ವಿಟ್ಲ : ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೋಲೀಸರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿತರಿಂದ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೊಳಿಯಾರು ಗ್ರಾಮದ ಮಹಮ್ಮದ್ ರಿಯಾಜ್ ಹಸನಬ್ಬ ಯಾನೆ ರಿಯಾಜ್ (38) ಮತ್ತು ಉಳ್ಳಾಲ ಕೋಟೆ ನಿವಾಸಿ ಮೊಹಮ್ಮದ್ ಇಂಮ್ತಿಯಾಜ್ ( 38) ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ರೂ 1,35,000/–ರೂ ಮೌಲ್ಯದ ಗ್ಯಾಸ್ ಸಿಲಿಂಡರ್ ಹಾಗೂ ಮನೆ ಸಾಮಗ್ರಿಗಳು , ಹಾಗೂ ಕಳ್ಳತನಕ್ಕೆ ಉಪಯೋಗಿಸಿದ 1,50,000/- ರೂ ಮೌಲ್ಯದ KA-19-AD-0585 ನೊಂದಣಿ ನಂಬ್ರದ ಅಟೊ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.ಪೋಲೀಸರು ಸ್ವಾದೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ- 2,85,000/- ರೂ ಎಂದು ತಿಳಿಸಿದ್ದಾರೆ. ಆರೋಪಿತರು ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದಲ್ಲಿ, ವಿಟ್ಲ ಪೋಲೀಸ್ ಠಾಣೆಯ ಮಿತ್ರರು, ಕೊಡಾಜೆ ಎರಡು ಮನೆ ಕಳವು ಪ್ರಕರಣಗಳಲ್ಲಿ ಹಾಗೂ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿನ ಶಾಲೆ ಹಾಗೂ ಅಂಗನವಾಡಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಚಾರ ಬೆಳಕಿಗೆ…
Author: main-admin
ಮಂಗಳೂರು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ನೇಹಮಿಲನ-ಸಿನಿರಂಗ ಪುರಸ್ಕಾರದಲ್ಲಿ ಹಿರಿಯ ಪತ್ರಕರ್ತ, ರಂಗಚಾವಡಿ ಸಂಸ್ಥೆಯ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ ಅವರನ್ನು “ರಂಗಮಿತ್ರ ಪತ್ರಕರ್ತ” ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಬಾಳ ಅವರು ನೂರಕ್ಕೂ ಮಿಕ್ಕಿದ ತುಳು ಮತ್ತು ಕನ್ನಡ ಸಿನಿಮಾಗಳಿಗೆ PRO ಆಗಿ ಕರ್ತವ್ಯ ನಿರ್ವಹಣೆ ಮತ್ತು ತುಳುಸಿನಿಮಾರಂಗದ ಸಮಗ್ರ ಮಾಹಿತಿಯುಳ್ಳ ತುಳು ಸಿನಿಮಾವಲೋಕನ ಕೃತಿಯನ್ನು ರಚಿಸಿರುವುದನ್ನು ಸನ್ಮಾನ ಸಮಾರಂಭದಲ್ಲಿ ಸ್ಮರಿಸಲಾಯಿತು.
ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಎರಡು ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿಯಾಗಿವೆ. ಇಂದು ಬುಧವಾರ ಮುಂಜಾನೆ ಈ ದುರ್ಘಟನೆ ಸಂಭವಿಸಿದೆ. ಇಲ್ಲಿನ ಟಿಕೆಟ್ ಕೌಂಟರ್ ಬಳಿಯ ವರ್ಕ್ ಶಾಪ್ ನಲ್ಲಿ ಚಾರ್ಜ್ ಗೆ ಹಾಕಿದ್ದ ಒಂದು ಎಲೆಕ್ಟ್ರಿಕ್ ವಾಹನದಲ್ಲಿ ಸಾರ್ಟ್ ಸರ್ಕಿಟ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು ಇದರಿಂದ ಹೊತ್ತಿದ್ದ ಬೆಂಕಿ ವ್ಯಾಪಿಸಿ ಪಕ್ಕದಲ್ಲಿದ್ದ ಮತ್ತೊಂದು ವಾಹನವನ್ನೂ ಸುಟ್ಟು ಹಾಕಿದೆ. ಒಟ್ಟು ಎರಡು ವಾಹನಗಳು ಸಂಪೂರ್ಣ ಭಸ್ಮವಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ಹತ್ತಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳಿದ್ದರೂ ಅದೃಷ್ಟವಶಾತ್ ಭಾರೀ ದೊಡ್ಡ ಅನಾಹುತ ತಪ್ಪಿದೆ. ಎರಡು ವಾಹನಗಳು ಹೊತ್ತಿ ಉರಿಯುತ್ತಿದ್ದರೂ ಅಗ್ನಿ ಶಾಮಕ ದಳ ಕ್ಲಪ್ತ ಸಮಯಕ್ಕೆ ಸ್ಥಳಕ್ಕೆ ಆಗಮಿಸಿರಲಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪಿಲಿಕುಳದ ಸಿಬ್ಬಂದಿಗಳೇ ಧಾವಿಸಿ ಬಂದು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದರು. ಘಟನಾ ಸ್ಥಳಕ್ಕೆ ಕಾವೂರು ಠಾಣೆ, ಮಂಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿಯಾಗಿ ಸುಮಾರು ಐದು ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರಿಗೆ ಕೊನೆಗೂ ಸೆರೆಮನೆ ವಾಸದಿಂದ ಮುಕ್ತಿ ಸಿಕ್ಕಿದೆ. ಹೈಕೋರ್ಟ್ ಪೀಠ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ವೈದ್ಯಕೀಯ ಚಿಕಿತ್ಸೆಯ ಆಧಾರದಲ್ಲಿ ಹೈಕೋರ್ಟ್ ನ್ಯಾಯಾಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ. ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಣೆ ಪಡೆಯಲು ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ನೀಡುವಂತೆ ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಪೀಠದ ಮುಂದೆ ಮನವಿ ಸಲ್ಲಿಸಿದ್ದರು. ದರ್ಶನ್ ಜಾಮೀನು ಅರ್ಜಿಗೆ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ಆಕ್ಷೇಪ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿಗಳು ಇಂದಿಗೆ ಆದೇಶವನ್ನು ಕಾಯ್ದಿರಿಸಿದ್ದರು. ಇಂದು ಬೆಳಗ್ಗೆ ಆದೇಶ ಪ್ರಕಟಿಸಿದ ನ್ಯಾಯಮೂರ್ತಿಗಳು ದರ್ಶನ್ ಅವರಿಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದರು.…
ಉಡುಪಿ : ಸಿಮೆಂಟ್ ಚೀಲಗಳು ಹೇರಿಕೊಂಡು ಹೋಗುತ್ತಿದ್ದ ಟ್ರಕ್ಕೊಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬೈಂದೂರು ಒತ್ತಿನೆಣೆ ತಿರುವಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಝಾರ್ಖಂಡ್ ಮೂಲದ ದಾಮೋದರ ಯಾದವ್ (55) ಮೃತ ಪಟ್ಟ ಟ್ರಕ್ ಚಾಲಕನಾಗಿದ್ದಾನೆ . ಲೋಕಾಪುರದಿಂದ ಮಂಗಳೂರಿಗೆ ಈ ಟ್ರಕ್ ಸಿಮೆಂಟ್ ಚೀಲಗಳನ್ನು ಸಾಗುತ್ತಿತ್ತು ಎನ್ನಲಾಗಿದೆ. ಒತ್ತಿನೆಣೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿಯಾಗಿದ್ದು ಈ ಸಂದರ್ಭ ಚಾಲಕ ದಾಮೋದರ ಯಾದವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ . ಬೈಂದೂರು ಪೊಲೀಸರು, ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯ ಕೈಗೆತ್ತಿಕೊಂಡಿದ್ದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟೀಲು : ಕಳೆದ ದಿನದ ಕಟೀಲು ಸಮೀಪದ ಕೊಂಡೆ ಮೂಲ ನೀರಿನ ಟ್ಯಾಂಕ್ ಬಳಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ತಾರಾನಾಥ (40) ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದು ಮೃತನ ಸಹೋದರನನ್ನು ವಶಕ್ಕೆ ಪಡೆದು ತೀವ್ರ ತನಿಖೆ ನಡೆಸಿದ್ದಾರೆ. ಕೊಂಡೆಮೂಲ ನಿವಾಸಿ ತಾರನಾಥ (40) ಎಂಬಾತ ಕೇಬಲ್ ವಯರ್ ಕುತ್ತಿಗೆಗೆ ಬಿಗಿದು ಮೃತಪಟ್ಟು ಅಂಗಾತ ಮಲಗಿದ ಸ್ಥಿತಿಯಲ್ಲಿ ಮನೆಯಿಂದ 100ಮೀ. ದೂರದಲ್ಲಿ ಭಾನುವಾರ ಶವ ಪತ್ತೆಯಾಗಿದ್ದು ಶನಿವಾರ ಸಂಜೆ ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದ್ದು ಪೊಲೀಸರು. ಪರಿಸರದ ಸಿಸಿ ಕ್ಯಾಮೆರಾ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಪೋಸ್ಟ್ ಮಾಟಂ ಪ್ರಕ್ರಿಯೆ ಅಂತಿಮಗೊಂಡಿಲ್ಲವಾದ ಕಾರಣ ವರದಿ ಪಡೆದ ಬಳಿಕವಷ್ಟೇ ಈ ಅನುಮಾನಾಸ್ಪದ ಸಾವು ಆತ್ಮಹತ್ಯೆಯೋ ? ಕೊಲೆಯೋ ? ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಪುತ್ತೂರು : ಹಿಂದೂತ್ವದ ಭದ್ರಕೋಟೆ ದಕ್ಷಿಣ ಕನ್ನಡದಲ್ಲಿ ಲವ್ ಜಿಹಾದ್ ಇನ್ನೂ ಜೀವಂತವಿದೆ ಎನ್ನಲಾಗಿದೆ. ಇಂತಹುದೇ ಪ್ರಕರಣ ಪುತ್ತೂರಿನಲ್ಲಿ ಬೆಳಕಿಗೆ ಬಂದಿದ್ದು ಹಿಂದೂ ಹುಡುಗಿಯ ಪೋಷಕರು ಈಗ ನ್ಯಾಯಕ್ಕಾಗಿ ದೇವರ ಮೊರೆ ಹೋಗಿದ್ದಾರೆ. ಹತ್ತೂರ ಓಡೆಯ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಹುಂಡಿಗೆ ದೂರಿನ ಚೀಟಿ ಬರೆದು ಹಾಕಿರುವ ಯುವತಿಯ ಪೋಷಕರು ನ್ಯಾಯಕ್ಕಾಗಿ ಪ್ರಾರ್ಥನೆ ಮಾಡಿದ್ದಾರೆ. ‘ಸಮೀರ್ ನಿಂದಾಗಿ ನನ್ನ ಮಗಳ ಜೀವನ ಹಾಳಾಗಿದೆ’ ‘ಇವತ್ತು ನಾನು ನನ್ನ ಮಗಳು ಬೀದಿಯಲ್ಲಿ ಇದ್ದೇವೆ’ ‘ನಮ್ಮ ಜೀವನ ಹಾಳು ಮಾಡಿದ ಸಮೀರ್ ನ ಜೀವನ ಕೂಡ ಹಾಳಾಗಬೇಕು. ‘ಸಮೀರ್ ನಿಗೆ ಮದುವೆ ಆಗಲು ಹುಡುಗಿ ಸಿಗಬಾರದು’ ‘ಓ ದೇವರೇ ಇದು ನನ್ನ ಪ್ರಾರ್ಥನೆ’ ಎಂದು ಯುವತಿಯ ಅಸಹಾಯಕ ಪೋಷಕರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಹುಂಡಿಗೆ ಚೀಟಿ ಬರೆದು ಹಾಕಿ ಪ್ರಾರ್ಥನೆ ಮಾಡಿದ್ದಾರೆ. ದೇವಳದ ಕಾಣಿಕೆ ಹುಂಡಿಯ ಲೆಕ್ಕ ನಡೆಯುತ್ತಿದ್ದ ಸಂದರ್ಭ ಈ ದೂರಿನ ಚೀಟಿ ಪತ್ತೆಯಾಗಿದೆ.
ಮಂಗಳೂರು: ಮೊಬೈಲ್ ಟವರ್ ಕಳ್ಳತನವಾದ ಘಟನೆ ಮಂಗಳೂರಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಗಳೂರಿನ ತಿರುವೈಲ್‌ನ ಮೂಡುಬಿದಿರೆ ರಸ್ತೆ ಬದಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಮುಂಬೈಯ ಜಿ.ಟಿ.ಎಲ್ ಇನ್ಪ್ರಾಸ್ಟ್ರಕ್ಚರ್ ಕಂಪನಿ ಲಿಮಿಟೆಡ್ ಬೆಂಗಳೂರು ಶಾಖೆಯ ಮೊಬೈಲ್ ಟವರನ್ನು ಕಳ್ಳರು ಕದ್ದೊಯ್ದಿದ್ದಾರೆ. ಮೊಬೈಲ್ ಟವರ್ ನಿರ್ವಹಣೆಯ ಉಸ್ತುವಾರಿ ವಹಿಸಿದ್ದ ಟೆಕ್ನಿಷಿಯನ್ ರವರು ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದಾಗ ಮೊಬೈಲ್ ಟವರ್ ಮತ್ತು ಮೊಬೈಲ್ ಟವರ್ ನ ಇತರ ಉಪಕರಣಗಳನ್ನು ಯಾರೋ ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿದೆ. ಕಳವಾಗಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ: 19,823,71-00 ಆಗಿದೆ ಎಂದು ಅಂದಾಜಿಸಲಾಗಿದೆ. ಇದೀಗ ಮೊಬೈಲ್ ಟವರ್ ಕಳವಾದ ಬಗ್ಗೆ GTL ಇನ್ಪ್ರಾಸ್ಟ್ರಕ್ಚರ್ ಕಂಪನಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಪೊಲೀಸರು ದೂರು ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ.
ಮಂಗಳೂರು: ಕಾರು ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಬಳಿಕ ಬೈಕ್ ಸವಾರ ಕಾರು ಚಾಲಕನಿಗೆ ಲೋಹದ ಪಂಚ್‌ನಿಂದ ಹಲ್ಲೆಗೈದು ಮೆಣಸಿನ ಪುಡಿ ಎರಚಿದ ಘಟನೆ ನಗರದ ಕದ್ರಿ ಶಿವಬಾಗ್‌ನಲ್ಲಿ ನಡೆದಿದೆ. ಬೆಳಗ್ಗೆ ಸುಮಾರು 10.30ರಿಂದ 10.45ರ ಅವಧಿಯಲ್ಲಿ ಕದ್ರಿ ಶಿವಬಾಗ್‌ನ ಪೆಟ್ರೋಲ್ ಬಂಕ್ ಬಳಿ ಆಮ್ನಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಆಗ ರೊಚ್ಚಿಗೆದ್ದ ಬೈಕ್ ಸವಾರ ತನ್ನ ಬಳಿ ಇದ್ದ ಲೋಹದ ಪಂಚ್‌ನಿಂದ ಕಾರು ಚಾಲಕನ ಮುಖಕ್ಕೆ ಗುದ್ದಿ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿ ಕ್ರೌರ್ಯ ಮೆರೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತತ್‌ಕ್ಷಣ ಸ್ಥಳೀಯರು ಆತನನ್ನು ಹಿಡಿದು 112 ಪೊಲೀಸ್ ವಾಹನಕ್ಕೆ ಕರೆ ಮಾಡಿದ್ದರು. ಪೊಲೀಸರು ಯುವಕನನ್ನು ವಶಕ್ಕೆ ಪಡೆದರು. ಆತನ ಬಳಿ ಆಯುಧವೂ ಇತ್ತು. ಬೇರೆ ಕೃತ್ಯ ಮಾಡಲು ಸಂಚು ನಡೆಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ದೂರು ದಾಖಲಾದ ಬಳಿಕ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡು: ಕಳಿಯಾಟ ಮಹೋತ್ಸವ ಸಂದರ್ಭದಲ್ಲಿ ಪಟಾಕಿ ದುರಂತ ಸಂಭವಿಸಿ 154 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ನೀಲೇಶ್ವರಂನ ವೀರರ್ಕಾವು ದೇವಸ್ಥಾನದ ಉತ್ಸವದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಾಂಪ್ರದಾಯಿಕ ತೆಯ್ಯಂ ಉತ್ಸವಕ್ಕಾಗಿ ಮಧ್ಯರಾತ್ರಿಯ ನಂತರ ಸುಮಾರು 1,500 ಮಂದಿ ದೇವಸ್ಥಾನದಲ್ಲಿ ಜಮಾಯಿಸಿದ್ದರು. ತೆಯ್ಯಂ ಪ್ರದರ್ಶನವನ್ನು ವೀಕ್ಷಿಸಲು ಬಂದಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ವೀರರ್ಕಾವು ದೇವಸ್ಥಾನದ ಬಳಿಯ ತಾತ್ಕಾಲಿಕ ಶೆಡ್‌ನಲ್ಲಿ ಪಟಾಕಿ ಸಂಗ್ರಹಿಸಿಡಲಾಗಿತ್ತು. ಈ ಶೆಡ್‌ಗೆ ಮೂವಳಂಕುಜಿ ಚಾಮುಂಡಿ ತೆಯ್ಯಂನ ‘ವೆಳ್ಳಟ್ಟಂ ಪುರಪ್ಪಡು’ಗೆ ಸಂಬಂಧಿಸಿದಂತೆ ಪಟಾಕಿ ಸಿಡಿಸುವ ವೇಳೆ ಈ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ 154 ಮಂದಿ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, 8 ಮಂದಿ ಗಂಭೀರವಾಗಿದ್ದಾರೆ. ಹಾಗೂ 97 ಮಂದಿಯನ್ನು ಕಾಸರಗೋಡು, ಕಣ್ಣೂರು ಮತ್ತು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.










