Author: main-admin

ಮಂಗಳೂರು: ಇಬ್ಬರು ಪುತ್ರಿಯರೇ ತಮ್ಮ ತಂದೆಯ ಮೇಲೆ ಮಾಡಿದ ಅತ್ಯಾಚಾರ ಆರೋಪದ ಪೈಕಿ ಒಂದು ಪ್ರಕರಣ ನಗರದ ಪೋಕ್ಸೋ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದೆ. 2021ರ ಜೂನ್‌ ತಿಂಗಳಿನಲ್ಲಿ ಕಾಟಿಪಳ್ಳದ ನಿವಾಸಿ ಅಬ್ದುಲ್‌ ಹಕೀಂ (48) ಅವರ ಮೇಲೆ ಅವರ ಇಬ್ಬರು ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳು ತಂದೆ ನಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಿದ್ದರು. ಪ್ರಕರಣದ ಕುರಿತು ಮಂಗಳೂರಿನ ಮಹಿಳಾ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ಪೋಕ್ಸೋ ಕಾಯ್ದೆಯಡಿ ದಾಖಲಾಗಿತ್ತು. ಕಿರಿಯ ಮಗಳು ತನ್ನ ತಂದೆಯು ಸತತ ಮೂರು ವರ್ಷಗಳಿಂದ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದಳು. ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ಎರಡನೇ ಎಫ್‌ಟಿಎಸ್‌ಸಿ ಪೋಕ್ಸೋ ನ್ಯಾಯಾಲಯ ಪ್ರಕರಣದಲ್ಲಿ ಆರೋಪಿಯ ಮೇಲೆ ಆರೋಪ ಸಾಬೀತು ಮಾಡಲು ಯಾವುದೇ ಸರಿಯಾದ ಸಾಕ್ಷಾಧಾರಗಳು ಇಲ್ಲ ಎಂದು ನಿರ್ಧರಿಸಿತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಆರೋಪಿಯನ್ನು ಬಿಡುಗಡೆ ಮಾಡಲು ಆದೇಶ ಮಾಡಿದ್ದಾರೆ. ಆರೋಪಿ ಕಳೆದ ಒಂದೂವರೆ ವರ್ಷಗಳಿಂದ ಜೈಲುವಾಸ ಅನಭವಿಸಿದ್ದರು.…

Read More

ಬೆಂಗಳೂರು: ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಅವರ ಮೇಲಿನ ಲೋಕಾಯುಕ್ತ ದಾಳಿಗೆ ಮತ್ತಷ್ಟು ತಿರುವು ಸಿಕ್ಕಿದೆ. ಮಾಡಾಳ್ ಪ್ರಶಾಂತ್ ಮನೆಯಲ್ಲಿ ಆರು ಕೋಟಿ ರೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಪುತ್ರ ಪ್ರಶಾಂತ್ ಮಾಡಾಳ್ ಅವರ ಮನೆ ಮೇಲೆ ಲೋಕಾಯುಕ್ತದ ಭ್ರಷ್ಟಾಚಾರ ನಿಗ್ರಹ ದಳ ಗುರುವಾರ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಹಣದ ರಾಶಿ ಪತ್ತೆಯಾಗಿದೆ. ತಡರಾತ್ರಿಯವರೆಗೂ ಹುಡುಕಾಟ ನಡೆದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ಅಧ್ಯಕ್ಷರಾಗಿದ್ದಾರೆ. ಅವರ ಮಗ ಪ್ರಶಾಂತ್ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ (ಬಿಡಬ್ಲ್ಯೂಎಸ್‌ಎಸ್ ಬಿ) ಮುಖ್ಯ ಅಕೌಂಟೆಂಟ್ ಆಗಿದ್ದಾರೆ. ಗುತ್ತಿಗೆದಾರನೊಬ್ಬನ ಬಳಿ 80 ಲಕ್ಷ ರೂ.ಗೂ ಹೆಚ್ಚು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಮುಂಗಡವಾಗಿ 40 ಲಕ್ಷ ರೂ. ಹಣ ಪಡೆದುಕೊಳ್ಳುತ್ತಿದ್ದ ವೇಳೆ…

Read More

ಉಡುಪಿ: ಕಾರ್ಕಳದ ಸಚಿವ ವಿ. ಸುನಿಲ್ ಕುಮಾರ್ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬೇನಾಮಿ ಆಸ್ತಿ ಆರೋಪ ಮಾಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಚುನಾವಣೆ ಘೋಷಣೆ ಆಗುವ ಮೊದಲೇ ಕಾರ್ಕಳದಲ್ಲಿ ಮುತಾಲಿಕ್ ಮತ್ತು ಸುನಿಲ್ ಕುಮಾರ್ ನಡುವೆ ಆರೋಪ ಪ್ರತ್ಯಾರೋಪಗಳು ಶುರುವಾಗಿದೆ. ಎರಡು ತಿಂಗಳಿನಿಂದ ಮುತಾಲಿಕ್ ನಿರಂತರವಾಗಿ ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ನಕಲಿ ಹಿಂದುತ್ವ, ಭ್ರಷ್ಟಾಚಾರ ಅಂತಾ ಆರೋಪಿಸುತ್ತಿದ್ದವರು ಇದೀಗ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ.  ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಶಿವಪುರ ಕೆರೆಕಟ್ಟೆ ಗ್ರಾಮದಲ್ಲಿ 67 ಎಕರೆ ಕೃಷಿ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಬೇರೆ ಬೇರೆ ರೈತರಿಂದ ಖರೀದಿ ಮಾಡಿದ್ದಾರೆ. ಮುಂದೆ ಅದು ಕೈಗಾರಿಕಾ ಪ್ರದೇಶವಾಗಿ ಭೂ ಪರಿವರ್ತನೆ ಮಾಡಿ 4-5 ಪಟ್ಟು ಹೆಚ್ಚಿನ ಬೆಲೆಗೆ ಸರ್ಕಾರ ಖರೀದಿ ಮಾಡುತ್ತದೆ. 4 ಚಿಲ್ಲರೆ ಕೋಟಿಗೆ ಖರೀದಿಸುವ ಮೂಲಕ ಜಮೀನು ಹೊಂದಿರುವ ಬಡ ರೈತರಿಗೂ ಅನ್ಯಾಯ ಆಗಿದೆ. ಇದರಲ್ಲಿ ಶಾಸಕ,…

Read More

ಮಂಗಳೂರು:ಹಂಪನಕಟ್ಟೆಯಲ್ಲಿನ ಜ್ಯುವೆಲ್ಲರಿಗೆ ನುಗ್ಗಿ ದರೋಡೆ- ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 1 ತಿಂಗಳ ಬಳಿಕ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಝಿಕ್ಕೋಡ್ ಕೊಯಿಲಾಂಡಿಯ ಶಿಫಾಝ್ (33) ಬಂಧಿತ ಆರೋಪಿ.ಈತನನ್ನು ಕಾಸರಗೋಡಿನಲ್ಲಿ ಬಂಧಿಸಲಾಗಿದೆ. ಫೆ.3ರಂದು ಹಂಪನಕಟ್ಟೆ ಸಮೀಪ ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅತ್ತಾವರದ ನಿವಾಸಿ ರಾಘವ(50) ಎಂಬವರನ್ನು ಚೂರಿಯಿಂದ ಇರಿದು ಕೊಲೆಗೈದು ದರೋಡೆ ಮಾಡಿಕೊಂಡು ಮುಸುಕುದಾರಿ ಪರಾರಿಯಾಗಿದ್ದ. ಆರೋಪಿಯ ಬಂಧನ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.ಇದೀಗ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು.

Read More

ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಾರ್ಚ್ 1 ರಂದು ಇಲ್ಲಿನ ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಉಜಿರೆ ಹಳೇಪೇಟೆ ನಿವಾಸಿ ಮಣಿ ಅಲಿಯಾಸ್ ಮಣಿಕಂಠ (41) ಬಂಧಿತ ಆರೋಪಿ.ಪ್ರಸ್ತುತ ಈತ ಕುಂಬಳೆಯ ನೀರಜಾಲ್‌ನಲ್ಲಿ ನೆಲೆಸಿದ್ದು, ನೆಲ್ಯಾಡಿ ಸಮೀಪದ ಶಿಬಾಜೆ ಎಂಬಲ್ಲಿ ಮಣಿಯನ್ನು ಬಂಧಿಸಲಾಗಿದೆ.ಖಚಿತ ಸುಳಿವಿನ ಮೇರೆಗೆ ನಗರ ಠಾಣೆಯ ವಾರಂಟ್ ಸಿಬ್ಬಂದಿ ಗಣೇಶ್, ರಾಜೇಶ್ ಮತ್ತು ಪ್ರವೀಣ್ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Read More

ಮಂಗಳೂರು, ಮಾರ್ಚ್ 02 : ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣೆ ಪಾಂಡೇಶ್ವರದಲ್ಲಿ ಹೆಡ್‌ಕಾನ್‌ಸ್ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಲತಾ ಅವರನ್ನು ಪೊಲೀಸ್ ಕಮಿಷನರ್‌ ಅಮಾನತುಗೊಳಿಸಿದ್ದಾರೆ. ಈ ಮೂಲಕ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಆಗಿ ಅಧಿಕಾರ ಸ್ವೀಕರಿಸಿಕೊಂಡ ಬೆನ್ನಲ್ಲೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿ ಹೇಳಿದ್ದ ಕುಲದೀಪ್‌ ಆರ್ ಜೈನ್‌ ಇದೀಗ ತಾವು ನುಡಿದಂತೆ ನಡೆದುಕೊಂಡಿದ್ದಾರೆ. ಘಟನೆಯ ವಿವರ :ಗಂಡ ಹೆಂಡತಿ ಗಲಾಟೆ ವಿಚಾರದಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದಿದ್ದ ಪಾಂಡೇಶ್ವರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್‌ ಶ್ರೀಲತಾ ಖಾಸಗಿ ವಾಹನದಲ್ಲಿ ಹೋಗಿ ಪಾರ್ಟಿಯ ಜೊತೆ ಸಂಧಾನ ನಡೆಸುವ ನೆಪದಲ್ಲಿ ವ್ಯವಹಾರ ಕುದುರಿಸಿದ್ದರು. ಇದನ್ನು ಪ್ರತಿದೂರುದಾರರು ಗಮನಿಸಿ ವಿಡಿಯೋ ಮಾಡುತ್ತಿದ್ದಾಗ ಗಮನಿಸಿದ ಶ್ರೀಲತಾ, ಪಾಂಡೇಶ್ವರ ಠಾಣೆಯಲ್ಲಿ ತನ್ನ ಕರ್ತವ್ಯಕ್ಕೆ ಅಡ್ಡಿ ಎಂದು ದೂರು ದಾಖಲಿಸಿದ್ದರು. ಇದು ನ್ಯಾಯಕ್ಕಾಗಿ ಠಾಣೆ ಮೆಟ್ಟಲೇರಿದ ತಂಡದ ಆಕ್ರೋಶಕ್ಕೆ ಕಾರಣವಾಗಿತ್ತು. ತಮಗಾದ ಅನ್ಯಾಯದ ಬಗ್ಗೆ ಹಾಗೂ ಶ್ರೀಲತಾ ಬೇಡಿಕೆ ಇರಿಸಿದ ಬಗ್ಗೆ…

Read More

ಮಂಗಳೂರು: ಸ್ವಿಮಿಂಗ್ ಫೂಲ್ ನಲ್ಲಿ ಮೋಜುಮಸ್ತಿ ಮಾಡುವವರು ಅನೇಕ ಮಂದಿ ಇರ್ತಾರೆ, ಅದರಲ್ಲೂ ಕೆಲವು ಮಂದಿ ಮನೆಯಲ್ಲೆ ಸ್ವಿಮಿಂಗ್ ಪೂಲ್ ನಿರ್ಮಿಸಿ ಎಂಜಾಯ್ ಮಾಡ್ತಾರೆ.ಅದರೆ ಇಲ್ಲೊಂದು ಊರಲ್ಲಿ ವ್ಯಕ್ತಿಯೊಬ್ರು ಸ್ವಿಮಿಂಗ್ ಪೂಲ್ ನ್ನೂ ಬಿಸಿನೆಸ್ ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವಿನ ಬಸ್ತಿಕೋಡಿಯಲ್ಲಿ ಈ ಸ್ವಿಮಿಂಗ್ ಫೂಲ್ ಇದೆ. ಇಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಾ, ಯುವಕರು ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತಿರುತ್ತಾರೆ. ಬಸ್ತಿಕೋಡಿ ನಿವಾಸಿ ಪ್ರಸ್ತುತ ಇಸ್ರೇಲ್ ನಲ್ಲಿ ಉದ್ಯಮಿಯಾಗಿರುವ ಜಾನ್ ಹಣದಾಸೆಗೆ ಈಗ ಮನೆಯನ್ನೇ ರೆಸಾರ್ಟ್ ಮಾಡಿದ್ದಾರೆ. ಮನೆಯ ಸ್ವಿಮ್ಮಿಂಗ್ ಫೂಲ್ ಅನ್ನು ಸಾರ್ವಜನಿಕರಿಗೆ ಗಂಟೆಗೆ ನೂರು ರೂಪಾಯಿಗೆ ಕೊಡಲಾಗುತ್ತಿದೆ. ಹೀಗೆ ಉದ್ಯಮಿ ಜಾನ್ ಹಣದಾಸೆಗೆ ಯುವಕರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Read More

ಮಂಗಳೂರು ನಗರದ ಪಾವೂರು ಗ್ರಾಮದ ಮಲಾರ್ ಅರಸ್ತಾನದಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆಗೈದು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಮೇಲಿನ ಆರೋಪ ಸಾಬೀತಾಗಿದೆ. ಐವರು ಆರೋಪಿಗಳು ಕೂಡ ದೋಷಿಗಳು ಎಂದು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಹಂಝ (44), ಅಝರುದ್ದೀನ್ (27), ಅಮೀರ್ ಶೇಖ್ ಯಾನೆ ಅಮ್ಮಿ (26), ಅರ್ಫಾಝ್ ಅಬ್ದುಲ್ ರಝಾಕ್ (20) ಅಥಾವುಲ್ಲ ಯಾನೆ ಅಲ್ತಾಫ್ ಅವರ ಮೇಲಿನ ಆರೋಪವು ಸಾಬೀತಾಗಿದೆ. ಪಾವೂರು ಗ್ರಾಮದ ಮಲಾರ್‌ನ ಪಳ್ಳಿಯಬ್ಬ ಯಾನೆ ಪಳ್ಳಿಯಾಕ (75) ನಾಪತ್ತೆಯಾದ ಬಗ್ಗೆ 2020ರ ಅ.29ರಂದು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಅವರ ಮೃತದೇಹವು ಇರಾ ಗ್ರಾಮದ ಪದವು ಬಳಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹಣದ ವಿಚಾರದಲ್ಲಿ ಇವರನ್ನು ದುಷ್ಕರ್ಮಿಗಳು ಅತ್ಯಂತ ವ್ಯವಸ್ಥಿತವಾಗಿ ಹತ್ಯೆಗೈದು ಹೂತು ಹಾಕಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿತ್ತು. ಈ ಬಗ್ಗೆ ಕೊಣಾಜೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ನ್ಯಾಯಾಧೀಶ ಬಸಪ್ಪಬಾಳಪ್ಪ…

Read More

ಮಂಗಳೂರು: ಮಕ್ಕಳಿಬ್ಬರಿಗೆ ಕುಣಿಕೆ ಬಿಗಿದು ತಾಯಿಯೊಬ್ಬಳು ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಮಂಗಳೂರಿನ ಕೊಡಿಯಾಲ ಗುತ್ತುವಿನಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ತಾಯಿ ಹಾಗೂ ನಾಲ್ಕು ವರ್ಷದ ಪುತ್ರಿ ಸಾವಿಗೀಡಾಗಿದ್ದಾರೆ. 12ರ ಪುತ್ರಿ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ನಗರದ ಕೊಡಿಯಾಲ ಗುತ್ತು ನಿವಾಸಿ ವಿಜಯಾ(33), ಶೋಭಿತಾ(4) ಸಾವನ್ನಪ್ಪಿದವರು. ಯಜ್ಞಾ(12) ಎಂಬಾಕೆ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ವಿಜಯಾ ಅವರಿಗೆ ಎರಡು ವಿವಾಹವಾಗಿತ್ತು. ಆದರೆ ಮೊದಲ ಪತಿ ಮೃತಪಟ್ಟಿದ್ದರು. ಆ ಬಳಿಕ ಆರೇಳು ವರ್ಷದ ಹಿಂದೆ ವಿಜಯ ಅವರಿಗೆ ಎರಡನೇ ವಿವಾಹವಾಗಿತ್ತು. ಆದರೆ ಕೆಲ ತಿಂಗಳ ಹಿಂದೆ ಎರಡನೇ ಪತಿಯೂ ಮೃತಪಟ್ಟಿದ್ದಾರೆ. ನೇಣಿನಿಂದ ಪಾರಾದ ಯಜ್ಞಾ ಎಂಬ ಬಾಲಕಿ ಅವರ ಮೊದಲ ಪತಿಯ ಪುತ್ರಿ. ಇಂದು ಸಂಜೆ ವೇಳೆಗೆ ವಿಜಯಾ ತನ್ನಿಬ್ಬರು ಮಕ್ಕಳನ್ನು ನೇಣಿಗೆ ಹಾಕಿ ಬಳಿಕ ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಯಜ್ಞಾ ಎಂಬ ಪುತ್ರಿಯ ಕಾಲಡಿಗೆ ಟೇಬಲ್ ಸ್ಪರ್ಶವಾಗಿದೆ. ಪರಿಣಾಮ ಆಕೆ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಇದರಿಂದ ಆಕೆ ತನ್ನ ನೇಣು…

Read More

ಕಿನ್ನಿಗೋಳಿ: ಕಿನ್ನಿಗೋಳಿಸಮೀಪದ ದಮಸ್ ಕಟ್ಟೆ ಪೊಂಪೈ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗ ಇಳಿಜಾರು ಪ್ರದೇಶಕ್ಕೆ ಇಂದು ಮಧ್ಯಾಹ್ನದ ಹೊತ್ತಿಗೆ ಆಕಸ್ಮಿಕ ಬೆಂಕಿ ತಗುಲಿ ನಂದಿಸಲು ಸ್ಥಳೀಯರು ಹರಸಾಹಸ ಪಡೆಯಬೇಕಾಯಿತು.ಬೆಂಕಿಯ ಕೆನ್ನಾಲಿಗೆಯಿಂದ ಮರ ಗಿಡಗಳು ಬೆಂಕಿಗಾಹುತಿಯಾಗಿದ್ದು , ಕೂಡಲೇ ಕಾರ್ಯಪ್ರವೃತ್ತರದ ದಾಮಸ್ ಕಟ್ಟೆಯ ರೆಮೆದಿ ಅಮ್ಮ ನವರ ಇಗರ್ಜಿಯ ಧರ್ಮಗುರುಗಳು ಮತ್ತು ಸ್ಥಳಿಯರು ಸಹಕಾರದಿಂದ ಹಾಗೂ ಮೂಡಬಿದ್ರೆಯ ಅಗ್ನಿಶಾಮಕದಳ ತಂಡದಿಂದ ಬೆಂಕಿಯನ್ನು ನಂದಿಸಿ ಹೆಚ್ಚಿನ ಅಪತ್ತನ್ನು ತಪ್ಪಿಸಿದ್ದಾರೆ.

Read More