ಬೆಂಗಳೂರು : ಬೆಂಗಳೂರಿನಲ್ಲಿ ಐಎಸ್ ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ನಡೆಸಿಅಲ್ ಖೈದಾ ಉಗ್ರ ಸಂಘಟನೆ ಜೊತೆಗೆ ಸಂಪರ್ಕದಲ್ಲಿದ್ದ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಧಣಿಸಂದ್ರದ ಮಂಜುನಾಥ ನಗರದಲ್ಲಿ ಐಎಸ್ ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಂದ ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ಶಂಕಿತ ಭಯೋತ್ಪಾದಕ ಆರೀಫ್ ನನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಶಂಕಿತ ಉಗ್ರ ಆರೀಫ್ ಅಲ್ ಖೈದಾ ಉಗ್ರ ಸಂಘಟನೆ ಜೊತೆಗೆ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ಸದ್ಯ ಐಎಸ್ ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಅಧಿಕಾರಿಗಳು ಆರೀಫ್ ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.
Author: main-admin
ಮಸೀದಿ ಪ್ರವೇಶಿಸಲು ಮುಸ್ಲಿಂ ಮಹಿಳೆಯರಿಗೆ ಯಾವುದೇ ರೀತಿಯ ನಿರ್ಬಂಧ ಇರಬಾರದು. ಹಾಗೇ ನಿರ್ಬಂಧವನ್ನು ಹೇರಿದ್ದಲ್ಲಿ ಅದನ್ನು ಅಕ್ರಮ ಎಂದು ಘೋಷಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯ ಕುರಿತಂತೆ ಸದ್ಯ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸ್ಪಷ್ಟನೆ ನೀಡಿದೆ. ಫೆಬ್ರುವರಿ 2020ರಲ್ಲಿ ವಕೀಲರಾದ ಸಂದೀಪ್ ತಿವಾರಿ ಮತ್ತು ರಾಮೆಶ್ವರ್ ಗೋಯಲ್ ಅವರ ಸುಪ್ರೀಂಕೋರ್ಟ್ಗೆ ಫರ್ಹಾ ಅನ್ವರ್ ಶೇಖ್ ಅವರು ಈ ಕುರಿತಾಗಿ ಅರ್ಜಿ ಸಲ್ಲಿಸಿದ್ದರು. ಮಸೀದಿ ಪ್ರವೇಶಕ್ಕೆ ಇರುವ ನಿರ್ಬಂಧವನ್ನು ಅಸಂವಿಧಾನಿಕ ಜೊತೆಗೆ ಅಕ್ರಮ ಎಂದು ಘೋಷಿಸಬೇಕೆಂದು ಮನವಿ ಸಲ್ಲಿಸಿದ್ದರು. ಇದಕ್ಕೆ ಕಾರಣವನ್ನು ಕೂಡ ಅರ್ಜಿದಾರರು ನೀಡಿದ್ದು, ಈ ನಿರ್ಬಂಧವು ಎಲ್ಲ ಭಾರತೀಯರಿಗೆ ಸಮಾನತೆ, ತಾರತಮ್ಯ ಇಲ್ಲದ ಬದುಕು ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಖಚಿತಪಡಿಸುವ ಸಂವಿಧಾನದ 14, 15, 21, 25 ಮತ್ತು 29ನೇ ವಿಧಿಗಳನ್ನು ಉಲ್ಲಂಘಿಸುತ್ತವೆ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು.ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ಅಥವಾ ಪ್ರವಾದಿ ಮೊಹಮದ್ ಪೈಗಂಬರ್ ಅವರ ವಾಣಿಗಳಲ್ಲಿ ಮಹಿಳೆಯರಿಗೆ ಮಸೀದಿ ಪ್ರವೇಶ…
ಹರಿಯಾಣ : ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರನ್ನು ರೋಗಿಗಳು ಗುರುತಿಸಲು ಸುಲಭವಾಗಲು ಹರಿಯಾಣ ಸರ್ಕಾರ ಹೊಸ ಡ್ರೆಸ್ ಕೋಡ್ ನೀತಿಯನ್ನು ಜಾರಿಗೆ ತಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಏಕರೂಪತೆಯನ್ನು ತರಲು ಆಸ್ಪತ್ರೆಯ ಸಿಬ್ಬಂದಿ ಡೆನಿಮ್ ಜೀನ್ಸ್, ಪಲಾಝೋ ಪ್ಯಾಂಟ್, ಬ್ಯಾಕ್‌ಲೆಸ್ ಟಾಪ್ಸ್ ಹಾಗೂ ಸ್ಕರ್ಟ್ಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಮಹಿಳಾ ವೈದ್ಯರು ಮೇಕಪ್ ಹಾಗೂ ಭಾರವಾದ ಆಭರಣಗಳನ್ನು ಧರಿಸುವಂತಿಲ್ಲ ಮಾತ್ರವಲ್ಲದೇ ಉಗುರುಗಳನ್ನು ಉದ್ದವಾಗಿ ಬೆಳೆಸುವಂತಿಲ್ಲ. ಪುರುಷರು ತಮ್ಮ ಕಾಲರ್‌ಗಿಂತಲೂ ಉದ್ದವಾಗಿ ಕೂದಲನ್ನು ಬೆಳೆಸುವಂತಿಲ್ಲ ಎನ್ನಲಾಗಿದೆ. ‘ಡ್ರೆಸ್ ಕೋಡ್ ಅನ್ನು ಅನುಸರಿಸದ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ವೈದ್ಯರನ್ನು ರೋಗಿಗಳು ಗುರುತಿಸಲು ಸುಲಭವಾಗಲು ಈ ಹೊಸ ರೂಲ್ಸ್ ಜಾರಿಗೆ ಮಾಡಲಾಗಿದೆ ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಮಾಹಿತಿ ನೀಡಿದ್ದಾರೆ.
ಮಂಗಳೂರು :ಪ್ರೇಮಿಗಳ ದಿನಾಚರಣೆಗೆ ಅವಕಾಶ ನೀಡಬಾರದಂದು ಎಂದು ಒತ್ತಾಯಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಿಂದು ಜನಜಾಗೃತಿ ಸಮಿತಿಯ ಮಂಗಳೂರು ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು. ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯಂದು ಪ್ರೀತಿ,ಪ್ರೇಮದ ಹೆಸರಿನಲ್ಲಿ ಸಮಾಜದಲ್ಲಿ ಅನಾಚಾರಗಳು, ಅತ್ಯಾಚಾರಗಳು ಹೆಣ್ಣುಮಕ್ಕಳನ್ನು ಹೆಚ್ಚಾಗುತ್ತಿದೆ. ಹೆಣ್ಮಕ್ಕಳನ್ನು ಚುಡಾಯಿಸುವುದು, ಕೆಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಘಟನೆಗಳು ನಡೆಯುತ್ತಿದೆ. ಇದು ನಮ್ಮ ಹಿಂದು ಸಂಸ್ಕೃತಿ ಅಲ್ಲ. ಹೀಗಾಗಿ ಇಂತಹ ಪ್ರೇಮಿಗಳ ದಿನಾಚರಣೆಗೆ ಅವಕಾಶ ನೀಡಬಾರದಂದು ಎಂದು ಒತ್ತಾಯಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಿಂದು ಜನಜಾಗೃತಿ ಸಮಿತಿಯ ಮಂಗಳೂರು ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಸಮಿತಿಯ ಭವ್ಯ ಗೌಡ ಅವರು, ಹಿಂದೂ ಸಂಸ್ಕೃತಿ ಅಲ್ಲದ ಪ್ರೇಮಿಗಳ ದಿನಾಚರಣೆಗೆ ಅವಕಾಶ ನೀಡಬಾರದು. ಯುವಜನತೆ ಇಂದು ದಾರಿ ತಪ್ಪುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲೂ ಕೂಡಾ ವಿಶೇಷ ಪೊಲೀಸ್ ದಳ ರಚನೆ ಮಾಡಬೇಕು ಎಂದರು. 2019ರ ಫೆಬ್ರವರಿ 14ರಂದೇ ಪುಲ್ವಾಮಾ ದಾಳಿ ನಡೆದು ನಾವು ಯೋಧರನ್ನು ಕಳೆದುಕೊಂಡಿದ್ದೇವೆ. ಅದೇ ದಿನವನ್ನು…
ಮಂಗಳೂರು : ‘ಪೊಲೀಸ್ ಅಧಿಕಾರಿಗಳ ಭ್ರಷ್ಟಾಚಾರದ ಕುರಿತು ನಿರ್ದಿಷ್ಟ ಪ್ರಕರಣದ ಬಗ್ಗೆ ಪ್ರಾಮಾಣಿಕವಾಗಿ ದೂರು ನೀಡಿದರೆ ಆ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಡಿಜಿಪಿ (ಕಾನೂನು ಸುವ್ಯವಸ್ಥೆ ) ಅಲೋಕ್ ಕುಮಾರ್ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಪೊಲೀಸ್ ಕಾರ್ಯನಿರ್ವಹಣೆಗೆ ಸಂಬಂಧಿಸಿ ಸಾರ್ವಜನಿಕರ ಕುಂದುಕೊರತೆ ಆಲಿಸಿದ ಬಳಿಕ ಅವರು ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದರು. ‘ಪೊಲೀಸ್ ಅಧಿಕಾರಿಗಳ ವಿರುದ್ಧ ಎಷ್ಟು ಮಂದಿ ಆರೋಪ ಮಾಡಿದ್ದಾರೆ ಎನ್ನುವುದು ನಮಗೆ ಮುಖ್ಯವಲ್ಲ. ಆ ಆರೋಪಗಳನ್ನು ನಿರ್ದಿಷ್ಟಪಡಿಸಿದರೆ ತನಿಖೆ ನಡೆಸಬಹುದು. ಪೊಲೀಸ್ ಅಧಿಕಾರಿಗಳ ವಿರುದ್ಧ ನಿರ್ದಿಷ್ಟ ದೂರುಗಳಿದ್ದರೆ ನೀಡಬಹುದು. ಇದೇ 11ರಂದು (ಶುಕ್ರವಾರ) ಬೆಳಿಗ್ಗೆೆ 11ಕ್ಕೆ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆಯುವ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲೂ ದೂರು ನೀಡಬಹುದು’ ಎಂದರು. ಜಿಲ್ಲೆೆಯಲ್ಲಿ ಕೋಮು ಆಧರಿತ ಕೊಲೆಗಳ ತಡೆಗೆ ಕೈಗೊಂಡ ಕ್ರಮಗಳ ಕುರಿತು ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ‘ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್, ಬಂದರ್, ಉಳ್ಳಾಲ ಠಾಣೆಗಳ…
ಬೆಂಗಳೂರು: ಇತ್ತೀಚೆಗೆ ಜೈಲು ಶಿಕ್ಷೆಗೆ ಗುರಿಯಾಗಿರುವ ಅನುಭವ ಖ್ಯಾತಿಯ ನಟಿ ಅಭಿನಯ ಹಾಗೂ ಆಕೆಯ ಕುಟುಂಬದ ಮೇಲೆ ಲುಕೌಟ್ ನೋಟಿಸ್ ಜಾರಿಯಾಗಿದೆ. ಅತ್ತಿಗೆ ವರಲಕ್ಷ್ಮಿ ಅವರು ನಟಿ ಅಭಿನಯ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು ಮಾಡಿದ್ದರು. ಅಭಿನಯ ಕುಟುಂಬ ವರದಕ್ಷಿಣೆ ಹಣ ಪಡೆದಿದ್ದಲ್ಲದೆ ಲಕ್ಷ್ಮಿದೇವಿಯವರನ್ನು ಪೋಷಕರ ಮನೆಗೆ ಅಟ್ಟಿದ್ದರು. 80 ಸಾವಿರ ರೂ. ನಗದು ಹಾಗೂ 250 ಗ್ರಾಂ ಚಿನ್ನಾಭರಣ ವರದಕ್ಷಿಣೆ ರೂಪವಾಗಿ ಪಡೆದಿರುವುದು ಕೂಡ ಸಾಬೀತಾಗಿತ್ತು. ಸೆಷನ್ಸ್ ಕೋರ್ಟ್ ಅಭಿನಯ, ತಾಯಿ ಹಾಗೂ ಸಹೋದರನಿಗೆ ಜೈಲು ಶಿಕ್ಷೆ ವಿಧಿಸಿತ್ತು. ಯಾವಾಗ ಜೈಲು ಶಿಕ್ಷೆ ಪ್ರಕಟವಾಯಿತೋ, ಅಂದಿನಿಂದ ಅಭಿನಯ ಮತ್ತು ಕುಟುಂಬದ ಸದಸ್ಯರು ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ. ಈ ಮೊದಲು ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಅಭಿನಯ, ಸಹೋದರ ಹಾಗೂ ತಾಯಿ ಹೈಕೋರ್ಟ್‌ಗೆ ಹೋಗಿದ್ದರು. ಆದರೆ ಹೈಕೋರ್ಟ್ ಸಹ ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆ ಆರೋಪಿಗಳನ್ನು ಬಂಧಿಸಬೇಕಿತ್ತು. ಆದರೆ ಪೊಲೀಸರ ಕೈಗೆ ಅವರು…
ಬೆಂಗಳೂರು: 17 ವರ್ಷದ ಕಬಡ್ಡಿ ಆಟಗಾರ್ತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ. ಮೃತರನ್ನು ಹುಬ್ಬಳ್ಳಿ ಮೂಲದ ಸಂಗೀತಾ ಎಂದು ಗುರುತಿಸಲಾಗಿದೆ. ಆಕೆ ಖಾಸಗಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದಳು. ಬಳಗಾರನಹಳ್ಳಿ ನಿವಾಸಿಯಾದ ಸಂಗೀತಾ ಅವರು ಕ್ರೀಡಾ ಕೂಟದ ಭಾಗವಾಗಿ ಕಬಡ್ಡಿ ಪಂದ್ಯದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದರು. ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವಳು ತುಂಬಾ ಫಿಟ್ ವಿದ್ಯಾರ್ಥಿಯಾಗಿರುವುದರಿಂದ ಈ ಘಟನೆಯು ಆಘಾತವನ್ನು ಉಂಟುಮಾಡಿತು.
ಸುಳ್ಯದ ಪುರಭವನದಲ್ಲಿ ನಡೆಯಬೇಕಾಗಿದ್ದ ಮದುವೆಯೊಂದು ವರ ಬಾರದ ಕಾರಣ ರದ್ದುಗೊಂಡ ಘಟನೆ ವರದಿಯಾಗಿದ್ದು , ವರನ ಮೊದಲ ಪತ್ನಿ ಗಂಡನ ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ನಡೆದಿದೆ. ಸುಳ್ಯದ ಉಬರಡ್ಕ ಗ್ರಾಮದ ಯುವತಿಗೆ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಯುವಕನೊಂದಿಗೆ ಮದುವೆ ನಿಗದಿಯಾಗಿತ್ತು. ಫೆ.9ರಂದು ಕೆ.ವಿ.ಜಿ. ಪುರಭವನದಲ್ಲಿ ಮದುವೆ ನಡೆಯಬೇಕಾಗಿತ್ತು. ಮದುಮಗನ ಕಡೆಯ ಬಂದುಮಿತ್ರರು ಆಗಮಿಸಿದ್ದು ಟೌನ್‌ಹಾಲ್ ಅಲಂಕಾರವೂ ನಡೆದಿತ್ತು. ಫೆ.8ರಂದು ವಧುವಿನ ಮನೆಯಲ್ಲಿ ಡಿ.ಜೆ. ಅಳವಡಿಸಿ ಮದುವೆ ಸಂಭ್ರಮ ಕಳೆಗಟ್ಟಿತ್ತು. ವಧುವಿನ ಕಡೆಯವರು ಮದುವೆಗಾಗಿ ಹಾಲ್ ಗೆ ಆಗಮಿಸಿ ಮದುವೆ ಸಿದ್ಧತೆ ನಡೆಸುತ್ತಿದ್ದರು. 500 ಮಂದಿಗೆ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಇದ್ದಕ್ಕಿದ್ದಂತೆ ವರ ಕಾಣುತ್ತಿಲ್ಲ ಎಂದು ಮಾಹಿತಿ ಬಂದಿದ್ದು ಮದುಮಗನ ಫೋನ್ ನಂಬರಿಗೆ ಕರೆ ಮಾಡಿದಾಗ ಸ್ವಿಚ್‌ಆಫ್ ಆಗಿತ್ತು. ಹೀಗಾಗಿ ವಧುವಿನ ಕಡೆಯವರು ಕಂಗಾಲಾಗಿದ್ದರು. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆಯಿಂದ ವರನಿಗೆ ಈ ಹಿಂದೆ ಒಂದು ಮದುವೆಯಾಗಿದ್ದು, ಆತನ…
ಮಂಗಳೂರು : ಫಾಝಿಲ್ ಹತ್ಯೆ ಆರೋಪಿಗಳಿಗೆ ನೆರವು ನೀಡುವಂತೆ ವ್ಯಕ್ತಿಯೊಬ್ಬ ಕರೆ ಮಾಡಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆಬ್ರವರಿ 2ರಂದು ಬೆಳಿಗ್ಗೆ 11.40ರ ಸಮಯದಲ್ಲಿ ನಾನು ಕೋಟೆಕಾರ್ ಗ್ರಾಮದ ಮಾಡೂರು ಸೊವುರ್ ಎಂಬಲ್ಲಿ ಇದ್ದಾಗ ಹರ್ಷಿತ್ ಎಂಬಾತ ಮೊಬೈಲ್‌ನಿಂದ ಕರೆ ಮಾಡಿದ್ದ. ಸುರತ್ಕಲ್‌ನಲ್ಲಿ ಫಾಝಿಲ್ ಎಂಬಾತನನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಜಾಮೀನಿನಲ್ಲಿ ಹೊರಗೆ ಬಂದಿದ್ದೇನೆ. ನನಗೆ ಮತ್ತು ಜೈಲಿನೊಳಗೆ ಇರುವವರಿಗೆ ನೀವು ಹಣದ ಸಹಾಯ ಮಾಡಬೇಕು’ ಕೇಳಿದ್ದ. ‘ಮುಂದೆ ಸಮಸ್ಯೆಯಾದರೆ ನಮ್ಮನ್ನು ದೂರ ಬೇಡಿ’ ಎಂದು ಹೆದರಿಸಿದ್ದ’ ಎಂದು ವ್ಯಕ್ತಿಯೊಬ್ಬರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ‘ಈ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ದೂರು ನೀಡಿರುವ ವ್ಯಕ್ತಿ ಕೋರಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರು: ಮುಂಬರುವಂತ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಅಧಿಕಾರಿಗಳ ವರ್ಗಾವಣೆಗೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು 10 ತಹಶೀಲ್ದಾರ್ ಅವರನ್ನು ವರ್ಗಾವಣೆ ( Tahsildar Transfer ) ಮಾಡಿ ಆದೇಶಿಸಿದೆ. ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತ ಹಾಗೂ ಮುಂದಿನ ಆದೇಶದವರೆಗೆ ತಹಶೀಲ್ದಾರ್ ಗಳನ್ನು ನಿಯೋಜಿಸಿದಂತ ಸ್ಥಳಕ್ಕೆ ಈ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದ್ದಾರೆ.