ಪಡುಬಿದ್ರಿ: ಪಡುಬಿದ್ರಿ ಪಾದೆಬೆಟ್ಟುವಿನ ರೈಲ್ವೆ ಬ್ರಿಡ್ಜ್ ಬಳಿಯ ರೈಲ್ವೆ ಹಳಿಯಲ್ಲಿ ಯುವಕನ ಶವವೊಂದು ಶುಕ್ರವಾರ ರಾತ್ರಿ ಪತ್ತೆಯಾಗಿದೆ. ಪಕ್ಕದ ಕಲೋನಿಯ ನಿವಾಸಿ ಸುರೇಶ್ (33) ಮೃತ ಪಟ್ಟ ಯುವಕ. ಇದು ಆಕಸ್ಮಿಕವೊ ಆತ್ಮಹತ್ಯೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯ ಬೇಕಾಗಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
Author: main-admin
ಬೆಂಗಳೂರು : ರಾಜ್ಯದ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಇಂದು (ನವೆಂಬರ್ 26) ಸಂವಿಧಾನ ದಿನವನ್ನಾಗಿ ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರತ್ಯೇಕ ಆದೇಶ ಹೊರಡಿಸಿದೆ. ಪ್ರತಿ ವರ್ಷ ನವೆಂಬರ್ 26 ಈ ದಿನವನ್ನು ‘ಭಾರತ ಸಂವಿಧಾನ’ವು ಭಾರತದ ಸಂವಿಧಾನ ಸಭೆಯಲ್ಲಿ ಅಂಗೀಕರಿಸಲ್ಪಟ್ಟ ದಿನವಾದ 26ನೇ ನವೆಂಬರ್ 1949ರ ಸವಿನೆನಪಿಗಾಗಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮುಂದುವರೆದು ಉಲ್ಲೇಖಿತ (2)ರಲ್ಲಿ ಭಾರತ ಸರ್ಕಾರದ, ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪತ್ರದಲ್ಲಿ ಸೂಚಿಸಿರುವಂತೆ ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳು ಮತ್ತು ತತ್ವಗಳ ಅರಿವನ್ನು ಮೂಡಿಸುವಂತಹ Know Your Constitution ಕಾರ್ಯಕ್ರಮವನ್ನು ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಆಯೋಜಿಸಲು ಸೂಚನೆ ನೀಡಲಾಗಿದೆ. ಆದ್ದರಿಂದ ದಿನಾಂಕ:26.11.2022 ‘ಸಂವಿಧಾನ ದಿನಾಚರಣೆ’ ಅಂಗವಾಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಈ ಕೆಳಕಂಡ ಚಟುವಟಿಕೆಗಳನ್ನು ಮುಖ್ಯಸ್ಥರು ಹಮ್ಮಿಕೊಳ್ಳಲು ಕ್ರಮವಹಿಸಲು ಸೂಚಿಸಿದೆ. ಎಲ್ಲಾ ಶಾಲೆಗಳಲ್ಲಿ ದಿನಾಂಕ:26.11.2022ರಂದು ಬೆಳಿಗ್ಗೆ…
ಮನುಷ್ಯನ ಅಸ್ಥಿಪಂಜರ ಇಂದು ಪತ್ತೆಯಾದ ಘಟನೆ ಮಂಗಳೂರು ನಗರದ ಬರ್ಕೆ ಅರಕ್ಷಕ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಬರ್ಕೆ ಅರಕ್ಷಕ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಣ್ಣಗುಡ್ಡೆ ಹೋಟೆಲ್ ದುರ್ಗಮಹಲ್ ಮುಂಭಾಗದ ರಸ್ತೆ ಸಮೀಪದ ಪಾಲುಬಿದ್ದ ಮನೆಯ ಅಂಗಳದಲ್ಲಿ ಅಸ್ಥಿಪಂಜರ ಪತ್ತೆಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಬರ್ಕೆ ಠಾಣಾ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಮುಲ್ಕಿ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ 778 ಪ್ರವಾಸಿತಾಣ ಗುರುತಿಸಿದ್ದು ಅದರಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಮಂಗಳೂರಿನ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಪ್ರವಾಸಿ ತಾಣವಾಗಿ ಸೇರ್ಪಡೆಯಾಗಿದೆ. ಈ ಪ್ರವಾಸಿ ತಾಣಗಳಲ್ಲಿ ಅಗತ್ಯವಿರುವ ಯಾತ್ರಿ ನಿವಾಸ ಅಥವಾ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಅಧೀನ ಕಾರ್ಯದರ್ಶಿ ವಿಮಲಾ ಬಿ. ತಮ್ಮ ಆದೇಶದಲ್ಲಿ ಹೊರಡಿಸಿದ್ದಾರೆ.
ಮಂಗಳೂರು: ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಶಾರೀಕ್ (Shariq) ಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಎಂಟು ಮಂದಿ ವೈದ್ಯರು ದಿನದ 24 ತಾಸು ನಿಗಾ ವಹಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಶಾರೀಕ್ ಆರೋಗ್ಯ (Shariq Health) ಸ್ಥಿತಿ ಬಿಗಡಾಯಿಸುತ್ತಿದೆ. ಕುಕ್ಕರ್ ಬಾಂಬು ಸ್ಫೋಟದ ವೇಳೆ ಭಾರೀ ಪ್ರಮಾಣದ ಹೊಗೆ ಕಂಡುಬಂದಿತ್ತು. ಸ್ಪೋಟದ ಹೊಗೆ ಶಾರೀಕ್ ಶ್ವಾಸಕೋಶದಲ್ಲಿ ತುಂಬಿಕೊಂಡ ಕಾರಣ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪೋಟದ ವೇಳೆ ಕುಕ್ಕರ್ ನ ಮುಚ್ಚಳ ಕುತ್ತಿಗೆಗೆ ಬಡಿದು ಗಂಭೀರ ಗಾಯಗಳಾಗಿವೆ. ಹೀಗಾಗಿ ಕುತ್ತಿಗೆಯ ಗಾಯಗಳಿಗೆ ವೈದ್ಯರ ತಂಡ ವಿಶೇಷ ಚಿಕಿತ್ಸೆ ನೀಡುತ್ತಿದೆ.ಇನ್ನು ಮೂರು ವಾರಗಳ ಕಾಲ ಚಿಕಿತ್ಸೆ ಮುಂದುವರಿಯುವ ಸಾಧ್ಯತೆ ಇದೆ. 8 ಮಂದಿ ವೈದ್ಯರಿಂದ ದಿನದ 24 ತಾಸು ನಿಗಾ ವಹಿಸಲಾಗುತ್ತಿದೆ. ಶಾರೀಕ್ ಎಳೆಯ ಪ್ರಾಯವಾಗಿರುವುದರಿಂದ ಚಿಕಿತ್ಸೆಗೆ ಅನುಕೂಲವಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ
ಉಡುಪಿ: ಟೋಕನ್ ಇಲ್ಲದೆ ಪಡಿತರ ನೀಡಿದ ವಿಚಾರಕ್ಕೆ ಸಂಬಂಧಿಸಿ ಪ್ರಶ್ನಿಸಿದಕ್ಕೆ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿರುವ ಘಟನೆ ಸಹಕಾರಿ ವ್ಯವಸಾಯ ಬ್ಯಾಂಕ್ ಹೆರ್ಗ ಇದರ ಅಂಬಾಗಿಲುವಿನ ಶಾಖಾ ಕಚೇರಿಯಲ್ಲಿ ನಡೆದಿದೆ. ಅಂಬಾಗಿಲು ನಿವಾಸಿ ಸತೀಶ್ ವಿ. ಎಂಬವರು ನ. 21ರಂದು ಬೆಳಿಗ್ಗೆ ಉಡುಪಿ ತಾಲೂಕಿನ ಸಹಕಾರಿ ವ್ಯವಸಾಯ ಬ್ಯಾಂಕ್ ಹೆರ್ಗ ಇದರ ಅಂಬಾಗಿಲುವಿನ ಶಾಖಾ ಕಛೇರಿಗೆ ಪ್ರತಿ ತಿಂಗಳಂತೆ ತಮ್ಮ ಕಾರ್ಡ್ ನ ಪಡಿತರ ತರಲು ಹೋಗಿದ್ದರು. ಆಗ ಅಂಗಡಿಯಲ್ಲಿ ಈಗ ಸಮಯವಿಲ್ಲ ಸಂಜೆ ಬನ್ನಿ ಎಂದು ಹೇಳಿದ್ದರು. ಅದರಂತೆ ಸತೀಶ್ ವಿ. ಅವರು ಸಂಜೆ 4:15ಕ್ಕೆ ಅಂಗಡಿಗೆ ಹೋದಾಗ ಗ್ರಾಹಕರೊಬ್ಬರಿಗೆ ಟೋಕನ್ ನೀಡದೇ ಪಡಿತರ ಕೊಡುತ್ತಿದ್ದರು. ಅದನ್ನು ಗಮನಿಸಿದ ಸತೀಶ್ ಅವರು ಯಾಕೆ ನಂತರ ಬಂದಿರುವವರಿಗೆ ಟೋಕನ್ ಇಲ್ಲದೇ ಪಡಿತರ ಕೊಡುತ್ತೀರಿ. ಅವರು ಸಾಲಿನಲ್ಲಿ ನಿಲ್ಲಬೇಕಿತ್ತಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಅಂಗಡಿಯಿಂದ ಹೊರಬಂದ ಸಚ್ಚೇಂದ್ರ ನಾಯಕ್ ಎಂಬಾತನು ಸತೀಶ್ ಅವರಿಗೆ ಹಲ್ಲೆ ನಡೆಸಲು ಮುಂದಾಗಿದ್ದಲ್ಲದೆ, ಅವಾಚ್ಯ…
ಚಿಕ್ಕಮಗಳೂರು: ಅಂಬುಲೆನ್ಸ್ ಹಾಗೂ ಆಟೋ ಮುಖಾಮುಖಿಯಾಗಿ ಡಿಕ್ಕಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಚಾರ್ಮಾಡಿ ಘಾಟಿಯ ಒಂದನೇ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಆಟೋದಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂಡಿಗೆರೆ ಮೂಲದ ರೋಗಿಯನ್ನು ಮಂಗಳೂರು (Mangaluru) ಆಸ್ಪತ್ರೆಯಿಂದ ಮೂಡಿಗೆರೆ ಬಂದು ಬಿಟ್ಟು ಹೋಗುತ್ತಿದ್ದ ಅಂಬುಲೆನ್ಸ್ ಹಾಗೂ ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬರುತ್ತಿದ್ದ ಆಟೋ ಚಾರ್ಮಾಡಿಯ ಒಂದನೇ ತಿರುವಿನಲ್ಲಿ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಆಟೋದಲ್ಲಿದ್ದ ನಾಲ್ವರನ್ನು ಬೆಳ್ತಂಗಡಿಯ ಕಕ್ಕಿಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಮೂಲತಃ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ್ದಾಗಿದೆ. ಅಂಬುಲೆನ್ಸ್ ಹಾಗೂ ಆಟೋ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಎರಡೂ ವಾಹನಗಳು ಜಖಂ ಆಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
‘ಉಡುಪಿ: ಸಂಬಂಧಿಕರ ರೋಸ್ (ಕ್ರೈಸ್ತರ ಸಂಪ್ರದಾಯದಂತೆ ಮದುವೆಯ ಮುನ್ನಾ ದಿನಾ ನಡೆಯುವ ಕಾರ್ಯಕ್ರಮ) ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವತಿಯೋರ್ವಳು ಕುಸಿದು ಬಿದ್ದು ಅಸ್ಥಸ್ಥಗೊಂಡಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ.ಮೃತ ಯುವತಿಯನ್ನು ಹಾವಂಜೆ ನಿವಾಸಿ ಜೋಸ್ನಾ ಲೂವಿಸ್ (23) ಎಂದು ಗುರುತಿಸಲಾಗಿದೆ. ಜೋಸ್ನಾ ಅವರು ಬುಧವಾರ ರಾತ್ರಿ ಕೊಳಲಗಿರಿ ಹಾವಂಜೆಯ ತನ್ನ ಸಂಬಂಧಿಕರ ಮನೆಯಲ್ಲಿ ನಡೆದ ರೋಸ್ ಕಾರ್ಯಕ್ರಮಕ್ಕೆ ತೆರಳಿದ್ದು ಅಲ್ಲಿ ಸುಮಾರು 8.30 ರ ಹೊತ್ತಿಗೆ ಕುಳಿತಲ್ಲೇ ಕುಸಿದುಬಿದ್ದಿದ್ದು, ಕೂಡಲೇ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಜೋಸ್ನಾ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಕುಕ್ಕರ್ ಬಾಂಬರ್ ಶಾರೀಕ್‌ನಗುರಿ ಕದ್ರಿ ದೇವಸ್ಥಾನ ಆಗಿತ್ತು ಎಂದು ಉಗ್ರ ಸಂಘಟನೆ ಹೇಳಿದ್ದರೂ ಆತ ಮೊಬೈಲ್‌ನಲ್ಲಿ ಮಂಗಳೂರಿನ ಹಲವು ಪ್ರದೇಶಗಳನ್ನು ಸರ್ಚ್ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಹೌದು. ಶಾರೀಕ್ ಮೊಬೈಲ್‌ನಲ್ಲಿ ಯಾವ ಸ್ಥಳಗಳನ್ನು ಸರ್ಚ್ ಮಾಡಿದ್ದ ಎನ್ನುವುದು ಗೊತ್ತಾಗಿದೆ. ಸರ್ಕಾರಕ್ಕೆ ನೀಡಿದ ಪ್ರಾಥಮಿಕ ವರದಿಯಲ್ಲಿ ತನಿಖಾ ತಂಡ ಮೂರು ದೇವಸ್ಥಾನ ಮತ್ತು ಎರಡು ಸಾರ್ವಜನಿಕ ಸ್ಥಳದಲ್ಲಿ ಬಾಂಬ್ ಇಡಲು ಪ್ಲಾನ್ ಮಾಡಿದ್ದ ಎಂಬುದನ್ನು ಉಲ್ಲೇಖಿಸಿದೆ. ಎರಡು ಶಿವ ದೇವಸ್ಥಾನ, ಒಂದು ದೇವಿ ದೇವಸ್ಥಾನ, ಎರಡು ಸಾರ್ವಜನಿಕ ಸ್ಥಳ, ಒಂದು ಕಾರ್ಯಕ್ರಮ ಆತನ ಟಾರ್ಗೆಟ್ ಆಗಿತ್ತು ಎಂದು ಪೊಲೀಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ. ಟಾರ್ಗೆಟ್ ಆಗಿದ್ದ ಸ್ಥಳಗಳು ಯಾವುದು? ಕದ್ರಿ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ ಮತ್ತು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ(Kudroli Gokarnanatheshwara Temple) ಲಕ್ಷದೀಪೋತ್ಸವ ನಡೆಯಿತ್ತಿದೆ. ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ಸಂದರ್ಭದಲ್ಲೇ ಸ್ಪೋಟ ಮಾಡುವ…
ಬೆಳ್ತಂಗಡಿ: ಧರ್ಮಸ್ಥಳದ ಕುದುರೆಯ ಎಂಬಲ್ಲಿ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಬ್ಬರು ಮೃತಪಟ್ಟು ಏಳು ಜನರು ಗಾಯಗೊಂಡಿದ್ದಾರೆ. ಮೃತರನ್ನು ಮಂಡ್ಯದ ಚೆನ್ನಸಂದಾರ್ ನಿವಾಸಿ ಮಹದೇವ (63) ಎಂದು ಗುರುತಿಸಲಾಗಿದೆ. ಧರ್ಮಸ್ಥಳಕ್ಕೆ ತೆರಳುತ್ತಿದ್ದ ಮಂಡ್ಯದ 10 ಮಂದಿ ಕುಟುಂಬ ಕುದುರೆಯ ಬಳಿ ರಸ್ತೆಬದಿಯಲ್ಲಿ ಎಸ್‌ಯುವಿ ನಿಲ್ಲಿಸಿ ಸಮೀಪದ ಅಂಗಡಿಗೆ ತೆರಳಲು ವಾಹನದಿಂದ ಇಳಿಯುತ್ತಿದ್ದರು. ಧರ್ಮಸ್ಥಳದಿಂದ ಮೈಸೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಎಸ್‌ಯುವಿ ಹಾಗೂ ಪಕ್ಕದಲ್ಲಿ ನಿಂತಿದ್ದ ಜನರಿಗೆ ಢಿಕ್ಕಿ ಹೊಡೆದಿದೆ. ಐವರು ಮಹಿಳೆಯರು, ಓರ್ವ ಪುರುಷ ಮತ್ತು ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.