Author: main-admin

ಮಂಗಳೂರು : ಮಾದಕ ವಸ್ತು ಸೇವಿಸಿದ್ದ ಓರ್ವ ಯುವಕನನ್ನು ನಗರದ ಹೊರವಲಯದ ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕಸಬಾ ಬೆಂಗ್ರೆ ಬದ್ರಿಯಾ ಮಸೀದಿ ಬಳಿಯ ನಿವಾಸಿ ಮುಹಮ್ಮದ್ ಅಝರ್ (31) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯ ಪಿಎಸೈ ಜ್ಞಾನಶೇಖರರು ಕರ್ತವ್ಯದಲ್ಲಿದ್ದವೇಳೆ ಸಂಜೆ ಕಸಬಾ ಬೆಂಗ್ರೆ ಗ್ರಾಮದ ಗ್ರಂಡ್ ಬಳಿ ಯುವಕನೋರ್ವ ನಶೆಯಲ್ಲಿ ಇದ್ದಂತೆ ಕಂಡುಬಂದಿದ್ದು ಕೂಡಲೇ ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಅಮಲು ಪದಾರ್ಥ ಸೇವಿಸಿರುವುದು ದೃಢ ಪಟ್ಟಿದೆ. ಬಳಿಕ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Read More

ಮನೆಯಲ್ಲಿ ಗಣೇಶನ ಪೂಜೆ ಮಾಡುವ ವಿಚಾರಕ್ಕೆ ಸಹೋದರರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಾಯಿಕಟ್ಟಾ ಬಿಂದು ಮಾಧವ ದೇವಸ್ಥಾನದ ಬಳಿ ನಡೆದಿದೆ. ಸಂದೇಶ್ ಪ್ರಭಾಕರ್ ಬೋರ್ಕರ್, ಹತ್ಯೆಯಾದ ವ್ಯಕ್ತಿ. ಮನೀಶ್ ಕಿರಣ್ ಬೋರ್ಕರ್ ಹತ್ಯೆ ಮಾಡಿದ ಆರೋಪಿ. ಘಟನೆಯಲ್ಲಿ ಶರತ್ ಎಂಬಾತ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರತೀ ವರ್ಷ ಗಣಪತಿ ಹಬ್ಬದಂದು ಶಿರಸಿಯಿಂದ ಬರುವ ಕುಟುಂಬಸ್ಥರು ಕಾರವಾರದಲ್ಲಿ ಎಲ್ಲರೂ ಸೇರಿ ಗಣೇಶನ ಹಬ್ಬ ಮಾಡ್ತಿದ್ರು. ಪ್ರಭಾಕರ್ ಎಂಬವರು ಕಳೆದ ವರ್ಷದ ಹಣದ ಲೆಕ್ಕ ನೀಡಿಲ್ಲ ಎಂದು ಕುಟುಂಬಸ್ಥರು ಗಲಾಟೆ ಎಬ್ಬಿಸಿದರು. ಈ ವೇಳೆ ಪ್ರಭಾಕರ್ ಮಕ್ಕಳಾದ ಸಂದೇಶ ಹಾಗೂ ಶರತ್ ಸಹಾಯಕ್ಕೆ ಬಂದಿದ್ರು. ಇದನ್ನು ನೋಡಿ ಪ್ರಭಾಕರ್ ತಂಗಿ ಮಕ್ಕಳಾದ ಕಿರಣ್, ಪ್ರಶಾಂತ್, ರತನ್, ಮನೀಶ್ ಗಲಾಟೆ ಮಾಡಿದ್ದಾರೆ. ಗಲಾಟೆ ವೇಳೆ ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಉಳಿದವರು ಸಂದೇಶನನ್ನು ಕೆಳಗೆ ಬೀಳಿಸಿದ್ರೆ, ಮನೀಶ್ ಚಾಕು ಹಿಡಿದು ಹೊಟ್ಟೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ…

Read More

ಲಖನೌ : ದೇಶದಲ್ಲಿ ಶಾಂತಿ ಕಾಪಾಡಿಕೊಳ್ಳಲು ಸೇನಾಪಡೆಗಳು ಯುದ್ಧಕ್ಕೂ ಸಿದ್ಧವಿರಬೇಕು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗುರುವಾರ ಕರೆ ನೀಡಿದ್ದಾರೆ. ಸೇನೆಯ ಮೂರು ಪಡೆಗಳ ಕಮಾಂಡರ್‌ಗಳು ಇದೇ ಮೊದಲ ಬಾರಿಗೆ ಆಯೋಜಿಸಿರುವ ಜಂಟಿ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಭಾರತ ಶಾಂತಿ ಪ್ರಿಯ ರಾಷ್ಟ್ರ. ಹಾಗಾಗಿ, ಶಾಂತಿ ಕಾಪಾಡಿಕೊಳ್ಳಲು ಸೇನೆಯು ಯುದ್ಧಕ್ಕೂ ಸಿದ್ಧವಿರಬೇಕು. ಭವಿಷ್ಯದಲ್ಲಿ ಎದುರಾಗಬಹುದಾದ ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮೂರು ಸೇನಾಪಡೆಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಒತ್ತಿ ಹೇಳಿದರು. ರಷ್ಯಾ–ಉಕ್ರೇನ್‌ ಯುದ್ಧ, ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಸಮರ ಹಾಗೂ ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳನ್ನು ಉಲ್ಲೇಖಿಸಿದ ಸಚಿವರು, ಅವುಗಳ ವಿವಿಧ ಆಯಾಮಗಳನ್ನು ಅಧ್ಯಯನ ಮಾಡಿ ಭವಿಷ್ಯದಲ್ಲಿ ಬಂದೊದಗಬಹುದಾದ ಅನಿರೀಕ್ಷಿತ ಸವಾಲುಗಳನ್ನು ಎದುರಿಸಲು ಸಿದ್ಧವಿರಬೇಕು ಎಂದರು. ಜಾಗತಿಕ ಚಂಚಲತೆಯ ಹೊರತಾಗಿಯೂ ಭಾರತವು ಶಾಂತಿಯುತವಾಗಿ ಅಭಿವೃದ್ಧಿ ಸಾಧಿಸುತ್ತಿದೆ. ಹಾಗಿದ್ದರೂ, ಸವಾಲುಗಳು ಹೆಚ್ಚಾಗುತ್ತಲೇ ಇದ್ದು, ನಾವು ಎಚ್ಚರವಾಗಿರಬೇಕಾದ್ದು ಅವಶ್ಯ ಎಂದು ಹೇಳಿದರು. ಸೇನಾಪಡೆಗಳಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಶಸ್ತ್ರಾಸ್ತ್ರಗಳನ್ನು ಸಮತೋಲಿತವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು. ದತ್ತಾಂಶ ನಿರ್ವಹಣೆ…

Read More

ಬಂಟ್ವಾಳ: ನವ ದಂಪತಿಗಳಿಬ್ಬರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ ಸಂಭವಿಸಿ ನವವಿವಾಹಿತೆ ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯ ಬಂಟ್ವಾಳದ ತಲಪಾಡಿ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ನವವಿವಾಹಿತೆ ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸಗಂಭೀರ ಗಾಯಗೊಂಡ ಪತಿ ಅನಿಶ್ ಕೃಷ್ಣ ಎಂದು ಗುರುತಿಸಲಾಗಿದೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅನಿಶ್ ಕೃಷ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಿಸಿರೋಡ್‌‌ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ದಂಪತಿಗಳ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಡಿವೈಡರ್ ಮೇಲಿನಿಂದ ಇನ್ನೊಂದು ಬದಿಗೆ ಹಾರಿ ಮಂಗಳೂರು ಕಡೆಯಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್‌ಟಿ.ಸಿ ಬಸ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಿಂದ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು. ಸೆ.5 ರಂದು ದೇಂತಡ್ಕ ದೇವಸ್ಥಾನದಲ್ಲಿ ಮದುವೆ ನಡೆದಿತ್ತು. ಮದುವೆ ಕಾರ್ಯಕ್ರಮದ ವಿಚಾರವಾಗಿ ಇಂದು…

Read More

ಪುತ್ತೂರು,: ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದ ಮಹಿಳೆ ಇದೀಗ ಪುತ್ತಿಲ ವಿರುದ್ದ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದಾರೆ. ತಾನು ನೀಡಿರುವ ದೂರಿನಲ್ಲಿ ಉಲ್ಲೇಖಿಸಿರುವಂತೆ ಪ್ರಕರಣ ದಾಖಲಿಸಿಕೊಳ್ಳಲಿಲ್ಲ ಎಂದು ಪೊಲೀಸರ ವಿರುದ್ದವೂ ಸಂತ್ರಸ್ತೆ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಮಹಿಳೆಯ ದೂರಿನಂತೆ ಲೈಂಗಿಕ ದೌರ್ಜನ್ಯ, ನಂಬಿಕೆ ದ್ರೋಹ, ಕೊಲೆ ಬೆದರಿಕೆ ಒಡ್ಡಿರುವ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ ಮಹಿಳೆ ನೀಡಿರುವ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಆ ಬಳಿಕ ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ (ಐಪಿಸಿ 376) ಸೇರ್ಪಡೆಗೊಳಿಸಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ಮಹಿಳೆಯ ದೂರಿನಂತೆ ತನಿಖೆ ಮುಂದುವರಿಸಿದ್ದ ಪುತ್ತೂರುನಗರ ಪೊಲೀಸರು ಠಾಣೆ ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ. ಅವರ ನೇತೃತ್ವದಲ್ಲಿ ಸಂತ್ರಸ್ತ ಮಹಿಳೆಯನ್ನು ಸೆ.2ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ,…

Read More

ಕಾಸರಗೋಡು: ಮನೆಗೆ ಕೆಲಸಕ್ಕೆ ಬಂದ ಸಂದರ್ಭದಲ್ಲಿ ಚಿನ್ನಾಭರಣ , ಐ ಫೋನ್ ಹಾಗೂ ಸ್ಮಾರ್ಟ್ ವಾಚ್ ಗಳನ್ನು ಕಳವು ಗೈದ ಇಬ್ಬರು ಯುವತಿಯರನ್ನು ಮನೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಕಯ್ಯಾರಿನಲ್ಲಿ ವಾಸವಾ ಗಿರುವ ಪತ್ತನಂತ್ತಿಟ್ಟ ಮೂಲದ ಬ್ಲೆಸಿ (23) ಮತ್ತು ಜಿನ್ಸಿ (22) ಎಂದು ಗುರುತಿಸಲಾಗದೆ. ಬಿ .ಸಿ ರೋಡ್ ನ ಮನೆಯಿಂದ ಐ ಫೋನ್, ಮೂರು ಮುಕ್ಕಾಲು ಪವನ್ ಚಿನ್ನಾಭರಣ,ಸ್ಮಾರ್ಟ್ ವಾಚ್ ನ್ನು ಇವರು ಕಳವು ಮಾಡಿದ್ದರು. ಕಯ್ಯಾರಿನಲ್ಲಿ ವಾಸ್ತವ್ಯ ಹೂಡಿ ಮನೆ ಕೆಲಸಕ್ಕೆ ತೆರಳುತ್ತಿದ್ದರು. ಒಂದು ತಿಂಗಳ ಹಿಂದೆ ಕುಬಣೂರಿನ ಸೈನುದ್ದೀನ್ ರವರ ಮನೆಗೆ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಐ ಫೋನ್ ಕಳವು ಗೀಡಾಗಿತ್ತು. ಆದರೆ ಮನೆಯವರು ಫೋನ್ ಎಲ್ಲಿಯಾದರೂ ಬಿದ್ದು ಹೋಗಿರಬಹುದು ಎಂದು ಸಂಶಯಿಸಿದ್ದರು. ಆಗಸ್ಟ್ 24 ಮತ್ತು 25 ರಂದು ಮತ್ತೆ ಈ ಯುವತಿಯರು ಮನೆ ಕೆಲಸಕ್ಕೆ ಬಂದಿದ್ದರು. ಅಂದು ಕೋಣೆಯಲ್ಲಿದ್ದ ಬ್ಯಾಗ್ ನಿಂದ ಚಿನ್ನಾಭರಣ…

Read More

ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ನಾಲ್ವರು ವಾರಂಟ್ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಅವರನ ಪಣಂಬೂರು, ಕೊಣಾಜೆ ಹಾಗೂ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಕುದ್ರೋಳಿ ನಡುಪಳ್ಳಿ ನಿವಾಸಿ ಮುನಾವರ್ ಮುಸ್ತಾಕ್(40) ಬಂಧಿತ ಆರೋಪಿ. ಈತ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ, ದನಗಳವು ಹಾಗೂ ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಮಾದಕದ್ರವ್ಯ ಸೇವನೆ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಬಳಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಆತನನ್ನು ಮುಂದಿನ ಕ್ರಮಕ್ಕೆ ಕೊಣಾಜೆ ಠಾಣೆಗೆ ಹಸ್ತಾಂತರಿಸಲಾಗಿದ್ದಾರೆ. ಕಣ್ಣೂರು, ಅಡ್ಯಾರ್ ನಿವಾಸಿ ಮೊಹಮ್ಮದ್ ರಫೀಜ್(23) ಎಂಬಾತ ದ.ಕ.ಜಿಲ್ಲೆ, ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಕಳವು, ಕೊಲೆಯತ್ನ, ಹಲ್ಲೆ ಸೇರಿದಂತೆ ಸುಮಾರು 9ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಬಳಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆತನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ…

Read More

ಉಡುಪಿ: ಆನ್ ಲೈನ್ ಟ್ರೇಡಿಂಗ್‌ ವಂಚನೆ ಪ್ರಕರಣದ ಇನ್ನೊಬ್ಬ ಆರೋಪಿಯನ್ನು ಉಡುಪಿ ನಗರದ ಸೆನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕೇರಳ ನಿವಾಸಿ ಅಜ್ಮಲ್‌‌ ಸುಹೈಲ್‌ ಸಿ(19) ಎಂದು ತಿಳಿದು ಬಂದಿದೆ. ಬಂಧನವಾದ ಆರೋಪಿಯಿಂದ 80,000/- ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ವಿವರ: ಪಿರ್ಯಾದಿದಾರರಾದ ಉಪೇಂದ್ರ ಅಂಬಲಪಾಡಿ ಉಡುಪಿ ರವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ WhatsApp ನಲ್ಲಿ ಮೋತಿಲಾಲ್‌ ಒಸ್ವಾಲ್‌ ಪ್ರೈವೇಟ್ ಲಿಮಿಟೆಡ್‌ ಮ್ಯಾನೇಜ್‌‌ಮೆಂಟ್‌ ಗ್ರೂಪ್‌ ಸೇರಿಸಿದ್ದು. ಪಿರ್ಯಾದಿದಾರಿಗೆ ಮೋತಿಲಾಲ್‌ ಒಸ್ವಾಲ್‌ ಪ್ರೈವೇಟ್ ಲಿಮಿಟೆಡ್‌ ಮ್ಯಾನೇಜ್‌‌ಮೆಂಟ್‌ ಗ್ರೂಪ್‌ನ VIP-203-845 ಎಂಬ ಅಕೌಂಟ್‌ ನ್ನು ನೀಡಿರುತ್ತಾರೆ. ಪಿರ್ಯಾದಿದಾರರಿಗೆ ಮೊ.ನಂ 7842874635 ಮತ್ತು 6391854496 ನೇದರಿಂದ Whats App ನಲ್ಲಿ ಟ್ರೇಡಿಂಗ್ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಪಿರ್ಯಾದಿದಾರರನ್ನುನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ,ಒಟ್ಟು 33,10,000/- ಹಣವನ್ನು ಡಿಪಾಸಿಟ್ ಮಾಡಿಸಿಕೊಂಡಿರುತ್ತಾರೆ. ತದನಂತರ ಪಿರ್ಯಾದಿದಾರಿಗೆ ಹೂಡಿಕೆ ಮಾಡಿದ ಹಣ ಮತ್ತು ಲಾಭಾಂಶವನ್ನು ನೀಡದೇ ಮೋಸ ಮಾಡಿರುವುದಾಗಿದೆ. ಈ ಪ್ರಕರಣಕ್ಕೆ ಸಂಬಂದಿಸಿದಂತೆ ಇಗಾಗಲೆ…

Read More

ಉಡುಪಿ: ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದ್ದು, ಎಲ್ಲ ಠಾಣೆ ವ್ಯಾಪ್ತಿಗಳಲ್ಲಿ ಶಾಂತಿ ಸಭೆಗಳನ್ನು ಆಯೋಜನೆ ಮಾಡಿದ್ದೇವೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ಕುಮಾರ್ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಇಲಾಖೆಯಿಂದ ಅನುಮತಿ ಕಡ್ಡಾಯ. ರಾತ್ರಿ 10 ಗಂಟೆಯ ಒಳಗೆ ಡಿಜೆಗೆ ಅವಕಾಶ ಇದ್ದು, ಹತ್ತರ ನಂತರ ಡಿಜೆ ಸೌಂಡ್ ಕಡಿಮೆ ಮಾಡುವಂತೆ ಸೂಚನೆ ನೀಡಿದ್ದೇವೆ. ಹಬ್ಬಕ್ಕೆ ಸಂಬಂಧಪಟ್ಟಂತೆ ಬಂಟಿಂಗ್ ಮತ್ತು ಬ್ಯಾನರ್‌ಗಳಿಗೆ ಪೂರ್ವಾನುಮತಿ ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 472 ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 62 ಸ್ಥಳಗಳನ್ನು ಈದ್ ಮಿಲಾದ್ ಹಬ್ಬಕ್ಕೆ ಗುರುತಿಸಲಾಗಿದೆ. ಬಂದೋಬಸ್ತ್ ಗಾಗಿ ಕೆಎಸ್‌ಆರ್‌ಪಿ ಮತ್ತು ಡಿಆರ್ ಪೊಲೀಸ್ ಸೇರಿದಂತೆ ಭದ್ರತೆಗಾಗಿ 200 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ

Read More

ಮಂಗಳೂರು: ಜಿಲ್ಲಾದ್ಯಂತ ಎಲೆಕ್ಟ್ರಿಕ್ ಆಟೋ ರಿಕ್ಷಾಗಳ (ಇ-ಆಟೋ) ಪ್ರದೇಶ ನಿರ್ಬಂಧಗಳಿಲ್ಲದೆ ಸಂಚರಿಸಲು ಅನುಮತಿ ನೀಡಿ ಜುಲೈ 26ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಆಟೋ-ರಿಕ್ಷಾ ಮಾಲೀಕರು ಮತ್ತು ಚಾಲಕರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಮತ್ತು ಹೈಕೋರ್ಟ್ ನ ನಿರ್ದೇಶನದ ಮೇರೆಗೆ ಈ ಆದೇಶವನ್ನು ಕಾನೂನು ಚೌಕಟ್ಟಿನಲ್ಲಿ ಹೊರಡಿಸಲಾಗಿದೆ. ಸಂಬಂಧಪಟ್ಟವರು ಮೇಲ್ಮನವಿಯ ಮೂಲಕ ಹೆಚ್ಚಿನ ಸ್ಪಷ್ಟೀಕರಣವನ್ನು ಪಡೆಯಬಹುದು’ ಎಂದಿದ್ದಾರೆ. ‘ಯಾವುದೇ ನಗರ (ವಲಯ-1) ಅಥವಾ ಗ್ರಾಮಾಂತರ (ವಲಯ-2) ನಿರ್ಬಂಧಗಳಿಲ್ಲದೆ ಇ-ಆಟೋಗಳು ಕಾರ್ಯನಿರ್ವಹಿಸಲು ಕೇಂದ್ರ ಸರ್ಕಾರವು ಉಚಿತ ಪರವಾನಗಿಗಳನ್ನು ನೀಡಿದೆ. ಇದನ್ನು ಮಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಜಾರಿಗೆ ತರಲಾಗುತ್ತಿದೆ. ಆದರೆ, ತಮಿಳುನಾಡಿನಲ್ಲಿ ನಿರ್ಬಂಧ ಹೇರಲಾಗಿದೆ. ಇಲ್ಲಿ ಅಂತಹ ನಿರ್ಬಂಧಗಳು ಜಾರಿಯಾಗಬೇಕಾದರೆ ರಾಜ್ಯ ಮಟ್ಟದಲ್ಲಿ ಜಾರಿಯಾಗಬೇಕು. ಚಿಕ್ಕಮಗಳೂರಿನ ಆಟೋ ರಿಕ್ಷಾ ಚಾಲಕರು ಈಗಾಗಲೇ ತಮಿಳುನಾಡಿನಲ್ಲಿರುವಂತಹ ನಿರ್ಬಂಧಗಳು ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ’ ಎಂದು ಹೇಳಿದರು.

Read More