ಉಳ್ಳಾಲ : ಯುವಕನೋರ್ವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬುಧವಾರದಂದು ರಾತ್ರಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಓರ್ವ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಬಂಧಿತ ಆರೋಪಿ ಅಡ್ಯಾರ್ ಪದವು ನಿವಾಸಿ ಮುನೀರ್ (27) ಎಂದು ಗುರುತಿಸಲಾಗಿದೆ. ಮುನೀರ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ. ಇವರು ಪರಸ್ಪರ ಪ್ರೀತಿಸುತ್ತಿದ್ದು ಬುಧವಾರ ರಾತ್ರಿ ಮುನೀರ್ ಮಹಿಳೆಯನ್ನು ಭೇಟಿಯಾಗಿದ್ದ ವೇಳೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ
Author: main-admin
ಬೆಂಗಳೂರು: ಅಪಘಾತವಾಗಿರುವ ವಾಹನಗಳನ್ನ ಇನ್ನು ಮುಂದೆ ಸಂಚಾರಿ ಪೊಲೀಸ್ ಠಾಣೆಗಳ ಮುಂದೆ ತಿಂಗಳುಗಟ್ಟಲೇ ಇರಿಸಿಕೊಳ್ಳುವಂತಿಲ್ಲ. ತಪಾಸಣೆ ನೆಪದಲ್ಲಿ ಠಾಣೆಗಳ ಮುಂದೆ ವಾಹನ ಇರಿಸಿಕೊಳ್ಳುವುದು ಸರಿಯಲ್ಲ. ಆಯಕ್ಸಿಡೆಂಟ್ ಆದ ವಾಹನಗಳನ್ನ 24 ಗಂಟೆಯೊಳಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಮಾಲೀಕರಿಗೆ ಹಿಂತಿರುಗಿಸಲಾಗುವುದು ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂ ತಿಳಿಸಿದ್ದಾರೆ. ಅಪಘಾತ ಪ್ರಕರಣಗಳಲ್ಲಿ ವಾಹನಗಳನ್ನ ವಶಪಡಿಸಿಕೊಂಡು ಠಾಣೆಗಳ ಮುಂದೆ ನಿಲ್ಲಿಸಲಾಗುತ್ತಿದೆ. ಠಾಣೆಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ನಿಲ್ಲಿಸಲಾಗುತ್ತಿದ್ದು ಇದರಿಂದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಆಕ್ಸಿಡೆಂಟ್ ಆಗಿರುವ ಅಥವಾ ಅಪಘಾತ ಮಾಡಿರುವ ವಾಹನಗಳನ್ನ ಆರ್ ಟಿಓ ಅಧಿಕಾರಿಗಳಿಂದ ತ್ವರಿತವಾಗಿ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು.. ತಾಂತ್ರಿಕವಾಗಿ ವಾಹನಗಳಲ್ಲಿ ದೋಷವಿದೆಯಾ ಎಂಬುದನ್ನು ಪತ್ತೆ ಹಚ್ಚಿ ಅಧಿಕಾರಿಗಳು ವರದಿ ತರಿಸಿ ಬಳಿಕ ಸಂಬಂಧಪಟ್ಟ ಮಾಲೀಕರನ್ನ ಕರೆಯಿಸಿ ಅವರಿಂದ ಮುಚ್ಚಳಿಕೆ ಬರೆಯಿಸಿ ಹಿಂತಿರುಗಿಸಲಾಗುವುದು ಎಂದಿದ್ದಾರೆ. ನಗರದಲ್ಲಿ ಹಂಪ್ ಗಳಿಂದ ಆಯಕ್ಸಿಡೆಂಟ್ ಜಾಸ್ತಿ ಆಗ್ತಿತ್ತು.. ಹೀಗಾಗಿ ಎಲ್ಲೆಲ್ಲಿ ಅವೈಜ್ಞಾನಿಕ ಹಂಪ್‌ಗಳು ಹಾಗೂ ಅನಾವಶ್ಯಕ ಹಂಪ್ ಗಳಿದ್ದರೆ ತೆಗೆಯುವುದಕ್ಕೆ ಹೇಳಲಾಗಿದೆ. ಜೊತೆಗೆ…
ಬೆಳ್ತಂಗಡಿ : ಕಿಂಡಿ ಅಣೆಕಟ್ಟು ಕಾಮಗಾರಿಗೆ ಕಬ್ಬಿಣವನ್ನು ಸಾಗಿಸುತ್ತಿದ್ದ ಟಾಕ್ಟರ್ ಪಲ್ಟಿಯಾಗಿ ತೋಟಕ್ಕೆ ಬಿದ್ದು ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು ,ಇಬ್ಬರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಬಂಗಾರ್ ಪಲ್ಕೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಚಿಕ್ಕಮಗಳೂರು ಮೂಲದ ಅಶೋಕ್ ಎಂದು ಗುರುತಿಸಲಾಗಿದೆ. ಮಲವಂತಿಗೆ ಗ್ರಾಮಪಂಚಾಯತ್ ವ್ಯಾಪ್ತಿಯ ದುರ್ಗಮ ಎಳನೀರು ಭಾಗದ ಬಂಗಾರ ಬಳಿಗೆ ಎಂಬಲ್ಲಿ 5 ಕೋ.ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದು ಇದರ ಕಾಮಗಾರಿಗೆಂದು ಕಬ್ಬಿಣದ ಸರಳು ಸಾಗಿಸಲಾಗುತ್ತಿತ್ತು. ಈ ದಾರಿ ಅತ್ಯಂತ ಕಡಿದಾಗಿದ್ದು ದುರ್ಗಮವಾಗಿದೆ. ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮತ್ತು ಮರ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದು ಹಿಂಬದಿ ಕುಳಿತಿದ್ದ ಕಾರ್ಮಿಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸವ ವೇಳೆ ಮೃತಪಟ್ಟಿದ್ದಾರೆ.
ಉಡುಪಿ: ಯುವಕನ ಮೇಲಿನ ಹಲ್ಲೆ ಮತ್ತು ಜೀವಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ನಿರಂತರ ನ್ಯಾಯಾಲಯಕ್ಕೆ ವಿಚಾರಣೆ ಹಾಜರಾಗದ ಎಸ್ಸೈ ಶಕ್ತಿ ವೇಲು ಮತ್ತು ಪೊಲೀಸ್ ನಿರೀಕ್ಷಕ ಶರಣಗೌಡ ವಿರುದ್ಧ ಉಡುಪಿ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ನ.28ರಂದು ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಹೂಡೆಯ ಹಿದಾಯತುಲ್ಲ (27) ಎಂಬವರ ಮನೆಗೆ ಎಸ್ಸೆ ಶಕ್ತಿವೇಲು ಮತ್ತು ಪೊಲೀಸ್ ನಿರೀಕ್ಷಕ ಶರಣಗೌಡ ಮತ್ತು ಏಳು ಮಂದಿಯ ಪೊಲೀಸ್ ತಂಡ 2021ರ ನ.29ರ ತಡರಾತ್ರಿ ಅಕ್ರಮವಾಗಿ ನುಗ್ಗಿ ಹಿದಾಯತುಲ್ಲಾ ಅವರಿಗೆ ಥಳಿಸಿ, ಕಾನೂನು ಬಾಹಿರವಾಗಿ ಬಂಧಿಸಿ ಠಾಣೆಗೆ ಕರೆದು ದೌರ್ಜನ್ಯ ಎಸಗಿದ್ದರೆಂದು ದೂರಲಾಗಿದೆ. ಅಲ್ಲದೆ ಅವ್ಯಾಚ್ಯ ಶಬ್ದಗಳಿಂದ ಬೈದು, ಎನ್‌ಕೌಂಟರ್ ಮಾಡುವುದಾಗಿ ಬೆದರಿಸಿ, ತನ್ನೊಪ್ಪಿಗೆ ಬರಹಕ್ಕೆ ಸಹಿ ಮಾಡಲು ನಿರಂತರವಾಗಿ ದೈಹಿಕ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿದಾಯತುಲ್ಲಾ ಉಡುಪಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರನ್ನು ಮಾನ್ಯ…
ಬಂಟ್ವಾಳ : ಕತಾರ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಬಂಟ್ವಾಳ ಮೂಲದ ಯುವಕ ಮೃತಪಟ್ಟ ಘಟನೆ ನಡೆದಿದೆ. ಬಂಟ್ವಾಳ ಸಜಿಪದ ಚಟ್ಟೆಕ್ಕಲ್ ನಿವಾಸಿ ಫಹದ್ ಮೃತ ಯುವಕ. ಫಹದ್ ಕಳೆದ ಐದು ತಿಂಗಳ ಹಿಂದೆಯಷ್ಠೇ ಕತಾರ್ ಗೆ ಉದ್ಯೋಗದ ನಿಮಿತ್ತ ತೆರಳಿದ್ದ.ಅಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ತನ್ನ ಮಾಲಕನ ಮಗನನ್ನು ರೆಸಾರ್ಟ್ ಗೆ ಬಿಟ್ಟು ಬರಲು ಕಾರಿನಲ್ಲಿ ತೆರಳಿದ್ದಾನೆ. ಕಾರಿನಲ್ಲಿ ಬಿಟ್ಟು ವಾಪಾಸ್ಸು ಬರುವಾಗ ಕಾರು ಪಲ್ಟಿಯಾಗಿ ಫಹದ್ ಗೆ ಗಂಭೀರವಾದ ಗಾಯಗಳಾಗಿದೆ. ತಕ್ಷಣ ಪಹದ್ ಗೆ ಆಸ್ಪತ್ರೆಗೆ ಸಾಗಿಸಲಾಗಿದೆ ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ.ಫಹದ್ ನಿಧನದಿಂದ ಕುಟುಂಬದ ರೋಧನ ಮುಗಿಲು ಮುಟ್ಟಿದೆ.
ಮಂಗಳೂರು : ಸುರತ್ಕಲ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯರು ಉಡುಪು ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮರಾ ಇರಿಸಿ ದೃಶ್ಯಗಳನ್ನು ಸೆರೆ ಹಿಡಿದ ಆರೋಪದಲ್ಲಿ 21 ವರ್ಷದ ನರ್ಸಿಂಗ್ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸಿಂಗ್ ವಿದ್ಯಾರ್ಥಿ ಪವನ್ ಕುಮಾರ್ ಈ ಕೃತ್ಯವೆಸಗಿದ ಆರೋಪಿ. ಮೂಲತಃ ಕಲಬುರಗಿಯವನಾದ ಪವನ್ ಬಜಪೆಯಲ್ಲಿ ವಾಸವಾಗಿದ್ದ.ಆಸ್ಪತ್ರೆಗೆ ತಪಾಸಣೆಗೆ ಬಂದವರು ಸ್ಯಾನಿಂಗ್‌ಗೆ ಒಳಗಾಗುವ ಮುನ್ನ ಬಟ್ಟೆ ಬದಲಾಯಿಸಬೇಕಾಗುತ್ತದೆ. ಪವನ್ ಮಹಿಳೆಯರು ಬಟ್ಟೆ ಬದಲಾಯಿಸುವ ಕೂಠಡಿಯಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದು, ಸ್ಯಾನಿಂಗ್‌ಗೆ ಒಳಗಾಗಲು ಬಂದಿದ್ದ ಯುವತಿಯೊಬ್ಬರು ಉಡುಪು ಬದಲಾಯಿಸುವ ಮೊದಲು ಕೊಠಡಿಯನ್ನು ಸೂಕ್ತವಾಗಿ ಪರಿಶೀಲಿಸಿದಾಗ ಮೂಲೆಯಲ್ಲಿ ರಹಸ್ಯ ಕ್ಯಾಮರಾ ಇರುವುದು ಪತ್ತೆಯಾಗಿದೆ. ಕೂಡಲೇ ಅವರು ಈ ವಿಷಯವನ್ನು ವೈದ್ಯರ ಗಮನಕ್ಕೆ ತಂದಿದ್ದಾರೆ, ತನಿಖೆ ನಡೆಸಿದಾಗ ಪವನ್ ಕುಮಾರ್ ಕ್ಯಾಮರಾ ಇಟ್ಟಿರುವುದು ಪತ್ತೆಯಾಗಿದೆ. ಸುರತ್ಕಲ್ ಠಾಣೆಗೆ ಅವನ ವಿರುದ್ಧ ದೂರು ನೀಡಲಾಗಿದೆ.
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎನ್‌ಐಟಿಕೆ ಸುರತ್ಕಲ್ ಟೋಲ್ ಪ್ಲಾಜಾ ಹೆಜಮಾಡಿ ಟೋಲ್‌ಪ್ಲಾಜಾದ ಜತೆಗೆ ವಿಲೀನಗೊಂಡಿದ್ದರೂ, ಹೆಚ್ಚುವರಿ ಟೋಲ್ ಸಂಗ್ರಹ ಸದ್ಯಕ್ಕಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಡಿ.1ರಿಂದ ಎನ್‌ಐಟಿಕೆ- ಸುರತ್ಕಲ್ ಟೋಲ್‌ಪ್ಲಾಜಾದಲ್ಲಿ ಶುಲ್ಕ ವಸೂಲಿ ಸ್ಥಗಿತಗೊಂಡಿದೆ. ಸುರತ್ಕಲ್‌ನ ಶುಲ್ಕವನ್ನು ಸೇರಿಸಿ ಹೆಜಮಾಡಿಯಲ್ಲಿ ಟೋಲ್ ಸಂಗ್ರಹಕ್ಕೆ ಪರಿಷ್ಕೃತ ದರವನ್ನು ಡಿ.4ರಿಂದ ಜಾರಿಗೊಳಿಸುವ ಬಗ್ಗೆ ನವಯುಗ ಸಂಸ್ಥೆ ಅಧಿಕೃತ ಪ್ರಕಟಣೆ ಇತ್ತೀಚೆಗೆ ಹೊರಡಿಸಿತ್ತು. ಆದರೆ ಹೆಚ್ಚುವರಿ ಟೋಲ್ ವಸೂಲಿಗೆ ಸರ್ಕಾರದಿಂದ ಈವರೆಗೆ ಅವಕಾಶ ಸಿಕ್ಕಿಲ್ಲ ಎಂದು ಎನ್‌ಎಚ್‌ಐ ಮಂಗಳೂರು ಯೋಜನಾ ನಿರ್ದೇಶಕ ಎಚ್.ಎಸ್.ಲಿಂಗೇ ಗೌಡ ತಿಳಿಸಿದ್ದಾರೆ.
ಮಂಗಳೂರು: ಕಂಕನಾಡಿಯ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿದ ಕದ್ರಿ ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಯುವತಿ ತಾಯಿ, ಹಲ್ಲೆಗೊಳಗಾದ ಯುವಕ ಮತ್ತು ಸುಲ್ತಾನ್ ಜ್ಯುವೆಲ್ಲರಿ ಮಾಲೀಕರ ದೂರು ಆಧಾರಿಸಿ ಎಫ್‌ಐಆರ್ ದಾಖಲಾಗಿದೆ. ಮಗಳ ಮೇಲೆ ದೌರ್ಜನ್ಯ ಹಾಗೂ ಬೆದರಿಕೆ ಒಡ್ಡಿದ ಬಗ್ಗೆ ಯುವತಿ ತಾಯಿ ದೂರು ನೀಡಿದ್ದಾರೆ. ಹಲ್ಲೆ ನಡೆಸಿ ಗಲಭೆ ಸೃಷ್ಟಿಸಿದ ಬಗ್ಗೆ ಯುವಕ ದೂರು ನೀಡಿದ್ದು, ಜ್ಯುವೆಲ್ಲರಿಗೆ ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸಿದ ಬಗ್ಗೆ ಜ್ಯುವೆಲ್ಲರಿ ಆಡಳಿತ ದೂರು ದಾಖಲಿಸಿದೆ. ಸುಲ್ತಾನ್ ಜ್ಯುವೆಲ್ಲರಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಮಂಗಳೂರಿನ ಲುಕ್ಮಾನ್ ಉಲ್ ಹಕೀಂ ಮೇಲೆ ಹಲ್ಲೆ ನಡೆಸಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯುವತಿಯ ಪೋಷಕರ ಜೊತೆ ಸುಲ್ತಾನ್ ಜ್ಯುವೆಲ್ಲರಿಗೆ ಬಂದಿದ್ದ ಯುವತಿ ಪ್ರಿಯಕರ ಚೇತನ್ ಎಂಬಾತ ಹಲ್ಲೆ ನಡೆಸಿದ್ದಾಗಿ ಲುಕ್ಮಾನ್ ದೂರು ನೀಡಿದ್ದಾನೆ. ಈ ವೇಳೆ ಪೊಲೀಸರ ಜೊತೆ ಸ್ಥಳಕ್ಕೆ…
ಉಡುಪಿ: ಮ್ಯೂಚುವಲ್ ಫಂಡ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ವಂಚಕರು 78,500 ರೂ.ಗಳನ್ನು ವಂಚಿಸಿದ ಘಟನೆ ನಡೆದಿದೆ. ಅನುಷ್ ರವಿಶಂಕರ್ ವಂಚನೆಗೆ ಒಳಗಾದವರು. ಅನುಷ್ ಅವರಿಗೆ ಅಪರಿಚಿತರು 9395641735 ಸಂಖ್ಯೆಯಿಂದ ಕರೆ ಮಾಡಿ ಮ್ಯೂಚುವಲ್ ಫಂಡ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹಣ ದ್ವಿಗುಣಗೊಳಿಸಿ ನೀಡುವುದಾಗಿ ಆಮಿಷವೊಡ್ಡಿದ್ದಾರೆ. ಅವರ ಮಾತನ್ನು ನಂಬಿದ ಅನುಷ್ ಗೂಗಲ್ ಪೇ ಮುಖಾಂತರ ಆ ವ್ಯಕ್ತಿ ತಿಳಿಸಿದ ಬ್ಯಾಂಕ್ ಖಾತೆಗೆ ಕ್ರಮವಾಗಿ 1000 ರೂ., 3000 ರೂ., 3000 ರೂ. ಮತ್ತು 6500 ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಆ ಬಳಿಕ ಮತ್ತೆ ಸೆಕ್ಯೂರಿಟಿ ಡೆಪಾಸಿಟ್, ಫಿಕ್ಸ್ ಡೆಪಾಸಿಟ್, ರಿಪಂಡ್ ಸೆಕ್ಯೂರಿಟಿ ಡೆಪಾಸಿಟ್‌ಗಳಿಗೂ ಹಣ ಪಾವತಿ ಮಾಡುವಂತೆ ಅಪರಿಚಿತ ವ್ಯಕ್ತಿ ತಿಳಿಸಿದ್ದು, ಆತ ಹೇಳಿದಂತೆ 9500 ರೂ., 22500 ರೂ., 14500 ರೂ., 18500 ರೂ.ಗಳನ್ನು ಪಾವತಿಸಿದ್ದಾರೆ. ಹೀಗೆ ಅನುಷ್ ಅವರು ಹಂತ ಹಂತವಾಗಿ ಒಟ್ಟು 78,500 ರೂ.ಗಳನ್ನು ಆತ ಹೇಳಿದಂತೆಯೇ ಪಾವತಿ…
ಮಂಗಳೂರು: ಕಟೀಲು ಮೇಳದ ಚೌಕಿ ಸಹಾಯಕನೋರ್ವ ಯಕ್ಷಗಾನ ನಡೆಯುತ್ತಿದ್ದ ಸ್ಥಳವಾದ ಬಿಸಿರೋಡಿನ ಪಲ್ಲಮಜಲು ಎಂಬಲ್ಲಿ ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ. ಕಟೀಲು ಮೇಳದ ಐದನೇ ಮೇಳದ ಚೌಕಿ ಸಹಾಯಕ ಮಣಿನಾಲ್ಕೂರು ಗ್ರಾಮದ ಕೊಡಂಗೆ ನಿವಾಸಿ ಅಚ್ಯುತ ನಾಯಕ್ ( 45) ಅವರು ಹೃದಯ ಘಾತದಿಂದ ನಿಧನರಾಗಿದ್ದಾರೆ.ಪ್ರಸ್ತುತ ಕಟೀಲು ಮೇಳವು ಕಾಲಮಿತಿ ಯಕ್ಷಗಾನವಾಗಿದ್ದು, ರಾತ್ರಿ ಗಂಟೆಗೆ 1.ರ ಸುಮಾರಿಗೆ ಯಕ್ಷಗಾನ ಮುಗಿದು ಪರಿಕರಗಳನ್ನು ಜೋಡಿಸುತ್ತಿದ್ದ ವೇಳೆ ಏಕಾಏಕಿ ಅಸ್ವಸ್ಥತೆಗೊಂಡಿದ್ದಾರೆ. ತಕ್ಷಣ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿ ದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಕಳೆದ ಹಲವು ವರ್ಷಗಳಿಂದ ಕಟೀಲು ಮೇಳದ ಚೌಕಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ಅವರು, ಈ ಹಿಂದೆ ಸರಪಾಡಿ ಸೇರಿದಂತೆ ಹಲವೆಡೆ ಸಣ್ಣ ಹೋಟೆಲ್ ನಡೆಸುತ್ತಿದ್ದರು, ಜೊತೆಗೆ ಅಡುಗೆ ಕೆಲಸಕ್ಕೂ ಹೋಗುತ್ತಿದ್ದರು ಎನ್ನಲಾಗಿದೆ.