ಮಂಗಳೂರು : ಸುರತ್ಕಲ್ ನ ಕಾಟಿಪಳ್ಳದಲ್ಲಿ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬ್ದುಲ್ ಜಲೀಲ್ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ. ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ಕೂಡ ಶಾಂತಿಯುವಾಗಿ ನಡೆದಿದೆ. ತನಿಖೆ ಪ್ರಗತಿಯಲ್ಲಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಜನರು ಊಹಾ ಪೋಹಗಳಿಗೆ ಕಿಗೊಡದೆ ಪರಸ್ಪರ ವಿಶ್ವಾಸದಿಂದ ಇರುವ ಅಗತ್ಯವಿದೆ. ಪೊಲೀಸರು ಯಾವುದೆ ಒತ್ತಡ ಇಲ್ಲದೇ ಮುಕ್ತವಾಗಿ ತನಿಖೆ ಮಾಡಲಿದ್ದಾರೆ. ಆರೋಪಿಗಳು ಯಾರೇ ಇದ್ದರೂ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
Author: main-admin
ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ನಡೆದ ಯುವಕರಿಬ್ಬರ ಬರ್ಬರ ಹತ್ಯೆಯು ಬೆಳಗಾವಿ ಜನತೆಯನ್ನು ಬೆಚ್ಚಿಬೀಳಿಸಿದೆ. ನಗರದ ಹೊರ ವಲಯದಲ್ಲೇ ಈ ಘಟನೆ ನಡೆದಿದ್ದು, ಜನರನ್ನು ಆತಂಕಕ್ಕೆ ದೂಡಿದೆ.ಬಸವರಾಜ್ ಬೆಳಗಾಂವ್ಕರ್ (22), ಗಿರೀಶ್ ನಾಗಣ್ಣವರ (22) ಹತ್ಯೆಯಾದ ಯುವಕರು. ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಯುವಕರು ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ ಆಡುತ್ತಿದ್ದರು. ಈ ವೇಳೆ ಮೈದಾನಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ವಾಹನ ನುಗ್ಗಿಸಿದ್ದ. ಮೈದಾನದಲ್ಲಿ ವಾಹನ ನುಗ್ಗಿಸಿದಕ್ಕೆ ಯುವಕರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸಿಟ್ಟಾದ ಚಾಲಕ, ವಾಹನದಿಂದ ಕೆಳಗಿಳಿದು ಚಾಕುವಿನಿಂದ ಚುಚ್ಚಿ ಯುವಕರಿಬ್ಬರನ್ನು ಬರ್ಬರ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾಡಿ, ಎಸಿಪಿ ನಾರಾಯಣ ಭರಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕರಿಬ್ಬರ ಮೃತದೇಹಗಳನ್ನು ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಮಂಗಳೂರು : ಸುರತ್ಕಲ್‌ನಲ್ಲಿ ಮುಸ್ಲಿಂ ವ್ಯಾಪಾರಿ ಜಲೀಲ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಮಹಿಳೆಯರು ಸೇರಿ 4-5 ಜನರು ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಧಪನ ಮಾಡುವ ವೇಳೆ ಮುಸ್ಲಿಂ ಮುಖಂಡರು ಪೊಲೀಸ್ ಆಯುಕ್ತರ ಬಳಿ ಈ ಪ್ರಕರಣ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಒತ್ತಾಯಿಸಿದ್ದಾರೆ ಈ ಘಟನೆ ಸಂಬಂದ 4-5 ಮಂದಿಯನ್ನು ಪೊಲೀಸರು ವಶಕ್ಕೆ ಪಡೆಯಲಾಗಿದ್ದು ಇದರಲ್ಲಿ ಇಬ್ಬರು ಮಹಿಳೆಯರನ್ನ ಕೂಡಾ ವಿಚಾರಣೆ ನಡೆಸಲಾಗುತ್ತಿದ ಎಂದು ಮಾಹಿತಿ ಲಭ್ಯವಾಗಿದೆ ಮಂಗಳೂರು ನಗರದ ಸುರತ್ಕಲ್ ಸಮೀಪದ ಕೃಷ್ಣಾಪುರದ ನಾಲ್ಕನೇ ಬ್ಲಾಕ್‌ನ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳಿಬ್ಬರು, ಅಂಗಡಿ ಮಾಲೀಕ ಜಲೀಲ್ ಎಂಬುವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6ರಿಂದ ಡಿಸೆಂಬರ್ 27ರ ಬೆಳಗ್ಗೆ 6 ರವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಕುದುರೆಯೊಂದಕ್ಕೆ ಸರ್ಕಾರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಕುದುರೆ ಸಾವನ್ನಪ್ಪಿದ್ದು, ಕುದುರೆ ಸವಾರ ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪದುಮಲೆ ಎಂಬಲ್ಲಿ ಡಿ.25 ರ ಭಾನುವಾರ ನಡೆದಿದೆ. ಸಚಿನ್ ಪೆಲಪ್ಪಾರು ಗಾಯಗೊಂಡ ಕುದುರೆ ಸವಾರ. ಉಪ್ಪಿನಂಗಡಿಯಲ್ಲಿ ಸಚಿನ್ ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಬೆಳ್ತಂಗಡಿ ಕಡೆಗೆ ಬರುತಿದ್ದ ಸರ್ಕಾರಿ ಬಸ್ ಕುದುರೆಗೆ ಢಿಕ್ಕಿ ಹೊಡೆದ ಪರಿಣಾಮ ಕುದುರೆ ಹಾಗೂ ಸವಾರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಉಪ್ಪಿನಂಗಡಿ ಸಮೀಪ ಪಿಲಿಗೂಡಿನ ಮೋನು ಎಂಬವರಿಗೆ ಸೇರಿದ ಕುದುರೆ ಇದಾಗಿದ್ದು, ಅಪಘಾತದ ಬಳಿಕ ಚಿಕಿತ್ಸೆ ಫಲಿಸದೆ ಕುದುರೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಉಪ್ಪಿನಂಗಡಿ: ಕುದುರೆಯೊಂದಕ್ಕೆ ಸರ್ಕಾರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಕುದುರೆ ಸಾವನ್ನಪ್ಪಿದ್ದು, ಕುದುರೆ ಸವಾರ ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪದುಮಲೆ ಎಂಬಲ್ಲಿ ಡಿ.25 ರ ಭಾನುವಾರ ನಡೆದಿದೆ. ಸಚಿನ್ ಪೆಲಪ್ಪಾರು ಗಾಯಗೊಂಡ ಕುದುರೆ ಸವಾರ. ಉಪ್ಪಿನಂಗಡಿಯಲ್ಲಿ ಸಚಿನ್ ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಬೆಳ್ತಂಗಡಿ ಕಡೆಗೆ ಬರುತಿದ್ದ ಸರ್ಕಾರಿ ಬಸ್ ಕುದುರೆಗೆ ಢಿಕ್ಕಿ ಹೊಡೆದ ಪರಿಣಾಮ ಕುದುರೆ ಹಾಗೂ ಸವಾರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಉಪ್ಪಿನಂಗಡಿ ಸಮೀಪ ಪಿಲಿಗೂಡಿನ ಮೋನು ಎಂಬವರಿಗೆ ಸೇರಿದ ಕುದುರೆ ಇದಾಗಿದ್ದು, ಅಪಘಾತದ ಬಳಿಕ ಚಿಕಿತ್ಸೆ ಫಲಿಸದೆ ಕುದುರೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಮಂಗಳೂರು ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಇದಾಗಿದ್ದು, ಡಿ. 26 ರಿಂದ 28 ರವರೆಗೆ ಸರ್ಕಾರಿ ಬಸ್ಸುಗಳ ಸಂಚಾರ ವ್ಯತ್ಯಯವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ ಮೂಡಬಿದರೆಯಲ್ಲಿ ಇದೇ ಡಿ.21 ರಿಂದ 27ರ ವರೆಗೆ ನಡೆಯುತ್ತಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಸುಮಾರು 50,000 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು/ಪೋಷಕರು/ಶಿಕ್ಷಕರು ಆಗಮಿಸಿದ್ದಾರೆ. ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ಇತರೆ ವಿಭಾಗಗಳಿಂದ ಹಾಗೂ ವಾ.ಕರಸಾ.ನಿಗಮ, ಕ.ಕ.ರ.ಸಾ.ನಿಗಮಗಳಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದು, ಆ ವಿದ್ಯಾರ್ಥಿಗಳು/ಪೋಷಕರು/ಶಿಕ್ಷಕರು ಡಿ. 27 ರಂದು ಕಾರ್ಯಕ್ರಮ ಮುಕ್ತಾಯಗೊಂಡು ಹಿಂತಿರುಗುವ ವೇಳೆಗೆ ಮೂಡಬಿದಿರೆಯಿಂದ ರಾಜ್ಯದ ವಿವಿಧ ಸ್ಥಳಗಳಿಗೆ/ರೈಲ್ವೇ ನಿಲ್ದಾಣಗಳಿಗೆ ಹೆಚ್ಚುವರಿ ಸಾರಿಗೆಗಳ ವ್ಯವಸ್ಥೆ ಮಾಡಿ ವಾಹನಗಳನ್ನು ನಿಯೋಜಿಸಬೇಕಾಗಿರುತ್ತದೆ. ಆದ್ದರಿಂದ ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಕಾಸರಗೋಡು ವಲಯಗಳಲ್ಲಿ ಕಾರ್ಯಾಚರಣೆಯಲ್ಲಿರುವ ಸಾರಿಗೆಗಳಲ್ಲಿ ಡಿ. 26 ರಿಂದ 28 ರವರೆಗೆ ದೈನಂದಿನ ಮಾರ್ಗ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಗಳು…
ಮಂಗಳೂರು:ಸುರತ್ಕಲ್ ನಲ್ಲಿ ಜಲೀಲ್ ಕೊಲೆ ಬೆನ್ನಲ್ಲೇ ಪಣಂಬೂರು, ಬಜ್ಪೆ, ಕಾವೂರು, ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಕಮಿಷನರ್ ಆದೇಶಿಸಿದ್ದಾರೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಡಿ.25 ರ ಬೆಳಗ್ಗೆ 6 ಗಂಟೆಯಿಂದ ಡಿ.27 ರ ಬೆಳಗ್ಗೆ 6 ಗಂಟೆಯವರೆಗೆ ಅನ್ವಯವಾಗುವಂತೆ ಈ ಆದೇಶ ಹೊರಡಿಸಲಾಗಿದೆ. ಈ ನಿಷೇಧಾಜ್ಞೆ ಕ್ರಿಸ್ ಮಸ್ ಆಚರಣೆ, ತುರ್ತು ಸೇವೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ. ಇದಲ್ಲದೆ ಸುರತ್ಕಲ್, ಬಜಪೆ ಕಾವೂರು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಕಾಸರಗೋಡು: ನೀರು ತುಂಬಿದ್ದ ಬಕೆಟ್ ನೊಳಗೆ ಬಿದ್ದು 11 ತಿಂಗಳ ಮಗು ಮೃತಪಟ್ಟ ದಾರುಣ ಘಟನೆ ಅಂಬಲತ್ತರದ ಏಳನೇ ಮೈಲ್ ನಲ್ಲಿ ನಡೆದಿದೆ. ಅಬ್ದುಲ್ ಜಬ್ಬಾರ್ ರವರ ಪುತ್ರ ಮುಹಮ್ಮದ್ ರಿಸಾಯ್ ಮೃತಪಟ್ಟ ಮಗು.ಮನೆಯ ಜಗಲಿಯಲ್ಲಿ ನೀರು ತುಂಬಿಸಿಟ್ಟಿದ್ದ ಬಕೆಟ್ ನೊಳಗೆ ಬಿದ್ದು ಈ ದುರ್ಘಟನೆ ನಡೆದಿದೆ.ಜಗಲಿಯಲ್ಲಿ ಆಟವಾಡುತ್ತಿದ್ದ ಮಗು ತಾಯಿ ಅಡುಗೆ ಕೋಣೆಗೆ ತೆರಳಿ ಮರಳಿದಾಗ ನಾಪತ್ತೆಯಾಗಿದ್ದು, ಹುಡುಕಾಡಿದಾಗ ಬಕೆಟ್ ನಲ್ಲಿ ಬಿದ್ದಿರುವುದು ಕಂಡು ಬಂದಿದೆ.ಕೂಡಲೇ ಸಮೀಪದ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.
ನವದೆಹಲಿ : ಕೇಂದ್ರೀಯ ತನಿಖಾ ದಳ (CBI) ಶನಿವಾರ ಐಸಿಐಸಿಐ (ICIC) ಬ್ಯಾಂಕ್ ಮಾಜಿ ಸಿಇಒ ಚಂದಾ (Chanda Kochhar) ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಈ ವೇಳೆ ಮೂರು ದಿನಗಳ ಕಾಲ ಕಸ್ಟಡಿಗೆ ಕೋರಿದೆ. ಸಾಲ ವಂಚನೆ ಪ್ರಕರಣದಲ್ಲಿ ಚಂದಾ ಕೊಚ್ಚರ್ ಮತ್ತು ಆಕೆಯ ಪತಿಯನ್ನು ನಿನ್ನೆ ಬಂಧಿಸಲಾಗಿತ್ತು. ಅವರಿಬ್ಬರೂ ತನಿಖೆಗೆ ಸಹಕರಿಸಲಿಲ್ಲ ಹೀಗಾಗಿ ಬಂಧಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ. 2012ರಲ್ಲಿ ವಿಡಿಯೋಕಾನ್ ಗ್ರೂಪ್‌ಗೆ ಐಸಿಐಸಿಐ ಬ್ಯಾಂಕ್ ಮಂಜೂರು ಮಾಡಿದ ಸಾಲದಲ್ಲಿ ವಂಚನೆ ಮತ್ತು ಅಕ್ರಮಗಳಿಗೆ ಸಂಬಂಧಿಸಿದಂತೆ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಕ್ರಿಮಿನಲ್ ಪಿತೂರಿ ಮತ್ತು ನಿಬಂಧನೆಗಳಿಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಚಂದಾ ಕೊಚ್ಚರ್, ಅವರ ಪತಿ ಮತ್ತು ವಿಡಿಯೋಕಾನ್ ಗ್ರೂಪ್‌ನ ವೇಣುಗೋಪಾಲ್ ಧೂತ್, ನುಪವರ್ ರಿನ್ಯೂಬಲ್ಸ್, ಸುಪ್ರೀಮ್ ಎನರ್ಜಿ,…
ಬೆಳ್ತಂಗಡಿ; ಗೂಡ್ಸ್ ರಿಕ್ಷಾಗೆ ಶಾಲಾ ಬಸ್ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಬೆಳ್ತಂಗಡಿ ಮಲೆಬೆಟ್ಟು ಬಳಿ ನಡೆದಿದೆ. ಬೆಳ್ತಂಗಡಿ ಸುನ್ನತ್ ಕೆರೆ ನಿವಾಸಿ ಅಬ್ದುಲ್ ರಝಾಕ್ ಮೃತರು. ಹನೀಫ್ ಎಂಬವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಮ್ಮದ್ ಎಂಬವರಿಗೆ ಸ್ವಲ್ಪ ಗಾಯಗಳಾಗಿದೆ. ಮಲೆಬೆಟ್ಟು ಬಳಿ ಗುಜಿರಿ ಸಂಗ್ರಹಿಸಲು ತೆರಳುತ್ತಿದ್ದ ಗೂಡ್ಸ್ ರಿಕ್ಷಾ ಗೆ ಧರ್ಮಸ್ಥಳದ ಸ್ಕೂಲ್ ಬಸ್ ಅಜಾಗರೂಕತೆಯಿಂದ ವೇಗವಾಗಿ ಸಂಚರಿಸಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ರಝಾಕ್ ಅವರ ಮೃತದೇಹ ಬೆಳ್ತಂಗಡಿ ಆಸ್ಪತ್ರೆಯಲ್ಲಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.