ಮಂಗಳೂರು : ತಮ್ಮ ಪತಿಯ ಸಂಬಂಧಿ ಮಹಿಳೆಯೋರ್ವರಿಗೆ ಲಿವರ್‌ನ(ಯಕೃತ್ತು) ಭಾಗವನ್ನು ದಾನ ಮಾಡಿ ಅವರ ಜೀವ ಉಳಿಸಿದ್ದ ಮಂಗಳೂರಿನ ಉಪನ್ಯಾಸಕಿ ಅರ್ಚನಾ ಕಾಮತ್(33) ಅವರು ತಾನೇ ವಿಧಿಲೀಲೆಗೆ ಬಲಿಯಾಗಿದ್ದಾರೆ. ಅರ್ಚನಾ ಕಾಮತ್ ಪತಿ ಸಿಎ ಆಗಿರು ಚೇತನ್ ಕಾಮತ್ ಅವರ ಪತಿಯ ಸಂಬಂಧಿ ಮಹಿಳೆಯೋರ್ವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಲಿವರ್‌ನ ಅಗತ್ಯವಿತ್ತು. ಹಲವರನ್ನು ತಪಾಸಣೆ ಮಾಡಿದ್ದರೂ ರಕ್ತದ ಗುಂಪು ಹೊಂದಾಣಿಕೆಯಾಗಿರಲಿಲ್ಲ. ಆದರೆ ಅರ್ಚನಾ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಆದ್ದರಿಂದ ಅರ್ಚನಾ ಅವರೇ ಲಿವರ್‌ನ ಭಾಗದ ದಾನಕ್ಕೆ ಮುಂದೆ ಬಂದಿದ್ದಾರೆ. ಅದರಂತೆ 12ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಅರ್ಚನಾ ಅವರ ಲಿವರ್‌ನ ಸ್ವಲ್ಪ ಅಂಶವನ್ನು ತೆಗೆದು ಸಂಬಂಧಿ ಮಹಿಳೆಗೆ ಜೋಡಿಸುವ ಶಸ್ತಚಿಕಿತ್ಸೆ ನಡೆದಿತ್ತು. ಆ ಬಳಿಕ ಅರ್ಚನಾ ಅವರು ಆರೋಗ್ಯದಿಂದ ಇದ್ದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಲಿವರ್ ಜೋಡಿಸಲ್ಪಟ್ಟ ಮಹಿಳೆ ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ. ಆದರೆ ಕಳೆದ 4ದಿನಗಳ ಹಿಂದೆ ಅರ್ಚನಾ ಕಾಮತ್ ಏಕಾಏಕಿ ಅಸ್ವಸ್ಥಗೊಂಡಿದ್ದಾರೆ. ಆದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ…
Author: main-admin
ಉಡುಪಿ: ಇತ್ತೀಚೆಗೆ ತೆರೆಕಂಡ ಕಲ್ಜಿಗ ಸಿನೆಮಾದಲ್ಲಿ ಬರುವ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಮತ್ತು ಈ ದೃಶ್ಯದಿಂದ ದೈವರಾಧನೆ ಪದ್ಧತಿಗೆ ಚ್ಯುತಿಯಾಗಿದೆ ಎಂಬ ಆರೋಪವನ್ನು ತುಳುನಾಡ ದೈವರಾಧನೆ ಸಂರಕ್ಷಣೆ ವೇದಿಕೆ ಆರೋಪ ಮಾಡಿದೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಗೌರವಾಧ್ಯಕ್ಷ ದಿಲ್‌ರಾಜ್ ಆಳ್ವ, ದೈವರಾಧನೆ ತುಳುವ ಮಣ್ಣಿನ ಅಸ್ಮಿತೆ ಮತ್ತು ದೈವಗಳು ನಮ್ಮ ಮೂಲ ನಂಬಿಕೆಯಾಗಿದೆ. ಇತ್ತೀಚೆಗೆ ನಮ್ಮ ದೈವರಾಧನೆಗೆ ಮನರಂಜನೆ ಕ್ಷೇತ್ರದಿಂದ ಸಾಂಸ್ಕೃತಿಕ ಆಪತ್ತು ಎದುರಾಗಿದೆ. ಮೊದಲಿಗೆ ಕಾಂತಾರದಿಂದ ಆರಂಭಗೊಂಡಿದ್ದು, ನಾವು ಇದನ್ನು ಹೆಮ್ಮೆ ಪಟ್ಟುಕೊಂಡೆವು. ಅನಂತರ ಇದು ಬೆಂಗಳೂರು, ಮೈಸೂರಿನಲ್ಲಿ ದೈವಗಳ ಪ್ರತಿಷ್ಠಾಪನೆ, ನೇಮ ಎಂಬ ಘಟನೆಗಳು ನಡೆಯಲು ಆರಂಭಗೊಂಡಿತು. ಈ ಬಳಿಕ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂಬ ನೆಲೆಯಲ್ಲಿ ವೇದಿಕೆ ವತಿಯಿಂದ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ಕಲ್ಜಿಗ ಸಿನಿಮಾಗೆ ಸಂಬಂಧಿಸಿ ನಾವು ವೈಯಕ್ತಿಕ ಟೀಕೆ ಮಾಡುತ್ತಿಲ್ಲ. ತುಳು ಸಿನಿಮಾ ಎಲ್ಲರೂ ನೋಡಬೇಕು. ಯಶಸ್ವಿಯಾಗಬೇಕು. ಆದರೆ ದೈವರಾಧನೆ ದೃಶ್ಯವನ್ನು ತೆಗೆಯಬೇಕು ಎಂದರು. ವೇದಿಕೆ ಸದಸ್ಯೆ ಸಹನಾ ಕುಂದರ್ ಸೂಡ…
ಬಂಟ್ವಾಳ : ಬಿಸಿ ರೋಡ್ ಪ್ರತಿಭಟನೆ ನಡುವೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದ ಪೊಲೀಸರಿಗೆ ಇದೀಗ ಮತ್ತೊಂದು ತಲೆನೋವು ಪ್ರಾರಂಭವಾಗಿದ್ದು, ಪೊಲೀಸರ ನಿರ್ಬಂಧದ ನಡುವೆ ಕೆಲವು ಮುಸ್ಲಿಂ ಯುವಕರು ರಸ್ತೆ ಬ್ಲಾಕ್ ಮಾಡಿ ಬೈಕ್ ರಾಲಿ ನಡೆಸಿದ್ದಾರೆ. ಹಿಂದೂ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಬಿಸಿ ರೋಡ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ನಡುವೆಯೇ ಮುಸ್ಲಿಂ ಯುವಕರ ಪ್ರಚೋದನಕಾರಿ ಯಾಗಿ ಬಿಸಿ ರೋಡ್ ಪೇಟೆಯಲ್ಲಿ ಬೈಕ್ ಸ್ಟಂಟ್ ನಡೆಸಿದ್ದಾರೆ. ಬಿಗಿ ಪೋಲೀಸ್ ಬಂದೋಬಸ್ತ್ ನಡುವೆಯೂ ಮುಸ್ಲಿ ಯುವಕರ ಬೈಕ್ ರಾಲಿ ನಡೆಸಿದ್ದು. ಹಿಂದೂ ಸಂಘಟನೆಗಳ ವಿರೋಧ ವ್ಯಕ್ತಪಡಿಸಿದ್ದಾರೆ. ಬೈಕ್ ರಾಲಿ ವಿರುದ್ದ ಹಿಂದೂ ಕಾರ್ಯಕರ್ತರು ರಸ್ತೆ ತಡೆ ನಡೆಸಲು ಮುಂದಾಗಿದ್ದು ಪೊಲೀಸರು ತಡೆಯೊಡ್ಡಿದ್ದಾರೆ. ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತು ಪೋಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ಮಂಗಳೂರು: ಸಾಲೆತ್ತೂರು-ಮುಡಿಪು-ಮಂಗಳೂರು ರಸ್ತೆಯ ಮುಡಿದು ಸಮೀಪದ ಪಾತೂರು ಎಂಬಲ್ಲಿ ಸಂಚರಿಸುತ್ತಿದ್ದ ‘ಅದ್ದಾದಿಯಾ’ ಹೆಸರಿನ ಖಾಸಗಿ ಬಸ್ ಸ್ಟೇರಿಂಗ್ ತುಂಡಾಗಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದೆ. ತಾಂತ್ರಿಕ ಅಪಘಾತದ ಸಂದರ್ಭ ಚಾಲಕನ ಸಮಯ ಪ್ರಜ್ಞೆ ಯಿಂದಾಗಿ ಬಸ್ಸಿನಲ್ಲಿದ್ದ ಸಿಬ್ಬಂದಿಗಳು ಮತ್ತು ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ.
ಮಂಗಳೂರು: ಮಂಗಳೂರಿನ ಬಂಟ್ವಾಳದಲ್ಲಿ ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಮಾಡಿದ್ದ ಭಾಷಣಕ್ಕೆ ಆಡಿಯೋ ರಿಲೀಸ್ ಮಾಡಲಾಗಿದ್ದು, ತಾಕತ್ತಿದ್ದರೆ ಸೋಮವಾರದ ಈದ್ ಮಿಲಾದ್ ರ್ಯಾಲಿ ತಡೆಯಿರಿ ಎಂದು ಶರೀಫ್ ಒಡ್ಡಿದ ಸವಾಲು ಸ್ವೀಕರಿಸಿದ ಪುನೀತ್ ಅತ್ತಾವರ ಬಿ.ಸಿ ರೋಡ್ ಚಲೋ ಮಾಡುವುದಾಗಿ ಘೋಷಿಸಿದ್ದರು. ಈ ನಡುವೆ ಮಧ್ಯರಾತ್ರಿ ಪೊಲೀಸರು ಪುನೀತ್ ಅತ್ತಾವರರನ್ನು ಮಂಡ್ಯದಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ ಈ ಹಿನ್ನಲೆ ಭಜರಂಗದಳ-ವಿ.ಎಚ್.ಪಿ ಯಿಂದ ಬಿ.ಸಿ.ರೋಡ್ ಚಲೋ ಕರೆ ನೀಡಿದ್ದು ಬಿ.ಸಿ.ರೋಡ್ ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.ಎಸ್ಪಿ ಯತೀಶ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಬಂದೋಬಸ್ತ್ ಮಾಡಲಾಗಿದ್ದು, ಇನ್ನು ಹೆಚ್ಚುವರಿ ಪೊಲೀಸರ ನಿಯೋಜನೆ ಕೂಡ ಮಾಡಲಾಗುವುದು.
ಶಿರ್ವ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದ ಶಾಲಾ ಬಾಲಕಿಗೆ ಶಾಲಾ ಬಸ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಭಾನುವಾರ (ಸೆ. 15 ರಂದು) ಕಾಪು-ಶಿರ್ವ ರಸ್ತೆಯ ಬಾಲಾಜಿ ರೆಸ್ಟೋರೆಂಟ್ ಬಳಿ ನಡೆದಿದೆ. ಶಿರ್ವ ನಿವಾಸಿ ಜೋಸೆಫ್ ಮಸ್ಕರೇನಸ್ ಅವರ ಪುತ್ರಿ ಮರ್ಲಿನ್ ಮಸ್ಕರೇನಸ್ (12) ಗಂಭೀರ ಗಾಯಗೊಂಡ ಬಾಲಕಿ .ಶಿರ್ವ ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯಲ್ಲಿ ಕಲಿಯುತ್ತಿದ್ದ ಈಕೆ ಶಾಲೆಯ ಅನುಮತಿಯಂತೆ ಎರ್ಮಾಳಿನಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಶಾಲಾ ಬಸ್ಸಿನಲ್ಲಿ ವಾಪಾಸು ಬಂದ ಈಕೆ ತನ್ನ ಮನೆಯ ಬಳಿ ಇಳಿದು ಬಸ್‌ನ ಮುಂಭಾಗದಿಂದ ಬಲಭಾಗದಲ್ಲಿರುವ ತನ್ನ ಮನೆಗೆ ಬರುವಾಗ ಬಸ್‌ನ ಹಿಂಭಾಗದಿಂದ ಬಂದ ಮತ್ತೂಂದು ಬಸ್ ಓವರ್‌ಟೇಕ್ ಮಾಡುವ ಭರದಲ್ಲಿ ವೇಗವಾಗಿ ಬಂದು ಬಾಲಕಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬಾಲಕಿಯ ಪಕ್ಕೆಲುಬು,ತಲೆ ,ಕಣ್ಣು ಹಾಗೂ ಬಲಭುಜಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು, ಗಂಭೀರ ಗಾಯಗೊಂಡು ಉಡುಪಿಯ…
ಉಡುಪಿ: ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಬೆದರಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ನಗರ ನಿವಾಸಿ ಸಂತೋಷ ಕುಮಾರ್(45) ಎಂಬವರಿಗೆ ಅಪರಿಚಿತರು ಟೆಲಿಕಾಂ ರೆಗ್ಯುಲೇಟರ್ ಅಥಾರಿಟಿ ಆಫ್ ಇಂಡಿಯಾದಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿ, ನಿಮ್ಮ ಮೊಬೈಲ್ ನಂಬರ್ ನಿಂದ ಕಾನೂನು ಬಾಹಿರ ಜಾಹೀರಾತು ಹಾಗೂ ಅಶ್ಲೀಲ ಸಂದೇಶ ಬಂದಿದ್ದು, ಅದರಂತೆ ನಿಮ್ಮ ಮೇಲೆ ಒಟ್ಟು 17 ಎಫ್.ಐ.ಆರ್ ಆಗಿರುವುದಾಗಿ ತಿಳಿಸಿದ್ದಾರೆ. ಇನ್ನು 2 ಗಂಟೆಯ ಒಳಗೆ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಕಾಂಟಾಕ್ಟ್ ನಂಬರ್ ಡಿಸ್ಕನೆಕ್ಟ್ ಮಾಡಲಾಗುವುದು ಮತ್ತು ನಿಮ್ಮ ಮೇಲೆ ಆರೆಸ್ಟ್ ವಾರಂಟ್ ಆಗಿದೆ ಎಂದು ಬೆದರಿಸಿದ್ದಾರೆ. ನಂತರ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಮುಂಬೈ ಪೊಲೀಸ್ ಅಧಿಕಾರಿ ಎಂದು ಹೇಳಿ ವಾಟ್ಸಪ್ ವಿಡಿಯೋ ಕರೆ ಮಾಡಿದ್ದು, ಪ್ರಕರಣ ದಾಖಲಾಗಿರುವ ಬಗ್ಗೆ ತಿಳಿಸಿ ಬ್ಯಾಂಕ್ ಖಾತೆ ಹಾಗೂ ಅದರಲ್ಲಿನ ಹಣದ ವಿವರವನ್ನು ಪಡೆದಿದ್ದಾನೆ. ಖಾತೆಯಲ್ಲಿರುವ ಹಣವನ್ನು ತಾನು ಸೂಚಿಸಿದ ಖಾತೆಗೆ…
ಮಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಮಾನವ ಸರಪಳಿ ನಿರ್ಮಾಣವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಹೆಜಮಾಡಿ ಟೋಲ್ ಗೇಟ್‌ನಿಂದ ಸುಳ್ಯ ಸಂಪಾಜೆ ಗೇಟ್‍ವರೆಗೆ ಬೃಹತ್ ಮಾನವ ಸರಪಳಿ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ಕೆಪಿಟಿ ಸರ್ಕ್ಯೂಟ್ ಹೌಸ್ ಜಂಕ್ಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗ್ಗೆ 9.30ಕ್ಕೆ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಲಾವಿದ್ಯಾರ್ಥಿಗಳನ್ನು ಒಳಗೊಂಡ ಬೃಹತ್ ಮಾನವ ಸರಪಳಿ ರಚಿಸಲಾಯಿತು. ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸದ ಬ್ರಿಜೇಶ್ ಚೌಟ ಅವರು ಮಾತನಾಡಿದರು. ಆ ಬಳಿಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಸಂವಿಧಾನ ಪ್ರಸ್ತಾವನೆಯನ್ನು ಓದಿದರು. ಅದನ್ನು ಎಲ್ಲರೂ ಪುನರುಚ್ಚರಿಸಿದರು. ಬೆಳಗ್ಗೆ 10 ಗಂಟೆಗೆ ಮಾನವ ಸರಪಳಿಯಲ್ಲಿ ಎಲ್ಲರೂ ತಮ್ಮ ಎರಡು ಕೈಗಳನ್ನು ಮೇಲೆತ್ತಿ ಜೈ ಹಿಂದ್, ಜೈ ಕರ್ನಾಟಕ ಘೋಷಣೆ ಕೂಗಿ ಸರಪಳಿಯನ್ನು ಕಳಚಿದರು. ಈ ವೇಳೆ ವಿವಿಧ ಕಲಾ ಪ್ರಕಾರಗಳಿಂದ ಪ್ರದರ್ಶನ ನಡೆಯಿತು.…
ನವದೆಹಲಿ :ಸಿಎಂ ಹುದ್ದೆಗೆ ರಾಜಿನಾಮೆ ಘೋಷಿಸುವುದಾಗಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ. ಜೈಲಿನಿಂದ ಬಿಡುಗಡೆಯಾದ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಅವರು ಈ ರೀತಿ ಹೇಳಿದ್ದಾರೆ.ಇನ್ನೆರಡು ದಿನಗಳಲ್ಲಿ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭಾನುವಾರ ತಿಳಿಸಿದ್ದಾರೆ. ಅಬಕಾರಿ ನೀತಿ ಸಂಬಂಧಿತ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ಮೊದಲ ಭಾಷಣದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೂಪಿಸಿರುವ ಷಡ್ಯಂತ್ರಗಳಿಂದ ಅವರ ‘ಬಂಡೆಯಂತಹ ಸಂಕಲ್ಪ’ ಮುರಿಯಲು ಸಾಧ್ಯವಿಲ್ಲ ಮತ್ತು ದೇಶಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಹೇಳಿದರು. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ನ್ಯಾಯಾಲಯವು ನಮ್ಮ ಪರವಾಗಿ ಎಲ್ಲವನ್ನೂ ಮಾಡಿದೆ. ನಾವು ನ್ಯಾಯಾಲಯಕ್ಕೆ ತುಂಬಾ ಕೃತಜ್ಞರಾಗಿರುತ್ತೇವೆ. ನ್ಯಾಯಾಲಯ ನನಗೆ ಜಾಮೀನು ನೀಡಿದೆ, ಈಗ ಪ್ರಕರಣ ಮುಂದುವರಿಯಲಿದೆ. ನಾನು ವಕೀಲರನ್ನು ಕೇಳಿದೆ, ನ್ಯಾಯಾಲಯದಿಂದ ನಾನು ಖುಲಾಸೆಯಾಗುವವರೆಗೂ ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಮನಸ್ಸು ಮಾಡಿದ್ದೇನೆ. ಎಂದು ಅವರು…
ಕಾಸರಗೋಡು: ರೈಲು ಹಳಿಯನ್ನು ದಾಟುತ್ತಿದ್ದ ಸಂದರ್ಭ ರೈಲು ಢಿಕ್ಕಿ ಹೊಡೆದು ಮೂವರು ಮಹಿಳೆಯರು ಮೃತಪಟ್ಟ ಘಟನೆ ಮಂಗಳೂರಿನ ಗಡಿಭಾಗವಾದ ಕಾಸರಗೋಡು ಜಿಲ್ಲೆಯ ಕಾಞಂಗಾಂಡ್‌ನಲ್ಲಿ ನಡೆದಿದೆ. ಕೋಟ್ಟಯಂ ಚಿಙವನಂ ನಿವಾಸಿಗಳಾದ ಆಲೀಸ್ ಥೋಮಸ್ (63), ಚಿನ್ನಮ್ಮ (68) ಮತ್ತು ಏಂಜೆಲ್ (30) ರೈಲು ಬಡಿದು ಮೃತಪಟ್ಟ ಮಹಿಳೆಯರು. ಇವರು ಕಾಞಂಗಾಡ್‌ನ ಕಳ್ಳಾರ್‌ನಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿವಾಹ ಕಾರ್ಯಕ್ರಮದ ಬಳಿಕ ತಮ್ಮ ಊರು ಕೋಟಯಂಗೆ ಹಿಂದಿರುಗಲು ಕಾಞಂಗಾಡ್ ರೈಲು ನಿಲ್ದಾಣಕ್ಕೆ ತೆರಳಲು ರೈಲು ಹಳಿ ದಾಟಿ ಬರುತ್ತಿದ್ದ ವೇಳೆ ಕಣ್ಣೂರಿನಿಂದ ಮಂಗಳೂರು ಮಾರ್ಗವಾಗಿ ಬರುತ್ತಿದ್ದ ರೈಲು ಢಿಕ್ಕಿ ಹೊಡೆದು ಈ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.