ಮಂಗಳೂರು: ಹಿರಿಯ ರಂಗನಿರ್ದೇಶಕ ಹಾಗೂ ರಾಷ್ಟ್ರಪ್ರಶಸ್ತಿ ಸಿನಿಮಾ ನಿರ್ಮಾಪಕ, ನಿರ್ದೇಶಕ ಸದಾನಂದ ಸುವರ್ಣ (93) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಾಳೆ ಮಧ್ಯಾಹ್ನ 1ರಿಂದ 3ರವರೆಗೆ ಪುರಭವನದಲ್ಲಿ ವ್ಯವಸ್ಥೆ ಮಾಡಲಾಗುವುದು. ಬಳಿಕ ಅವರ ಬಯಕೆಯಂತೆ ದೇಹದಾನವನ್ನು ಮಾಡಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ. ಕನ್ನಡದಲ್ಲಿ ಅತ್ಯಂತ ಯಶಸ್ವಿ ರಂಗಭೂಮಿ ನಿರ್ದೇಶಕರಾಗಿ ನೂರಾರು ನಾಟಕಗಳನ್ನು ನಿರ್ದೇಶಿಸಿದ ಇವರು ಕೋರ್ಟ್‌ಮಾರ್ಷಲ್, ಉರುಳು, ಮಳೆನಿಲ್ಲುವವರೆಗೆ, ಗುಡ್ಡದ ಭೂತ, ಸುಳಿ ಮುಂತಾದವು ಪ್ರಯೋಗಾತ್ಮಕ, ಸದಭಿರುಚಿಯ ನಾಟಕಗಳು. ಸದಾನಂದ ಸುವರ್ಣ ಅವರು ಗಿರೀಶ್ ಕಾಸರವಳ್ಳಿಯವರ ಘಟಶ್ರಾದ್ಧ ಸಿನಿಮಾಕ್ಕೆ ನಿರ್ಮಾಪಕರಾಗುವ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದವರು. ಈ ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾವೆಂದು ಸ್ವರ್ಣಕಮಲ ಪ್ರಶಸ್ತಿ ಲಭಿಸಿತ್ತು. ಬಳಿಕ ಕಾಸರವಳ್ಳಿಯವರ ತಬರನ ಕತೆ, ಮನೆ, ಕ್ರೌರ‌್ಯ ಮುಂತಾದ ಸಿನಿಮಾಗಳಿಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಅನುವಭವ ಪಡೆದವರು. ಬಳಿಕ ಕುಬಿ ಮತ್ತು ಇಯಾಲ ಎಂಬ ಸದಭಿರುಚಿಯ ಚಿತ್ರ ನಿರ್ದೇಶಿಸಿ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು.…
Author: main-admin
ಉಡುಪಿ: ಉಡುಪಿ ನಗರದ ಮನೆಯೊಂದರಲ್ಲಿ ನಡೆದಿದ್ದ ಭಾರೀ ಬೆಂಕಿ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಬಾರ್ ಮಾಲೀಕ ರಮಾನಂದ್ ಶೆಟ್ಟಿ ಅವರ ಪತ್ನಿ ಅಶ್ವಿನಿ (45) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಿನ್ನೆ ಮುಂಜಾನೆ ನಡೆದಿದ್ದ ಅಗ್ನಿ ಅವಘಡದಲ್ಲಿ ಅಶ್ವಿನಿ ಅವರ ಪತಿ ರಮಾನಂದ್ ಶೆಟ್ಟಿ ಮೃತಪಟ್ಟಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಕೂಡ ಮೃತಪಟ್ಟಿದ್ದು ಕುಟುಂಬದಲ್ಲಿ ಶೋಕ ಮುಗಿಲು ಮುಟ್ಟಿದೆ. ಉಡುಪಿ ನಗರದಲ್ಲಿ ವಾಸ ಮಾಡುತ್ತಿದ್ದ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ್ ಶೆಟ್ಟಿ ಮನೆಯಲ್ಲಿ ನಿನ್ನೆ ಮುಂಜಾನೆ ಶಾರ್ಟ್ ಸರ್ಕ್ಯುಟ್ ನಿಂದ ಅಗ್ನಿ ಅವಘಡ ಸಂಭವಿಸಿತ್ತು. ಈ ಅವಘಡದಲ್ಲಿ ಮನೆಯ ಒಳಭಾಗ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಮನೆಯಲ್ಲಿದ್ದ ರಮಾನಂದ್ ಶೆಟ್ಟಿ – ಅಶ್ವಿನಿ ದಂಪತಿಯ ಮಕ್ಕಳಿಬ್ಬರನ್ನು ರಕ್ಷಣೆ ಮಾಡಲಾಗಿತ್ತು. ಅಗ್ನಿ ಅವಘಡದಿಂದ ಮನೆಯೊಳಗೆ ದಟ್ಟ ಹೊಗೆ ಆವರಿಸಿ ದಂಪತಿ ಅಸ್ವಸ್ಥಗೊಂಡಿದ್ದರು.ರಮಾನಂದ್ ಶೆಟ್ಟಿ ಆಸ್ಪತ್ರೆಯಲ್ಲಿ ನಿನ್ನೆಯೇ ಮೃತಪಟ್ಟಿದ್ದರೆ, ಪತ್ನಿ ಅಶ್ವಿನಿ ಕೆಎಂಸಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಬೆಂಕಿಯ ಕೆನ್ನಾಲೆಗೆಗೆ ಅವರಿಗೆ…
ಉಪ್ಪಿನಂಗಡಿ: ಉಪ್ಪಿನಂಗಡಿ ಹತ್ತಿರ ವೃದ್ಧೆಯೋರ್ವರ ಚಿನ್ನದ ಸರ ಕಸಿಯಲು ಯತ್ನಿಸಿದ ಘಟನೆ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ನಡೆದಿದೆ. ಮಂಗಳೂರು ಕಡೆಯಿಂದ ಬೆಂಗಳೂರು ಕಡೆ ಬೈಕ್‌ನಲ್ಲಿ ಸಾಗುತ್ತಿದ್ದ ಇಬ್ಬರು ಅಡ್ಡಹೊಳೆ ಸಮೀಪದ ಮಿನಿ ಕ್ಯಾಂಟಿನ್‌ಗೆ ತೆರಳಿ ಚಹಾ ಕೇಳುವ ನೆಪದಲ್ಲಿ ತ್ರೇಸಿಯಮ್ಮ (65) ಅವರ ಕತ್ತಿನಲ್ಲಿದ್ದ ಸರ ಎಳೆದಾಗ ಬೊಬ್ಬೆ ಹಾಕಿದರು ಎನ್ನಲಾಗಿದೆ. ಕಳ್ಳರು ಓಡುವ ವೇಳೆ ಸರ ಬಿದ್ದಿದ್ದು, ಬಳಿಕ ಗುಂಡ್ಯ ಚೆಕ್ ಪೋಸ್ಟ್‌ಗೆ ಮಾಹಿತಿ ನೀಡಲಾಗಿದ್ದು, ಅಲ್ಲಿ ಪೊಲೀಸರು ಮತ್ತು ಸಾರ್ವ ಜನಿಕರು ಯುವಕರನ್ನು ಹಿಡಿದು ನೆಲ್ಯಾಡಿ ಠಾಣೆಗೆ ಹಸ್ತಾಂತರಿಸಿದರು. ಬಂಧಿತರು ಯಶವಂತಪುರದ ರೋಹಿತ್ ಮತ್ತು ಅಶೋಕ್ ಎಂದು ತಿಳಿದು ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉಡುಪಿ: ನಿಂತಿದ್ದ ಬಸ್ಸಿನ ಹಿಂಬದಿಗೆ ಸ್ಕೂರ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಗುಂಡಿಬ್ಯೆಲು ನಿವಾಸಿ ಲಕ್ಷ್ಮಣ (60)ಗಂಭೀರ ಗಾಯಗೊಂಡಿದ್ದು ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಪೆ ಸಿಟಿಜನ್ ಸರ್ಕಲ್ ಸಮೀಪದ ನೆರ್ಗಿ ಎಂಬಲ್ಲಿ ಈ ಘಟನೆ ನಡೆದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಸಮಾಜಸೇವಕ ಈಶ್ವರ ಮಲ್ಪೆ ಮತ್ತು ತಂಡದವರು ಸಹಕರಿಸಿದರು. ಇವರಿಗೆ ಗುಂಡಿಬ್ಯೆಲಿನಲ್ಲಿ ವರ್ಕ್ ಶಾಪ್ ಇದೆ ಎನ್ನಲಾಗುತ್ತಿದೆ. ಮಲ್ಪೆ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಢಿಕ್ಕಿಯ ರಭಸಕ್ಕೆ ಬಸ್ ನ ಹಿಂಭಾಗ ಜಖಂಗೊಂಡಿದೆ.
ಸುಳ್ಯ: ಸರಕಾರಿ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಗುರುಪೂಜೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಇಲಾಖೆಗೆ ದೂರು ನೀಡಿರುವ ಘಟನೆ ನಡೆದಿದ್ದು, ಕಾರ್ಯಕ್ರಮದ ಫೋಟೋ ವೈರಲ್ ಆಗಿದೆ. ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕರಿಂಬಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುಪೂಜೆ ನಡೆಸಲಾಗಿರುವ ಆರೋಪ ಕೇಳಿಬಂದಿದೆ. ಶಾಲಾ ಕೊಠಡಿಯೊಳಗೆ ಕಾರ್ಯಕ್ರಮ ನಡೆಸಿದ್ದು, ಎದುರಿನ ಕಪ್ಪು ಹಲಗೆ(ಬ್ಲಾಕ್ ಬೋರ್ಡ್)ಯಲ್ಲಿ ಶಾಲೆಯ ಹೆಸರು ಕಂಡುಬಂದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಲವರು ಕಾರ್ಯಕ್ರಮ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ ಹಾಕಿದ್ದರಿಂದ ಬಹಿರಂಗವಾಗಿದೆ. ಸರಕಾರಿ ಶಾಲೆಯ ಆವರಣದೊಳಗೆ ಅಥವಾ ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದೆಂಬ ಸರಕಾರದ ಸುತ್ತೋಲೆ ಇದ್ದರೂ ಶಾಲೆಯ ಒಳಗೆ ಆರೆಸ್ಸೆಸ್ ಕಾರ್ಯಕ್ರಮ ನಡೆದಿರುವ ಬಗ್ಗೆ ಶಿಕ್ಷಣ ಇಲಾಖೆ, ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದ್ದು, ಮುಖ್ಯ ಶಿಕ್ಷಕರಿಂದ ವಿವರಣೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಉಪ್ಪಿನಂಗಡಿ: ಮನೆಯಲ್ಲಿ ವಿದ್ಯುತ್ ಇಲ್ಲವೆಂದು ವಿದ್ಯುತ್ ಪರಿವರ್ತಕದ ಬಳಿ ಫ್ಯೂಸ್ ಹಾಕಲು ತೆರಳಿದ ಯುವಕನೋರ್ವ ವಿದ್ಯುತ್ ಆಘಾತಕ್ಕೆ ಬಲಿಯಾದ ಘಟನೆ ಜು.15ರಂದು ಇಳಂತಿಲ ಗ್ರಾಮದ ಗೋಳಿತ್ತಡಿ ಎಂಬಲ್ಲಿ ನಡೆದಿದೆ. ತಿಮ್ಮಪ್ಪ ಗೌಡ ಎಂಬವರ ಪುತ್ರ ಹರೀಶ (32) ಮೃತ ಯುವಕ. ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದ ಈತ ಉತ್ತಮ ಕಬಡ್ಡಿ ಆಟಗಾರನೂ ಆಗಿದ್ದು, ತನ್ನ ಮನೆಗೆ ವಿದ್ಯುತ್ ಬರುತ್ತಿಲ್ಲವೆಂದು ವಿದ್ಯುತ್ ಪರಿವರ್ತಕದ ಬಳಿ ತೆರಳಿ ಫ್ಯೂಸ್ ಹಾಕಲು ನೋಡಿದ್ದು, ಈ ಸಂದರ್ಭ ವಿದ್ಯುತ್ ಪ್ರವಹಿಸಿ ಈತ ಮೃತಪಟ್ಟಿದ್ದಾರೆ.
ಮಂಗಳೂರು : ಭಾನುವಾರ ಸಂಜೆ ಮಹಾರಾಷ್ಟ್ರದ ರಾಯಗಢ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯ ನಡುವೆ ಭೂಕುಸಿತದಿಂದಾಗಿ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲು ಸೇವೆಗಳು ಸ್ಥಗಿತಗೊಂಡಿವೆ. ಸಂಜೆ 5 ಗಂಟೆ ಸುಮಾರಿಗೆ ವಿನ್ಹೆರೆ (ರಾಯಗಡ) ಮತ್ತು ದಿವಾನ್ ಖವಾಟಿ (ರತ್ನಗಿರಿ) ನಿಲ್ದಾಣಗಳ ನಡುವಿನ ಸುರಂಗದ ಹೊರಗೆ ಭೂಕುಸಿತ ಸಂಭವಿಸಿದೆ ಎಂದು ವಕ್ತಾರರು ಕೊಂಕಣ ರೈಲ್ವೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ. ಮಂಗಳೂರು ಎಕ್ಸ್‌ಪ್ರೆಸ್, ಕೊಂಕಣ ಕನ್ಯಾ ಎಕ್ಸ್‌ಪ್ರೆಸ್, ತುಟಾರಿ ಎಕ್ಸ್‌ಪ್ರೆಸ್, ಜನಶತಾಬ್ದಿ ಎಕ್ಸ್‌ಪ್ರೆಸ್, ದಿವಾ ಸಾವಂತವಾಡಿ ಎಕ್ಸ್‌ಪ್ರೆಸ್, ಸಾವಂತವಾಡಿ ಮಡಗಾಂವ್ ಪ್ಯಾಸೆಂಜರ್ ರೈಲು ಸೇವೆ ನಿಂತಿದೆ. ಇನ್ನು ಕರಾವಳಿ ಭಾಗದ 12134 ಸೂಪರ್ ಎಕ್ಸ್‌ಪ್ರೆಸ್ ಛತ್ರಪತಿ ಶಿವಾಜಿ ಮುಂಬೈ ಟರ್ಮಿನಲ್ ರೈಲು ಕ್ಯಾನ್ಸಲ್ ಆಗಿದೆ. 12620 ಮತ್ಸ್ಯ ಗಂಧ ಮಂಗಳೂರು ಟು ಮುಂಬೈ ರೈಲು ಕ್ಯಾನ್ಸಲ್ ಆಗಿದೆ. ಬೋಗ್ದ್ಯಾದಲ್ಲಿ ಹಳಿಗಳ ಮೇಲೆ ಗುಡ್ಡ ಕುಸಿದ ಪರಿಣಾಮ ರೈಲು ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲೇ ರಾತ್ರಿ ಕಳೆಯುವಂತಾಗಿತ್ತು. ನೂರಾರು ಪ್ರಯಾಣಿಕರು ಕೊಂಕಣ…
ಮಂಗಳೂರು : ನಿವೃತ್ತ ಪೊಲೀಸ್ ಅದಿಕಾರಿ ಎಂ. ಎನ್ . ರಾವ್ ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ 6 ತಿಂಗಳ ಹಿಂದೆಯಷ್ಟೆ ಎಂ. ಎನ್ . ರಾನ್ ನಿವೃತ್ತಿ ಹೊಂದಿದ್ದರು. ಎಂ ಎನ್ ರಾವ್ ಅವರು ಮಂಗಳೂರು ನಗರ ಸೇರಿಂತೆ ಆನೇಕ ಕಡೆ ಕರ್ತವ್ಯವನ್ನು ಮಾಡಿದ್ದು, ಜನಪರ ಅಧಿಯಾಗಿ ಗುರ್ತಿಸಿಕೊಂಡಿದ್ದರು.
ಉಡುಪಿ: ನಗರದ ಬಾರ್ ಮಾಲೀಕರೊಬ್ಬರ ಮನೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಬಾರ್ ಮಾಲೀಕ ಸಾವನ್ನಪ್ಪಿದ್ದು, ಅವರ ಪತ್ನಿ ಗಂಭೀರ ಗಾಯಗೊಂಡ ಘಟನೆ ಇಂದು ಮುಂಜಾನೆ ಸಂಭವಿಸಿದೆ. ನಗರದ ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲೀಕರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಬಾರ್ ಮಾಲೀಕ ರಮಾನಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಅವರ ಪತ್ನಿ ಅಶ್ವಿನಿ ಅವರಿಗೂ ಗಂಭೀರ ಗಾಯವಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದಾರೆ. ಮನೆಯೊಳಗೆ ಮತ್ತಿಬ್ಬರು ಸಿಲುಕಿಕೊಂಡಿದ್ದು ಅವರ ರಕ್ಷಣೆ ಮಾಡಲಾಗಿದೆ. ಈ ದುರ್ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 15ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ , ಪ್ರೌಢಶಾಲೆ, ಪಿಯು ಕಾಲೇಜಿಗಳಿಗೆ ಇಂದು ರಜೆ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ, ದುರ್ಬಲ / ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ ಪ್ರವಚನಗಳಿಗೆ ಬಳಸುವಂತಿಲ್ಲ. ಶಾಲಾ ಕಾಲೇಜು ಮುಖ್ಯಸ್ಥರುಗಳು ಕಟ್ಟಡಗಳ ಸುಸ್ಥಿತಿಯ ಬಗ್ಗೆ ಗಮನಹರಿಸಬೇಕು ಎಂದು ಸೂಚನೆ ನೀಡಲಾಗಿದೆ.










