ಬೆಂಗಳೂರು : ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆಯನ್ನು ಮದುವೆಯಾಗಿ ಬಾಳು ನೀಡಿದ ಆರೋಪಿ ವಿರುದ್ಧದ ಪ್ರಕರಣವನ್ನು ರದ್ದು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಬೆಂಗಳೂರಿನ ಯುವತಿಯೊಬ್ಬರು ಅ.2022 ರಲ್ಲಿ ಪೊಲೀಸರಿಗೆ ಅತ್ಯಾಚಾರದ ದೂರು ನೀಡಿದ್ದರು. ಹುಟ್ಟು ಹಬ್ಬದ ಆಚರಣೆಗಾಗಿ ಮನೆಗೆ ಕರೆದು ಮದ್ಯಪಾನ ಮಾಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದನು ಎಂದು ಆರೋಪಿಸಿದ್ದರು. ನಂತರ ಪೊಲೀಸರು ಆರೋಪಿ ವಿರುದ್ಧ ಅತ್ಯಾಚಾರ , ಜೀವ ಬೆದರಿಕೆ ಆರೋಪಗಳಡಿ ಎಫ್ ಐ ಆರ್ ದಾಖಲಿಸಿದ್ದರು. ನಂತರ ಸಂತ್ರಸ್ತೆಯನ್ನು ಆರೋಪಿ ವಿವಾಹವಾದರೂ ಕೂಡ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದನ್ನು ಪ್ರಶ್ನಿಸಿ ಆರೋಪಿ ಪ್ರಕರಣವನ್ನು ರದ್ದುಮಾಡುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿದಾರರ ಪರ ವಕೀಲರ ವಾದ ಆಲಿಸಿ ಸಂತ್ರಸ್ತೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಸೂಚಿಸಿ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
Author: main-admin
ಹೈದರಾಬಾದ್: ನನ್ನಿಂದ ನನ್ನ ಮಗುವಿನ ಸಾವನ್ನು ನೋಡಲಾರೆ ಅಂತಾ ತಾಯಿಯೊಬ್ಬಳು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್ನ ಕೆಪಿಎಚ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ವಾತಿ (38) ಮೃತ ದುರ್ದೈವಿ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಳು. ಸ್ವಾತಿ ಮತ್ತು ಆಕೆಯ ಪತಿ ಶ್ರೀಧರ್ 8 ವರ್ಷದ ಓರ್ವ ಮಗನಿದ್ದಾನೆ. ಈ ವಯಸ್ಸಿನಲ್ಲಿ ಆಡಿ ನಲಿಯಬೇಕಾಗಿದ್ದ ಮಗ ಅಂಗವೈಕಲ್ಯದಿಂದ ಬಳಲುತ್ತಿದ್ದಾನೆ. ಆದರೂ ಸ್ವಾತಿಗೆ ತನ್ನ ಮಗನೆಂದರೆ ಎಲ್ಲಿಲ್ಲದ ಪ್ರೀತಿ. ಆದರೆ, ಪತಿಗೆ ಮಾತ್ರ ಮಗನ ಮೇಲೆ ಒಂಚೂರು ಪ್ರೀತಿ ಇಲ್ಲ. ಹೀಗಾಗಿ ಶ್ರೀಧರ್ ಕುಟುಂಬ, ಸ್ವಾತಿಗೆ ಕಿರುಕುಳ ನೀಡಲು ಆರಂಭಿಸಿತು. ಮಗನಿಗೆ ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸುವಂತೆ ಸ್ವಾತಿಯನ್ನು ಶ್ರೀಧರ್ ಒತ್ತಾಯಿಸುತ್ತಿದ್ದ. ಆದರೆ, ಸ್ವಾತಿ ಮಾತ್ರ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಆದ್ದರಿಂದ ಆಕೆಯ ಮೇಲಿನ ಕಿರುಕುಳ ಇನ್ನಷ್ಟು ಹೆಚ್ಚಾಯಿತು. ಅದನ್ನು ತಾಳಲಾರದೇ ಮತ್ತು ಮುಂದೊಂದು ದಿನ ಹೇಗಾದರೂ ಮಾಡಿ ನನ್ನ ಮಗನನ್ನು ಇವರೆಲ್ಲ ಸೇರಿ ಸಾಯಿಸುತ್ತಾರೆ. ನನ್ನಿಂದತೂ ಮಗ ಸಾಯುವುದನ್ನು…
ಪುತ್ತೂರು:ಮನೆಗೆ ನುಗ್ಗಿ ಯುವತಿಯನ್ನು ಚೂರಿಯಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪುತ್ತೂರಿನ ಮಂಡೂರು ಬಳಿ ನಡೆದಿದೆ. ಕಂಪದ ಎಂಬಲ್ಲಿನ 23 ವರ್ಷದ ಜಯಶ್ರೀಗೆ ಚೂರಿಯಿಂದ ಇರಿಯಲಾಗಿದೆ.ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಮೃತಪಟ್ಟಿದ್ದಾಳೆ. ಯುವತಿಯ ಮೃತದೇಹ ಪುತ್ತೂರಿನ ಆಸ್ಪತ್ರೆಯಲ್ಲಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಕೊಟ್ಟಿಗೆಹಾರ: ಕಾಫಿನಾಡಿನ ದಿಟ್ಟ ಪ್ರತಿಭೆ ಸುಷ್ಮಾ ಎಸ್. ಶೆಟ್ಟಿ ‘ಮಿಸ್ ಮಂಗಳೂರು’ ಕಿರೀಟ ಮುಡಿಗೇರಿಸುವ ಮೂಲಕ ಪ್ರತಿಭಾವಂತೆಯಾಗಿ ಹೊರ ಹೊಮ್ಮಿದ್ದಾರೆ. ಮೂಡಿಗೆರೆಯ ಸಂತ ಮಾರ್ಥಾಸ್ ಶಾಲೆಯಲ್ಲಿ ಪ್ರೌಢಶಾಲೆ ವ್ಯಾಸಂಗ ಮುಗಿಸಿದ ವಿದ್ಯಾರ್ಥಿನಿ ಸುಷ್ಮಾ ಹಲವು ಕನಸುಗಳನ್ನು ಕಂಡಾಕೆ. ಪಿಯುಸಿ ವ್ಯಾಸಂಗವನ್ನು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನಲ್ಲಿ ಮುಗಿಸಿದ್ದಾರೆ. ಇವರಿಗೆ ವಿದ್ಯಾಭ್ಯಾಸದೊಂದಿಗೆ ನೃತ್ಯ, ಭರತನಾಟ್ಯ, ಮಾಡೆಲಿಂಗ್, ಆಂಕರಿಂಗ್, ಭಾಷಣ ಕಲೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ. ಅದರೊಂದಿಗೆ ಕೆಡೆಟ್ ಎನ್.ಸಿ.ಸಿ. ಏರ್ ವಿಂಗ್ ನಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಶಾಲಾ ಹಂತದಲ್ಲಿ ನೃತ್ಯ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಕಲಿಕೆಯಲ್ಲೂ ಮುಂದಿದ್ದ ಸುಷ್ಮಾ ಹಲವು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡ ಪ್ರತಿಭೆ. ಸಂತ ಆಗ್ನೇಸ್ ಕಾಲೇಜಿನಲ್ಲಿ ಬಿಬಿಎ ಮುಗಿಸಿದರು. ಶ್ರೀದೇವಿ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಿಜಿ ಕೆಂಜಾರು ಕಾಲೇಜಿನಲ್ಲಿ ಎಂಬಿಎ ಪದವಿ ಮುಗಿಸಿದ ಇವರಿಗೆ ಏನಾದರೂ ಜೀವನದಲ್ಲಿ ಸಾಧಿಸಬೇಕೆಂಬ ಛಲ ಮನೆ ಮಾಡಿತ್ತು. ಇವರ ತಂದೆ ಬಿ.ಸುರೇಶ್ ಶೆಟ್ಟಿ ಬಣಕಲ್ ಕನ್ನಡ ಸಾಹಿತ್ಯ ಪರಿಷತ್ತಿನ…
ಬೆಂಗಳೂರು: ತನ್ನ ತಂದೆಯ ಸಾಲಕ್ಕೆ ಖಾತ್ರಿಯಾಗಿ ಪುತ್ರ ಚೆಕ್ ನೀಡಿದ್ದರೇ, ಆತ ಕೂಡ ಸಾಲಕ್ಕೆ ಜವಾಬ್ದಾರನಾಗಲಿದ್ದು, ಮಗ ಮರುಪಾವತಿ ಮಾಡಬೇಕು ಎಂಬುದಾಗಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ದಾವಣಗೆರೆಯ ಪ್ರಸಾದ್ ರಾಯ್ಕರ್ ಎಂಬುವರು ಸಲ್ಲಿಸಿದ್ದಂತ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿ ಕೆ.ನಟರಾಜನ್ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠವು, ನೆಗೋಷಿಯಬಲ್ ಇನ್ಸ್ಟ್ರುಮಂಟ್ ಕಾಯಿದೆಯ ಪ್ರಕಾರ, ತಂದೆಯ ಸಾಲಕ್ಕೆ ಭದ್ರತೆಯಾಗಿ ಮಗ ಚೆಕ್ ನೀಡಿದ್ದರೇ, ಆತ ಕೂಡ ಸಾಲಕ್ಕೆ ಜವಾಬ್ದಾರನಾಗುತ್ತಾನೆ. ಮಗ ಮರು ಪಾವತಿ ಮಾಡಬೇಕು ಎಂಬುದಾಗಿ ತಿಳಿಸಿದೆ. ಇನ್ನೂ ಮೃತ ವ್ಯಕ್ತಿಯ ಮಗನಾಗಿದ್ದರೇ, ಮೃತ ತಂದೆಯು ದೂರುದಾರನಿಂದ ಸಾಲ ಪಡೆದಿದ್ರೇ, ಮರು ಪಾವತಿಯ ಒಪ್ಪಿ, ಪುತ್ರ ಅದಕ್ಕೆ ಖಾತ್ರಿಯನ್ನು ನೀಡಿದ್ದರೇ, ಮಗ ತಂದೆಯ ಸಾಲದ ಹಣವನ್ನು ಮರುಪಾವತಿ ಮಾಡಲೇಬೇಕು ಎಂದು ಆದೇಶದಲ್ಲಿ ನ್ಯಾಯಪೀಠವು ತಿಳಿಸಿದೆ. ಅಂದಹಾಗೇ ದಾವಣಗೆರೆಯ ಆರೋಪಿ ದಿನೇಶ್ ತಂದೆ ಭರಮಪ್ಪ, ಮಾರ್ಚ್ 7, 2003ರಂದು 2.6 ಲಕ್ಷ ಹಣವನ್ನು ಪ್ರಸಾದ್ ರಾಯ್ಕರ್ ಎಂಬುವರಿಂದ ಶೇ.2ರ ಬಡ್ಡಿ ದರದಲ್ಲಿ ಪಡೆದಿದ್ದರು.…
ಕಣ್ಣೂರು: ವಿಷಪೂರಿತ ಆಹಾರ ಸೇವಿಸಿ ಏಳು ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಯೋನೈಸ್ ನೊಂದಿಗೆ ಚಿಕನ್ ತಿಂದ ಏಳು ವಿದ್ಯಾರ್ಥಿಗಳು ಆಹಾರ ವಿಷದಿಂದ ಸೋಂಕಿಗೆ ಒಳಗಾಗಿದ್ದರು. ಕಣ್ಣೂರಿನ ನಿತ್ಯಾನಂದ ಭವನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಫುಡ್ ಪಾಯ್ಸನ್ ನಿಂದ ಬಳಲುತ್ತಿದ್ದರು. ಹೊಟ್ಟೆ ನೋವು ಮತ್ತು ವಾಂತಿಯ ಬಗ್ಗೆ ದೂರು ನೀಡಿದ ನಂತರ ವಿದ್ಯಾರ್ಥಿಗಳನ್ನು ಪಪ್ಪಿನಿಸ್ಸೆರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಮಕ್ಕಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಎಂದು ವೈದ್ಯರು ತಿಳಿಸಿದ್ದಾರೆ
ಬೆಂಗಳೂರು: ಕೆಲ ದಿನಗಳ ಹಿಂದೆ ನೈಟ್ ಶಿಫ್ಟ್ ಕೆಲಸ ಮುಗಿಸಿಕೊಂಡು, ಮುಂಜಾನೆ ಬೈಕ್ ಟ್ಯಾಕ್ಸಿಯಲ್ಲಿ ಖಾಸಗೀ ಕಂಪನಿ ಉದ್ಯೋಗಿಯೊಬ್ಬರು ಮನೆಗೆ ತೆರಳುತ್ತಿದ್ದರು. ಅವರನ್ನು ತಡೆದಿದ್ದಂತ ಬಂಡೇಪಾಳ್ಯ ಪೊಲೀಸ್ ಠಾಣೆಯ ಪೇದೆಗಳು, ಅವರ ಬ್ಯಾಗ್ ನಲ್ಲಿ ಗಾಂಜಾ ಇಟ್ಟು, ಕೇಸ್ ಹಾಕುವುದಾಗಿ ಬೆದರಿಸಿ ಹಣ ಪೀಕಿದ್ದರು. ಈ ಪ್ರಕರಣ ಸಂಬಂಧ ಇಬ್ಬರು ಕಾನ್ಸ್ ಸ್ಟೇಬಲ್ ಗಳನ್ನು ಅಮಾನತುಗೊಳಿಸಲಾಗಿದೆ. ಕಳೆದ ಜನವರಿ 11ರಂದು ಮುಂಜಾನೆ 3.50ರ ಸುಮಾರಿಗೆ ಹೆಚ್ ಎಸ್ ಆರ್ ಲೇಔಟ್ ಬಳಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಂತ ಹಿಮಾಚಲ ಪ್ರದೇಶ ಮೂಲಕ ಖಾಸಗೀ ಕಂಪನಿ ಉದ್ಯೋಗಿ ವೈಭವ್ ಎಂಬುವರನ್ನು ಬಂಡೇಪಾಳ್ಯ ಪೊಲೀಸ್ ಠಾಣೆಯ ಇಬ್ಬರು ನೈಟ್ ಶಿಫ್ಟ್ ಪೇದೆಗಳು ತಡೆದಿದ್ದರು. ಬೈಕ್ ಟ್ಯಾಕ್ಸಿಯಲ್ಲಿ ಮನೆಗೆ ತೆರಳುತ್ತಿದ್ದಂತ ಅವರ ಬ್ಯಾಗ್ ಪರಿಶೀಲಿಸಿ, ಗಾಂಜಾ ಅವರೇ ಇಟ್ಟು, ನೀನು ಗಾಂಜಾ ಸೇವಿಸುತ್ತೀಯ ಎಂಬುದಾಗಿ ಹೆದರಿಸಿದ್ದರು. ಅಲ್ಲದೇ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದರು. ಆದ್ರೇ ಗಾಂಜಾ ಅಭ್ಯಾಸ, ಸೇವನೆ ಇಲ್ಲದಂತ ವೈಭವ್ ನನಗೆ…
ಬಂಟ್ವಾಳ:ಜೀಪ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ನರಹರಿ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ಮೂಲದ ವಿಜಿತ್ ಮೃತಪಟ್ಟ ಯುವಕ. ಬಂಟ್ವಾದಲ್ಲಿ ನಡೆಯುವ ಬಿಜೆಪಿಯ ಪಾದಯಾತ್ರೆಯ ಪ್ರಚಾರಕ್ಕೆ ಆಗಮಿಸಿದ್ದ ತೆಲಂಗಾಣ ದಾಖಲೆಯ ವಾಹನಕ್ಕೆ ನರಹರಿ ತಿರುವಿನಲ್ಲಿ ಬೈಕ್ ಸ್ಕಿಡ್ ಆಗಿ ಢಿಕ್ಕಿಯಾಗಿದೆ ಎನ್ನಲಾಗಿದೆ. ಇನ್ನು ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಬೆಂಗಳೂರು : ಆರ್.ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಟದಹಳ್ಳಿಯಲ್ಲಿ ಅಕ್ರಮ ಸಂಬಂಧ ಒಪ್ಪದಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಗೆ ಚಾಕು ಇರಿತ ಘಟನೆ ಬೆಳಕಿಗೆ ನಡೆದಿದೆ. ಶೇಖ್ ಮೆಹಬೂದ್ ಎಂಬಾತನಿಂದ ಹಬೀಬಾತಾಜ್ ಎಂಬ ಮಹಿಳೆಗೆ (30)ಗೆ ಚಾಕು ಇರಿತ ಮಾಡಿದ್ದಾನೆ. ಆರು ವರ್ಷದ ಹಿಂದೆ ಹಬೀಬಾತಾಜ್ ಪತಿ ಮೃತಪಟ್ಟಿದ್ದರು. ಹಬೀಬಾತಾಜ್ ಇಬ್ಬರು ಮಕ್ಕಳ ಜೊತೆ ಜೀವನ ನಡೆಸುತ್ತಿದ್ದರು. ಹಬೀಬಾ ತಾಜ್, ಆಟೋ ಚಾಲಕ ಶೇಖ್ ಮೆಹಬೂದ್ ಸ್ನೇಹ ಬೆಳೆಸಿದ್ದರು. ಆಟೋ ಚಾಲಕ ಶೇಖ್ ಮೆಹಬೂದ್ ಮದುವೆಯಾಗಿ ಮಕ್ಕಳಿದ್ದರು. ಹೀಗಾಗಿ ಆಟೋ ಚಾಲಕ ಶೇಖ್ ಮೆಹಬೂದ್‌ನಿಂದ ದೂರವಾಗಲು ಹಬೀಬಾ ನಿರ್ಧರಿಸಿದ್ದರು. ಈ ವಿಚಾರ ಮನಗಂಡು ನಿನ್ನೆ ರಾತ್ರಿ ಶೇಖ್ ಮೆಹಬೂದ್ , ಹಬೀಬಾ ನಡುವೆ ಗಲಾಟೆ ನಡೆಯಿತು. ಗಲಾಟೆ ವೇಲೆ ಹಬೀಬಾ ತಾಜ್ ಗೆ ಚಾಕು ಇರಿದ್ದಾನೆ ಎಂದು ತಿಳಿದು ಬಂದಿದೆ. ಗಾಯಾಳು ಹಬೀಬಾ ತಾಹ್‌ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಶೇಖ್ ಮೆಹಬೂದ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ…
ಉಡುಪಿ: 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ನಗರದ ಬ್ರಹ್ಮಗಿರಿಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಕಾಪು ಮೂಲದ ದಂಪತಿ ಪುತ್ರಿ ಮಂಗಳಾದೇವಿ(11) ಆತ್ಮಹತ್ಯೆ ಮಾಡಿಕೊಂಡವರು. ಈಕೆ ಕಾಪುವಿನ ಖಾಸಗಿ ಶಾಲೆಯ ವಿದ್ಯಾರ್ಥಿನಿ. ಶಾಲೆ ರಜೆ ಹಿನ್ನಲೆ ಮನೆಯಲ್ಲೇ ಇದ್ದರು, ತಂದೆ ತಾಯಿ ಕೆಲಸಕ್ಕೆ ಹೋಗಿದ್ದ ವೇಳೆ ಬಾಲಕಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಉಡುಪಿ ನಗರ ಠಾಣೆಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಆಕೆ ಉಪಯೋಗಿಸುತ್ತಿದ್ದ ಟ್ಯಾಬ್ ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ತನಿಖೆ ಮುಂದುವರಿದಿದೆ.