ಕೊಣಾಜೆ: ಅಡಿಕೆ ಕಳ್ಳತನ ನಡೆಸುತ್ತಿದ್ದ ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ ಘಟನೆ ಕುರ್ನಾಡು ಮಿತ್ತಕೋಡಿ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ರಿಯಾಝ್ ಹಾಗೂ ನಿಝಮುಲ್ ಹಕ್ ಎಂದು ಗುರುತಿಸಲಾಗಿದೆ. ನಾಟೆಕಲ್ ಪರಿಸರದಲ್ಲಿ ಜು.18 ರಂದು ಅಡಿಕೆ ಕಳ್ಳತನವಾದ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಕುರ್ನಾಡು ಮಿತ್ತಕೋಡಿ ಎಂಬಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಇವರಲ್ಲಿದ್ದ ಎರಡು ಲಕ್ಷ ಐವತ್ತು ಸಾವಿರ ಮೌಲ್ಯದ ಎರಡು ಅಟೋ ರಿಕ್ಷಾ ಹಾಗೂ 325 ಕೆಜಿ ಸುಲಿದ ಅಡಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
Author: main-admin
ಮಂಗಳೂರು: ನಗರದ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಕಳವುಗೈದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 2.50 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ. ಮೊಹಮ್ಮದ್ ರಿಯಾಜ್ ಅಲಿಯಾಸ್ ಬೆಬ್ಬೆ ರಿಯಾಜ್ ಹಾಗೂ ಮೊಹಮ್ಮದ್ ನಿಜಮುಲಹಕ್ ಅಲಿಯಾಸ್ ಹಕ್ಕು ಬಂಧಿತ ಆರೋಪಿಗಳು. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ಎಂಬಲ್ಲಿ ಅಡಿಕೆ ಕಳ್ಳತನವಾದ ಬಗ್ಗೆ ಜು.18ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಆರೋಪಿಗಳನ್ನು ಜು.30ರಂದು ಕುರ್ನಾಡು ಮಿತ್ತಕೋಡಿ ಬಳಿ ಬಂಧಿಸಿದ್ದಾರೆ. ಈ ವೇಳೆ ಕೃತ್ಯಕ್ಕೆ ಉಪಯೋಗಿದ 2 ಆಟೋ ರಿಕ್ಷಾಗಳು ಸೇರಿದಂತೆ 325 ಕೆಜಿ ಸುಲಿದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,50,000 ಆಗಬಹುದೆಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಂಗಳೂರು : ಮಂಗಳೂರಿನಲ್ಲಿ ಅಂಡರ್ ವರ್ಲ್ಡ್ ಸದ್ದನ್ನು ನಗರ ಪೊಲೀಸರು ಅಡಗಿಸಿದ್ದು ಅಂಡರ್ ವಲ್ಡ್ ಡಾನ್ ಕಲಿಯೋಗಿಶ್ ಇಬ್ಬರು ಸಹಚರನ್ನು ಬಂಧಿಸಿದ್ದಾರೆ. ನಗರದ ಫಳ್ನೀರ್ ನಲ್ಲಿ ಕಾರ್ಯಾಚರಣೆ ಮಾಡಿದ ನಗರ ಕ್ರೈಂ ಬ್ರಾಂಚ್ ಖಚಿತ ಮಾಹಿತಿ ಆಧಾರಿಸಿ ಕಾರು ತಪಾಸಣೆ ನಡೆಸುತ್ತಿದ್ದಾಗ ಇನ್ನೊವ ಕಾರಿನಲ್ಲಿ ಸಂಚಾರಿಸುತ್ತಿದ್ದ ಭೂಗತ ಪಾತಕಿ ಕಲಿಯೋಗಿಶ್ ಸಹಚರರನ್ಜು ಬಂಧಿಸಲು ಯಶಸ್ವಿಯಾಗಿದ್ದಾರೆ. ಕೇರಳ ಕಾಸರಗೋಡು ನಿವಾಸಿ ಮಹಮ್ಮದ್ ಹನೀಫ್(42) , ಮುಡಿಪು ಬಂಟ್ವಾಳ ನಿವಾಸಿ ಮಹಮ್ಮದ್ ರಫೀಕ್ (36) ಬಂಧಿತರು. ಬಂಧಿತರಿಂದ 2 ಪಿಸ್ತೂಲ್ ಗಳು, MDMA ವಶಕ್ಕೆ ಪಡೆದಿದ್ದಾರೆ. ಪಿಸ್ತೂಲನ್ನು ಮುಡಿಪು ರಫೀಕ್ ಆಗ್ರಾದಿಂದ ಮತ್ತೊಂದನ್ನು ಮಡಿಕೇರಿಯಿಂದ ಕೊಂಡುಕೊಂಡಿದ್ದಾರೆ. ಕಾರ್ಕಳದ ದಿನೇಶ್ ಶೆಟ್ಟಿ ಹತ್ಯೆಗಾಗಿ ಸುಪಾರಿ ಪಡೆದು ಈ ಪಿಸ್ತೂಲನ್ನು ಪಡೆದಿದ್ದರು. ಕೆಲ ದಿನಗಳ ಹಿಂದೆ ನಗರದ ಸೌರಾಷ್ಟ್ರ ಮಳಿಗೆ ಮಾಲಿಕರಿಗೆ ಜೀವ ಬೆದರಿಕೆ ಹಾಕಿ 50 ಲಕ್ಷ ರೂಪಾಯಿ ನೀಡುವಂತೆ ಕಲಿ ಯೋಗಿಶ್ ಸಹಚರರು ಬೆದರಿಕೆಯೊಡ್ಡಿದ್ದರು. ಈ ಕೃತ್ಯಕ್ಕೆ ಆರೋಪಿಗಳು ಮುಂಗಡ ಹಣವನ್ನು ಪಡೆದಿದ್ದರು ಆದರೆ…
ಭಾರೀ ಮಳೆಯ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆ ಅಂದರೆ ಜು.31ರಂದು ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಅದರಂತೆ ಬುಧವಾರ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ & ಪಿಯು ಕಾಲೇಜುಗಳವರೆಗೆ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ನಾಳೆ ಹವಾಮಾನ ಇಲಾಖೆ ರೆಡ್‌ಅಲರ್ಟ್ ಘೋಷಣೆ ಮಾಡಿರುವುದರಿಂದ ಶಾಲಾ-ಕಾಲೇಜಿಗೆ ರಜೆ ನೀಡಲಾಗಿದೆ.
ಮಂಗಳೂರು: ವಾಹನಗಳ ವೇಗ ಪತ್ತೆ ಮಾಡುವುದಕ್ಕಾಗಿ ಪೊಲೀಸರು ‘ಮೊಬೈಲ್ ಸ್ಪೀಡ್ ಡಿಟೆಕ್ಷನ್ ರಾಡಾರ್ ಗನ್’ಗಳ ಬಳಕೆ ಆರಂಭಿಸಿದ್ದು, ಸೋಮವಾರ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಅಪಘಾತ ಗಳನ್ನು ತಡೆಯಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿರುವ ವಾಹನಗಳ ವೇಗಮಿತಿ ಅಧಿಸೂಚನೆಯಂತೆ ದ.ಕ. ಜಿಲ್ಲಾ ಪೊಲೀಸರು 5 “ಮೊಬೈಲ್ ಸ್ಪೀಡ್ ಡಿಟೆಕ್ಷನ್ ರಾಡಾರ್ ಗನ್’ಗಳೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ವಾಹನಗಳ ವೇಗ ಪತ್ತೆ ಮಾಡಲು ಪೊಲೀಸರಿಗೆ ಒದಗಿಸಲಾಗಿರುವ ರಾಡಾರ್ ಗನ್ ಕನಿಷ್ಠ 100 ಮೀಟರ್ ಅಂತರದಲ್ಲಿ ವಾಹನಗಳ ವೇಗವನ್ನು ಪತ್ತೆ ಹಚ್ಚುತ್ತದೆ.ಮಂಗಳೂರು ನಗರ ಭಾಗ ಸೇರಿ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿಯೂ ರಾಡಾರ್ ಗನ್ ಬಳಸಿ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈಗಾಗಲೇ 10ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕಮಿಷನರೆಟ್ ವ್ಯಾಪ್ತಿಗೆ ಇಂತಹ 3 ಗನ್‌ಗಳನ್ನು ಒದಗಿಸಲಾಗಿದೆ.ಸೋಮವಾರ ಬಂಟ್ವಾಳ ಸಂಚಾರ ಪೊಲೀಸರು ರಾ.ಹೆ.75ರ ತುಂಬೆ ರಾಮಲ್‌ಕಟ್ಟೆ ಭಾಗದಲ್ಲಿ ಸ್ಪೀಡ್ ಡಿಟೆಕ್ಷನ್ ರಾಡಾರ್ ಗನ್ ಕೆಮರಾ ಬಳಸುವ ಮೂಲಕ ವಾಹನಗಳ ವೇಗವನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡಿದರು. ಬಂಟ್ವಾಳ…
ಉಡುಪಿ: ಯುವ ಯಕ್ಷಗಾನ ಕಲಾವಿದ, ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿ ಬಳಿಯ ನೀರ್ಜೆಡ್ಡು ನಿವಾಸಿ ಗುರುಪ್ರಸಾದ್ ಕುಲಾಲ್ (25) ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಗುರುಪ್ರಸಾದ್ ಕುಲಾಲ್ ಹಲವು ವರ್ಷಗಳ ಕಾಲ ಮಂದಾರ್ತಿ, ಮಾರಣಕಟ್ಟೆ, ಹಾಲಾಡಿ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿದ್ದರು.
ಕಳೆದ ವಾರವಷ್ಟೇ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯ ದೊಡ್ಡತಪ್ಲೆ ಬಳಿ ಭೂಕುಸಿತ ಸಂಭವಿಸಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ ಭೂಕುಸಿತ ಸಂಭವಿಸಿದೆ. ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ. ಪ್ರದೇಶದಲ್ಲಿ ಕಳೆದ ಹದಿನೈದು ದಿನಗಳಿಂದ ಮಣ್ಣು ಕುಸಿಯುತ್ತಿದೆ. ಇಂದು ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಇದೇ ವೇಳೆ ಕಾರಿನಲ್ಲಿ ಸಂಚರಿಸುತ್ತಿದ್ದವರು ಅದರಡಿ ಸಿಲುಕಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ರಕ್ಷಣಾ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡುತ್ತಿದ್ದಾರೆ. ಸ್ಥಳದಲ್ಲಿ ಆತಂಕ ಹೆಚ್ಚಾಗಿದೆ. ಮತ್ತಷ್ಟು ಮಣ್ಣು ಕುಸಿದರೆ ದೊಡ್ಡ ಅನಾಹುತವೇ ಸಂಭವಿಸುವ ಭೀತಿ ಎದುರಾಗಿದೆ. ಸಮರೋಪಾದಿಯಲ್ಲಿ ಮಣ್ಣು ತೆರವು ಮಾಡಲು ಪ್ರಯತ್ನಿಸಲಾಗುತ್ತಿದೆ. ವಾಹನ ಸಂಚಾರ ಸಂಪೂರ್ಣ ಬಂದ್ ಸದ್ಯ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಬರುತ್ತಿರುವ ವಾಹನಗಳನ್ನು ಗುಂಡ್ಯದಲ್ಲೇ ಪೊಲೀಸರು ತಡೆಯುತ್ತಿದ್ದಾರೆ.
ಮಂಗಳೂರು: ನಗರದ ನಂತೂರು ಪದವು – ಜಂಕ್ಷನ್ ನಡುವಿನ ಎನ್ಎಚ್66ನಲ್ಲಿ ಟ್ಯಾಂಕರ್ ಹರಿದು ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮಂಗಳೂರು ನಗರದ ಅಡ್ಯಾರು ಕಣ್ಣಗುಡ್ಡೆ ನಿವಾಸಿ ಶಿವಾನಂದ ಶೆಟ್ಟಿ(42) ಮೃತಪಟ್ಟವರು. ಶಿವಾನಂದ ಶೆಟ್ಟಿ ಅಡ್ಯಾರ್ ಕಣ್ಣೂರಿನಲ್ಲಿ ವಾಚ್‌ಗಳ ಬಿಡಿ ಭಾಗಗಳ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದರು. ಇವರು ಕಾರ್ಯ ನಿಮಿತ್ತ ನಂತೂರು ವೃತ್ತದ ಮೂಲಕ ಕದ್ರಿ ಪದವು ಕಡೆಗೆ ಸ್ಕೂಟರಿನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ಹಿಂಭಾಗದಿಂದ ಬರುತ್ತಿದ್ದ ಟ್ಯಾಂಕರ್ ಲಾರಿ ಇವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಸವಾರ ಶಿವಾನಂದ ಶೆಟ್ಟಿ ರಸ್ತೆಗೆಸೆಯಲ್ಪಟ್ಟಿದ್ದಾರೆ. ಆದರೆ ಟ್ಯಾಂಕರ್ ನಿಲ್ಲದೆ ಚಕ್ರ ಅವರ ತಲೆಯ ಮೇಲೆಯೇ ಹರಿದ ಪರಿಣಾಮ ಶಿವಾನಂದ ಶೆಟ್ಟಿಯವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಟ್ಯಾಂಕರ್ ಹಾಗೂ ಚಾಲಕನನ್ನು ವಶಪಡಿಸಿಕೊಂಡಿದ್ದಾರೆ. ಸ್ಕೂಟರ್ ಸ್ಕಿಡ್ ಆಗಿ ಬೀಳಲು ರಸ್ತೆ ಗುಂಡಿ ಕಾರಣವೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಸ್ಥಳದಲ್ಲಿ ಅಂಥಹ…
ವಯನಾಡು: ಕೇರಳದ ವಯನಾಡಿನಲ್ಲಿ ಭಾರಿ ಮಳೆಗೆ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದ್ದು, ಸದ್ಯದ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ ಇದೀಗ 73ಕ್ಕೆ ಏರಿಕೆಯಾಗಿದೆ. ಮೃತರ ದೇಹಗಳು ಮೆಪ್ಪಾಡಿ ಆಸ್ಪತ್ರೆಯಲ್ಲಿದ್ದು, ಗುರುತು ಪತ್ತೆ ಹಚ್ಚುವಿಕೆಗೆ ಹರಸಾಹಸ ಪಡುವಂತಾಗಿದೆ. 100ಕ್ಕೂ ಅಧಿಕ ಮಂದಿ ಮಣ್ಣಿನಡಿ ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣ ತಂಡ ಸೇರಿದಂತೆ ಎಲ್ಲ ರಕ್ಷಣಾ ಏಜೆನ್ಸಿಗಳು ಸ್ಥಳದಲ್ಲಿ ಬೀಡುಬಿಟ್ಟು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಭಾರತದಲ್ಲಿ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿದ್ದು, ಭಾರತೀಯರು ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ರೀತಿಯಲ್ಲಿ ಕ್ರಾಂತಿಯನ್ನು ಮಾಡಿದೆ. ಕಂಪನಿಯು ಕಳೆದ ವರ್ಷ ಕೇವಲ 999 ರೂಗಳಲ್ಲಿ ಕೈಗೆಟುಕುವ ಬೆಲೆಯ JioBharat V2 ಫೋನ್ ಅನ್ನು ಬಿಡುಗಡೆ ಮಾಡಿತು. ಈಗ, ಕಂಪನಿಯು 4G ಫೀಚರ್ ಫೋನ್‌ಗಾಗಿ ಹೊಸ ಪ್ರಿಪೇಯ್ಡ್ ಪ್ಯಾಕ್ ಹೊರತಂದಿದೆ. ಕೈಗೆಟುಕುವ ಕರೆಗಳು, 5G ಡೇಟಾ, OTT ಚಂದಾದಾರಿಕೆಗಳು ಮತ್ತು ಅಗ್ಗದ ಫೋನ್‌ಗಳನ್ನು ನೀಡುವ ಮೂಲಕ ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಇತರ ಯೋಜನೆಗಳಂತೆ, ರಿಲಯನ್ಸ್ ಜಿಯೋ ಕೈಗೆಟುಕುವ ಯೋಜನೆಯು 42GB ಒಟ್ಟು ಡೇಟಾ ಮತ್ತು OTT ಚಂದಾದಾರಿಕೆಯೊಂದಿಗೆ ಅನಿಯಮಿತ ಕರೆಗಳನ್ನು ನೀಡುತ್ತದೆ. ಯೋಜನೆಯ ಬೆಲೆ 299 ರೂ. ಈ ಯೋಜನೆಯಲ್ಲಿ, ನೀವು 28 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತೀರಿ. ಇದರಲ್ಲಿ, ನೀವು ಅನಿಯಮಿತ ಕರೆ ಮತ್ತು ಸಾಕಷ್ಟು ಡೇಟಾವನ್ನು ಸಹ ಪಡೆಯುತ್ತೀರಿ. ಈ ಯೋಜನೆಯಲ್ಲಿ, ನೀವು ಒಟ್ಟು 42GB ಡೇಟಾವನ್ನು ಪಡೆಯುತ್ತೀರಿ, ಅಂದರೆ, ನೀವು ಪ್ರತಿದಿನ 1.5GB…










