ಮಂಗಳೂರು; ಹಾಡುಹಗಲೇ ಹಂಪನಕಟ್ಟೆಯ ಮಂಗಳೂರು ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಸಿಬ್ಬಂದಿ ರಾಘವೇಂದ್ರ ಆಚಾರ್ಯ ಎಂಬವರನ್ನು ಕೊಲೆಗೈದ ಆರೋಪಿ ಶಿಫಾಸ್(30) ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಣೆಗೆ ಒಳಪಡಿಸಿದಾಗ ಹಲವು ಸ್ಫೋಟಕ ವಿಚಾರಗಳು ಗೊತ್ತಾಗಿವೆ. ಶಿಫಾಸ್ ಒಬ್ಬರೇ ಇರುವ ಚಿನ್ನಾಭರಣ ಅಂಗಡಿಗಳನ್ನು ಗುರಿಯಾಗಿಟ್ಟುಕೊಂಡು ಹೊಂಚು ಹಾಕುತ್ತಿದ್ದ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆರೋಪಿ ಮಂಗಳೂರು ಮಾತ್ರವಲ್ಲದೆ ತಮಿಳುನಾಡು, ಕೇರಳ, ಗೋವಾದಲ್ಲಿಯೂ ಇದೇ ರೀತಿಯ ಕೃತ್ಯ ನಡೆಸುವ ಉದ್ದೇಶದಿಂದ ಓಡಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಇಲ್ಲಿ ನಡೆದಿರುವ ಕೃತ್ಯದ ಮಾದರಿಯಲ್ಲಿ ಬೇರೆ ರಾಜ್ಯಗಳಲ್ಲಿ ನಡೆದಿದ್ದರೆ ಅದರ ಮಾಹಿತಿ ನೀಡುವಂತೆ ಅಲ್ಲಿನ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿ ಪತ್ತೆಯಾಗಿದ್ದು ಹೇಗೆ? ಆರೋಪಿಯ ಪತ್ತೆಗೆ ಪೊಲೀಸರು ನಿರಂತರ ಒಂದು ತಿಂಗಳಿಂದ ಹುಡುಕಾಟ ನಡೆಸುತ್ತಿದ್ದರು.ಆದರೆ ಆರೋಪಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ. ಆತನ ಮುಖಚರ್ಯೆ ಸ್ಪಷ್ಟವಾಗಿ ಯಾವುದೇ ಸಿಸಿ ಕೆಮರಾದಲ್ಲಿ ದಾಖಲಾಗಿರಲಿಲ್ಲ.…
Author: main-admin
ಕಾಸರಗೋಡು : ಸುಟ್ಟಗಾಯಗಳಿಂದ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಕಾಞಂಗಾಡ್ ಪಡನಕ್ಕಾಡ್ ನೆಹರೂ ಕಾಲೇಜಿನ ಪದವಿ ವಿದ್ಯಾರ್ಥಿನಿ ಪಿ.ರಶ್ಮಿ (23) ಎಂದು ಗುರುತಿಸಲಾಗಿದೆ. ಕೆ ರತ್ನಾಕರನ್ ಮತ್ತು ಪಿ ಪುಷ್ಪಾ ಅವರ ಪುತ್ರಿ ಯಾಗಿರುವ ರಶ್ಮಿ ಜನವರಿ 21 ರಂದು ಮುಳಿಯಾರು ಬರ್ಕಾದಲ್ಲಿರುವ ತನ್ನ ಚಿಕ್ಕಪ್ಪನ ಮನೆಯಲ್ಲಿ ಅಡುಗೆ ಮಾಡುವಾಗ ಸುಟ್ಟಗಾಯಗಳಿಗೆ ಒಳಗಾಗಿದ್ದರು. ಗಂಭೀರ ಗಾಯಗೊಂಡ ರಶ್ಮಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ನವದೆಹಲಿ: ಆಸ್ಪತ್ರೆಗೆ ಬಂದ ಹಲವಾರು ರೋಗಿಗಳಿಗೆ ಒಂದೇ ಸಿರಿಂಜ್‌ನಿಂದ ಇಂಜೆಕ್ಷನ್ ಕೊಟ್ಟ ಪರಿಣಾಮ ಬಾಲಕಿಗೆ HIV ಪಾಸಿಟಿವ್ ಬಂದಿರುವ ಘಟನೆ ಇಟಾಹ್‌ನಲ್ಲಿ ನಡೆದಿದೆ. ಮಗುವಿಗೆ ಎಚ್‌ಐವಿ ಪಾಸಿಟಿವ್ ಎಂದು ವರದಿಯಾದ ವರದಿಗಳ ಕುರಿತು ಇಟಾಹ್‌ನಲ್ಲಿರುವ ರಾಣಿ ಅವಂತಿ ಬಾಯಿ ಲೋಧಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಂದ ವಿವರಣೆಯನ್ನು ಕೇಳಲಾಗಿದೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಶನಿವಾರ ಹೇಳಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಒಂದೇ ಸಿರಿಂಜ್‌ನಿಂದ ಹಲವಾರು ಮಕ್ಕಳಿಗೆ ಚುಚ್ಚುಮದ್ದು ನೀಡಲಾಗಿದೆ ಎಂದು ಶನಿವಾರ ಆಸ್ಪತ್ರೆಗೆ ದಾಖಲಾದ ಬಾಲಕಿಯ ಪೋಷಕರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಕಿತ್ ಕುಮಾರ್ ಅಗರ್ವಾಲ್ ಅವರಿಗೆ ದೂರು ನೀಡಿದ್ದಾರೆ. ಫೆಬ್ರವರಿ 20 ರಂದು ಆಸ್ಪತ್ರೆಗೆ ದಾಖಲಾದ ಬಾಲಕಿಯ ಸಂಬಂಧಿಕರು, ಮಗುವಿಗೆ ಎಚ್‌ಐವಿ ಪಾಸಿಟಿವ್ ಎಂದು ಪತ್ತೆಯಾದಾಗ ಆರೋಗ್ಯ ಕಾರ್ಯಕರ್ತರು ರಾತ್ರಿಯಲ್ಲಿ ಆಸ್ಪತ್ರೆಯಿಂದ ಬಲವಂತವಾಗಿ ಹೊರಹಾಕಿದ್ದಾರೆ ಎಂದು ಆರೋಪಿಸಿದರು. ಆಪಾದಿತ ಘಟನೆಯ ಬಗ್ಗೆ ತನಗೆ ತಿಳಿದು ಬಂದಿದೆ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್…
ಬೆಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ಬೆಂಗಳೂರಿನ ದಾಸರಹಳ್ಳಿಯಲ್ಲಿ ಎನ್ ಐಎ ತಂಡ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಐಎ ಅಧಿಕಾರಿಗಳು ಕೊಲೆ ಆರೋಪಿ ತೌಫೀಲ್ ಪತ್ತೆಗಾಗಿ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು. ಬೆಂಗಳೂರಿನ ದಾಸರಹಳ್ಳಿಯಲ್ಲಿ ನಿನ್ನೆ ರಾತ್ರಿ ಎನ್ ಐಎ ಅಧಿಕಾರಿಗಳು ಆರೋಪಿ ತೌಫೀರ್ ನನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನನ್ನು ಜುಲೈ 26 ರಂದು ಬೆಳ್ಳಾರೆಯಲ್ಲಿರವ ಅವರ ಕೋಳಿ ಅಂಗಡಿ ಬಳಿಯೇ ಹಂತಕರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿತ್ತು.
ಮಂಗಳೂರು: 33 ವರ್ಷದ ಮಹಿಳೆ ಹಾಗೂ ಆಕೆಯ ನಾಲ್ಕು ವರ್ಷದ ಮಗಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಆರೋಪಿ ಕೇಶವ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲಗುತ್ತು ಪರಿಸರದ ಮನೆಯೊಂದರಲ್ಲಿ ಮಾರ್ಚ್ 1 ರಂದು ತನ್ನ ಪುತ್ರಿಯೊಂದಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಮಹಿಳೆ ಮತ್ತು ಆಕೆಯ ಮಗಳ ಆತ್ಮಹತ್ಯೆಯ ನಂತರ ಪೊಲೀಸರು ಕೇಶವ ಸೇರಿದಂತೆ ಮೂವರ ವಿರುದ್ಧ ಐಪಿಸಿ ಸೆಕ್ಷನ್ 306 (‘ಆತ್ಮಹತ್ಯೆಗೆ ಪ್ರಚೋದನೆ’) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್ನು ಪೊಲೀಸರು ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದಲ್ಲಿ ಇತರ ಇಬ್ಬರು ಆರೋಪಿಗಳಾದ ಬಾಬು ಮತ್ತು ಮಮತಾ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಬಂಧನವನ್ನು ಖಚಿತಪಡಿಸಿದ್ದಾರೆ. ವಿಜಯಾ ಎಂದು ಗುರುತಿಸಲಾಗಿರುವ ಮಹಿಳೆ ತನ್ನ ಮಗಳು ಶೋಬಿಕಾ ಮತ್ತು 12 ವರ್ಷದ ಮಗುವಿನೊಂದಿಗೆ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು…
ಮನೆ ಕೆಲಸಕ್ಕೆಂದು ಬಂದ ಇಬ್ಬರು ವ್ಯಕ್ತಿಗಳು ಮನೆಯನ್ನೇ ದರೋಡೆ ಮಾಡಿ ಮನೆಯವರನ್ನು ಕೊಲೆಗೈಯಲು ಯತ್ನಿಸಿದ ಘಟನೆ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ ನಡೆದಿದೆ. ಪಂಬೆತ್ತಾಡಿ ಗ್ರಾಮದ ಕರಿಕ್ಕಳ ವಿಶ್ವನಾಥ ಮತ್ತು ಗಾಯತ್ರಿ ದಂಪತಿ ಮನೆಗೆ ಕೆಲಸಕ್ಕೆ ಬಂದವರು ಆಕ್ರಮಣ ನಡೆಸಿ ಕೊಲೆಗೆ ಯತ್ನಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಗಾಯತ್ರಿಯವರ ಕುತ್ತಿಗೆಗೆ ಇರಿದ ಗಾಯವಾಗಿದ್ದು ಅವರು ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮನೆ ಕೆಲಸಕ್ಕೆ ಬಂದಿದ್ದ ಸೈಫನ್ ಮತ್ತು ವರದರಾಜ್ ಬಂಧಿತರು. ಇವರಿಬ್ಬರು ಮನೆಯ ಮಹಡಿ ಮೇಲೆ ಏರಿ ಕೃತ್ಯ ಎಸಗಿದ್ದಾರೆ. ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಮನೆಯಲ್ಲಿ ಹಣವಿರುವ ವಿಚಾರ ಆರೋಪಿಗಳ ತಿಳಿದಿತ್ತು. ಮನೆಯವರನ್ನು ಮುಗಿಸಿದರೋಡೆ ನಡೆಸುವ ಆರೋಪಿಗಳ ಯೋಜನೆ ಆಗಿತ್ತು ಎನ್ನಲಾಗಿದೆ. ಸೈಫನ್ ಧರ್ಮಸ್ಥಳ ಹೊಸ ಬಸ್ ತಂಗುದಾಣ ಬಳಿ ನಿವಾಸಿಯಾಗಿದ್ದು, ವರದರಾಜ್ ಚಿತ್ರದುರ್ಗದ ಹಿರಿಯೂರು ನಿವಾಸಿ. ಇವರಿಬ್ಬರು ಕೆಲವು ತಿಂಗಳ ಹಿಂದೆಯಷ್ಟೇ ಮನೆ ಕೆಲಸಕ್ಕಾಗಿ ಬಂದಿದ್ದರು. ಘಟನೆ…
ಭಾರತದಲ್ಲಿ ಸಂಪೂರ್ಣ ಕ್ಷೀಣವಾಗಿದ್ದ ಮಾರಕ ಕೋವಿಡ್ ಸೋಂಕು 97 ದಿನಗಳ ಬಳಿಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 300ಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ. ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ದೈನಂದಿನ ಕೋವಿಡ್ ಅಂಕಿ-ಅಂಶಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 334 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಆ ಮೂಲಕ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,686ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ಇದೇ ಅವಧಿಯಲ್ಲಿ ಮೂರು ಕೋವಿಡ್ ಸಾವುಗಳು ದಾಖಲಾಗಿದ್ದು, 2 ಮಹಾರಾಷ್ಟ್ರದಲ್ಲಿ ಮತ್ತು ಒಂದು ಕೇರಳದಲ್ಲಿ ವರದಿಯಾಗಿದೆ. ಆ ಮೂಲಕ ಕೋವಿಡ್ ಗೆ ಬಲಿಯಾದವರ ಸಂಖ್ಯೆ 5,30,775ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 4,46,87,496ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಮಂಗಳೂರು: ನಗರದ ಸೌಂದರ್ಯವರ್ಧನೆಗೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತದೆ. ಇಂತಹ ಸೌಂದರ್ಯ ಪ್ರಜ್ಞೆಯಿಂದಲೇ ನಿರ್ಮಾಣವಾಗಿರುವುದು ಮಂಗಳೂರಿನ ಹೃದಯಭಾಗದಲ್ಲಿರುವ ಕ್ಲಾಕ್ ಟವರ್. ಆದರೆ ಇದೀಗ ಈ ಕ್ಲಾಕ್ ಟವರ್ ಸೂಕ್ತ ನಿರ್ವಹಣೆಯಿಲ್ಲದೆ ದುಃಸ್ಥಿತಿ ತಲುಪಿದೆ. ಇಲ್ಲಿ ಕಾಣುತ್ತಿರುವುದೇ ಕ್ಲಾಕ್ ಟವರ್. ಮಂಗಳೂರಿನ ಸೌಂದರ್ಯಕ್ಕೆ ಹಿಡಿದ ಕನ್ನಡಿಯಂತಿರುವ ಇದು 2018ರಲ್ಲಿ ನಿರ್ಮಾಣಗೊಂಡಿತು. ಸ್ಮಾರ್ಟ್ ಸಿಟಿ ಕಾಮಗಾರಿಯಡಿಯಲ್ಲಿ ಅತ್ಯಂತ ದುಬಾರಿ ವೆಚ್ಚದಲ್ಲಿ ನಿರ್ಮಾಣಗೊಂಡಿತು. ಇತ್ತೀಚೆಗಷ್ಟೇ ಇದರ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಅಧಿಕೃತವಾಗಿ ಲೋಕಾರ್ಪಣೆಯೂ ಆಗಿಲ್ಲ. ಆದರೆ ಅದಾಗಲೇ ಕ್ಲಾಕ್ ಟವರ್ ಸರಿಯಾದ ನಿರ್ವಹಣೆಯಿಲ್ಲದೆ ದುಃಸ್ಥಿತಿಯನ್ನು ತಲುಪಿದೆ. ಕ್ಲಾಕ್ ಟವರ್‌ನ ಕಾರಂಜಿ ಚಾಲನೆಯಲ್ಲಿಲ್ಲ. ಸುತ್ತಲಿನ ಗಾರ್ಡನ್‌ಗೂ ನೀರು ಸರಬರಾಜು ಇಲ್ಲದೆ ಗಿಡಗಳು ಸೊರಗಿ ಹೋಗಿದೆ. 75 ಅಡಿ ಎತ್ತರದ ಕ್ಲಾಕ್ ಟವರ್‌ನ ಸುತ್ತಲೂ ನಾಲ್ಕು ಬೃಹತ್ ಗಡಿಯಾರಗಳಿವೆ. ರಾತ್ರಿ ವೇಳೆ ಸುಂದರ ವಿದ್ಯುತ್ ವ್ಯವಸ್ಥೆ ಹಾಗೂ ವರ್ಣ ರಂಜಿತ ಕಾರಂಜಿ ಕ್ಲಾಕ್ ಟವರ್‌ನ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಕಾಮಗಾರಿ ಬಳಿಕ ಸ್ಮಾರ್ಟ್ ಸಿಟಿ ನಿರ್ವಹಣೆಗೆ ಮಹಾನಗರ ಪಾಲಿಕೆಗೆ ಹಸ್ತಾಂತರಮಾಡಿತ್ತು.…
ಕಾರ್ಕಳ: ನಿಟ್ಟೆ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಕಲಿಯುತ್ತಿದ್ದ ಸೀಮಾ (22) ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಕುಂದಾಪುರದ ಶಿರೂರು ಮೂಲದ ಅವರು ಅಂತಿಮ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಅವರು ನರ, ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದರು. ಹಲವು ಕಡೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಗುಣವಾಗಿರಲಿಲ್ಲ. ಇದರಿಂದ ಮನನೊಂದು 4-5 ತಿಂಗಳ ಹಿಂದೆಯೂ ಒಮ್ಮೆ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇದೇ ಕಾರಣವನ್ನೇ ಮುಂದಿಟ್ಟುಕೊಂಡು ಮಾರ್ಚ್ 2 ರಂದು ಅಪರಾಹ್ನ ಹಾಸ್ಟೆಲ್‌ನ ಕೊಠಡಿಯಲ್ಲಿನ ಫ್ಯಾನ್‌ಗೆ ಚೂಡಿದಾರ್ ಶಾಲ್‌ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ದ.ಕ., ಉಡುಪಿ ಸಹಿತ ಕರಾವಳಿ ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳಲ್ಲಿ ಬಲವಾದ ಬಿಸಿ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಅಲ್ಲದೆ ಈ ಅವಧಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಮೀರುವ ಸಾಧ್ಯತೆಗಳಿದ್ದು, ಜನರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವಿಶೇಷ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯ ಕೆಲವು ಕಡೆಗಳಲ್ಲಿ ಬಿಸಿಗಾಳಿಯ ವಾತಾವರಣ ಕಂಡು ಬರಲಿದೆ. ಹಾಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆಯು ಹೊರಡಿಸಿರುವ ಪ್ರಕಟನೆಯಲ್ಲಿ ತಿಳಿಸಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ತೀವ್ರ ಬಿಸಿಲಿನ ವಾತಾವರಣವಿದೆ. ಬಲವಾದ ಗಾಳಿಯೂ ಬೀಸುತ್ತಿದೆ. ಇದರಿಂದ ತಾಪಮಾನದಲ್ಲಿ ಏರಿಕೆಯೂ ಆಗಿದೆ. ತಾಪಮಾನದಲ್ಲಿ ನಿರಂತರ ಏರಿಕೆಯ ಪರಿಣಾಮ ಬಿಸಿಗಾಳಿ ಸೃಷ್ಟಿಯಾಗಲಿದೆ. ಹಾಗಾಗಿ ಹಿಟ್‌ಸ್ಟ್ರೋಕ್, ಕಣ್ಣಿನ ಉರಿ, ತಲೆಸುತ್ತು ಸಹಿತ ನಾನಾ ಆರೋಗ್ಯ ಸಮಸ್ಯೆಗಳು ತಲೆದೋರುವ ಅಪಾಯವಿದೆ ಎಂದು ತಿಳಿಸಿದೆ.