ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸರು ದಾಳಿ ನಡೆಸಿ 10 ಲಕ್ಷ ರೂ ಮೌಲ್ಯದ ಹಣವನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಅನೇಕಲ್ ತಾಲೂಕಿನ ಹುಸ್ಕೂರು ಬಳಿ ನಡೆದಿದೆ. ಇಬ್ಬರು ವ್ಯಕ್ತಿಗಳು ನಿರ್ಜನ ಪ್ರದೇಶದಲ್ಲಿ ಇನೋವಾ ಕಾರು ನಿಲ್ಲಿಸಿಕೊಂಡು ಕಂತೆ ಕಂತೆ ನೋಟು ಎಣಿಸುತ್ತಿದ್ದರು. ಈ ವೇಳೆ ಅಲ್ಲೇ ರೌಂಡ್ಸ್ ನಲ್ಲಿದ್ದ ಪೊಲೀಸರು ಅನುಮಾನಗೊಂಡು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿ 10 ಲಕ್ಷ ರೂ ಹಣ ಪತ್ತೆಯಾಗಿದೆ.ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ನಡೆಸಿದಾಗ ಸರಿಯಾದ ಉತ್ತರ ಬರಲಿಲ್ಲ. ಈ ಹಿನ್ನೆಲೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪಂಚಾಯತಿಯ ಬಿಲ್ ಕಲೆಕ್ಷರ್ ಮಲ್ಲೇಶ್ ಮತ್ತು ನೆಲಮಂಗದಲದ ರಾಜೇಶ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Author: main-admin
ಮಂಜೇಶ್ವರ; ಶಾಲಾ ವಿದ್ಯಾರ್ಥಿಗಳು ತೆರಳುತ್ತಿದ್ದ ಬೈಕ್‌ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೀಯಪದವಿನ ಪ್ರೀತೇಶ್ ಮತ್ತು ಅಭಿ ಮೃತ ವಿದ್ಯಾರ್ಥಿಗಳು ಎನ್ನಲಾಗಿದೆ. ಶಾಲಾ ಬಸ್, ವಿದ್ಯಾರ್ಥಿಗಳು ಹೋಗುತ್ತಿದ್ದ ಬೈಕ್ ಗೆ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಮಂಗಳೂರು: ಸುರತ್ಕಲ್ ಬಸ್ ನಿಲ್ದಾಣ ಸನಿಹದಲ್ಲಿ ಮೂರು ವರ್ಷದ ಮಗುವೊಂದು ಸಾರ್ವಜನಿಕರಿಗೆ ಪತ್ತೆಯಾಗಿದ್ದು, ತಾಯಿಯಿಂದ ಬೇರ್ಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸಾರ್ವಜನಿಕರು ಮಗುವನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಮಗು ಬೋಳು ತಲೆಯಲ್ಲಿದ್ದು, ಗುಲಾಬಿ ಬಣ್ಣದ ಅಂಗಿ ಧರಿಸಿದೆ. ಮಗುವಿನ ಪೋಷಕರನ್ನು ಪತ್ತೆ ಹಚ್ಚಲು ಸಾರ್ವಜನಿಕರು ಪೊಲೀಸರಿಗೆ ಕೋರಿದ್ದು, ಮಗುವನ್ನು ಕಳೆದುಕೊಂಡ ಪೋಷಕರು ಸುರತ್ಕಲ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಯಾರಾದರೂ ಮಗುವನ್ನು ಕಳೆದುಕೊಂಡಿದ್ದಲ್ಲಿ ಸುರತ್ಕಲ್ ಠಾಣಾ ಫೋನ್ ದೂ.ಸಂ.- 0824-2220540, ಪೊಲೀಸ್ ನಿರೀಕ್ಷಕರ ಮೊ.ಸಂ.- 9480805360, ಪೊಲೀಸ್ ಉಪನಿರೀಕ್ಷಕ- 9480802344, ನಗರ ನಿಸ್ತಂತು ನಿಯಂತ್ರಣ ಕೊಠಡಿ ಮೊ. 9480802321 ಅಥವಾ ಮಹಿಳಾ ಸಮನ್ವಯ ಅಧಿಕಾರಿ ಮೊ.: 9448332713ನ್ನು ಸಂಪರ್ಕಿಸುವಂತೆ ಸುರತ್ಕಲ್ ಠಾಣೆಯ ಪ್ರಕಟನೆ ತಿಳಿಸಿದೆ.
ಬೆಂಗಳೂರು: ಬೇಸಾದಯ ಉದ್ದೇಶಕ್ಕಾಗಿ ಹೊಂದಿರುವ ಯಾವುದೇ ಭೂಮಿಯನ್ನು ಬೇಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸುವಾಗ ಸಲ್ಲಿಸುವಂತ ಅರ್ಜಿ ಶುಲ್ಕದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ. ಈ ಸಂಬಂಧ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯಿಂದ ರಾಜ್ಯ ಪಾಲರ ಪರವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಅದರಲ್ಲಿ ಮೂಲ ಅಧಿನಿಯಮದಲ್ಲಿನ 96ನೇ ಪ್ರಕರಣದಲ್ಲಿ ಉಪಪ್ರಕರಣ(1)ರಲ್ಲಿ ಸುಳ್ಳು ಅಥವಾ ತಪ್ಪು ಅಫಿಡವಿಟ್ ಘೋಷಣೆಯನ್ನಾಧರಿಸಿ ಎಂಬ ಪದಗಳನ್ನು ಸೇರಿಸುವುದು ಎಂದಿದ್ದಾರೆ. ಇನ್ನೂ ಭೂ ಪರಿವರ್ತನೆ ಶುಲ್ಕಲದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ. ಒಂದು ಸಾವಿರ ರೂಪಾಯಿಯ ಶುಲ್ಕವನ್ನು ಒಂದು ಲಕ್ಷಕ್ಕೆ ಹೆಚ್ಚಿಸಿದ್ದರೇ, ಇಪ್ಪತ್ತೈದು ರೂಪಾಯಿಗಳ ಶುಲ್ಕವನ್ನು ಎರಡು ಸಾವಿರದ ಐದುನೂರು ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ಆರು ಐಪಿಎಸ್ ಅಧಿಕಾರಿಗಳನ್ನು ( IPS Officer ) ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕುರಿತಂತೆ ಅಧಿಸೂಚನೆ ಹೊರಡಿಸಲಾಗಿದ್ದು, ಕಲಬುರ್ಗಿಯ ಡಿಐಜಿ ಮತ್ತು ಕಮೀಷನ್ ಆಫ್ ಪೊಲೀಸ್ ಆಗಿದ್ದಂತ ಡಾ.ವೈ ಎಸ್ ರವಿ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಡೈರೆಕ್ಟರೇಟ್ಸ್ ಆಫ್ ಸಿವಿಲ್ ರೈಟ್ಸ್ ನ ಡಿಜಿಪಿಯಾಗಿ ನೇಮಕ ಮಾಡಿದೆ. ಇನ್ನೂ ಸ್ಥಳ ನಿಯೋಜನೆಯ ನಿರೀಕ್ಷೆಯಲ್ಲಿದ್ದಂತ ಡಾ.ದಿವ್ಯ ವಿ ಗೋಪಿನಾಥ್ ಅವರನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಇಂಟೆಲಿಜೆನ್ಸ್ ವಿಭಾಗದ ಎಸ್ಪಿಯಾಗಿದ್ದಂತ ಚೇತನ್ ಆರ್ ಅವರನ್ನು ಕಲಬುರ್ಗಿ ನಗರದ ಕಮೀಷನರ್ ಆಫ್ ಪೊಲೀಸ್ ಆಗಿ ನೇಮಿಸಿದೆ. ಹಾವೇರಿ ಎಸ್ಪಿಯಾಗಿದ್ದಂತ ಹನುಮಂತರಾಯ ಅವರನ್ನು ಇಂಟೆಲಿಜೆನ್ಸ್ ವಿಭಾಗದ ಸೂಪರಿಡೆಂಟ್ ಆಗಿ ನೇಮಕ ಮಾಡಲಾಗಿದೆ. ಇಂಟೆಲಿಜೆನ್ಸ್ ಎಸ್ಪಿಯಾಗಿದ್ದಂತ ನಾರಾಯಣ ಎಂ ಅವರನ್ನು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಇಟೆಲಿಜೆನ್ಸ್ ಎಸ್ಪಿಯಾಗಿದ್ದಂತ ಡಾ.ಶಿವಕುಮಾರ್ ಅವರನ್ನು ಹಾವೇರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ…
ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೆಯ ಸೇತುವೆಯ ಬಳಿ ನೇತ್ರಾವತಿ ನದಿಯಲ್ಲಿ ನಡೆದಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಸಜಿಪ ನಿವಾಸಿ ರಾಜೇಶ್ ಪೂಜಾರಿ ಸ್ಥಾನಮನೆ(36) ಎಂದು ಗುರುತಿಸಲಾಗಿದೆ. ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಇಂದು ಬೆಳಗ್ಗೆ ದ್ವಿಚಕ್ರ ವಾಹನವೊಂದು ಅನಾಥ ಸ್ಥಿತಿಯಲ್ಲಿ ಬಿದ್ದುಕೊಂಡಿತು. ಇದನ್ನು ನೋಡಿದ ಸಾರ್ವಜನಿಕರು ಸಂಶಯಗೊಂಡು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಗ್ನಿಶಾಮಕ ದಳವನ್ನು ಕರೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ನದಿಯಲ್ಲಿ ಹುಡುಕಾಟ ನಡೆಸಿದಾಗ ರಾಜೇಶ್ ಪೂಜಾರಿಯ ಮೃತದೇಹ ಪತ್ತೆಯಾಗಿದೆ. ಗೂಡಿನಬಳಿಯ ಮುಳುಗುತಜ್ಞರಾದ ಇಕ್ಬಾಲ್ (ಬಾಬಿ), ಮುಹಮ್ಮದ್( ಮಮ್ಮು), ಹಾರಿಸ್, ಇಬ್ರಾಹೀಂ ಎಂ.ಕೆ. ಅವರು ನದಿಯಲ್ಲಿ ಶೋಧ ಮತ್ತು ಮೃತದೇಹ ಮೇಲಕ್ಕೆತ್ತಲು ಸಹಕಾರ ನೀಡಿದರು. ರಾಜೇಶ್ ಅವರು ಕಳೆದ ರಾತ್ರಿ ತನ್ನ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಸೇತುವೆಯಲ್ಲಿ ಅಪಘಾತಕ್ಕೀಡಾಗಿ ಅವರು ನದಿಗೆಸೆಯಲ್ಪಟ್ಟಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು,…
ಮಂಗಳೂರು : ಮಂಗಳೂರಿನಲ್ಲಿ ಹೈಪ್ರೊಫೈಲ್ ಗಾಂಜಾ ದಂಧೆ ಪ್ರಕರಣ ಸಂಬಂಧ ವೈದ್ಯರು, ವಿದ್ಯಾರ್ಥಿಗಳು ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮತ್ತೋರ್ವ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 11 ಕ್ಕೇರಿದೆ. ಕೆಎಂಸಿ ಅಂತಿಮ ವರ್ಷದ ವಿದ್ಯಾರ್ಥಿ ತುಮಕೂರಿನ ಡಾ.ವಿ.ಎಸ್. ಹರ್ಷಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದೇರಳಕಟ್ಟೆಯ ಯೆನೇಪೋಯಾ ಮೆಡಿಕಲ್ ಕಾಲೇಜು, ಮಂಗಳೂರಿನ ಪ್ರತಿಷ್ಠಿತ ಕೆ.ಎಂ.ಸಿ. ಅತ್ತಾವರ, ಕೆ.ಎಂ.ಸಿ ಮಣಿಪಾಲ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳು ಈ ಗಾಂಜಾ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ವೈದ್ಯರಾದ ಡಾ. ಸಮೀರ್(32), ಮಣಿಮಾರನ್ ಮುತ್ತು(28)ರನ್ನು ವಿದ್ಯಾರ್ಥಿನಿಯರಾದ ಡಾ. ನದಿಯಾ ಸಿರಾಜ್ (24), ಡಾ.ವರ್ಷಿಣಿ ಪ್ರತಿ (26), ಡಾ.ರಿಯಾ ಚಡ್ಡ (22), ಡಾ.ಹೀರಾ ಬಸಿನ್ (23) ಹಾಗೂ ವೈದ್ಯ ಡಾ.ಸಮೀರ್ (32), ಮಣಿಮಾರನ್ ಮುತ್ತು (28), ಸ್ಥಳೀಯ ಮಹಮ್ಮದ್ ರವೂಪ್ ಅಲಿಯಾಸ್ ಗೌಸ್ (34) ಬಂಧಿಸಲಾಗಿದೆ. ವಿದ್ಯಾರ್ಥಿಗಳಾದ ಡಾ. ಭಾನು ದಹಿಯಾ (27), ಡಾ.ಕ್ಷಿತಿಜ್ ಗುಪ್ತ (23) ಇವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ…
ಉಡುಪಿ : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕುಮ್ಕಿ ಜಮೀನಿನಲ್ಲಿ ಕೃಷಿ ಮಾಡಲು 30 ವರ್ಷ ಗುತ್ತಿಗೆ ನೀಡಲು ಸರಕಾರ ನಿರ್ಧರಿಸಿದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ. ಮಾಡಾವು-ಸುಳ್ಯ ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು,ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹಾರವಾಗಿದೆ. ಅಲ್ಲದೆ ಕುಮ್ಕಿ ಜಮೀನಿನಲ್ಲಿ ಕೃಷಿ ಮಾಡಲು 30 ವರ್ಷ ಗುತ್ತಿಗೆ ನೀಡಲು ಸರ್ಕಾರ ನಿರ್ಧರಿಸಿದೆ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ಹತ್ತು ವರ್ಷಗಳ ವಿದ್ಯುತ್ ಬೇಡಿಕೆ ಮುಂದಿರಿಸಿ ಜಿಲ್ಲೆಯಲ್ಲಿ ಪ್ರಸ್ತಾವನೆಯಲ್ಲಿದ್ದ ಹನ್ನೊಂದು 110 ಕೆವಿ ಸಬ್‌ಸ್ಟೇಷನ್‌ಗಳಿಗೆ ಮಂಜೂರಾತಿ ನೀಡಲಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿದ್ದ ಹಲವಾರು ವಿದ್ಯುತ್ ಯೋಜನೆಗಳಿಗೆ ಕಳೆದ ಒಂದೂವರೆ ವರ್ಷದಲ್ಲಿ ಮಂಜೂರಾತಿ ನೀಡಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ 200 ಸಬ್‌ಸ್ಟೇಷನ್ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ಹಾಸನ : ಕರ್ತವ್ಯಲೋಪ ಹಿನ್ನೆಲೆ ಹಾಸನ ಜಿಲ್ಲೆ ಸಕಲೇಶಪುರ ವಲಯ ಅರಣ್ಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಅರಣ್ಯ ಅಪರಾಧಗಳ ತನಿಖೆ ನಡೆಸುವಲ್ಲಿ ವಿಫಲವಾದ ಹಿನ್ನೆಲೆ ಸಕಲೇಶಪುರ ವಲಯ ಅರಣ್ಯಾಧಿಕಾರಿ ಎಸ್.ಎಲ್ ಶಿಲ್ಪಾ ಅವರನ್ನು ಅಮಾನತು ಮಾಡಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್ ಕಿಶೋರ್ ಸಿಂಗ್ ಆದೇಶ ಹೊರಡಿಸಿದ್ದಾರೆ. ವಲಯ ಅರಣ್ಯಾಧಿಕಾರಿಗೆ ಇರುವ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದು, ಸರ್ಕಾರಿ ಸ್ವತ್ತನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಅಧಿಕಾರಿ, ಸಿಬ್ಬಂದಿ ವರ್ಗದವರ ನಡುವೆ ಭಿನ್ನಾಭಿಪ್ರಾಯ ಉಂಟಾಗಲು ಹಾಗೂ ವಿಭಾಗದ ಮತ್ತು ವಲಯದ ಆಡಳಿತಾತ್ಮಕ ತೊಡಕು ಉಂಟಾಗಲು ನೇರ ಕಾರಣರಾಗಿದ್ದಾರೆ ಎಂದು ಅಮಾನತು ಮಾಡಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್ ಕಿಶೋರ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಮಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹೊರವಲಯದ ತೊಕ್ಕೊಟ್ಟಿನ ಬಳಿಯ ಪೆರ್ಮಣ್ಣೂರು ಗ್ರಾಮದ ಮಾಜೀಲ್ ಅಬ್ದುಲ್ ರೆಹಮಾನ್ ಮತ್ತು ದಾವಣಗೆರೆಯ ಹೊನ್ನಾಳಿ ಮೂಲದ ನದೀಂ ಅಹಮದ್ ಎಂದು ಗುರುತಿಸಲಾಗಿದೆ. ಇಬ್ಬರೂ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಖ್ ಹಾಗೂ ಆತನ ಜೊತೆಗಾರರಾದ ಮಾಜಿ ಮುನೀರ್ ಮತ್ತು ಸೈಯದ್ ಯಾಸಿನ್ ಜೊತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಶಾರಿಕ್, ಮಾಜ್ ಮುನೀರ್ ಹಾಗೂ ಯಾಸಿನ್ ಶಿವಮೊಗ್ಗದ ತುಂಗಾ ದಡ ಹಾಗೂ ಮಂಗಳೂರಿನ ಸೇತ್ರಾವತಿ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ್ದರು. ಅಲ್ಲದೇ ಮೂವರು ಮಂಗಳೂರಿನಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ ಬರೆದಿದ್ದರು ಎನ್ನಲಾಗಿದೆ.