ಕುಂದಾಪುರ: ಗಂಗೊಳ್ಳಿಯ ಸಮುದ್ರತೀರದಲ್ಲಿ ಗೋಣಿಚೀಲದಲ್ಲಿ ಕಟ್ಟಿ ಎಸೆಯಲಾದ ಗೋವಿನ ಅವಶೇಷಗಳು ಪತ್ತೆಯಾಗಿದ್ದು, ಇಲ್ಲಿನ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಗಂಗೊಳ್ಳಿಯ ಕಡಲ ತೀರದಲ್ಲಿ ಗೋಣೆ ಚೀಲದಲ್ಲಿ ದನದ ಅವಶೇ? ತೇಲಿಕೊಂಡು ಬಂದಿದ್ದು, ಚೀಲದಲ್ಲಿ ದನದ ತಲೆಯ ಭಾಗ ಹಾಗೂ ದವಡೆಯ ಮೂಳೆ ಹಾಗೂ ದನದ ಕಳೆಬರಗಳು ಪತ್ತೆಯಾಗಿದೆ. ಗೋವನ್ನು ವಧೆ ಮಾಡಿ ಅದರ ಕಳೆಬರವನ್ನು ಚೀಲದಲ್ಲಿ ಹಾಕಿ ಸಮುದ್ರಕ್ಕೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಪದೇ ಪದೇ ಗೋವನ್ನು ಕಳ್ಳತನ ಮಡಿ, ಗೋವನ್ನು ವಧೆ ಮಾಡಿ ಅವರ ಕಳೆಬರವನ್ನು ಸಮುದ್ರ ಹಾಗೂ ನದಿಯಲ್ಲಿ ಎಸೆದು ವಿಕೃತಿ ಮೆರೆದು ಹಿಂದುಗಳ ಭಾವನೆಗೆ ನೋವುಂಟು ಮಾಡುತ್ತಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಹಿಂದು ಪರ ಸಂಘಟನೆಗಳು ಆಗ್ರಹಿಸಿವೆ. ಈ ಬಗ್ಗೆ ಮೋಹನ್ ಎಂಬುವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: main-admin
ಬೆಂಗಳೂರು:- ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಆಶ್ರಯ ನೀಡಿದ್ದ ಇಬ್ಬರು ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ಶೀಟ್ ಸಲ್ಲಿಸಿದೆ. ಆರೋಪಿ ಮುಸ್ತಫಾ ಪೈಚಾರ್ಗೆ ಆಶ್ರಯ ನೀಡಿದ್ದ ಹಿನ್ನೆಲೆ ಮನ್ಸೂರ್ ಪಾಷಾ ಮತ್ತು ಹೆಚ್ವೈ ರಿಯಾಜ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಆರೋಪಿಗೆ ಮನ್ಸೂರ್, ರಿಯಾಜ್ ಆಶ್ರಯ ನೀಡಿದ್ದರು. ಮೇ 5ರಂದು ಸಕಲೇಶಪುರದಲ್ಲಿ ಮುಸ್ತಫಾ ನನ್ನು ಬಂಧಿಸಿದ್ದು, ವಿದೇಶಕ್ಕೆ ಪರಾರಿಯಾಗುಲು ಯತ್ನಿಸಿದ್ದ ರಿಯಾಜ್ ನನ್ನು ಜೂ.3ರಂದು ಮುಂಬೈ ಏರ್ಪೋರ್ಟ್ನಲ್ಲಿ ಬಂಧಿಸಲಾಗಿತ್ತು. ನನ್ನ ಪತಿಯ ಹತ್ಯೆಯಲ್ಲಿ ಮುಸ್ತಫಾ ಪೈಚಾರ್ನೇ ಪ್ರಮುಖ ಆರೋಪಿಯಾಗಿದ್ದಾನೆ. ಅವನನ್ನು ಬಂಧಿಸಿದ್ದಕ್ಕೆ ನಮಗೆ ತುಂಬಾ ಖುಷಿಯಾಗಿದೆ ಎಂದು ಪ್ರವೀಣ ನೆಟ್ಟಾರು ಪತ್ನಿ ನೂತನಾ ಹೇಳಿದ್ದರು. ಈ ಪ್ರಕರಣದ ಎಲ್ಲ ಆರೋಪಿಗಳಿಗೂ ಮರಣ ದಂಡನೆಯಾಗಬೇಕು. ಸಮಾಜದಲ್ಲಿ ಇಂತಹ ಪ್ರಕರಣ ಮರುಕಳಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರವೀಣ್ ನೆಟ್ಟಾರು ಕೊಲೆ ಕೇಸ್ನಲ್ಲಿ ಇದುವರೆಗೆ ಎನ್ಐಎ 21 ಆರೋಪಿಗಳನ್ನು ಅರೆಸ್ಟ್ ಮಾಡಿ ಆರೋಪಿಗಳ ವಿರುದ್ದ ಚಾರ್ಶೀಟ್ ಸಲ್ಲಿಕೆ ಮಾಡಿತ್ತು.
ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತ್ ಗೋಳಪಟ್ಟ 7 ನೇ ವಾರ್ಡ್ ಬಾಕ್ರಬೈಲ್ ಬಳಿಯ ಕಜೆ ಎಂಬಲ್ಲಿ ಮಳೆಗೆ ಸುಮಾರು 2 ಫೀಟ್ ನೆಲ ಕುಸಿದು ಹೋಗಿದೆ. ಬಜಿಲಾಡಿ ಎಂಬ ಎತ್ತರದ ಗುಡ್ಡ ಪ್ರದೇಶದ ಕೆಳಗಡೆ ಹಲವಾರು ಮನೆಗಳಿವೆ. ಅಲ್ಲದೆ ಪಕ್ಕದಲ್ಲಿರುವ ಗುಡ್ಡೆ ಕೂಡಾ ಕುಸಿಯುವ ಭೀತಿಯಲ್ಲಿದ್ದು, ಈ ಪರಿಸರ ಪ್ರದೇಶ ಇದೀಗ ಅಪಾಯದಲ್ಲಿದ್ದೆ. ಇಲ್ಲಿ 5 ಮನೆಗಳಿದ್ದು, ಮನೆಮಂದಿ ಆತಂಕದಿಂದ ದಿನ ಕಳೆಯುವಂತಾಗಿದೆ. ಈ ಬಗ್ಗೆ ವರ್ಕಾಡಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ, ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಪಂಚಾಯತ್ ಅಧಿಕಾರಿಗಳು ಇವರಿಗೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ.
ಬೆಳ್ತಂಗಡಿ : ಮನೆಯ ಬಾವಿಗೆ ಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೆಳ್ತಂಗಡಿ ನಗರದ ಗುರುದೇವ ಕಾಲೇಜ್ ರಸ್ತೆಯಲ್ಲಿನ ಸೀಡ್ ಫಾರ್ಮ್ ಬಳಿ ಶುಕ್ರವಾರ ಸಂಜೆ ನಡೆದಿದೆ. ಸುಮಾಲಿನಿ ಜೈನ್ (63) ಮನೆಯ ಬಾವಿಗೆ ಬಿದ್ದು ಮೃತಪಟ್ಟವರು. ಮಹಿಳೆ ಬಾವಿಗೆ ಬಿದ್ದಿರುವುದನ್ನು ಅವರ ಪತಿ ಗಮನಿಸಿ ತಕ್ಷಣ ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಆ್ಯಂಬುಲೆನ್ಸ್ ಸಿಬ್ಬಂದಿ ಜಲೀಲ್ ಹಾಗೂ ಅಲ್ಪಾಸ್ ಲಾಯಿಲ ಸೇರಿ ಬಾವಿಗೆ ಹಗ್ಗ ಹಾಕಿ ಸುಮಾಲಿನಿ ಜೈನ್‌ರನ್ನು ಮೇಲಕ್ಕೆತ್ತಿದ್ದಾರೆ. ಆ ತಕ್ಷಣವೇ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಿದರೂ ಆ ವೇಳೆಗೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ವಿದ್ಯಾರ್ಥಿಗಳ ಗುಂಪೊಂದು ನಡುರಸ್ತೆಯಲ್ಲಿಯೇ ಪರಸ್ಪರ ಹೊಡೆದಾಡಿಕೊಂಡ ಘಟನೆ ಮಂಗಳೂರಿನ ಪ್ರತಿಷ್ಠಿತ ಅಲೋಶಿಯಸ್ ಕಾಲೇಜು ಬಳಿ ನಡೆದಿದೆ. ಕಾಲೇಜು ಗೇಟ್ ಮುಂಭಾಗದ ರಸ್ತೆಯಲ್ಲಿ ಎರಡು ಪ್ರತ್ಯೇಕ ಬಣ್ಣದ ಯುನಿಫಾರಂ ಧರಿಸಿರುವ ವಿದ್ಯಾರ್ಥಿಗಳ ಗುಂಪಿನ ನಡುವೆ ಹೊಡೆದಾಟ ನಡೆದಿದೆ. ಕಾಲೇಜು ಬಿಟ್ಟ ಬಳಿಕ ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ಗುಂಪಿನ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಆದರೆ ವಿದ್ಯಾರ್ಥಿಗಳ ನಡುವೆ ಹಿಗ್ಗಾಮುಗ್ಗಾವಾಗಿ ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಸದ್ಯ ಹೊಡೆದಾಟದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಂಗಳೂರು: ಪ್ರವಾಹ ಪೀಡಿತವಾಗಿರುವ ಪ್ರದೇಶಗಳಿಗೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತಿ ವರ್ಷ ಅದ್ಯಪಾಡಿಯಲ್ಲಿ ಫಲ್ಗುಣಿ ನದಿಯ ನೆರೆ ಪ್ರವಾಹದಿಂದ ಸಂತ್ರಸ್ತರಾಗುತ್ತಿರುವ ಬಗ್ಗೆ ಸ್ಥಳೀಯರು ಸಚಿವರ ಗಮನ ಸೆಳೆದರು. ಅಕ್ಕ ಪಕ್ಕದ ಗ್ರಾಮಗಳು ಜಲಾವೃತವಾಗಿರುವ ಬಗ್ಗೆಯೂ ಮಾಹಿತಿ ನೀಡಿದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶಕ್ಕೆ ಭೇಟಿ ನೀಡಿದ ದಿನೇಶ್ ಗುಂಡೂರಾವ್ ಅಲ್ಲಿನ ಸ್ಥಿತಿ ನೋಡಿ ಶಾಕ್ ಆದರು. ಈ ವೇಳೆ ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಲ್ಲಿನ ಸ್ಥಿತ ನೋಡಿದರೆ ಭಯದ ವಾತಾವರಣ ನಿರ್ಮಾಣವಾಗಿದೆ. ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಮಣ್ಣು ಗಣಿಗಾರಿಕೆ ಮಾಡಲಾಗಿದೆ. ದೊಡ್ಡ ಪ್ರಮಾಣದ ಲೋಪದೋಷವಾಗಿರುವುದು ಕಂಡು ಬಂದಿದೆ ಎಂದು ಸಚಿವರು ಹೇಳಿದರು. ಇಲ್ಲಿ ಗುಡ್ಡ ಅಪಾಯಕಾರಿಯಾಗಿರುವ ಬಗ್ಗೆ ಫೆಬ್ರವರಿ ತಿಂಗಳಲ್ಲೇ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಮುನ್ಸೂಚನೆ ನೀಡಿತ್ತು. ಪಾಲಿಕೆ ಯಾವ ಕ್ರಮ ಕೈಗೊಂಡಿದೆ ಎಂದು ಪರಿಶೀಲನೆ ನಡೆಸಲಾಗುವುದು. ಗಣಿ ಭೂ ವಿಜ್ಞಾನ ಇಲಾಖೆ…
ಉಡುಪಿ: ಅಪಾರ್ಟ್ ಮೆಂಟ್‌ನ ಫ್ಲಾಟ್‌ವೊಂದಕ್ಕೆ ನಾಲ್ವರು ಮುಸುಕುಧಾರಿಗಳು ನುಗ್ಗಲು ಯತ್ನಿಸಿ, ವಿಫಲರಾಗಿ ಸ್ಥಳದಿಂದ ಹಿಂತಿರುಗಿದ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ನಡೆದಿದೆ. ನಾಲ್ವರು ಮುಸುಕುಧಾರಿ ವ್ಯಕ್ತಿಗಳು ರಾಡ್‌ಗಳನ್ನು ಹಿಡಿದು ಶಸ್ತ್ರಸಜ್ಜಿತವಾಗಿ ಅಪಾರ್ಟ್ ಮೆಂಟ್‌ಗೆ ನುಗ್ಗಲು ಯತ್ನಿಸಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಇದರಲ್ಲಿ ನಾಲ್ವರು ವ್ಯಕ್ತಿಗಳು ತಮ್ಮ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಫ್ಲಾಟ್‌ನ ಒಳಗೆ ನುಗ್ಗಲು ಯತ್ನಿಸಿರುವುದು, ಅಪಾರ್ಟ್ ಮೆಂಟ್‌ಗೆ ಪ್ರವೇಶಿಸಲು ವಿಫಲರಾಗಿ ಸ್ಥಳದಿಂದ ಹಿಂತಿರುಗಿರುವುದು ಕಂಡುಬಂದಿದೆ. ಮುಸುಕುಧಾರಿಗಳು ಒಳನುಗ್ಗಲು ಯತ್ನಿಸಿದ ಫ್ಲಾಟ್‌ನಲ್ಲಿ ವಯಸ್ಸಾದ ದಂಪತಿಗಳು ವಾಸಿಸುತ್ತಿದ್ದರು. ಈ ದಂಪತಿಗಳು ಒಂದು ವಾರದ ಹಿಂದಷ್ಟೇ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಇದೀಗ ಈ ದಂಪತಿಗಳ ಫ್ಲಾಟ್‌ಗೆ ಮುಸುಕುಧಾರಿಗಳು ನುಗ್ಗಲು ಪ್ರವೇಶಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ನಾಲ್ವರು ಶಸ್ತ್ರಸಜ್ಜಿತ ಮುಸುಕುಧಾರಿಗಳು ಹಲವಾರು ಖಾಲಿ ಅಪಾರ್ಟ್ ಮೆಂಟ್‌ಗಳಿಗೆ ನುಗ್ಗಿ ಬೆಲೆಬಾಳುವ ವಸ್ತುಗಳ ಹುಡುಕಾಡುವ ಜೊತೆಗೆ ಅಪಾರ ಹಾನಿಯನ್ನುಂಟು ಮಾಡಿರುತ್ತಾರೆ. ಇನ್ನು ಈ ನಾಲ್ವರು ಒಂದೇ ಬಡಾವಣೆಯ ಒಟ್ಟು ಮೂರು ಅಪಾರ್ಟ್ ಮೆಂಟ್ ಕಟ್ಟಡಗಳಲ್ಲಿ ದರೋಡೆಗೆ…
ಪುತ್ತೂರು: ಒಂದು ಕಡೆ ರಾಜ್ಯದಲ್ಲಿ ರಣಭೀಕರ ಮಳೆಗೆ ಜನ ತತ್ತರಿಸಿದ್ದು, ಕಳೆದ ಕೆಲವು ದಿನಗಳಿಂದ ಶಿರಾಡಿ ಘಾಟ್ ನಲ್ಲಿ 5 ಬಾರಿ ಭೂ ಕುಸಿತ ಉಂಟಾಗಿತ್ತು. ಇದೀಗ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಗುಡ್ಡ ಕುಸಿದ ಪರಿಣಾಮ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಸದ್ಯ ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಹೌದು ಭಾರಿ ಮಳೆಯಿಂದಾಗಿ ದಕ್ಷಿಣ ಒಳನಾಡು, ಕರಾವಳಿ, ಉತ್ತರ ಕರ್ನಾಟಕ ಭಾಗದ ಬಹುತೇಕ ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಇದೀಗ ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲ ಎಂಬಲ್ಲಿ ಹೆದ್ದಾರಿ ಮೇಲೆ ಶುಕ್ರವಾರ ಮುಂಜಾನೆ ಗುಡ್ಡ ಕುಸಿದು ಬಿದ್ದಿದೆ. ಪರಿಣಾಮವಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸದ್ಯ ಮಡಿಕೇರಿ ಹಾಗೂ ಮೈಸೂರು ಕಡೆಗೆ ಪ್ರಯಾಣಿಸುವವರಿಗೆ ಬದಲಿ ರಸ್ತೆಯಾಗಿ ಪುತ್ತೂರು ಸಿಟಿ ಮೂಲಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಒಂದು ಗುಡ್ಡ ಕುಸಿತವು, ನಸುಕಿನ ಜಾವದಲ್ಲಿ ನಡೆದಿದ್ದರಿಂದ ಈ ವೇಳೆ ವಾಹನ ಸಂಚಾರ ಅಷ್ಟಾಗಿರಲಿಲ್ಲ ಹಾಗಾಗಿ ಬಾರಿ ಅನಾಹುತ ಒಂದು ತಪ್ಪಿದೆ ಎಂದು ಹೇಳಲಾಗುತ್ತಿದೆ.ಸದ್ಯ…
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳನ್ನು ಪುಸಲಾಯಿಸಿ ಭಿನ್ನ ಕೋಮಿನ ಯುವಕರು ಪಾರ್ಕ್‌ವೊಂದಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಘಟನೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಫೈಜಲ್ ಹಾಗೂ ಲಿಕೇಶ್ ಬಂಧಿತ ಆರೋಪಿಗಳಾಗಿದ್ದು, ಅಫೀಕ್ ತಲೆಮರೆಸಿಕೊಂಡಿದ್ದಾನೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಾಲಕಿಯನ್ನು ಪಾರ್ಕಿಗೆ ಬರುವಂತೆ ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ದೂರಿನ ಆಧಾರದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.
ಮಂಗಳೂರು: ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ (ಆಗಸ್ಟ್ 2) ಶುಕ್ರವಾರದಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮುಲೈ ಮುಗಿಲನ್ ರಜೆ ಘೋಷಿಸಿದ್ದಾರೆ.










