ಕಾಸರಗೋಡು: ಅವಳಿ ಸಹೋದರರಿಬ್ಬರು ಕಲ್ಲಿನ ಕ್ವಾರಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಚೀಮೇನಿ ಕನಿಯಾಂದಲದಲ್ಲಿ ನಡೆದಿದೆ.ಚೀಮೇನಿ ಕನಿಯಾಂದಲದಲ್ಲಿ ರಾಧಾಕೃಷ್ಣ ರವರ ಮಕ್ಕಳಾದ ಸುದೇವ್ ( 10) ಮತ್ತು ಶ್ರೀದೇವಿ ( 10) ಮೃತಪಟ್ಟವರು. ಚೀಮೇನಿ ಸರಕಾರಿ ಹಯರ್ ಸೆಕಂಡರಿ ಶಾಲೆಯ ಐದನೇ ತರಗತಿ ಯ ವಿದ್ಯಾರ್ಥಿಗಳಾಗಿದ್ದರು. ‘ಸಂಜೆ ಸುಮಾರು ಆರು ಗಂಟೆ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ.ಮಧ್ಯಾಹ್ನ ಇಬ್ಬರೂ ಸೈಕಲ್ ನಲ್ಲಿ ಆಟವಾಡಲು ತೆರಳಿದ್ದು , ತಡವಾದರೂ ಆಗಮಿಸದ ಹಿನ್ನಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದಾಗ ಕ್ವಾರಿಯ ಸಮೀಪ ಸೈಕಲ್ ಪತ್ತೆಯಾಗಿದೆ. ಸಂಶಯಗೊಂಡು ಮನೆಯವರು ಹಾಗೂ ಪರಿಸರವಾಸಿಗಳು ಶೋಧ ನಡೆಸಿದಾಗ ಕ್ವಾರಿಗೆ ಬಿದ್ದಿರುವುದು ಕಂಡುಬಂದಿದೆ.ಇಬ್ಬರನ್ನು ಮೇಲಕ್ಕೆತ್ತಿ ಸಮೀಪದ ಆಸ್ಪತ್ರೆಗೆ ತಲಪಿಸಿದರೂ ಇಬ್ಬರೂ ಮೃತಪಟ್ಟಿದ್ದರು.ಮೃತದೇಹವನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ
Author: main-admin
ಅಸ್ಸಾಂನ ಸಿಲ್ಚಾರ್ನಲ್ಲಿ ಮಹಿಳೆಯೊಬ್ಬಳು ತನ್ನ 20 ತಿಂಗಳ ಮಗುವಿಗೆ ಸಿಗರೇಟ್ ಸೇದಲು ಮತ್ತು ಮದ್ಯಪಾನ ಮಾಡಲು ಒತ್ತಾಯಿಸಿದ ಘಟನೆ ನಡೆದಿದೆ. ವರದಿಗಳ ಪ್ರಕಾರ, ಬುಧವಾರ ರಾತ್ರಿ ಸಿಲ್ಚಾರ್ನ ಚೆಂಗ್ಕುರಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ವರದಿಗಳ ಪ್ರಕಾರ, ಸ್ಥಳೀಯ ಮಕ್ಕಳ ಸಹಾಯವಾಣಿ ಕೋಶವು ಮಹಿಳೆಯ ಬಗ್ಗೆ ದೂರು ಮತ್ತು ಛಾಯಾಚಿತ್ರಗಳನ್ನು ಸ್ವೀಕರಿಸಿದೆ. ದೂರಿನ ನಂತರ, ಪೊಲೀಸರು ಮಹಿಳೆಯ ನಿವಾಸಕ್ಕೆ ತಲುಪಿ, ಮಗುವನ್ನು ರಕ್ಷಿಸಿ, ತಾಯಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಬುಧವಾರ ರಾತ್ರಿ ಸಿಲ್ಚಾರ್ನ ಚೆಂಗ್ಕುರಿಯಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಧೂಮಪಾನ ಮತ್ತು ಮದ್ಯಪಾನ ಮಾಡುವಂತೆ ಮಾಡುವ ಮೂಲಕ ನಿಂದಿಸುತ್ತಿರುವ ಬಗ್ಗೆ ತಿಳಿದ ನಂತರ, ಪೊಲೀಸರಿಗೆ ಮಾಹಿತಿ ನೀಡಲಾಯಿತು, ಅವರು ಸೂಕ್ತ ಕ್ರಮ ಕೈಗೊಂಡು ತಾಯಿಯನ್ನು ವಶಕ್ಕೆ ತೆಗೆದುಕೊಂಡು ಮಗುವನ್ನು ರಕ್ಷಿಸಿದ್ದಾರೆ ಎಂದು ಹೇಳಿದರು. ಪ್ರಸ್ತುತ, ತಾಯಿ ಮತ್ತು ಮಗು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ವಶದಲ್ಲಿದ್ದಾರೆ ಮತ್ತು ಸಮಗ್ರ ತನಿಖೆಯ ನಂತರ, ದೃಶ್ಯ ಪುರಾವೆಗಳನ್ನು…
ಪುತ್ತೂರು : ವಿದ್ಯುತ್ ತಗುಲಿ ಯುವಕನೊಬ್ಬ ಸಾವನಪ್ಪಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಂಜದಲ್ಲಿ ನಡೆದಿದೆ. ಮೃತರನ್ನು ಬೆಳ್ತಂಗಡಿಯ ಮೊಗ್ರು ಸಮೀಪದ ನಡುಎರ್ಮಲ್ ನ ಪ್ರಕಾಶ್(29) ಎಂದು ಗುರುತಿಸಲಾಗಿದೆ. ಅಲೆಕ್ಕಾಡಿ ಸಮೀಪದ ಪಿಜಾವ್ ನಲ್ಲಿ ವಿದ್ಯುತ್ ಕಂಬ ಏರಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಸಾವನಪ್ಪಿದ್ದಾರೆ. ಇವರು ಗುತ್ತಿಗೆದಾರರ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ರಾಜ್ಯ ಸರಕಾರದ ತೈಲ ಬೆಲೆಯೇರಿಕೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪೆಟ್ರೋಲ್ ಬಂಕ್‌ವರೆಗೆ ಸ್ಕೂಟರ್, ಕಾರನ್ನು ತಳ್ಳಿಕೊಂಡು ಹೋಗಿ ಭಿಕ್ಷೆಯೆತ್ತಿ ವಿನೂತನ ಪ್ರತಿಭಟನೆ ನಡೆಸಿತು. ನಗರದ ಕೊಡಿಯಾಲಬೈಲ್‌ನಲ್ಲಿರುವ ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ “ಚೊಂಬು, ಗೆರಟೆ” ಪ್ರದರ್ಶಿಸಿ ರಾಜ್ಯ ಕಾಂಗ್ರೆಸ್ ಸರಕಾರದ ಬೆಲೆಯೇರಿಕೆಯನ್ನು ಖಂಡಿಸಲಾಯಿತು. ಈ ವೇಳೆ “ಚೊಂಬು ಚೊಂಬು ಪಂಡೆರ್ ಒಟ್ಟೆ ತಿಪ್ಪಿ ಕೊರಿಯೆರ್, ಟಕಾ ಟಕ್ ಟಕಾ ಟಕ್ ಪಂಡೆರ್ ಖಾಲಿ ಚೊಂಬು ಕೊರಿಯೆರ್” ಎಂಬ ಘೋಷಣೆಗಳು ಕೇಳಿ ಬಂತು. ಬಳಿಕ ಬಿಜೆಪಿ ಕಚೇರಿ ಮುಂಭಾಗದಿಂದ ಅರ್ಧ ಕಿ.ಮೀ. ದೂರದ ಪೆಟ್ರೋಲ್ ಬಂಕ್ ಗೆ ಸ್ಕೂಟರ್ ಗಳನ್ನು ತಳ್ಳಿಕೊಂಡು, ಕಾರನ್ನು ಹಗ್ಗ ಕಟ್ಟಿ ಎಳೆದುಕೊಂಡು ತರಲಾಯಿತು. ಅಲ್ಲಿ ಭಿಕ್ಷೆಯೆತ್ತಿ ಹಣ ಸಂಗ್ರಹಿಸಲಾಯಿತು. ಬಳಿಕ ಗೆರಟೆಯಲ್ಲಿ, ಚೊಂಬುವಿನಲ್ಲಿ ಪೆಟ್ರೋಲ್ ಹಾಕಿಸಿ ಕಾರು, ಸ್ಕೂಟರ್ ಗೆ ತುಂಬಿಸಲಾಯಿತು. ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಸದ ಬ್ರಿಜೇಶ್ ಚೌಟ, ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ವೇದವ್ಯಾಸ ಕಾಮತ್,…
ಸುಳ್ಯ: ಯುವಕನೊಬ್ಬನ ತಲೆಗೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿರುವ ರೀತಿಯಲ್ಲಿ ಶವ ಪತ್ತೆಯಾದ ಘಟನೆ ಸುಳ್ಯ ತಾಲೂಕಿನ ಅಜ್ಞಾವರ ಗ್ರಾಮದ ಕಾಂತಮಂಗಲದಲ್ಲಿ ನಡೆದಿದೆ. ಮೃತ ವ್ಯಕ್ತಿಯ ವಯಸ್ಸು ಸುಮಾರು 25-30 ವರ್ಷ ಎಂದು ಅಂದಾಜಿಸಲಾಗಿದ್ದು ಸುಳ್ಯ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸುತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಬೆಳ್ಳಾರೆಯಲ್ಲಿಯೂ ಕೂಡ ಇದೇ ರೀತಿ ಮಹಿಳೆಯನ್ನು ಕಲ್ಲು ಹೊತ್ತು ಹಾಕಿ ಕೊಲೆ ಮಾಡಿದ್ದ ಘಟನೆ ನಡೆದಿದ್ದು ಇದಕ್ಕೆ ಸಂಬಂಧಪಟ್ಟ ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಇದೀಗ ಮತ್ತೆ ಅದೇ ರೀತಿಯ ಘಟನೆ ನಡೆದಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಪೊಲೀಸರ ತನಿಖೆಯಿಂದ ಘಟನೆಯ ಪೂರ್ಣ ಮಾಹಿತಿ ತಿಳಿಯಲಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಮಂಗಳೂರು: ಬಸ್ ಚಾಲಕನ ಚಾಣಾಕ್ಷತನ, ಧೈರ್ಯದ ನಿರ್ಧಾರದಿಂದಾಗಿ ದುರಂತವೊಂದು ತಪ್ಪಿ ಹತ್ತಾರಿ ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಂಕನಾಡಿಯಿಂದ ಆಕಾಶಭವನಕ್ಕೆ ತೆರಳುವ 60 ಸಂಖ್ಯೆಯ ಸಿಟಿ ಬಸ್ ಶನಿವಾರ ಬೆಳಗ್ಗೆ 8.45ರ ಸುಮಾರಿಗೆ ಕೊಂಚಾಡಿ ವಿದ್ಯಾ ಶಾಲೆ ಬಳಿಯ ತಗ್ಗಾದ ರಸ್ತೆ ತಲುಪುವ ಕೆಲವೇ ಕ್ಷಣಗಳ ಮೊದಲು ಬಸ್‌ನ ಬ್ರೇಕ್‌ನಲ್ಲಿ ಸಮಸ್ಯೆ ಉಂಟಾಯಿತು. ಚಾಲಕ ಗ್ಲೆನ್ ಸಿಕ್ವೇರಾ ಬ್ರೇಕ್ ಪೆಡಲ್ ಅನ್ನು ಎಷ್ಟು ಬಲವಾಗಿ ತುಳಿದರೂ ಬ್ರೇಕ್ ಹಿಡಿಯಲಿಲ್ಲ. ಕೂಡಲೇ ಹೇಗಾದರೂ ಬಸ್ ಅನ್ನು ನಿಲ್ಲಿಸಲೇಬೇಕೆಂದು ಧೈರ್ಯ ಮಾಡಿದ ಅವರು ರಸ್ತೆ ಬದಿ ಪಾರ್ಕ್ ಮಾಡಿದ್ದಸ್ಕೂಟರ್‌ಗೆ ಢಿಕ್ಕಿ ಹೊಡೆಸಿ ನಿಲ್ಲಿಸುವ ಯತ್ನ ನಡೆ ಸಿದರು. ಆದರೂ ಬಸ್ ನಿಲ್ಲಲಿಲ್ಲ. ಅಷ್ಟರಲ್ಲೇ ಬಸ್‌ನಲ್ಲಿದ್ದ ಪ್ರಯಾಣಿಕರು ಆತಂಕದಿಂದ ಬೊಬ್ಬೆ ಹಾಕಲು ಆರಂಭಿಸಿದರು. ಧೈರ್ಯ ಕಳೆದುಕೊಳ್ಳದ ಗ್ಲೆನ್ ಬಸ್ ಅನ್ನು ಮತ್ತೆ ಬಲಕ್ಕೆ ತಿರುಗಿಸಿ ಡಿವೈಡರ್‌ಗೆ ಢಿಕ್ಕಿ ಹೊಡೆದು ನಿಲ್ಲಿಸಲು ಯತ್ನಿಸಿದರು. ಈ ನಡುವೆ ಹಂಪ್ಸ್ ಮೇಲೆಯೂ ಬಸ್ ಹಾಯಿಸಿದರು. ಕೊನೆಗೆ ಬಸ್ ಡಿವೈಡರ್‌ಗೆ ಢಿಕ್ಕಿ ಹೊಡೆದು ನಿಂತಿತು.…
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಸಮೀಪದ ಶೇಖಮಲೆ ಬಳಿ ಕಾರುಗಳ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ ಆಲ್ಟೊ ಮತ್ತು ಬೋಲೆರೋ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಆಲ್ಟೊ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಯಲಾಗಿದೆ. ಮೃತರನ್ನು ಸೋಮವಾರಪೇಟೆ ಮೂಲದ ಲೋಕೇಶ್, ರವೀಂದ್ರ ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ ಬೋಲೆರೋ ವಾಹನದಲ್ಲಿದ್ದವರು ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಎನ್ನಲಾಗಿದೆ. ಮಂಗಳೂರಿನಿಂದ ಮಡಿಕೇರಿ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಭಾರತ ಈಗ ಎದುರಿಸುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆಯೆಂದರೆ ಅದು ಕ್ಯಾನ್ಸರ್. ಈ ಸಾಂಕ್ರಾಮಿಕ ರೋಗವು ವಯಸ್ಸಿನ ಭೇದವಿಲ್ಲದೆ ಜನರ ಮೇಲೆ ದಾಳಿ ಮಾಡುತ್ತಿದೆ. ಈಗ ಆಧುನಿಕ ಕಾಲದಲ್ಲಿಯೂ ಔಷಧ ಲಭ್ಯವಿದ್ದರೂ ಸಕಾಲದಲ್ಲಿ ಗುರುತಿಸದಿದ್ದರೆ ಈ ರೋಗ ಮಾರಕವಾಗಬಹುದು. ಕ್ಯಾನ್ಸರ್ ಕೋಶಗಳು ದೇಹದಲ್ಲಿ ಎಲ್ಲಿ ಬೇಕಾದರೂ ಬೆಳೆಯಬಹುದು. ಕಣ್ಣಿನ ಕ್ಯಾನ್ಸರ್ ಅಪರೂಪದ ಕ್ಯಾನ್ಸರ್ಗಳಲ್ಲಿ ಒಂದಾಗಿದೆ. ಅದರ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸಿ ಜಾಗೃತರಾದರೆ ರೋಗವನ್ನು ವಾಸಿ ಮಾಡಬಹುದು. ಕಣ್ಣಿನ ಕ್ಯಾನ್ಸರ್‌ನ ಲಕ್ಷಣಗಳು: • ಕಣ್ಣಿನಲ್ಲಿ ಬಿಳಿಯ ಪ್ರತಿಬಿಂಬ ಕಾಣಿಸಿಕೊಳ್ಳುತ್ತದೆ • ವೀಕ್ಷಿಸುವಾಗ, ಸಂಪೂರ್ಣ ದೃಶ್ಯವು ಸ್ಪಷ್ಟವಾಗಿ ಕಾಣದೆ ಸ್ವಲ್ಪ ಕತ್ತಲೆಯಾದಂತೆನಿಸುತ್ತದೆ. • ದೃಷ್ಟಿ ಮಸುಕಾಗುತ್ತದೆ. • ಎಲ್ಲವೂ ಎರಡೆರಡಾಗಿ ಕಾಣುತ್ತವೆ. • ಕಣ್ಣುರೆಪ್ಪೆಯ ಕೆಳಗೆ ಒಂದು ಸಣ್ಣ ವ್ಯತ್ಯಾಸ ಕಂಡುಬಂದರೆ ತಕ್ಷಣವೇ ವೈದ್ಯರೊಂದಿಗೆ ಸಮಾಲೋಚಿಸಬೇಕು. • ಕಣ್ಣುರೆಪ್ಪೆಗಳ ಮೇಲೆ ಸಣ್ಣ ಕೆಂಪು ಉಬ್ಬುಗಳನ್ನು ನಿರ್ಲಕ್ಷಿಸಬೇಡಿ. • ನಿಮ್ಮ ರೆಪ್ಪೆಗೂದಲುಗಳು ಉದುರುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. • ಕಣ್ಣುರೆಪ್ಪೆಯ ಸೋಂಕು • ಕಣ್ಣಿನ ಮೂಲೆಯಲ್ಲಿ ಆಗಾಗ್ಗೆ…
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಪಲ್ಟಿಯಾದ ಘಟನೆ ಬಂಟ್ವಾಳ ತಾಲೂಕಿನ ಪೊಳಲಿ ಕಮ್ಮಾಜೆ ಸಮೀಪದ ಕಾಗುಡ್ಡೆ ಎಂಬಲ್ಲಿ ಇಂದು ನಡೆದಿದೆ. ಬಿ.ಸಿ. ರೋಡಿನಿಂದ ಕಲ್ಪನೆ ಮಾರ್ಗವಾಗಿ ಕೊಳತ್ತಮಜಲು ಮೂಲಕ ಮಂಗಳೂರು ಸಂಚಾರ ಮಾಡುವ ಖಾಸಗಿ ಬಸ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಬಸ್ ನೊಳಗಿದ್ದ ಇಬ್ಬರು ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.ಬಸ್‌ನ ಚಾಲಕ ಹಾಗೂ ನಿರ್ವಾಹಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದಲ್ಲಿ ಬಸ್‌ನ ಮುಂಭಾಗದ ಗಾಜು ಪುಡಿಯಾಗಿದ್ದು, ಪ್ರಯಾಣಿಕರು ಬಸ್‌ನ ಮುಂಭಾಗದಿಂದ ಹೊರಬಂದಿದ್ದಾರೆ. ಆದಿತ್ಯವಾರ ಆದ ಕಾರಣ ಬಸ್ ನಲ್ಲಿ ಕೇವಲ ಎರಡು ಜನ ಮಾತ್ರ ಪ್ರಯಾಣಿಕರಿದ್ದು, ಅವರಿಗೆ ಯಾವುದೇ ಗಾಯಗಳು ಉಂಟಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪುತ್ತೂರು: ತಾಳಿಯನ್ನು ತನ್ನ ಮನೆಯಲ್ಲಿಟ್ಟು ವಿವಾಹಿತೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುತ್ತೂರು ನಗರದ ಹೊರವಲಯದ ಸರ್ವೆ ಗ್ರಾಮದ ಭಕ್ತಕೋಡಿಯ ಕಲ್ಲಗುಡ್ಡೆ, ಹರೀಶ ಎಂಬವರ ಪತ್ನಿ ದೀಪಿಕಾ(23) ನಾಪತ್ತೆಯಾದವರು. ಘಟನೆಗೆ ಸಂಬಂಧಿಸಿದಂತೆ ನಾಪತ್ತೆಯಾದ ದೀಪಿಕಾರವರ ಪತಿ ಹರೀಶ್ ನೀಡಿದ ದೂರಿನಲ್ಲಿ, ತನ್ನ ಪತ್ನಿ ತಾನು ಕಟ್ಟಿದ ತಾಳಿಯನ್ನು ಮನೆಯಲ್ಲಿಯೇ ಬಿಟ್ಟು ಜೂ.13ರಂದು ಮನೆಯಿಂದ ಕಾಣೆಯಾಗಿದ್ದಾಳೆ. ಮನೆಯ ಸುತ್ತ ಮುತ್ತಲ ಪರಿಸರ ಮತ್ತು ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿದರೂ ಆಕೆ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಜೂ.13ರಂದು ಮನೆಯಲ್ಲಿ ತಾಳಿಯನ್ನು ಬಿಟ್ಟು ಕಾಣೆಯಾಗಿರುವ ದೀಪಿಕಾ ಕಳೆದ 3 ತಿಂಗಳ ಹಿಂದೆ ಕಡಬದ ಕರ್ಮಾಯಿ ನಿವಾಸಿ ಪ್ರಶಾಂತ್ ಜೊತೆಗೆ ಹೋಗಿದ್ದು, ಬಳಿಕ ಮಂಗಳೂರಿನಲ್ಲಿ ಪತ್ತೆ ಮಾಡಿ ಅಲ್ಲಿಂದ ಕರೆದುಕೊಂಡು ಬರಲಾಗಿತ್ತು. ಈಗಲೂ ಪ್ರಶಾಂತ ಜೊತೆ ಹೋಗಿರುವ ಬಗ್ಗೆ ಸಂಶಯವಿರುತ್ತದೆ ಎಂದು ಹರೀಶ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.










