್ಲಿ ನಡೆದಿದೆ. ಉಡುಪಿಯಿಂದ ಮಾಳ ಮಾರ್ಗವಾಗಿ ಕುದುರೆಮುಖ ಮೂಲಕ ಕಳಸ ಕಡೆಗೆ ತೆರಳುತ್ತಿದ್ದ ಹನ್ನೊಂದು ಮಂದಿ ಇದ್ದ ಟೂರಿಸ್ಟ್ ವಾಹನದಲ್ಲಿ ಬೆಂಕಿ, ಹೊಗೆ ಕಾಣಿಸಿಕೊಂಡಿದ್ದು ನೋಡ ನೋಡುತ್ತಿದ್ದಂತೆ ಬೆಂಕಿ ವಾಹನದ ತುಂಬಾ ವ್ಯಾಪಿಸಿದೆ. ಚಾಲಕ ಸಹಿತ ವಾಹನದೊಳಗಿದ್ದವರು ಆತಂಕದಿಂದ ತಕ್ಷಣ ಹೊರ ಬಂದಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಗ್ನಿ ಜ್ವಾಲೆಗೆ ವಾಹನ ಸಂಪೂರ್ಣ ಸುಟ್ಟು ಹೋಗಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.ಕಾರ್ಕಳ ಅಗ್ನಿಶಾಮಕ ಠಾಣೆ ತಂಡವು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಟೂರಿಸ್ಟ್ ವಾಹನದ ಪ್ರಯಾಣಿಕರಿಗೆ ಬೇರೆ ವ್ಯವಸ್ಥೆ ಮಾಡಿಸಿ ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದೆ.ಕಾರ್ಕಳ ಅಗ್ನಿ ಶಾಮಕದಳ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಪ್ರಮುಖರಾದ ನಿತ್ಯಾನಂದ, ಜಯ, ಮುಜಾಂಬಿಲ್ ಕಾರ್ಯಾಚರಣೆ ತಂಡದಲ್ಲಿದ್ದರು.
Author: main-admin
ಬಂಟ್ವಾಳದ ಬಿ.ಮೂಡ ಗ್ರಾಮದಲ್ಲಿ ಕಾಂಗ್ರೆಸ್ ಪುರಸಭೆ ಸದಸ್ಯನ ಪಟಾಲಂ ನಿಂದ ಗೂಂಡಗಿರಿ ನಡೆದಿದೆ. ಪುರಸಭೆ ಸದಸ್ಯ, ರೌಡಿಶೀಟರ್ ಆಗಿರೊ ಅಸೈನರ್ ತಂಡದಿಂದ ದಾಂಧಲೆ. ಗರ್ಭಿಣಿ ಮಹಿಳೆ ಇದ್ದ ಮನೆಗೆ ನುಗ್ಗಿ ಪುರುಷರ ಮೇಲೆ ಹಲ್ಲೆ ಮಾಡಲಾಗಿದೆ ಮನೆ ಬಾಡಿಗೆ ವ್ಯಾಜ್ಯ ಸಂಬಂಧ ಮಧ್ಯರಾತ್ರಿ ಹಲ್ಲೆ ನಡೆದಿದ್ದು, ಸಾಹುಲ್ ಹಮೀದ್ ಎಂಬುವವರ ಮನೆಗೆ ಮಧ್ಯರಾತ್ರಿ ನುಗ್ಗಿ ಅಸೈನರ್ ಹಲ್ಲೆಮಾಡಿದ್ದಾನೆ. ಈ ವೇಳೆ 112ಗೆ ಕರೆ ಮಾಡಿದ್ದು, ಇದರಿಂದ ಪೊಲೀಸರು ಬಂದಿದ್ದರಿಂದ ಅನಾಹುತ ತಪ್ಪಿದೆ. ಹಲ್ಲೆಯಿಂದ ಕೆಲವರಿಗೆ ಗಾಯಗಳಾಗಿದ್ದು, ಬಂಟ್ವಾಳ ಟೌನ್ ಠಾಣೆಯಲ್ಲಿ ಎರಡು ಕಡೆಯಿಂದ ದೂರು-ಪ್ರತಿದೂರು ದಾಖಲಾಗಿದೆ. ಪೊಲೀಸರು ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್. ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರೋ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಾರ್ಕಳ: ರಾಜ್ಯಮಟ್ಟದ ಕಬಡ್ಡಿ ಆಟಗಾರ, ಮುಟ್ಲುಪಾಡಿ, ನಡುಮನೆ ನಿವಾಸಿ ಪ್ರೀತಂ ಶೆಟ್ಟಿ(26) ಅವರು ಶುಕ್ರವಾರ(ಡಿ.13) ರಾತ್ರಿ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಪ್ರೀತಂ ಅವರು ಶುಕ್ರವಾರ ಮಂಡ್ಯಾದಲ್ಲಿ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ಆಟವಾಡುತ್ತಿರುವಾಗಲೇ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಪ್ರತಿಭಾನ್ವಿತ ಪ್ರೀತಂ ಅವರು ಶಿಕ್ಷಣದ ಜತೆಗೆ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದು, ಹಂತಹಂತವಾಗಿ ಶ್ರಮವಹಿಸಿ ಕಬಡ್ಡಿ ಆಟಗಾರನಾಗಿ ಖ್ಯಾತಿ ಪಡೆದಿದ್ದರು. ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.
ಮಂಗಳೂರು: ನಗರದ ಕದ್ರಿ ಪಾರ್ಕ್‌ನಲ್ಲಿ ಕಳೆದ ವಾರ ನಡೆದ ವೈನ್ ಮೇಳಕ್ಕೆ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಗ್ರಾಹಕರ ಬೇಡಿಕೆ ಹಿನ್ನೆಲೆಯಲ್ಲಿ ಡಿ.15ರಂದು ಮತ್ತೆ ಮೇಳ ಆಯೋಜಿಸಲಾಗಿದೆ.ರತ್ನಾಸ್ ವೈನ್ ಗೇಟ್ ಹಾಗೂ ಶೂಲಿನ್ ಗ್ರೂಪ್ ಮಂಗಳೂರು ಪ್ರಾಯೋಜಕತ್ವದಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ (ಸರ್ಕಾರಿ ಸ್ವಾಮ್ಯದ ಸಂಸ್ಥೆ), ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಬೆಳಗ್ಗೆ 10.30ರಿಂದ ರಾತ್ರಿ 9.30 ಗಂಟೆ ತನಕ ವೈನ್ ಮೇಳ ನಡೆಯಲಿದೆ.ದ್ರಾಕ್ಷಾ ರಸದ ಉಪಯೋಗಗಳು, ಸವಿಯುವ ಕ್ರಮ ಮುಂತಾದ ಸೂಕ್ತ ಮಾಹಿತಿಗಳೊಂದಿಗೆ ಬ್ರಾೃಂಡುಗಳ ಪ್ರದರ್ಶನ. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಉತ್ಪನ್ನಗಳು, ಎಲ್ಲಾ ಕಂಪನಿಗಳ ಹೊಸ ಹೊಸ ಪಾನೀಯಗಳನ್ನು ಪ್ರದರ್ಶಿಸಿ ಪರಿಚಯಿಸುವ ಹಾಗೂ ದ್ರಾಕ್ಷಾ ರಸದ (ವೈನ್ ) ರುಚಿಯನ್ನು ಸವಿದು ಬೇಕಾದ ರೀತಿಯಲ್ಲಿ ಖರೀದಿ ಮಾಡಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ದ್ರಾಕ್ಷಾ ರಸ ಉತ್ಪಾದಕ ಸಂಸ್ಥೆಗಳ ಮೂಲಕ ಅತ್ಯಾಕರ್ಷಕ ದರ ಹಾಗೂ ಅತ್ಯುತ್ತಮ ಕೊಡುಗೆಗಳೊಂದಿಗೆ ಮೇಳ…
ಮಂಗಳೂರು: ದಾಖಲೆ ನೀಡಲು ಲಂಚಕ್ಕೆ ಕೈಒಡ್ಡಿದ ಪಿಡಿಓ ಒಬ್ಬರಿಗೆ 3 ವರ್ಷಗಳ ಜೈಲು ಶಿಕ್ಷೆ ನೀಡಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಕಡಬ ತಾಲ್ಲೂಕಿನ ಐತ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೇಮ್ ಸಿಂಗ್ ನಾಯ್ಕ 9/11ರ ದಾಖಲೆ ನೀಡಲು ₹9,000 ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪದ ಮೇಲೆ 2019ರ ಜೂನ್ 3ರಂದು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ್ದರು. ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಶ್ಯಾಮಸುಂದರ ಎಚ್.ಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಪ್ರಕಟಿಸಿದೆ. ಆರೋಪಿಗೆ ಮೂರು ವರ್ಷಗಳ ಸಾದಾ ಸಜೆ ಹಾಗೂ ₹50 ಸಾವಿರ ದಂಡ ವಿಧಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ವಕೀಲ ರವೀಂದ್ರ ಮುನ್ನಿಪಾಡಿ ವಾದಿಸಿದ್ದರು.
ಮಂಗಳೂರು: ಮುಂಬೈಯಿಂದ ಮಂಗಳೂರು ನಗರಕ್ಕೆ ಮಾದಕದ್ರವ್ಯ ಗಾಂಜಾ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದವನನ್ನು ಬಂಧಿಸಿದ ಸಿಸಿಬಿ ಪೊಲೀಸರು ಪೊಲೀಸರು 6.7ಕೆಜಿ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ಜಿಲ್ಲೆಯ ಅಂಬಲಪಾಡಿ ಕುಂಜಗುಡ್ಡೆ ಹೌಸ್ ನಿವಾಸಿ ಅಖಿಲೇಶ್(30) ಬಂಧಿತ ಆರೋಪಿ. ಅಖಿಲೇಶ್ ಮುಂಬೈಯಿಂದ ಗಾಂಜಾ ಖರೀದಿಸಿ ಮುಲ್ಕಿ ಪರಿಸರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮುಲ್ಕಿ ಬಪ್ಪನಾಡು ಪರಿಸರದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಶದಿಂದ 1,62,000 ರೂ. ಮೌಲ್ಯದ 6.7 ಕೆಜಿ ಗಾಂಜಾ, ಮೊಬೈಲ್ ಫೋನ್, 660 ರೂ. ನಗದು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 1,63,000ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ನಗರದ ವಿವಿಧೆಡೆಯ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಪಾಂಡೇಶ್ವರ ಕಟ್ಟೆ ಬಳಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಎರ್ನಾಕುಳಂ ಜಿಲ್ಲೆಯ ಶ್ರೀಹರಿಯನ್ನು ಪಾಂಡೇಶ್ವರ ಠಾಣೆ ಪೊಲೀಸರು, ನೀರುಮಾರ್ಗದ ಬಸ್ ನಿಲ್ದಾಣ ಬಳಿ ತಿರುವನಂತಪುರ ಜಿಲ್ಲೆಯ ಕೆಲ್ರಾಯ್ ಮೊಹಮ್ಮದ್ ಯೂಸುಫ್ ನನ್ನು ಮಂಗಳೂರು ಗ್ರಾ. ಠಾಣೆ ಪೊಲೀಸರು, ಕೆಂಜಾರು ಜಂಕ್ಷನ್ ಬಳಿ ಉಮ್ಮರ್ ಫಾರುಕ್ ಬಜಪೆ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಗಂಭೀರ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಮೃತರನ್ನು ಖಂಡಿಕ ನಿವಾಸಿ ಮುತ್ತಲಿಬ್ ಎಂಬವರ ಪತ್ನಿ ಖುಬ್ರಾ ಎಂದು ಗುರುತಿಸಲಾಗಿದೆ. ನಾಲ್ಕು ದಿನಗಳ ಹಿಂದೆ ಮಂಜನಾಡಿ ಗ್ರಾಮ ವ್ಯಾಪ್ತಿಯ ಕಲ್ಕಟ್ಟ ಖಂಡಿಕ ಎಂಬಲ್ಲಿ ಗ್ಯಾಸ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿ ಮಲಗಿದ್ದ ತಾಯಿ ಮತ್ತು ಮೂವರು ಮಕ್ಕಳಿಗೆ ಗಂಭೀರ ಗಾಯಗೊಂಡಿದ್ದರು. ಇದರಿಂದ ಮನೆಯೊಡತಿ ಖುಬ್ರಾ ಹಾಗೂ ಅವರ ಮೂವರು ಮಕ್ಕಳಾದ ಮಹದಿಯಾ,ಮಝಿಯಾ,ಮಾಯಿಝಾ ಗಂಭೀರ ಗಾಯಗೊಂಡಿದ್ದರು. ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಮನೆಯೊಡತಿ ಖುಬ್ರಾ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಮಂಗಳೂರು: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಪ್ಪನಾಡು ಬಳಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕು ಉಗಳಾಟ ನಿವಾಸಿ ಬಪ್ಪನಾಡು ಬಳಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ ಐಶ್ವರ್ಯ(19) ಎಂದು ಗುರುತಿಸಲಾಗಿದೆ. ಮೃತ ಐಶ್ವರ್ಯ ಹಳೆಯಂಗಡಿ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎ ಓದುತ್ತಿದ್ದು ಗುರುವಾರ ಪರೀಕ್ಷೆಯ ದಿನವಾದ್ದರಿಂದ ಬೆಳಗಿನ ಜಾವ ನಾಲ್ಕು ಗಂಟೆಗೆ ಮನೆಯ ಹೊರಗೆ ಓದಲು ಬಂದಿದ್ದು ಬಳಿಕ ಏಕಾಏಕಿ ಮನೆಯ ಎದುರಿನ ಬಾಗಿಲಿನ ಚಿಲಕ ಲಾಕ್ ಮಾಡಿ ಸ್ಟೇರ್‌ಕೇಸ್‌ನ ಕಬ್ಬಿಣದ ರಾಡ್‌ಗೆ ಚೂಡಿದಾರ್ ಶಾಲುನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ಸೋದರತ್ತೆ, ಅವರ ಮಗಳು ಹಾಗೂ ತಮ್ಮನ ಜೊತೆ ವಾಸ್ತವ್ಯವಿದ್ದು ಬೆಳಗ್ಗೆ ಸುಮಾರು ಆರು ಗಂಟೆ ಹೊತ್ತಿಗೆ ಸೋದರತ್ತೆ ಮನೆಯ ಹೊರಗೆ ಬರಲು ಎದುರು ಬದಿಯ ಬಾಗಿಲಿನ ಚಿಲಕ ತೆಗೆಯಲು ಪ್ರಯತ್ನಿಸಿ ವಿಫಲರಾಗಿದ್ದು ಬಳಿಕ ಹೊರಗೆ ಬಂದು ನೋಡುವಾಗ ಆತ್ಮಹತ್ಯೆ ಪ್ರಕರಣ ಬಯಲಿಗೆ…
ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲು ತೆರಳುತ್ತಿದ್ದ ಸರಕಾರಿ ಆಸ್ಪತ್ರೆಯ ವೈದ್ಯರೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ವೈದ್ಯರು ಕರ್ತವ್ಯಕ್ಕೆ ತಡವಾಗಿ ಹೋಗುತ್ತಿದ್ದಾರೆಂದು ಸುಳ್ಳು ಆಪಾದನೆ ಹೊರಿಸಿ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕು ಸರಕಾರಿ ಆಸ್ಪತ್ರೆಯಿಂದ ನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ಡಿ.10ರಂದು ಬೆಳಗ್ಗೆ ಪುಂಜಾಲಕಟ್ಟೆ ಯಿಂದ ಸುಮಾರು 29 ವರ್ಷದ ವ್ಯಕ್ತಿ ಆಸ್ಪತ್ರೆಗೆ ಕರೆ ತರುವಾಗ ಮೃತಪಟ್ಟಿದ್ದರು. ಬಳಿಕ ಮರಣೋತ್ತರ ಪರೀಕ್ಷೆಯ ಮೊದಲು ಪೊಲೀಸ್ ಠಾಣೆಗೆ ಆಸ್ಪತ್ರೆಯಿಂದ ಮಾಹಿತಿ ನೀಡಲಾಗಿತ್ತು. ಪರೀಕ್ಷೆಗೆ ಪುಂಜಾಲ ಕಟ್ಟೆಯಿಂದ ಪೊಲೀಸರು ಬರಬೇಕಾ ಗಿತ್ತು. ಪೊಲೀಸರು ಮಧ್ಯಾಹ್ನದ ಬಳಿಕ ಬಂದಿದ್ದರು. ಬಳಿಕ ಅವರು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಮನವಿ ನೀಡುವ ಕಾರ್ಯ ಮಾಡಿದರು. ಸಂಜೆ ವೇಳೆ ಎಲ್ಲ ಪ್ರಕ್ರಿಯೆ ಮುಗಿದು ಕರ್ತವ್ಯದಲ್ಲಿದ್ದ ಡಾ.ಶ್ವೇತಾ ಮರಣೋತ್ತರ ಪರೀಕ್ಷೆಗೆ ಹೋಗುವ ಸಂದರ್ಭ ಮೃತರ ಕಡೆಯವರು ಎನ್ನಲಾದ ಕೆಲವರು ವೈದ್ಯರು ತಡವಾಗಿ ಬಂದಿರುವುದಾಗಿ ಆರೋಪಿಸಿ ಅವರನ್ನು ತರಾಟೆಗೆತ್ತಿಕೊಂಡು ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.…










