Author: main-admin

ಬೆಳ್ತಂಗಡಿ:ಆಟೋ ಚಾಲಕನೋರ್ವ ಸ್ನೇಹಿತರಿಗೆ ಕರೆ ಮಾಡಿ ತಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದುಇದೀಗ ಆತನಿಗೆ ಹುಡುಕಾಟ ನಡೆಯುತ್ತಿದೆ. ಬೆಳ್ತಂಗಡಿಯಲ್ಲಿ ರಿಕ್ಷಾ ಚಾಲಕಾನಾಗಿರುವ ಪ್ರವೀಣ್ ಪಿಂಟೊ ಎಂಬವರು ಗುರುವಾಯನಕೆರೆಯ ಕೆರೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಪ್ರವೀಣ್ ಕರೆ ಸ್ವೀಕರಿಸಿದ ಸ್ನೇಹಿತರು ಕೆರೆ ಬಳಿ ಬಂದು ನೋಡಿದಾಗ ಗುರುವಾಯನಕೆರೆ ಕೆರೆಯ ಬದಿಯಲ್ಲಿ ಪ್ರವೀಣ್ ಚಪ್ಪಲಿ ಹಾಗೂ ಆಧಾರ್ ಕಾರ್ಡ್ ಲಭಿಸಿದೆ. ಇದೀಗ ಪ್ರವೀಣ್ ಕೆರೆಗೆ ಹಾರಿರಬಹುದೆಂದು ಶಂಕಿಸಿ ಸ್ಥಳೀಯರು, ಅಗ್ನಿಶಾಮಕ ದಳ, ಸ್ವಯಂಸೇವಕರು , ಪೊಲೀಸರು ಪ್ರವೀಣ್ ಗೆ ಹುಡುಕಾಟ ನಡೆಸುತ್ತಿದ್ದಾರೆ. ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಹುಡುಕಾಟಕ್ಕೆ ಕೊಂಚ ಸವಾಲಾಗುತ್ತಿದೆ ಎನ್ನಲಾಗಿದೆ.

Read More

ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯರು ಸಹಿತ ಮೂವರು ಅಪರಿಚಿತರು ಆಭರಣದ ಅಂಗಡಿ ಮಾಲೀಕನ ಗಮನ ಬೇರೆಡೆಗೆ ಸೆಳೆದು ಚಿನ್ನದ ಸರ ಕಳವು‌ ಮಾಡಿಕೊಂಡು ಹೋಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಬಗ್ಗೆ ಉಡುಪಿ ಮಾರುತಿ ವಿಥೀಕಾ ನಿವಾಸಿ 59 ವರ್ಷದ ಬಿ.ಸತ್ಯನಾರಾಯಣ ಶೇಟ್‌ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಇವರು ಕನಕದಾಸ ರಸ್ತೆಯಲ್ಲಿ ಪಾಂಡುರಂಗ ಜುವೆಲ್ಲರ್ಸ್‌ ಎಂಬ ಆಭರಣದ ಅಂಗಡಿ ನಡೆಸುತ್ತಿದ್ದಾರೆ. ಇವರ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಇಬ್ಬರು ಅಪರಿಚಿತ ಮಹಿಳೆಯರು ಮತ್ತು ಓರ್ವ ಪುರುಷ ಬಂದಿದ್ದು, ಮಾಲೀಕರ ಗಮನವನ್ನು ಬೇರೆಡೆಗೆ ಸೆಳೆದು ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಚಿನ್ನದ ಸರದ ಮೌಲ್ಯ 22 ಸಾವಿರ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ನಿನ್ನೆಯಷ್ಟೇ 108 ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ( Police Inspector Transfer ) ರಾಜ್ಯ ಸರ್ಕಾರ ( Karnataka Government ) ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿತ್ತು. ಇಂದು ಮತ್ತೆ 30 ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ( Karnataka Police Inspector ) ಮಾಡಿದೆ. ಅಲ್ಲದೇ ಇಬ್ಬರು ನಾನ್ ಐಪಿಎಸ್ ಅಧಿಕಾರಿಗಳನ್ನು ( Non IPS Officer ) ವರ್ಗಾವಣೆ ಮಾಡಿ ಆದೇಶಿಸಿದೆ. ಈ ಸಂಬಂಧ ಪೊಲೀಸ್ ಇಲಾಖೆಯಿಂದ ವರ್ಗಾವಣೆ ಆದೇಶ ಹೊರಡಿಸಲಾಗಿದ್ದು, ಸಿಇಎಸ್ ಪೊಲೀಸ್ ಠಾಣೆ, ಬಿಎಂಟಿಎಫ್ ಸೇರಿದಂತೆ ವಿವಿಧ ಠಾಣೆಗಳ 30 ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ. ಇದಷ್ಟೇ ಅಲ್ಲದೆ ನಾನ್ ಐಪಿಎಸ್ ಇಬ್ಬರು ಸಿವಿಲ್ ಪೊಲೀಸ್ ಅಧೀಕ್ಷಕರನ್ನು ವರ್ಗಾವಣೆಗೊಳಿಸಿದೆ. ಸ್ಥಳ ನಿರೀಕ್ಷೆಯಲ್ಲಿದ್ದಂತ ನಾನ್ ಐಪಿಎಸ್ ಅಧಿಕಾರಿ ಎಸ್ ರಮೇಶ್ ಕುಮಾರ್ ಅವರನ್ನು ರಾಜ್ಯ ಗುಪ್ತವಾರ್ತೆಯ ಪೊಲೀಸ್ ಅಧೀಕ್ಷರನ್ನಾಗಿ ನೇಮಿಸಿದೆ. ಈ ಹುದ್ದೆಯಲ್ಲಿದ್ದಂತ ಸಿ.ಟಿ ಜಯಕುಮಾರ್ ಅವರನ್ನು…

Read More

ಮಂಗಳೂರು: ಯಕ್ಷಗಾನದ ಅಪ್ರತಿಮ ಕಲಾವಿದ , ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ (90) ವಿಧಿವಶರಾಗಿದ್ದಾರೆ. ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ರ ಮಾರ್ಚ್ 20ರಲ್ಲಿ ಕೇರಳ ರಾಜ್ಯದ ಕುಂಬ್ಳೆಯಲ್ಲಿ ಸುಂದರ್ ರಾವ್ ಜನಿಸಿದರು. ಯಕ್ಷಗಾನ ಮತ್ತು ತಾಳ-ಮದ್ದಳೆ (ಸಾಂಪ್ರದಾಯಿಕ ನೃತ್ಯ) ಕಲಾವಿದರಾಗಿದ್ದ ಸುಂದರ್ ರಾವ್ ಮಂಗಳೂರಿನ ಆಗಿನ ಸುರತ್ಕಲ್ ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 1994 ರಿಂದ 1999ರ ವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಅದ್ಭುತ ವಾಕ್ ಚಾತುರ್ಯದಿಂದ ಪ್ರಸಿದ್ಧರಾಗಿದ್ದ ಕುಂಬ್ಳೆ ಸುಂದರ್ ರಾವ್ ಪ್ರಾಸಬದ್ಧ ಸಂಭಾಷಣೆಯಿಂದಲೇ ಹೆಸರುವಾಸಿಯಾಗಿದ್ದರು. ರಾವ್ 50ಕ್ಕೂ ಅಧಿಕ ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ್ದಾರೆ.ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕುಂಬ್ಳೆ ಸುಂದರ್ ರಾವ್ ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಸುಂದರ್ ರಾವ್ ನಿಧನಕ್ಕೆ ಯಕ್ಷಕಲಾರಂಗ ಸಂತಾಪ ವ್ಯಕ್ತಪಡಿಸಿದೆ.

Read More

ಮಂಗಳೂರು : ಮಂಗಳೂರು ನವಮಂಗಳೂರು ಬಂದರಿಗೆ ಈ ಋತುವಿನ ಮೊದಲ ಐಷರಾಮಿ ಹಡಗು ಆಗಮಿಸಿದೆ. ಮಾಲ್ಟಾದಿಂದ ಬಂದಿದ್ದ ‘ಎಂಎಸ್‌ ಯುರೋಪ–2’ ಹೆಸರಿನ ಹಡಗಿನಲ್ಲಿ 271 ಪ್ರಯಾಣಿಕರು ಹಾಗೂ 373 ಸಿಬ್ಬಂದಿ ಆಗಮಿಸಿದ್ದಾರೆ. ಹಡಗಿನಲ್ಲಿ ಆಗಮಿಸಿದ್ದ ಪ್ರಯಾಣಿಕರಿಗೆ ಎನ್ಎಂಪಿಎ ದಲ್ಲಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು, ಹಡಗಿನಲ್ಲಿ ಬಂದಿದ್ದ ಪ್ರವಾಸಿಗರು ಸೇಂಟ್‌ ಅಲೋಶಿಯಸ್‌ ಕಾಲೇಜು, ಕದ್ರಿ ಹಾಗೂ ಕುದ್ರೋಳಿ ದೇವಸ್ಥಾನ, ಮಂಗಳೂರಿನ ಮಾರುಕಟ್ಟೆ, ಉಡುಪಿ ಕೃಷ್ಣ ಮಠ, ಮೂಡುಬಿದಿರೆಯ ಸಾವಿರ ಕಂಬದ ಬಸದಿ ಫಿಜಾ ಮಾಲ್‌ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದರು. ಸಂಜೆ 3 ಗಂಟೆಗೆ ಹಡಗು ಇಲ್ಲಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿತು. ಕೋವಿಡ್‌ ಕಾರಣದಿಂದ ಎರಡು ವರ್ಷಗಳಿಂದ ಪ್ರವಾಸಿ ಹಡುಗಳ ಭೇಟಿ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ದೀರ್ಘ ಅವಧಿಯ ಬಳಿಕ, ಈ ಋತುವಿನಲ್ಲಿ ಮತ್ತೆ ವಿದೇಶಿ ಪ್ರಯಾಣಿಕರು ನಗರಕ್ಕೆ ಭೇಟಿ ನೀಡಿದ್ದಾರೆ.

Read More

ಮಂಗಳೂರು: ಗೂಂಡಾ ಕಾಯ್ದೆ, ಭಯೋತ್ಪಾದನಾ ನಿಗ್ರಹ ಮೊದಲಾದ ಕಾನೂನು ಜಾರಿಯಲ್ಲಿದ್ದರೂ, ಗೋಡೆ ಬರಹದಂತಹ ಪ್ರಕರಣಗಳು ನಡೆದಾಗ ಸರಕಾರ, ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರೆ, ಜಿಲ್ಲೆಯಲ್ಲಿ ಕುಕ್ಕರ್ ಬಾಂಬ್ ಸ್ಫೋಟದಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ. ಸರಕಾರದ ವೈಫಲ್ಯದಿಂದ ಇಂದು ಸಮಾಜದಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಆರೋಪಿಸಿದ್ದಾರೆ. ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರೋ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಒಬ್ಬ ವ್ಯಕ್ತಿಯ ಅಪರಾಧಕ್ಕೆ ಇಡೀ ಸಮುದಾಯವನ್ನು ಸಂಶಯಿಸುವ, ಅನುಮಾನದಿಂದ ನೋಡುವ ಪ್ರಕ್ರಿಯೆ ನಡೆಯುತ್ತಿರುವುದು ಖಂಡನೀಯ. ಜನತೆ ಇಂತಹ ಊಹಾಪೋಹ, ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಸೌಹಾರ್ದತೆ ಕಾಪಾಡಬೇಕು ಎಂದು ಕರೆ ನೀಡಿದರು.

Read More

ಬೆಂಗಳೂರು: ಎಲೆಕ್ಟ್ರಾನಿಕ್​ ಸಿಟಿ ನಿಲಾದ್ರಿ ನಗರದಲ್ಲಿ ಗುರುವಾರ ರಾತ್ರಿ ಕೇರಳ ಮೂಲದ ಯುವತಿಯ ಮೇಲೆ ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅತ್ಯಾಚಾರಕ್ಕೆ ಸಹಕರಿಸಿದ ಆತನ ಸ್ನೇಹಿತೆಯನ್ನೂ ಸೇರಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ​ ಬಿಟಿಎಂ ಲೇಔಟ್​ನ ಸಂಸ್ಥೆಯೊಂದರಲ್ಲಿ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಗುರುವಾರ ರಾತ್ರಿ ಬಿಟಿಎಂ ಲೇಔಟ್​ನಿಂದ ನಿಲಾದ್ರಿ ನಗರಕ್ಕೆ ಖಾಸಗಿ ಕಂಪನಿಯೊಂದರ ಬೈಕ್ ಬುಕ್​ ಮಾಡಿದ್ದಳು. ಬೈಕ್ ಹುಡುಗ ಪಿಕ್​ ಮಾಡಲು ಬಂದಾಗ ಯುವತಿ ಮದ್ಯಪಾನ ಮಾಡಿದ್ದಳು. ನಿಲಾದ್ರಿ ನಗರಕ್ಕೆ ತಲುಪುವ ಹೊತ್ತಿಗೆ ಯುವತಿ ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದಳು ಎಂದು ತಿಳಿದುಬಂದಿದೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಡ್ರಾಪ್​ ಪಾಯಿಂಟ್​ಗೆ ತಲುಪಿಸದೆ ಬೈಕ್​ನಲ್ಲಿದ್ದ ಯುವಕ ತನ್ನ ಸ್ನೇಹಿತ ಹಾಗೂ ಸ್ನೇಹಿತೆಯ ನೆರವಿನಿಂದ ನಿಲಾದ್ರಿ ನಗರದ ತನ್ನ ರೂಮ್​ಗೆ ಕರೆದೊಯ್ದು ಇಬ್ಬರು ಅತ್ಯಾಚಾರ​ ಮಾಡಿದ್ದಾರೆ. ಪ್ರಜ್ಞೆ ಬಂದ ಬಳಿಕ ಯುವತಿಯನ್ನು ಆರೋಪಿಗಳು ಬಿಟ್ಟು…

Read More

ಮಂಗಳೂರು: ಸುರತ್ಕಲ್ ಎನ್ ಐ ಟಿಕೆ ಬಳಿ ಸುಂಕ ಸಂಗ್ರಹ ಕೇಂದ್ರಕ್ಕೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆ ನಿರ್ದೇಶಕರ ಪತ್ರದ ಆಧಾರದಲ್ಲಿ ಡಿಸೆಂಬರ್‌ 1ರಿಂದ ಟೋಲ್ ಕೇಂದ್ರದಲ್ಲಿ ಸುಂಕ ಸಂಗ್ರಹ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ರವಿ ಕುಮಾರ್ ಎಂ ಆರ್ ತಿಳಿಸಿದ್ದಾರೆ. ನ.30 ರ ಮಧ್ಯರಾತ್ರಿ ಗಂಟೆಗೆ ಇದು ಜಾರಿಗೆ ಬರಲಿದ್ದು ಸಾರ್ವಜನಿಕರು ಸುರತ್ಕಲ್ ಟೋಲನ್ನು ಯಾವುದೇ ಸುಂಕ ಪಾವತಿಸದೆ ದಾಟಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.ಇನ್ನೊಂದೆಡೆ ನಿರೀಕ್ಷೆಯಂತೆ ಹೆಜಮಾಡಿಯಲ್ಲಿ ಟೋಲ್‌ ಮೊತ್ತ ದುಬಾರಿಯಾಗಲಿದೆ.

Read More

ಬಂಟ್ವಾಳ: ಸಿದ್ದಕಟ್ಟೆಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಗೆ ಸ್ಕೂಟರ್‌ ಚಲಾಯಿಸಲು ನೀಡಿದ ಆಕೆಯ ಪೋಷಕರಿಗೆ ಬಂಟ್ವಾಳ ನ್ಯಾಯಾಲಯ 26 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಕಳೆದ ಆಗಸ್ಟ್‌ನಲ್ಲಿ ಸಿದ್ದಕಟ್ಟೆಯಲ್ಲಿ ಸ್ಕೂಟರ್‌ ಮತ್ತು ಕಾರಿನ ಮಧ್ಯೆ ಢಿಕ್ಕಿ ಸಂಭವಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ ಎಎಸ್‌ಐ ವಿಜಯ್‌ ಅವರು ನೋಟಿಸ್‌ ಜಾರಿ ಮಾಡಿದ್ದರು. ಪ್ರಸ್ತುತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬಾಲಕಿಯ ತಾಯಿಗೆ ದಂಡ ವಿಧಿಸಿ ಆದೇಶ ನೀಡಿದೆ.

Read More

ಮಂಗಳೂರು: ನಗರದ ತೆಂಕ ಎಕ್ಕಾರು ಗ್ರಾಮದಲ್ಲಿ ಕಂಠ ಪೂರ್ತಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಪತ್ನಿಯೊಂದಿಗೆ ಜಗಳವಾಡಿ ಕೊಲೆಗೈದಿರುವ ಘಟನೆ ನಡೆದಿದೆ. ದುರ್ಗೇಶ್ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ಹೆಂಡತಿ ಸರಿತಾಳೊಂದಿಗೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಮರದ ರೀಪಿನಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದಾನೆ. ತಾಯಿಯ ಹತ್ಯೆ ಕಂಡು ಮಗ ರಾಹುಲ್ ಹೆದರಿ ತನ್ನ ಅಜ್ಜಿ ಮನೆಗೆ ಓಡಿ ಹೋಗಿದ್ದಾನೆ. ಸ್ವತಃ ಆರೋಪಿಯೇ ಇಂದು ಬೆಳಗ್ಗೆ ತನ್ನ ಅಣ್ಣ ಮಧುಗೆ ಕರೆ ಮಾಡಿ ಸರಿತಾ ಮೃತಪಟ್ಟಿರುವುದಾಗಿ ತಿಳಿಸಿದ್ದಾನೆ. ಮಧು ಸ್ಥಳಕ್ಕೆ ಬಂದು ನೋಡಿದಾಗ ದುರ್ಗೇಶನೇ ಸರಿತಾಳನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More