Author: main-admin

ಪುತ್ತೂರು: ವೀರಮಂಗಲ ಸಮೀಪ ತೋಟದ ಕೆರೆಗೆ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ನ.24ರಂದು ಬೆಳಗ್ಗೆ ಬೆಳಕಿಗೆ ಬಂದಿದೆ. ವೀರಮಂಗಲ ನಿವಾಸಿ ಕೃಷ್ಣಪ್ಪ ಎಂಬವರ ಪತ್ನಿ ಅಕ್ಕಮ್ಮ ಎಂಬವರು ಮೃತಪಟ್ಟವರು ಎಂದು ತಿಳಿದು ಬಂದಿದೆ. ಅಕ್ಕಮ್ಮ ಅವರು ಬೆಳಿಗ್ಗೆ ಮನೆಯಿಂದ ನೀರು ತರಲೆಂದು ತೋಟದ ಕೆರೆಯ ಪಕ್ಕಕ್ಕೆ ಹೋದವರು ಅಲ್ಲಿ ಆಕಸ್ಮಿಕವಾಗಿ ಕರೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ನೀರು ತರಲು ಹೋದ ಅಕ್ಕಮ್ಮ ಇನ್ನೂ ಬಾರದ ಹಿನ್ನೆಲೆಯಲ್ಲಿ ಮನೆ ಮಂದಿ ಹುಡುಕಾಟ ನಡೆಸಿದರು. ಈ ಸಂದರ್ಭ ಅವರ ಮೃತ ದೇಹ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಮೃತರು ಗಂಡ ಕೃಷ್ಣಪ್ಪ, ಪುತ್ರಿಯನ್ನು ಅಗಲಿದ್ದಾರೆ. ಇತ್ತೀಚೆಗಷ್ಟೆ ಅಕ್ಕಮ್ಮ ದಂಪತಿಯ ಪುತ್ರ ಚಂದ್ರಶೇಖರ್ ಅನಾರೋಗ್ಯದಿಂದ ಮೃತಪಟ್ಟಿದ್ದರು.

Read More

ಪುತ್ತೂರು : ಪುತ್ತೂರಿನಲ್ಲಿ ಲವ್ ಜಿಹಾದ್ ಗೆ ಸಂಬಂಧಿಸಿದಂತೆ ಒಂದು ಕಟೌಟ್ ಕಾಣಿಸಿಕೊಂಡಿದ್ದು ಲವ್ ಜಿಹಾದ್‌ – ನೀವು ಇದಕ್ಕೆ ಬಲಿಯಾಗಬೇಡಿ’ ಎಂಬ ಬ್ಯಾನರ್ ಒಂದನ್ನು ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಅರಣ್ಯ ಇಲಾಖೆಯ ಕಚೇರಿಯ ಎದುರು ಹಾಕಲಾಗಿದೆ. ಹಿಂದೂ ಹುಡುಗಿ ಶ್ರದ್ಧಾಳ ಹತ್ಯೆ. ದೇಹವನ್ನು 35 ತುಂಡು ಮಾಡಿದರು. ಕಾರಣ ಲವ್ ಜಿಹಾದ್. ಇದಕ್ಕೆ ನೀವು ಬಲಿಯಾಗಬೇಡಿ’ ಎಚ್ಚರಿಸುವ ಕಟೌಟ್ ಅನ್ನು ವೈದ್ಯ, ಹಿಂದುತ್ವ ಪರ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಡಾ.ಎಂ.ಕೆ. ಪ್ರಸಾದ್ ಅವರ ಹೆಸರಿನಲ್ಲಿ ಅಳವಡಿಸಲಾಗಿದೆ. ನಾನು ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧ ಅಲ್ಲ. ಆದರೆ, ನಮ್ಮ ಸುತ್ತಮುತ್ತಲ ಬೆಳವಣಿಗೆ ಬಗ್ಗೆ ಹದಿಹರೆಯದವರಿಗೆ ಅರಿವು ಇರಬೇಕು. ಬಣ್ಣದ ಆಮಿಷಗಳನ್ನು ಒಡ್ಡಿ ಏನೇನು ಮಾಡುತ್ತಾರೆ ಎಂಬುದೂ ಗೊತ್ತಿರಬೇಕು. ಅದಕ್ಕಾಗಿ ನಾನೇ ಈ ಫಲಕ ಹಾಕಿಸಿದ್ದೇನೆ. ಸ್ಥಳೀಯ ಎಲ್ಲ ಕಾಲೇಜುಗಳಿಗೂ ಭಿತ್ತಿಪತ್ರಗಳನ್ನು ಕಳುಹಿಸಿದ್ದೇನೆ. ಯಾವುದೇ ಸಂಘಟನೆ ಅಥವಾ ಸಂಘ–ಸಂಸ್ಥೆ ಪರವಾಗಿ ಮಾಡಿಲ್ಲ. ವೈಯಕ್ತಿಕ ಹೆಸರಿನಲ್ಲಿಯೇ ಕಳುಹಿಸಿದ್ದೇನೆ’ ಎಂದು ಡಾ.ಎಂ.ಕೆ. ಪ್ರಸಾದ್…

Read More

ಬೆಂಗಳೂರು: ಕೆಲ ದಿನಗಳ ಹಿಂದೆ ನಂದಿನ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 3 ರೂ ಹೆಚ್ಚಳ ಮಾಡುತ್ತಿರೋದಾಗಿ ಕೆ ಎಂಎಫ್ ನಿಂದ ಘೋಷಣೆ ಮಾಡಲಾಗಿತ್ತು. ಆದ್ರೇ ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬ್ರೇಕ್ ಹಾಕಿದ್ದರು. ಈ ಬಳಿಕ ಸಭೆ ನಡೆಸಿ ಯಾವುದೇ ತೊಂದರೆಯಾಗದಂತೆ ದರ ಹೆಚ್ಚಳಕ್ಕೆ ಸಭೆಯಲ್ಲಿ ಸಲಹೆ ಮಾಡಿದ್ದರು. ಸಿಎಂ ಸಲಹೆಯಂತೆ ಇಂದು ನಂದಿನ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿದೆ. ಈ ಕುರಿತಂತೆ ಇಂದಿನ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಂದಿನ ಉತ್ಪನ್ನಗಳ ದರ ಹೆಚ್ಚಳ ಸಂಬಂಧ ಮಹತ್ವದ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಹಲವು ಅಧಿಕಾರಿಗಳು, ನಾಯಕರು ಭಾಗಿಯಾಗಿದ್ದರು. ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ನಂದಿನಿ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿದೆ. ದರ ಹೆಚ್ಚಳದ…

Read More

ಮಂಗಳೂರು : ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ಎನ್ ಐ ಎ ತನಿಖೆಗೆ ನೀಡುವ ಬಗ್ಗೆ ಎರಡು ದಿನದಲ್ಲಿ ನಿರ್ಧರಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸ್ಪೋಟ ಪ್ರಕರಣ ಹಿನ್ನೆಲೆ ಮಂಗಳೂರಿಗೆ ಆಗಮಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗಾರರ ಜೊತೆ ಮಾತನಾಡಿದರು.ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ತನಿಖೆಯನ್ನು ಎನ್ ಐ ಗೆ ನೀಡುವ ಕುರಿತು ಎರಡು ದಿನದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು. ಕುಕ್ಕರ್ ಬಾಂಬ್ ಸರಿಯಾಗಿ ಸ್ಪೋಟಗೊಂಡಿದ್ದರೇ ಭಾರಿ ಅವಘಡ ನಡೆಯುತಿತ್ತುಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.ಮಂಗಳೂರು ಸ್ಪೋಟ ಪ್ರಕರಣ ಸಂಬಂಧ ಮಂಗಳೂರಿಗೆ ಭೇಟಿ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಗಾಯಾಳು ಆಟೋ ಚಾಲಕ ಪುರುಷೋತ್ತಮ್ ನನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಸಚಿವರು ಕುಕ್ಕರ್ ಬಾಂಬ್ ಸರಿಯಾಗಿ ಸ್ಪೋಟಗೊಂಡಿದ್ದರೇ ಭಾರಿ ಅವಘಡ ನಡೆಯುತಿತ್ತು, ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ. ಮಂಗಳೂರು…

Read More

ಮಂಗಳೂರು: ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಡಿಜಿಪಿ ಪ್ರವೀಣ್ ಸೂದ್ ಅವರು ಗರೋಡಿ ಬಳಿಯ ಆಟೋರಿಕ್ಷಾ ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅವರು ಅಲ್ಲಿಯೇ ಇರಿಸಲಾಗಿರುವ ಆಟೋರಿಕ್ಷಾವನ್ನು ವೀಕ್ಷಿಸಿ ಘಟನೆಯ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು. ನವೆಂಬರ್ 19ರಂದು ಸಂಜೆ ಶಂಕಿತ ಭಯೋತ್ಪಾದಕ‌ ಶಾರೀಕ್ ಪಂಪ್ ವೆಲ್ ಕಡೆಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆತನಲ್ಲಿದ್ದ ಕುಕ್ಕರ್ ಬಾಂಬ್ ಗರೋಡಿ ಬಳಿಯಲ್ಲಿ ಸ್ಪೋಟಗೊಂಡಿತ್ತು. ಆ ಬಳಿಕ ಆಟೋದಲ್ಲಿ ಸ್ಫೋಟ ನಡೆದಿರುವ ಸ್ಥಳವನ್ನು ಬ್ಯಾರಿಕೇಡ್ ಹಾಕಿ ಯಾರೂ ಅಲ್ಲಿ ಓಡಾಟ ನಡೆಸದಂತೆ ರಸ್ತೆಯಿಂದ ಪ್ರತ್ಯೇಕಿಸಲಾಗಿದೆ. ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ. ಬಳಿಕ ಆರಗ ಜ್ಞಾನೇಂದ್ರ ಹಾಗೂ ಪ್ರವೀಣ್ ಸೂದ್ ನಗರದ ಕಂಕನಾಡಿ ಆಸ್ಪತ್ರೆಗೆ ಭೇಟಿ ನೀಡಿ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಹಾಗೂ ಆರೋಪಿ ಶಾರೀಕ್ ಆರೋಗ್ಯ ವಿಚಾರಿಸಿದರು. ಈ ವೇಳೆ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್, ಡಿಸಿಪಿಗಳಾದ…

Read More

ಮಂಗಳೂರು:  ಒಂದೊಮ್ಮೆ ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ದಲ್ಲಿ ನಿರ್ಲಕ್ಷ್ಯ ವಹಿಸಬೇಡಿ. ಬಾಂಬ್ ಬ್ಲಾಸ್ಟ್ ಪ್ರಕರಣ ನಿಮಗೊಂದು ನಿದರ್ಶನ ಆಗಲಿ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾರಿಕ್ ಬಳಿ ಇದ್ದಿದ್ದು ಪ್ರೇಮ್‌ರಾಜ್ ಎನ್ನುವವರ ಆಧಾರ್‌ಕಾರ್ಡ್. ಪ್ರೇಮ್‌ರಾಜ್ ತನ್ನ ಆಧಾರ್‌ಕಾರ್ಡ್ ಕಳೆದುಕೊಂಡಿದ್ದರು. ಈ ಪ್ರಕರಣದಲ್ಲಿ ಪ್ರೇಮ್‌ರಾಜ್ ಆರೋಪಿ ಆಗುವ ಸಾಧ್ಯತೆ ಇತ್ತು. ಆದರೆ ಎಡಿಜಿಪಿ ಅಲೋಕ್ ಕುಮಾರ್ ಪ್ರೇಮ್‌ರಾಜ್ ಜತೆ ಮಾತುಕತೆ ನಡೆಸಿದ್ದರು. ಹೀಗಾಗಿ ಸತ್ಯ ವಿಚಾರ ಬಹಿರಂಗೊಂಡ ಹಿನ್ನಲೆ ಯಾವುದೇ ಕೇಸ್ ಆಗಿಲ್ಲ ಎಂದಿದ್ದಾರೆ.ಒಂದೊಮ್ಮೆ ಸಮರ್ಪಕ ಮಾಹಿತಿ ಸಿಗದೇ ಇದ್ದಿದ್ದಲ್ಲಿ ಪ್ರೇಮ್ ರಾಜ್ ಅವರು ಸಮರ್ಪಕ ಮಾಹಿತಿ ನೀಡದೇ ಇದ್ದಿದ್ದರೇ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇತ್ತು ಎಂದಿದ್ದಾರೆ. ಹೀಗಾಗಿ ಆಧಾರ್‌ಕಾರ್ಡ್ ಕಳೆದುಕೊಂಡವರಿಗೆ ಎಡಿಜಿಪಿ ಅಲೋಕ್ ಮನವಿ ಮಾಡಿದ್ದಾರೆ. ಆಧಾರ್ ಕಳೆದುಕೊಂಡವರು ಒಂದು ಕೇಸ್ ದಾಖಲಿಸಿ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

Read More

ಕೊಟ್ಟಿಗೆಹಾರ: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಸಂಬಂಧಿಕನೇ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪದ ಮೇಲೆ ಆರೋಪಿಯನ್ನು ಪೋಕ್ಸೋ ಪ್ರಕರಣದಡಿ ಬಣಕಲ್ ಪೊಲೀಸರು ಬಂಧಿಸಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ಸಬ್ಲಿ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಆರೋಪಿ ಸುಂದರೇಶ್ 36 ವರ್ಷ ಎಂದು ಗುರುತಿಸಲಾಗಿದೆ. ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Read More

ಮಂಗಳೂರು : ಇಡೀ ರಾಜ್ಯವೇ ಬೆಚ್ಚಿಬೀಳಿಸುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಮಂಗಳೂರಿನ ಬಾಂಬ್ ಸ್ಪೋಟದ ಬೆನ್ನಟ್ಟಿದ ಪೊಲೀಸರಿಗೆ ಹಲವು ಸ್ಪೋಟಕ ಮಾಹಿತಿ ಸಿಕ್ಕಿದೆ. ಇದೀಗ ಎಫ್ ಎಸ್ ಎಲ್ ವರದಿಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಬಯಲಾಗಿದೆ. ಶಂಕಿತ ಉಗ್ರ ಶಾರೀಕ್ ಬಳಿ ಇದ್ದದ್ದು ಅಂತಿಥ ಬಾಂಬ್ ಅಲ್ಲ ಎಂದು ಬಯಲಾಗಿದೆ. ಇದು ಅಂತಿಂಥ ಕುಕ್ಕರ್ ಬಾಂಬ್ ಅಲ್ಲ. ಆ ಕುಕ್ಕರ್ ಬಾಂಬ್ಗೆ ಇಡೀ ಬಸ್ಸನ್ನೇ ಸ್ಪೋಟಿಸುವ ಶಕ್ತಿ ಇತ್ತು ಎಂಬ ಸ್ಫೋಟಕ ವಿಚಾರ ಬಯಲಾಗಿದೆ. ಮಂಗಳೂರಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಶೀಲನೆ ನಡೆಸಿದ ತಂಡ ಈ ಬಾಂಬ್ ಸಾಮರ್ಥ್ಯದ ಬಗ್ಗೆ ಪ್ರಾಥಮಿಕ ವರದಿ ಸಲ್ಲಿಸಿದೆ. ಪ್ಲಸ್ ಹಾಗೂ ಮೈನಸ್ ಡಿಟೆಕ್ಟ್ ಆಗದೇ ಶಾರ್ಟ್ ಸರ್ಕ್ಯೂಟ್ ಆಗಿದೆ. . ಜೆಲ್ ಹೊತ್ತಿಕೊಂಡು ಉರಿದ ಪರಿಣಾಮ ಸಣ್ಣ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿ ದಟ್ಟವಾದ ಹೊಗೆ ಬಂದಿದೆ ಎನ್ನಲಾಗಿದೆ. 3 ಲೀಟರ್ ಕುಕ್ಕರ್ ಒಳಗಡೆ ಸ್ಪೋಟಕದ ಜೆಲ್ ಇದ್ದು,…

Read More

ಬೆಂಗಳೂರು: ಬಾಂಬ್ ಬ್ಲಾಸ್ಟ್ ಪ್ರಕರಣದ ಸಂಬಂಧ ನಾಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳೂರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಹಾಗೂ ಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಭೇಟಿ ಸಂದರ್ಭದಲ್ಲಿ ಸಚಿವರು, ಬಾಂಬ್ ಸ್ಫೋಟ ಘಟನೆಯಿಂದ ಗಾಯಗೊಂಡ ಆಟೋ ರಿಕ್ಷಾ ಚಾಲಕನನ್ನೂ ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಂಗಳೂರು ಆಟೋ ರಿಕ್ಷಾ ಬಾಂಬ್ ಸ್ಫೋಟ ಘಟನೆಯನ್ನು ರಾಜ್ಯ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಭಯೋತ್ಪಾದನೆ ಚಟುವಟಿಕೆಗಳನ್ನು ಆಮೂಲಗ್ರಹವಾಗಿ ತನಿಖೆ ಮಾಡಿ, ದ್ರೋಹಿಗಳನ್ನು ಮಟ್ಟ ಹಾಕಲು ಪೋಲಿಸರು ಶ್ರಮಿಸುತ್ತಿದ್ದಾರೆ. ರಾಷ್ಟ್ರೀಯ ತನಿಖಾ ದಳವೂ (NIA) ಇದಕ್ಕೆ ಸಹಕರಿಸುತ್ತಿದೆ ಎಂದು ಹೇಳಿದ್ದಾರೆ. ಈವರೆಗಿನ ಮಾಹಿತಿ ಆಧರಿಸಿ, ರಾಜ್ಯ ಪೊಲೀಸರು ಉಗ್ರಗಾಮಿ ಚಟುವಟಿಕೆಗಳಿಗೆ ಸಹಕರಿಸಿದವರ ವಿರುದ್ಧ ತನಿಖೆ ತೀವ್ರಗೊಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‌ನಿಂದ ಇನ್ನೂ ಹೆಚ್ಚಿನ ಮಾಹಿತಿಗಳು ಹೊರಬರಬೇಕಿದೆ ಎಂದು…

Read More

ಮಂಗಳೂರು : ಮಂಗಳೂರಿನ ಆಟೋ ಬಾಂಬ್ ಸ್ಪೋಟ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮತ್ತೊಂದು ಸ್ಪೋಟಕ ಮಾಹಿತಿ ತಿಳಿದುಬಂದಿದ್ದು, ಶಂಕಿತ ಉಗ್ರ ಶಾರಿಕ್ ಜೊತೆಗೆ ಇನ್ನೊರ್ವ ಉಗ್ರ ಇದ್ದ ಎಂಬ ಮಾಹಿತಿ ಲಭ್ಯವಾಗಿದೆ. ಮಂಗಳೂರು ಆಟೋ ಬ್ಲಾಸ್ಟ್ ಗೂ ಮುನ್ನ ಶಾರಿಕ್ ನ ಚಲನವಲನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪಡೀಲ್ ಬಸ್ ನಿಲ್ದಾಣದ ಬಳಿಕ ನಾಗನುರಿ ಬಳಿ ಕೆಂಪು ಶರ್ಟ್, ಟೋಪಿ ಹಾಕಿಕೊಂಡಿದ್ದ ಶಾರಿಕ್ ಜೊತೆಗೆ ಮತ್ತೊಬ್ಬ ಉಗ್ರ ಇದ್ದ ಎನ್ನುವ ಸಂಶಯ ಮೂಡಿದೆ. ಮಂಗಳೂರು ಆಟೋದಲ್ಲಿ ಸ್ಪೋಟಗೊಂಡ ಬಳಿಕ ಶಾರಿಕ್ ಗಾಯಗೊಂಡಿದ್ದರೆ, ಮತ್ತೊರ್ವ ಆರೋಪಿ ಸ್ಪೋಟದ ಬೆನ್ನಲ್ಲೇ ಪರಾರಿಯಾಗಿರುವ ಅನುಮಾನ ಮೂಡಿಸಿದೆ. ಇನ್ನು ಶಂಕಿತ ಉಗ್ರ ಶಾರಿಕ್ ವಾಟ್ಸಪ್ ಡಿಪಿಯಲ್ಲಿ ಇಶಾ ಫೌಂಡೇಶನ್ ಶಿವನ ಫೋಟೋ ಇಟ್ಟುಕೊಂಡಿದ್ದ. ಈತನ ನಡುವಳಿಕೆಯಲ್ಲಿ ಮುಸ್ಲಿಂ ಅಂತ ಗೊತ್ತಾಗುತ್ತಿರಲಿಲ್ಲ. ವೇಷ ಭೂಷಣ, ಬಟ್ಟೆ, ನಡೆಯಲ್ಲಿ ಮುಸ್ಲಿಂ ಅಂತ ಗೊತ್ತಾಗುತ್ತಿರಲಿಲ್ಲ. ಮೊಬೈಲ್ ತರಬೇತಿ ಕ್ಲಾಸ್ ಗೆ ಬಂದರೂ ಯಾವಾಗಲೂ ಬಾಗಿಲ ಕಡೆ ನೋಡುತ್ತಿದ್ದ. ಮೊಬೈಲ್ ರಿಪೇರಿ…

Read More