ನವದೆಹಲಿ: ಎಲ್ಲಾ ಭಾಷಣಗಳು ದ್ವೇಷದ ಭಾಷಣವಲ್ಲ ಮತ್ತು ಯಾವ ಹೇಳಿಕೆಗಳು ಅಥವಾ ಭಾಷಣಗಳು ಆ ವ್ಯಾಖ್ಯಾನದಡಿಯಲ್ಲಿ ಬರುತ್ತವೆ ಎಂಬುದನ್ನು ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ದ್ವೇಷ ಭಾಷಣದ ಪ್ರಕರಣಗಳಲ್ಲಿ ಕ್ರಮಕ್ಕೆ ಒತ್ತಾಯಿಸುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ. ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಭಜರಂಗದಳ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಶಾಹೀನ್ ಅಬ್ದುಲ್ಲಾ ಅವರು ಅರ್ಜಿ ಸಲ್ಲಿಸಿದ್ದಾರೆ. ಇಂತಹ ಭಾಷಣಗಳು ಭಾರತದ ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುತ್ತವೆ ಎಂದು ಅವರ ಅರ್ಜಿಯಲ್ಲಿ ಹೇಳಲಾಗಿದೆ. ಇತ್ತೀಚೆಗೆ, ಬಜರಂಗದಳವು ಹರಿಯಾಣದ ಮೇವಾತ್ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು, ಅಲ್ಲಿ ಭಾಷಣಕಾರರು ‘ತಮ್ಮ ಧರ್ಮವನ್ನು ರಕ್ಷಿಸಲು’ ‘ತ್ರಿಶೂಲ’ (ತ್ರಿಶೂಲ) ಅನ್ನು ಬಳಸುವುದಾಗಿ ವಾಗ್ದಾನ ಮಾಡಿದರು. ‘ಹೇಳಿದ ಎಲ್ಲವೂ ದ್ವೇಷದ ಮಾತುಗಳಲ್ಲ’ ಎಂದು ಐಎಎನ್‌ಎಸ್ ವರದಿಯ ಪ್ರಕಾರ ಕೇಜ್ರಿವಾಲ್ ವಿರುದ್ಧದ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಾಧೀಶರು ಹೇಳಿದರು. ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ಪೀಠವು ದ್ವೇಷದ ವ್ಯಾಖ್ಯಾನವಿಲ್ಲದ ಕಾರಣ ಎಚ್ಚರಿಕೆ ವಹಿಸುವ…
Author: main-admin
ಪುತ್ತೂರು: ಬೊಲೆರೋ ವಾಹನವೊಂದು ಪಲ್ಟಿಯಾಗಿ ದ್ವಿಚಕ್ರ ವಾಹನದ ಮೇಲೆ ಬಿದ್ದ ಪರಿಣಾಮ ಬೈಕ್ ಸವಾರ ಸಾವನಪ್ಪಿದ ಘಟನೆ ಜತ್ತೂರು ಗ್ರಾಮದ ಕೆಮ್ಮಾರ ಎಂಬಲ್ಲಿ ಸೋಮವಾರ ನಡೆದಿದೆ. ಮೃತರನ್ನು ಕೊಯಿಲ ಗ್ರಾಮದ ಕಡೆಂಬ್ಯಾಲು ನಿವಾಸಿ ಕೊರಗಪ್ಪ ಗೌಡ (58) ಎಂದು ಗುರುತಿಸಲಾಗಿದೆ. ಕೃಷ್ಣಪ್ಪ ನಾಯ್ಕ ಚಲಾಯಿಸುತ್ತಿದ್ದ ಬೊಲೆರೋ ಪಿಕಪ್ ಕಡಬದಿಂದ ಬರುತ್ತಿದ್ದು ಈ ವೇಳೆ ಓಡ್ಲಾ ಎಂಬಲ್ಲಿ ದಿಢೀರ್ ಬ್ರೇಕ್ ಹಾಕಿದ್ದಾರೆ. ಪರಿಣಾಮವಾಗಿ ಬೊಲೆರೋ ಪಲ್ಟಿಯಾಗಿ ಕೊರಗಪ್ಪ ಅವರು ಚಲಾಯಿಸುತ್ತಿದ್ದ ಬೈಕ್ ಮೇಲೆ ಬಿದ್ದಿದೆ. ಇನ್ನು ಬೈಕ್ ಹಾಗೂ ಸವಾರ ಕೊರಗಪ್ಪ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಕೊರಗಪ್ಪ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸ್ವಲ್ಪ ಹೊತ್ತಿನಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪುತ್ತೂರು : ಕೆಎಸ್ ಆರ್ ಟಿಸಿ ನಿರ್ವಾಹಕಿಯೋರ್ವರಿಗೆ ಪ್ರಯಾಣಿಕನೋರ್ವ ಬಸ್ ನಲ್ಲಿಯೇ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಇಲ್ಲಿನ ಮಹಾವೀರ ಆಸ್ಪತ್ರೆ ಬಳಿ ಘಟನೆ ನಡೆದಿದ್ದು, ಮಂಗಳೂರು- ಪುತ್ತೂರು ಕೆಎಸ್ಆರ್ ಟಿಸಿ ಬಸ್ ನಲ್ಲಿ ಕರ್ತವ್ಯ ನಿರತರಾಗಿದ್ದ ನಿವಾರ್ಹಕಿ ವಿಜಯ ಎಂಬವರಿಗೆ ಅದೇ ಬಸ್ ನಲ್ಲಿದ್ದ ಪ್ರಯಾಣಿಕ ಹಸನ್ ಎಂಬಾತ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಬಸ್ ನಲ್ಲಿದ್ದ ವಿಕಲಾಂಗ ಪ್ರಯಾಣಿಕರೋರ್ವರಿಗೆ ಸೀಟು ಬಿಟ್ಟುಕೊಡುವಂತೆ ಕೇಳಿದಾಗ ಆಕ್ಷೇಪಿಸಿದ ಹಸನ್ ನನ್ನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವುದಾಗಿ , ಪುತ್ತೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ನಿರ್ವಾಹಕಿ ವಿಜಯ ಆರೋಪ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ನಿರ್ವಾಹಕಿಗೆ ಹಲ್ಲೆ ನಡೆಸಿದ ಹಸನ್ ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದೇ ಇದ್ದಲ್ಲಿ ಕೆಎಸ್ಆರ್ ಟಿಸಿ ಮಜ್ದೂರ್ ಸಂಘ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಸುಬ್ರಹ್ಮಣ್ಯ: ಕಡಬ ತಾಲೂಕಿನಲ್ಲಿ ಕಾಡಾನೆ ಹಾವಳಿ ನಿಯಂತ್ರಿಸುವ ಹಿನ್ನಲೆ ಕಾಡಾನೆ ಸೆರೆಗೆ ಕಾರ್ಯಾಚರಣೆಗೆ ಸಿದ್ಧತೆಗಾಗಿ ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ 5 ಆನೆಗಳು ಕಡಬ ತಾಲೂಕಿನ ರೆಂಜಿಲಾಡಿಗೆ ಆಗಮಿಸಿದೆ. ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಸಮೀಪ ಸೋಮವಾರ ಬೆಳಿಗ್ಗೆ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಕಾಡಾನೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ. ಕಾಡಾನೆ ಸೆರೆ ಹಿಡಿಯುವುದರಲ್ಲಿ ಪಳಗಿರುವ ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗೂ ಮಹೇಂದ್ರ ಎಂಬ ಸಾಕಾನೆಗಳು ಕಾರ್ಯಾಚರಣೆಗೆ ಬಂದಿದೆ. ಲಾರಿಗಳ ಮೂಲಕ ಆನೆಗಳು ಸೋಮವಾರ ರಾತ್ರಿ ಕಡಬಕ್ಕೆ ಆಗಮಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡ ಅಲ್ಲಲ್ಲಿ ವೀಕ್ಷಣೆ ನಡೆಸಿ, ಡ್ರೋನ್ ಬಳಸಿ ಕಾಡಾನೆಯ ಚಲನ ವಲನಗಳನ್ನು ಪತ್ತೆ ಹಚ್ಚಲಾಗುತ್ತಿದೆ.ಕಾಡಾನೆಯನ್ನು ಸೆರೆ ಹಿಡಿಯಲು ಸಾಕಾನೆಗಳ ಸಹಕಾರ ಪಡೆಯಲಾಗುತ್ತದೆ. ಒಂದು ಕಾಡಾನೆ ಇರುವ ಜಾಗವನ್ನು ಪತ್ತೆ ಹಚ್ಚುವ ಕೆಲಸ ನಡೆಸುತ್ತಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್, ಎಸಿಎಫ್ ಪ್ರವೀಣ್ ಕುಮಾರ್, ವಲಯ ಅರಣ್ಯಾಧಿಕಾರಿಗಳಾದ ಎನ್.ಮಂಜುನಾಥ್, ಆರ್.ಗಿರೀಶ್,…
ಮಂಗಳೂರು: ಕಾಮಗಾರಿಯೊಂದರ ಬಿಲ್ ಮಂಜೂರಾತಿ ಮಾಡಲೆಂದು ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ರೆಡ್ ಹ್ಯಾಂಡ್ ಆಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಅಭಿಯಂತರೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆಡಿದೆ. ಬೆಳ್ತಂಗಡಿಯ ಪರಿಶಿಷ್ಟ ಜಾತಿ ಮೆಟ್ರಿಕ್ ಬಳಿಕದ ಬಾಲಕರ ವಿದ್ಯಾರ್ಥಿ ನಿಲಯದ ಡಾರ್ಮಿಟರ್ ಹಾಲ್ ರಚನೆಯ ಟೆಂಡರ್ ಕಾಮಗಾರಿಯ ಬಿಲ್ ಮಂಜೂರಾತಿಗೆ ದ.ಕ.ಜಿಪಂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ತಾಂತ್ರಿಕ ವಿಭಾಗದ ಸಹಾಯಕ ಅಭಿಯಂತರೆ ಕುಮಾರಿ ರೂಪಾ 10 ಸಾವಿರ ರೂ. ಲಂಚದ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಗುತ್ತಿಗೆದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಫೆ.20 ರಂದು ಆರೋಪಿತೆ 8,000 ರೂ. ಲಂಚ ಸ್ವೀಕರಿಸುತ್ತಿರುವಾಗಲೇ ಸ್ಥಳದಲ್ಲಿಯೇ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ. ತಕ್ಷಣ ಆರೋಪಿತೆ ಕುಮಾರಿ ರೂಪಾರನ್ನು ದಸ್ತಗಿರಿ ಮಾಡಿರುವ ಲೋಕಾಯುಕ್ತ ಪೊಲೀಸರು ಲಂಚದ ಹಣವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೂಡಬಿದಿರೆ; ಮೊಬೈಲ್ ಕೊಡಲಿಲ್ಲ ಎಂದು ಅಪ್ರಾಪ್ತ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಾಲ್ಪಾಡಿ ಗ್ರಾಮದ ನಾಗಂದಡ್ಡದಲ್ಲಿ ನಡೆದಿದೆ ಉಮೇಶ್ ಪೂಜಾರಿ ಎಂಬವರ ಪುತ್ರಿ 10ನೇ ತರಗತಿ ವಿದ್ಯಾರ್ಥಿನಿ ಯುತಿ (15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಆದಿತ್ಯವಾರ ಯತಿಯ ತಾಯಿ ಮತ್ತು ತಂಗಿ ಶಿರ್ತಾಡಿಗೆ ಹೊರಟಿದ್ದರು.ಆದರೆ ಯತಿ ಹೋಗಲು ನಿರಾಕರಿಸಿದ್ದು, ಮೊಬೈಲ್ ಕೊಡುವಂತೆ ತಾಯಿಯಲ್ಲಿ ಹೇಳಿದ್ದಾರೆ.ಆದರೆ ತಾಯಿ ಮೊಬೈಲ್ ಈಗ ಕೊಡುವುದಿಲ್ಲ, ಶಿರ್ತಾಡಿಯಿಂದ ವಾಪಸು ಬಂದ ಮೇಲೆ ಕೊಡುತ್ತೇನೆ ಎಂದು ಹೇಳಿ ಹೋಗಿದ್ದರು. ಮಧ್ಯಾಹ್ನ ಮನೆಗೆ ವಾಪಸಾದಾಗ ಮನೆಯಲ್ಲಿ ಮಗಳು ಇರಲಿಲ್ಲ.ಹುಡುಕಾಡಿದಾಗ ಸಂಜೆ ವೇಳೆ ಮನೆ ಬಳಿ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು.
ಕಸ್ಟಮ್ಸ್ ಅಧಿಕಾರಿಗಳು 1 ಕೆ.ಜಿ. 625 ಗ್ರಾಂ ಚಿನ್ನ ವಶಕ್ಕೆ ಪಡೆದ ಘಟನೆ ಮಂಗಳೂರು ಏರ್ ಪೋರ್ಟ್ ನಲ್ಲಿ ನಡೆದಿದೆ. ಫೆಬ್ರವರಿ 1ರಿಂದ 15ರವರೆಗೆ ನಡೆಸಿದ ಕಾರ್ಯಾಚರಣೆಗಳಲ್ಲಿ ಅಧಿಕಾರಿಗಳು ದುಬೈ ಮತ್ತು ಬಹ್ರೇನ್ ನಿಂದ ಆಗಮಿಸಿದ ಐವರು ಪುರುಷ ಪ್ರಯಾಣಿಕರಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಈ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಳ್ಳಲಾದ ಚಿನ್ನದ ಮಾರುಕಟ್ಟೆ ಮೌಲ್ಯ 91 ಲಕ್ಷದ 35 ಸಾವಿರದ 850 ರೂಪಾಯಿ ಆಗಿದೆ. ಚಿನ್ನ ಮಾತ್ರವಲ್ಲದೇ ಭಾರತೀಯ ರೂಪಾಯಿ 6 ಲಕ್ಷದ 54 ಸಾವಿರದ 750 ರೂಪಾಯಿ ಮೌಲ್ಯದ ವಿದೇಶಿ ನೋಟುಗಳನ್ನು ಓರ್ವ ಪ್ರಯಾಣಿಕನಿಂದ ವಶಕ್ಕೆ ಪಡೆಯಲಾಗಿದೆ. ಚಿನ್ನವನ್ನು ಪೇಸ್ಟ್ ರೂಪದಲ್ಲಿ ಘನ ಗಮ್ ನೊಂದಿಗೆ ಬೆರೆಸಿ ಅಂಡಾಕಾರದ ಪ್ಯಾಕೆಟ್ ಗಳಾಗಿ ಮಾಡಿ ಗುದನಾಳದಲ್ಲಿ ಮರೆಮಾಚಿ, ಟ್ರಾಲಿ ಬ್ಯಾಗ್ ನ ಹ್ಯಾಂಡಲ್ ನಲ್ಲಿ ಮರೆಮಾಚಿದ್ದು, ರಟ್ಟಿನ ಪೆಟ್ಟಿಗೆಯಲ್ಲಿ ಪೇಸ್ಟ್ ರೂಪದಲ್ಲಿ ಮರೆಮಾಚಿದ್ದು ಸೇರಿ ವಿವಿಧ ರೂಪದಲ್ಲಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಹೆಚ್ಚಿನ…
ಬೆಳ್ತಂಗಡಿ: ತಾಲೂಕಿನ ಕೊಕ್ರಾಡಿಯಲ್ಲಿ ಬೈಕಿಗೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಉಜ್ವಲ್ ಹೆಗ್ಡೆ (19) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಮನೆಯಿಂದ ಮೂಡಬಿದ್ರೆಯ ಕಾಲೇಜಿಗೆಂದು ಹೊರಟಿದ್ದ ಉಜ್ವಲ್ ಚಲಾಯಿಸುತ್ತಿದ್ದ ಬೈಕಿಗೆ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಪಿಕಪ್ ವಾಹನ ಡಿಕ್ಕಿಹೊಡೆದಿದೆ. ಪಿಕಪ್ ಚಾಲಕ ಹರೀಶ್ ಪೂಜಾರಿ ಎಂಬವರು ಅಜಾಗರೂಕತೆಯಿಂದ ವಾಹನ ಚಲಾಯಿಸಿ ಬೈಕಿಗೆ ಡಿಕ್ಕಿ ಹೊಡೆದಿದ್ದು, ಹೊಡೆತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಉಜ್ವಲ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು
ಕಾರ್ಕಳ : ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮರಥೋತ್ಸವದ ಸಿಡಿಮದ್ದು ಪ್ರದರ್ಶನ ವೇಳೆ ಉಂಟಾದ ಅವಘಡದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಫೆ. 18ರ ರಾತ್ರಿ ಮಾಲೆ ಪಟಾಕಿ ಸಿಡಿಯುವ ವೇಳೆ ಅವಘಡವಾಗಿದ್ದು, ಇದರಿಂದ ಓರ್ವರು ಹಿರಿಯರು ಸೇರಿದಂತೆ ಮೂವರು ಮಕ್ಕಳಿಗೆ ಗಾಯವಾಗಿದೆ. ಗಾಯಗೊಂಡವರಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಲಾಗಿದ್ದು, ಅಂದೇ ಅವರು ಮನೆಗೆ ತೆರಳಿರುತ್ತಾರೆ. ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟ ಈ ದೇವಸ್ಥಾನದ ಜಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ದುರ್ಘಟನೆ ಸಂಭವಿಸಿದ ವೇಳೆ ಜನತೆ ದಿಕ್ಕಾಪಾಲಾಗಿ ಓಡಿದ್ದು ಈ ವೇಳೆ ಕೆಲವರು ಬಿದ್ದಿರುತ್ತಾರೆ. ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಇಷ್ಟೊಂದು ಭಕ್ತರು ಸೇರುವ ಕಾರಣ ಮುನ್ನೆಚ್ಚರಿಕೆಯಾಗಿ ಅಗ್ನಿಶಾಮಕ ದಳದವರು, ಪ್ರಥಮ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಬೇಕಿತ್ತು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಬೆಂಗಳೂರು : ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ (90) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ. ಎಸ್..ಕೆ. ಭಗವಾನ್ (ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್) ಕನ್ನಡ ಚಿತ್ರರಂಗದ ಒಬ್ಬ ಹಿರಿಯ ನಿರ್ದೇಶಕರು ಹಾಗೂ ನಿರ್ಮಾಪಕರು. ಮತ್ತೊಬ್ಬ ಹಿರಿಯ ನಿರ್ದೇಶಕ ದೊರೈರಾಜ್ ಅವರೊಡನೆ ಅವರ ಜೋಡಿ ದೊರೈ-ಭಗವಾನ್ ಎಂದೇ ಪ್ರಸಿದ್ಧ. ಇವರಿಬ್ಬರೂ ಸೇರಿ 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 1966ರಲ್ಲಿ ಎಂ.ಸಿ. ನರಸಿಂಹಮೂರ್ತಿಯವರೊಡಗೂಡಿ ಸಂಧ್ಯಾರಾಗ ಸಿನೆಮಾ ನಿರ್ದೇಶಿಸಿದರು. ನಂತರ ದೊರೈ-ಭಗವಾನ್ ಜೋಡಿಯು ರಾಜಕುಮಾರ್ ನಾಯಕನಟನಾಗಿರುವ ‘ಜೇಡರ ಬಲೆ’ ಚಿತ್ರವನ್ನು ನಿರ್ದೆಶಿಸಿತು. ಇದು ಕನ್ನಡದಲ್ಲಿ ಜೇಮ್ಸ್ ಬಾಂಡ್ ಮಾದರಿಯ ಮೊದಲ ಚಿತ್ರವಾಗಿತ್ತು. ಮುಂದಿನ ಅವರ ಎಲ್ಲಾ ಚಿತ್ರಗಳನ್ನು ಈ ನಿರ್ದೇಶಕದ್ವಯರು ಜೋಡಿಯಾಗೇ ನಿರ್ದೇಶಿಸಿದರು. ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ವಸಂತ ಗೀತ’, ‘ಆಪರೇಷನ್…