ಕುಂಬಳೆ: ನಗರದ ತರವಾಡು ಮನೆಗೆ ನುಗ್ಗಿದ ಕಳ್ಳರು ಬೇರೆ ಬೇರೆ ದೈವಗಳ ಆಯುಧ, ಚಿನ್ನಾಭರಣ, ಬೆಳ್ಳಿ, ತಾಮ್ರ, ಹಿತ್ತಾಳೆಯ ವಿವಿಧ ವಸ್ತುಗಳು, ಹಣವನ್ನು ಎಗರಿಸಿದ ಘಟನೆ ಸಂಭವಿಸಿದೆ. ಕುಂಬಳೆ ಪೇಟೆಯಲ್ಲಿರುವ ಶಬರ ಶಂಕರ ಸೇವಾ ಸಮಿತಿಯ ಕುನ್ನಿಲ್‌ಪಾರ ತರವಾಡು ಕ್ಷೇತ್ರ ಹಾಗೂ ತರವಾಡು ಮನೆಯಿಂದ ಚಿನ್ನಾಭರಣ, ಭಂಡಾರ ಸಹಿತ ವಿವಿಧ ಸೊತ್ತುಗಳು ಕಳವಿಗೀಡಾಗಿದೆ. ಚಿನ್ನದಿಂದ ತಯಾರಿಸಲಾದ ಒಂದು ಹೂವು, ಹಾಗೂ ಕತ್ತಿ ಕಳವಿಗೀಡಾಗಿದೆ. ತರವಾಡು ಕ್ಷೇತ್ರದಿಂದ ಶ್ರೀ ವಯನಾಟು ಕುಲವನ್ ದೈವದ ಬೆಳ್ಳಿಯಿಂದ ತಯಾರಿಸಲಾದ ಆಯುಧ, ವಿಷ್ಣುಮೂರ್ತಿ ದೈವದ ಎರಡು ಆಯುಧಗಳು, ತೊಂಡಚ್ಚಮ್ಮಾರ್ ದೈವದ ಆಯುಧ, ಹಿತ್ತಾಳೆಯ ಮೂರು ಪಾತ್ರೆಗಳು, 25 ಕಾಲುದೀಪಗಳು, ಚೆಂಬು, ಕಾಣಿಕೆ ಹುಂಡಿ, ವೆಂಕಟ್ರಮಣ ದೇವರ ಮುಡಿಪು ಕಳವಿಗೀಡಾಗಿದೆ. ಕಾಣಿಕೆ ಹುಂಡಿಯಲ್ಲಿ ಸುಮಾರು 1 ಸಾವಿರ ರೂಪಾಯಿ, ಮುಡಿಪಿನಲ್ಲಿ ಸುಮಾರು 15 ಸಾವಿರ ರೂಪಾಯಿಗಳಿತ್ತೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಜು. 21 ರ ಸಂಜೆ ಕ್ಷೇತ್ರದಲ್ಲಿ ದೀಪ ಹಚ್ಚಲು ಹೋದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ತರವಾಡು ಕ್ಷೇತ್ರ…
Author: main-admin
ಬೆಂಗಳೂರು: ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ನೀವು ಏನನ್ನು ನೋಡಬಹುದು ಎಂದು ಹೇಳಲು ಸಾಧ್ಯವಿಲ್ಲ. ಬೆಳಗ್ಗಿನಿಂದ ಸಂಜೆಯವರೆಗೂ ವಿವಿಧ ರೀತಿಯ ವೀಡಿಯೋಗಳು ವೈರಲ್ ಆಗಿದ್ದು, ಇದರಲ್ಲಿ ಫೈಟಿಂಗ್, ಡ್ಯಾನ್ಸ್ ಮತ್ತು ವಿಚಿತ್ರ ಕೃತ್ಯಗಳನ್ನು ಮಾಡುವ ವೀಡಿಯೊಗಳು ಸೇರಿವೆ. ರೀಲ್ಸ್ ಮಾಡಬೇಕು ಹೆಚ್ಚಿನ ಜನರು ವೀಕ್ಷಣೆ ಮಾಡಬೇಕು ಬೇಗನೆ ಜನಪ್ರಿಯತೆ ಪಡೆಯಬೇಕು ಎಂದು ಹಕವರು ಹಂಬಲಿಸುತ್ತಿರುತ್ತಾರೆ. ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಪೊಲೀಸರಿಗೆ ಬೆಂಗಳೂರು ನಗರ ಕಮಿಷನರ್ ಬಿ.ದಯಾನಂದ ಅವರು ಬಿಸಿ ಮುಟ್ಟಿಸಿದ್ದಾರೆ. ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಪೊಲೀಸರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿರುವ ಅವರು, ಇಲಾಖೆಗೆ ಸಂಬಂಧಪಡದೇ ಇರುವ ವಿಷಯಗಳು ಇಲಾಖೆಯ ಘನತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಪೊಲೀಸ್ ಸಮವಸ್ತ್ರವು ಪೊಲೀಸರ ಬದ್ಧತೆ, ಸಮರ್ಪಣೆ ಮತ್ತು ಹೊಣೆಗಾರಿಕೆಯ ಸಂಕೇತವಾಗಿದೆ. ಡಿಜಿಟಲ್ ಫೋರಮ್ನಲ್ಲಿ ಇದರ ಬಳಕೆಯು ಈ ಮೌಲ್ಯಗಳನ್ನು ಪ್ರತಿಬಿಂಬಿಸುವಂತಿರಬೇಕಾಗುತ್ತದೆ. ಹಾಗಾಗಿ ಸಮವಸ್ತ್ರದಲ್ಲಿ ರೀಲ್ಸ್ ಮಾಡುವವರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು, ಇತ್ತೀಚಿನ ದಿನಗಳಲ್ಲಿ…
ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-2025ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಬಜೆಟ್ 2024 ರ ನಂತರ ಅಗ್ಗವಾಗಲಿರುವ ವಿಷಯಗಳಲ್ಲಿ ಮೊಬೈಲ್ ಫೋನ್ಗಳು, ಚಾರ್ಜರ್ಗಳು ಸೇರಿವೆ, ಅವುಗಳ ಮೇಲೆ 15% ಕಸ್ಟಮ್ ಸುಂಕವನ್ನು ಕಡಿತಗೊಳಿಸಲಾಗಿದೆ. ಕ್ಯಾನ್ಸರ್ ಔಷಧಿಗಳು ಮತ್ತು ಮೊಬೈಲ್ ಫೋನ್ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಕಟಿಸಿದ್ದಾರೆ. ಹೆಚ್ಚುವರಿಯಾಗಿ, ಆಮದು ಮಾಡಿದ ಚಿನ್ನ, ಬೆಳ್ಳಿ, ಚರ್ಮದ ಸರಕುಗಳು ಮತ್ತು ಸಮುದ್ರಾಹಾರದ ಬೆಲೆಯೂ ಕಡಿಮೆಯಾಗುವ ನಿರೀಕ್ಷೆಯಿದೆ. ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 6 ಕ್ಕೆ ಇಳಿಸಲಾಗುವುದು ಮತ್ತು ಪ್ಲಾಟಿನಂ ಮೇಲಿನ ಸುಂಕವನ್ನು ಶೇಕಡಾ 6.5 ಕ್ಕೆ ಇಳಿಸಲಾಗುವುದು. 25 ನಿರ್ಣಾಯಕ ಖನಿಜಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸರ್ಕಾರ ವಿನಾಯಿತಿ ನೀಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ‘ಮೋದಿ 3.0’ ನ ಮೊದಲ ಬಜೆಟ್ ಭಾರತದ ಆರ್ಥಿಕ ಭೂದೃಶ್ಯದ…
ಬಂಟ್ವಾಳ: ಕಳೆದ ಐದು ದಿನದಿಂದ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಮಾಣಿಮಜಲು ಗ್ರಾಮದಿಂದ ಯುವಕನೊಬ್ಬ ಕಾಣೆಯಾಗಿದ್ದಾನೆ. ಸಮದ್ ನಾಪತ್ತೆಯಾದ ಯುವಕ. ಸಮದ್ ಮೂರು ಮಕ್ಕಳ ತಂದೆಯಾಗಿದ್ದು, ಆತ ಎಲ್ಲಿಯಾದರೂ ಕಂಡು ಬಂದಲ್ಲಿ ತಕ್ಷಣ ಬಂಟ್ವಾಳ ಟೌನ್ ಪೋಲಿಸ್ ಠಾಣೆಗೆ ತಿಳಿಸುವಂತೆ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಥವಾ +91 90082 18612, +91 9901090586 ನಂಬರಿಗೆ ತಿಳಿಸಬೇಕಾಗಿ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಭೂಕುಸಿತ ದುರಂತ ಸಂಭವಿಸಿ ಒಂದು ವಾರ ಕಳೆದಿದೆ. ಕಾರ್ಯಾಚರಣೆ ವೇಳೆ ಮತ್ತೊಂದು ಶವ ಸಿಕ್ಕಿದೆ. ಮೃತರಾದ ಹನ್ನೊಂದು ಜನರಲ್ಲಿ ಈವರೆಗೆ ಒಟ್ಟು 8 ಮೃತದೇಹಗಳು ಪತ್ತೆಯಾಗಿವೆ. ಕಾರ್ಯಾಚರಣೆಗೆ ಆಧುನಿಕ ತಂತ್ರಜ್ಞಾನದ ಮೊರೆಹೋಗಿರುವ ಜಿಲ್ಲಾಡಳಿತ ಇಸ್ರೋ ಜೊತೆಗೆ ಯೋಧರ ನೆರವು ಪಡೆದಿದೆ. ಒಂದೆಡೆ ಬಿಟ್ಟು ಬಿಡದ ಮಳೆ, ಮತ್ತೊಂದೆಡೆ ಪದೇ ಪದೇ ನೆಲಕ್ಕುರುಳುತ್ತಿರುವ ಗುಡ್ಡದ ಮಣ್ಣು. ಇದರ ನಡುವೆ ಜೀವ ಪಣಕ್ಕಿಟ್ಟು ಕಾರ್ಯಾಚರಣೆ ಮಾಡುತ್ತಿದೆ ರಕ್ಷಣಾ ತಂಡ. ಈಗ ಸಣ್ಣಿ ಹನುಮಂತ ಗೌಡ (67) ಮಹಿಳೆ ಶವ ಸಿಕ್ಕಿದೆ. ಘಟನೆ ನಡೆದ 8 ದಿನದ ಬಳಿಕ ಶವ ಪತ್ತೆಯಾಗಿದೆ. ಇನ್ನೂ ಮೂವರಿಗೆ ಶೋಧ ಕಾರ್ಯ ಮುಂದುವರಿದಿದೆ. ಮಣ್ಣಿನ ಕುಸಿತದಿಂದ ನದಿಯಲ್ಲಿ ತೇಲಿಹೋದ ಗಂಗೆಕೊಳ್ಳದ ಲೋಕೇಶ್ ನಾಯ್ಕ, ಶಿರೂರಿನ ಜಗನ್ನಾಥ ಜಟ್ಟಿ, ಉಳವರೆ ಗ್ರಾಮದ ಸಣ್ಣಿ ಹನುಮಂತಗೌಡ, ಕೇರಳ ಮೂಲದ ಅರ್ಜುನ್ ಶವ ಪತ್ತೆಯಾಗಬೇಕಿದೆ. ಶಂಕಿತ ಸ್ಥಳದಲ್ಲಿ ಶೋಧ ಕಾರ್ಯ ಮಾಡಿದರೂ ಟ್ರಕ್, ಟ್ಯಾಂಕರ್‌ಗಳು ಮಾತ್ರ…
ನವದೆಹಲಿ : ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2021ರಲ್ಲಿ ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ಇ-ಶ್ರಾಮ್ ಪೋರ್ಟಲ್ ಪ್ರಾರಂಭಿಸಿದೆ. ವಲಸೆ ಕಾರ್ಮಿಕರು ಮತ್ತು ಗೃಹ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಎಲ್ಲಾ ಕಾರ್ಮಿಕರಿಗೆ ಅನುಕೂಲವಾಗುವಂತೆ ಪೋರ್ಟಲ್ ಪ್ರಾರಂಭಿಸಲಾಗಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾರಾದರೂ ಇ-ಶ್ರಮ್ ಕಾರ್ಡ್ ಅಥವಾ ಶ್ರಮ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಈ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಇ-ಶ್ರಮ್ ಕಾರ್ಡ್ ಮೂಲಕ ವಿವಿಧ ಪ್ರಯೋಜನಗಳನ್ನ ಪಡೆಯಬಹುದು. ಏನಿದು ಇ-ಶ್ರಮ್ ಕಾರ್ಡ್.!ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾರಾದರೂ ಶ್ರಮಿಕ್ ಕಾರ್ಡ್ ಅಥವಾ ಇ-ಶ್ರಮ್ ಕಾರ್ಡ್’ಗೆ ಅರ್ಜಿ ಸಲ್ಲಿಸಬಹುದು. ಇದರ ಅಡಿಯಲ್ಲಿ, ಅಸಂಘಟಿತ ವಲಯದ ಕಾರ್ಮಿಕರು 60 ವರ್ಷಗಳ ನಂತರ ಪಿಂಚಣಿ, ಮರಣ ವಿಮೆ ಮತ್ತು ಅಂಗವೈಕಲ್ಯ ಸಂದರ್ಭದಲ್ಲಿ ಆರ್ಥಿಕ ಸಹಾಯದಂತಹ ಪ್ರಯೋಜನಗಳನ್ನು ಪಡೆಯಬಹುದು. ಇದರ ಅಡಿಯಲ್ಲಿ, ಫಲಾನುಭವಿಗಳು ಭಾರತದಾದ್ಯಂತ ಮಾನ್ಯವಾಗಿರುವ 12 ಅಂಕಿಯ ಸಂಖ್ಯೆಯನ್ನು ಪಡೆಯುತ್ತಾರೆ. 2 ಲಕ್ಷ ಲಾಭ.!ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)…
ಬೆಂಗಳೂರಿನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಮನೆಯಲ್ಲಿದ್ದ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ತಾಯಿ ಹಾಗೂ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾಗಡಿಯಲ್ಲಿ ನಡೆದಿದೆ. ಹೌದು ಗೀಸರ್ ಯಿಂದ ವಿಷಾನಿಲ ಸೊರಿಕೆಯಾಗಿ ತಾಯಿ ಮಗ ಸಾವನ್ನಾಪ್ಪಿದ್ದರೆ. ಶೋಭಾ (40) ಪುತ್ರ ಗಿರೀಶ್ (16) ಮೃತಪಟ್ಟ ದುರ್ದೈವಿಗಳು ಎಂದು ತಿಳಿದುಬಂದಿದೆ.ಗೀಸರ್ ಆನ್ ಮಾಡಿ ಮನೆ ಸದಸ್ಯರು ಮರೆತು ಹೋಗಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಬಾಗಿಲು ಕಿಟಕಿ ಮುಚ್ಚಿದ್ದರಿಂದ ತಾಯಿ ಮಗ ಉಸಿರುಗಟ್ಟಿ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ ಮಾಗಡಿ ತಾಲೂಕು ಆಸ್ಪತ್ರೆಗೆ ತಾಯಿ ಹಾಗೂ ಮಗನ ಮೃತದೇಹವನ್ನು ಮಾಡಲಾಗಿದೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ಸಂಭವಿಸಿದೆ.
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಮಣ್ಣು ಕುಸಿತದ ವೇಳೆ ಪೊಲೀಸ್ ವಾಹನ ಸಿಲುಕಿಕೊಂಡಿದೆ. ಸಕಲೇಶಪುರ ತಾಲೂಕಿನ, ದೊಡ್ಡತಪ್ಲೆ ಬಳಿ ಪೊಲೀಸರು ತಮ್ಮ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಈ ವೇಳೆ ಭೂ ಕುಸಿತ ಉಂಟಾಗಿದೆ. ಘಟನೆಯಲ್ಲಿ KA-13 G-1713 ನಂಬರ್‌ನ ಹೈವೇ ಪಾಟ್ರೋಲ್ ವಾಹನಕ್ಕೆ ಸಣ್ಣಪುಟ್ಟ ಹಾನಿಯಾಗಿದೆ. ಕೂಡಲೇ ಜೆಸಿಬಿ ಮೂಲಕ ಮಣ್ಣು ತೆರವು ಗೊಳಿಸಲಾಗಿದೆ.
ಪುತ್ತೂರು : ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ಸೋಮವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಪೆರುವಾಜೆ ಗ್ರಾಮದ ಕಾನಾವು ನಿವಾಸಿಯಾಗಿರುವ ಸುಂದರ ಕಾನಾವು ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೂರು ದಿನಗಳ ಹಿಂದೆ ಮನೆಯಲ್ಲಿ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದ ಸುಂದರ ಕಾನಾವು ಅವರನ್ನು ಮಂಗಳೂರು ಪಡೀಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಎ.ಜೆ. ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಸೇವೆಗೆ ಸೇರಿದ ಇವರು ಬಳಿಕ ಸುಬ್ರಹ್ಮಣ್ಯ ಠಾಣೆಯಲ್ಲಿ ಸೇವೆ ಸಲ್ಲಿಸಿ ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿಗೊಂಡು ಅಲ್ಲಿಂದ ಬಂಟ್ವಾಳ ಠಾಣೆಗೆ ವರ್ಗಾವಣೆಗೊಂಡರು. ಅಲ್ಲಿಂದ ಸಂಪ್ಯ ಠಾಣೆಗೆ ವರ್ಗಾವಣೆಗೊಂಡು ಅಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಭಡ್ತಿಗೊಂಡು ಇತ್ತೀಚೆಗೆ ಪುತ್ತೂರು ನಗರ ಠಾಣೆಗೆ ವರ್ಗಾವಣೆಗೊಂಡಿದ್ದರು.
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ನಾಳೆ ಕೇಂದ್ರ ಬಜೆಟ್ ಮಂಡನೆ ಮಾಡಲಿದೆ. 19 ದಿನಗಳ ಕಾಲ ನಡೆಯುವ ಈ ಅಧಿವೇಶನವು ಇಂದಿನಿಂದ ಆಗಸ್ಟ್ 12ರ ವರೆಗೆ ನಡೆಯಲಿದೆ. ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಮೀಕ್ಷಾ ವರದಿ ಮಂಡಿಸಲಿದ್ದು, ನಾಳೆ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಾರಿಯ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಜಿದ್ದಾಜಿದ್ದಿಯಾಗುವ ಸಾಧ್ಯತೆ ಇದೆ. ನೀಟ್, ನೆಟ್ ಪರೀಕ್ಷಾ ಅಕ್ರಮ, ಐಎಎಸ್ ಅಧಿಕಾರಿಗಳ ನೇಮಕಾತಿ ವಿವಾದ, ಅಗ್ನಿವೀರ್ ಯೋಜನೆ, ಮಣಿಪುರ ಹಿಂಸಾಚಾರ, ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉಗ್ರರ ದಾಳಿ ಮೊದಲಾದ ಅಸ್ತ್ರಗಳನ್ನು ಹಿಡಿದು ವಿಪಕ್ಷಗಳು ಮೋದಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಇಂಡಿಯಾ ಒಕ್ಕೂಟ ಸಜ್ಜಾಗಿದೆ. ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ೫ ಮಸೂದೆ ಮಂಡನೆ ಮಾಡಲಿದೆ. ಹಣಕಾಸು ಮಸೂದೆ, 2024, ವಿಪತ್ತು ನಿರ್ವಹಣೆ (ತಿದ್ದುಪಡಿ) ಮಸೂದೆ, 2024 ಪಿಆರ್‌ಎಸ್ ಶಾಸನದ ಪ್ರಕಾರ, ವಿಪತ್ತು ನಿರ್ವಹಣೆಯಲ್ಲಿ ಕೆಲಸ ಮಾಡುವ ವಿವಿಧ ಸಂಸ್ಥೆಗಳ ಪಾತ್ರಗಳಲ್ಲಿ…










