ಮಂಗಳೂರು: ಬಿಷಪ್ ಹೌಸ್ನ ಮಹಿಳಾ ಸೆಕ್ರೆಟರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಬಲ್ಮಠದಲ್ಲಿರುವ ಸಿಎಸ್ಐ ಬಿಷಪ್ ಹೌಸ್ನಲ್ಲಿ ದೌರ್ಜನ್ಯ ನಡೆದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸದ್ಯ ಸಂತ್ರಸ್ಥ ಮಹಿಳೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ ಸಿಎಸ್ಐ ಬಿಷಪ್ ಹೌಸ್ ಪ್ರಾಂತ ಕಚೇರಿಯ ಖಜಾಂಚಿ, ಕಾನೂನು ಸಲಹೆಗಾರ ಸೇರಿದಂತೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ಥ ಮಹಿಳೆ ಕಳೆದ 10 ವರ್ಷಗಳಿಂದ ಕ್ರೈಸ್ತ ಧರ್ಮದ ಪ್ರತ್ಯೇಕ ಪಂಗಡವಾದ ಚರ್ಚ್ ಆಫ್ ಸೌತ್ ಇಂಡಿಯಾ (CSI) ಬಿಷಪ್ ಹೌಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಕಳೆದ 4 ವರ್ಷಗಳಿಂದ ಖಜಾಂಚಿ ವಿನ್ಸೆಂಟ್ ಪಾಲನ್ನ, ಕಾನೂನು ಸಲಹೆಗಾರ ಫಾದರ್ ನೋಯಲ್ ಕರ್ಕಡ ದೈಹಿಕ, ಮಾನಸಿಕ, ಲೈಂಗಿಕ ಕಿರುಕುಳ ನೀಡಿದ್ದಾರೆ. ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಕಾನೂನು ಸಲಹೆಗಾರ ಫಾದರ್ ನೋಯಲ್ ಕರ್ಕಡ ಎಂಬಾತ ಮಹಿಳೆಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕ್ರಿಯೆಗೆ…
Author: main-admin
ಕಲ್ಲಡ್ಕ : ಮನೆಯಲ್ಲಿ ನೇಣು ಬಿಗಿದುಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಬಾಳ್ತಿಲ ಗ್ರಾಮ ಪಂಚಾಯತ್ ಬಳಿಯ ನಿವಾಸಿ ಚಂದ್ರಶೇಖರ್ ಗೌಡ ಮತ್ತು ಸೌಮ್ಯ ದಂಪತಿ ಮಗಳಾದ ವೈಷ್ಣವಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಕಾಸರಗೋಡು: ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯೋರ್ವ ಶಾಲೆಯ ಸಮೀಪ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಕುಂಡಂಗುಳಿ ನಿವಾಸಿ ವಿನೋದ್ – ಶಾಲಿನಿ ದಂಪತಿಗಳ ಪುತ್ರ ಅಭಿನವ್ (17) ನಿಗೂಢವಾಗಿ ಸಾವನ್ನಪ್ಪಿದ ಪ್ಲಸ್ ವನ್ ಹೈಯರ್ ಸೆಕೆಂಡರಿ ವಿದ್ಯಾರ್ಥಿಯಾಗಿದ್ದಾನೆ. ಮಾರ್ಚ್ 7 ರಂದು ಅಭಿನವ್ ತರಗತಿ ಮುಗಿಸಿ ಸಂಜೆ ಮನೆಗೆ ಬಂದು ಆಟವಾಡಲು ಹೋಗುವುದಾಗಿ ಹೇಳಿದ್ದ. ಸಂಜೆಯಾದರೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಮನೆ ಸಮೀಪದ ಎಲ್‌ಪಿ ಶಾಲೆಯ ಹಿಂದೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಿಲ್ಲ. ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು : ಪತಿಯಿಂದ ದೂರವಾಗುವ ಪತ್ನಿಗೆ ಜೀವನಾಂಶದ ಜೊತೆಗೆ ವಸತಿ ವ್ಯವಸ್ಥೆ ಮಾಡಿಕೊಳ್ಳಲು 5 ಸಾವಿರ ರೂ. ಪಾವತಿಸುವಂತೆ ಪತಿಗೆ ಹೈಕೋರ್ಟ್ ಆದೇಶಿಸಿದೆ. ಬೀದರ್ ಜಿಲ್ಲೆಯ ಸುನಿಲ್ ಕುಮಾರ್,ಮೊದಲನೇ ಪತ್ನಿ ಹಾಗೂ ಕುಟುಂಬದವರು ಸಲ್ಲಿಸಿದ್ದ ಕ್ರಿಮಿನಲ್ ಮರುಉ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ. ಪ್ರಕರಣದಲ್ಲಿ ಅರ್ಜಿದಾರ ತನ್ನ ಮೊದಲನೇ ಪತ್ನಿ ಹಾಗೂ ಕುಟುಂಬ ಸದಸ್ಯರೊಂದಿಗೆ ಎಲಿಜಬತ್ ಎಂಬಾಕೆಯನ್ನು ಮದುವೆಯಾಗಿದ್ದು, ಸದ್ಯ ಆಕೆಯಿಂದ ದೂರವಾಗಿದ್ದಾರೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆಯಡಿ ಎಲಿಜಿಬತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ, 6 ಸಾವಿರ ರೂ. ಜೀವನಾಂಶ ಪಾವತಿಸಲು ಪತ್ನಿಗೆ ಆದೇಶಿಸಿದೆ. ಜೊತೆಗೆ ಪತ್ನಿಯು ಪ್ರತ್ಯೇಕ ಸ್ಥಳದಲ್ಲಿ ವಾಸಿಸಲು ಆಕೆಗೆ ಮಾಸಿಕ 5 ಸಾವಿರ ರೂ. ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಬಂಟ್ವಾಳ:ಲಾರಿ ಚಾಲನೆ ಮಾಡುವಾಗ ಲಾರಿ ಡ್ರೈವರ್ ಗೆ ಮೂರ್ಛೆ ರೋಗ ಕಾಣಿಸಿಕೊಂಡು ಲಾರಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಅವಾಂತರ ಸೃಷ್ಟಿಸಿದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ. ಮಂಗಳೂರು ಕಡೆಯಿಂದ ಹಾಸನಕ್ಕೆ ಹೋಗುತ್ತಿದ್ದ ಲಾರಿ ಬಿಸಿರೋಡು ತಲುಪುತ್ತಿದ್ದಂತೆ ಚಾಲಕ ಲಕ್ಷ್ಮಣ್ ಗೆ ಮೂರ್ಛೆ ರೋಗ ಕಾಣಿಸಿಕೊಂಡಿದೆ. ಇದರಿಂದ ಲಾರಿ, ಬೈಕ್, ಕಾರುಗಳಿಗೆ ಗೆ ಡಿಕ್ಕಿ ಹೊಡೆದು ಬಳಿಕ ಪೆಟ್ರೋಲ್ ಪಂಪ್ ನಲ್ಲಿ ನಿಲ್ಲಿಸಲಾಗಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ.ಘಟನೆಯಲ್ಲಿ ಅದೃಷ್ಟಾವಶಾತ್ ಪ್ರಾಣಾಪಾಯ ಉಂಟಾಗಿಲ್ಲ. ಘಟನೆ ಬಳಿಕ ತಕ್ಷಣ ಚಾಲಕ ಲಕ್ಷಣ್ ಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉಳ್ಳಾಲ: ಉಳ್ಳಾಲ ತಾಲೂಕಿನ ಪಂಡಿತ್ ಹೌಸ್ ಸಮೀಪದ ವಿಜೇತ ನಗರದಲ್ಲಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ಪೊಲೀಸರ ತಂಡ ಮಾ. 07 ರ ರಾತ್ರಿ ದಾಳಿ ನಡೆಸಿ ಕಿಂಗ್ ಪಿನ್ ಮಹಿಳೆಯನ್ನ ಬಂಧಿಸಿದ್ದು ,ಮತ್ತೋರ್ವ ಪಿಂಪ್ ತಲೆ ಮರೆಸಿಕೊಂಡಿದ್ದಾನೆ.ಬಂಟ್ವಾಳ ತಾಲೂಕಿನ ಬೊಳಂತೂರು ಗ್ರಾಮದ ,ವಿಟ್ಲಕೋಡಿ ನಿವಾಸಿ, ಪಿಂಪ್ ರುಕಿಯಾ (50)ಬಂಧಿತ ಆರೋಪಿ. ಮತ್ತೋರ್ವ ಪ್ರಮುಖ ಆರೋಪಿ ಪಿಂಪ್ ಲತೀಫ್ ಎಂಬಾತ ಪರಾರಿಯಾಗಿದ್ದಾನೆ. ರುಕಿಯಾ ವಿಜೇತ ನಗರದ ಬಾಡಿಗೆ ಮನೆಯೊಂದರಲ್ಲಿ ಯುವತಿಯರನ್ನಿಟ್ಟು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ಎನ್. ನಾಯ್ಕ್ ಅವರು ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕರಾದ ಸಂದೀಪ್ ಜಿ.ಎಸ್. ಉಪನಿರೀಕ್ಷಕರಾದ ಮಂಜುಳಾ.ಎಲ್ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಅಡ್ಡೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಮೂವರು ಗಿರಾಕಿಗಳನ್ನ ವಶಕ್ಕೆ ಪಡೆದ ಪೊಲೀಸರು ನಾಲ್ವರು ನೊಂದ ಯುವತಿಯರನ್ನ ರಕ್ಷಿಸಿದ್ದಾರೆ.ಬಂಧಿತ ಆರೋಪಿಯಿಂದ 3 ದ್ವಿಚಕ್ರ ವಾಹನಗಳು, 9…
ಮಂಗಳೂರು:ಊಟ ಮಾಡಿದ ತಟ್ಟೆ ತೊಳೆಯುವ ವಿಚಾರದಲ್ಲಿ ನಡೆದ ಘಟನೆ ಕೊಲೆಯಲ್ಲಿ ಕೊನೆಯಾದ ಘಟನೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮರವೂರು ಗ್ರಾಮದ ಪೋಸ್ಟಲ್ ಗಾರ್ಡ್ ಸೈಟ್ ನಲ್ಲಿ ನಡೆದಿದೆ. ಉತ್ತರ ಭಾರತ ಮೂಲದ ಸಂಜಯ್ ಮೃತ ಯುವಕ. ಸಂಜಯ್ ಮತ್ತು ಸೋಹಾನ್ ಯಾದವ್ ಎಂಬಿಬ್ಬರ ನಡುವೆ ಜಗಳ ನಡೆದಿದ್ದು, ಸೋಹನ್ ಯಾದವ್ ಸಂಜಯ್ ನನ್ನು ಬಲವಾಗಿ ಹಿಂದಕ್ಕೆ ತಳ್ಳಿದ್ದ.ಈ ವೇಳೆ ಕೆಳಗೆ ಬಿದ್ದ ಸಂಜಯ್ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಆತ ಕೊನೆಯುಸಿರೆಳೆದಿದ್ದಾನೆ. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ
ಕಳೆದ ಕೆಲ ದಿನಗಳಿಂದ ಬಿಸಿಲಿನ ಕಾವು ಹೆಚ್ಚಾಗಿದೆ. ವೈರಲ್ ಜ್ವರಗಳು ಕೂಡ ಹೆಚ್ಚಳವಾಗಿದೆ.ಬೇಸಿಗೆಯಲ್ಲಿ ಆಹಾರ ಮತ್ತು ನೀರಿನ ಮೂಲಕ ಹೆಚ್ಚಾಗಿ ರೋಗಗಳು ಹರಡುತ್ತದೆ. ಇದರಿಂದಾಗಿ ಉಪಾಹಾರ ಗೃಹಗಳು, ಕ್ಯಾಂಟೀನ್‌ಗಳು, ಹೊಟೇಲ್‌ಗಳು, ಬಾರ್‌ಗಳು, ಬೇಕರಿಗಳಿಗೆ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ರವಿಕುಮಾರ್ ಸೂಚನೆಯನ್ನು ಹೊರಡಿಸಿದ್ದಾರೆ. ನೀರಿನ ಮೂಲಗಳನ್ನು ಶುಚಿಗೊಳಿಸಬೇಕು.ಸೂಕ್ತ ತಾಪಮಾನದಲ್ಲಿ ಆಹಾರವನ್ನು ಸಂಗ್ರಹಿಸಬೇಕು. ಕುಡಿಯಲು ಶುದ್ಧೀಕರಿಸಿದ ಹಾಗೂ ಬಿಸಿನೀರು ಪೂರೈಕೆ ಮಾಡಬೇಕು. ಹೊಟೇಲ್‌ಗಳಲ್ಲಿ ಆಹಾರ ಅಥವಾ ಅಡುಗೆ ತಯಾರಕರು ವೈಯಕ್ತಿಕ ಶುಚಿತ್ವ ಖಚಿತ ಪಡಿಸಿಕೊಳ್ಳಬೇಕು. ಅನಾರೋಗ್ಯದ ವೇಳೆ ಆಹಾರವನ್ನು ತಯಾರಿಸುವ, ಸರಬರಾಜು ಮಾಡುವ ಮತ್ತು ಬಡಿಸುವ ಕಾರ್ಯ ಮಾಡಬಾರದು. ಉಪಾಹಾರಗೃಹಗಳು, ಕ್ಯಾಂಟೀನ್, ಹೊಟೇಲ್, ಬಾರ್, ಬೇಕರಿಗಳಲ್ಲಿ ಅಡುಗೆಮನೆಗೆ ಪ್ರವೇಶಿಸುವ ಮೊದಲು ಕೈಗವಚಗಳು ಮತ್ತು ಹೆಡ್‌ಕವರ್ ಗಳು ಧರಿಸಬೇಕು. ಆಹಾರ ತಯಾರಿಸುವ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ತರಕಾರಿಗಳು ಮತ್ತು ಹಣ್ಣುಗಳನ್ನು ವ್ಯವಸ್ಥಿತ ಹಾಗೂ ಶುಚಿ ಯಾಗಿ ಸಂಗ್ರಹಿಸಿಡಬೇಕು. ಮಂಜುಗಡ್ಡೆಗಳನ್ನು ತಯಾರಿಸುವ ಹಾಗೂ ಸರಬರಾಜು ಮಾಡುವ ಸಂಸ್ಥೆಯು ಶುದ್ಧ ನಿರಿನ ಬಳಕೆಯನ್ನು ಖಾತ್ರಿಪಡಿಸಿ ಕೊಳ್ಳಬೇಕು.ಹಸಿಮೀನು,…
ಬಂಟ್ವಾಳ: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಗಲಭೆ ಸೃಷ್ಟಿಸಲು ಹಣಕಾಸಿ ನೆರವು ನೀಡಿದ್ದ ಆರೋಪದಡಿ ಬಂಟ್ವಾಳ ತಾಲೂಕಿನ ನಂದಾವರದ ಕೆಲವು ಮನೆಗಳಿಗೆ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಬಿಹಾರದ ಪಟ್ನಾಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಾ. 5ರಂದು ನಂದಾವರಕ್ಕೆ ದಾಳಿ ನಡೆಸಿದ ಎನ್‌ಐಎ ತಂಡ ಒಟ್ಟು ನಾಲ್ವರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ನಂದಾವರ ನಿವಾಸಿಗಳಾದ ಮಹಮ್ಮದ್ ಸಿನಾನ್, ಸರ್ಫರಾಜ್ ನವಾಜ್ ಹಾಗೂ ಇಕ್ಬಾಲ್ ಎಂಬವರನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ತಿಳಿದುಬಂದಿದೆ.ನಾಲ್ವರ ಪೈಕಿ ಓರ್ವನನ್ನು ಬಂಧಿಸಿಲ್ಲ. ಇನ್ನು ಆರೋಪಿಗಳನ್ನು ಎನ್‌ಐಎ ತಂಡ ಕಸ್ಟಡಿಗೆ ಪಡೆದಿದ್ದು ಹೆಚ್ಚಿನ ವಿಚಾರಣೆಯ ದೃಷ್ಟಿಯಿಂದ ಪಟ್ನಾಕ್ಕೆ ಕರೆದೊಯ್ದಿರುವುದಾಗಿ ವರದಿಯಾಗಿದೆ.ನಂದಾವರದ ದಾಳಿಯ ಪ್ರಕರಣದಲ್ಲಿ ಪ್ರಧಾನ ಆರೋಪಿ ಯಾರು ಎಂಬುವುದು ಇನ್ನು ತಿಳಿದುಬಂದಿಲ್ಲ. ಬಿಹಾರದಲ್ಲಿ ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಯ ಹಣಕಾಸಿನ ವ್ಯವಹಾರದ ಕುರಿತು ಎನ್‌ಐಎ ತನಿಖೆ ನಡೆಸಿದ ಸಂದರ್ಭದಲ್ಲಿ ನಂದಾವರದ ವ್ಯಕ್ತಿಯಿಂದ ಹಣ…
ನವದೆಹಲಿ: ದೇಶದಾದ್ಯಂತ ಇನ್‌ಫ್ಲುಯೆನ್ಸ A ಸಬ್‌ಟೈಪ್ H3N2 ಪ್ರಕರಣಗಳು ಹಠಾತ್ ಕಾಣಿಸಿಕೊಂಡಿದ್ದು, ಇದು ಆತಂಕವನ್ನು ಹುಟ್ಟುಹಾಕಿದೆ. ದೇಶಾದ್ಯಂತ ಆಸ್ಪತ್ರೆಗಳು ಕಳೆದ ಕೆಲವು ತಿಂಗಳುಗಳಲ್ಲಿ ಸಾವಿರಾರು ಇನ್ಫ್ಲುಯೆನ್ಸ Aನ H3N2 ಪ್ರಕರಣಗಳನ್ನು ವರದಿ ಮಾಡುತ್ತಿವೆ. ಇದು 3-5 ದಿನಗಳವರೆಗೆ ಜ್ವರ ಮತ್ತು ನಿರಂತರ ಕೆಮ್ಮು ಮೂರು ವಾರಗಳವರೆಗೆ ಇರುತ್ತದೆ. ವೈದ್ಯಕೀಯ ತಜ್ಞರು H3N2 ನಿಭಾಯಿಸಲು ಮಾರ್ಗಸೂಚಿಗಳು ಮತ್ತು ಮುನ್ನೆಚ್ಚರಿಕೆಗಳನ್ನು ಸೂಚಿಸುತ್ತಿದ್ದಾರೆ. ಎಐಐಎಂಎಸ್‌ನ ಮಾಜಿ ಉನ್ನತ ವೈದ್ಯರು, ಅಧ್ಯಕ್ಷರು ಮೇದಾಂತ ಡಾ ರಂದೀಪ್ ಗುಲೇರಿಯಾ ಅವರು, ‘H3N2 ಒಂದು ರೀತಿಯ ಇನ್ಫ್ಲುಯೆನ್ಸ ವೈರಸ್. ಇದನ್ನು ನಾವು ಪ್ರತಿ ವರ್ಷ ಈ ಸಮಯದಲ್ಲಿ ನೋಡುತ್ತೇವೆ. ಆದರೆ, ಇದು ಆಂಟಿಜೆನಿಕ್ ಡ್ರಿಫ್ಟ್ ಎಂದು ಕರೆಯಲಾಗುವ ಕಾಲಾನಂತರದಲ್ಲಿ ರೂಪಾಂತರಗೊಳ್ಳುವ ವೈರಸ್. H1N1 ನಿಂದಾಗಿ ನಾವು ಅನೇಕ ವರ್ಷಗಳ ಹಿಂದೆ ಒಂದು ಸಾಂಕ್ರಾಮಿಕ ರೋಗವನ್ನು ಹೊಂದಿದ್ದೇವೆ. ಆ ವೈರಸ್ನ ಪರಿಚಲನೆಯು ಈಗ H3N2 ಆಗಿದೆ. ಆದ್ದರಿಂದ, ಇದು ಸಾಮಾನ್ಯ ಇನ್ಫ್ಲುಯೆನ್ಸ ಸ್ಟ್ರೈನ್ ಆಗಿದೆ’ ಎಂದಿದ್ದಾರೆ. ಈ ಇನ್ಫ್ಲುಯೆನ್ಸ ವೈರಸ್ ಹನಿಗಳ…