Author: main-admin

ಮಂಗಳೂರು: ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಾಮಂಜೂರು ತಿರುವೈಲು ಮೂಡುಜೆಪ್ಪು ಅಮೃತೇಶ್ವರ ದೇವಸ್ಥಾನದ ಬಳಿಯ ನಿವಾಸಿ ನದೀಂ(34) ಎಂದು ಪತ್ತೆ ಹಚ್ಚಲಾಗಿದೆ. ಈತ ಬಂಗ್ರ ಕೂಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಮಾದಕ ವಸ್ತುಗಳನ್ನಿಟ್ಟುಕೊಂಡು ಗಿರಾಕಿಗಳಿಗಾಗಿ ಕಾಯುತ್ತಿದ್ದ ಎನ್ನಲಾಗಿದ್ದು, ಈತನ ವಶದಲ್ಲಿದ್ದ ಅಂದಾಜು 56,000 ರೂ. ಬೆಲೆಬಾಳುವ ಮಾದಕ ವಸ್ತುಗಳು, ಮೊಬೈಲ್ ಫೋನ್, 7 ಡೆಬಿಟ್‌ ಕಾರ್ಡ್‌ಗಳು ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Read More

ಬೆಳ್ತಂಗಡಿ: ಆಟೋರಿಕ್ಷಾದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸ್) ಎಫ್ಟಿಎಸ್‌ಸಿ 1 ನ್ಯಾಯಾಲಯದ ನ್ಯಾಯಾಧೀಶರಾದ ಡಿ. ವಿನಯ್ ಅವರು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಇಳಂತಿಲ ಗ್ರಾಮದ ನಿವಾಸಿ ಅಬ್ದುಲ್ ಕರೀಂ (39) ಹಾಗೂ ಮೊಗ್ರು ಗ್ರಾಮದ ಅಟೋ ಚಾಲಕ ಸಾಧಿಕ್ (34) ಶಿಕ್ಷೆಗೆ ಒಳಗಾದವರಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು 2023ರ ಜೂನ್ 18ರಂದು ಬಂದಾರು ಗ್ರಾಮದ ನೇಲೋಳ್ಪಲ್ಕೆ ಎಂಬಲ್ಲಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕುಂಟಾಲ ಎಂಬಲ್ಲಿಗೆ ತಲುಪುವ ವೇಳೆ ಅಟೋರಿಕ್ಷದಲ್ಲಿ ‌ಬಂದ ಆರೋಪಿಗಳು ರಿಕ್ಷಾವನ್ನು ನಿಲ್ಲಿಸಿದ್ದು ಆಕೆಯೂ ರಿಕ್ಷಾದಲ್ಲಿ ಹತ್ತಿದ್ದಾಳೆ. ರಿಕ್ಷಾದಲ್ಲಿ ತೆರಳುವ ವೇಳೆ ರಿಕ್ಷಾದಲ್ಲಿದ್ದ ಕರೀಂ ಎಂಬಾತ ಆಕೆಯ ಮೈಮೇಲೆ ಕೂಹಾಕಿ ದೌರ್ಜನ್ಯ ನಡೆಸಿದ್ದಾನೆ, ಈ ವೇಳೆ ಭಯಗೊಂಡ ಬಾಲಕಿ ರಿಕ್ಷಾದಿಂದ ಹಾರಿದ್ದಾಳೆ ರಸ್ತೆಗೆ ಬಿದ್ದ ಬಾಲಕಿ ಗಾಯಗೊಂಡಿದ್ದಳು ಈ ವೇಳೆ ರಿಕ್ಷಾ ನಿಲ್ಲಿಸದೆ ಪರಾರಿಯಾಗಿದ್ದರು. ಈ ಬಗ್ಗೆ ಬಾಲಕಿಯ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ…

Read More

ಬೆಂಗಳೂರು : ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಸ್​ಎಂ ಕೃಷ್ಣ (SM Krishna) ಅವರು ನಿಧನರಾಗಿದ್ದಾರೆ. ಎಸ್​ಎಂ ಕೃಷ್ಣ ಅವರ ನಿಧನ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಇಂದಿನಿಂದ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದೆ. ಇದೇ ವೇಳೆ ಬುಧವಾರ (ಡಿಸೆಂಬರ್ 11) ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಡಿಸೆಂಬರ್​ 10 ರಿಂದ ಡಿಸೆಂಬರ್ 12ರವರೆಗೆ ಶೋಕಾಚರಣೆಗೆ ಘೋಷಣೆ ಮಾಡಲಾಗಿದೆ. ಮೂರು ದಿನಗಳ ಕಾಲ ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿ ಅಗಲಿದ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಾಗುವುದು. ಖಾಸಗಿ ಶಾಲೆಗಳಿಗೂ ರಜೆಬುಧವಾರ ಖಾಸಗಿ ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಖಾಸಗಿ ಶಾಲೆಗಳ ಒಕ್ಕೂಟ ರಜೆ ಘೋಷಿಸಿ ಆದೇಶ ಹೊರಡಿಸದೆ. ಶನಿವಾರ ಪೂರ್ಣ ದಿನ ತರಗತಿ ನಡೆಸಿ ಸರಿಪಡಿಸಿಕೊಳ್ಳುವಂತೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

Read More

ಉಳ್ಳಾಲ: ಎರಡು ಕಾರುಗಳ ನಡುವಿನ ಓವರ್ ಟೇಕ್ ರಭಸಕ್ಕೆ ವೃದ್ಧೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅಡಂಕುದ್ರು ನಲ್ಲಿ ಸಂಭವಿಸಿದ್ದು, ಬಳಿಕ ಎರಡೂ ಕಾರುಗಳು ರಸ್ತೆ ಬದಿಯ ಕಮರಿಗೆ ಬಿದ್ದಿವೆ. ಮೃತಪಟ್ಟ ಮಹಿಳೆ ಸೇವಂತಿಗುಡ್ಡೆಯ ನಿವಾಸಿ ಕೃಷ್ಣಪ್ಪ ಅವರ ಪತ್ನಿ ಬೇಬಿ (65) ಎಂದು ಗುರುತಿಸಲಾಗಿದೆ. ಬೇಬಿ ಅವರು ಅಡಂ ಕುದ್ರುವಿನಲ್ಲಿ ಅಂಗಡಿ ಹೊಂದಿದ್ದು, ಪಂಪ್ವೆಲ್ ಅಪಾರ್ಟ್ ಮೆಂಟ್ ಒಂದರಲ್ಲಿ ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ ಅವರು ಕೆಲಸಕ್ಕೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ತೊಕ್ಕೊಟ್ಟಿನಿಂದ ಮಂಗಳೂರಿನ ಕಡೆಗೆ ವೇಗವಾಗಿ ಧಾವಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೇಬಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಅಂಚಿನ ಆಳವಾದ ಕಮರಿಗೆ ಬಿದ್ದಿದೆ. ಪೋಲೋ ಕಾರನ್ನು ಓವರ್ ಟೇಕ್ ಮಾಡುತ್ತಿದ್ದ ಕಿಯಾ ಕಾರು ಕೂಡ ರಸ್ತೆ ಬದಿಯ ಪೊದೆಗೆ ನುಗ್ಗಿದೆ. ಅಪಘಾತದಲ್ಲಿ ಕಾರು ಚಾಲಕರಿಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ರವಿಶಂಕರ್, ಸಂಚಾರಿ ಎಸಿಪಿ…

Read More

ಬೆಂಗಳೂರು: ಮಾಜಿ ಸಿಎಂ ಎಸ್‌ಎಂ ಕೃಷ್ಣ ಬೆಳಗಿನ ಜಾವ ಸುಮಾರು 2.45ಕ್ಕೆ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ಹಿಂದಿರುಗಿದ್ದರು. ಇಂದು ಸದಾಶಿವನಗರದ ನಿವಾಸದಲ್ಲಿ ಎಸ್‌ಎಂ ಕೃಷ್ಣ ನಿಧನರಾಗಿದ್ದಾರೆ. ದೀರ್ಘ ಕಾಲದವರೆಗೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಎಸ್‌ಎಂ ಕೃಷ್ಣ ಅವರು ರಾಜಕೀಯ ಅಂತ್ಯದ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿದ್ದರಿಂದ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕವೂ ಎಸ್ ಎಂ ಕೃಷ್ಣ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಎಸ್‌ಎಂ ಕೃಷ್ಣ ಅವರಿಗೆ 92 ವರ್ಷ ವಯಸ್ಸಾಗಿತ್ತು.

Read More

ಉಳ್ಳಾಲ: ತಾಂತ್ರಿಕ ದೋಷದಿಂದ ಅನಿಲ ಟ್ಯಾಂಕರ್‌ನಿಂದ ಹೈಡ್ರಾಲಿಕ್ ಆಸಿಡ್ ಸೋರಿಕೆಯಾಗುತ್ತಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಕೋಟೆಕಾರ್ ಉಚ್ಚಿಲ ಸಮೀಪ ನಡೆದಿದ್ದು, ಘಟನಾ ಸ್ಥಳದಲ್ಲಿ ಉಳ್ಳಾಲ, ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬೀಡುಬಿಟ್ಟಿದ್ದಾರೆ. ಎಂಆರ್‌ಪಿಎಲ್‌ ತಂಡ ಮತ್ತು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಾರವಾರದಿಂದ ಕೊಚ್ಚಿಗೆ ಹೈಡ್ರಾಲಿಕ್ ಆಸಿಡ್ ಸಾಗಿಸುತ್ತಿದ್ದ ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆಯಾಗಿದೆ. ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗುವುದನ್ನು ಗಮನಿಸಿದ ಚಾಲಕ ಹೆದ್ದಾರಿ ಬಳಿ ಟ್ಯಾಂಕ‌ರ್ ಅನ್ನು ನಿಲ್ಲಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. ಅನಿಲ ಸೋರಿಕೆಯಿಂದ ಶ್ವಾಸಕೋಶದ ತೊಂದರೆಯುಂಟಾಗುವ ಸಾಧ್ಯತೆಯಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳ, ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆದ್ದಾರಿಯಲ್ಲಿ ವಾಹನ ಸಂಚಾರ ಯಥಾಸ್ಥಿತಿಯಲ್ಲಿದ್ದು, ಯಾವುದೇ ಸೂಚನೆಗಳನ್ನು ಇಲಾಖೆ ಈವರೆಗೆ ಸ್ಥಳೀಯರಿಗೆ, ವಾಹನ ಸವಾರರಿಗೆ ನೀಡಿಲ್ಲ ಎಂದು ತಿಳಿದು ಬಂದಿದೆ.

Read More

ಕಾರ್ಕಳ: ಬೈಲೂರು ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಮೂರ್ತಿ ನಿರ್ಮಾಣ ಮಾಡಿರುವ ಕೃಷ್ ಆರ್ಟ್ ವಲ್ಡ್‌ನ ಶಿಲ್ಪಿ ಕೃಷ್ಣ ನಾಯ್ಕ್‌ಗೆ ಜಾಮೀನು ಮಂಜೂರು ಆಗಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಲ್ಪಿ ಕೃಷ್ಣ ನಾಯ್ಕ್‌ಗೆ ಡಿಸೆಂಬರ್ 7 ರಂದು ಜಾಮೀನು ಮಂಜೂರುಗೋಳಿಸಿದೆ. ಬೈಲೂರು ಪರಶುರಾಮ ಥೀಮ್ ಪಾರ್ಕಿನಲ್ಲಿ ನಿರ್ಮಿಸಿದ ಮೂರ್ತಿಯ ವಿಚಾರದಲ್ಲಿ ಕೃಷ್ಣ ಶೆಟ್ಟಿ ಬಜಗೋಳಿಯವರು ಶಿಲ್ಪಿ ವಿರುದ್ಧ ದೂರು ದಾಖಲಿಸಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ನವೆಂಬರ್ 4 ರಂದು ವಿಚಾರಣೆ ನಡೆದಿತ್ತು. ನಾಯಾಧೀಶರು ವಾದ ಪ್ರತಿವಾದವನ್ನು ಆಲಿಸಿ ನಿರೀಕ್ಷಣಾ ಜಾಮೀನನ್ನು ನವೆಂಬರ್ 7ಕ್ಕೆ ಕಾಯ್ದಿರಿಸಿದ್ದರು. ಆದರೆ ನ. 7ರಂದು ಕಾಯ್ದಿರಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯು ತಿರಸ್ಕಾರವಾಗಿತ್ತು. ಇದರಿಂದ ಕಾರ್ಕಳ ನಗರ ಪೊಲೀಸರು ನ. 10ರಂದು ಶಿಲ್ಪಿಯನ್ನು ಕೇರಳದಲ್ಲಿ ಬಂಧಿಸಿ ನವೆಂಬರ್ 11ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪೊಲೀಸರು ಹೆಚ್ಚಿನ ತನಿಖೆಗೆ ಶಿಲ್ಪಿಯನ್ನು 7 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದರು. ನಂತರ ನವೆಂಬರ್ 15ರಂದು ಪೊಲೀಸರು ಕ್ರಷ್ಣ ನಾಯ್ಕ್‌ರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.…

Read More

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್‌‌ ಮನೆಯ ಅಂಗಳಕ್ಕೆ ನುಗ್ಗಿದ ಘಟನೆ ನೆಕ್ಕಿಲಾಡಿಯಲ್ಲಿ ನಡೆದಿದೆ. ಪುತ್ತೂರಿನಿಂದ ನೆಕ್ಕಿಲಾಡಿ ಕಡೆಗೆ ಬರುತ್ತಿದ್ದ ಆಂಬ್ಯುಲೆನ್ಸ್‌‌ ಇಲ್ಲಿನ ವನಸುಮ ನರ್ಸರಿ ರಸ್ತೆಯಲ್ಲಿ ನೇರಸಾಗಿ ಮನೆಯೊಂದರ ವರಾಂಡಕ್ಕೆ ನುಗ್ಗಿದೆ. ಘಟನೆಯಿಂದ ಮನೆಯ ಆವರಣಗೋಡೆಗೆ ಹಾನಿಯಾಗಿದ್ದು, ಆ್ಯಂಬುಲೆನ್ಸ್ ಮನೆಯ ಗೋಡೆಗೆ ಢಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಈ ಸಂದರ್ಭ ರಸ್ತೆ ಬದಿ ಶಾಲಾ ಮಕ್ಕಳು ನಿಂತಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ. ಕನ್ಯಾಡಿಯ ಸೇವಾ ಭಾರತಿಗೆ ಸೇರಿದ ಆಂಬ್ಯುಲೆನ್ಸ್‌‌ ಇದಾಗಿದ್ದು, ಆರೋಗ್ಯ ಶಿಬಿರವೊಂದಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯಿಂದ ಆಂಬ್ಯುಲೆನ್ಸ್‌‌ ಚಾಲಕ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

Read More

ಮಂಗಳೂರು: ಸಾಂಸ್ಕೃತಿಕ ಮನಸ್ಸುಗಳನ್ನು ಒಗ್ಗೂಡಿಸಿಕೊಂಡು, ಎಲ್ಲರಲ್ಲೂ ಸಾಂಸ್ಕೃತಿಕ ಉಲ್ಲಾಸ ಮೂಡಿಸುವ ಸದುದ್ದೇಶದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ “ಆಳ್ವಾಸ್‌ ವಿರಾಸತ್‌’ 30ನೇ ವರ್ಷದ ಹೊಸ್ತಿಲಲ್ಲಿದ್ದು, ಸುಮನಸರ ಸ್ವಾಗತಕ್ಕಾಗಿ ವಿದ್ಯಾಗಿರಿ ಕ್ಯಾಂಪಸ್‌ ಸಜ್ಜಾಗುತ್ತಿದೆ. ಈ ವರ್ಷದ “ವಿರಾಸತ್‌’ ಸಂಭ್ರಮವು ಡಿ.10ರಿಂದ 15ರ ವರೆಗೆ ನಡೆಯಲಿದೆ.ಡಿ.10ರಿಂದ ಪುತ್ತಿಗೆಯ ವನಜಾಕ್ಷಿ ಕೆ. ಶ್ರೀಪತಿ ಭಟ್‌ ಬಯಲು ರಂಗ ಮಂದಿರದಲ್ಲಿ ಮುಖ್ಯ ಕಾರ್ಯ ಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಉಳಿದಂತೆ ಕೃಷಿ ಮೇಳ, ಆಹಾರ ಮೇಳ, ಕರಕುಶಲ ಮೇಳ, ಫಲಪುಷ್ಪ ಮೇಳ, ಚಿತ್ರಕಲಾ ಮೇಳ, ಕೈಮಗ್ಗ ಸೀರೆಗಳ ಪ್ರದರ್ಶನ ಮುಂತಾದ ವೈಶಿಷ್ಟéಪೂರ್ಣ ಮೇಳಗಳೂ ಇರಲಿವೆ. ದೇಶದ ವಿವಿಧೆಡೆಗಳ ಖ್ಯಾತ ತಂಡ, ವ್ಯಕ್ತಿಗಳಿಂದ ನಡೆಯಲಿರುವ ಸಾಂಸ್ಕೃತಿಕ ಸಂಜೆಯು ಭರಪೂರ ಮನರಂಜನೆ ಒದಗಿಸಲಿದೆ. ಪಂಡಿತ್‌ ವೆಂಕಟೇಶ್‌ ಕುಮಾರ್‌ ಹಿಂದೂ ಸ್ಥಾನಿ ಗಾಯನಸಂಜೆ, ಒಸ್ಮಾನ್‌ ಮೀರ್‌ ಸಂಗೀತ ಲಹರಿ, ನೀಲಾದ್ರಿ ಕುಮಾರ್‌ ಅವರ ಸೌಂಡ್‌ ಆಫ್‌ ಇಂಡಿಯಾ, ಭರತ ನಾಟ್ಯ-ಒಡಿಸ್ಸಿ-ಕಥಕ್‌ ನೃತ್ಯ ಸಂಗಮ, ಸ್ಟೆಕೆಟೊ ಚೆನ್ನೈ ಅವರ ಸಂಗೀತ ಸಂಜೆ ಹೀಗೆ ಪ್ರತಿದಿನವೂ…

Read More

ಉಡುಪಿ: ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನಿಗೆ ಅರ್ಜಿ ಸಲ್ಲಿಸುವ ವೇಳೆ ನ್ಯಾಯಾಲಯಕ್ಕೆ ನಕಲಿ ಆಧಾರ್‌ ಕಾರ್ಡ್‌ ನೀಡಿದ ಘಟನೆಗೆ ಸಂಬಂಧಿಸಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣವೊಂದು ದಾಖಲಾಗಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯ, ಎಫ್.ಟಿ.ಎಸ್‌.ಸಿ-1,ರಲ್ಲಿ ವಿಚಾರಣೆ ಹಂತದಲ್ಲಿತ್ತು. ಡಿ. 7ರಂದು ಈ ಪ್ರಕರಣದ ವಿಚಾರಣೆಯ ಸಮಯ ಇಬ್ರಾಹಿಂ ಎಂ.ಐ. ಮತ್ತು ಎ.ಕೆ. ಹಮೀದ್‌ ನ್ಯಾಯಾಲಯದ ಮುಂದೆ ಹಾಜರಾಗಿ ಪ್ರಕರಣದಲ್ಲಿನ ಆರೋಪಿಗಳ ಪರ ಜಾಮೀನು ನೀಡಲು ಆಧಾರ್‌ ಕಾರ್ಡ್‌ ಅನ್ನು ನ್ಯಾಯಾ ಧೀಶರ ಮುಂದೆ ಹಾಜರುಪಡಿಸಿದ್ದರು. ಇವರುಗಳುಈಗಾಗಲೇ ವಿವಿಧ ನ್ಯಾಯಾಲಯಗಳಲ್ಲಿ ಹಾಜರುಪಡಿ ಸಿದ್ದ ಆಧಾರ್‌ ಕಾರ್ಡ್‌ಗಳನ್ನು ಹಾಗೂ ಈ ದಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಆಧಾರ್‌ ಕಾರ್ಡ್‌ಗಳನ್ನು ಪರಿಶೀಲಿಸಿದಾಗ ಸಾಮ್ಯತೆ ಇಲ್ಲದೇ ಇರುವುದು ಕಂಡುಬಂದಿತ್ತು. ಕೋರ್ಟಿಗೆ ಮೋಸ ಮಾಡುವ ದುರುದ್ದೇಶದಿಂದ ಆಧಾರ್‌ ಕಾರ್ಡ್‌ ಫೋರ್ಜರಿಮಾಡಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಜಿಲ್ಲಾನ್ಯಾಯಾಲಯದ ಮುಖ್ಯ ಕಾರ್ಯನಿರ್ವಾಹಕ ಅಬ್ಟಾಸ್‌ ಎಸ್‌. ಅವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.

Read More