Author: main-admin

ಕೊಡಗು : ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ರೇಷ್ಮೆ ಹಡ್ಲು ಹಾಡಿಯಲ್ಲಿ ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಭಜರಂಗದಳದ ಕಾರ್ಯಕರ್ತರು ತರಾಟೆ ತೆಗೆದುಕೊಂಡಿದ್ದಲ್ಲದೇ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಐವರು ವಶಕ್ಕೆ ಪಡೆಯಲಾಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆ ಹಡ್ಲು ಹಾಡಿಯಲ್ಲಿರುವ ಆದಿವಾಸಿ ನಿವಾಸಿಗಳಿಗೆ ಎಳ್ಳು ಬೆಲ್ಲ ಹಂಚೋದಕ್ಕೆ ಭಜರಂಗದಳದ ಕಾರ್ಯಕರ್ತರು ತೆರಳಿದಾಗ ಬೈಬಲ್ ಬೋಧನೆಯನ್ನು ಮಾಡುತ್ತಿರುವು ಕಂಡು ಬಂದಿದೆ. ಆಗ ಭಜರಂಗದಳದ ಕಾರ್ಯಕರ್ತರು ತರಾಟೆ ತೆಗೆದುಕೊಂಡಿದ್ದಾರೆ. ಈ ಸಂಬಂದ ಈಗಾಗಲೇ ಸುಮಾರು 500 ಕುಟುಂಬಗಳಲ್ಲಿ 250 ಮಂದಿಯನ್ನು ಮತಾಂತರ ಆಗಿದ್ದಾರೆಂಬ ಆರೋಪಿಸಿದ್ದು, ಐವರು ಕ್ರಿಶ್ಚಿಯರನ್ನುವಶಕ್ಕೆ ಪಡೆದು ಕೂಡಲೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಸಂಬಂಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಜೋಗಿಕುಂಬ್ರಿ ಗ್ರಾಮದಲ್ಲಿ ಪ್ರೇಮವೈಫಲ್ಯದಿಂದ ಬಾಲಕಿ ಕಳೆನಾಶಕ ಸೇವಿಸಿ, ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಬೆಡ್‌ನಲ್ಲೇ ಡೆತ್‌ ನೋಟ್‌ ಬರೆದಿಟ್ಟು, ಆತ್ಮಹತ್ಯೆಗೈದ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿ ದೀಪ್ತಿ ಎಂಬಾಕೆ ಎಸ್.ಕೆ ಮೇಗಲ್ ಗ್ರಾಮದ ನಿತೇಶ್ ಎಂಬುವನನ್ನ ಪ್ರೀತಿಸುತ್ತಿದ್ದಳು. ಆತ ವಂಚಿಸಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ, ಕಳೆನಾಶಕ (ಕ್ರಿಮಿನಾಶಕ) ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳಿಕ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಿದ್ದರು. ಕೆಲದಿನಗಳಿಂದ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ದುರಂತ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಆಕೆ ಡೆತ್‌ ನೋಟ್‌ ಬರೆದಿಟ್ಟಿದ್ದು, ‘ನಾನು ನಿತೇಶ್‌ನನ್ನ ಪ್ರೀತಿಸುತ್ತಿದ್ದೆ. ನಮ್ಮಿಬ್ಬರ ಮಧ್ಯೆ ಜಗಳದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೇನೆಂದು ಬರೆದಿದ್ದಾಳೆ. ಈ ಸಂಬಂದ ನಿತೇಶ್ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More

ಉಡುಪಿಯ ಕಾಲೇಜೊಂದರಿಂದ ಅನುಮತಿ ಪಡೆದು ಹೊರ ಹೋದ ಯುವತಿಯೊಬ್ಬಳು, ಬಳಿಕ‌ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಯುವತಿಯನ್ನು ಪಡುಬೆಳ್ಳೆ ನಿವಾಸಿ ಸ್ಟೀಫನ್ ಅಮ್ಮನ್ ಅವರ ಪುತ್ರಿ 20ವರ್ಷದ ರಿಯೋನಾ ಅಮ್ಮನ್ನ ಎಂದು ಗುರುತಿಸಲಾಗಿದೆ. ಈಕೆ ಎಂದಿನಂತೆ ಜನವರಿ 13 ರಂದು ಉಡುಪಿಯ ಕಾಲೇಜಿಗೆ‌ ಹೋಗಿದ್ದು, ಮಧ್ಯಾಹ್ನ ಅನುಮತಿ ಪಡೆದು ಹೊರ ಹೋಗಿದ್ದಾಳೆ. ಆ ಬಳಿಕ ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಈ ಬಗ್ಗೆ ಆಕೆಯ ತಾಯಿ ರೀಟಾ ಅಮ್ಮನ್ನ ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ರಿಯೋನಾ ಅಮ್ಮನ್ನ 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದಾಳೆ. ನೀಲಿ ಬಣ್ಣದ ಟೀ-ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದಿದ್ದಾಳೆ. ಈಕೆ ಕನ್ನಡ, ಇಂಗ್ಲೀಷ್, ತುಳು ಭಾಷೆ ಮಾತನಾಡುತ್ತಿದ್ದು, ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಉಡುಪಿ ನಗರ ಠಾಣೆಗೆ ಸಂಪರ್ಕಿಸುವಂತೆ ಕೋರಲಾಗಿದೆ.

Read More

ನಾಗ್ಪುರ: ಕೇಂದ್ರ ಸಚಿವ ʻನಿತಿನ್ ಗಡ್ಕರಿʼಗೆ ಕೊಲೆ ಬೆದರಿಕೆ ಕರೆ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ ಪೊಲೀಸರು ಕರೆ ಮಾಡಿದವನ ಗುರುತು ಪತ್ತೆಹಚ್ಚಿದ್ದಾರೆ. ಬೆಳಗಾವಿ ಜೈಲಿನಲ್ಲಿರುವ ವ್ಯಕ್ತಿಯೊಬ್ಬರಿಂದ ನಿತಿನ್ ಗಡ್ಕರಿಗೆ ಕೊಲೆ ಬೆದರಿಕೆ ಕರೆಗಳು ಬಂದಿವೆ ಎಂದು ತಿಳಿದುಬಂದಿದ್ದು, ನಾಗ್ಪುರ ಪೊಲೀಸರು ಶನಿವಾರ ಕರೆ ಮಾಡಿದವರನ್ನು ಪತ್ತೆಹಚ್ಚಿದ್ದಾರೆ. ಕರೆ ಮಾಡಿದವರನ್ನು ಜಯೇಶ್ ಕಾಂತ ಎಂದು ಗುರುತಿಸಲಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೈಲಿನಿಂದ ಬೆದರಿಕೆ ಹಾಕಲಾಗುತ್ತಿದೆ. ಕರೆ ಮಾಡಿದವರು ಕುಖ್ಯಾತ ದರೋಡೆಕೋರ ಮತ್ತು ಕೊಲೆ ಆರೋಪಿ ಜಯೇಶ್ ಕಾಂತ ಬೆಳಗಾವಿ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಜೈಲಿನೊಳಗೆ ಅಕ್ರಮವಾಗಿ ಫೋನ್ ಬಳಸಿ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಹಾಕಿದ್ದಾನೆ. ನಾಗ್ಪುರ ಪೊಲೀಸರ ತಂಡವು ತನಿಖೆಗಾಗಿ ಬೆಳಗಾವಿಗೆ ತೆರಳಿದೆ ಮತ್ತು ಪ್ರೊಡಕ್ಷನ್ ರಿಮಾಂಡ್ ಕೇಳಿದೆ ಎಂದು ನಾಗ್ಪುರದ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ. ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಬೆದರಿಕೆ ಕರೆಗಳನ್ನು ಮಾಡಿ 100 ಕೋಟಿ ರೂ.ಗೆ ಬೇಡಿಕೆಯಿಟ್ಟ…

Read More

ಬೆಳ್ತಂಗಡಿ:ದಲಿತ ಯುವಕ ಶ್ರೀಧರ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಶಿಬಾಜೆಯ ತಿಮ್ಮಪ್ಪ, ಲಕ್ಷ್ಮಣ, ಆನಂದ ಗೌಡ, ಹಾಗೂ ಮಹೇಶ್ ಪೂಜಾರಿ ಬಂಧಿತ ಆರೋಪಿಗಳು. ಶಿಬಾಜೆ ಗ್ರಾಮದ ಸಾರಾ ಫಾರ್ಮ್ ನಲ್ಲಿ ಕೆಲಸ ಮಾಡುತ್ತಿದ್ದ ಮೂಡಿಗೆರೆಯ ಶ್ರೀಧರ ಎಂಬವರ ಮೃತದೇಹ ಕಳೆದ ಡಿ. 18ರಂದು ಕೆಲಸ ಮಾಡುವ ತೋಟದ ಮೂಲೆಯಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದಿತ್ತು.ಇದೊಂದು ಕೊಲೆ‌ ಎಂದು ದೂರು ದಾಖಲಾಗಿತ್ತು.

Read More

ಉಳ್ಳಾಲ: ನಿಷೇಧಿತ ಎಂಡಿಎಂಎ ಸಾಗಾಟ ನಡೆಸುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರು ಉಚ್ಚಿಲ ರಿಲಾಯನ್ಸ್ ಪೆಟ್ರೋಲ್ ಪಂಪ್‌ನಲ್ಲಿ ಅಡ್ಡಗಟ್ಟಿ ಬಂಧಿಸಿದ್ದಾರೆ. ಬಂಧಿತರಿಂದ 95 ಸಾವಿರ ರೂ. ಬೆಲೆಯ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲದ ಆಝಾದ್‌ನಗರ 1ನೇ ಕ್ರಾಸ್‌ನ ಮೊಹಮ್ಮದ್ ಖಾಲಿದ್ (39), ಹಾಗೂ ಮಂಜೇಶ್ವರದ ಲಿಖಿತ್ (21) ಬಂಧಿತರು. ಇಬ್ಬರೂ ಡಿಯೊ ಸ್ಕೋಟರ್‌ನಲ್ಲಿ ತಲಪಾಡಿಯಿಂದ ಉಚ್ಚಿಲ ರಿಲಯನ್ಸ್ ಪೆಟ್ರೋಲ್ ಪಂಪ್ ಕಡೆಗೆ ಎಂಡಿಎಂಎ ಹೊಂದಿರುವ ಪಾಕೆಟ್ ಸಮೇತ ಹೋಗುತ್ತಿದ್ದ ಸಮಯದಲ್ಲಿ ಉಳ್ಳಾಲ ಪೊಲೀಸರು ಸ್ಕೂಟರ್‌ನ್ನು ಅಡ್ಡಗಟ್ಟಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.20 ಸಾವಿರ ರೂ. ಮೌಲ್ಯದ 10 ಗ್ರಾಂ ಎಂಡಿಎಂಎ, 50 ಸಾವಿರ ರೂ. ಬೆಲೆ ಬಾಳುವ ಸ್ಕೂಟರ್ ಹಾಗೂ 25 ಸಾವಿರ ರೂ. ಬೆಲೆ ಬಾಳುವ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಗಾಂಜಾ ಮಾರಾಟದ ಪ್ರಕರಣಗಳಿವೆ.ಉಳ್ಳಾಲ ಠಾಣೆಯ ಇನ್ಸ್ಪೆಕ್ಟರ್ ಸಂದೀಪ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ರೇವಣ್ಣ ಸಿದ್ದಪ್ಪ, ಪ್ರದೀಪ್ ಟಿ.ಆರ್., ಶಿವಕುಮಾರ್ ಹಾಗೂ ಸಿಬ್ಬಂದಿಗಳಾದ ರಂಜಿತ್, ಅಶೋಕ,…

Read More

ಮಂಗಳೂರು: ಹಿಮಾಚಲ ಪ್ರದೇಶದಿಂದ ರೈಲು ಮೂಲಕ ನಿಷೇಧಿತ ಗಾಂಜಾ- ಚರಸ್‌ಗಳನ್ನು ತಂದು ಮಂಗಳೂರಿನ ಉದ್ಯಮಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮುಡಾರಿ ಸುಕೇತ್ ಕಾವ, ಕಾರ್ಕಳ ಆನೆಕೆರೆ ನಿವಾಸಿ ಸುನಿಲ್ ಮತ್ತು ತಮಿಳುನಾಡು ರಾಜ್ಯದ ಕೊಯಂಬತ್ತೂರು ನಿವಾಸಿ ಅರವಿಂದ ಎಂದು ತಿಳಿದುಬಂದಿದೆ. ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯ ಪಾರ್ವತಿ ವ್ಯಾಲಿ ಎಂಬ ಗುಡ್ಡಗಾಡು ಪ್ರದೇಶದ ಜನರಿಂದ ಕಡಿಮೆ ಹಣಕ್ಕೆ ಗಾಂಜಾ-ಚರಸ್‌ಗಳನ್ನು ಖರೀದಿ ಮಾಡುತ್ತಿದ್ದರು. ತಾವು ಟ್ರಕ್ಕಿಂಗ್ ಮಾಡುವವರು, ಪ್ರವಾಸಿಗರು, ಪ್ರವಾಸಿ ಗೈಡ್‌ಗಳು ಎಂದೆಲ್ಲಾ ಆ ಜನರನ್ನು ನಂಬಿಸುತ್ತಿದ್ದರು. ಅಲ್ಲಿನ ಜನರಿಂದ ಕಡಿಮೆ ಬೆಲೆಗೆ ಖರೀದಿಸಿಕೊಂಡು ರೈಲಿನಲ್ಲಿ ಬಂದು ಮಂಗಳೂರಿನ ಉದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಪೂರೈಸಿ ಅವರ ಮೂಲಕ ಸಾರ್ವಜನಿಕರಿಗೆ ಮತ್ತು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ತಲುಪುವಂತೆ ಮಾಡಿ ಸುಲಭವಾಗಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್‍ ತಿಳಿಸಿದ್ದಾರೆ. ಆರೋಪಿಗಳ ಬಗ್ಗೆ ಖಚಿತ…

Read More

ಸುರತ್ಕಲ್‌ : ಕೆಲಸ ಮಾಡುವಾಗ ಗುಡ್ಡ ಕುಸಿತ ಉಂಟಾಗಿ ಓರ್ವ ಕಾರ್ಮಿಕ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚೇಳೈರು ಗ್ರಾಮದ ಚೇಳೈರು ರೈಲ್ವೇ ಬ್ರಿಡ್ಜ್ ಬಳಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನನ್ನು ಓಬಲೇಶ್ವರ ಎಂದು ಗುರುತಿಸಲಾಗಿದೆ. ರೈಲ್ವೇ ಸೇತುವೆಯ ಮೇಲ್ಭಾಗದಲ್ಲಿ ಕಂಬಿಗಳನ್ನು ನೇರಮಾಡುತ್ತಿದ್ದ ಸಂದರ್ಭ ಕಾರ್ಮಿಕರು ಕೆಳಭಾಗದಲ್ಲಿ ಗುಡ್ಡ ಅಗೆಯುತ್ತಿದ್ದರು. ಈ ವೇಳೆ ರೈಲೊಂದು ಏಕಾಏಕಿ ಬಂದ ಹಾದುಹೋದ ಪರಿಣಾಮ ಮಣ್ಣು ಕುಸಿದು ಗುಡ್ಡದ ಕೆಳಭಾಗದಲ್ಲಿ ಅಗೆಯುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಈ ವೇಳೆ ಆರೇಳು ಕಾರ್ಮಿಕರ ಮೇಲೆ ಮಣ್ಣು ಬಿದ್ದಿದೆ. ಈ ಪೈಕಿ ಓಬಳೇಶ್ವರ ಮತ್ತು ಬಳ್ಳಾರಿಯ ಗೋವಿಂದಪ್ಪ ಅವರ ಮೈಮೇಲೆ ಹೆಚ್ಚಿನ ಪ್ರಮಾಣದ ಮಣ್ಣುಬಿದ್ದು ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ರಕ್ಷಿಸಿ ಖಾಸಗಿ ಆಸ್ಪತೆರೆಗ ದಾಖಲಿಸಲಾಗಿದ್ದು, ಈ ವೇಳೆ ಓಬಳೇಶ್ವರ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಗೋವಿಂದಪ್ಪ ಅವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಕಾರ್ಮಿಕರಾದ ಕಿಟ್ಟರಾಜ ಎಂಬವರು ಸುರತ್ಕಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ…

Read More

ವಿಟ್ಲ: ಬಸ್ಸಿನಲ್ಲಿ ವಿದ್ಯಾರ್ಥಿನಿ ಜತೆ ಮಾತನಾಡಿದ ವಿಚಾರವಾಗಿ ತಂಡವೊಂದು ಅನ್ಯ ಕೋಮಿನ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀರಕಂಬ ಗ್ರಾಮದ ಮಂಗಳಪದವು ನಿವಾಸಿ ಖಲಂದರ್ ಅಬ್ಬಾಸ್ ಅವರ ಪುತ್ರ ಮಹಮ್ಮದ್ ಶಾಕೀರ್ ಎಂಬವರು ನೀಡಿದ ದೂರಿನಂತೆ ಕೆಲಿಂಜ ನಿವಾಸಿಗಳಾದ ಚಂದ್ರಶೇಖರ, ಪ್ರಜ್ವಲ್, ರೋಹಿತ್, ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಶಾಕೀರ್ ಮಂಗಳೂರು ಬಲ್ಮಠ ಎಂಬಲ್ಲಿರುವ ಯೆನಪೋಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಜ. 12ರಂದು ಕಾಲೇಜು ಮುಗಿಸಿ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಮನೆಗೆ ಬರುತ್ತಿದ್ದಾಗ ಈತ ಕುಳಿತುಕೊಂಡಿದ್ದ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಗೆ ಚಾಕಲೇಟು ಬೇಕೆ ಎಂದು ಕೇಳಿದ್ದರು. ವೀರಕಂಭ ಗ್ರಾಮದ ಕೆಲಿಂಜ ಎಂಬಲ್ಲಿಗೆ ಬಸ್ ತಲುಪಿದಾಗ ಏಕಾಏಕಿಯಾಗಿ ಬಸ್ಸಿನೊಳಗೆ ಬಂದ ಚಂದ್ರಶೇಖರ, ಪ್ರಜ್ವಲ್, ರೋಹಿತ್ ಹಾಗೂ ಮೂವರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶಾಕೀರ್ ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಅಹಮದಾಬಾದ್: ಮದುವೆಯ ನಂತರವೂ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎಂದು ಅಭಿಪ್ರಾಯಪಟ್ಟಿರುವ ಗುಜರಾತ್ ಹೈಕೋರ್ಟ್ ಮಗಳು ಮತ್ತು ಸಹೋದರಿಯರ ಬಗ್ಗೆ ಇರುವ ಸಮಾಜದ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ ಎಂದು ಶುಕ್ರವಾರ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎ. ಶಾಸ್ತ್ರಿ ಅವರ ವಿಭಾಗೀಯ ಪೀಠವು ಕುಟುಂಬದ ಆಸ್ತಿ ಹಂಚಿಕೆಯಲ್ಲಿ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಅಲ್ಲಿ ಅರ್ಜಿದಾರರ ಪ್ರಕರಣದಲ್ಲಿ ಅವರ ಸಹೋದರಿ ಆಸ್ತಿಯಲ್ಲಿ ತನ್ನ ಹಕ್ಕನ್ನು ಬಿಟ್ಟುಕೊಟ್ಟಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಅರ್ಜಿದಾರರ ಸಲ್ಲಿಕೆಯ ಬಗ್ಗೆ ಮಾತನಾಡಿದ ಮುಖ್ಯ ನ್ಯಾಯಾಧೀಶರು, ‘ಕುಟುಂಬದಲ್ಲಿ ಮಗಳು ಅಥವಾ ಸಹೋದರಿ ಮದುವೆಯಾದ ನಂತರ, ನಾವು ಅವಳಿಗೆ ಏನನ್ನೂ ನೀಡಬಾರದು ಎಂಬ ಮನೋಭಾವವನ್ನು ಬದಲಾಯಿಸಬೇಕು. ಅವಳು ನಿಮ್ಮೊಂದಿಗೆ ಜನಿಸಿದ ನಿಮ್ಮ ಸಹೋದರಿಯಾಗಿದ್ದಾಳೆ. ಅವಳು ಮದುವೆಯಾಗಿದ್ದರೂ, ಆಕೆಗೆ ತವರು ಮನೆಯಲ್ಲಿರುವ ಸ್ಥಾನಮಾನ ಬದಲಾಗುವುದಿಲ್ಲ’ ಎಂದಿದ್ದಾರೆ. ʻವಿವಾಹಿತ ಅಥವಾ ಅವಿವಾಹಿತ ಮಗನು ಮಗನಾಗಿ ಉಳಿದಿದ್ದರೆ, ವಿವಾಹಿತ ಅಥವಾ ಅವಿವಾಹಿತ ಮಗಳು ಮಗಳಾಗಿಯೇ ಉಳಿಯಬೇಕು.…

Read More