Author: main-admin

ಮಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಮಾನವ ಸರಪಳಿ ನಿರ್ಮಾಣವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಹೆಜಮಾಡಿ ಟೋಲ್ ಗೇಟ್‌ನಿಂದ ಸುಳ್ಯ ಸಂಪಾಜೆ ಗೇಟ್‍ವರೆಗೆ ಬೃಹತ್ ಮಾನವ ಸರಪಳಿ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ಕೆಪಿಟಿ ಸರ್ಕ್ಯೂಟ್ ಹೌಸ್ ಜಂಕ್ಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗ್ಗೆ 9.30ಕ್ಕೆ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಲಾವಿದ್ಯಾರ್ಥಿಗಳನ್ನು ಒಳಗೊಂಡ ಬೃಹತ್ ಮಾನವ ಸರಪಳಿ ರಚಿಸಲಾಯಿತು. ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸದ ಬ್ರಿಜೇಶ್ ಚೌಟ ಅವರು ಮಾತನಾಡಿದರು. ಆ ಬಳಿಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಸಂವಿಧಾನ ಪ್ರಸ್ತಾವನೆಯನ್ನು ಓದಿದರು. ಅದನ್ನು ಎಲ್ಲರೂ ಪುನರುಚ್ಚರಿಸಿದರು. ಬೆಳಗ್ಗೆ 10 ಗಂಟೆಗೆ ಮಾನವ ಸರಪಳಿಯಲ್ಲಿ ಎಲ್ಲರೂ ತಮ್ಮ ಎರಡು ಕೈಗಳನ್ನು ಮೇಲೆತ್ತಿ ಜೈ ಹಿಂದ್, ಜೈ ಕರ್ನಾಟಕ ಘೋಷಣೆ ಕೂಗಿ ಸರಪಳಿಯನ್ನು ಕಳಚಿದರು. ಈ ವೇಳೆ ವಿವಿಧ ಕಲಾ ಪ್ರಕಾರಗಳಿಂದ ಪ್ರದರ್ಶನ ನಡೆಯಿತು.…

Read More

ನವದೆಹಲಿ :ಸಿಎಂ ಹುದ್ದೆಗೆ ರಾಜಿನಾಮೆ ಘೋಷಿಸುವುದಾಗಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ. ಜೈಲಿನಿಂದ ಬಿಡುಗಡೆಯಾದ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಅವರು ಈ ರೀತಿ ಹೇಳಿದ್ದಾರೆ.ಇನ್ನೆರಡು ದಿನಗಳಲ್ಲಿ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭಾನುವಾರ ತಿಳಿಸಿದ್ದಾರೆ. ಅಬಕಾರಿ ನೀತಿ ಸಂಬಂಧಿತ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ಮೊದಲ ಭಾಷಣದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೂಪಿಸಿರುವ ಷಡ್ಯಂತ್ರಗಳಿಂದ ಅವರ ‘ಬಂಡೆಯಂತಹ ಸಂಕಲ್ಪ’ ಮುರಿಯಲು ಸಾಧ್ಯವಿಲ್ಲ ಮತ್ತು ದೇಶಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಹೇಳಿದರು. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ನ್ಯಾಯಾಲಯವು ನಮ್ಮ ಪರವಾಗಿ ಎಲ್ಲವನ್ನೂ ಮಾಡಿದೆ. ನಾವು ನ್ಯಾಯಾಲಯಕ್ಕೆ ತುಂಬಾ ಕೃತಜ್ಞರಾಗಿರುತ್ತೇವೆ. ನ್ಯಾಯಾಲಯ ನನಗೆ ಜಾಮೀನು ನೀಡಿದೆ, ಈಗ ಪ್ರಕರಣ ಮುಂದುವರಿಯಲಿದೆ. ನಾನು ವಕೀಲರನ್ನು ಕೇಳಿದೆ, ನ್ಯಾಯಾಲಯದಿಂದ ನಾನು ಖುಲಾಸೆಯಾಗುವವರೆಗೂ ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಮನಸ್ಸು ಮಾಡಿದ್ದೇನೆ. ಎಂದು ಅವರು…

Read More

ಕಾಸರಗೋಡು: ರೈಲು ಹಳಿಯನ್ನು ದಾಟುತ್ತಿದ್ದ ಸಂದರ್ಭ ರೈಲು ಢಿಕ್ಕಿ ಹೊಡೆದು ಮೂವರು ಮಹಿಳೆಯರು ಮೃತಪಟ್ಟ ಘಟನೆ ಮಂಗಳೂರಿನ ಗಡಿಭಾಗವಾದ ಕಾಸರಗೋಡು ಜಿಲ್ಲೆಯ ಕಾಞಂಗಾಂಡ್‌ನಲ್ಲಿ‌ ನಡೆದಿದೆ. ಕೋಟ್ಟಯಂ ಚಿಙವನಂ ನಿವಾಸಿಗಳಾದ ಆಲೀಸ್ ಥೋಮಸ್ (63), ಚಿನ್ನಮ್ಮ (68) ಮತ್ತು ಏಂಜೆಲ್ (30) ರೈಲು ಬಡಿದು ಮೃತಪಟ್ಟ ಮಹಿಳೆಯರು. ಇವರು ಕಾಞಂಗಾಡ್‌ನ ಕಳ್ಳಾರ್‌ನಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿವಾಹ ಕಾರ್ಯಕ್ರಮದ ಬಳಿಕ ತಮ್ಮ ಊರು ಕೋಟಯಂಗೆ ಹಿಂದಿರುಗಲು ಕಾಞಂಗಾಡ್ ರೈಲು ನಿಲ್ದಾಣಕ್ಕೆ ತೆರಳಲು ರೈಲು ಹಳಿ ದಾಟಿ ಬರುತ್ತಿದ್ದ ವೇಳೆ ಕಣ್ಣೂರಿನಿಂದ ಮಂಗಳೂರು ಮಾರ್ಗವಾಗಿ ಬರುತ್ತಿದ್ದ ರೈಲು ಢಿಕ್ಕಿ ಹೊಡೆದು ಈ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Read More

ಉಡುಪಿ : ಭ್ರಷ್ಟಾಚಾರ ಮತ್ತು ಕರ್ತವ್ಯಲೋಪದ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಒಂದು ವರ್ಷದಲ್ಲಿ 4 ಮಂದಿ ಎಸ್‌ಐಗಳು ಸಹಿತ 80ಕ್ಕೂ ಅಧಿಕ ಸಿಬ್ಬಂದಿಯನ್ನು ಅಮಾನತುಮಾಡಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪೊಲೀಸರು ಅಮಾನತುಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ. ಅವರು ಪೊಲೀಸರ ಕರ್ತವ್ಯದ ಬಗ್ಗೆ ಗಮನಹರಿಸುತ್ತಿದ್ದು, ಒಂದು ವರ್ಷದಿಂದಲೂ ವಿವಿಧ ಕಾರಣಗಳಿಂದ ಕರ್ತವ್ಯಲೋಪ ಎಸಗಿದವರಿಗೆ ಅಮಾನತು ಹಾಗೂ ವರ್ಗಾವಣೆ ಮಾಡಲಾಗಿದೆ.ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯದಲ್ಲಿದ್ದ 4 ಮಂದಿ ಎಸ್‌ಐಗಳ ಪೈಕಿ ಕೆಲವರ ಅಮಾನತು ಆದೇಶ ಮುಗಿದಿದೆ. ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಠಾಣೆ ಬಿಟ್ಟು ಬೇರೆ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಅಕ್ರಮ ಮರಳು ಸಾಗಾಟಗಾರರೊಂದಿಗೆ ಶಾಮೀಲಾಗಿರುವುದು, ಲಂಚ ಪಡೆದಿರುವುದು, ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ಹೋಗಿ ಸಿಕ್ಕಿಬಿದ್ದಿದ್ದ ಎಸ್‌ಐಗಳನ್ನ ಅಮಾನತು ಮಾಡಲಾಗಿದೆ.ಇದು ಹಂತಹಂತವಾಗಿ ನಡೆಯುವ ಪ್ರಕ್ರಿಯೆ. ಕರ್ತವ್ಯ ಲೋಪವೆಸಗಿದ ಕೆಲವರನ್ನು ಅಮಾನತು ಮಾಡಲಾಗಿದೆ. ಇಲಾಖೆಯನ್ನು ಬಲಪಡಿಸಲು ಮತ್ತು ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆಗೆ…

Read More

ಕಾಸರಗೋಡು: ಕೊಚ್ಚಿ ನಿವಾಸಿ ಸುಭದ್ರಾ (73) ಅವರನ್ನು ಕೊಂದು ಮೃತದೇಹವನ್ನು ಹಿತ್ತಿಲಿನಲ್ಲಿ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ದಂಪತಿಯನ್ನು ಕರ್ನಾಟಕದ ಮಣಿಪಾಲದಿಂದ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಕಾಟೂರು ಪಳ್ಳಿಪರಂಬಿಲ್‌ನ ಮ್ಯಾಥ್ಯೂಸ್‌ ಯಾನೆ ನಿತಿನ್‌(35) ಮತ್ತು ಪತ್ನಿ ಕರ್ನಾಟಕದ ಉಡುಪಿ ನಿವಾಸಿ ಶರ್ಮಿಳಾ(36)ನನ್ನು ಮಣ್ಣಾಂ ಚೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಉಡುಪಿಯಲ್ಲಿದ್ದಾರೆ ಎಂಬ ಮಾಹಿತಿ ಆಧಾರದಲ್ಲಿ ಅವರ ಮೊಬೈಲ್‌ ಲೊಕೇಶನ್‌ ಕೇಂದ್ರೀಕರಿಸಿ ಪೊಲೀಸರು ಅವರ ಬೆನ್ನು ಬಿದ್ದಿದ್ದರು. ಸೆ.12ರಂದು ಬೆಳಗ್ಗೆ ಮಂಗಳೂರಿನಲ್ಲಿ ಶರ್ಮಿಳಾ ಫೋನ್‌ ಆನ್‌ ಆಗಿತ್ತು. ಕೂಡಲೇ ಪೊಲೀಸರು ಉಡುಪಿ ಹಾಗೂ ಮಂಗಳೂರು ಮೊದಲಾದೆಡೆ ಕೆಲವರನ್ನು ಸಂಪರ್ಕಿಸಿ ಆರೋಪಿಗಳ ಮೇಲೆ ನಿಗಾ ಇರಿಸುವಂತೆ ಸೂಚನೆ ನೀಡಿದ್ದರು. ಮಧ್ಯಾಹ್ನ ಶರ್ಮಿಳಾ ಫೋನ್‌ ಮಣಿಪಾಲದಲ್ಲಿ ಕಾರ್ಯಾಚರಿಸಿದೆ. ಆಕೆ ಈ ಹಿಂದೆ ವಾಸಿಸಿದ್ದ ಪೆರಂಪಳ್ಳಿಯ ಮಹಿಳೆಯೊಬ್ಬರ ಮನೆಗೆ ಬಂದಿದ್ದನ್ನು ಪೊಲೀಸರು ತಿಳಿದುಕೊಂಡು ಅಲ್ಲಿಂದ ಅವರನ್ನು ಬಂಧಿಸಲಾಯಿತು. ಆರೋಪಿಗಳ ಶೋಧ ಕಾರ್ಯಕ್ಕೆ ಮಣಿಪಾಲ ಪೊಲೀಸರು ಸಹಕರಿಸಿದ್ದರು ಎಂದು ಮಾಹಿತಿ ತಿಳಿಯಲಾಗಿದೆ.

Read More

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಸಮೀಪದ ತಡಂಬೈಲು ಸುಪ್ರೀಂ ಹಾಲ್ ಜಂಕ್ಷನ್ ಬಳಿ ತಡೆರಹಿತ ಬಸ್ ಡಿಕ್ಕಿಯಾಗಿ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರನ್ನು ಉತ್ತರ ಕರ್ನಾಟಕ ಮೂಲದ ಭೀಮಪ್ಪ (40)ಎಂದು ಗುರುತಿಸಲಾಗಿದೆ. ಮೃತ ಭೀಮಪ್ಪ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಉಡುಪಿ ಕಡೆ ನಮ್ಮ ಮಂಗಳೂರು ಕಡೆಗೆ ಹೋಗುತ್ತಿದ್ದ ತಡೆರಹಿತ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಭೀಮಪ್ಪ ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ನಿನ್ನೆ ಟೌನ್ ಹಾಲ್‌ನಲ್ಲಿ ನಾಗಮಂಗಲ ಘಟನೆ ಸಂಬಂಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಅಲ್ಲಿಗೆ ತಂದಿದ್ದ ಗಣೇಶ ಮೂರ್ತಿಯನ್ನು ಪ್ರತಿಭಟನಾಕಾರರ ಜೊತೆ ಪೊಲೀಸ್ ವಾಹನದಲ್ಲಿ ಕೊಂಡೊಯ್ದ ಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿ ಕಾರಿದ್ದಾರೆ. ಇದು ಹಿಂದೂ ಸಮಾಜದ ಧಾರ್ಮಿಕ ಭಾವನೆಯನ್ನು ಕೆರಳಿಸುವ ಕ್ರಮವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ತಮ್ಮ X ಖಾತೆಯಲ್ಲಿ ಇದರ ಬಗ್ಗೆ ಟೀಕಿಸಿರುವ ವಿಜಯೇಂದ್ರ, ಗಣೇಶೋತ್ಸವ ಹಿಂದೂಗಳ ಧಾರ್ಮಿಕ ಶ್ರದ್ಧೆ ಹಾಗೂ ಸಾಂಸ್ಕೃತಿಕ ಸಂಗಮದ ದ್ಯೋತಕ. ಈ ಉತ್ಸವದ ಆಚರಣೆಗೆ ಎಲ್ಲೆ, ಕಟ್ಟುಪಾಡುಗಳನ್ನು ಮೀರಿ ಅಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಸಂಭ್ರಮಿಸುವ ಉತ್ಸವದ ಹಬ್ಬ. ಹಿಂದೂಗಳ ಧಾರ್ಮಿಕ ಆಚಾರ-ವಿಚಾರಗಳಲ್ಲಿ ಮೊದಲ ಪೂಜೆ ವಿಘ್ನ ನಿವಾರಿಸುವ ವಿನಾಯಕನಿಗೆ ಸಲ್ಲಿಸಲಾಗುತ್ತದೆ. ಈ ಕಾರಣದಿಂದಾಗಿಯೂ ಗಣೇಶನಿಗೆ ಎಲ್ಲಿಲ್ಲದ ಮಹತ್ವ ಎಂದು ಕಿಡಿಕಾರಿದ್ದಾರೆ. ಜನರ ಭಾವೊದ್ವೇಗಗಳು ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರಬಾರದು ಎಂಬುದನ್ನು ಒಪ್ಪಬಹುದಾದರೂ ಅದರ ಹೆಸರಿನಲ್ಲಿ ಅನಗತ್ಯ ಕಿರಿಕಿರಿ ಉಂಟು ಮಾಡುವ ಮಾರ್ಗಸೂಚಿಗಳನ್ನು ಅಳವಡಿಸಿ ಉತ್ಸವ ಆಚರಣೆಯ ಸಡಗರದ ಸ್ವಾತಂತ್ರ್ಯಕ್ಕೆ ತೊಂದರೆ…

Read More

ಮಂಗಳೂರು: ಐದು ವರ್ಷಗಳ ಹಿಂದೆ ನಗರದಲ್ಲಿ ಶ್ರೀಮತಿ ಶೆಟ್ಟಿ ಎಂಬವರನ್ನು ಕೊಲೆಗೈದು ಮೃತದೇಹವನ್ನು 29ತುಂಡುಗಳನ್ನಾಗಿ ಬೇರ್ಪಡಿಸಿ ಬೇರೆಬೇರೆ ಕಡೆಗಳಲ್ಲಿ ಎಸೆದ ಪ್ರಕರಣದಲ್ಲಿ ಮೂವರ ಮೇಲಿನ ಆರೋಪ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ‌‌. ಆದರೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಲಾಗಿದೆ. ನಗರದ ವೆಲೆನ್ಸಿಯಾ ಸಮೀಪದ ಸೂಟರ್‌ಪೇಟೆಯ ಜೋನಸ್ ಸ್ಯಾಟ್ಸನ್(40), ವಿಕ್ಟೋರಿಯಾ ಮಥಾಯಿಸ್ (47) ಹಾಗೂ ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ಶಿಕ್ಷೆಗೊಳಗಾದ ಆರೋಪಿಗಳು. ಈ ಪೈಕಿ ಜೋನಸ್ ಮತ್ತು ವಿಕ್ಟೋರಿಯಾ ಜೈಲಿನಲ್ಲೇ ಶಿಕ್ಷೆ ಅನುಭವಿಸುತ್ತಿದ್ದಾರೆ. ರಾಜು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಆತನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ(42) ಶ್ರೀ ಪೊಳಲಿ ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ಇಟ್ಟುಕೊಂಡಿದ್ದರು. ಜೊತೆಗೆ ಕುರಿ ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದ್ದರು. ಈ ಕುರಿಫಂಡ್‌ನಲ್ಲಿ ಜೋನಸ್ 2ಸದಸ್ಯತ್ವ ಹೊಂದಿದ್ದ. ಆದರೆ ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಮಾಸಿಕ ಕಂತುಗಳ ಹಣ ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.‌ 2019ರ ಮೇ 11ರಂದು ಬೆಳಗ್ಗೆ…

Read More

ಉಡುಪಿ: ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ಎಸ್ ಐ , ಗುರುನಾಥ ಹಾದಿಮನಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ . ಕೆ ಆದೇಶ ಮಾಡಿದ್ದಾರೆ.ಅಕ್ರಮ ಮರಳುಗಾರಿಕೆ ಪ್ರಕರಣವೊಂದರ ಸಂಬಂಧ ವರಿಷ್ಠಾಧಿಕಾರಿಗಳು, ಅಮಾನತು ಆದೇಶ ಮಾಡಿದ್ದಾರೆ. ಉಡುಪಿಗೆ ಡಾ. ಅರುಣ್ ಅವರು, ವರಿಷ್ಠಾಧಿಕಾರಿಯಾದ ನಂತರ ಇಲಾಖೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಸತತ ಅಮಾನತು ಮಾಡಲಾಗುತ್ತಿದೆ. ಈಗಾಗಲೇ 4 ಮಂದಿ ಎಸ್‌ಐಗಳು ಸಹಿತ 80 ಕ್ಕೂ ಅಧಿಕ ಸಿಬಂದಿಗಳು ಅಮಾನತುಗೊಂಡಿದ್ದಾರೆ. ಜಿಲ್ಲೆೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯದಲ್ಲಿದ್ದ 4 ಮಂದಿ ಎಸ್‌ಐಗಳಾದ ಗುರುನಾಥ ಹಾದಿಮನೆ, ಶಂಭುಲಿಂಗ, ಅಶೋಕ್ , ಸುಷ್ಮಾ ಅಮಾನತು ಮಾಡಲಾಗಿದ್ದು, ಈ ಪೈಕೆ ಕೆಲವು ಮಂದಿಯ ಅಮಾನತು ಆದೇಶ ಮುಕ್ತಾಯಗೊಂಡಿದ್ದು, ಹಿಂದೆ ಸೇವೆ ಸಲ್ಲಿಸುತ್ತಿದ್ದ ಠಾಣೆ ಬಿಟ್ಟು ಬೇರೆ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಪೊಲೀಸ್ ಕರ್ತವ್ಯ ಹೊರತುಪಡಿಸಿ ಇತರ ಕರ್ತವ್ಯ ನಡೆಸಿ ಇಲಾಖಾ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಕೆಲವರ ಮೇಲೆ ಈಗಾಗಲೇ ಶಿಸ್ತು ಕ್ರಮ…

Read More

ಉಡುಪಿ: ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ಎಸ್ ಐ , ಗುರುನಾಥ ಹಾದಿಮನಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ . ಕೆ ಆದೇಶ ಮಾಡಿದ್ದಾರೆ.ಅಕ್ರಮ ಮರಳುಗಾರಿಕೆ ಪ್ರಕರಣವೊಂದರ ಸಂಬಂಧ ವರಿಷ್ಠಾಧಿಕಾರಿಗಳು, ಅಮಾನತು ಆದೇಶ ಮಾಡಿದ್ದಾರೆ. ಉಡುಪಿಗೆ ಡಾ. ಅರುಣ್ ಅವರು, ವರಿಷ್ಠಾಧಿಕಾರಿಯಾದ ನಂತರ ಇಲಾಖೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಸತತ ಅಮಾನತು ಮಾಡಲಾಗುತ್ತಿದೆ. ಈಗಾಗಲೇ 4 ಮಂದಿ ಎಸ್‌ಐಗಳು ಸಹಿತ 80 ಕ್ಕೂ ಅಧಿಕ ಸಿಬಂದಿಗಳು ಅಮಾನತುಗೊಂಡಿದ್ದಾರೆ. ಜಿಲ್ಲೆೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯದಲ್ಲಿದ್ದ 4 ಮಂದಿ ಎಸ್‌ಐಗಳಾದ ಗುರುನಾಥ ಹಾದಿಮನೆ, ಶಂಭುಲಿಂಗ, ಅಶೋಕ್ , ಸುಷ್ಮಾ ಅಮಾನತು ಮಾಡಲಾಗಿದ್ದು, ಈ ಪೈಕೆ ಕೆಲವು ಮಂದಿಯ ಅಮಾನತು ಆದೇಶ ಮುಕ್ತಾಯಗೊಂಡಿದ್ದು, ಹಿಂದೆ ಸೇವೆ ಸಲ್ಲಿಸುತ್ತಿದ್ದ ಠಾಣೆ ಬಿಟ್ಟು ಬೇರೆ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಪೊಲೀಸ್ ಕರ್ತವ್ಯ ಹೊರತುಪಡಿಸಿ ಇತರ ಕರ್ತವ್ಯ ನಡೆಸಿ ಇಲಾಖಾ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಕೆಲವರ ಮೇಲೆ ಈಗಾಗಲೇ ಶಿಸ್ತು ಕ್ರಮ…

Read More