ಕಾರ್ಕಳ: ಗ್ರಾಹಕರನ್ನು ವಂಚಿಸಿದ ಚಿನ್ನಾಭರಣ ಅಂಗಡಿಯೊಂದರ ಮಾಲಕನಿಗೆ ಮತ್ತೊಂದು ಪ್ರಕರಣಕ್ಕೆ ಸಂಬಧಿಸಿದಂತೆ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್ ಅವರು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಹೊರಡಿಸಿದ್ದಾರೆ. ಕಾರ್ಕಳ ನಗರದ ಮಾರ್ಕೆಟ್ ರಸ್ತೆಯಲ್ಲಿ ಶ್ರೀದುರ್ಗಾ ಜುವೆಲ್ಲರ್‍ಸ್ ವ್ಯವಹಾರ ನಡೆಸುತ್ತಿದ್ದ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಶಿಕ್ಷೆಗೊಳಗಾದವನು.2009 ಅಕ್ಟೋಬರ್ 30ರಂದು ಸುರೇಶ್ ಕೆ ಸಾಲ್ಯಾನ್ ಇವರಿಂದ 8.580 ಗ್ರಾಂ ತೂಕದ ರೂ 17,160 ಮೌಲ್ಯದ ಹಳೆಯ ರೇಡಿಯೋ ಚೈನನ್ನು ಪಡೆದುಕೊಂಡು ಇದರಿಂದ ಹೊಸ ರೋಪ್ ಚೈನನ್ನು ಮಾಡಿಕೊಡುವುದಾಗಿ ನಂಬಿಸಿ ವಂಚನೆಗೈದಿದ್ದನು.2010 ಆಗಸ್ಟ್ ೨೦ರಂದು ಪ್ರೇಮಾ ಎಂಬವರಿಂದ 8.500 ಗ್ರಾಂ ತೂಕದ ರೂ. 17,000 ಮೌಲ್ಯದ ಹಳೆ ಡಿಸೈನಿನ ಚಿನ್ನದ ಚೈನನ್ನು ಪಡೆದುಕೊಂಡು ಇದರಿಂದ ೨೪ ಇಂಚು ಉದ್ದದ ಕಟ್ಟಿಂಗ್ ಹವಳದ ಹೊಸ ಸರವನ್ನು ಮಾಡಿಕೊಡುವುದಾಗಿ ನಂಬಿಸಿ ವಂಚನೆಗೈದಿದ್ದನು.2010 ಆಗಸ್ಟ್ 20ರಂದು ವಸಂತಿ ಎಂಬವರಿಂದ 8 ಗ್ರಾಂ ತೂಕದ ರೂ. 16,000 ಮೌಲ್ಯದ ಹಳೆಯ ಚಿನ್ನದ ಚಕ್ರಸರವನ್ನು ಪಡೆದುಕೊಂಡು ಅದರಿಂದ ಹೊಸ ರೇಡಿಯೋ ಚೈನ್ ಮಾಡಿಕೊಡುವುದಾಗಿ ನಂಬಿಸಿ…
Author: main-admin
ರಾಜ್ಯದ ಗ್ರಾಮ ಪಂಚಾಯಿತಿ ನೌಕರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ಗ್ರಾಮ ಪಂಚಾಯಿತಿ ನೌಕರರು ಸರ್ಕಾರಿ ನೌಕರರಾಗಿರುವುದಿಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವರು, ಗ್ರಾಮಪಂಚಾಯಿತಿ ನೌಕರರು ಸರ್ಕಾರಿ ನೌಕರರಾಗುವುದಿಲ್ಲ. ಸದರಿ ನೌಕರರು ಸ್ಥಳೀಯ ಪ್ರಾಧಿಕಾರವಾದ ಗ್ರಾಮ ಪಂಚಾಯಿತಿಯ ನೌಕರರಾಗಿದ್ದು, ಸಿ ಮತ್ತು ಡಿ ದರ್ಜೆ ನೌಕರರೆಂದು ಪರಿಗಣಿಸಿ ಸರ್ಕಾರಿ ನೌಕರರಂತೆ ವೇತನ ಶ್ರೇಣಿ ನಿಗದಿಪಡಿಸಲು ಆಡಳಿತಾತ್ಮಕವಾಗಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದ ಮಾದರಿ, ನೇಮಕಾತಿ ವಿಧಾನ ಮತ್ತು ವೇತನ ಶ್ರೇಣಿ ನಿಗದಿಪಡಿಸಿದ್ದು, ಅದರಂತೆ ಮಂಜೂರಾದ ಹುದ್ದೆಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನೆ ಪಡೆದು ಸ್ಥಳೀಯ ಪ್ರಾಧಿಕಾರದ ಗ್ರಾಮಪಂಚಾಯಿತಿ ಖಾಯಂ ನೌಕರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಪುತ್ತೂರು:ಕಾರು ನಿಯಂತ್ರಣ ಕಳೆದುಕೊಂಡು ಎರಡು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು 50 ಅಡಿ ಆಳದ ತೋಟಕ್ಕೆ ಬಿದ್ದು ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಸಂಟ್ಯಾರು ಬಳಿ ನಡೆದಿದೆ. ನಿಡ್ಪಳ್ಳಿ ಗ್ರಾ.ಪಂ.ನ ಬಿಜೆಪಿ ಬೆಂಬಲಿತ ಸದಸ್ಯ ಮುರಳೀಧರ್ ಭಟ್ ಮೃತರು ಎಂದು ಗುರುತಿಸಲಾಗಿದೆ.ಇವರು ಬೆಟ್ಟಂಪಾಡಿಯ ದಿಲೀಪ್ ಕುಮಾರ್‌ರಾವ್, ಶಶಿಕುಮಾರ್, ನವನೀತ್ ಜೊತೆ ಕಾರಿನಲ್ಲಿ ಬೆಟ್ಟಂಪಾಡಿ ಕಡೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.ಆದರೆ ಮುರಳೀಧರ್ ಭಟ್ ನಿಧನರಾಗಿದ್ದಾರೆ.
ಬೆಂಗಳೂರು : ಕುಡಿಯಲು ಹಣ ನೀಡದ ತಾತನನ್ನೇ ಮೊಮ್ಮಗ ಕೊಂದ ಘಟನೆ ಬೆಂಗಳೂರಿನ ಕಮ್ಮನಹಳ್ಳಿ ಸ್ಲಮ್ನಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಜೋಸೆಫ್ (54) ಎಂದು ಗುರುತಿಸಲಾಗಿದೆ. ದಿನನಿತ್ಯ ಹಣಕ್ಕಾಗಿ ತಾತನೊಂದಿಗೆ ಜಗಳ ಮಾಡುತ್ತಿದ್ದ ಮೊಮ್ಮಗ ದೊಣ್ಣೆಯಿಂದ ಹಲ್ಲೆ ನಡೆಸಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಪ್ರಕರಣ ಸಂಬಂಧ ಆರೋಪಿ ಆಯಂಟೊನಿಯನ್ನು ಬಂಧಿಸಿರುವ ಬಾಣಸವಾಡಿ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರತಿನಿತ್ಯ ಕುಡಿದು ಬಂದು ಜಗಳವಾಡುತ್ತಿದ್ದ ಆಯಂಟೊನಿ ತಾತನೊಂದಿಗೆ ಜಗಳ ಮಾಡುತ್ತಿದ್ದನು. ತನಿಖೆ ಕೈಗೊಂಡ ಪೊಲೀಸರು ಪರಾರಿಯಾಗುತ್ತಿದ್ದ ಆಯಂಟೊನಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಮೂಡಿಗೆರೆ;ಯುವಕನನ್ನು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ ಆರೋಪದ ಮೇಲೆ ಮೂಡಿಗೆರೆ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಮೂಡಿಗೆರೆ ಪೊಲೀಸ್ ಠಾಣೆಯ ಪೇದೆಗಳಾದ ವಸಂತ್, ಲೋಹಿತ್ ಅಮಾನತುಗೊಂಡವರಾಗಿದ್ದಾರೆ.ಇದರ ಜೊತೆಗೆಮೂಡಿಗೆರೆ ಠಾಣೆಯ ಸಬ್ ಇನ್ ಸ್ಪೆಕ್ಟರ್ ಆದರ್ಶ್ ವಿರುದ್ಧ ಇಲಾಖೆ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ. ಕಳ್ಳತನದ ಆರೋಪದ ದೂರಿನನ್ವಯ ಮೂಡಿಗೆರೆ ಠಾಣೆಯ ಪೊಲೀಸರು ದಾರದಹಳ್ಳಿ ಗ್ರಾಮದ ಮಂಜು ಎಂಬವರನ್ನು ಠಾಣೆಗೆ ಕರೆದೊಯ್ದು ಥಳಿಸಿದ್ದಾರೆಂದು ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು.
ಕಾಪು: ರಾಷ್ಟ್ರೀಯ ಹೆದ್ದಾರಿ 66 ಕಟಪಾಡಿ ಮೂಡಬೆಟ್ಟು ಬಳಿ ಸ್ಕೂಟರಿನಲ್ಲಿ ಚಲಾಯಿಸುತ್ತಿದ್ದ ಸಹಸವಾರೆಯ ಎಡ ಕಾಲಿಗೆ ಬಸ್ಸಿನ ಹಿಂಬದಿ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಬಿದ್ದು ಹಿಂಬದಿಯಿದ್ದ ಯುವತಿ ಸಾವನ್ನಪ್ಪಿ, ಸವಾರ ಗಾಯಗೊಂಡ ಘಟನೆ ನಡೆದಿದೆ. ಮೃತ ಯುವತಿಯನ್ನು ರೋಶನಿ ಡಿಸೋಜಾ ಎಂದು ಗುರುತಿಸಲಾಗಿದೆ.ಉಡುಪಿ ಮಂಗಳೂರು ರಸ್ತೆಯಲ್ಲಿ ಮಂಗಳೂರು ಕಡೆಗೆ ರಸ್ತೆಯ ಬಲಬದಿಯಲ್ಲಿ ಡಿವೈಡರ್ ಪಕ್ಕದಲ್ಲಿ ಸ್ಕೂಟರ್ ಹೋಗುತ್ತಿದ್ದಾಗ ಉಡುಪಿ ಕಡೆಯಿಂದ ಬಂದ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ನಿಲ೯ಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದು ಏಕಾಏಕಿಯಾಗಿ ಬಸ್ಸನ್ನು ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಸ್ಕೂಟರ್ ಹಿಂದೆ ಕುಳಿತಿದ್ದ ರೋಶನಿಯವರ ಎಡ ಕಾಲಿಗೆ ಬಸ್ಸಿನ ಹಿಂಬದಿ ಡಿಕ್ಕಿ ಹೊಡೆದು ಬಸ್ಸನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ.ಇನ್ನು ಬಸ್ಸು ರೋಶನಿಯ ಕಾಲಿಗೆ ಡಿಕ್ಕಿ ಹೊಡೆದ ಕಾರಣ ಸ್ಕೂಟರ್ ನಿಯಂತ್ರಣ ತಪ್ಪಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ರೋಶನಿ ತಲೆಗೆ…
ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃಷ್ಣಾಪುರದ ಖಾಸಗಿ ಶಾಲಾ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಏಳನೇ ತರಗತಿ ಓದುತ್ತಿದ್ದ ಕಾಟಿಪಳ್ಳದ ಹರ್ಷಿತ್ (13) ಮೃತ ವಿದ್ಯಾರ್ಥಿ. ಪ್ರತೀ ವಾರದ ಕೊನೆಯಲ್ಲಿ ಸೂರಿಂಜೆಯಲ್ಲಿರುವ ತನ್ನ ಅಜ್ಜನ ಮನೆಗೆ ಹೋಗುವುದು ವಾಡಿಕೆ. ಈ ಬಾರಿಯೂ ಶಾಲೆ ಮುಗಿಸಿ ಶನಿವಾರ ತೆರಳಿದ್ದ ಹರ್ಷಿತ್ ರವಿವಾರ ಮುಂಜಾನೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈತನ ತಂದೆ ಸುಧಾಕರ ದೇವಾಡಿಗ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಟೀಲು ಸಮೀಪದ ನಿಡ್ಡೋಡಿಯಲ್ಲಿ ಬಾವಿಯೊಳಗೆ ಬಿದ್ದಿದ್ದ ಸುಮಾರು ಒಂದು ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತಜ್ಞ ವೈದ್ಯರು ಮತ್ತು ಸ್ಥಳೀಯರ ನೆರವಿನಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಾ ಮೇಘನಾ ಪೆಮ್ಯಯ್ಯ, ಡಾ.ಯಶಸ್ವಿ ನಾರಾವಿ, ಡಾ ಪೃಥ್ವಿ ಮತ್ತು ಡಾ. ನಫೀಸಾ ನೇತೃತ್ವದ ಮಂಗಳೂರಿನ ಚಿಟ್ಟೆಪಿಲಿ ರಕ್ಷಣಾ ತಂಡವು ಅರಣ್ಯ ಅಧಿಕಾರಿಗಳು ಮತ್ತು ಸ್ಥಳೀಯರ ಸಹಾಯದಿಂದ ಚಿರತೆಯನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ತುಂಬಾ ಆಳವಾಗಿದ್ದ ಬಾವಿಯ ತಳಭಾಗದಲ್ಲಿ ಮಣ್ಣು ಜರಿದು ಬಿದ್ದು ಗುಹೆ ನಿರ್ಮಾಣವಾಗಿತ್ತು. ಅದೇ ಗುಹೆಯಲ್ಲಿ ಅಡಗಿದ್ದ ಚಿರತೆಯನ್ನು ತಜ್ಞ ವೈದ್ಯರಾದ ಡಾ. ಮೇಘನಾ ಬೋನಿನಲ್ಲಿ ಇಳಿದು ಬಂದೂಕಿನ ಮೂಲಕ ಅರಿವಳಿಕೆ ಔಷಧಿಯನ್ನು ಪ್ರಯೋಗಿಸಿದ್ದಾರೆ. ಬಳಿಕ ಬೋನಿನ ಮೂಲಕ ಬಾವಿಯಿಂದ ಚಿರತೆಯನ್ನು ಮೇಲಕ್ಕೆ ತರಲಾಗಿದೆ.
ಪುತ್ತೂರು: ಪುತ್ತೂರು ನಗರ ಠಾಣೆಯಲ್ಲಿ 2015ರಲ್ಲಿ ಚೆಕ್ ಅಮಾನ್ಯ ಪ್ರಕರಣದಲ್ಲಿ ವಾರೆಂಟ್ ಜಾರಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಬಂಧಿತನನ್ನು ಶಾಂತಿಗೋಡು ಗ್ರಾಮದ ಅಕ್ಷಿತ್ ಶೆಟ್ಟಿ ಎಂದು ಗುರುತಿಸಲಾಗಿದೆ.ಅಕ್ಷಿತ್ ಶೆಟ್ಟಿಯನ್ನು ಪುತ್ತೂರು ನಗರ ಠಾಣಾ ಪರಮೇಶ್ವರ ಮತ್ತು ಪಿ ಸಿ ಗಿರಿಪ್ರಶಾಂತ್ ಅವರು ಇಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಡಬ : ಕಾರು ಹಾಗೂ ಕೆಎಸ್ ಆರ್ ಟಿಸಿ ಬಸ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮಗುವೊಂದು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಎಂಬಲ್ಲಿ ನಡೆದಿದೆ. ಮರ್ಧಾಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಿಯಾ ಕಾರು ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಮರ್ಧಾಳ ಸಮೀಪದ ಐತ್ತೂರು ಗ್ರಾಮ ಪಂಚಾಯತ್ ಎದುರು ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಪುತ್ತೂರಿಗೆ ಕರೆದೊಯ್ಯಲಾಗಿದೆ. ಕಾರಿನಲ್ಲಿದ್ದವರು ಬೆಂಗಳೂರು ಮೂಲದವರೆಂದು ಹೇಳಲಾಗುತ್ತಿದೆ.