Author: main-admin

ಕೊಚ್ಚಿ: “ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ಭಾರತದ ಎಲ್ಲ ನಾಗರಿಕರಿಗೂ ಅನ್ವಯ ವಾಗುವಂಥದ್ದು. ಅದಕ್ಕೆ ಯಾವುದೇ ಧರ್ಮವೂ ಹೊರತಾಗಿಲ್ಲ’ ಎಂಬ ಮಹತ್ವದ ತೀರ್ಪನ್ನು ಕೇರಳ ಹೈಕೋರ್ಟ್‌ ನೀಡಿದೆ. ಇಲ್ಲಿ ನಾಗರಿ ಕತ್ವ ಮುಖ್ಯ, ಧರ್ಮಕ್ಕೆ ಬಳಿಕದ ಸ್ಥಾನ ಎಂದು ನ್ಯಾ| ಪಿ.ವಿ. ಕುಂಞಿಕೃಷ್ಣನ್‌ ಅವರಿದ್ದ ಪೀಠ ಹೇಳಿದೆ. 2012ರಲ್ಲಿ ಪಾಲಕ್ಕಾಡ್‌ನ‌ಲ್ಲಿ ನಡೆ ದಿದ್ದ ಬಾಲ್ಯವಿವಾಹ ಪ್ರಕರಣದ ಆರೋಪಿಗಳಾದ ಬಾಲಕಿಯ ತಂದೆ ಮತ್ತು ಉದ್ದೇಶಿತ “ಪತಿ’ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡುವ ವೇಳೆ ಕೇರಳ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವಾದ ಮಂಡಿಸುವ ವೇಳೆ ಮುಸ್ಲಿಂ ವೈಯಕ್ತಿಕ ಕಾನೂನನ್ನು ಪ್ರಸ್ತಾವಿಸಿದ್ದ ಅರ್ಜಿದಾರರ ಪರ ವಕೀಲರು, ಬಾಲಕಿ ಪ್ರೌಢಾವಸ್ಥೆಗೆ ಬಂದಿದ್ದ ಕಾರಣ ಆಕೆಗೆ ಮದುವೆ ಮಾಡಿಸುವುದು ತಪ್ಪಲ್ಲ. ಬಾಲ್ಯ ವಿವಾಹ ಕಾಯ್ದೆಯು ಮುಸ್ಲಿಂ ವೈಯಕ್ತಿಕ ಕಾನೂನಿನಿಗಿಂತ ದೊಡ್ಡದಲ್ಲ.

Read More

ಕಡಬ: ನಿಫಾ ವೈರಸ್ ಬಾಧಿಸಿದ್ದ ರೋಗಿಗೆ ಆರೈಕೆ ನೀಡಿದ್ದ ಕಡಬದ ನರ್ಸ್ ಓರ್ವರು ನಿಫಾ ವೈರಸ್ ಗೆ ತುತ್ತಾಗಿ ಕಳೆದ ಎಂಟು ತಿಂಗಳಿನಿಂದ ಕೋಮಾದಲ್ಲಿ ದಿನ ದೂಡುತ್ತಿರುವ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳ ಸಮೀಪದ ತುಂಬ್ಯ ನಿವಾಸಿ ತೋಮಸ್ ಟಿ.ಸಿ. ಎಂಬವರ ಪುತ್ರ ಟಿಟ್ಟೋ ತೋಮಸ್(24) ಇದೀಗ ಜೀವನ್ಮರಣ ಸ್ಥಿತಿಯಲ್ಲಿ ದಿನದೂಡುತ್ತಿರುವ ಯುವಕ. ಬಿಎಸ್ಸಿ ನರ್ಸಿಂಗ್ ಪದವೀಧರನಾಗಿರುವ ಟಿಟ್ಟೋ ತೋಮಸ್ ಕೇರಳದ ಕ್ಯಾಲಿಕಟ್ ನಲ್ಲಿರುವ ಇಕ್ರಾ ಇಂಟರ್ನ್ಯಾಷನಲ್ ಹಾಸ್ಪಿಟಲ್ ಆಯಂಡ್ ರಿಸರ್ಚ್ ಸೆಂಟರ್ ನಲ್ಲಿ 2023 ರಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದು, 2023 ರ ಸೆಪ್ಟೆಂಬರ್ ನಲ್ಲಿ ನಿಫಾ ವೈರಸ್ ಹೊಂದಿದ್ದ ರೋಗಿಯ ಆರೈಕೆ ಮಾಡಿದ್ದಾರೆ ಎನ್ನಲಾಗಿದೆ. ಕ್ವಾರಂಟೈನ್ ನಲ್ಲಿದ್ದ ಟಿಟ್ಟೋ ಥಾಮಸ್ ಗೆ ಎರಡು ತಿಂಗಳು ಕಳೆದ ನಂತರ ವಿಪರೀತ ತಲೆನೋವು ಕಾಣಿಸಿಕೊಂಡಿದ್ದು, ಡಿಸೆಂಬರ್ ನಲ್ಲಿ ಸ್ಕ್ಯಾನಿಂಗ್ ನಡೆಸಿದಾಗ ಮಿದುಳಿನ ಸ್ಟ್ರೋಕ್‌ಗೆ ತುತ್ತಾಗಿರುವುದು ತಿಳಿದು ಬಂದಿದ್ದು, ಮರುದಿನವೇ ಕೋಮಾಗೆ ಜಾರಿದ್ದಾರೆ…

Read More

ಉಪ್ಪಿನಂಗಡಿ: ಬಚ್ಚಲು ಮನೆಯಲ್ಲಿ ಯುವತಿಯೋರ್ವಳು ಸ್ನಾನ ಮಾಡುತ್ತಿರುವುದನ್ನು ಇಣುಕಿ ನೋಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಪೆರಿಯಡ್ಕ ನಿವಾಸಿ ಅಬ್ದುಲ್ ರಹಿಮಾನ್ (41) ನನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಜು. 21ರಂದು ರಾತ್ರಿ 9ರ ಸುಮಾರಿಗೆ ಪೆರಿಯಡ್ಕದ 22 ವರ್ಷದ ಯುವತಿಯೋರ್ವಳು ಬಚ್ಚಲು ಕೋಣೆಗೆ ಹೋಗಿ ಸ್ನಾನ ಮಾಡುತ್ತಿದ್ದಾಗ ಸ್ಥಳೀಯ ಉದ್ಯಮಿ ಅಬ್ದುಲ್ ರಹಿಮಾನ್ ಇಣುಕಿ ನೋಡಿದ್ದನ್ನು ಕಂಡು ಊರವರು ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ ಪೊಲೀಸ್ ಕಸ್ಟಡಿಯಲ್ಲಿರುವ ಈತನನ್ನು ಪೊಲೀಸರು ವಿಚಾರಣೆ ನಡೆಸಿದ ವೇಳೆ ಪೆರಿಯಡ್ಕ ಪರಿಸರದಲ್ಲಿ ಮನೆ ಮಂದಿ ಗಾಢ ನಿದ್ದೆಯಲ್ಲಿರುವ ಸಮಯ ಮನೆಯ ಹಿಂದಿನ ಬಾಗಿಲು ತೆರೆದು ಒಳಗೆ ನುಗ್ಗಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಪ್ರಕರಣಗಳಲ್ಲಿಯೂ ಈತನೇ ಆರೋಪಿ ಎಂಬುದು ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Read More

ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಪಟ್ಟಿಯಲ್ಲಿ ಹೆಸರು ಮೂಡಿಸಿದೆ. 10 ಮೀಟರ್ ವನಿತಾ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಮನು ಭಾಕರ್ ಅವರು ಕಂಚು ಗೆದ್ದು ಸಂಭ್ರಮಿಸಿದ್ದಾರೆ. ಕೊರಿಯಾ, ಚೀನಾ ಆಟಗಾರರ ಹೋರಾಟದ ನಡುವೆ ಅಚಲವಾದ ಆತ್ಮ ವಿಶ್ವಾಸವನ್ನು ಪ್ರದರ್ಶಿಸಿದ ಮನು ಭಾಕರ್ 10 ಮೀಟರ್ ವನಿತಾ ಏರ್ ಪಿಸ್ತೂಲ್ ಫೈನಲ್‌ ನಲ್ಲಿ ಮೂರನೇ ಸ್ಥಾನಿಯಾದರು. 221.7 ಅಂಕ ಪಡೆದರು. ಕೊರಿಯಾದ ಇಬ್ಬರು ಮೊದಲೆರಡು ಸ್ಥಾನ ಪಡೆದರು. ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಪಟ್ಟಿಯಲ್ಲಿ ಹೆಸರು ಮೂಡಿಸಿದೆ. 10 ಮೀಟರ್ ವನಿತಾ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಮನು ಭಾಕರ್ ಅವರು ಕಂಚು ಗೆದ್ದು ಸಂಭ್ರಮಿಸಿದ್ದಾರೆ. ಕೊರಿಯಾ, ಚೀನಾ ಆಟಗಾರರ ಹೋರಾಟದ ನಡುವೆ ಅಚಲವಾದ ಆತ್ಮ ವಿಶ್ವಾಸವನ್ನು ಪ್ರದರ್ಶಿಸಿದ ಮನು ಭಾಕರ್ 10 ಮೀಟರ್ ವನಿತಾ ಏರ್ ಪಿಸ್ತೂಲ್ ಫೈನಲ್‌ ನಲ್ಲಿ ಮೂರನೇ ಸ್ಥಾನಿಯಾದರು. 221.7 ಅಂಕ ಪಡೆದರು. ಕೊರಿಯಾದ ಇಬ್ಬರು ಮೊದಲೆರಡು…

Read More

ಬೆಂಗಳೂರು: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮೂಗಿನಿಂದ ರಕ್ತ ಸುರಿದಿದೆ! ಮುಡಾ ಹಗರಣದ ಕುರಿತಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೋರಾಟದ ರೂಪುರೇಷೆ ಕುರಿತಂತೆ ಬೆಂಗಳೂರಿನಲ್ಲಿ ಸಭೆ ನಡೆದಿತ್ತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಕುಮಾರಸ್ವಾಮಿ ಮಾತನಾಡುತ್ತಿದ್ದರು. ಈ ವೇಳೆ ಅವರ ಮೂಗಿನಿಂದ ಏಕಾಏಕಿ ರಕ್ತ ಸುರಿದಿದೆ. ಮೊದಲು ತಮ್ಮ ಬಳಿ ಇರುವ ಟವೆಲ್‌ನಿಂದ ಹೆಚ್‌ಡಿಕೆ ರಕ್ತ ಒರೆಸಿಕೊಂಡಿದ್ದಾರೆ. ಆದರೆ ಮತ್ತೆ ಜಾಸ್ತಿ ರಕ್ತ ಬಂದು, ಅವರ ಬಿಳಿ ಶರ್ಟ್‌ಗೂ ಮೆತ್ತಿಕೊಂಡಿದೆ. ಈ ವೇಳೆ ಹೆಚ್‌ಡಿ ಕುಮಾರಸ್ವಾಮಿ ಕೊಂಚ ಗಾಬರಿಗೊಂಡ್ರು. ಅಷ್ಟೇ ಅಲ್ಲದೇ ಅವರ ಬಳಿಯೇ ಇದ್ದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಹೆಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅಲ್ಲಿದ್ದವರೆಲ್ಲ ಗಾಬರಿಯಾಗಿದ್ದಾರೆ. ನಂತರ ಬೆಂಗಳೂರಿನ ಜಯನಗರದಲ್ಲಿ ಇರುವ ಖಾಸಗಿ ಆಸ್ಪತ್ರೆಗೆ ದೌಡಾಯಿಸಿದ್ರು.

Read More

ಆರೋಗ್ಯಕರ ಜೀವನವನ್ನು ನಡೆಸಲು, ನಾವು ಸರಿಯಾಗಿ ತಿನ್ನಬೇಕು. ಆರೋಗ್ಯಕರ ಆಹಾರಗಳಲ್ಲಿ ಕ್ಯಾರೆಟ್ ಕೂಡ ಒಂದು. ಕ್ಯಾರೆಟ್ ಅನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಕ್ಯಾರೆಟ್ ಪುಡಿಂಗ್ ಮತ್ತು ಸಲಾಡ್ ಕೂಡ ಬಹಳ ಒಳ್ಳೆಯದು. ಕ್ಯಾರೆಟ್ ಜ್ಯೂಸ್ ಅನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಕ್ಯಾರೆಟ್‌ನಲ್ಲಿ ಪೋಷಕಾಂಶಗಳ ಕೊರತೆಯಿಲ್ಲ. ಇದು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮತ್ತು ಅನೇಕ ಖನಿಜಗಳನ್ನು ಹೊಂದಿರುತ್ತದೆ. ಆದರೆ ಕ್ಯಾರೆಟ್ ಗೆ ನಾವು ಬಹಳಷ್ಟು ಸಕ್ಕರೆ ಮತ್ತು ಎಣ್ಣೆಯನ್ನು ಬಳಸುತ್ತೇವೆ, ಆದ್ದರಿಂದ ಅದರ ಸೇವನೆಯನ್ನು ಶಿಫಾರಸು ಮಾಡುವುದಿಲ್ಲ. ಕ್ಯಾರೆಟ್ ಸಲಾಡ್ ಮತ್ತು ಜ್ಯೂಸ್ ಅನ್ನು ಸುರಕ್ಷಿತವಾಗಿ ಸೇವಿಸಬಹುದು. ಇದರ ಪರಿಣಾಮವೂ ಶೀಘ್ರದಲ್ಲೇ ಗಮನಕ್ಕೆ ಬರುವುದು.

Read More

ಬೆಂಗಳೂರು:ಯಾವುದೇ ಚಾಲಕರು 130 ಕಿಮೀ ವೇಗದಲ್ಲಿ ವಾಹನ ಓಡಿಸಿ ಸಿಕ್ಕಿಬಿದ್ದರೇ ಅಂತವರ ವಿರುದ್ಧ ಆಗಸ್ಟ್ 1 ರಿಂದ ಎಫ್ ಐಆರ್ ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಅವರು, ಕರ್ನಾಟಕದಲ್ಲಿ ಎಲ್ಲಿಯಾದರೂ ಗಂಟೆಗೆ 130 ಕಿಮೀ ವೇಗದಲ್ಲಿ ಚಾಲನೆ ಮಾಡುವವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗುವುದು, ದುಡುಕಿನ ಮತ್ತು ಅಪಾಯಕಾರಿ ಚಾಲನೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಶೇ. 90 ರಷ್ಟು ಮಾರಣಾಂತಿಕ ಅಪಘಾತಗಳಿಗೆ ಅತಿ ವೇಗವು ಕಾರಣವಾಗುತ್ತದೆ. ಗುರುವಾರ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ, 155 ವಾಹನಗಳು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದವು. ಸ್ಪಾಟ್ ಮತ್ತು ಸೆಕ್ಷನಲ್ ಸ್ಪೀಡ್ ದಾಖಲಿಸಲಾಗುತ್ತದೆ ಎಂದು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಸ್ಪಾಟ್ ಮತ್ತು ಸೆಕ್ಷನಲ್ ಸ್ಪೀಡ್ ನಡುವಿನ ವ್ಯತ್ಯಾಸದ ಕುರಿತು ಮಾಹಿತಿ ನೀಡಿರುವ ಅವರು ಓವರ್ ಸ್ಪೀಡಿಂಗ್…

Read More

ಕಾರ್ಕಳ: ನಗರದ ಅಪಾರ್ಟ್ಮೆಂಟ್ ವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಗಂಭೀರ ಗಾಯಗೊಂಡ ಘಟನೆ ರಾತ್ರಿ ಸಂಭವಿಸಿದೆ. ಕಾರ್ಕಳದ ಅನೆಕೆರೆ ಬಳಿಯ ಕೃಷ್ಣಾ ಅಪಾರ್ಟ್ಮೆಂಟ್ ನ ಫ್ಲಾಟ್ ನಲ್ಲಿ ಈ ಸಿಲಿಂಡರ್ ಸ್ಪೋಟ ನಡೆದಿದ್ದು, ಸ್ಪೋಟದ ಶಬ್ದಕ್ಕೆ ಅಸುಪಾಸಿನ ಜನ ಬೆಚ್ವಿಬಿದ್ದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಸಿಲಿಂಡರ್ ಸ್ಪೋಟದಿಂದಾಗಿ ಮನೆಯ ಗೋಡೆಗಳು ಛಿದ್ರವಾಗಿದ್ದು ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಅಕ್ಕಪಕ್ಕದ ನಾಲ್ಕು ಮನೆಗಳಿಗೂ ಹಾನಿ ಉಂಟಾಗಿದೆ. ಮನೆಯಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಇಬ್ಬರನ್ನು ಕಾರ್ಕಳದ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Read More

ಪುತ್ತೂರು : ಗಲಾಟೆ ವಿಷಯವಾಗಿ ಕರೆ ಬಂದ ಹಿನ್ನಲೆ ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತನನ್ನು ಪೊಲೀಸರು ಬಂಧಿಸಿದ್ದಾರೆ. ಬನ್ನೂರು ಗ್ರಾಮದ ಕಂಜೂರು ನಿವಾಸಿ ತೇಜಸ್ ಬಂಧಿತ. ಜು.26 ರಂದು ಜಿಲ್ಲಾ ಕಂಟ್ರೋಲ್‌ ರೂಮ್‌ ನಿಂದ ಇವೆಂಟ್‌ ಬಂದಿದ್ದು, ಇವೆಂಟ್‌ನಲ್ಲಿ ಬಂದಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಘಟನಾ ಸ್ದಳವನ್ನು ಖಚಿತ ಪಡಿಸಿಕೊಂಡು ಘಟನಾ ಸ್ದಳವಾದ ಪುತ್ತೂರು ಬನ್ನೂರು ಗ್ರಾಮದ ಕಂಜೂರು ಎಂಬಲ್ಲಿ ತೇಜಸ್‌ ಎಂಬವರು ತನ್ನ ತಾಯಿಯೊಂದಿಗೆ ಗಲಾಟೆ ಮಾಡುತ್ತಿದ್ದು ತೇಜಸ್‌ನ ತಾಯಿ ಚಂದ್ರಾವತಿಯವರು ಪಕ್ಕದ ಮನೆಗೆ ಬಂದಿರುವುದಾಗಿ ತಿಳಿಸಿದ್ದು, ಆಗ ಪೊಲೀಸ್ ಸಿಬ್ಬಂದಿ ಚಂದ್ರಾವತಿಯವರನ್ನು ವಿಚಾರಿಸುತ್ತಿರುವಾಗ ತೇಜಸ್‌ನು ಆತನ ಮನೆಯಿಂದ ಪೊಲೀಸರನ್ನು ನೋಡಿ ಅವಾಚ್ಯವಾಗಿ ಬೈದು, ನಮ್ಮ ಮನೆಗೆ ಪೊಲೀಸರು ಬರುವುದು ಯಾಕೆ? ಎಂದು ಹೇಳಿ ಆತನ ಮನೆಯ ಅಂಗಳದಲ್ಲಿದ್ದ ಪೋರ್ಡ್ ಕಾರನ್ನು ತುರ್ತು ಸ್ಪಂದನಾ ( ಇಆರ್‌ಎಸ್‌ಎಸ್‌) ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿದ್ದು, ಆ ಸಮಯ…

Read More

ಉಡುಪಿ: ದಕ್ಷ ಅಧಿಕಾರಿಯಾಗಿರುವ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಅವರಿಗೆ ದಿಢೀರ್ ವರ್ಗಾವಣೆ ಶಿಕ್ಷೆ ಎದುರಾಗಿದೆ. ಈ ವರ್ಗಾವಣೆ ಶಿಕ್ಷೆಯ ಹಿಂದೆ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕರ ಒತ್ತಡ ಇದೆ ಎಂಬ ಆರೋಪ‌ ಕೇಳಿಬರುತ್ತಿದೆ. ಹೌದು, ಮಾಜಿ ಶಾಸಕನ ಆಪ್ತನ ಜಾಗದ ತಕರಾರಿಗೆ ಸಂಬಂಧಪಟ್ಟಂತೆ ಅವರಿಗೆ ಸಹಕರಿಸದಿದ್ದಕ್ಕೆ ರಶ್ಮಿ ಅವರಿಗೆ ಈ ವರ್ಗಾವಣೆ ಶಿಕ್ಷೆಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಮಾಜಿ ಶಾಸಕನ ಆಪ್ತನ ಜಾಗದ ತಕರಾರನ್ನು ವಿಲೇವಾರಿ ಮಾಡುವಂತೆ ಕಾನೂನು ಮೀರಿ ರಶ್ಮಿ ಅವರಿಗೆ ಒತ್ತಡ ಹೇರಲಾಗಿತ್ತು. ಇದಕ್ಕೆ ಒಪ್ಪದ ಸಹಾಯಕ ಆಯುಕ್ತೆ ರಶ್ಮಿ ಕಾನೂನು ವ್ಯಾಪ್ತಿಯಲ್ಲೇ ಕೆಲಸ ಮಾಡಿಕೊಡುವುದಾಗಿ ಹೇಳಿದ್ದರು. ಇದರಿಂದಾಗಿ ಮಾಜಿಶಾಸಕ ರಿಗೆ ಭಾರೀ ಹಿನ್ನೆಡೆಯಾಗಿತ್ತು. ಜೊತೆಗೆ ರಶ್ಮಿ ಅವರ ದಿಟ್ಟ ನಿರ್ಧಾರ ಮತ್ತು ದಕ್ಷತೆಗೆ ಕುಂದಾಪುರದ ಜನತೆ ಶಹಭ್ಬಾಸ್ ಎಂದು ಹಾಡಿ ಹೊಗಳಿದ್ದರು. ಅಧಿಕಾರಿ ಎಂದರೆ ಪ್ರಾಮಾಣಿಕವಾಗಿ ರಶ್ಮಿ ಅವರಂತೆ ಇರಬೇಕು ಎಂದು ಸಾರ್ವಜನಿಕರಿಂದಲೂ ಉತ್ತಮ ಪ್ರಶಂಸೆ ಬಂದಿತ್ತು. ಬಡವರಿಗೊಂದು ಕಾನೂನು ಶ್ರೀಮಂತರಿಗೊಂದು…

Read More