ಮೂಡುಬಿದಿರೆ:ಮಹಿಳೆಯ ಹೆಸರಿನಲ್ಲಿ ಧ್ವನಿ ಅನುಕರಿಸಿ ವ್ಯಕ್ತಿಗೆ ಕರೆ ಮಾಡಿ ಹಣ ವಸೂಲಿ ಮಾಡಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಮೂಡುಬಿದಿರೆ ನಿವಾಸಿ ಧನಂಜಯ ಬಂಧಿತ.ಈತ ಬೈಕಂಪಾಡಿಯ ಕಂಪೆನಿಯೊಂದರ ಉದ್ಯೋಗಿಗೆ, ಉಷಾ ಎಂದು ಪರಿಚಯಿಸಿಕೊಂಡು ಹೆಣ್ಣಿನ ಸ್ವರದಲ್ಲಿ ಕರೆ, ವೀಡಿಯೋ ಕಾಲ್ ಮಾಡಿ ಹುಡುಗಿಯರ ಖಾಸಗಿ ಅಂಗಗಳನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎನ್ನಲಾಗಿದೆ. ಧನಂಜಯ್ ವಿಡಿಯೋ ಇಟ್ಟುಕೊಂಡು 25 ಸಾವಿರ ಹಣ ಕೊಡಬೇಕು, ಇಲ್ಲವಾದಲ್ಲಿ ಈ ವೀಡಿಯೋ ಕ್ಲಿಪ್ಪಿಂಗನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿದ್ದ.ಈ ಕುರಿತು ಸುರತ್ಕಲ್ ಪೊಲೀಸರಿಗೆ ದೂರು ನೀಡಲಾಗಿತ್ತು.ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Author: main-admin
ಕೇರಳ: ಭಾರತದಲ್ಲಿ ಹಿಂದೂ ದೇವರುಗಳಿಗೆ ಒಂದೊಂದು ರೀತಿಯ ನೈವೇದ್ಯಗಳು ಅಚ್ಚುಮೆಚ್ಚು. ಉದಾಹರಣೆಗೆ ಅಯ್ಯಪ್ಪಸ್ವಾಮಿಗೆ ತುಪ್ಪ, ಕೃಷ್ಣನಿಗೆ ಬೆಣ್ಣೆ, ಗಣಪತಿಗೆ ಕಡುಬು, ಲಡ್ಡು ನೈವೇದ್ಯ ಅಂದರೆ ಹೆಚ್ಚು ಪ್ರೀತಿ. ಆದರೆ ಕೇರಳದ ಅಳಪ್ಪುಳದ ಬಾಲಮುರುಗನ್ ದೇವರಿಗೆ “ಮಂಚ್” ಚಾಕೋಲೇಟ್ ಅತ್ಯಂತ ಪ್ರಿಯವಾದ ಹರಕೆಯಾಗಿದೆಯಂತೆ!ಕೇರಳದ ಅಳಪ್ಪುಳದ ಚೆಮ್ಮೋತ್ ನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಾಲಯವೇ ಕಳೆದ ಆರು ವರ್ಷಗಳಿಂದ “ಮಂಚ್ ಮುರುಗನ್” ದೇವಾಲಯ ಎಂದೇ ಜನಪ್ರಿಯಗೊಂಡಿದೆ. ಚೆಮ್ಮೋತ್ ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕೆಲವು ವರ್ಷಗಳ ಹಿಂದೆ ಪುಟ್ಟ ಬಾಲಕನೊಬ್ಬ ಮಂಚ್ ಚಾಕೊಲೇಟ್ ಅನ್ನು ಬಾಲಮುರುಗನ್ ದೇವರಿಗೆ ಅರ್ಪಿಸಿದ ನಂತರ ಅದನ್ನು ಇಷ್ಟಪಟ್ಟಿದ್ದಾನೆ ಎಂಬುದನ್ನು ಗ್ರಹಿಸಲಾಗಿತ್ತು. ಚೆಮ್ಮೋತ್ ನ ಶ್ರೀಸುಬ್ರಹ್ಮಣ್ಯ ಸ್ವಾಮಿ(ಬಾಲಮುರುಗನ್) ದೇವಸ್ಥಾನಕ್ಕೆ ಮೊದಲು ಹಣ್ಣು, ಕಾಯಿ-ಹಂಪಲು, ದ್ರಾಕ್ಷಿ, ಗೋಡಂಬಿ ಸೇರಿದಂತೆ ಇನ್ನಿತರ ನೈವೇದ್ಯ ಅರ್ಪಿಸುತ್ತಿದ್ದರಂತೆ. ಆದರೆ ದೇವಾಲಯದ ಆಡಳಿತ ನಡೆಸುತ್ತಿರುವ ಅನೂಪ್ ಎ.ಚೆಮ್ಮೋತ್ ಅವರ ಹೇಳಿಕೆಯ ಪ್ರಕಾರ, ಕಳೆದ ಆರು ವರ್ಷಗಳ ಹಿಂದೆ ನಡೆದ ಒಂದು ಘಟನೆಯಿಂದ. ಈ ಮಂಚ್ ಮುರುಗನ್ ಹೆಸರು…
ಭಟ್ಕಳ;ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವ ಘಟನೆ ಭಟ್ಕಳದಿಂದ ವರದಿಯಾಗಿದೆ. ಆಸ್ತಿಗಾಗಿ ಒಂದೇ ಮನೆಯ ನಾಲ್ವರ ಕೊಲೆ ನಡೆದಿದೆ. ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ಶಂಭು ಭಟ್ (65), ಅವರ ಪತ್ನಿ ಮಾದೇವಿ ಭಟ್ (40), ಪುತ್ರ ರಾಜೀವ್ ಭಟ್ (34) ಹಾಗೂ ಸೊಸೆ ಕುಸುಮಾ ಭಟ್ (30) ಕೊಲೆಯಾದವರು. ಮನೆಯ ಹೊರಗಡೆ ನಾಲ್ವರ ಶವ ಚೆಲ್ಲಾಪಿಲ್ಲಿಯಾಗಿ ಕಂಡು ಬಂದಿದೆ. ನಾಲ್ವರನ್ನು ಅಟ್ಟಾಡಿಸಿ ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿದೆ. ಕೊಲೆಯ ವೇಳೆ ನಾಲ್ಕು ವರ್ಷದ ಮಗು ಮಲಗಿದ್ದರಿಂದ ಹಾಗೂ ಇನ್ನೊಂದು ಮಗು ಪಕ್ಕದ ಮನೆಯಲ್ಲಿ ಆಟವಾಡುತ್ತಿದ್ದುದರಿಂದ ಬದುಕುಳಿದಿದೆ. ಶಂಭು ಭಟ್ ಅವರ ಹಿರಿಯ ಸೊಸೆ ವಿದ್ಯಾ ಭಟ್ ಕುಟುಂಬಸ್ಥರಿಂದ ಈ ಕೊಲೆ ನಡೆದಿರುವ ಶಂಕೆ ಇದೆ. ಈಕೆಯ ಪತಿ ಶ್ರೀಧರ್ ಭಟ್ ಕೆಲವು ತಿಂಗಳ ಹಿಂದೆ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದರು. ಆ ಬಳಿಕ ಶಂಭು ಭಟ್ ಬಳಿ ಜೀವನಾಂಶಕ್ಕೆ ಆಸ್ತಿಯಲ್ಲಿ ಪಾಲು ಕೊಡುವಂತೆ ವಿದ್ಯಾ ಭಟ್ ಕುಟುಂಬಸ್ಥರು ಕೇಳಿದ್ದರು. ಇದೇ ವಿಚಾರವಾಗಿ ಹಲವು ಬಾರಿ ಎರಡೂ…
ಬೆಂಗಳೂರು : ವಿಧಾನಸೌಧದಲ್ಲಿ ಮೈಕ್ ಆನ್ ಮಾಡುವಾಗ ಇಂಧನ ಸಚಿವ ಸುನೀಲ್ ಕುಮಾರ್ ಗೆ ವಿದ್ಯುತ್ ಶಾಕ್ ತಗುಲಿದೆ. ಇಂದು ವಿಧಾನಸೌಧದಲ್ಲಿ ಮೈಕ್ ಸ್ವಿಚ್ ಆನ್ ಮಾಡುವಾಗ ಶಾಕ್ ಹೊಡೆದಿದ್ದು, ಸುನೀಲ್ ಕುಮಾರ್ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಈ ಹಿನ್ನೆಲೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಪವರ್ ಮಿನಿಸ್ಟರ್ ಗೆ ಶಾಕ್ ಹೊಡೆಯತಲ್ವಾ..? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಸದನದಲ್ಲಿ ಬಿಲ್ ಮಂಡಿಸಲು ಸುನೀಲ್ ಕುಮಾರ್ ನಿಂತಿದ್ದಾಗ ಮೈಕ್ ಆನ್ ಮಾಡಲು ಹೋಗಿ ಕರೆಂಟ್ ತಗಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಮಂಗಳೂರು: ನಗರ ಪೊಲೀಸ್ ಕಮಿಷನರ್ ಆಗಿ ಕುಲದೀಪ್ ಜೈನ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದ ಎನ್. ಶಶಿಕುಮಾರ್ ಅವರನ್ನು ರೈಲ್ಚೆ ಡಿಐಜಿ ಹುದ್ದೆಗೆ ವರ್ಗಾವಣೆಯಾಗಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ನೂತನ ಕಮಿಷನರ್ ಭ್ರಷ್ಟಾಚಾರವನ್ನು ಸಹಿಸಲಾಗದು. ಅಧಿಕಾರಿಗಳ ವಿರುದ್ಧಯಾವುದೇ ರೀತಿಯ ಭ್ರಷ್ಟಾಚಾರದ ದೂರುಗಳು ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಜನರಿಗೆ ಅನುಕೂಲವಾಗುವಂತೆ ಸಿಬ್ಬಂದಿ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ. ಮಂಗಳೂರು ಒಳ್ಳೆ ಯ ನಗರವಾಗಿದ್ದು, 10 ವರ್ಷಗಳ ಹಿಂದೆ ಇಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಕೆಲಸ ಮಾಡಿದ್ದೆ. ಮಂಗಳೂರಿನ ಜನರು ಸಹಕಾರ ನೀಡಬೇಕು, ಸಂಚಾರ ನಿಯಮವನ್ನು ಪಾಲಿಸಬೇಕು ಎಂದರು. ಕುಲದೀಪ್ ಜೈನ್ ಅವರು 2011ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೊಕ್ಸೊ) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ. ಬಂಟ್ವಾಳ ತಾಲೂಕಿನ ಗ್ರಾಮವೊಂದರ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ವಯಸ್ಸಿನ ಬಾಲಕಿಯ ಇಚ್ಚೆಗೆ ವಿರುದ್ಧವಾಗಿ 2019ರ ಫೆ.11ರಂದು ಮಧ್ಯಾಹ್ನ 1ಕ್ಕೆ ಆರೋಪಿ ಉಳಿ ಗ್ರಾಮದ ಪುಲ್ಲೇರಿ ಮನೆಯ ಸತೀಶ್ ಪೂಜಾರಿ (35) ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ 2019ರ ಮಾರ್ಚ್ 22ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸೈದುಲ್ ಅಡಾವತ್ ಆರೋಪಿ ಸತೀಶ್ ಪೂಜಾರಿಯನ್ನು ಬಂಧಿಸಿ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ತನಿಖೆ ನಡೆಸಿ, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಉಪವಿಭಾಗಧಿಕಾರಿ ಕಚೇರಿಯ ಹೆಚ್‌ಸಿ ಸೀತರಾಮ ಹಾಗೂ ಪಿಸಿ ಸಫೀನಾ…
ಕಾಸರಗೋಡು: ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿ ಚಾಲಕರಿಗೆ ರಿವಾಲ್ವರ್ ತೋರಿಸಿ ಎರಡು ಲಾರಿಗಳನ್ನು ಅಪಹರಿಸಿದ ಘಟನೆ ಬುಧವಾರ ಕರ್ನಾಟಕ ಕೇರಳ ಗಡಿಯ ಮೀಯಪದವಿನಲ್ಲಿ ನಡೆದಿದ್ದು, ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಮಂಜೇಶ್ವರ ಪೊಲೀಸರು ಬೇಧಿಸಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ನಾಸಿಕ್ ನ ರಾಕೇಶ್ ಕಿಶೋರ್ (25), ಸೋಂಕಾಲಿನ ಹೈದರ್ ಅಲಿ (22), ಪೈವಳಿಕೆ ಕಳಾಯಿಯ ಸಯಾಫ್ (22), ಮೀಯಪದವು ಮುಹಮ್ಮದ್ ಸಫ್ವಾನ್ (23) ಬಂಧಿತರು. ಈ ವೇಳೆ ಮತ್ತಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಆರಂಭವಾಗಿದೆ. ಬಂಧಿತರಿಂದ ಅಪಹರಣಗೊಂಡ ಎರಡು ಲಾರಿ, ಪಿಸ್ತೂಲ್, ನಾಲ್ಕು ಸಜೀವ ಗುಂಡುಗಳು, ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ವಿವರ ಬುಧವಾರ ಸಂಜೆ 6 ಗಂಟೆಯ ವೇಳೆ ಮೀಯಪದವು ಬೆಜ್ಜದಲ್ಲಿ ಬರುತ್ತಿದ್ದ ಎರಡು ಲಾರಿಯನ್ನು ಪಿಸ್ತೂಲು ತೋರಿಸಿ ಅಡ್ಡಗಟ್ಟಿ ಕೆಳಗಿಳಿಸಿ ಮೊಬೈಲ್, ಹಣವನ್ನು ದೋಚಿ ಲಾರಿಗಳನ್ನು ಅಪಹರಿಸಿದ್ದರು. ಈ ಬಗ್ಗೆ ತಕ್ಷಣ ಮಾಹಿತಿ ಪಡೆದ ಮಂಜೇಶ್ವರ ಪೊಲೀಸರು ಲಾರಿಗಳನ್ನು ಬೆನ್ನಟ್ಟಿದ್ದಾಗ ಪೈವಳಿಕೆ ಕೊಮ್ಮಂಗಳ ಬಳಿ ಎರಡು…
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯಿಂದ 5 ಮತ್ತು 8ನೇ ತರಗತಿಯ ವಾರ್ಷಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರಕಟಿತ ವೇಳಾಪಟ್ಟಿಯಂತೆ ಮಾರ್ಚ್ 13ರಿಂದ 5 ಮತ್ತು 8ನೇ ತರಗತಿಯ ಪರೀಕ್ಷೆಗಳು ಆರಂಭಗೊಳ್ಳಲಿವೆ. ದಿನಾಂಕ 06-03-2023ಯ ಸೋಮವಾರದಿಂದ ದಿನಾಂಕ 10-03-2023ರ ಶುಕ್ರವಾರದವರೆಗೆ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಿರ್ವಹಿಸಲಾಗುತ್ತದೆ. ವಿಶೇಷ ಶಾಳೆಗಳ ವಿದ್ಯಾರ್ಥಿಗಳಿಗೆ ಮಂಡಲಿಯಿಂದ ಸರಬರಾಜು ಮಾಡುವ ಪ್ರಶ್ತೋತ್ತರ ಪತ್ರಿಕೆಗಳನ್ನೇ ಬಳಸಿ, ಶಾಲಾ ಹಂತದಲ್ಲಿ ಹಿಂದಿನ ಸಾಲುಗಳಲ್ಲಿ ನಡೆಸಿದಂತೆ ಮೌಲ್ಯಾಂಕನ ನಡೆಸುವುದು ದು ತಿಳಿಸಿದೆ. ಉಳಿದಂತೆ ಮಾ.13ರಿಂದ 18ರವರೆಗೆ ವಿಷಯವಾರು ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆಯನ್ನು ಸೆರೆ ಹಿಡಿಯಲು ಕಳೆದ ಮೂರು ದಿನಗಳಿಂದ ನಡೆದ ಕಾರ್ಯಾಚರಣೆ ಕೊನೆಗೂ ಯಶಸ್ಸು ಕಂಡಿದೆ. ಕಡಬ ಬಳಿಯ ಮೂಜೂರು ರಕ್ಷಿತಾರಣ್ಯದ ಕೊಂಬಾರು(ಮಂಡೆಕರ) ಎಂಬಲ್ಲಿ ಆನೆಯನ್ನು ಪತ್ತೆ ಹಚ್ಚಿ ಗನ್ ಮೂಲಕ ಆನೆಗೆ ಅರಿವಳಿಕೆ ನೀಡಲಾಗಿದೆ. ಫೆ.20 ಬೆಳಿಗ್ಗೆ ಕಾಡಾನೆ ದಾಳಿಯಿಂದ ಸ್ಥಳೀಯ ನಿವಾಸಿಗಳಾದ ರಂಜಿತಾ (21) ಮತ್ತು ರಮೇಶ್ ರೈ (52 ವ) ಮೃತಪಟ್ಟಿದ್ದರು. ಅಂದು ರಾತ್ರಿಯೇಮೈಸೂರು ದುಬಾರೆಯಿಂದ ಅಭಿಮನ್ಯು ಸೇರಿ 5ಆನೆಗಳನ್ನು ತರಲಾಗಿದ್ದು, ಫೆ.21 ರಂದು ಡ್ರೋನ್ ಕ್ಯಾಮರಾ ಬಳಸಿ ನರಹಂತಕ ಆನೆಯನ್ನು ಪತ್ತೆ ಹಚ್ಚಿದ್ದು, ದುಬಾರೆಯ ಆನೆಗಳ ಮೂಲಕ ಸೆರೆಹಿಡಿಯುವ ಕಾರ್ಯಾಚರಣೆಯು ರೆಂಜಲಾಡಿ ಗ್ರಾಮದ ತುಂಬೆ ರಕ್ಷಿತಾರಣ್ಯದಲ್ಲಿ ಆರಂಭಗೊಂಡಿತ್ತು. ಆದರೆ ನಿನ್ನೆ ಆನೆಗೆ ಅರಿವಳಿಕೆ ನೀಡುವ ಪ್ರಯತ್ನ ವಿಫಲಗೊಂಡಿತ್ತು. ಇಂದು ಸಂಜೆ ಮತ್ತೆ ಆನೆಯನ್ನು ಪತ್ತೆ ಹಚ್ಚಿ ಅರಿವಳಿಕೆ ಮದ್ದು ಶೂಟ್ ಮಾಡಿ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು;ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸೇರಿ 6 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ. ಶಶಿಕುಮಾರ್ ಅವರನ್ನು ರೈಲ್ವೇ ಇಲಾಖೆಯ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ. ಇದರ ಜೊತೆಗೆ ಬೆಂಗಳೂರು ಪಶ್ವಿಮ ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಆರ್.ಜೈನ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ವೈರ್ಲೆಸ್ ಎಸ್.ಪಿಯಾಗಿದ್ದ ಡಿ.ಕಿಶೋರ್ ಬಾಬು ಅವರನ್ನು ಗುಪ್ತದಳ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ, ಕೆಎಸ್ ಆರ್ ಪಿ ಬೆಂಗಳೂರು ಕಮಾಂಡೆಂಟ್ ಆಗಿರುವ ಕೆ.ವಂಶಿಕೃಷ್ಣ ಅವರನ್ನು ಬೆಂಗಳೂರು ವೈರ್ಲೆಸ್ ಎಸ್.ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಮುಹಮ್ಮದ್ ಸುಜೀತಾ ಎಂ.ಎಸ್. ಅವರನ್ನು ಬೆಂಗಳೂರು ಸಿಎಆರ್ ಡಿಸಿಪಿಯಿಂದ ಬೆಂಗಳೂರು ದಕ್ಷಿಣ ಸಂಚಾರ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅರುಣಾಂಶುಗಿರಿ ಅವರನ್ನು ಸಿಎಆರ್ ಬೆಂಗಳೂರು ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.ಬೆಳಗಾವಿ ಲೋಕಾಯುಕ್ತ ಎಸ್.ಪಿ. ಯಶೋಧಾ ವಂಟಗೋಡಿ ಅವರನ್ನು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಳಿಸಲಾಗಿದೆ.