ಚೀನಾದ ಪ್ರಸ್ತುತ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗುವ ಕೋವಿಡ್ ತಳಿಯಾದ ಒಮಿಕ್ರಾನ್ ಉಪ-ರೂಪಾಂತರ ಬಿಎಫ್ .7 ರ ಕನಿಷ್ಠ ನಾಲ್ಕು ಪ್ರಕರಣಗಳು ಭಾರತದಲ್ಲಿ ಈವರೆಗೆ ಪತ್ತೆಯಾಗಿವೆ ಎನ್ನಲಾಗಿದೆ. ಇಲ್ಲಿಯವರೆಗೆ, ಗುಜರಾತ್ನಿಂದ ಎರಡು, ಒಡಿಶಾದಿಂದ ಎರಡು ಪ್ರಕರಣಗಳು ವರದಿಯಾಗಿವೆ, ಇದರಲ್ಲಿ ಬಿಎಫ್.7 ರೂಪಾಂತರವನ್ನು ಪತ್ತೆಹಚ್ಚಲಾಗಿದೆ. ಚೀನಾ ಸಹಿತ ವಿದೇಶಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ನ ರ್ಯಾಂಡಮ್ ಪರೀಕ್ಷೆಗೆ ಸೂಚನೆ ನೀಡಲಾಗಿದೆ. ವಿಶ್ವದ ಕೆಲವು ಭಾಗಗಳಲ್ಲಿ ಇತ್ತೀಚಿನ ಪ್ರಕರಣಗಳ ಉಲ್ಬಣ ಗಮನದಲ್ಲಿಟ್ಟುಕೊಂಡು ಅಂತಾರರಾಷ್ಟ್ರೀಯ ಪ್ರಯಾಣಿಕರಿಗೆ ರ್ಯಾಂಡಮ್ ಮಾದರಿ ಪರೀಕ್ಷೆಯನ್ನು ವಿಮಾನ ನಿಲ್ದಾಣಗಳಲ್ಲಿ ನಡೆಸಲಾಗುವುದು ಎಂದು ಹೇಳಲಾಗಿದೆ. ಪ್ರಸುತ್ತ ದೇಶದಲ್ಲಿ ಒಮಿಕ್ರಾನ್ ಸಬ್‌ವೇರಿಯಂಟ್ BF.7 ನ ಮೂರು ಪ್ರಕರಣಗಳು ಪತ್ತೆಯಾಗಿದೆ. ಎಲ್ಲರಿಗೂ ಎಚ್ಚರಿಕೆ ವಹಿಸುವಂತೆ ಮತ್ತು ಕಣ್ಗಾವಲು ಬಲಪಡಿಸಲು ನಾನು ನಿರ್ದೇಶನ ನೀಡಿದ್ದೇನೆ. ಯಾವುದೇ ಪರಿಸ್ಥಿತಿಯನ್ನು ನಿರ್ವಹಿಸಲು ನಾವು ಸಿದ್ಧರಿದ್ದೇವೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
Author: main-admin
ಬೆಂಗಳೂರು: 545 ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಅಫಜಲಪುರದ ದೇಸಾಯಿ ಕಲ್ಲೂರ ನಿವಾಸಿ ಕುಪೇಂದ್ರ ಬಾಸಗಿ ಬಂಧಿತ ಆರೋಪಿ. ಹಗರಣದ ಕಿಂಗ್ ಪಿನ್ ಆರ್.ಡಿ. ಪಾಟೀಲ್ ಗೆ ಕುಪೇಂದ್ರ ಬಾಸಗಿ ಅಭ್ಯರ್ಥಿಗಳನ್ನು ಪರಿಚಯಿಸುತ್ತಿದ್ದ. ಈಗಾಗಲೇ ಪಿಎಸ್‌ಐ ಹಗರಣದಲ್ಲಿ ಬಂಧಿತಳಾಗಿರುವ ಸುಪ್ರಿಯಾಳನ್ನು ಆರ್.ಡಿ. ಪಾಟೀಲ್ ಗೆ ಪರಿಚಯಿಸಿದ್ದ. ಸುಪ್ರಿಯಾ ಪಿಎಸ್‌ಐ ಹುದ್ದೆ ಲಿಖಿತ ಪರೀಕ್ಷೆಯಲ್ಲಿ ಅಕ್ರಮವಾಗಿ ಬ್ಲುಟೂಥ್ ಬಳಸಿ ಪರೀಕ್ಷೆ ಬರೆದಿದ್ದಳು.
ನವದೆಹಲಿ: ಚೀನಾದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿರುವ ಒಮಿಕ್ರಾನ್ ರೂಪಾಂತರ BF.7 ನ ಮೂರು ಪ್ರಕರಣಗಳು ಇಲ್ಲಿಯವರೆಗೆ ಭಾರತದಲ್ಲಿ ಕಂಡುಬಂದಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗುಜರಾತ್ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರವು ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೊದಲ BF.7 ಪ್ರಕರಣವನ್ನು ಕಂಡುಹಿಡಿದಿದೆ. ಗುಜರಾತ್‌ನಲ್ಲಿ ಎರಡು ಮತ್ತು ಒಡಿಶಾದಲ್ಲಿ ಒಂದು ಪ್ರಕರಣ ವರದಿಯಾಗಿದೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಪರಿಶೀಲನಾ ಸಭೆ ನಡೆಸಿದ್ದರು. ಈ ವೇಳೆ ಸದ್ಯಕ್ಕೆ ಕೋವಿಡ್ ಪ್ರಕರಣಗಳಲ್ಲಿ ಯಾವುದೇ ಹೆಚ್ಚಳವಿಲ್ಲ, ಅಸ್ತಿತ್ವದಲ್ಲಿರುವ ಮತ್ತು ಉದಯೋನ್ಮುಖ ರೂಪಾಂತರಗಳ ಜಾಡನ್ನು ಇರಿಸಲು ನಿರಂತರ ಕಣ್ಗಾವಲು ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ ಎನ್ನಲಾಗುತ್ತಿದೆ. ಚೀನಾದಲ್ಲಿ ಒಮಿಕ್ರಾನ್ ಸಬ್ ವೇರಿಯೆಂಟ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಬೀಜಿಂಗ್‌ನಲ್ಲಿ ಅಧಿಕ ಸಂಖ್ಯೆ ಕೇಸ್ ಗಳು ಪತ್ತೆಯಾಗುತ್ತಿವೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ, ಮೈಸೂರು, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಐವರು ಐಪಿಎಸ್ ಅಧಿಕಾರಿಗಳನ್ನು ( IPS Officer ) ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಮೈಸೂರು ಎಸ್ಪಿಯಾಗಿದ್ದಂತ ಆರ್ ಚೇತನ್ ಅವರನ್ನು ಇಂಟೆಲಿಜೆನ್ಸಿ ಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಇನ್ನೂ ಬೆಂಗಳೂರು ಕ್ರೈಂ ವಿಭಾಗದ ಎಐಜಿಪಿ ಸೀಮ ಲೇಟ್ಕರ್ ಅವರನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಮೈಸೂರಿನ ಇಂಟಲಿಜೆನ್ಸಿ ಎಸ್ಪಿಯಾಗಿದ್ದಂತ ಮುತುರಾಜು ಎಂ ಎವರನ್ನು ಮೈಸೂರು ನಗರ ಲಾ ಅಂಡ್ ಆರ್ಡರ್ ವಿಭಾಗಡ ಡಿಸಿಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಲೋಕಾಯುಕ್ತ ಎಸ್ಪಿಯಾಗಿದ್ದಂತ ಬಾಬಾಸಾಬ್ ನೇಮಗೌಡ ಅವರನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಂತ ಶಿವಪ್ರಕಾಶ್ ದೇವರಾಜು ಅವರನ್ನು, ಬೆಂಗಳೂರಿನ ಕ್ರೈ ವಿಭಾಗದ ಎಐಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಬಂಟ್ವಾಳ: ಪುಣಚ ಗ್ರಾಮದ ಆಜೇರು ನೆಲ್ಲಿಗುಡ್ಡೆ ಜರಿಮೂಲೆ ಸಮೀಪ ಗುಂಡಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಸೊಪ್ಪು ಸೌದೆ ತರಲು ಗುಡ್ಡಕ್ಕೆ ಹೋದ ಸ್ಥಳೀಯ ನಿವಾಸಿಗಳಿಗೆ ಮೊಬೈಲ್ ಪತ್ತೆಯಾಗಿದೆ. ಇದನ್ನು ಗಮನಿಸಿ ಅಕ್ಕಪಕ್ಕದ ನೋಡಿದ ಸಂದರ್ಭದಲ್ಲಿ ಮೃತದೇಹ ಪತ್ತೆಯಾಗಿದ್ದು, ಭಯಗೊಂಡು ಓಡಿಹೋಗಿದ್ದಾರೆನ್ನಲಾಗಿದೆ. ಪಕ್ಕದಲ್ಲಿರುವ ಮರದಲ್ಲಿ ಹಗ್ಗವೊಂದು ನೇತಾಡುತ್ತಿದ್ದು, ಮೃತದೇಹ ನೆಲದಲ್ಲಿ ಬಿದ್ದುಕೊಂಡಿದ್ದು, ಕೊಳೆತು ಅಸ್ಥಿಪಂಜರ ಮಾತ್ರ ಕಾಣುತ್ತಿದ್ದು ಸತ್ತು ಹಲವು ಸಮಯ ಕಳೆದಿದೆ ಎನ್ನಲಾಗಿದೆ.
ಮಂಗಳೂರು; 8ನೇ ತರಗತಿಯ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ. ನಗರದ ಖಾಸಗಿ ಶಾಲೆಯೊಂದರ 8ನೇ ತರಗತಿಯ ವಿದ್ಯಾರ್ಥಿ ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಯಾವಾಗಲೂ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.ಇದು ಶಿಕ್ಷಕರಿಗೂ ತಿಳಿದು ಶಿಕ್ಷಕರು ಎಚ್ಚರಿಕೆ ನೀಡಿದ್ದರು. ನಿನ್ನೆ ಕೂಡ ವಿದ್ಯಾರ್ಥಿಗಳ ಗಲಾಟೆ ಮಾಡಿಕೊಂಡಿದ್ದು, 9ನೇ ತರಗತಿಯ ವಿದ್ಯಾರ್ಥಿಗಳು ಮೊದಲು 8ನೇ ತರಗತಿ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದರು.ಇದಲ್ಲದೆ ವಿದ್ಯಾರ್ಥಿ ಸಂಜೆ ಶಾಲೆ ಬಿಟ್ಟ ಬಳಿಕ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ 9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಈ ವೇಳೆ ಅಲ್ಲಿದ್ದ ಜನರು ತಡೆದಿದ್ದಾರೆ. ಗಾಯಗೊಂಡ ವಿದ್ಯಾರ್ಥಿಯನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ : ರಾಜ್ಯದಲ್ಲಿ ಮತ್ತೊಂದು ನೇಮಕಾತಿ ಹಗರಣ ಬಯಲಿಗೆ ಬಂದಿದ್ದು, ನಕಲಿ ದಾಖಲೆ ಸೃಷ್ಟಿಸಿ ಅನುಕಂಪದ ಆಧಾರದ ಮೇಲೆ ಬೆಸ್ಕಾಂ ಇಲಾಖೆಯಲ್ಲಿ ಉದ್ಯೋಗ ಪಡಿದಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಚಿತ್ರದುರ್ಗದಲ್ಲಿ ಅನುಕಂಪ ಆಧಾರದ ಮೇಲೆ ನಕಲಿ ದಾಖಲೆ ಸೃಷ್ಟಿಸಿ ಬೆಸ್ಕಾಂನಲ್ಲಿ ಉದ್ಯೋಗ ಪಡೆದಿದ್ದ ಆರೋಪದಡಿ ಬೆಸ್ಕಾಂ ಇಂಜಿನಿಯರ್ ಸೇರಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ. ಚಿತ್ರದುರ್ಗ ಕೋಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅನುಕಂಪದ ಆಧಾರದಲ್ಲಿ ಹುದ್ದೆ ಪಡೆಯಲು ನಕಲಿ ದಾಖಲೆ ಸೃಷ್ಟಿ 6 ಜನ ಹುದ್ದೆ ಪಡೆದಿದ್ದ ಪ್ರಕರಣವನ್ನು ಬಯಲು ಮಾಡಿದ್ದಾರೆ. ಎಲ್.ರವಿ, ಪ್ರೇಮ್ ಕುಮಾರ್, ಶಾಂತಮಲ್ಲಪ್ಪ, ವಿರೇಶ್, ರಘು ಕಿರಣ್, ಹರೀಶ್, ಶಿವಪ್ರಸಾದ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರೀತಿಯ ಸಂಕೇತ ಎಂದು ಕರೆಯುವ ತಾಜ್‌ಮಹಲ್‌ಗೆ ಸಂಕಷ್ಟ ಬಂದಿದೆ. ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ತಾಜ್ ಮಹಲ್‌ಗೆ ಮನೆ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ. 1.9 ಕೋಟಿ ನೀರಿನ ತೆರಿಗೆ, ರೂ. 1.5 ಲಕ್ಷ ಆಸ್ತಿ ತೆರಿಗೆ ಬಿಲ್ ಪಾವತಿಸುವಂತೆ ಆಗ್ರಾ ಪುರಸಭೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. 15ರೊಳಗೆ ಬಾಕಿ ಪಾವತಿಸದಿದ್ದರೆ ತಾಜ್ ಮಹಲ್ ಸೀಜ್ ಮಾಡುವುದಾಗಿ ಪುರಸಭೆ ಅಧಿಕಾರಿಗಳು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಪಾಲಿಕೆ ಅಧಿಕಾರಿಗಳು ನೀಡಿದ ಈ ನೋಟಿಸ್ ನೋಡಿ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ತಾಜ್ ಮಹಲ್ ಕಲಾತ್ಮಕ ಹಾಗೂ ಐತಿಹಾಸಿಕ ಕಟ್ಟಡವಾಗಿದ್ದು, ಇದಕ್ಕೆ ಮನೆ ತೆರಿಗೆ ಕಟ್ಟುವುದೇನು ಎಂದು ಅಚ್ಚರಿ ವ್ಯಕ್ತಪಡಿಸಿದರು. ಈ ರೀತಿಯ ನೋಟಿಸ್ ಬರುತ್ತಿರುವುದು ಇದೇ ಮೊದಲು ಅಂತಿದಾರೆ. ಈ ಕುರಿತು ಎಎಸ್‌ಐ ಸೂಪರಿಂಟೆಂಡೆಂಟ್ ರಾಜ್‌ಕುಮಾರ್ ಪಟೇಲ್ ಮಾತನಾಡಿ, ತಾಜ್ ಮಹಲ್‌ಗೆ ಎರಡು ನೋಟೀಸ್ ಬಂದಿದ್ದು, ಒಂದು ನೀರಿನ ತೆರಿಗೆ ಮತ್ತು ಎರಡು ಆಸ್ತಿ ತೆರಿಗೆ ಬಗ್ಗೆ. ನೋಟಿಸ್ ಗಳಲ್ಲಿ ಒಟ್ಟು 1.9 ಕೋಟಿ…
ಬೆಳಗಾವಿ : ಸೊರಬ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಮದ್ಯದ ಅಂಗಡಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ವಿಧಾಸಭೆಗಿಂದು ತಿಳಿಸಿದರು. ಪ್ರಶ್ನೋತ್ತರ ಕಲಾಪದ ವೇಳೆ ಸೊರವ ಶಾಸಕ ಕುಮಾರ್ ಬಂಗಾರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದೆ ಬೇರೆ ಸ್ಥಳದಲ್ಲಿದ್ದ ಈ ಮದ್ಯದ ಅಂಗಡಿ ರಸ್ತೆ ಅಗಲೀಕರಣದ ಕಾರಣಕ್ಕೆ 2020 ರಲ್ಲಿ ಅನಿವಾರ್ಯವಾಗಿ ದೇವಸ್ಥಾನದ ರಸ್ತೆಗೆ ಸ್ಥಳಾಂತರಗೊಂಡಿತ್ತು ಇಲ್ಲೂ ಕೂಡ ರಸ್ತೆ ಅಗಲೀಕರಣವಾಗಿದೆ. ಈಗಾಗಲೇ ಅಂಗಡಿ ತೆರವಿಗೆ ನೋಟಿಸ್ ನೀಡಲಾಗಿದೆ.ಈ ಮಧ್ಯೆ ಅಂಗಡಿ ಮಾಲೀಕ. ರಾಜ್ಯ ಹೈ ಕೋರ್ಟಿಗೆ ಹೋಗಿದ್ದಾರೆ. ನ್ಯಾಯಾಲಯ 90 ದಿನದಲ್ಲಿ ಇದನ್ನು ತೀರ್ಮಾನಿಸಿ ಎಂದು ಕೆಎಟಿಗೆ ಸೂಚನೆ ನೀಡಿದೆ ಎಂದರು. ಶೀಘ್ರದಲ್ಲೇ ಈ ಪ್ರಕರಣವನ್ನು ಬಗೆಹರಿಸಲಾಗುವುದು. ಸದ್ಯಕ್ಕೆ ಮದ್ಯದ ಅಂಗಡಿಯನ್ನು ಅಮಾನತಿನಲ್ಲಿ ಇಡಲಾಗಿದೆ ಎಂದು ಉತ್ತರಿಸಿದರು.ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ದುರ್ಗಮ್ಮನ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನ, ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನಗಳ ಮಧ್ಯ ಭಾಗದಲ್ಲಿ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿ ಮದ್ಯದ ಅಂಗಡಿ ತೆರೆಯಲು ಅವಕಾಶ ಕೊಟ್ಟಿರುವುದು ಸರ್ಕಾರದ…
ಮಂಗಳೂರು : ಸ್ಮಾರ್ಟ್ ಸಿಟಿಯ ರಸ್ತೆ ಕಾಮಗಾರಿಯ ರಸ್ತೆ ಬದಿಯಲ್ಲಿ ಅಗೆದಿಟ್ಟ ಗುಂಡಿಗೆ ಮಹಿಳೆಯೊಬ್ಬರು ಬಿದ್ದು, ಗಂಭೀರ ಗಾಯಗೊಂಡ ಘಟನೆ ಮಂಗಳೂರಿನ ಜ್ಯೋತಿ ವೃತ್ತದ ಸೋಜಾ ಆರ್ಕೇಡ್ ಬಳಿ ನಡೆದಿದೆ ಜ್ಯೋತಿ ಕೆಎಂಪಿ ಆಸ್ಪತ್ರೆ ಕಡೆಯಿಂದ ಮಿಲಾಗ್ರಿಸ್ ಕಡೆಗೆ ನಡೆದು ಹೋಗುತ್ತಿದ್ದ ಸುಮಾರು 55 ವರ್ಷದ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಅಗೆದಿಟ್ಟ ಗುಂಡಿಗೆ ಬಿದ್ದಿದ್ದಾರೆ ಸುಮಾರು ಏಳು ಅಡಿ ಆಳದ ಗುಂಡಿಗೆ ಬಿದ್ದ ಮಹಿಳೆಯನ್ನು ಬಳಿಕ ಸ್ಥಳೀಯರು ಕಷ್ಟಪಟ್ಟು ಹೊರಗೆ ತೆಗೆದಿದ್ದಾರೆ. ಕೇಬಲ್ ಕಾಮಗಾರಿ ನೆಪದಲ್ಲಿ ಸೋಜಾ ಆರ್ಕೇಡ್ ಎದುರಲ್ಲಿ ಒಂದು ತಿಂಗಳಿನಿಂದ ರಸ್ತೆ ಬದಿ ಗುಂಡಿ ತೆಗೆಯಲಾಗಿದೆ, ಅದನ್ನು ಮುಚ್ಚದೇ ಹಾಗೇ ಬಿಡಲಾಗಿದ್ದು, ಪಾದಚಾರಿಗಳು ನಡೆದು ಹೋಗುವುದಕ್ಕೆ ಕಷ್ಟ ಪಡುತ್ತಿದ್ದಾಳೆ, ಮಹಿಳೆ ಕವುಚಿಕೊಂಡು ಬಿದ್ದಿದ್ದು,ತಲೆಯ ಭಾಗದ ಗುಂಡಿಯ ಒಳಗೆ ಬಿದ್ದಿತ್ತು. ಬೆನ್ನು ಮತ್ತು ಕುತ್ತಿಗೆಯ ಭಾಗಕ್ಕೆ ಗಾಯಗೊಂಡಿದ್ದು, ಜೊತೆಗಿದ್ದು ಗಂಡ ಬಳಿಕ ಅವರನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.